10ನೇ ತರಗತಿ ನಾನು ಪ್ರಾಸ ಬಿಟ್ಟ ಕಥೆ ಕನ್ನಡ ನೋಟ್ಸ್ | 10th Standard Naanu Prasa Bitta Kathe Kannada Notes

10ನೇ ತರಗತಿ ನಾನು ಪ್ರಾಸ ಬಿಟ್ಟ ಕಥೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 10th Standard Naanu Prasa Bitta Kathe Kannada Notes Question Answer Mcq Pdf 2024 Karnataka State Syllabus, Kseeb Solutions for Class 10th Kannada Naanu Prasa Bitta Kathe Notes Summary Pdf SSLC Kannada Naanu Prasa Bitta Kathe Puraka Patada Notes Pdf

 

10th Naanu Prasa Bitta Kathe Notes Pdf 2024

10th Naanu Prasa Bitta Kathe Kannada Notes

ಪ್ರವೇಶ : ಒಂದಾನೊಂದು ಕಾಲವಿತ್ತು . ಆಗ ಕವಿಗಳು ಒಂದೇ ಒಂದು ಮಾತ್ರೆಯ ವ್ಯತ್ಯಾಸವಾಗದಂತೆ ತಮ್ಮ ಕವಿತೆಗಳನ್ನು ಛಂದೋಬದ್ಧವಾಗಿ ಬರೆಯಬೇಕಿತ್ತು . ಆಗಿನ ಕಾಲದ ಕವಿಗಳಿಗೆ ಛಂದಸ್ಸುಶಾಸ್ತ್ರದ ಆಳವಾದ ಪರಿಜ್ಞಾನವಿತ್ತು . ಹಳೆಗನ್ನಡ , ನಡುಗನ್ನಡದ ಶಬ್ದಗಳನ್ನೂ ಅವುಗಳ ಅರ್ಥಗಳನ್ನೂ ಅವರು ಬಲ್ಲವರಾಗಿದ್ದರು . ಅಲ್ಲದೆ ಕಾವ್ಯಲಕ್ಷಣವನ್ನೂ ಸಾಹಿತ್ಯ ಮೀಮಾಂಸೆಯನ್ನೂ ಅವರು ಓದಿಕೊಂಡಿರಬೇಕಿತ್ತು . ತಮ್ಮ ಮನಸ್ಸಿನಲ್ಲಿ ಮೂಡಿಬಂದ ಯಾವ ಭಾವವೇ ಇರಲಿ , ಅದನ್ನು ಅವರು ಅತ್ಯಂತ ಶಿಸ್ತುಬದ್ಧವಾದ ಶಾಸ್ತ್ರಸಿದ್ಧವಾದ ಚೌಕಟ್ಟಿನಲ್ಲೇ ಪ್ರಕಟಿಸಬೇಕಿತ್ತು . ಅಂಥ ಕಾಲದಲ್ಲಿ ಕವಿಯೊಬ್ಬ ತಾನು ಪಾಸವನ್ನು ಬಿಟ್ಟು ಬರೆಯುವೆ ಎಂದರೆ ಅದೊಂದು ಕ್ರಾಂತಿಕಾರಕ ಘೋಷಣೆಯೇ ಹೌದು !

ಮಂಜೇಶ್ವರ ಗೋವಿಂದ ಪೈಗಳು ಮೊದಲ ಬಾರಿಗೆ ಕನ್ನಡದಲ್ಲಿ ಪ್ರಾಸವನ್ನು ಬಿಟ್ಟು ಬರೆಯುವ ಧೈರ್ಯ ತೋರಿದರು . ಅವರು ಹಾಗೆ ಬಿಟ್ಟದ್ದು ಅಂತ್ಯಪಾಸವನ್ನೇನೂ ಅಲ್ಲ ; ಕೇವಲ ಆದಿಪಾಸವನ್ನಷ್ಟೇ . ಆದರೆ ಅದೊಂದೇ ಕಾರಣಕ್ಕೆ ಅವರನ್ನು ತುಚ್ಛವಾಗಿ ನೋಡಿದ ಪಂಡಿತರೂ ಕಾವ್ಯವೇ ಅಲ್ಲ ಎಂದು ಕೆಲವು ವಿದ್ವಾಂಸರು ನಿರ್ಣಯ ಹೊರಡಿಸಿ , ಗೋವಿಂದ ಪೈಗಳನ್ನು ಕವಿಗಣದಿಂದ ಹೊರಗಿಟ್ಟದ್ದೂ ಉಂಟು . ಅನಂತರದ ದಿನಗಳಲ್ಲಿ ಕವಿಗಳು ಪ್ರಾಸವನ್ನು ಗಟ್ಟಿಧೈರ್ಯದಿಂದ ಬಿಟ್ಟು ಕಾವ್ಯವನ್ನು ಬರೆಯತೊಡಗಿದರು . ಪ್ರಕಾರ ಇರು ! ಪಾಸಬಿಟ್ಟು ಬರೆಯುವುದು | ಪ್ರಾರಂಭವಾದ ಮೇಲೆ ಅಂತ್ಯಪ್ರಾಸವನ್ನೂ ಕಾಣಿಸಿಕೊಂಡಿತು . ಕಾವ್ಯಕ್ಕೆ ಬೇಕಿರುವುದು ಅಲ್ಲಿ ಭಾವವೇ ಮುಖ್ಯ ಎಂಬ ತರ್ಕ ಮುಂದೆ ಬಣ ವಾದಿಸಿದರೆ ಕವಿತೆ ಅರ್ಥವತ್ತಾಗಿರಬೇಕು ಕೈಬಿಡಲಾಯಿತು . ಸ್ವಚ್ಛಂದ ಲಯ ಎಂಬ ಹೊಸ ಪ್ರಾಸವಾಗಲೀ ಶಬ್ದಚಮತ್ಕಾರವಾಗಲೀ ಛಂದಸ್ಸಾಗಲೀ ಬಂತು , ಕವಿತೆ ಅರ್ಥವಾಗುವಂತಿರಬೇಕು ಎಂದು ಎಂದು ಇನ್ನೊಂದು ಬಣವು ವಾದಿಸಿತು . ಕಳೆದ ನೂರೈವತ್ತು ವರ್ಷಗಳಲ್ಲಿ ಕವಿತೆಯು ಬಗೆ ಬಗೆಯ ರೂಪ , ವಿನ್ಯಾಸ , ಧೋರಣೆಗಳನ್ನು ತಳೆದದ್ದನ್ನು ನಾವು ನೋಡುತ್ತೇವೆ . ರಾಷ್ಟ್ರಕವಿ ಗೋವಿಂದ ಪೈಗಳು ತಾವು ಪ್ರಾಸ ಬಿಟ್ಟು ಕವಿತೆಯನ್ನು ಬರೆದ ಪ್ರಸಂಗವನ್ನು ಉಲ್ಲೇಖಿಸುತ್ತಲೇ ತಮಗೆ ಕಾವ್ಯದ ಕುರಿತು ಆಸಕ್ತಿ ಬೆಳೆದ ಬಗೆಯನ್ನೂ ಇಲ್ಲಿ ವಿವರಿಸಿದ್ದಾರೆ .

kseeb solutions for class 10 kannada Naanu Prasa Bitta Kathe

ಜಯ ಸಂವತ್ಸರದ ಮಾಘಮಾಸದ ಕೊನೆಯ ವಾರ , ೧೮೯೫ ನೆಯ ಇಸವಿಯ ಫೆಬ್ರವರಿ ತಿಂಗಳಿನದೂ ಕೊನೆಯ ವಾರ , ಮಂಗಳೂರಲ್ಲಿ ನಮ್ಮ ಮನೆಯಲ್ಲಿ ತಮ್ಮನ ನೂಲುಮದುವೆಗೆ ಸಮೀಪಿಸಿದೆ . ಚಪ್ಪರ ಹಾಕಿದೆ . ಫೆಬ್ರವರಿಯಲ್ಲಿ ಎಂದೂ ಇಲ್ಲದ ಮಳೆ ಜಿನುಗುತ್ತಿದೆ . ಅಂದು ಶನಿವಾರವೊ , ರವಿವಾರವೋ ಅಥವಾ ಪ್ರಾಯಶಃ ಶಿವರಾತ್ರಿಯೊ , ಹೇಗೂ ಸಾಲೆ ಇಲ್ಲದ ದಿನ , ಚಪ್ಪರದಲ್ಲಿ ಒಂದು ಕಡೆಯಲ್ಲಿ ಲಡ್ಡುಗೆಗಳನ್ನು ಕಟ್ಟುತ್ತಾರೆ . ಮತ್ತೊಂದು ಕಡೆ ಮಂಡಿಗೆಗಳನ್ನು ಮಡುಚುತ್ತಾರೆ , ಬೇರೊಂದು ಕಡೆ ಸೇವಿಗೆಯನ್ನು ಒತ್ತುತ್ತಾರೆ . ಜೋಳದ ಗದ್ದೆಯಲ್ಲಿ ಗಿಳಿಗಳ ಕೋಲಾಹಲದಂತೆ ಚಪ್ಪರವೆಲ್ಲಾ ಗದ್ದಲ , ಆ ನಡುವೆ ಕುಗ್ಗಿದ ಕೊರಳಲ್ಲಿ ಇದೊಂದು ಹಾಡು ಕೇಳಿಸಿತು ;

ಅಡವಿಗೆ ಪೋಪರೆನೆ | ಕರಿದಯ್ಯಾ ||ಪಲ್ಲ||

ಅಡವಿಯೊಳಗೆ ಬಲು | ಕಡುಖೂಳ ಮೃಗಗಳು

ಬಿಡದೆ ಬಾಧಿಪವೊ ನಿನ್ನ || ಅನು ||

ಆಗ್ಗೆ ನನಗೆ ಏನಾಯಿತೊ , ಏನು ತೋಚಿತೋ ದೇವರೇ ಬಲ್ಲ . ಮತ್ತೆ ಚಪ್ಪರದ ಗವುಜು ನನಗೆ ಕೇಳಿಸಲಿಲ್ಲ . ನೆಟ್ಟಗೆ ಹೋದೆ , ಅಭ್ಯಾಸದ ಪುಸ್ತಕವನ್ನು ಹಿಡಿದೆ , ಬರೆಯತೊಡಗಿದೆ . ಇಂದಿನ ಮಾತಿನಲ್ಲಿ ಏಕಾಂಕ ನಾಟಕ ಎನ್ನಬಹುದಾದ ಒಂದು ನಾಟಕವನ್ನು ಇಳಿಹೊತ್ತಿನೊಳಗೆ ಬರೆದು ಮುಗಿಸಿದೆ . ಅದಾದ ೨-೩ ದಿನಗಳಲ್ಲಿ ಅಂತಹದೇ ಮತ್ತೊಂದು ನಾಟಕವನ್ನು ಬರೆಯ ಹತ್ತಿದೆ , ಆದರೆ ಅದನ್ನು ಕೊನೆಗೂ ಮುಗಿಸಿಲ್ಲ . ಆ ನಾಟಕಗಳಲ್ಲಿ ಬರೇ ಮಾತು , ಹಾಡುಗಳಲ್ಲದೆ ವೃತ್ತ ಕಂದಗಳೂ ಇಲ್ಲ . ಒಂದೊ ಅಥವಾ ಎರಡೊ ನೋಟಗಳಲ್ಲದೆ ಹೆಚ್ಚಿಗೆ ನೋಟಗಳೂ ಇಲ್ಲ . ಅವಕ್ಕೆ ಹೆಸರಿಕ್ಕಲೂ ಇಲ್ಲ . ಮುಗಿಸಿದ ನಾಟಕದಲ್ಲಿ ತಾಯಿ – ತಂದೆಯರ ಒಬ್ಬನೇ ಮಗನು ಕಾಡಿಗೆ ಹೋಗುತ್ತಾನೆ . ಹೋಗಬಾರದೆಂದು ಅವರು ಅಂಗಲಾಚಿ ಬೇಡುತ್ತಾರೆ .

ಅಮೇಲಣ ಕಥೆ ಮರೆತು ಹೋಗಿ ಕೇಳಿದ ಹಾಡಿಗೂ ಬರೆದ ನಾಟಕಕ್ಕೂ ಭೇದವಿಷ್ಟೇ , ಅದು ತತ್ಸಮ , ಇದು ತದ್ಭವ . ಮುಗಿಸಿದ ನಾಟಕದ ಕಥೆ ಇಳಿಯಷ್ಟಾದರೂ ನೆನಪಿಗೆ ಬಾರದು . ಹೀಗೆ ಸಾಹಿತ್ಯಮಂದಿರದ ಹೊಸ್ತಿಲಲ್ಲಿ ಆಕಾಂಡವಾಗಿ ಎಡವಿದೆ , ಮುಚ್ಚುಕದಕ್ಕೆ ಡಿಕ್ಕಿ ಹೊಡೆದೆ . ಅಗುಳಿ ಇಲ್ಲದ ಬಾಗಿಲು ಹಾರಿತು , ಒಳಹೊಕ್ಕೆ , ನನ್ನ ಜೀವಮಾನದಲ್ಲಿ ಅದೊಂದು ಅಮಗ , ನೆನಪಿನಲ್ಲಿ ಹಚ್ಚೆ ಚುಚ್ಚಿದಂತಿರುವ ಆ ದಿನವನ್ನು ಎಂದಿಗೂ ಮರೆಯುವಂತಿಲ್ಲ .

ಅಂದಿಗೆ ಒಂದು – ಒಂದೂವರೆ ವರ್ಷಗಳ ಹಿಂದೆ ೧೮೯೩ ರಲ್ಲಿ ಸಾಂಗಲಿಯದೊಂದು ಮರಾಟ ನಾಟಕ ಮಂಡಳಿ ಮಂಗಳೂರಿಗೆ ಬಂದಿತ್ತು . ಅವರು ಆಡಿದ ಹಲವಾರು ನಾಟಕಗಳನ್ನು ಕಂಡಿದ್ದ ನನಗೆ ಅಂಥವನ್ನು ಬರೆಯಬೇಕೆಂದು ಮನಸ್ಸು ತುಯ್ಯುತ್ತಿತ್ತು . ಅಲ್ಲಿಂದಲೇ ಕೆಲಕೆಲವು ಹಾಡುಗಳನ್ನು ಮನಸ್ಸಿನಲ್ಲೇ ಜೋಡಿಸುತ್ತಲೂ ಮನಸ್ಸಿನಲ್ಲೇ ಜಾಡಿಸುತ್ತಲೂ ಇದ್ದೆ . ಕೊನೆಗೆ ಆ ನಾಟಕಗಳಂತೆ ೫ ಅಂಕಗಳ ಉದ್ದಕ್ಕೆ ಒಮ್ಮೆಲೆ ಹೆಣೆಯಲಾರದೆ ಏಕಾಂಕವನ್ನು ಬರೆದೆ . ಆದರೆ ೧೮೯೫ ರ ಫೆಬ್ರವರಿಯನಕಾ ಕಾಗದದಲ್ಲಿ ಊರಿದ್ದಿಲ್ಲ .

ನಮ್ಮ ಮನೆತನ ಮಂಗಳೂರಿನದಾದರೂ , ತಂದೆಯ ಮನೆ ಮಂಗಳೂರಲ್ಲೇ ಇದ್ದರೂ , ನಾವು ಹುಟ್ಟಿದುದೂ ಬೆಳೆದುದೂ ಮಂಜೇಶ್ವರದಲ್ಲಿ , ನಮ್ಮ ತಾಯಿಯ ತವರುಮನೆಯಲ್ಲಿ , ಮಂಗಳೂರಲ್ಲಿ ನಮ್ಮ ಮನೆಯಲ್ಲಿದ್ದು ಕಲಿಯುತ್ತಿದ್ದಾಗಲೂ ಸಾಲೆಯ ಬಿಡುಗಾಲದಲ್ಲಿ ಹೋಗಿ ಉಳಿಯುತ್ತಿದ್ದುದು ಮಂಜೇಶ್ವರದಲ್ಲಿ . ಅಲ್ಲಿ ಕಾರ್ತಿಕದಿಂದ ವೈಶಾಖದವರೆಗೆ ಆಗಾಗ್ಗೆ ಆಯಾ ದಶಾವತಾರದ ಆಟದ ಮೇಳದವರು ಬಂದು ಯಕ್ಷಗಾನದ ಆಟವಾಡುತ್ತಿದ್ದರು . ನಮ್ಮಲ್ಲಿಯೂ ವರ್ಷ ವರ್ಷ ಹಲವು ಆಟಗಳನ್ನು ಆಡಿಸುತ್ತಿದ್ದರು . ಚಿಕ್ಕಂದಿನಿಂದಲೇ ಅವನ್ನು ನೋಡಿ ವಿಸ್ಮಿತನಾದ ನಾನು ೧೮೯೫ ನೆಯ ಮೇ ತಿಂಗಳಲ್ಲಿ ಒಂದು ಯಕ್ಷಗಾನವನ್ನು ಬರೆಯಲಿಕ್ಕೆ ನಿಲುಕಿದೆ . ಹೆಸರು ಮಕರಾಕ್ಷನ ಕಾಳಗ , ಕಥೆ ೧೯ ನೆಯ ಪುರಾಣದಲ್ಲಿಯದು . ಮಕರಾಕ್ಷನಾರೊ ಆತನೇ ಬಲ್ಲ . ಶ್ರೀರಾಮನೇನೋ ಅವನನ್ನು ಸಂಹರಿಸುತ್ತಾನೆ . ಮೂರನೆಯ ಒಂದು ಪಾಲು ಬರೆದಾಯಿತು . ಮನಸ್ಸಿಗೆ ಒಗ್ಗಲಿಲ್ಲ . ಹರಿದುಬಿಟ್ಟೆ .

ಆಮೇಲೆ ಮಂಗಳೂರಿನ ಬಾಸೆಲ್ ಮಿಶನ್‌ನವರು ಶಬ್ದಮಣಿದರ್ಪಣದಿಂದಲೂ ಛಂದೋಂಬುಧಿಯಿಂದಲೂ ಸಂಗ್ರಹಿಸಿ ಪ್ರಕಟಿಸಿದ ( ೧೮೮೯ ) ‘ ಹಳಗನ್ನಡ ವ್ಯಾಕರಣ ಸೂತ್ರಗಳು ‘ ಎಂಬ ಪುಸ್ತಕವನ್ನು , ಅದರಲ್ಲಿ ಮುಖ್ಯತಃ ಛಂದೋಲಕ್ಷಣ ಪ್ರಕರಣವನ್ನು ಓದಿ ವೃತ್ತ – ಕಂದ – ಷಟ್ಟದಿಗಳ ಲಕ್ಷಣಗಳನ್ನು ಅರಿತುಕೊಂಡೆ . ಜತೆಗೆ ಅರ್ಥಯುಕ್ತವಾದ ಕನ್ನಡ ಜೈಮಿನಿಭಾರತ , ಗದುಗಿನ ಭಾರತ , ಶಬರಶಂಕರವಿಲಾಸವೇ ಮೊದಲಾದ ಮಹಾಕಾವ್ಯಗಳನ್ನು ಓದಿ , ಎಷ್ಟೋ ಪದ್ಯಗಳನ್ನು ಬರೆದೆ , ಬರೆದಂತೆಯೇ ಹರಿದುಬಿಟ್ಟೆ .

ಈ ಈ ನಡುವೆ ೧೮೯೬ ರಲ್ಲೇನೋ ಹೀಗಾಯಿತು , ಆ ನಮ್ಮ ತಾಯಿಯೊಂದಿಗೆ ಆ ವಿವಿಧ ಛಂದಸ್ಸುಗಳಲ್ಲಿ ಯಕ್ಷಗಾನ ಕವಿಯಾದ ರಚಿಸುತ್ತಲೆ ಅವರಿಗೆ ಹುಚ್ಚು ಹಿಡಿಯಿತು . ಜಗಳ ಹತ್ತಿದಾಗ ನನ್ನಲ್ಲಿ ಸಿಟ್ಟಿಗೆದ್ದ ನನ್ನ ತಮ್ಮಂದಿರು ನಾನು ದೂರಿತ್ತರು , ನಮ್ಮ ತಾಯಿ ತೀರ ಹಳಬಳಕೆಯ ನೇಮವಂತೆ , ತುಳುನಾಡಿನ ಸರ್ವಶ್ರೇಷ್ಠ ಮೂಲ್ಕಿಯ ವಾಸುದೇವ ಪ್ರಭು ಎಂಬವರು ಬಿಲ್ಲ ಅನಂತರ ‘ ಸಮುದ್ರ ಮಥನ’ವನ್ನು ರಚಿಸಿದ ಮೇಲೆ ರ ಅವರ ಹುಚ್ಚು ಇಳಿಯಿತು , ಅತಏವ ಕವನಿಸಿದರೆ ಹುಚ್ಚು ಹತ್ತುತ್ತದೆಂದು ಮನಸಾರೆ ನಂಬಿದ್ದ ನಮ್ಮ ತಾಯಿ ಅದನ್ನು ಕೇಳುತ್ತಲೇ ನನ್ನಲ್ಲಿ ರೇಗಿ ಕವನಿಸುವ ಹುಚ್ಚನ್ನು ಬಿಡಿಸಲೆಂದು ನನ್ನನ್ನು ದಂಡಿಸಿದರು . ಅಂದಿನಿಂದ ಕೆಲಕಾಲ ಮನೆಯಲ್ಲಿ ಕವನಿಸಲಾರದೆ , ಮರಮರಕ್ಕೆ ತೊಟ್ಟಿಲು ಕಟ್ಟುತ್ತ ಹೋಗುತ್ತಿರುವ ತಿರುಕಿಯಂತೆ ನಡೆದಾಡುವಾಗ ಬೀದಿಯಲ್ಲೂ ಬಿಡುವಾದಾಗ ಸಾಲೆಯಲ್ಲೂ ಕವನಿಸುತ್ತಿದ್ದೆ . ಹೀಗೆಯೇ ೧೮೯೮ ರವರೆಗೆ ನಡೆಯಿತು .

೧೮೯೯ ರಲ್ಲಿ ಶೇಕ್ಸ್ಪೀಯರ್ “ ಟೈಲ್ಸ್ ನೈಟ್ ” ಎಂಬ ನಾಟಕದ ಮೊದನೆಯ ಅಂಕದಿಂದ ಕೆಲವು ನೋಟಗಳನ್ನು ವೃತ್ತ – ಕಂದಗಳಲ್ಲಿ ಕನ್ನಡಿಸಿ , ಅವನ್ನು ಶ್ರೀ ನಂದಳಿಕೆ ಲಕ್ಷ್ಮೀನಾರಣಪ್ಪ ( ಮುದ್ದಣ ) ನವರಿಗೆ ಉಡುಪಿಗೆ ಕಳಿಸಿಕೊಟ್ಟೆ . ಮುಂದರಿಸು ಎಂದು ಅವರು ಹೇಳಿ ಕಳಿಸಿದರು . ಆದರೆ ಮುಂದರಿಸಲಿಲ್ಲ . ೧೮೯೯ ೧೯೦೦ ರಲ್ಲಿ ಶ್ರೀ ಪಂಜೆ ಮಂಗೇಶರಾಯರು ನನ್ನ ಕನ್ನಡ ಅಧ್ಯಾಪಕರಾದರು . ಆ ನಡುವೆ ಪ್ರಾಸವನ್ನು ಬಿಟ್ಟು ಬರೆಯಬೇಕೆಂದು ನನಗೆ ಪದೇ ಪದೇ ಸುರಿಸುತ್ತಿತ್ತು . ಆದರೆ ಚೇಳಿನ ಮಂತ್ರ ಬಾರದೆ ಹಾವಿನ ಗುದ್ದಿನಲ್ಲಿ ಕೈಹಾಕಲಾರದೆ , ಆ ಬಗ್ಗೆ ಬಲ್ಲವರು ಬೆನ್ನು ತಟ್ಟಿದಲ್ಲದೆ ಹಾಗೆ ಬರೆಯಲಿಕ್ಕೆ ಮನಸ್ಸು ಅಳುಕುತ್ತಿತ್ತು . ಕೈ ತೋರಿಸಿ ಅವಲಕ್ಷಣ ಎನಿಸಿಕೊಳ್ಳುವುದಕ್ಕಿಂತ ಸುಮ್ಮನಿರುವುದು ಒಳ್ಳೆಯದು ಎನಿಸುತ್ತಿತ್ತು . ನನ್ನ ಕವಿತೆಯನ್ನು ಕುರಿತು ಯಾರೊಂದಿಗೂ ಕೇಳಬಾರದು , ಯಾರು ಏನೆಂದರೂ ಮಾಡುವುದನ್ನು ಬಿಡಬಾರದು . ಉತ್ತ ಮೇಲಲ್ಲವೆ ಬಿತ್ತುವ ಯೋಚನೆ ? ತಕ್ಕಷ್ಟು ಬರೆದ ಮೇಲಲ್ಲವೇ ಪ್ರಾಸದ ಗೋಜು ? ಆ ತನಕ ತಣ್ಣಗಿರುವುದೇ ಲೇಸೆಂದು ಪಾಸ ಇಟ್ಟೇ ಬರೆಯುತ್ತ ಹೋದೆ .

೧೯೦೦ ನೆಯ ಜುಲಾಯಿಯಲ್ಲಿ ಮಂಗಳೂರಿನಲ್ಲಿ ‘ ಸುವಾಸಿನಿ ‘ ಎಂಬ ಮಾಸಪತ್ರಿಕೆ ಹೊರಟಿತು . ಅದೇ ಸಂಚಿಕೆಯಲ್ಲಿ ‘ ಸುವಾಸಿನಿ’ಯನ್ನು ಕುರಿತು ಕೆಲವು ಪದ್ಯಗಳನ್ನು ರಚಿಸಿದವರಿಗೆ ೫ ರೂಪಾಯಿ ಬಹುಮಾನ ಕೊಡುವರೆಂದು ಪ್ರಕಟಿಸಿರುವುದನ್ನು ಕಂಡು ಪ್ರಾಸುಳ್ಳ ೩ ಕಂದ ಪದ್ಯಗಳನ್ನು ಕಳಿಸಿಕೊಟ್ಟೆ . ಆ ಉಡುಗೊರೆ ನನಗೆ ದಕ್ಕಿತು . ಆ ಪದ್ಯಗಳು ಮತ್ತು ತಿಂಗಳಿನ ಸಂಚಿಕೆಯಲ್ಲಿ ಪ್ರಕಟವಾದವು . ನನ್ನ ಕವಿತೆ ಅಚ್ಚಾದುದು ಅದೇ ಮೊದಲ ಬಾರಿ , ಆಮೇಲೆ ೧೯೦೨ ರಲ್ಲೊ ೧೯೦೩ ರಲ್ಲೂ ನನ್ನ ಪ್ರಾಸಬದ್ಧವಾದ ‘ ಸುಭದ್ರಾ ವಿಲಾಪ ‘ ಎಂಬ ಕಂದಷಟ್ಕವೂ ‘ ಕಾಲಿಯ ಮರ್ದನ ‘ ಎಂಬ ಕಂದಷಟ್ಕವೂ ಸುವಾಸಿನಿಯಲ್ಲಿ ಪ್ರಕಟವಾದುವು .

೧೯೦೩ ರಿಂದ ೧೯೧೦ ರ ವರೆಗೆ ನಾನು ಪ್ರಾಸವನ್ನು ಇನ್ನೂ ಬಿಟ್ಟೂ ಬರೆಯುತ್ತಿದ್ದೆ . ಪ್ರಾಸವಿಲ್ಲದುವನ್ನು ಹರಿದುಹಾಕಿದೆ . ಪ್ರಾಸವಿದ್ದವಲ್ಲಿ ಮನಸ್ಸಿಗೆ ಬಂದ ಕೆಲಸವನ್ನು ಮಾತ್ರ ಉಳಿಸಿದೆ . ಇವು ಮಂಗಳೂರಿನ ‘ ಸ್ವದೇಶಾಭಿಮಾನಿ ‘ ಎಂಬ ಪತ್ರಿಕೆಯಲ್ಲಿ ಅಂದಂದು ಪ್ರಕಟವಾದವು , ಆಮೇಲೆ ನನ್ನ ‘ ಗಿಳಿವಿಂಡಿನಲ್ಲಿ ಅಚ್ಚಾಗಿವೆ . ೧೯೧೧ ನೆಯ ಏಪ್ರಿಲ್ ತಿಂಗಳಲ್ಲಿ ನಾನು ಸುಮಾರು ಒಂದು ತಿಂಗಳು ಬಡೋದಾ ರಾಜ್ಯದ ನವಸಾರಿ ಎಂಬಲ್ಲಿದ್ದೆ . ಆಗ್ಗೆ ಒಂದು ಮುಂಜಾನೆ ಮಾಳಿಗೆಯಲ್ಲಿ ಶತಪದಗೆಯ್ಯುತ್ತಿದ್ದಾಗ ಹಠಾತ್ತಾಗಿ , ಆಗೋದು ಹೋಗೋದು ದೇವರ ಇಚ್ಛೆ , ಹೂಡೋದು ಬಿತ್ತೋದು ನನ್ನ ಇಚ್ಛೆ , ಇನ್ನು ಮೀನಮೇಷ ನೋಡದೆ ‘ ಪ್ರಾಸವನೀಗಲೆ ತೊರೆದುಬಿಡುವುದೇ ನಿಶ್ಚಯಂ ‘ ಎಂದಾಯಿತು . ಮರದ ಮರದ ಬುಡದಾಗ ಬಂತು , ಕೂಡಲೆ ರವೀಂದ್ರನಾಥ ಠಾಕೂರರ ‘ ಅಯಿ ಭುವನ ಮನೋಮೋಹಿನೀ ‘ ಎಂದು ಮೊದಲಾಗುವ ‘ ಭಾ ಅವರದೇ ‘ ಶಿಶು ‘ ಎಂಬ ಗ್ರಂಥದಲ್ಲಿಯ ant ‘ ವಿದಾಯ ‘ ಎಂಬ ಕವಿತೆಯನ್ನೂ , ಅನಂತರ ಶೇಖ್ ಮು ದ ಇಕ್ವಾಲರ ‘ ಹಿಂದೂಸ್ತಾನ ಹಮಾರಾ ‘ ಎಂಬ ಉರ್ದೂ ಗೀತವನ್ನೂ ಕನ್ನಡಿಸಿದೆ . ಅಲ್ಲಿಂದ ಮಾರನೆಯ ತಿಂಗಳಲ್ಲಿ ಊರಿಗೆ ಮರಳಿದವನೇ ಅವನ್ನು ಸ್ವದೇಶಾಭಿಮಾನಿಯಲ್ಲಿ ಪ್ರಕಟಿಸಿದೆ . ಪಾಸರಹಿತವಾದ ನನ್ನ ಕವಿತೆಗಳು ಅಚ್ಚಾದುದು ಅದೇ ಮೊದಲ ಬಾರಿ .

10th Naanu Prasa Bitta Kathe Kannada Notes

ಕೃತಿಕಾರರ ಪರಿಚಯ

ಮಂಜೇಶ್ವರ ಗೋವಿಂದ ಪೈ

ಮಂಜೇಶ್ವರ ಗೋವಿಂದ ಪೈ ( ೧೮೮೩ ಮಾರ್ಚ್ ೨೩ ೧೯೬೩ ಸೆಪ್ಟೆಂಬರ್ ೬ )

ಮಂಜೇಶ್ವರ ಗೋವಿಂದ ಪೈ- ಕನ್ನಡದ ಪ್ರಪ್ರಥಮ ರಾಷ್ಟ್ರಕವಿಗಳು . ಇವರು ಹುಟ್ಟಿದ್ದು ಆಗ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ರಾಜ್ಯಗಳ ಪುನರ್‌ವಿಂಗಡಣೆಯಾದಾಗ ತನ್ನೂರು ಕೇರಳಕ್ಕೆ ಹೋದುದನ್ನು ಕಂಡು ಹಳಹಳಿಸಿದ್ದ ಅಪ್ಪಟ ಕನ್ನಡಪ್ರೇಮಿ ಇವರು . ಶ್ರೀಮಂತ ಮನೆತನದಲ್ಲಿ ಹುಟ್ಟಿ , ಪ್ರಾಥಮಿಕ – ಪ್ರೌಢ ಶಾಲಾ ವಿದ್ಯಾಭ್ಯಾಸಗಳನ್ನು ಮಂಗಳೂರಿನಲ್ಲಿ ಮಾಡಿ ಪದವಿಶಿಕ್ಷಣಕ್ಕಾಗಿ ಮದರಾಸಿಗೆ ಹೋದರು . ಡಾ . ಸರ್ವಪಲ್ಲಿ ರಾಧಾಕೃಷ್ಣನ್ , ಗೋವಿಂದ ಪೈಗಳ ಸಹಪಾಠಿಗಳು , ಪದವಿಯ ಕೊನೆಯ ವರ್ಷದಲ್ಲಿದ್ದಾಗ ತಂದೆಯವರು ತೀರಿಕೊಂಡದ್ದರಿಂದ ಪೈಗಳು ಊರಿಗೆ ವಾಪಸಾಗಬೇಕಾಯಿತು . ಅಂತಿಮ ವರ್ಷದ ಇಂಗ್ಲೀಷ್ ಪರೀಕ್ಷೆಯೊಂದು ಮುಗಿದಿತ್ತು ಅಷ್ಟೆ – ಆದರೆ ಅದರಲ್ಲಿ ಅತ್ಯಧಿಕ ಅಂಕಗಳನ್ನು ಪಡೆದವರೆಂದು ಗೋವಿಂದ ಪೈಗಳಿಗೆ ಚಿನ್ನದ ಪದಕದ ಬಹುಮಾನ ಸಿಕ್ಕಿತು .

ಪದವಿಯ ಓದೇನೋ ನಿಂತಿತು . ಆದರೆ ಅಧ್ಯಯನ ಮುಂದುವರಿಯಿತು . ಮಲೆಯಾಳಂ , ತಮಿಳು , ಕನ್ನಡ , ಮರಾಠಿ , ಕೊಂಕಣಿ , ಬಂಗಾಳಿ , ಸಂಸ್ಕೃತ ಮುಂತಾದ ಭಾರತೀಯ ಭಾಷೆಗಳಲ್ಲದೆ ಲ್ಯಾಟಿನ್ , ಗ್ರೀಕ್ ಮುಂತಾದ ಅಭಿಜಾತ ಭಾಷೆಗಳನ್ನೂ ಜರ್ಮನ್ , ಫ್ರೆಂಚ್ , ಇಂಗ್ಲೀಷ್ , ಇಟಾಲಿಯನ್ ಮೊದಲಾದ ಪಾಶ್ಚಾತ್ಯ ಭಾಷೆಗಳನ್ನೂ ಕಲಿತರು . ಒಟ್ಟು ೨೫ ಭಾಷೆಗಳಲ್ಲಿ ಪೈಗಳಿಗೆ ಪ್ರಾವೀಣ್ಯವಿತ್ತು . ನಿರಂತರವಾಗಿ ಇತಿಹಾಸ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು . ಕಾವ್ಯ , ಖಂಡಕಾವ್ಯಗಳನ್ನು ಬರೆದರು . ದೇಶವಿದೇಶದ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ತಂದರು . ಗಿಳಿವಿಂಡು , ನಂದಾದೀಪ ಅವರ ಕಾವ್ಯಸಂಕಲನಗಳು , ವೈಶಾಖಿ ಮತ್ತು ಗೊಲ್ಗೊಥಾ ಅವರು ಬರೆದ ಖಂಡಕಾವ್ಯಗಳು , ಹೆಬ್ಬೆರಳು ಎಂಬುದು ಪದ್ಯಗಳನ್ನೊಳಗೊಂಡ ಏಕಾಂಕ ನಾಟಕ , ಅವರ ಗದ್ಯ “ ಕನ್ನಡದ ಮೊರೆ ” ಎಂಬ ಕೃತಿಯಲ್ಲಿ ಬಂದಿದೆ . ೧೯೪೯ ರಲ್ಲಿ ಮದರಾಸು ಸರಕಾರವು ಅವರಿಗೆ ರಾಷ್ಟ್ರಕವಿ ಎಂಬ ಗೌರವ ತೊಡಿಸಿತು . ೧೯೫೦ ರಲ್ಲಿ ಮುಂಬೈಯಲ್ಲಿ ನಡೆದ ೩೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೈಗಳು ಅಧ್ಯಕ್ಷರಾಗಿದ್ದರು . ಅವರ ನೂರಾರು ಸಂಶೋಧನಾ ಲೇಖನಗಳನ್ನು ಸಂಗ್ರಹಿಸಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಒಂದು ಬೃಹದ್ಗಂಥವನ್ನು ಪ್ರಕಟಿಸಿದೆ .

ಅಭ್ಯಾಸ

10th Class Naanu Prasa Bitta Kathe Notes Question Answer Pdf 2023

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ

೧. ಪೈಗಳ ತಮ್ಮನ ನೂಲುಮದುವೆಯ ದಿನ ಅಂಗಳದ ಏನೇನು ಸಿದ್ಧತೆಗಳಾಗುತ್ತಿದ್ದವು ?

ಉತ್ತರ: ಪೈಗಳ ತಮ್ಮನ ನೂಲುಮದುವೆಯ ದಿನ ಚಪ್ಪರ ಹಾಕಿದ್ದರು. ಚಪ್ಪರದಲ್ಲಿ ಒಂದು ಕಡೆಯಲ್ಲಿ ಲಡ್ಡುಗೆಗಳನ್ನು ಕಟ್ಟುತ್ತಿದ್ದರು. ಮತ್ತೊಂದು ಕಡೆ ಮಂಡಿಗೆಗಳನ್ನು ಮಡಚುತ್ತಿದ್ದರು. ಬೇರೊಂದುಕಡೆ ಸೇವಿಗೆಯನ್ನು ಒತ್ತುತ್ತಿದ್ದರು. ಜೋಳದ ಗದ್ದೆಯಲ್ಲಿ ಗಿಳಿಗಳ ಕೋಲಾಹಲದಂತೆ ಚಪ್ಪರವೆಲ್ಲಾ ಗದ್ದಲ .

೨. ಹಾಡು ಕಿವಿಗೆ ಬಿದ್ದಾಗ ಪೈಗಳು ಏನು ಮಾಡಿದರು?

ಉತ್ತರ: ಚಪ್ಪರದ ಗದ್ದಲ ಮಧ್ಯೆ ಕುಗ್ಗಿದ ಕೊರಳಲ್ಲಿ ಹಾಡು ಕೇಳಿಸಿಕೊಂಡ ಪೈಗಳಿಗೆ ಏನಾಯಿತೋ ಏನು ತೋಚಿತೋ ದೇವರೇ ಬಲ್ಲ. ಮತ್ತೆ ಚಪ್ಪರದ ಗವುಜು ಅವರಿಗೆ ಕೇಳಿಸಲಿಲ್ಲ. ನೆಟ್ಟಗೆ ಹೋದವರು ಅಭ್ಯಾಸದ ಪುಸ್ತಕವನ್ನು ಹಿಡಿದರು. ಬರೆಯತೊಡಗಿದರು. ಏಕಾಂಕ ನಾಟಕ ಎನ್ನಬಹುದಾದ ನಾಡಕವನ್ನು ಇಳಿ ಹೊತ್ತಿನೊಳಗೆ ಬರೆದು ಮುಗಿಸಿದರು.

೩. ಪೈಗಳು ಬರೆದ ಮೊದಲ ಯಕ್ಷಗಾನ ಪ್ರಸಂಗದ ಹೆಸರೇನು ?

ಉತ್ತರ: ಪೈಗಳು ಬರೆದ ಮೊದಲ ಯಕ್ಷಗಾನ ಪ್ರಸಂಗದ ಹೆಸರು ಮಕರಾಷನ ಕಾಳಗ.

೪. ಬಾಸೆಲ್ ಮಿಶನ್‌ನವರು ಪ್ರಕಟಿಸಿದ್ದ ಯಾವ ಕೃತಿಗಳನ್ನು ಲೇಖಕರು ಓದಿಕೊಂಡರು ?

ಉತ್ತರ: ಮಂಗಳೂರಿನ ಬಾಸೆಲ್‌ ಮಿಶನ್‌ ರವರು ಶಬ್ದಮಣಿಗದರ್ಪಣದಿಂದಲೂ , ಛಂದೊಂಬುದಿಯಿಂದಲೂ 1889ರಲ್ಲಿ ಪ್ರಕಟಿಸಿದ ಹಳಗನ್ನಡ ವ್ಯಾಕರಣ ಸೂತ್ರಗಳು ಎಂಬ ಪುಸ್ತಕವನ್ನು , ಅದರಲ್ಲಿ ಮುಖ್ಯತಃ ಛಂದೋ ಲಕ್ಷಣ ಪ್ರಕರಣವನ್ನು, ಕನ್ನಡ ಜೈಮಿನಿ ಭಾರತ, ಗದುಗಿನ ಭಾರತ, ಶಬರಶಂಕರ ವಿಲಾಸವೇ, ಮೊದಲಾದ ಮಹಾಕಾವ್ಯಗಳನ್ನು ಲೇಖಕರು ಓದಿದರು.

೫. “ ಬಿಲ್ಲ ಹಬ್ಬ ” ವನ್ನು ರಚಿಸಿದ ಕವಿ ಯಾರು ?

ಉತ್ತರ: “ ಬಿಲ್ಲ ಹಬ್ಬ ” ವನ್ನು ರಚಿಸಿದವರು ತುಳುನಾಡಿನ ಸರ್ವಶ್ರೇಷ್ಠ ಯಕ್ಷಗಾನ ಕವಿಯಾದ ಮೂಲ್ಕಿಯ ವಾಸುದೇವ ಪ್ರಭುರವರು.

೬. ಮುದ್ದಣ ಕವಿ ಲೇಖಕರಿಗೆ ಏನೆಂದು ಸಲಹೆ ಕೊಟ್ಟರು ?

ಉತ್ತರ: ಲೇಖಕರು 1899ರಲ್ಲಿ ಶೇಕಸ್ಪಿಯರ್‌ “ಟೈಲ್‌ ನೈಟ್”‌ ಎಂಬ ನಾಟಕದ ಮೊದಲನೆಯ ಅಂಕದಿಂದ ಕೆಲವು ನೋಟಗಳನ್ನು ವೃತ್ತ-ಕಂದಗಳಲ್ಲಿ ಭಾಷಾಂತರಗೊಳಿಸಿ, ಅವನ್ನು ಶ್ರೀ ನಂದಳಿಕೆ ಲಕ್ಷ್ಮೀ ನಾರಾಣಪ್ಪ ನವರಿಗೆ ಕಳಿಸಿ ಕೊಟ್ಟಾಗ ಅವರು ಮುಂದುವರಿಸಿ ಎಂದು ಹೇಳಿ ಕಳುಹಿಸಿದರು.

೭. ಪ್ರಾಸ ಬಿಡಬೇಕೆಂದು ನಿರ್ಧರಿಸಿದ ಬಳಿಕ ಪೈಗಳು ಯಾವ ಕೃತಿಯನ್ನು ಬರೆದರು ?

ಉತ್ತರ: ಪ್ರಾಸ ಬಿಡಬೇಕೆಂದು ನಿರ್ಧರಿಸಿದ ಬಳಿಕ ಲೇಖಕರು ರವೀಂದ್ರನಾಥ ಠಾಕೂರರ ಅಯೀ ಭುವನ ಮನೋಮೋಹಿನಿ ಎಂದು ಮೊದಲಾಗುವ ” ಭಾರತ ಲಕ್ಷ್ಮೀ ” ಎಂಬ ಬಂಗಾಳಿಗೀತವನ್ನು ಕನ್ನಡಿಸಿದರು. ರವೀಂದ್ರನಾಥ ಠಾಕೂರರ ಶಿಶು ಎಂಬ ಗ್ರಂಥದಲ್ಲಿಯ ವಿದಾಯ ಎಂಬ ಕವಿತೆಯನ್ನು, ಶೇಕ್‌ ಮುಹಮ್ಮದ್‌ ಇಕ್ಭಾಲರ ಹಿಂದೂಸ್ತಾನ ಹಮಾರ ಎಂಬ ಉರ್ದುಗೀತವನ್ನು ಕನ್ನಡಿಸಿದರು.

10ನೇ ತರಗತಿ ನಾನು ಪ್ರಾಸ ಬಿಟ್ಟ ಕಥೆ ಕನ್ನಡ ನೋಟ್ಸ್ 2024

FAQ :

1. ಪೈಗಳು ಬರೆದ ಮೊದಲ ಯಕ್ಷಗಾನ ಪ್ರಸಂಗದ ಹೆಸರೇನು ?

ಉತ್ತರ: ಪೈಗಳು ಬರೆದ ಮೊದಲ ಯಕ್ಷಗಾನ ಪ್ರಸಂಗದ ಹೆಸರು ಮಕರಾಷನ ಕಾಳಗ.

2. ಮುದ್ದಣ ಕವಿ ಲೇಖಕರಿಗೆ ಏನೆಂದು ಸಲಹೆ ಕೊಟ್ಟರು ?

ಉತ್ತರ: ಲೇಖಕರು 1899ರಲ್ಲಿ ಶೇಕಸ್ಪಿಯರ್‌ “ಟೈಲ್‌ ನೈಟ್”‌ ಎಂಬ ನಾಟಕದ ಮೊದಲನೆಯ ಅಂಕದಿಂದ ಕೆಲವು ನೋಟಗಳನ್ನು ವೃತ್ತ-ಕಂದಗಳಲ್ಲಿ ಭಾಷಾಂತರಗೊಳಿಸಿ, ಅವನ್ನು ಶ್ರೀ ನಂದಳಿಕೆ ಲಕ್ಷ್ಮೀ ನಾರಾಣಪ್ಪ ನವರಿಗೆ ಕಳಿಸಿ ಕೊಟ್ಟಾಗ ಅವರು ಮುಂದುವರಿಸಿ ಎಂದು ಹೇಳಿ ಕಳುಹಿಸಿದರು.

3. ಬಾಸೆಲ್ ಮಿಶನ್‌ನವರು ಪ್ರಕಟಿಸಿದ್ದ ಯಾವ ಕೃತಿಗಳನ್ನು ಲೇಖಕರು ಓದಿಕೊಂಡರು ?

ಉತ್ತರ: ಮಂಗಳೂರಿನ ಬಾಸೆಲ್‌ ಮಿಶನ್‌ ರವರು ಶಬ್ದಮಣಿಗದರ್ಪಣದಿಂದಲೂ , ಛಂದೊಂಬುದಿಯಿಂದಲೂ 1889ರಲ್ಲಿ ಪ್ರಕಟಿಸಿದ ಹಳಗನ್ನಡ ವ್ಯಾಕರಣ ಸೂತ್ರಗಳು ಎಂಬ ಪುಸ್ತಕವನ್ನು , ಅದರಲ್ಲಿ ಮುಖ್ಯತಃ ಛಂದೋ ಲಕ್ಷಣ ಪ್ರಕರಣವನ್ನು, ಕನ್ನಡ ಜೈಮಿನಿ ಭಾರತ, ಗದುಗಿನ ಭಾರತ, ಶಬರಶಂಕರ ವಿಲಾಸವೇ, ಮೊದಲಾದ ಮಹಾಕಾವ್ಯಗಳನ್ನು ಲೇಖಕರು ಓದಿದರು.

ಇತರೆ ವಿಷಯಗಳು :

10th Standard All Subject Notes

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 10ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh