rtgh

 10th Kannada Janapada Ogatugalu Notes | 10ನೇ ತರಗತಿ ಜನಪದ ಒಗಟುಗಳು ಕನ್ನಡ ನೋಟ್ಸ್ 

10th Kannada Janapada Ogatugalu Notes | 10ನೇ ತರಗತಿ ಜನಪದ ಒಗಟುಗಳು ಕನ್ನಡ ನೋಟ್ಸ್ 

10th Janapada Ogatugalu kannada Notes 10ನೇ ತರಗತಿ ಜನಪದ ಒಗಟುಗಳು ನೋಟ್ಸ್ ಪ್ರಶ್ನೆ ಉತ್ತರ Janapada Ogatugalu Notes question with answer in kannada

janapada ogatugalu question with answer in kannada

ಪಠ್ಯಪೂರಕ ಅಧ್ಯಯನ -೫

ಜನಪದ ಒಗಟುಗಳು

೧. ‘ ಅಂಗಿ ‘ ಎಂಬ ಉತ್ತರ ಬರುವ ಬೆಡಗಿನ ಪ್ರಶ್ನೆಯನ್ನು ತಿಳಿಸಿ . 

ಉತ್ತರ : “ ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ ಮೈಯೊಳಗೆ ನವಗಾಯ ಒಂಬತ್ತು ತುಂಡ ಒಯ್ಯನೊಯ್ಯನೇ ಬಂದು

ಹೆಗಲೇರಿಕೊಂಡ ರಾಯ ರಾಯರಿಗೆಲ್ಲ ತಾನೇ ಪ್ರಚಂಡ

 ೨. ಉಪ್ಪಿನ ವಿಶೇಷತೆ ಒಗಟಿನಲ್ಲಿ ಹೇಗೆ ವ್ಯಕ್ತವಾಗಿದೆ ? 

ಉತ್ತರ : ಉಪ್ಪನ್ನು ನೀರಿನಲ್ಲೇ ಇರುವ ಅಂಶವಾಗಿದೆ . ಅದನ್ನು ನೀರಿನಿಂದಲೇ ತಯಾರಿಸಲಾಗುತ್ತದೆ . ಆದರೆ ಅದಕ್ಕೆ ನೀರು

ತಾಕಿದರೆ ಕರಗಿ ಮಾಯವಾಗುತ್ತದೆ . ಎಂದು ನೀರಿನ ವಿಶಿಷ್ಟ ಗುಣವನ್ನು ಕುರಿತು ಒಗಟಿನಲ್ಲಿ ಹೇಳಲಾಗಿದೆ . 

೩. ಕೆಸರಿಗೂ ಕಮಲಕ್ಕೂ ಇರುವ ಸಂಬಂಧವನ್ನು ಒಗಟು ಹೇಗೆ ವಿವರಿಸುತ್ತದೆ ? 

ಉತ್ತರ : ಕಮಲದ ಹೂವು ಬೆಳೆಯಲು ಕೆಸರು ಬೇಕು . ಆದ್ದರಿಂದ ಅದು ಕೆಸರಿನಲ್ಲಿ ಹುಟ್ಟಿ ಮತ್ತು ಕೆಸರಿನಲ್ಲಿ

ಬೆಳೆಯುವ ಒಂದು ವಿಧವಾದ ಗಿಡವಾಗಿದೆ . ಎಂದು ವರ್ಣಿಸಿರುವುದು ಸೂಕ್ತವಾಗಿದೆ .

 ೪. ಹೊಲದಲ್ಲಿ ಹುಟ್ಟಿದ ಉತ್ತರಾಣಿ ಹಾಗೂ ಗರಿಕೆ ಕೊಡುವ ತೊಂದರೆಯನ್ನು ಒಗಟುಗಳು ಹೇಗೆ ವಿವರಿಸುತ್ತವೆ ? 

ಉತ್ತರ : ಹೊಲದ ಬದುವಿನಲ್ಲಿ ಹುಟ್ಟುವ ಉತ್ತರಾಣಿ ಗಿಡದಲ್ಲಿ ಬೆಳೆಯುವ ಬೀಜಗಳು ಮುಳ್ಳಿನಂತಿದ್ದು ಆ ಗಿಡವಿರುವ

ಬದುವಿನಲ್ಲಿ ನಡೆದುಕೊಂಡು ಹೋಗುವವರ ಅದರಲ್ಲೂ ಗ್ರಾಮೀಣ ಮಹಿಳೆಯರ ಸೀರೆಯ ಸೆರಗನ್ನು ಹಿಡಿದುಕೊಳ್ಳುತ್ತವೆ .

ರೈತನಿಗೆ ಬಹಳ ತೊಂದರೆ ಕೊಡುವ ಗರಿಕೆಯನ್ನು ಎಷ್ಟೇ ಉತ್ತರೂ ಹೊಲದಲ್ಲಿ ನಾಶಪಡಿಸಲು ಸಾಧ್ಯವಿಲ್ಲ ; ಅದು ಮತ್ತೆ

ಚಿಗುರಿಕೊಳ್ಳುತ್ತದೆ . ರೈತನ ಪ್ರಯತ್ನವನ್ನು ಕಂಡು ನಿನ್ನದು ವ್ಯರ್ಥ ಪ್ರಯತ್ನ , ನನ್ನನ್ನು ನಾಶಪಡಿಸಲು ನಿನ್ನಿಂದ ಸಾಧ್ಯವಿಲ್ಲ  ಎಂಬಂತೆ ನಗುತ್ತದೆ ಎಂದು ಒಗಟಿನಲ್ಲಿ ಸ್ವಾರಸ್ಯಕರವಾಗಿ ಹೇಳಲಾಗಿದೆ . 

೫. ಒಗಟುಗಳಿಂದ ಶೈಕ್ಷಣಿಕವಾಗಿ ಏನು ಲಾಭ ? 

ಉತ್ತರ : ಜನಪದ ಒಗಟುಗಳು ಗ್ರಾಮೀಣ ಜನರ ಕಲ್ಪನಾ ಚಾತುರ್ಯಕ್ಕೆ ನಿದರ್ಶನವಾಗಿದ್ದು ಅವುಗಳ ಮೂಲಕ ವಿದ್ಯಾರ್ಥಿಗಳಲ್ಲಿ

ಕಲ್ಪನಾಶೀಲತೆ , ಆಲೋಚನಾ ಶಕ್ತಿ ಹಾಗೂ ಸೃಜನಶೀಲತೆ ವೃದ್ಧಿಸುತ್ತದೆ . ಜನಪದ ಬೆಡಗಿನ ಒಗಟುಗಳಲ್ಲಿ ಪ್ರಶ್ನೆಗೆ ಉತ್ತರಿಸುವ

ಪದ್ಯದಲ್ಲಿಯೇ ಎದುರಾಳಿಗೆ ಮತ್ತೊಂದ ಟನ್ನು ಒಡ್ಡುವ ಕ್ರಮ ವೈಶಿಷ್ಟ್ಯಪೂರ್ಣವಾಗಿದ್ದು ಸರ್ಧಾತ್ಮಕ ಮನೋಭಾವ ಬೆಳೆಸಲು

ಸಹಕಾರಿಯಾಗಿದೆ . ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಒಗಟುಗಳನ್ನು ಬಿಡಿಸುವುದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ

ಬುದ್ಧಿ ಕೌಶಲ ಬೆಳೆಯುತ್ತದೆ .

 ೬. ಬೀಸುವ ಕಲ್ಲನ್ನು ಕುರಿತ ಒಗಟನ್ನು ವಿವರಿಸಿರಿ . 

ಉತ್ತರ : ಬೀಸುವ ಕಲ್ಲಿನ ಮೇಲೆ ಮಧ್ಯಭಾಗದಲ್ಲಿರುವ ಬಾಯಿಗೆ ಧಾನ್ಯವನ್ನು ಹಾಕಲಾಗುತ್ತದೆ . ಬೀಸುತ್ತಿದ್ದಂತೆ ಅದು

ಕಲ್ಲಿನ ಒಳಗೆ ಹೋಗುತ್ತದೆ . ಅದನ್ನೆ ಒಗಟಿನಲ್ಲಿ ‘ ಬಾಯಲ್ಲಿ ತಿಂಬೋದು ‘ ಎನ್ನಲಾಗಿದೆ . ಹಾಗೆಯೇ ಅದರಲ್ಲಿ ಬೀಸುವಾಗ

ಅದರ ಸುತ್ತ ಹಿಟ್ಟು ಚೆಲ್ಲುತ್ತದೆ , ಇದನ್ನೆ ಕುಕ್ಕುವುದು ( ಕಕ್ಕುವುದು ) ಎಂದು ಹೇಳಲಾಗಿದೆ . 

kannada ogatugalu with answer in kannada

೧. ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ-ಕಣ್ಣು 

 ೨. ಕಾಸಿನ ಕುದುರೆಗೆ ಬಾಲದ ಲಗಾಮು ಕಣ್ಣು ಸೂಜಿ ದಾರ

 ೩. ಎಲೆ ಇಲ್ಲ , ಸುಣ್ಣ ಇಲ್ಲ , ಬಣ್ಣವಿಲ್ಲ ತುಟಿ ಕೆಂಪಗಾಗಿದೆ , ಮಳೆಯಿಲ್ಲ – ಬೆಲೆಯಿಲ್ಲ , ಮೈ ಹಸಿರಾಗಿದೆ – ಗಿಳಿ 

೪. ಮನೆ , ಮನೆಗೆರಡು ಬಾಗಿಲು , ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು ?- ಮೂಗು , ಬಾಯಿ 

 ೫. ಸುತ್ತ ಮುತ್ತ ಸುಣ್ಣದ ಗೋಡೆ , ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು ? –ಮೊಟ್ಟೆ

 ೬. ಅಂಗಳದಲ್ಲಿ ಹುಟ್ಟುವುದು , ಅಂಗಳದಲ್ಲಿ ಬೆಳೆಯುವುದು , ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು ? -ಕೋಳಿ 

೭ ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ , ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು ? – ರೈಲು 

೮. ಊಟಕ್ಕೆ ಕುಳಿತವರು ಹನ್ನೆರಡು ಜನರು , ಬಡಿಸುವವರು ಇಬ್ಬರು , ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ . – ಗಡಿಯಾರ 

೯. ಹಸಿರು ಹಾವರಾಣಿ , ತುಂಬಿದ ತತ್ರಾಣಿ , ಹೇಳದಿದ್ದರೆ ನಿಮ್ಮ ದೇವರಾಣಿ – ಕಲ್ಲಂಗಡಿ ಹಣ್ಣು 

೧೦ , ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ- ತೆಂಗು 

೧೧. ಕಡಿದರೆ ಕಟ್ಟೋಕೆ ಆಗೋಲ್ಲ , ಹಡದ್ರೆ ಮುಟ್ಟೋಕೆ ಸಿಗೋಲ್ಲ – ನೀರು 

೧೨. ಒಂದು ರುಮಾಲು , ನಮ್ಮಪ್ಪನೂ ಸುತ್ತಲಾರ , ನಿಮ್ಮಪ್ಪನೂ ಸುತ್ತಲಾರ . – ದಾರಿ 

೧೨ , ಅಬ್ಬಬ್ಬ ಹಬ್ಬ ಬಂತು , ಸಿಹಿಕಹಿ ಎರಡೂ ತಂತು .- ಯುಗಾದಿ 

೧೪ , ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ .- ಬದನೆಕಾಯಿ

೧೫. ಸಾಗರ ಪುತ , ಸಾರಿನ ಮಿತ – ಉಪ್ಪು 

10ನೇ ತರಗತಿ ಜನಪದ ಒಗಟುಗಳು ಪ್ರಶ್ನೆ ಉತ್ತರ ನೋಟ್ಸ್ Pdf

10th Kannada Deevige 10th Notes Lesson question answer pdf textbook Janapada OgatugaluNotes summary in Kannada deevige 10ನೇ ತರಗತಿ ಜನಪದ ಒಗಟುಗಳು ಪ್ರಶ್ನೆ ಉತ್ತರ

10th kannada Janapada Ogatugalu Notes Notes 10ನೇ ತರಗತಿ ಜನಪದ ಒಗಟುಗಳು ನೋಟ್ಸ್  ಪ್ರಶ್ನೆ ಉತ್ತರ Kannada Deevige 10th Notes Mruga Mathu Sundari Notes question answer text book pdf download

ಆತ್ಮೀಯರೇ..

ನಮ್ಮ ಕನ್ನಡ ದೀವಿಗೆ.ಇನ್   ವೆಬ್ಸೈಟ್ ಮತ್ತು ಆಪ್  ನಲ್ಲಿ 1ನೇ ತರಗತಿಯಿಂದ 1೦ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ

Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

10ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

Leave a Reply

Your email address will not be published. Required fields are marked *