ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ – 4.6 ಚೋಳರು ನೋಟ್ಸ್‌ | 2nd Puc History Chapter 4.6 Notes in Kannada

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ – 4.6 ಚೋಳರು ನೋಟ್ಸ್‌, 2nd Puc History Chapter 4.6 Notes Question Answer in Kannada Cholaru Notes Pdf Download Kseeb Solution For Class 12 Hiatory Chapter 4.6 Notes 2nd puc History Cholas Notes P in Kannada Medium

ಅಧ್ಯಾಯ – 4.6 ಚೋಳರು

2nd Puc History Chapter 4.6 Question Answer in Kannada

2nd Puc History Cholaru Chapter 4.6 Notes

I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :

1. ಚೋಳರ ಗ್ರಾಮಾಡಳಿತವನ್ನು ತಿಳಿಸುವ ಶಿಲಾಶಾಸನ ಯಾವುದು ?

ಒಂದನೇ ಪಾರಾಂತಕನ ಉತ್ತರ ಮೆರೂರು ಶಾಸನ .

2. ‘ ಕುಡುವಲೈ ‘ ಎಂದರೇನು ?

ಅದೃಷ್ಟ .

3.“ ಸಂಘಂ ‘ ಎಂದರೇನು ?

ತಮಿಳು ‘ ಸಾಹಿತ್ಯ ಸಂಘ

4. ಸಂಘಂ ಕಾಲದ ಚೋಳರ ಮೊದಲ ದೊರೆ ಯಾರು ?

ಇಳೈಯಾನ್ .

5. ತಂಜಾವೂರಿನ ರಾಜರಾಜೇಶ್ವರ ದೇವಾಲಯವನ್ನು ಕಟ್ಟಿಸಿದವರು ಯಾರು ?

ಒಂದನೇ ರಾಜರಾಜ ಚೋಳ .

6. ‘ ವರಿಯಮ್ ‘ ಎಂದರೇನು ?

ವಾರ್ಷಿಕ ಸಮಿತಿ , ಉದ್ಯಾನಸಮಿತಿ , ಕೆರೆಕಟ್ಟೆಗಳ ಸಮಿತಿಗಳ ಕಾರ್ಯನಿರ್ವಹಣೆಯ ಸಮಿತಿಯನ್ನು ‘ ವರಿಯಂ ‘ ಎನ್ನುವರು .

2nd Puc History Chapter 4 Question Answer in Kannada

II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ :

1. ಒಂದನೇ ರಾಜೇಂದ್ರ ಚೋಳನ ಯಾವುದಾದರೂ ಎರಡು ಬಿರುದುಗಳನ್ನು ತಿಳಿಸಿ .

ಪಂಡಿತಚೋಳ , ಗಂಗೈಕೊಂಡ ಚೋಳ .

2. ಸಂಘಂ ಯುಗದ ಯಾವುದಾದರೂ ಎರಡು ಪ್ರಸಿದ್ಧ ಕೃತಿಗಳನ್ನು ಹೆಸರಿಸಿ .

ಶಿಲಾವಾದಿಗಾರಂ ಮತ್ತು ಮಣಿಮೇಗಲ್ಯ .

3. ತಕ್ಕೋಳಂ ಕದನವು ಯಾವಾಗ ಮತ್ತು ಯಾರ ನಡುವೆ ನಡೆಯಿತು ?

ಸಾ.ಶ. 949 ರಲ್ಲಿ ಚೋಳ ಮತ್ತು ರಾಷ್ಟ್ರಕೂಟರ ನಡುವೆ ನಡೆಯಿತು .

III . ಈ ಕೆಳಗಿನ ಪ್ರಶ್ನೆಗಳಿಗೆ 15-20 ವಾಕ್ಯಗಳಲ್ಲಿ ಉತ್ತರಿಸಿ :

2nd Puc History Cholaru Notes Pdf

1 . ಒಂದನೇ ರಾಜೇಂದ್ರ ಚೋಳನ ಸಾಧನೆಗಳನ್ನು ವಿವರಿಸಿ .

  • ಇವನು ಒಂದನೇ ರಾಜ ರಾಜ ಚೋಳನ ಮಗ , ಸಿಂಹಳದ ಅರಸ 5 ನೇ ಮಹೇಂದ್ರನನ್ನು ಸೋಲಿಸಿ ಬಂಧನದಲ್ಲಿಟ್ಟು ಆತನ ವಶದಲ್ಲಿದ್ದ ಪಾಂಡ್ಯ ರಾಜನ ಮುದ್ರೆ ಮತ್ತು ರಾಜಕಿರೀಟವನ್ನು ವಶಕ್ಕೆ ತೆಗೆದುಕೊಂಡು , ಸೆರೆಯಲ್ಲಿದ್ದ ಮಹೇಂದ್ರನು ಮರಣ ಹೊಂದಿದ ನಂತರ ಸಿಂಹಳ ರಾಜ್ಯ ಚೋಳರ ಪಾಲಾಯಿತು .
  • ಕಲ್ಯಾಣಿ ಚಾಲುಕ್ಯದೊರೆ 2 ನೇ ಜಯಸಿಂಹನನ್ನು ಮತ್ತು ಈತನ ಪರ ವಹಿಸಿ ಬಂದ ವೆಂಗಿಯ ವಿಜಯಾ ದಿತ್ಯನನ್ನು ಸೋಲಿಸಿ ರಾಜ್ಯದಿಂದ ಹೊರ ಹಾಕಿ , ರಾಜ ರಾಜ ನರೇಂದ್ರನನ್ನು ಸಿಂಹಾಸನದ ಮೇಲೆ ಕೂರಿಸಿ ತನ್ನ ಮಗಳಾದ ಅಮ್ಮಂಗದೇವಿಯನ್ನು ಕೊಟ್ಟು ಮದುವೆ ಮಾಡಿದನು . ನಂತರ ಒರಿಸ್ಸಾದತ್ತ ಮುನ್ನುಗ್ಗಿ ಬಂಗಾಳದ ಒಂದನೇ ಮಹಿಪಾಲನನ್ನು ಸೋಲಿಸಿದನು .
  • ಗಂಗಾನದಿಯವರೆವಿಗೂ ದಂಡೆಯಾತ್ರೆ ಹೋಗಿ ಪವಿತ್ರ ಗಂಗಾಜಲವನ್ನು ತೆಗೆದುಕೊಂಡು ಬಂದು ಗಂಗೈಕೊಂಡ ಚೋಳ ‘ ಎಂಬ ಬಿರುದನ್ನು ಧರಿಸಿ , ಗಂಗೈಕೊಂಡ ಚೋಳಪುರಂ ಎಂಬ ಹೊಸ ರಾಜಧಾನಿಯನ್ನು ಕಟ್ಟಿಸಿದನು . ಇವನು ಚೋಳಗಂಗಂ ಎಂಬ ಕೆರೆಯನ್ನು ಕಟ್ಟಿಸಿ ಅದರೊಳಗೆ ಗಂಗಾ ಪವಿತ್ರ ಜಲವನ್ನು ಬೆರೆಸಿದನು .
  • ತನ್ನ ಬಲಿಷ್ಟ ನೌಕಾಪಡೆ ಮತ್ತು ಸೈನ್ಯದೊಂದಿಗೆ ಆನ್ನೇಯ ಏಷ್ಯಾದ ಶೈಲೇಂದ್ರ ಸಾಮ್ರಾಜ್ಯದ ಮೇ ದಂಡಯಾತ್ರೆಯನ್ನು ಕೈಗೊಂಡು ಬಂಗಾಳ ಕೊಲ್ಲಿಯನ್ನು ದಾಟಿ ಜಾವಾ , ಸುಮಾತ್ರಗಳನ್ನು ಗೆದ್ದುಕೊಂಡು ಶೈಲೇಂದ್ರದ ದೊರೆ ಸಂಗ್ರಾಮ ವಿಜಯೋತ್ತುಂಗವರ್ಮನ್‌ನನ್ನು ಯುದ್ಧದಲ್ಲಿ ಸೋಲಿಸಿದನು .
  • ಇವನು ಆ ವಿಜಯದ ನೆನಪಿಗಾಗಿ ಶೈಲೇಂದ್ರದಲ್ಲಿ ಗಂಗೈಕೊಂಡ ಚೋಳ ಶಿವಾಲಯವನ್ನು ಕಟ್ಟಿಸಿದನು .
  • ಈತನು ದಕ್ಷ ಆಡಳಿತಗಾರ ಮತ್ತು ವಿದ್ಯಾಪ್ರೇಕ್ಷಕನಾಗಿದ್ದು “ ಎನ್ನಾಯಿರಂ ‘ ಎಂಬಲ್ಲಿ ಉನ್ನತ ವಿದ್ಯಾಕೇಂದ್ರವನ್ನು ಸ್ಥಾಪಿಸಿದನು . ಈ ವಿದ್ಯಾಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದ 340 ವಿದ್ಯಾರ್ಥಿ ಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತು .
  • ಈತನು ಪಂಡಿತಚೋಳ ‘ “ ಗಂಗೈಕೊಂಡ ಚೋಳ ಮತ್ತು ‘ ಕೇದಾರಕೊಂಡ ‘ ಮುಂತಾದ ಬಿರುದುಗಳನ್ನು ಹೊಂದಿದ್ದನು . * ಚೀನಾ ದೇಶಕ್ಕೆ ತನ್ನ ರಾಯಭಾರಿಗಳನ್ನು ಕಳುಹಿಸಿದ್ದನು .

2. ಚೋಳರ ಗ್ರಾಮಾಡಳಿತವನ್ನು ವಿವರಿಸಿ .

  • ಇದು ಚೋಳರ ಆಡಳಿತದ ಮುಖ್ಯಲಕ್ಷಣವಾಗಿದ್ದು ಒಂದನೇ ಪಾರಾಂತಕನ ಉತ್ತರ ಮೇರೂರು ಶಾಸನ ಗ್ರಾಮಾಡಳಿತದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತದೆ . ಗ್ರಾಮವನ್ನು 30 ಭಾಗಗಳಾಗಿ [ ಕುಡುಂಬು ] ವಿಂಗಡಿಸಲಾಗಿತ್ತು .
  • ಪ್ರತಿ ವಿಭಾಗದಿಂದ ಒಬ್ಬೊಬ್ಬ ಸದಸ್ಯರನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತಿತ್ತು . ಚುನಾವಣೆ ದಿನದಂದು ಗ್ರಾಮಸ್ಥರು ದೇವಾಲಯಕ್ಕೆ ಸೇರಿ ಆಯ್ಕೆ ಮಾಡುವ ಅಭ್ಯರ್ಥಿಗಳ ಹೆಸರನ್ನು ಓಲೆಗರಿಯ ಮೇಲೆ ಬರೆದು ಒಂದು ಮಡಿಕೆಯಲ್ಲಿ ಹಾಕಿ , ಒಬ್ಬ ಚಿಕ್ಕ ಬಾಲಕನಿಂದ ಎಲ್ಲರ ಸಮ್ಮುಖದಲ್ಲಿ ಎತ್ತಿಸಿ ಪ್ರತಿನಿಧಿಗಳನ್ನು ಆಯ್ಕೆ ನಡೆಸಲಾಗುತ್ತಿತ್ತು
  • ಆಯ್ಕೆಯಾದ ಪ್ರತಿನಿಧಿಗಳು ವಾರ್ಷಿಕ ಸಮಿತಿ , ಉದ್ಯಾನ ಸಮಿತಿ , ಮತ್ತು ಕೆರೆಕಟ್ಟೆಗಳ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಬೇಕಿತ್ತು . ಈ ಸಮಿತಿಗಳನ್ನು ‘ ವರಿಯಂ ‘ ಎಂತಲೂ ಪ್ರತಿನಿಧಿಗಳನ್ನು ‘ ವರಿಯ ಪೆರು ಮಕ್ಕಳ್ ‘ ಎಂತಲೂ ಕರೆಯುತ್ತಿದ್ದರು . ಈ ಸಮಿತಿಗಳು 360 ದಿನಗಳು ಕಾರ್ಯನಿರ್ವಹಿಸುತ್ತಿದ್ದವು . ಗ್ರಾಮಗಳ ಆಸ್ತಿ : ರಕ್ಷಣೆ , ಕಂದಾಯ ವಸೂಲಿ , ದೇವಾಲಯ , ಕೆರೆ , ತೋಪು , ಅರಣ್ಯ ರಕ್ಷಣೆ ಮುಂತಾದ ಕರ್ತವ್ಯಗಳನ್ನು ಗ್ರಾಮಸಭೆ ನಿರ್ವಹಿಸುತ್ತಿತ್ತು . ಸಭೆಯ ತೀರ್ಮಾನಗಳನ್ನು ಬರೆದಿಡಲಾಗುತ್ತಿತ್ತು , ಅನಾವಶ್ಯಕವಾಗಿ ಕೇಂದ್ರಾಡಳಿತವು ಗ್ರಾಮಾಡಳಿತದಲ್ಲಿ ಮಧ್ಯ ಪ್ರವೇಶಿಸುತ್ತಿರಲಿಲ್ಲ .

ಸದಸ್ಯರಿಗೆ ಇರಬೇಕಾದ ಕನಿಷ್ಠ ಅರ್ಹತೆಗಳೆಂದರೆ:

  • ಅಭ್ಯರ್ಥಿಯು ಕನಿಷ್ಟ ಅರ್ಧ ಎಕರೆ ಕೊಡುವ ಭೂಮಿಯನ್ನು ಹೊಂದಿರಬೇಕು .
  • ಸ್ವಂತ ನಿವೇಶನದಲ್ಲಿ ಕಟ್ಟಿಸಿದ ಮನೆಯಲ್ಲಿ ವಾಸವಾಗಿರ ಬೇಕು . ಮೂರು ವರ್ಷಗಳ ಸತತವಾಗಿ ಯಾವುದೇ ಒಂದು ಸಮಿತಿಯಲ್ಲಿ ಸದಸ್ಯನಾಗಿದ್ದರೆ ಪುನರಾಯ್ಕೆಗೆ ಅನರ್ಹ .
  • ಸಮಿತಿಯಲ್ಲಿ ಲೆಕ್ಕಪತ್ರಗಳನ್ನು ಸಲ್ಲಿಸದವರು ಮತ್ತು ಅವನ ಹತ್ತಿರದ ಸಂಬಂಧಿಕರು . ದುಷ್ಟರು , ಮೋಸಗಾರರು ಮತ್ತು ಬ್ರಾಹ್ಮಣಹತ್ಯೆ , ಮಧ್ಯಸೇವನೆ , ಕಳ್ಳತನ ಮತ್ತು ವ್ಯಭಿಚಾರ ಆರೋಪಿ ಹೊತ್ತವರು .
  • 35 ಕ್ಕಿಂತ ಹೆಚ್ಚು ಮತ್ತು 70 ಕ್ಕಿಂತ ಕಡಿಮೆ ವಯಸ್ಸಿನವ ರಾಗಿರಬೇಕು .
  • ವೇದ , ಬ್ರಾಹ್ಮಣಕಗಳ ಹಾಗೂ ವ್ಯವಹಾರಿಕ ಜ್ಞಾನವಿರಬೇಕು . ಉತ್ತಮ ಚಾರಿತ್ರ್ಯವುಳ್ಳವರಾಗಿರಬೇಕು .

ಹೆಚ್ಚುವರಿ ಪ್ರಶ್ನೋತ್ತರಗಳು

2nd Puc History Chapter 4.6 Mcq Notes Pdf in Kannada

1. ಪಲ್ಲವ ದೊರೆ ಅಪರಾಜಿತವರ್ಮನನ್ನು ಕೊಂದು ಚೋಳರ ಪ್ರಭುತ್ವವನ್ನು ಸ್ಥಾಪಿಸಿದ ದೊರೆ ಯಾರು ?

ವಿಜಯಾಲ ಚೋಳ

2. ರಾಷ್ಟ್ರಕೂಟರ ದಾಳಿಯಿಂದ ದುರ್ಬಲಗೊಂಡಿದ್ದ ಚೋಳ ರಾಜ್ಯವನ್ನು ಬಲಿಷ್ಠಗೊಳಿಸಿದ ಚೋಳ ಅರಸನಾರು?

ಒಂದನೇ ರಾಜರಾಜ ಚೋಳ

3.ಚೋಳರ ಇತಿಹಾಸವು ಯಾವ ಯುಗದಿಂದ ಪ್ರಾರಂಭವಾಗುತ್ತದೆ ?

ಸಂಘಂ ಯುಗ

4. ಸಿಂಹಳಕ್ಕೆ ದಂಡಯಾತ್ರೆಯನ್ನು ಕೈಗೊಂಡ ಅರಸ ಯಾರು ?

ಕರಿಕಾಲ ಚೋಳ

5. ‘ ಪಂಡಿತ ಚೋಳ ‘ ಇದು ಯಾರ ಬಿರುದು ?

ಒಂದನೇ ರಾಜೇಂದ್ರ ಚೋಳ

6 . ಅರಸನ ಆಪ್ತ ವರ್ಗವನ್ನು ಏನೆಂದು ಕರೆಯಲಾಗುತ್ತಿತ್ತು ?

“ ಉದನ ಕೂಟಂ ‘

FAQ ;

1.ಚೋಳರ ಇತಿಹಾಸವು ಯಾವ ಯುಗದಿಂದ ಪ್ರಾರಂಭವಾಗುತ್ತದೆ ?

ಸಂಘಂ ಯುಗ

2. ಸಂಘಂ ಕಾಲದ ಚೋಳರ ಮೊದಲ ದೊರೆ ಯಾರು ?

ಇಳೈಯಾನ್ .

3. ಸಿಂಹಳಕ್ಕೆ ದಂಡಯಾತ್ರೆಯನ್ನು ಕೈಗೊಂಡ ಅರಸ ಯಾರು ?

ಕರಿಕಾಲ ಚೋಳ

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

Leave a Reply

Your email address will not be published. Required fields are marked *

rtgh