8th Standard Bharavase Kannada Notes Question Answer | 8thನೇ ತರಗತಿ ಭರವಸೆ ಕನ್ನಡ ನೋಟ್ಸ್ 

8th Standard Notes Kannada Bharavase 8thನೇ ತರಗತಿ ಭರವಸೆ ಕನ್ನಡ ನೋಟ್ಸ್ 

8th Standard Bharavase Notes Question Answer, text book pdf download Siri Kannada Text Book Class 8 Solutions Padya | 8ನೇ ತರಗತಿ ಭರವಸೆ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ

ಪದ್ಯ ಭಾಗ

೪. ಭರವಸೆ – ಬಿ.ಟಿ. ಲಲಿತಾನಾಯಕ್

ಕೃತಿಕಾರರ ಪರಿಚಯ

ಶ್ರೀಮತಿ ಬಿ. ಟಿ. ಲಲಿತಾನಾಯಕ್ ಅವರು ಚಿಕ್ಕಮಗಳೂರು ಜಿಲ್ಲೆಯ
ತಂಗಲಿ ತಾಂಡ್ಯದಲ್ಲಿ 04/04/1945ರಲ್ಲಿ ಜನಿಸಿದರು. ಬಂಡಾಯ ಹಾಗೂ
ಸ್ತ್ರೀ  ಸಂವೇದನೆಯ ಬರೆಹಗಳ ಮೂಲಕ ಖ್ಯಾತರಾದ ಇವರು ಹಲವಾರು
ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಚಂದ್ರ
ಪರಾಭವ, ಭಟ್ಟನ ಕನಸು, ನೆಲೆಬೆಲೆ, ನಂ ರೂಪ್ಲಿ, ಗತಿ, ಹಬ್ಬ ಮತ್ತು ಬಲಿ,
ಇದೇ ಕೂಗು ಮತ್ತೆ ಮತ್ತೆ, ದೇವದುರ್ಗ ತಾಲೂಕು ದರ್ಶನ, ಒಡಲ ಬೇಗೆ
ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಮಕ್ಕಳ ಕತೆ, ರೇಡಿಯೋ
ನಾಟಕಗಳನ್ನೂ ರಚಿಸಿದ್ದಾರೆ.

ಆಶಯ ಭಾವ

ಜಗತ್ತಿನ ತಲ್ಲಣಗಳನ್ನು ಮಲ್ಲಿಗೆ ಮತ್ತು ಕೋಗಿಲೆಯ ಸಂಭಾಷಣೆಯ ಮೂಲಕ ವ್ಯಕ್ತಪಡಿಸುವ ಕವನ ಭರವಸೆ.
ಲೋಕವಾರ್ತೆಯನ್ನು ನುಡಿಯುವ ಕೋಗಿಲೆಯ ಧ್ವನಿಯಲ್ಲಿರುವ ನಿರಾಸೆ, ಅವಾಸ್ತವಿಕ ಬದುಕಿನ ಬಗೆಗಿನ ವಿಷಾದ
ಈ ಕವನದ ಒಡಲು. ಇಲ್ಲಿ ಪ್ರಕೃತಿಯ ನೈಜತೆಗೆ ಮನುಷ್ಯನ ಸ್ವಾರ್ಥ ಹೇಗೆ ದಕ್ಕೆಯಾಗುತ್ತಿದೆ ಎಂಬ ಆತಂಕವಿದೆ. ಈ
ಮಣ್ಣಿನ ಗುಣವನ್ನು ಬಿಟ್ಟು ಭ್ರಮೆಯಲ್ಲಿ  ಮುಳುಗಿರುವ ವ್ಯಕ್ತಿಯ ಬಗ್ಗೆ ಇಲ್ಲಿ ಸುಪ್ತ ಪ್ರತಿಭಟನೆ ಇದೆ. ಆದರೆ ಅದೇ
ಪ್ರತಿಭಟನೆಯ ಕೊನೆಯಲ್ಲಿ ಆಶಾವಾದದ ಸಾಂತ್ವನವಿದೆ. ಈ ಭೂಮಿ ಬರಡಲ್ಲ. ಅಮರ ಪ್ರೇಮದ ಒರತೆ ಎನ್ನುವ 
ಮೂಲಕ ಭೂಮಿಯ ಸಂಜೀವಿನೀ ಗುಣವನ್ನು ಪ್ರಕೃತ ಕವಿತೆಯಲ್ಲಿ ಎತ್ತಿ ಹಿಡಿಯಲಾಗಿದೆ. ಅದೇ ಕವಿತೆಯ ಆಶಯ.
ಅರಳಿ ಮಲ್ಲಿಗೆ ಮೊಗ್ಗು ತನ್ನ ಸುತ್ತಮತ್ತಲಿನ ವಾತಾವರಣದಲ್ಲಿ ಗಂಧವ ಚೆಲ್ಲಿ, ವಸಂತನಾಗಮನ ಸಾರಿದಾಗ 
ಮಾಮರದ ರೆಂಬೆಯಲಿ ಕುಳಿತಿದ್ದ ಕೋಗಿಲೆಯು ಬೆರೆಸಿತದರೊಳಗೊಂದು ಕುಕಿಲರಾಗ. ಮಲ್ಲಿ ಗೆಯು ಕೋಗಿಲೆಯ
ಕರೆದಿತ್ತು; “ಪ್ರಿಯ ಗೆಳತಿ ಹಾಡೊಂದ ಹಾಡೇ” ಎಂದು ಕೇಳುತ್ತದೆ. ಏಕೆಂದರೆ ಕೋಗಿಲೆಯು ತನ್ನ ರೆಕ್ಕೆಗಳಿಂದ ಒಂದು
ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತದೆ. ಅದರಿಂದ ಅನುಭವದ ಹೊನ್ಗಣಿಯಾಗಿ ಲೋಕವಾರ್ತೆ ಎಲ್ಲವನ್ನೂ
ತಿಳಿದುಕೊಂಡು ಇರುತ್ತದೆ. ಅದರಿಂದ ಮಲ್ಲಿಗೆಯು ಕೇಳುವುದು ಅರ್ಥವಂತಿಕೆಯಾಗಿದೆ. ಆಗ ಕೋಗಿಲೆಯು
“ಏನೆಂದು ಹಾಡಲಿ ನಾನು ಏನ ಅರುಹಲಿ ಚೆಲುವೆ ಬಣ್ಣ ಬೆಡಗಿನ ಮಾತನರಿಯೆ ಕೃತಕತೆಯ ಜಾಲದಲಿ ಸಿಲುಕಿಕೊಂಡಿದೆ
ಜಗವು ನೈಜತೆಗೆ ಇಲ್ಲ ಬೆಲೆಯು” ಎಂದು ಹೇಳುತ್ತದೆ. ಅಂದರೆ ಮನುಷ್ಯನು ನೈಜತೆಗೆ ಬೆಲೆಯನ್ನು ಕೊಡುವುದಿಲ್ಲ
ಕೃತಕತೆಗೆ ಬೆಲೆಕೊಡುತ್ತಿದ್ದಾನೆ. ಗಿಡಮರಗಳನ್ನು ಕೊಡಲಿ ಇಂದ ಕಡಿದು ಗೋಡೆಯ ಮೇಲೆ ಪ್ರಕೃತಿಯ ಸುಂದರ 
ಚಿತ್ರಗಳನ್ನು ಬಿಡಿಸುತ್ತಿದ್ದಾನೆ. ಆದರೂ ಈ ಭೂಮಿಯು ಬರಡಲ್ಲ ಗಿಡಮರಗಳನ್ನು ಬೆಳೆಸಿದರೇ  ಬೆಳೆಯುತ್ತದೆ. ಎಂದು
ಹೇಳಿದ್ದಾರೆ.
ಪ್ರಸ್ತುತ ಕವನವನ್ನು ಬಿ. ಟಿ. ಲಲಿತಾ ನಾಯಕ್ ಅವರ ಬಿದಿರು ಮೆಳೆ ಕಂಟಿಯಲಿ ಕವನ ಸಂಕಲನ (ಪುಟ121-22) ದಿಂದ ಆಯ್ದು ಸಂಪಾದಿಸಿ ನಿಗದಿಪಡಿಸಿದೆ

ಪದಗಳ ಅರ್ಥ

ಅರುಹು-ತಿಳಿಸು,    ಹೇಳು; ಕುಕಿಲು-ಕೋಗಿಲೆಯ ಕೂಗು;   ಕೃತಕತೆ-ಅಸಹಜತೆ ಮೋಸ;     ಚಿತ್ತಾರ-ಚಿತ್ರ; ಜಾಲ-ಗುಂಪು,ಸಮೂಹ; 

ಪೂರ-ಪೂರ್ತಿಯಾಗಿ;   ಬರಡು-ನಿಸ್ಸಾರ;     ಬಾನ ಸಂಚಾರಿಣಿ- ಆಕಾಶದಲ್ಲಿ ಸಂಚರಿಸುವ:     ಭಿತ್ತಿ-ಗೋಡೆ;

ಭ್ರಮರ-ದುಂಬಿ;ಮಾಮರಮಾವಿನಮರ;          ಮೊಗ್ಗು – ಅರಳದೇ ಇರುವ ಹೊ ;      ಸೊಗಡು-ಕಂಪು, ವಾಸನೆ;

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1. ಕೋಗಿಲೆ ಕುಕಿಲರಾಗವನ್ನು ಯಾವಾಗ ಬೆರೆಸಿತು?
ಉತ್ತರ : ಅರಳಿ ಮಲ್ಲಿಗೆ  ಮೊಗ್ಗು ತನ್ನ ಸುತ್ತಮತ್ತಲಿನ ವಾತಾವರಣದಲ್ಲಿ ಗಂಧವ ಚೆಲ್ಲಿ, ವಸಂತನಾಗಮನ
ಸಾರಿದಾಗ ಮಾಮರದ ರೆಂಬೆಯಲಿ ಕುಳಿತಿದ್ದ ಕೋಗಿಲೆಯು ಬೆರೆಸಿತದರೊಳಗೊಂದು  ಕುಕಿಲರಾಗ.

2. ಮನುಷ್ಯ ಸ್ವಭಾವದ ಬಗ್ಗೆ ಕವಯಿತ್ರಿಯ ಅಭಿಪ್ರಾಯವೇನು?
ಉತ್ತರ : ಮನುಷ್ಯ ನೈಜತೆಯನ್ನು ಮರೆತು, ಕೃತಕತೆಯಲ್ಲಿ ಮುಳುಗಿ, ಸ್ವಾರ್ಥಿದಲ್ಲಿ ಜೀವಿಸುತ್ತಿದ್ದಾನೆ ಎಂದು
ಕವಯಿತ್ರಿಯ ಅಭಿಪ್ರಾಯವಾಗಿದೆ.

3. ಕನ್ನಡ ಸಾರಸ್ವತ ಲೋಕಕ್ಕೆ ಬಿ.ಟಿ. ಲಲಿತಾನಾಯಕ್ ಅವರ ಕೊಡುಗೆ ಏನು?
ಉತ್ತರ : ಬಂಡಾಯ ಹಾಗೂ ಸ್ತ್ರೀಸಂವೇದನೆಯ ಬರೆಹಗಳ ಮೂಲಕ ಖ್ಯಾತರಾದ ಬಿ.ಟಿ.
ಲಲಿತಾನಾಯಕ್ ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೇ 

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 

1. ಮಲ್ಲಿಗೆ ಕೋಗಿಲೆಯನ್ನು ಕರೆದು ಏನು ಹೇಳಿತು?
ಉತ್ತರ : ಮಲ್ಲಿ ಗೆಯು ಕೋಗಿಲೆಯ ಕರೆದು “ಪ್ರಿಯ ಗೆಳತಿ ಹಾಡೊಂದ ಹಾಡೇ ಬಾನಸಂಚಾರಿಣಿಯೆ
ಅನುಭವದ ಹೊನ್ಗಣಿಯೆ ಲೋಕವಾರ್ತೆಯದೇನು ಹೇಳೇ” ಎಂದು ಕೇಳಿತು. ಏಕೆಂದರೆ ಕೋಗಿಲೆಯು ತನ್ನ
ರೆಕ್ಕೆಗಳಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತದೆ. ಅದರಿಂದ ಅನುಭವದ ಹೊನ್ಗಣೆಯಾಗಿ 
ಲೋಕವಾರ್ತೆ ಎಲ್ಲವನ್ನೂ ತಿಳಿದುಕೊಂಡು ಇರುತ್ತದೆ. ಅದರಿಂದ ಮಲ್ಲಿಗೆಯು ಕೇಳಿತು 

2. ಮಲ್ಲಿಗೆಯ ಕೋರಿಕೆಗೆ ಕೋಗಿಲೆ ಪ್ರಕೃತಿಯ ಬಗ್ಗೆ ಏನೆಂದು ಉತ್ತರ ನೀಡಿತು?
ಉತ್ತರ : ಮಲ್ಲಿಗೆಯ ಕೋರಿಕೆಗೆ, ಕೋಗಿಲೆ ಪ್ರಕೃತಿಯ ಬಗ್ಗೆ “ಮನುಷ್ಯನಾದವನು ಪ್ರಕೃತಿಯ ಸಿರಿಮುಡಿಗೆ
ಕೊಡಲಿ ಹಾಕಿ ಅದನ್ನು ನಾಶ ಮಾಡುವಲ್ಲಿ ನಿರತನಾಗಿದ್ದಾನೆ. ನೈಜವಾದ ಮಣ್ಣೀನ ಸೊಗಡನ್ನು ಮರತು
ಗೋಡೆಯ ಮೇಲೆ ಮರಗಿಡಿ ಬಳ್ಳಿಗಳ ಚಿತ್ರವನ್ನು ಬಿಡಿಸಿ ಆನಂದಿಸುತ್ತಾ ಸ್ವಾರ್ಥಿಯಾಗಿದ್ದಾನೆ” ಎಂದು ಉತ್ತರ
ನೀಡಿತು.

3. ಕೋಗಿಲೆಯ ಆಶಾವಾದವೇನು?

ಉತ್ತರ : ಕೋಗಿಲೆಯು ಮಲ್ಲಿಗೆಗೆ ನೀಡುವ ಸಾಂತ್ವನದ ಮಾತುಗಳಲ್ಲಿ ಆಶಾವಾದದ ಮಾತುಗಳಿವೆ. ಈ
ಭೂಮಿ ಬರಡಲ್ಲ, ಅಮರ ಪ್ರೇಮದ ಒರತೆ ಎನ್ನುವ ಮೂಲಕ ಭೂಮಿಯ ಸಂಜೀವಿನೀ ಗುಣವನ್ನು ಪ್ರಸ್ತುತ
ಕವಿತೆಯಲ್ಲಿ ಎತ್ತಿ ಹಿಡಿಯಲಾಗಿದೆ. ಇದು ಕೋಗಿಲೆಯ ಆಶಾವಾದ ಮಾತ್ರವಾಗಿರದೆ ಕವಯಿತ್ರಿಯ ಆಶಯವು
ಆಗಿದೆ. ಕವಿತೆಯ ಕೊನೆಯಲ್ಲಿ ಆಶಾವಾದದ ಸಾಂತ್ವನವಿದೆ

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ

1. ಮಲ್ಲಿಗೆ ಮತ್ತು ಕೋಗಿಲೆಯ ಸಂಭಾಷಣೆಯನ್ನು ಬರೆಯಿರಿ.
ಉತ್ತರ : ಮಲ್ಲಿ ಗೆಯು ಕೋಗಿಲೆಯ ಕರೆದಿತ್ತು; “ಪ್ರಿಯ ಗೆಳತಿ ಹಾಡೊಂದ ಹಾಡೇ” ಎಂದು ಕೇಳುತ್ತದೆ.
ಏಕೆಂದರೆ ಕೋಗಿಲೆಯು ತನ್ನ ರೆಕ್ಕೆಗಳಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತದೆ. ಅದರಿಂದ
ಅನುಭವದ ಹೊನ್ಗಣಿಯಾಗಿ ಲೋಕವಾರ್ತೆ ಎಲ್ಲವನ್ನೂ ತಿಳಿದುಕೊಂಡು ಇರುತ್ತದೆ. ಅದರಿಂದ ಮಲ್ಲಿಗೆಯು
ಕೇಳುವುದು ಅರ್ಥವಂತಿಕೆಯಾಗಿದೆ. ಆಗ ಕೋಗಿಲೆಯು “ಏನೆಂದು ಹಾಡಲಿ ನಾನು ಏನ ಅರುಹಲಿ ಚೆಲುವೆ
ಬಣ್ಣ ಬೆಡಗಿನ ಮಾತನರಿಯೆ ಕೃತಕತೆಯ ಜಾಲದಲಿ ಸಿಲುಕಿಕೊಂಡಿದೆ ಜಗವು ನೈಜತೆಗೆ ಇಲ್ಲ ಬೆಲೆಯು” ಎಂದು
ಹೇಳುತ್ತದೆ. ಅಂದರೆ ಮನುಷ್ಯನು ನೈಜತೆಗೆ ಬೆಲೆಯನ್ನು ಕೊಡುವುದಿಲ್ಲ ಕೃತಕತೆಗೆ ಬೆಲೆಕೊಡುತ್ತಿದ್ದಾನೆ.
ಗಿಡಮರಗಳನ್ನು ಕೊಡಲಿ ಇಂದ ಕಡಿದು ಗೋಡೆಯ ಮೇಲೆ ಪ್ರಕೃತಿಯ ಸುಂದರ ಚಿತ್ರಗಳನ್ನು
ಬಿಡಿಸುತ್ತಿದ್ದಾನೆ. ಆದರೂ ನಲುಗದಿರು ಇದ ಕೇಳಿ ಬರಡಲ್ಲ ಈಭುವಿಯು  ಅಮರ ಪ್ರೇಮದ ಒರತೆ 
ಹರಿಯುವುದು ಉಂಟು ಅಲ್ಲಲ್ಲಿ. ಎಂಬ ಸಾಂತ್ವನವನ್ನು ಹೇಳಿತು. ಈ ಭೂಮಿಯು ಬರಡಲ್ಲ
ಗಿಡಮರಗಳನ್ನು ಬೆಳೆಸಿದರೆ ಬೆಳೆಯುತ್ತದೆ. ಎಂದು ಕೋಗಿಲೆಯುಕೇಳಿತು 

2. ಕೋಗಿಲೆ ತಿಳಿಸಿದ ಲೋಕವಾರ್ತೆ ಏನು? ವಿವರಿಸಿ.
ಉತ್ತರ : ಮಲ್ಲಿಗೆಯು ಕೋಗಿಲೆಯನ್ನು ಕರೆದು “ಬಾನಲ್ಲಿ ಸಂಚರಿಸುವ ನೀನು ಈ ಲೋಕದಲ್ಲಿ
ನಡೆಯುವುದನ್ನು ಹಾಗೂ ಅದರಿಂದ ನಿನಗಾದ ಅನುಭವವನ್ನು ನಿನ್ನ ಮಧುರ ಧ್ವನಿಯಲ್ಲಿ ಹಾಡಿ ಹೇಳೆ
ಪ್ರಿಯ ಗೆಳತಿ” ಎಂದು ಹೇಳಲು , ಕೋಗಿಲೆಯು “ನಾನು ಏನೆಂದು ಹಾಡಲಿ, ಏನೆಂದು ಹೇಳಲಿ  ಚೆಲುವೆ, ಈ
ಲೋಕವು ಎಲ್ಲಿ ನೋಡಿದರೂ ಬರೀ ಮೋಸದಿಂದಲೇ ತುಂಬಿ ಹೋಗಿದೆ. ನೈಜತೆಗೆ ಇಲ್ಲಿ ಬೆಲೆಯೇ ಇಲ್ಲ.
ನನಗಂತು ಮೋಸಗೊಳಿಸುವ ಬೆಡಗು ಬಿನ್ನಾಣವು ತಿಳಿಯದು. ಇಲ್ಲಿಯ ಮನುಷ್ಯರು, ತಮ್ಮ ಸ್ವಾರ್ಥಕ್ಕಾಗಿ
ಸುಂದರವಾದ ಪ್ರಕೃತಿಯ ಸಿರಿಮುಡಿಗೆ ಕೊಡಲಿ ಹಾಕಿ, ಅದನ್ನು ನಾಶಪಡಿಸುತ್ತಿರುವರು. ಮಣ್ಣಿನಲ್ಲಿ
ಸೊಗಸಾಗಿ ಬೆಳೆಯುವ ಮರ ಗಿಡ, ಬಳ್ಳಿಗಳನ್ನು ನಾಶಪಡಿಸಿ, ಅದರ ಬಗ್ಗೆ ಸಂಪೂರ್ಣವಾಗಿ ಮರತು
ಹೋಗಿದ್ದಾನೆ. ಗೋಡೆಗಳ ಮೇಲೆ ಮೇಲೆ ಆ ಚಿತ್ರಗಳನ್ನು ಬಿಡಿಸಿ ಆನಂದ ಪಡುತ್ತಿದ್ದಾರೆ. ನೈಜತೆಗಿಂತ
ಕೃತಕತೆಗೆ ಹೆಚ್ಚು ಬೆಲೆಕೊಡುತ್ತಿದ್ದಾನೆ. ಆದರೆ ಹೇ ಗೆಳತಿ ನಿರಾಶೆಯಾಗದಿರು, ಕವಿ ಕಲ್ಪನೆಯ
ಗಾನಲಹರಿಯಲ್ಲಿ, ಮಾವು, ಮಲ್ಲಿಗೆಯ ಝೇಂಕಾರ ಇಂದಿಗೂ ಕೇಳಿ ಬರುತ್ತಿದೆ. ಈ ಭೂಮಿ ಇನ್ನು
ಬರಡಾಗಿಲ್ಲ. ಅಮರ ಪ್ರೇಮದ ಒರತೆ ಇನ್ನೂ ಇಲ್ಲಿ ಹರಿದಿಹುದು’ ಎಂಬುದಾಗಿ ಆಶಾವಾದ ಮಾತುಗಳನ್ನು
ಹೇಳುತ್ತಾಳೆ.

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ..

1. “ಬೆರೆಸಿತದರೊಳಗೊಂದು ಕುಕಿಲರಾಗ”
ಆಯ್ಕೆ : ಈ ವಾಕ್ಯವನ್ನು ಬಿ. ಟಿ. ಲಲಿತಾ ನಾಯಕ್ ಅವರ ‘ಬಿದಿರು ಮೆಳೆ ಕಂಟಿಯಲಿ’ ಕವನ ಸಂಕಲನ
ದಿಂದ  ಆಯ್ದು ಸಂಪಾದಿಸಿರುವ ‘ಭರವಸೆ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ : ವಸಂತ ಕಾಲದ ಆಗಮನವನ್ನು ಸಾರಲು ಮಲ್ಲಿಗೆ ಮೊಗ್ಗು ಅರಳಿ ಎಲ್ಲಾ ಕಡೆ ಕಂಪನ್ನು
ಪಸರಿಸಿದಾಗ ಮಾವಿನಮರದಲ್ಲಿದ್ದ ಕೋಗಿಲೆಯು ತನ್ನ ಮಧುರಗಾನದೊಂದಿಗೆ ಮಲ್ಲಿಗೆಯೊಡನೆ ಬೆರತಾಗ
ಎಂದು ಹೇಳಿದ  ಸಂದರ್ಭದಲ್ಲಿ ಈ ವಾಕ್ಯವನ್ನು ಕವಯಿತ್ರಿ ಹೇಳಿದ್ದಾರೆ.
ಸ್ವಾರಸ್ಯ : ಕೋಗಿಲೆಯು ತನ್ನ ರಾಗವನ್ನು ಮಲ್ಲಿಗೆಯ ಕಂಪಿನೊಡನೆ ಬೆರೆಸಿದಾಗ ಪ್ರಕೃಯಲ್ಲಿ ಉಂಟಾಗುವ
ಆಹ್ಲಾದತೆ, ಸುಂದರತೆ ಬಹು ಸ್ವಸ್ಯಕರವಾಗಿ ಮೂಡಿ ಬಂದಿದೆ.

2. “ನೈಜತೆಗೆ ಇಲ್ಲ ಬೆಲೆಯು”
ಆಯ್ಕೆ : ಈ ವಾಕ್ಯವನ್ನು ಬಿ. ಟಿ. ಲಲಿತಾ ನಾಯಕ್ ಅವರ ‘ಬಿದಿರು ಮೆಳೆ ಕಂಟಿಯಲಿ’ ಕವನ ಸಂಕಲನ
ದಿಂದ  ಆಯ್ದು ಸಂಪಾದಿಸಿರುವ ‘ಭರವಸೆ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕೋಗಿಲೆಯು “ಏನೆಂದು ಹಾಡಲಿ ನಾನು ಏನ ಅರುಹಲಿ ಚೆಲುವೆ ಬಣ್ಣ ಬೆಡಗಿನ ಮಾತನರಿಯೆ
ಕೃತಕತೆಯ ಜಾಲದಲಿ ಸಿಲುಕಿಕೊಂಡಿದೆ ಜಗವು ನೈಜತೆಗೆ ಇಲ್ಲ ಬೆಲೆಯು” ಎಂದು ಹೇಳುವ ಸಂದರ್ಭದಲ್ಲಿ ಈ
ಮಾತು ಬಂದಿದೆ.
ಸ್ವಾರಸ್ಯ : ಸ್ವಾಭಾವಿಕವಾಗಿರುವ ಪ್ರಕೃತಿಯನ್ನು ಈ ಲೋಕದ ಜನತೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ
ಎಂಬುದನ್ನು ಸ್ವಾರಸ್ಯಕರವಾಗಿದೆ.

3. “ಅಮರ ಪ್ರೇಮದ ಒರತೆ ಹರಿಯುವುದು ಉಂಟು ಅಲ್ಲಲ್ಲಿ”
ಆಯ್ಕೆ : ಈ ವಾಕ್ಯವನ್ನು ಬಿ. ಟಿ. ಲಲಿತಾ ನಾಯಕ್ ಅವರ ‘ಬಿದಿರು ಮೆಳೆ ಕಂಟಿಯಲಿ’ ಕವನ ಸಂಕಲನ
ದಿಂದ  ಆಯ್ದು ಸಂಪಾದಿಸಿರುವ ‘ಭರವಸೆ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : “ಭೂಮಿ ಬರಡಲ್ಲ, ಅಮರ ಪ್ರೇಮದ ಒರತೆ ಹರಿಯುವುದು ಎಂದು ಹೇಳುವ ಮೂಲಕ
ಭೂಮಿಯ ಸಂಜೀವಿನೀ ಗುಣವನ್ನು ವಿವರಿಸುವ ಸಂದರ್ಭದಲ್ಲಿ ಈ ವಾಕ್ಯವನ್ನು ಹೇಳಲಾಗಿದೆ 
ಸ್ವಾರಸ್ಯ : ಮನುಷ್ಯನು ತನ್ನ ಸ್ವಾರ್ಥದಿಂದ ಪ್ರಕೃತಿಯಲ್ಲಿರುವ ಗಿಡ ಮರಗಳನ್ನೆಲ್ಲ ಕಡಿದು ನಾಶ ಮಾಡಿದ್ದಾನೆ.
ಆದರೂ ಈ ಭೂಮಿಯಲ್ಲಿ ಮತ್ತೆ ಗಿಡ ಮರಗಳನ್ನು ಬೆಳೆಸಬಹುದು ಎಂಬ ಆಶಾವಾದ ಮಾತು
ಸ್ವಾರಸ್ಯಕರವಾಗಿದೆ ..

ಉ. ಹೊಂದಿಸಿ ಬರೆಯಿರಿ.

1. ಬಾನಸಂಚಾರಿಣಿ                ಝೇಂಕಾರ
2. ಭಿತ್ತಿ                                 ನೈಜತೆ
3. ಭ್ರಮರ                             ಕವಿಕಲ್ಪನೆ
4. ಕೃತಕತೆ                            ಕೋಗಿಲೆ
5. ಗಾನಲಹರಿ                       ಗೋಡೆ
                                            ಸಿರಿಮುಡಿ

ಸರಿ ಉತ್ತರಗಳು

1. ಕೋಗಿಲೆ           2. ಸಿರಿಮುಡಿ          3. ಝೇಂಕಾರ        4. ನೈಜತೆ       5. ಕವಿಕಲ್ಪನೆ

8th Standard Notes Kannada pdf Download

8ನೇ ತರಗತಿ ಭರವಸೆ ಪದ್ಯ ನೋಟ್ಸ್ ಪ್ರಶ್ನೆ ಉತ್ತರ 8th standard notes kannada Bharavase poem Bharavase Padya question answer pdf summary in Kannada

8th Standard Kannada  Bharavase padya Notes App download and question answer text book pdf download

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು

Books Pdf Download Notes App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  8 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh