Samskrutha Sandhi in Kannada, ಸಂಸ್ಕೃತ ಸಂಧಿಗಳು, ಸಂಸ್ಕೃತ ವ್ಯಂಜನ ಸಂಧಿಗಳು, ಸಂಸ್ಕೃತ ಸ್ವರ ಸಂಧಿಗಳು, Samskruta Swara Vyanjana Sandhigalu in Kannada Samskrutha Sandhi Examples in Kannada ಸಂಧಿಗಳು in Kannada Kannada Sandhigalu
ಸಂಸ್ಕೃತ ಸಂಧಿಗಳು ಎಂದರೇನು?
ಪೂರ್ವ ಹಾಗೂ ಉತ್ತರ ಪದಗಳಲ್ಲಿ ಎರಡೂ ಸಂಸ್ಕೃತ ಪದಗಳು ಪರಸ್ಪರ ಪರವಾದಾಗ ಆಗುವ ಸಂಧಿಗಳಿಗೆ ಸಂಸ್ಕೃತ ಸಂಧಿಗಳು ಎನ್ನುವರು.
ಸಂಸ್ಕೃತ ಸಂಧಿಯಲ್ಲಿ ಎರಡು ಪ್ರಕಾರಗಳು
* ಸಂಸ್ಕೃತ ಸ್ವರ ಸಂಧಿಗಳು
* ಸಂಸ್ಕೃತ ವ್ಯಂಜನ ಸಂಧಿಗಳು
ಸಂಸ್ಕೃತ ಸಂಧಿ ಚಾರ್ಟ್
ಸಂಸ್ಕೃತ ಸ್ವರ ಸಂಧಿಗಳು
1. ಸವರ್ಣ ದೀರ್ಘ ಸಂಧಿ :
ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು
ಉದಾ :-
1) ಮಹಾ + ಆತ್ಮ = ಮಹಾತ್ಮ (ಆ+ಆ=ಆ)
2) ದೇವ + ಆಲಯ = ದೇವಾಲಯ (ಅ+ಆ=ಆ)
3) ಗಿರಿ + ಈಶ = ಗಿರೀಶ (ಇ+ಈ= ಈ)
4) ಗುರು + ಉಪದೇಶ = ಗುರೂಪದೇಶ (ಉ+ಉ=ಊ)
5) ರವಿ + ಇಂದ್ರ = ರವೀಂದ್ರ (ಇ+ಇ=ಈ)
2. ಗುಣ ಸಂಧಿ :
ಪೂರ್ವ ಪದದ ಕೊನೆಯಲ್ಲಿ ‘ಅ’ ಅಥವಾ ‘ಆ’ -ಕಾರಗಳ ಮುಂದೆ ಉತ್ತರ ಪದದ ಮೊದಲಿಗೆ ‘ಇ’ ಕಾರವು ಬಂದಾಗ ‘ಏ’ -ಕಾರವು,
ಹಾಗೆಯೇ ‘ಉ’ ಅಥವಾ ‘ಊ’ -ಕಾರವು ಬಂದಾಗ ‘ಓ’ -ಕಾರವು ಮತ್ತು ‘ಋ’ -ಕಾರವು ಬಂದಾಗ ‘ಅರ್’ -ಕಾರವು ಸೇರಿದರೆ ಗುಣಸಂಧಿ ಎನ್ನುವರು.
ಉದಾ:-
1) ಮಹಾ + ಈಶ = ಮಹೇಶ (ಆ+ಈ=ಏ)
2) ಸೂರ್ಯ + ಉದಯ = ಸೂರ್ಯೋದಯ (ಅ+ಉ=ಓ)
3) ಬ್ರಹ್ಮ + ಋಷಿ = ಬ್ರಹ್ಮರ್ಷಿ (ಅ+ಋ=ಅರ್)
4) ಮಹಾ + ಉನ್ನತಿ = ಮಹೋನ್ನತಿ (ಆ+ಉ=ಓ)
5) ಸುರ + ಇಂದ್ರ = ಸುರೇಂದ್ರ (ಅ+ಇ=ಏ)
3. ವೃದ್ಧಿ ಸಂಧಿ :
ಪೂರ್ವ ಪದದ ಕೊನೆಯಲ್ಲಿ ‘ಅ’ ‘ಆ’ -ಕಾರದ ಮುಂದೆ ಉತ್ತರ ಪದದ ‘ಏ’ ‘ಐ’ -ಕಾರವು ಪರವಾದರೆ ಅವೆರಡರ ಸ್ಥಾನದಲ್ಲಿ ‘ಐ’ -ಕಾರವೂ
ಹಾಗೆಯೇ ‘ಓ’ ‘ಔ’ -ಕಾರಗಳು ಪರವಾದರೆ ‘ಔ’ – ಕಾರವೂ ಅದೇಶವಾಗಿ ಬಂದರೆ ಅಂತಹ ಸಂಧಿಯನ್ನು ವೃದ್ಧಿ ಸಂಧಿ ಎನ್ನುವರು.
ಉದಾ:-
1) ಏಕ + ಏಕ = ಏಕೈಕ (ಅ+ಏ=ಐ)
2) ಶಿವ + ಐಕ್ಯ = ಶಿವೈಕ್ಯ (ಅ+ಐ=ಐ)
3) ಮಹಾ + ಔಚಿತ್ಯ = ಮಹೌಚಿತ್ಯ (ಅ+ಔ=ಔ)
4) ವನ + ಔಷಧ = ವನೌಷಧ (ಅ+ಔ=ಔ)
4. ಯಣ್ ಸಂಧಿ :
ಪೂರ್ವ ಪದದ ಕೊನೆಯಲ್ಲಿ ಇ, ಈ, ಉ, ಊ, ಋ -ಕಾರಗಳಿಗೆ ಉತ್ತರ ಪದದ ಮೊದಲಿಗೆ ಸವರ್ಣವಲ್ಲದ ಸ್ವರ ಪರವಾದರೆ, ‘ಇ’ ‘ಈ’ -ಕಾರಗಳಿಗೆ ‘ಯ್’ -ಕಾರವು
ಹಾಗೆಯೇ ‘ಉ’ ‘ಊ’ -ಕಾರಗಳಿಗೆ ‘ವ್’ -ಕಾರವು ಮತ್ತು ‘ಋ’ -ಕಾರಕ್ಕೆ ‘ರ್’ -ಕಾರವೂ ಆದೇಶಗಳಾಗಿ ಬಂದರೆ ಅಂತಹ ಸಂಧಿಗಳಿಗೆ ಯಣ್ ಸಂಧಿಗಳು ಎನ್ನುತ್ತಾರೆ.
ಉದಾ:-
1) ಪ್ರತಿ + ಉಪಕಾರ = ಪ್ರತ್ಯುಪಕಾರ (ಇ+ಉ=ಯ)
2) ಇತಿ + ಆದಿ = ಇತ್ಯಾದಿ (ಇ+ಆ=ಯ)
3) ಮನು + ಅಂತರ = ಮನ್ವಂತರ (ಉ+ಅ=ವ)
4) ಗುರು + ಆಜ್ಞೆ = ಗುರ್ವಾಜ್ಞೆ (ಉ+ಆ=ವ)
5) ಪಿತೃ + ಆರ್ಜಿತ = ಪಿತ್ರಾರ್ಜಿತ (ಋ+ಆ=ರ)
ಸಂಸ್ಕೃತ ವ್ಯಂಜನ ಸಂಧಿಗಳು
ಸಂಸ್ಕೃತ ವ್ಯಂಜನ ಸಂಧಿಗಳಲ್ಲಿ ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿ ಇರುವುದು
ಜಶ್ತ್ವ ಸಂಧಿ,
ಶ್ಚುತ್ವ ಸಂಧಿ,
ಅನುನಾಸಿಕ ಸಂಧಿ.
1. ಜಶ್ತ್ವ ಸಂಧಿ :
ಮೊದಲ ಪದದ ಕೊನೆಯಲ್ಲಿರುವ ಕ, ಚ, ಟ, ತ, ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು (ಗ, ಜ, ಡ, ದ, ಬ) ಆದೇಶಗಳಾಗಿ ಬರುತ್ತವೆ. ಇದಕ್ಕೆ ‘ಜತ್ವ ಸಂಧಿ’ ಎನ್ನುವರು.
ಉದಾ:
ವಾಕ್ + ಈಶ = ವಾಗೀಶ
ವಾಕ್ + ದಾನ = ವಾಗ್ದಾನ
ದಿಕ್ + ಅಂತ = ದಿಗಂತ
ಅಚ್ + ಆದಿ = ಅಜಾದಿ
ಷಟ್ + ಆನನ = ಷಡಾನನ
ವಿರಾಟ್ + ರೂಪ = ವಿರಾಡ್ರೂಪ
2. ಶ್ಚುತ್ವ ಸಂಧಿ :
‘ಸ’ ಕಾರ ‘ತ’ ವರ್ಗಾಕ್ಷರಗಳಿಗೆ ‘ಶ’ ಕಾರ ‘ಚ’ ವರ್ಗಾಕ್ಷರಗಳು ಪರವಾದಾಗ ‘ಸ’ ಕಾರಕ್ಕೆ ‘ಶ’ ಕಾರವು, ‘ತ’ ವರ್ಗಕ್ಕೆ ‘ಚ’ ವರ್ಗವು ಆದೇಶಗಳಾಗಿ ಬರುತ್ತವೆ. ಇದಕ್ಕೆ ಶ್ಚುತ್ವ ಸಂಧಿಯೆಂದು ಹೆಸರು.
ಉದಾ:
ಪಯಸ್ + ಶಯನ = ಪಯಶ್ಯಯನ
ಮನಸ್ + ಚಂಚಲ = ಮನಶ್ಚಂಚಲ
ಮನಸ್ + ಚಾಪಲ್ಯ = ಮನಶ್ಚಾಪಲ್ಯ
ಶರತ್ + ಚಂದ್ರ = ಶರಚ್ಚಂದ್ರ
ಜಗತ್ + ಜ್ಯೋತಿ = ಜಗಜ್ಯೋತಿ
ಯಶಸ್ + ಶರೀರ = ಯಶಶ್ಯರೀರ
3. ಅನುನಾಸಿಕ ಸಂಧಿ :
ವರ್ಗದ ಪ್ರಥಮ ವರ್ಣಗಳಿಗೆ ಅನುನಾಸಿಕಾಕ್ಷರ ಪರವಾದರೂ ಅವುಗಳಿಗೆ ಅಂದರೆ ಕಚಟತಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ಣ ನ ಮ ವ್ಯಂಜನಗಳು ಆದೇಶವಾಗಿ ಬರುತ್ತವೆ.
ಉದಾ:
ದಿಕ್ + ನಾಗ = ದಿಙ್ನಾಗ
ಷಟ್ + ಮಾಸ = ಷಣ್ಮಾಸ
ವಾಕ್ + ಮಾಧುರ್ಯ = ವಾಙ್ಮಾಧುರ್ಯ
ಚಿತ್ + ಮಯ = ಚಿನ್ಮಯ
ಸತ್ + ಮಣಿ = ಸನ್ಮಣಿ
FAQ :
ಪೂರ್ವ ಹಾಗೂ ಉತ್ತರ ಪದಗಳಲ್ಲಿ ಎರಡೂ ಸಂಸ್ಕೃತ ಪದಗಳು ಪರಸ್ಪರ ಪರವಾದಾಗ ಆಗುವ ಸಂಧಿಗಳಿಗೆ ಸಂಸ್ಕೃತ ಸಂಧಿಗಳು ಎನ್ನುವರು.
ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು
ಇತರ ವಿಷಯಗಳು :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಸಂಸ್ಕೃತ ಸಂಧಿಗಳು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ
thx helped
thx helped a lot
It was very helpful and details are good.thank you man