ಕನ್ನಡ ಸಂಧಿಗಳು ಸಂಸ್ಕೃತ ಸಂಧಿಗಳು, Sandhigalu in Kannada Guna Sandhi, Samskrutha Sandhi, Lopa, savarnadeergha, Aadesha Sandhi nunasika Sandhi Examples in Kannada Vyakarana in kannada, Vyanjana Sandhigalu, Examples of Sandhigalu Kannada Sandhigalu Endarenu in Kannada
ಸಂಧಿಗಳು
ವರ್ಣಗಳ ಪರಸ್ಪರ ಸೇರ್ಪಡೆಯಲ್ಲಿ ಆಗುವ ಮಾರ್ಪಾಟನ್ನು ಸಂಧಿ ಎನ್ನಬಹುದು.
ಉದಾಹರಣೆ
ಆಗ + ಆಗ = ಆಗಾಗ
ಹೋಗು + ಎಂದ = ಹೋಗೆಂದ
ಚಳಿ + ಕಾಲ = ಚಳಿಗಾಲ
ಕಣ್ + ಪನಿ = ಕಂಬನಿ
ಮಗು + ಅನ್ನು = ಮಗುವನ್ನು
ಪಿತೃ + ಇಗೆ = ಪಿತೃವಿಗೆ.
ಕನ್ನಡ ವ್ಯಾಕರಣದಲ್ಲಿನ ಮುಖ್ಯ ಸಂಧಿಗಳು ಮೂರು
1. ಲೋಪಸಂಧಿ
2. ಆಗಮಸಂಧಿ
3. ಆದೇಶಸಂಧಿ
(1) ಲೋಪಸಂಧಿ
ಎರಡು ಸ್ವರಗಳು ಒಂದನ್ನೊಂದು ಕೂಡಿದಾಗ, ಮೊದಲನೆಯ ಸ್ವರವು ಲೋಪ ಆಗುತ್ತದೆ. ಆದ್ದರಿಂದಲೇ ಇಂತಹ ಸಂಧಿಯನ್ನು ಲೋಪ ಸಂಧಿ ಎನ್ನುವರು.
Lopa Sandhi 10 Examples in Kannada
ನೋಡುತ್ತ + ಇರು = ನೋಡುತ್ತಿರು
ಮಹ + ಈಶ = ಮಹೇಶ
ಹೋಗು + ಎಂದ = ಹೋಗೆಂದ
ಒಂದು+ ಎರಡು = ಒಂದೆರಡು.
(2) ಆಗಮಸಂಧಿ
ಹಲವೊಮ್ಮೆ ಎರಡು ವರ್ಣಗಳು ಸೇರಿದಾಗ, ಆ ಜಾಗದಲ್ಲಿ ಬೇರೊಂದು ಹೊಸ ವರ್ಣ ಕಾಣಿಸಿಕೊಳ್ಳುತ್ತದೆ. ಇದನ್ನೇ ಆಗಮ ಸಂಧಿ ಎನ್ನಲಾಗುವುದು.
ಇದರಲ್ಲಿ 2 ವಿಧ
1. ಯಕಾರಾಗಮ
2. ವಕಾರಾಗಮ
1. ಯಕಾರಾಗಮ
ಮೊದಲ ಪದದ ಕೊನೆಯಲ್ಲಿ ಅ, ಇ, ಈ, ಎ, ಏ, ಐ ಸ್ವರಗಳು ಅದರ ಮುಂದಣ ಪದದ ಮೊದಲಲ್ಲಿ ಬೇರೊಂದು ಸ್ವರ ಬಂದಾಗ, ಈ ಎರಡೂ ಸ್ವರಗಳ ಬದಲು ‘ಯ’ ವರ್ಣವು ಹೊಸದಾಗಿ ಆಗಮಿಸುವುದು. ಇದನ್ನೇ ಯಕಾರಾಗಮ ಸಂಧಿ ಎನ್ನುವರು.
ಉದಾಹರಣೆ:
ತಾಯಿ + ಅನ್ನು = ತಾಯಿಯನ್ನು, ಕೈ + ಇಂದ = ಕೈಯಿಂದ.
2. ವಕಾರಾಗಮ
ಮೊದಲ ‘ಪದವು ಉ, ಊ, ಋ, ಋ, ಒ, ಓ, ಔ ವರ್ಣಗಳಿಂದ ಕೊನೆಗೊಂಡಿದ್ದು, ಮುಂದಣ ಪದದ ಪ್ರಾರಂಭದಲ್ಲಿ ಯಾವುದಾದರೂ ಬೇರೊಂದು ಸ್ವರ ಬಂದು ಸೇರಿದ್ದಾಗ ‘ವ್’ ಎಂಬ ಹೊಸ ವರ್ಣ ಆ ಜಾಗದಲ್ಲಿ ಕಾಣಿಸಿಕೊಳ್ಳುವುದು. ಇದನ್ನೇ ವಕಾರಾಗಮ ಸಂಧಿ ಎನ್ನಲಾಗುವುದು.
ಉದಾಹರಣೆ
ಕರು + ಅನ್ನು = ಕರುವನ್ನು
ಹೂ + ಉ = ಹೂವು
ಶತೃ + ಇಗೆ = ಶತೃವಿಗೆ
ಗೋ + ಅನ್ನು = ಗೋವನ್ನು
(3) ಆದೇಶಸಂಧಿ
ಎರಡು ವರ್ಣಗಳು ಸೇರಿದಾಗ, ಎರಡನೆಯ ವರ್ಣವು ಬೇರೆ ಕಾಣಿಸಿಕೊಳುವುದು. ಇದನ್ನುಆದೇಶಸಂಧಿ ಎನ್ನುವರು. ಎರಡನೆಯ ಪದದ ಮೊದಲ ವರ್ಣವು ಕ, ಜ, ಟ, ತ, ಪ ಆಗಿದ್ದರೆ ಗ, ಜ, ಡ, ದ, ಬ ಆಗಿ ಪರಿವರ್ತನೆ ಕಾಣುವುವು.
ಉದಾಹರಣೆ :
ಮಳೆ + ಕಾಲ = ಮಳೆಗಾಲ
ಬೆಟ್ಟ+ ತಾವರೆ = ಬೆಟ್ಟದಾವರೆ
ಪೂ+ ಪುಟ್ಟಿ = ಪೂಬುಟ್ಟಿ
ಕಣ್ + ಪನಿ = ಕಂಬನಿ
ಹಲವೊಮ್ಮೆ ಪದದ ಕೊನೆಯಲ್ಲಿ ಬರುವ ‘ಒ’ ಗೆ ಬದಲಾಗಿ ‘ವ್’’ಗೆ ವರ್ಣವು ಬದಲಾಗಿ ‘ಯ್’ ಬರುವುದೂ ಉಂಟು.
ಉದಾಹರಣೆ
ನೋ + ಅಉ = ನೋಯು
ಹೀಗೆಯೇ ಪದದ ಕೊನೆಯಲ್ಲಿ ‘ಅ’ ಬಂದಿದ್ದಾಗ ‘ವ್’ ಬೇರೊಂದು ವರ್ಣವೂ ಬರುವುದುಂಟು.
ಉದಾಹರಣೆ
ಹೊಲ + ಅನ್ನು = ಹೊಲವನ್ನು
ಹಲವೊಮ್ಮೆ ಎರಡು ಪದಗಳು ಕೂಡಿದರೂ ಸಂಧಿ ಆಗದಿರುವುದು ಉಂಟು.
ಉದಾಹರಣೆ
ಹೊಸ + ಪುಸ್ತಕ = ಹೊಸಪುಸ್ತಕ
ಹಳೆ + ಕೋಟು = ಹಳೆಕೋಟು
1. ಸಂಶೋಧನೆಯಸಮಯದಲ್ಲಿ
ಉದಾಹರಣೆ
ಕೃಷ್ಣ + ಎಲ್ಲಿಗೆಹೋದೆ? = ಕೃಷ್ಣ, ಎಲ್ಲಿಗೆಹೋದೆ?
2. ಆಶ್ಚರ್ಯ ಸೂಚಿಸುವಾಗ
ಉದಾಹರಣೆ
ಅಬ್ಬಾ + ಎಂತಹ ಭಯಂಕರ ಹಾವು! = ಅಬ್ಬಾ ಎಂತಹ ಭಯಂಕರ ಹಾವು!
3. ದುಃಖವನ್ನು ಸೂಚಿಸುವಾಗ
ಉದಾಹರಣೆ
ಅಯ್ಯೋ + ಮಗು ಬಾವಿಗೆ ಬಿತ್ತು = ಅಯ್ಯೋ ಮಗು ಬಾವಿಗೆ ಬಿತ್ತು!
4. ಪದಗಳ ದ್ವಿರುಕ್ತಿಯ ಸಮಯದಲ್ಲಿ
ಫಟಫಟ + ಎಂದಿತು = ಫಟಫಟ ಎಂದಿತು
ಛಟಛಟ + ಉರಿಯಿತು = ಛಟಛಟ ಉರಿಯಿತು
ಸಂಸ್ಕೃತ ಸಂಧಿಗಳು
1. ಸ್ವರಸಂಧಿಗಳು –
– ಸವರ್ಣದೀರ್ಘಸಂಧಿ
– ಗುಣ ಸಂಧಿ
– ವೃದ್ಧಿ ಸಂಧಿ
– ಋಣಸಂಧಿ
2. ವ್ಯಂಜನ ಸಂಧಿಗಳು
– ಜಸ್ತ್ವ ಸಂಧಿ
– ಶ್ಚುತ್ವ ಸಂಧಿ
– ಅನುನಾಸಿಕ ಸಂಧಿ
ಸಂಸ್ಕೃತ ಸಂಧಿಗಳಲ್ಲಿ ಮುಖ್ಯವಾಗಿ 2 ಭೇದಗಳು
1. ಸ್ವರಸಂಧಿ
2. ವ್ಯಂಜನಸಂಧಿ
ಸ್ವರಸಂಧಿ
ಸ್ವರಕ್ಕೆ ಸ್ವರ ಸೇರಿದಾಗ ಆಗುವ ಸಂಧಿಕಾರ್ಯವನ್ನು ಸ್ವರ ಸಂಧಿ ಎನ್ನುವರು.
ಉದಾಹರಣೆ Example:
ಪರಮ + ಆನಂದ = ಪರಮಾನಂದ
ಗಿರಿ + ಈಶ = ಗಿರೀಶ
ಗುರು + ಉಪದೇಶ = ಗುರೂಪದೇಶ ಇತ್ಯಾದಿ
ವ್ಯಂಜನ ಸಂಧಿ
ವ್ಯಂಜನಕ್ಕೆ ವ್ಯಂಜನವು ಸೇರಿದಾಗ ಆಗುವ ಸಂಧಿಕಾರ್ಯವನ್ನು ವ್ಯಂಜನ ಸಂಧಿ ಎನ್ನುವರು.
ಉದಾಹರಣೆ
ವಾಕ್ + ದಾನ = ವಾಗ್ದಾನ
ಸತ್+ ಚಿತ್ರ = ಸಚ್ಚಿತ್ರ
ಅಚ್ + ಅಂತ = ಅಜಂತ
ಜಗತ್ + ಜ್ಯೋತಿ = ಜಗಜ್ಯೋತಿ
ಸತ್ + ಮತಿ = ಸನ್ಮತಿ
ಸ್ವರಸಂಧಿಗಳಲ್ಲಿ ನಾಲ್ಕು (4) ಉಪಭೇದಗಳಿವೆ.
1. ಸವರ್ಣದೀರ್ಘಸಂಧಿ
2. ಗುಣ ಸಂಧಿ
3. ವೃದ್ಧಿ ಸಂಧಿ
4. ಅಯಾದಿ ಸಂಧಿ
(1) ಸವರ್ಣದೀರ್ಘ ಸಂಧಿ –
ಸವರ್ಣ ಸ್ವರಗಳು ಒಂದನ್ನೊಂದು ಕೂಡಿದಾಗ, ಅದೇ ಜಾತಿಯ ದೀರ್ಘಸ್ವರವು ಸಂಧಿಯ ರೂಪದಲ್ಲಿ ಬರುವುದು. ಇದನ್ನೇ ಸವರ್ಣದೀರ್ಘಸಂಧಿ ಎನ್ನುವರು.
Savarnadeergha Sandhi Examples in Kannada
ಮಹ + ಆನಂದ + ಮಹಾನಂದ (ಅ + ಆ = ಆ)
ಗಿರಿ + ಈಶ = ಗಿರೀಶ (ಇ + ಈ = ಈ)
(2) ಗುಣಸಂಧಿ –
ಅ-ಆ ಕಾರಗಳಿಗೆ ಇ-ಈ ಕಾರಗಳು ಸೇರಿದಾಗ ‘ಏ’, ಉ-ಊ ಕಾರಗಳು ಸೇರಿದಾಗ “ಓ”, ಋ ಕಾರ ಪರವಾದರೆ ‘ಅರ್’ ಸಂಧಿ ರೂಪದಲ್ಲಿ ಬರುತ್ತದೆ. ಇದನ್ನೇ ಗುಣ ಸಂಧಿ ಎನ್ನಲಾಗುವುದು.
Guna Sandhi Examples in Kannada
ಮಹ + ಈಶ = ಮಹೇಶ (ಅ + ಈ = ಏ)
ಮಹ + ಉ = ಕಾರ = ಮಹೋ = ಕಾರ (ಅ + ಉ = ಓ)
aಮಹ + ಋಷಿ = ಮಹರ್ಷಿ (ಅ + ಯ = ಅರ್)
(3) ಯಣ್‌ಸಂಧಿ –
ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ-ಈ ಕಾರಗಳಿಗೆ ‘ಯ್’ ಕಾರವೂ, ಉ-ಊ ಕಾರಗಳಿಗೆ ‘ವ್’ ಕಾರವೂ ಸಂಧಿ ರೂಪದಲ್ಲಿ ಬರುತ್ತದೆ. ಇದನ್ನೇ ಯಣ್‌ಸಂಧಿ ಎನ್ನಲಾಗುವುದು.
ಉದಾಹರಣೆ
aಅತಿ + ಆಸೆ = ಅತ್ಯಾಸೆ (ಇ + ಆ = ಯಾ)
ಅತಿ + ಉಷ್ಣ = ಅತ್ಯುಷ್ಣ (ಇ + ಉ = ಯ)
ಅತಿ + ಅಂತ = ಅತ್ಯಂತ (ಇ + ಅಂ = ಯ)
(4) ವೃದ್ಧಿಸಂಧಿ
ಅ-ಆ ಕಾರದ ಪದಗಳಿಗೆ ಏ-ಐ ಕಾರದ ಪದಗಳು ಪರವಾದಾಗ ಐ ಹಾಗೂ ಓ-ಔ ಕಾರದ ಪದಗಳು ಪರವಾದಾಗ ‘ಔ ‘ ಸಂಧಿ ರೂಪದಲ್ಲಿ ಬರುವುದನ್ನು ವೃದ್ಧಿಸಂಧಿ ಎನ್ನುವರು.
ಉದಾಹರಣೆ
ಏಕ + ಏಕ = ಏಕೈಕ (ಅ + ಏ = ಐ)
ಮಹ + ಔದರ್ಯ = ಮಹೌದಾರ್ಯ (ಅ + ಔ = ಓ)
ಭಾವ + ಐಕ್ಯ = ಭಾವೈಕ್ಯ (ಅ+ ಐ = ಐ)
ಸಂಸ್ಕೃತ ವ್ಯಂಜನ ಸಂಧಿಗಳು
1. ಜಸ್ತ್ವ
2. ಶ್ಚುತ್ವ
3. ಅನುನಾಸಿಕ
(1) ಜಸ್ತ್ವಸಂಧಿ
“ಜಸ್” ಅಂದರೆ ಸಂಸ್ಕೃತದಲ್ಲಿ “ಜಬಗಡದ” ಈ ಐದು ವ್ಯಂಜನಗಳನ್ನು ತಿಳಿಸುವ ಆದೇಶ ಸಂಜ್ಞೆ ಕನ್ನಡದ ಆದೇಶ ಸಂಧಿಗೆ ಇದನ್ನು ಹೋಲಿಸಬಹುದು.
‘ಕ ‘ಗೆ ಬದಲಾಗಿ ‘ಗ’
‘ಚ’ ಗೆ ಬದಲಾಗಿ ‘ಜ’
‘ಟ’ ಗೆ ಬದಲಾಗಿ ‘ಡ’
‘ತ’ ಗೆ ಬದಲಾಗಿ ‘ದ’
‘ಪ ‘ ಗೆ ಬದಲಾಗಿ ‘ಬ’
ಆದೇಶ ರೂಪದಲ್ಲಿ ಬರುವುದು.
ಉದಾಹರಣೆ
ಅಚ್ + ಅಂತ = ಅಜಂತ (‘ಚ’ ಗೆ ಬದಲಾಗಿ ‘ಜ’)
ದಿಕ್ + ಅಂತ = ದಿಗಂತ (‘ಕ’ ಗೆ ಬದಲಾಗಿ ‘ಗ’)
ಷಟ್ + ಆನ್ = ಷಡಾನ್ನಾ (‘ಟ’ ಗೆ ಬದಲಾಗಿ ‘ಡ’)
ಸತ್ + ಆನ್ = ಸದಾನಂದ (‘ತ’ ಗೆ ಬದಲಾಗಿ ‘ದ’)
ಅ = + ಅಂಶ = ಅಬಂಶ (‘ಪ’ ಗೆ ಬದಲಾಗಿ ‘ಬ’).
ಅಪವಾದ
ದಿಕ್ + ಚಕ್ರ = ದಿಕ್ಚಕ್ರ
ಸತ್ + ಕಾರ್ಯ = ಸತ್ಕಾರ್ಯ
ವಾಕ್ + ಚಾತುರ್ಯ = ವಾಕ್ಕಾತುರ್ಯ
‘ಕ, ಚ, ಟ, ತ, ಪ’ ‘ಗ, ಜ, ಡ, ದ, ಬ,
(2) ಶ್ಚುತ್ವ ಸಂಧಿ –
ಪಾಣಿನಿ ಸೂತ್ರ
ಸ್ತೋ ಶ್ಚು ನಾ ಶ್ಚು (1-4-40)
ಉದಾಹರಣೆ:
ಸತ್ + ಚಿತ್ರ = ಸಚ್ಚಿತ್ರ (ತ ಕಾರಕ್ಕೆ ಚ ಕಾರಪರವಾಗಿ ಚ ಕಾರಾದೇಶ)
ಮನಸ್ + ಚಂಚಲ = ಮನಶ್ಚಂಚಲ (ಸ ಕಾರಕ್ಕೆ ಚ ಕಾರಪರವಾಗಿ ಸ ಕಾರಕ್ಕೆಶಕಾರಾದೇಶ)
(3) ಅನುನಾಸಿಕ ಸಂಧಿ
ವರ್ಗದ = ಪ್ರಥಮ ವರ್ಣಗಳಾದ ಕ್, ಚ್, ಟ್, ತ್, ವ್ಯಂಜನಗಳಿಗೆ ಕ್ರಮವಾಗಿ ಙ, ಞ, ಣ್, ನ್, ವ್ಯಂಜನಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ ಆಗುವುವು.
ಉದಾಹರಣೆ
ಚಿತ್ + ಮಯ = ಚಿನ್ಮಯ
ಸತ್ + ಮಾನ = ಸನ್ಮಾನ
FAQ :
ವರ್ಣಗಳ ಪರಸ್ಪರ ಸೇರ್ಪಡೆಯಲ್ಲಿ ಆಗುವ ಮಾರ್ಪಾಟನ್ನು ಸಂಧಿ ಎನ್ನಬಹುದು.
ಎರಡು ಸ್ವರಗಳು ಒಂದನ್ನೊಂದು ಕೂಡಿದಾಗ, ಮೊದಲನೆಯ ಸ್ವರವು ಲೋಪ ಆಗುತ್ತದೆ. ಆದ್ದರಿಂದಲೇ ಇಂತಹ ಸಂಧಿಯನ್ನು ಲೋಪ ಸಂಧಿ ಎನ್ನುವರು.
ವ್ಯಂಜನಕ್ಕೆ ವ್ಯಂಜನವು ಸೇರಿದಾಗ ಆಗುವ ಸಂಧಿಕಾರ್ಯವನ್ನು ವ್ಯಂಜನ ಸಂಧಿ ಎನ್ನುವರು.
ಇತರ ವಿಷಯಗಳು :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಕನ್ನಡ ಸಂಧಿಗಳ ಬಗ್ಗೆ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಕನ್ನಡ ಸಂಧಿಗಳ ಬಗ್ಗೆ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ
Thank you sir/madem
Thank u , it helped a lot
Thank u ❤️
Please send me kannada sandhi