6ನೇ ತರಗತಿ ಹೊಸ ಬಾಳು ಕನ್ನಡ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 6th Standard Hosa Balu Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class Poem 5 Notes 6th Class Kannada 5th Poem Notes Pdf hosa balu 6th Kannada Poem Notes
6th Class Hosa Balu Kannada Poem Notes 2024
ತರಗತಿ : 6ನೇ ತರಗತಿ
ವಿಷಯ : ಕನ್ನಡ
ಪದ್ಯದ ಹೆಸರು : ಹೊಸ ಬಾಳು
Hosa Balu Kannada Notes
ಕವಿ ಕೃತಿ ಪರಿಚಯ :
ಹೊರನಾಡಾದ ಮುಂಬಯಿಯಲ್ಲಿ ನೆಲೆಗೊಂಡಿರುವ ಬಿ.ಎಸ್ . ಕುರ್ಕಾಲರ ನಿಜನಾಮಧೇಯ ಭುಜಂಗಶೆಟ್ಟಿ . ಜನನ : ೧೯೩೨ ಜುಲೈ ೧೭ , ಇವರ ತಂದೆ ಕುರ್ಕಾಲು ಗಣಪಯ್ಯಶೆಟ್ಟಿ , ತಾಯಿ ಲಕ್ಷ್ಮಿ ಶೆಣೈ . ಹುಟ್ಟೂರಾದ ಉಡುಪಿಯ ಪಾಜಕದಿಂದ ೧೯೬೬ ರಲ್ಲಿ ಮುಂಬಯಿಗೆ ಹೋದವರು ಅಲ್ಲಿ ಶಿಕ್ಷಕ ವೃತ್ತಿ ಕೈಗೊಂಡರು . ನಟ , ನಾಟಕಕಾರ , ನಿರ್ದೇಶಕ , ಕವಿ , ಪತ್ರಿಕಾ ಸಂಪಾದಕ , ಅಂಕಣಕಾರ , ಯಕ್ಷಗಾನ ಅರ್ಥಧಾಲಿ- ಹೀಗೆ ವಿವಿಧ ವಲಯಗಳಲ್ಲಿ ಅವರ ಸೇವೆ ಸಂದಿದೆ . ನನ್ನ ನಿನ್ನ ಅಂತರಂಗ , ಶ್ರಾವಣ ಲಹಲಿ , ಬರೆಯುವೆನು ನಿನಗಾಗಿ , ರಾಗ ರಶ್ಮಿ ಮುಂತಾದ ಕವನ ಸಂಕಲನಗಳೂ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ . ಕನ್ನಡ ಸಾಹಿತ್ಯ ಪಲಷತ್ತು , ಮುಂಬಯಿ ಕರ್ನಾಟಕ ಸಂಘ ಮುಂತಾದ ಅನೇಕ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿಗಳನ್ನಿತ್ತು ಸನ್ಮಾನಿಸಿವೆ . ಪ್ರಸ್ತುತ ಪದ್ಯವನ್ನು ಕುರ್ಕಾಲ ಅವರ ‘ ಬರೆಯುವನು ನಿನಗಾಗಿ ‘ ಕವನಸಂಕಲನದಿಂದ ಆಲಿಸಲಾಗಿದೆ .
6ನೇ ತರಗತಿ ಹೊಸ ಬಾಳು ಕನ್ನಡ ಪದ್ಯದ ನೋಟ್ಸ್
ಅ. ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿಮಾಡಿರಿ.
1. ಗಾಂಧಿ ತಾತನ ಚಿತ್ರ ಗುಬ್ಬಚ್ಚಿಯನು ನಗುತ ನೋಡುತ್ತಿತ್ತು.
2. ಬೆಕ್ಕು ಹೊಂಚು ಹಾಕುತ ಬರಲು ಬುರ್ರನೆ ಹಾರಿ ತಾ ಪಾರಾಗುತ್ತಿತ್ತು.
3. ಸಲ್ಲಾಪವಾಡುತಿಹ ಹಕ್ಕಿ ಜೋಡಿಯು ಮನಕೆ ಮೋಜಿನಾಟ.
4. ಅಚ್ಚು ಮೆಚ್ಚಿನ ಜೋಡಿ ಅನುಕೂಲ ದಾಂಪತ್ಯ ಬೆರಗುಗೊಳಿಸುವ ಪ್ರತಿಭೆ ಗುಬ್ಬಿಗಳಿಗೆ.
5. ಸಜ್ಜಾದ ಗೂಡಿ ನಲಿ ಹೂಡಬೇಕೆಂಬಾಸೆ ಹೊಸ ಬಾಳನು.
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಗೋಡೆಯ ಮೇಲೆ ಯಾರ ಚಿತ್ರವಿತ್ತು?
ಗೋಡೆಯ ಮೇಲೆ ಗಾಂಧೀ ತಾತನ ಚಿತ್ರವಿತ್ತು.
2. ಪುಟ್ಟಹಕ್ಕಿಯು ಏನನ್ನು ಹುಡುಕುತ್ತಿತ್ತು?
ಪುಟ್ಟಹಕ್ಕಿಯು ಕಾಳುಗಳನ್ನು ಹುಡುಕುತ್ತಿತ್ತು.
3. ಗುಬ್ಬಚ್ಚಿಗಳದ್ದು ಯಾವ ಬಗೆಯ ದಾಂಪತ್ಯ?
ಗುಬ್ಬಚ್ಚಿಗಳದ್ದು ಅನುಕೂಲವಾದ ಬಗೆಯ ದಾಂಪತ್ಯ.
4. ಗುಬ್ಬಚ್ಚಿಗಳು ಏನನ್ನು ಸಂಗ್ರಹಿಸುತ್ತಿದ್ದವು?
ಗುಬ್ಬಚ್ಚಿಗಳು ಅರಳೆ, ಹುಲ್ಲು, ಕಡ್ಡಿಗಲನ್ನು ಸಂಗ್ರಹಿಸುತ್ತಿದ್ದವು.
5. ಈ ಕವನವನ್ನು ಯಾವ ಸಂಕಲನದಿಂದ ಆರಿಸಲಾಗಿದೆ?
ಈ ಕವನವನ್ನು ಕುರ್ಕಾಲರವರು ಬರೆದಿರುವ “ಬರೆಯುವೆ ನಿನಗಾಗಿ” ಸಂಕಲನದಿಂದ ಆರಿಸಲಾಗಿದೆ.
ಇ. ಎರಡು/ಮೂರು ವಾಕ್ಯದಲ್ಲಿ ಉತ್ತರಿಸಿ.
1. ಗುಬ್ಬಚ್ಚಿಯು ಮನೆಯ ಅಂಗಳಕ್ಕೆ ಶೋಭೆ ಹೇಗೆ ತರುತ್ತಿತ್ತು?
ಗುಬ್ಬಚ್ಚಿಯ ಮನೆಯ ಅಂಗಳದಲ್ಲಿ ಚಿಂವ್ ಚಿಂವ್ ಎನ್ನುತ್ತ ಹಾಡುತ್ತಿರುವುದು ಒಂದು ರೀತಿಯ ಶೋಭೆಯಾದರೆ, ಚಾವಡಿಯ ಗೋಡೆಯಲ್ಲಿ ಗಾಂಧಿ ತಾತನ ಚಿತ್ರ ಗುಬ್ಬಚ್ಚಿ ಈ ಹಾಡುತ್ತಿದುದ್ದನು ಕಂಡು ನಗುತ್ತಾ ನೋಡುತ್ತಿದ್ದು ಮನೆಯ ಅಂಗಳಕ್ಕೆ ಮತ್ತಷ್ಟು ಶೋಭೆಯನ್ನು ತಂದಿತ್ತು. ಗುಬ್ಬಚ್ಚಿಗಳು ಜೊತೆಯಾಗಿ ಆಡುವುದು ಹಾರುವುದು, ವಿಹರಿಸುವುದು ಅಂಗಳಕ್ಕೆ ಮತ್ತಷ್ಟು ಶೋಭೆ ತಂದಿತ್ತು.
2. ಗುಬ್ಬಚ್ಚಿಯ ಪ್ರತಿಭೆಯನ್ನು ಕವಿ ಹೇಗೆ ವಿವರಿಸಿದ್ದಾರೆ?
ಗುಬ್ಬಚ್ಚಿಯು ಪಾದರಸದಂತಿರುವ ಚುರುಕುತನ ಇನಿಯನ ಕೂಡಿ ಆಡುವ ಆಟ, ಜೊತೆ ಜೊತೆಯಾಗಿ ಹಾರಾಡಿ, ವಿಹರಿಸುತ್ತ ಅಂಗಳಕ್ಕೆ ಶೋಭೆಯನ್ನೇ ತರುತ್ತಿದ್ದವು. ಎಲ್ಲರನ್ನು ಬೆರಗುಗೊಳಿಸುಬ ಪ್ರತಿಭೆ ಗುಬ್ಬಿಗಳಿಗೆ ಯಾವುದು ಮಿಗಿಲು ಎಂದು ಹೇಳುವುದು ಸಾಧ್ಯ ಇಲ್ಲ. ಅರಳೆ, ಹುಲ್ಲು, ಕಡ್ಡಿಗಳನ್ನು ಕಟ್ಟಿ ಗಾಂಧೀ ಚಿತ್ರದ ಹಿಂದೆ ಸಜ್ಜಾದ ಗೂಡಿನಲ್ಲಿ ಹೊಸ ಬಾಳು ಪ್ರಾರಂಭಿಸಬೇಕೆಂಬ ಆಸೆ ಮೆಚ್ಚಬೇಕಾದುದು ಅದರ ಪ್ರತಿಭೆಗೆ ಸಾಕ್ಷಿಯಾಗಿದೆ. ಗುಬ್ಬಿಗಳ ಮೆಲುನಗೆ ಅವುಗಳ ಕಣ್ಣೋಟ, ಸಲ್ಲಾಪದಾಡುವ ರೀತಿ ಮನಸ್ಸಿಗೆ ಸಂತೋಷವನ್ನು ಕೊಡುತ್ತವೆ. ಎಂದು ಕವಿ ಹೇಳೀದ್ದಾನೆ.
ಈ. ಈ ಪದಗಳನ್ನು ಬಿಡಿಸಿ ಬರೆದು ಸಂಧಿ ಹೆಸರಿಸಿರಿ
1. ಪಾತ್ರಾಭಿನಯ= ಪಾತ್ರ+ ಅಭಿನಯ=ಪಾತ್ರಾಭಿನಯ
ಸವರ್ಣದೀರ್ಘ ಸಂಧಿ
2. ಮಹರ್ಷಿ=ಮಹಾ+ಋಷಿ= ಮಹರ್ಷಿ
ಗುಣ ಸಂಧಿ
3. ಶಬ್ದಾಲಂಕಾರ=ಶಬ್ದ+ಅಲಂಕಾರ
ಸವರ್ಣದೀರ್ಘ ಸಂಧಿ
4. ಚತುರೋಕ್ತಿ= ಚತುರ+ಉಕ್ತಿ= ಚತುರೋಕ್ತಿ
ಗುಣ ಸಂಧಿ
ಉ. ಇವುಗಳಿಗೆ ತಲಾ ಎರಡು ಉದಾಹರಣೆಗಳನ್ನು ಬರೆಯಿರಿ.
1. ಸವರ್ಣದೀರ್ಘಸಂಧಿ
- ಸುರ+ಅಸುರ=ಸುರಾಸುರ
- ಗಿರಿ+ಈಶ=ಗಿರೀಶ
- ಮಹಾ+ಆತ್ಮ=ಮಹಾತ್ಮ
2. ಗುಣಸಂಧಿ
- ನರ+ಇಂದ್ರ=ನರೇಂದ್ರ
- ದೇವ+ಇಂದ್ತ= ದೇವೇಂದ್ರ
- ಗಣ+ಈಶ=ಗಣೇಶ
ಊ. ನುಡಿಗಟ್ಟಿನ ಸಹಾಯದಿಂದ ವಾಕ್ಯ ರಚಿಸಿರಿ.
1. ಹೊಂಚುಹಾಕು: ಚಿರತೆ ಜಿಂಕೆ ಹಡಿಯಲು ಹೊಂಚುಹಾಕುವುದು.
2. ಬೆಕ್ಕಸಬೆರಗಾಗು: ನಾನು ನವಿಲಿನ ನೃತ್ಯಕಂಡು ಬೆಕ್ಕಸಬೆರಗಾದೆ.
3. ಮನೆಮಂದಿ: ಮನೆಮಂದಿ ಕೂಡಿ ಹಂಪೆಗೆ ಹೋಗಿದ್ದೆವು.
4. ಹುಲ್ಲುಕಡ್ಡಿ: ಪಕ್ಷಿಗಳು ಹುಲ್ಲುಕಡ್ಡಿಯ ಸಹಾದಿಂದ ಗೂಡನ್ನು ಕಟ್ಟುತ್ತವೆ.
FAQ :
ಪುಟ್ಟಹಕ್ಕಿಯು ಕಾಳುಗಳನ್ನು ಹುಡುಕುತ್ತಿತ್ತು.
ಗುಬ್ಬಚ್ಚಿಗಳದ್ದು ಅನುಕೂಲವಾದ ಬಗೆಯ ದಾಂಪತ್ಯ.
ಗೋಡೆಯ ಮೇಲೆ ಗಾಂಧೀ ತಾತನ ಚಿತ್ರವಿತ್ತು.
ಇತರೆ ವಿಷಯಗಳು :
6th Standard All Subject Notes
ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.