6ನೇ ತರಗತಿ ಕಂಬಳಿ ಹುಳು ಮತ್ತು ಚಿಟ್ಟೆ ಕನ್ನಡ ಪದ್ಯದ ನೋಟ್ಸ್‌ | 6th Standard Kambalihulu Mattu Chitte Kannada Poem Notes

6ನೇ ತರಗತಿ ಕಂಬಳಿ ಹುಳು ಮತ್ತು ಚಿಟ್ಟೆ ಕನ್ನಡ ಪದ್ಯದ ನೋಟ್ಸ್‌, 6th Standard Kambalihulu Mattu Chitte Kannada Poem Notes Question Answer Summery 2022, Kseeb Solution Class 6 Poem 4 Kambalihulu Mattu Chitte Notes

6th Class Kambalihulu Mattu Chitte Kannada Poem Notes 2022

ತರಗತಿ : 6ನೇ ತರಗತಿ

ವಿಷಯ : ಕನ್ನಡ

ಪದ್ಯದ ಹೆಸರು : ಕಂಬಳಿ ಹುಳು ಮತ್ತು ಚಿಟ್ಟೆ

ಕೃತಿಕಾರರ ಹೆಸರು : ಎನ್ . ಶ್ರೀನಿವಾಸ ಉಡುಪ

Kambalihulu Mattu Chitte Kannada Poem Notes

ಕವಿ ಕೃತಿ ಪರಿಚಯ :

ಎನ್ . ಶ್ರೀನಿವಾಸ ಉಡುಪ ( ಜನನ : ೧೯೩೫ ಆಗಸ್ಟ್ ೧೫ , ಮರಣ : ೨೦೨೦ ಎಪ್ರಿಲ್ ೧೧ ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರು ಎಂಬ ಗ್ರಾಮದವರು . ತಂದೆ ವೆಂಕಟೇಶ ಉಡುಪ , ತಾಯಿ ಮಹಾಲಕ್ಷ್ಮಮ್ಮ . ಉಡುಪರು ತೀರ್ಥಹಳ್ಳಿ , ಶಿವಮೊಗ್ಗ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ , ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು . ಕವಿತೆ , ಅನುವಾದ , ಮಕ್ಕಳ ಸಾಹಿತ್ಯ , ಅಂಕಣ ಬರಹ ಹೀಗೆ ಅನೇಕ ಪ್ರಕಾರಗಳಲ್ಲಿ ಬರವಣಿಗೆ ಮಾಡಿರುವರು . ” ಕನ್ನಡ ನಾಡಿನ ಕೂಸುಮರಿ ” , ” ಕುಂಭಕರ್ಣನ ನಿದ್ದೆ ” , ” ಪಾಪು ಪದ್ಯಗಳು ” , ” ಗೂಬಜ್ಜಿಯ ಗೊರಕೆ ” , ” ಹಿಡಿಂಬನ ತೋಟ ” – ಇವು ಮಕ್ಕಳಿಗಾಗಿ ಪ್ರಕಟವಾಗಿರುವ ಅವರ ಕೆಲವು ಕೃತಿಗಳು . ಅವರ ಸಾಹಿತ್ಯಕೃಷಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ , ಕಾಂತಾವರ ಕನ್ನಡ ಸಂಘದ ವಾರ್ಷಿಕ ಗೌರವ ಪ್ರಶಸ್ತಿ , ಶಿವಮೊಗ್ಗೆಯ ಕರ್ನಾಟಕ ಸಂಘದ ಶಿವರಾಮ ಕಾರಂತ ಪ್ರಶಸ್ತಿ , ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರವರ್ಣಿ ದತ್ತಿ ಪ್ರಶಸ್ತಿಗಳು ಒಳಗೊಂಡಂತೆ ಹಲವು ಮನ್ನಣೆಗಳು ಸಂದಿವೆ .

6ನೇ ತರಗತಿ ಕಂಬಳಿ ಹುಳು ಮತ್ತು ಚಿಟ್ಟೆ ಕನ್ನಡ ಪದ್ಯದ ನೋಟ್ಸ್‌

ಅಭ್ಯಾಸಗಳು

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಕಂಬಳಿಹುಳು ಅಳುತ್ತಾ ತನ್ನಮ್ಮನಲ್ಲಿ ಏನು ಹೇಳಿತು?

ಕಂಬಳಿ ಹುಳು ತನ್ನಮ್ಮನಿಗೆ ಅಮ್ಮಾ… ತಾಯಿ ಚಿಟ್ಟೆ ಎಷ್ಟು ಚಂದ ನೀನು ಇದ್ದೀಯಾ, ಆದರೆ ನನಗೆ ಯಾಕೆ ಇಷ್ಟು ಕೆಟ್ಟ ರೂಪವನ್ನು ಕೊಟ್ಟೆ ಎಂದು ಹೇಳಿತು.

2. ಕಂಬಳಿಹುಳು ಹೇಗಿದೆ? ವಿವರಿಸಿ.

ಕಪ್ಪಾದ ಮೈ, ಅದರ ಮೇಲೆ ಮುಳ್ಳಿನಂತೆ ಬೆಳೆದ ರೋಮಗಳು ( ಕೂದಲುಗಳು), ಎಣಿಸಲು ಆದಷ್ಟು ಕಾಲುಗಳು. ಹಿಗಿದೆ ಕಂಬಳಿಹುಳುವಿನ ರೂಪ.

3. ಕಂಬಳಿಹುಳುವಿನ ಮೀಸೆ ಹೇಗಿದೆ?

ಕಂಬಳಿಹುಳುವಿನ ಮೀಸೆ ಪೊರಕೆಯಂತೆ ಇದೆ.

4. ಕಂಬಳಿಹುಳುವಿನ ಆಸೆ ಏನು?

ಕಂಬಳಿ ಹುಳುವಿಗೆ ಚಿಟ್ಟೆಯಂತೆ ತೆಳುವಾದ ರೆಕ್ಕೆಯನ್ನು ಪಡೆದು ಮೆಲಕ್ಕೆ ಹಾರುವ ಆಸೆ.

5. ಅಮ್ಮ ಚಿಟ್ಟೆ ಕಂಬಳಿ ಹುಳುವಿಗೆ ಏನುತ್ತರ ಕೊಟ್ಟಿತು?

ಆತುರ ಪಡಬೇಡ, ತಾಳಿಕೋ, ರೋಮ ( ಕೂದಲು) ಉದುರಿ ಚೆಲುವಾದ ಕೆಕ್ಕೆ ಮೂಡುವದು. ಏರುವ ಪ್ರಯತ್ನ ಮಾಡು, ಎಲ್ಲವೂ ಸಾಧ್ಯವಾಗುವುದು ಎಂದು ಅಮ್ಮ ಚಿಟ್ಟೆ ಕಂಬಳಿ ಹುಳುವಿಗೆ ಉತ್ತರ ಕೊಟ್ಟಿತು.

ಆ. ಬಿಟ್ಟ ಸ್ಥಳ ತುಂಬಿರಿ.

1. ದಪ್ಪಗಿರುವ ಮೈ ಅದರ ಮೇಲೆ ಮುಳ್ಳಂತೆ ಬೆಳೆದ ರೋಮ!

2. ನಿನ್ನ ಹಾಗೆ ತೆಳು ರೆಕ್ಕೆ ಪಡೆದು ಮೇಲಕ್ಕೆ ಹಾರಲಾಸೆ!

3. ಮೇಲಕ್ಕೇರುವ ಪ್ರಯತ್ನ ಮಾಡು ಎಲ್ಲವೂ ಸಾಧ್ಯ ಮಗು!

ಇ. ಈ ಪದಗಳನ್ನು ಬಿಡಿಸಿ ಬರೆಯಿರಿ.

1. ಕಪ್ಪಗಿರುವ = ಕಪ್ಪಗೆ+ಇರುವ

2. ಕಣ್ಣೆರಡು=ಕಣ್ಣು+ಎರಡು

3. ಹಾರಲಾಸೆ= ಹಾರಲು+ಆಸೆ

4. ಹಂಬಲವಿರಬೇಕು=ಹಂಬಲ+ಇರಬೇಕು

5. ಮೇಲಕ್ಕೇರುವ = ಮೇಲಕ್ಕೆ +ಏರುವ

ಈ. ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಿಸಿ

ಚಿಟ್ಟೆ ಹೇಳಿತು: “ಆತುರ ಬೇಡ,
ತಾಳಿಕೊಳ್ಳಬೇಕು;
ರೋಮ ಉದುರಿ, ಚೆಲು ರೆಕ್ಕೆ
ಮೂಡುವುದು; ಹಂಬಲವಿರಬೇಕು,

ಮೇಲಕ್ಕೇರುವ ಪ್ರಯತ್ನ ಮಾಡು;
ಎಲ್ಲವು ಸಾಧ್ಯ, ಮಗು!
ಅಳುತ್ತ ಕುಳಿತರೆ ಏನಾಗುವುದು?
ಎಲ್ಲಿ, ಕೊಂಚ ನಗು!”

ಇತರೆ ವಿಷಯಗಳು :

6ನೇ ತರಗತಿ ಕನ್ನಡ ನೋಟ್ಸ್ ಎಲ್ಲಾ ಪಾಠ ಪದ್ಯಗಳ ಪ್ರಶ್ನೋತ್ತರಗಳು

ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

6th Notes App

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ  

ಕನ್ನಡ ದೀವಿಗೆ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ  ಮತ್ತು ನಾವು ನಿಮ್ಮನ್ನು ಶೀಘ್ರದಲ್ಲಿಯೇ ಸಂಪರ್ಕಿಸುತ್ತೇವೆ.

One thought on “6ನೇ ತರಗತಿ ಕಂಬಳಿ ಹುಳು ಮತ್ತು ಚಿಟ್ಟೆ ಕನ್ನಡ ಪದ್ಯದ ನೋಟ್ಸ್‌ | 6th Standard Kambalihulu Mattu Chitte Kannada Poem Notes

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh