6ನೇ ತರಗತಿ ನಮ್ಮದೇನಿದೆ? ಕನ್ನಡ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 6th Standard Nammadenide Kannada Poem Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 6 Kannada Poem 3 Notes Pdf 6th Class Kannada 3rd Poem Notes Nammadenide Poem in Kannada Nammadenide Poem Notes in Kannada
6th Nammadenide Kannada Poem Notes 2024
ತರಗತಿ : 6ನೇ ತರಗತಿ
ವಿಷಯ : ಕನ್ನಡ
ಪದ್ಯದ ಹೆಸರು : ನಮ್ಮದೇನಿದೆ?
ಕೃತಿಕಾರರ ಹೆಸರು : ನಿರ್ಮಲಾ ಸುರತ್ಕಲ್
6th Class Nammadenide Question Answer Notes
ಕವಿ ಕೃತಿ ಪರಿಚಯ :
ನಿರ್ಮಲಾ ಸುರತ್ಕಲ್ ( ಜನನ ೧೯೫೯ ಮೇ ೩೧ ) ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿಷ್ಟುರ ಗ್ರಾಮದವರು . ತಂದೆ ಶ್ರೀಧರ ನಾಯಕ್ ಮತ್ತು ತಾಯಿ ಇಂದಿರಾ ಸುರತ್ಕಲ್ ಅವರ ವಿದ್ಯಾಭ್ಯಾಸ ಎಸ್ಸೆಸ್ಸೆಲ್ಸಿಯವರೆಗೆ . ಅವರು ಪ್ರಸ್ತುತ ಮಂಗಳೂರಿನ ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್ ಏಂಡ್ ಕಾಲೇಜಿನ ಹುಡುಗಿಯರ ವಸತಿನಿಲಯದಲ್ಲಿ ನಿಲಯಪಾಲಕಿಯಾಗಿದ್ದಾರೆ . ‘ ಪಾತರಗಿತ್ತಿ ಪಕ್ಲಾ ‘ , ‘ ಅ ಆ ಇ ಈ ಉ ಊ ‘ , ‘ ಪುಟ್ಟಪುಟ್ಟ ಗುಟ್ಟಾಗಿ ” , ” ಸಕ್ತ ಮೂಟೇ ಯಾಲಿದ್ದೇಕೂ … ? ‘ , ‘ ಚೀಂ ಚೇಂ ಚಿಕ್ಕ ಗುಜ್ಜ ‘ ಇತ್ಯಾದಿ ಹಲವು ಮಕ್ಕಳ ಕೃತಿಗಳನ್ನು ಬರೆದಿದ್ದಾರೆ . ಬಾಲವಿಕಾಸ ಅಕಾಡಮಿಯಿಂದ ಎರಡು ಬಾಲಿ ಮಕ್ಕಳ ಚಂದಿರ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಮಕ್ಕಳ ಸಾಹಿತ್ಯ ಪ್ರಶಸ್ತಿ , ಪುತ್ತೂಲಿನ ಬೋಳಂತಕೋಡಿ ಕನ್ನಡ ಪ್ರಶಸ್ತಿ , ಡಿಸೋಜಾ – ಎಚ್ ಎಸ್.ವಿ. ಪುಟಾಣಿ ಸಾಹಿತ್ಯ ಪುರಸ್ಕಾರ – ಇತ್ಯಾದಿ ಪ್ರಶಸ್ತಿಗಳು ಇವರಿಗೆ ದೊರೆತಿದೆ . ಆಕಾಶವಾಣಿಯಲ್ಲ ಇವರ ಲೇಖನಗಳು ಮತ್ತು ಕವನಗಳು ಒತ್ತರಗೊಂಡಿವೆ .
6ನೇ ತರಗತಿ ನಮ್ಮದೇನಿದೆ? ಕನ್ನಡ ಪದ್ಯದ ನೋಟ್ಸ್
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಮರವು ಮನುಷ್ಯನಿಗೆ ಏನೇನು ಕೊಡುತ್ತದೆ?
ಹೂವು, ಹಣ್ಣು, ಸೊಪ್ಪು ಮತ್ತು ಸೌದೆಗಳನ್ನು ಮರವು ಮನುಷ್ಯನಿಗೆ ಕೊಡುತ್ತದೆ.
2. ಹಸುವಿಸಿಂದ ಮನುಷ್ಯನು ಪಡೆಯುವ ಪ್ರಯೋಜನಗಳಾವುವು?
ಹಸುವಿನಿಂದ ಮನುಷ್ಯನು ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ ಮತ್ತು ಗೊಬ್ಬರವನ್ನು ಪಡೆಯುತ್ತಾನೆ.
3. ಗಿಡಬಳ್ಳಿಗಳು ಏನನ್ನು ಕೊಡುತ್ತವೆ?
ಗಿಡಬಳ್ಳಿಗಳು ಹೂವು ಕೊಡುತ್ತವೆ.
4. ಪ್ರಕೃತಿಯಲ್ಲಿ ನಾನು, ನನ್ನದು ಎಂಬ ಮಾತಿಲ್ಲದೆ ಉಪಚರಿಸುತ್ತಿರುವರು ಯಾರು?
ಪ್ರಾಣಿ, ಪಕ್ಷಿ, ಸಸ್ಯವರ್ಗ, ನದಿ, ಭಾನು, ಕಾಡು, ಬಾನು , ಸೂರ್ಯ ಮತ್ತು ಚಂದ್ರರು ನಾನು, ನನ್ನದು ಎಂಬ ಮಾತಿಲ್ಲದೆ ಉಪಚರಿಸುತ್ತಿರುವರು.
5. ಯಾವುದನ್ನು ಕವಿ ಮನುಷ್ಯನ ಭ್ರಮೆ ಎನ್ನುತ್ತಾನೆ?
ಕೋಟೆ ಕಟ್ಟಿ ನಮ್ಮದೆನ್ನುವ ಭ್ರಮೆ ಮನುಷ್ಯನದು ಎಂದು ಕವಿ ಹೇಳುತ್ತಾರೆ.
ಆ. ಸ್ವಂತ ವಾಕ್ಯದಲ್ಲಿ ಬರೆಯಿರಿ.
1. ತ್ಯಾಗ: ಸ್ವಾತಂತ್ರ ಹೋರಾಟಗಾರರು ತಮ್ಮ ಜೀವದ ಹಂಗು ತೊರೆದು ದೇಶಕ್ಕೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ.
2. ಪೊರೆ : ತಾಯಿ ತನ್ನ ಮಗುವನ್ನು ಪೊರೆಯುತ್ತಾಳೆ.
3. ದಾನ: ದಾನವು ನಮ್ಮ ಪುಣ್ಯ ಕಾರ್ಯಗಳಲ್ಲಿ ಒಂದು.
4. ಕೋಟೆ: ಕಿತ್ತೂರು ರಾಣಿ ಚೆನ್ನಮ್ಮ ನಿರ್ಮಿಸಿದ ಕೋಟೆ ಇಂದಿಗೂ ನೋಡಬಹುದಾಗಿದೆ.
ಇ. ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳನ್ನು ಬರೆಯಿರಿ.
ಪ್ರಪಂಚದಲ್ಲಿರುವ ಎಲ್ಲ ಸಂಪತ್ತುಗಳು ತನ್ನವೇ, ಇಲ್ಲಿರುವ ಸಕಲ ಜೀವರಾಶಿಯೂ ತನಗಾಗಿಯೇ ಜೀವನ ನಡೆಸುತ್ತಿದೆ ಎಂಬ ಭಾವನೆ ಮನುಷ್ಯರಲ್ಲಿ ಇತ್ತೀಚೆಗೆ ಹೆಚ್ಚುತ್ತಿದೆ. ಇದರಿಂದ ಆತನ ಮನಸ್ಸು ಸಂಕುಚಿತಗೊಳ್ಳುತ್ತದೆ. ಸ್ವಾರ್ಥವು ನೆಲೆಗೊಳ್ಳುತ್ತದೆ. ಐಹಿಕ ಸುಖ ಸಂಪತ್ತುಗಳನ್ನು ಸಂಗ್ರಹಿಸುವುದೇ ಮನುಷ್ಯನ ಗುರಿಯಾಗುತ್ತಿದೆ. ಅದರೆ ಜಗತ್ತಿನ ಉಳಿದೆಲ್ಲ ಜೀವಿಗಳಿಗೂ ಸಂಪತ್ತಿನ ಕ್ರೂಢೀಕರಣ ಮಾಡದೇ ಸರಳವಾಗಿ ಬದುಕುತ್ತಿವೆ. ತಮ್ಮ ಬದುಕಿಗೆ ಬೇಕಾದಷ್ಟನ್ನು ಮಾತ್ರ ಬಳಸಿಕೊಂಡು ಉಳಿದಿರುವುದನ್ನು ಜಗತ್ತಿಗೆ ಬಿಡುತ್ತಿವೆ. ಬದುಕು ಮತ್ತು ಬದುಕಲು ಬಿಡು ಎಂಬ ಸಂದೇಶವನ್ನು ಪ್ರಕೃತಿಯೇ ಮನುಷ್ಯನಿಗೇ ಹೇಳುವಂತಿದೆ. ಪ್ರಸ್ತುತ ಕವಿತೆಯು ಮನುಷ್ಯನು ಸಕಲ ಜೀವರಾಶಿಗಳ ಜೊತೆ ಹೊಂದಿಕೊಂಡು ಬಾಳಬೇಕೆಂಬ ಆಶಯವನ್ನು ಹೊಂದಿವೆ.
FAQ :
ಹೂವು, ಹಣ್ಣು, ಸೊಪ್ಪು ಮತ್ತು ಸೌದೆಗಳನ್ನು ಮರವು ಮನುಷ್ಯನಿಗೆ ಕೊಡುತ್ತದೆ.
ಪ್ರಾಣಿ, ಪಕ್ಷಿ, ಸಸ್ಯವರ್ಗ, ನದಿ, ಭಾನು, ಕಾಡು, ಬಾನು , ಸೂರ್ಯ ಮತ್ತು ಚಂದ್ರರು ನಾನು, ನನ್ನದು ಎಂಬ ಮಾತಿಲ್ಲದೆ ಉಪಚರಿಸುತ್ತಿರುವರು.
ಕೋಟೆ ಕಟ್ಟಿ ನಮ್ಮದೆನ್ನುವ ಭ್ರಮೆ ಮನುಷ್ಯನದು ಎಂದು ಕವಿ ಹೇಳುತ್ತಾರೆ.
ಇತರೆ ವಿಷಯಗಳು :
6th Standard All Subject Notes
ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
Super
Ok I will write in my kannada notes
Thank you