10ನೇ ತರಗತಿ ಸ್ವದೇಶಿ ಸೂತ್ರದ ಸರಳ ಹಬ್ಬ ಕನ್ನಡ ನೋಟ್ಸ್‌ | 10th Standard Swadeshi Sutrada Sarala Habba Kannada Notes 2024

10ನೇ ತರಗತಿ ಸ್ವದೇಶಿ ಸೂತ್ರದ ಸರಳ ಹಬ್ಬ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು,10th Standard Swadeshi Sutrada Sarala Habba Kannada Notes Question Answer Mcq Pdf Download in Kannada Medium 2024, Kseeb Solutions For Class 10 Kannada Swadeshi Sutrada Sarala Habba Puraka Patada Notes Karnataka State Syllabus

 

Swadeshi Sutrada Sarala Habba Notes in Kannada

ತರಗತಿ : 10ನೇ ತರಗತಿ

ಪಾಠದ ಹೆಸರು : ಸ್ವದೇಶಿ ಸೂತ್ರದ ಸರಳ ಹಬ್ಬ

class 10 kseeb solutions Swadeshi Sutrada Sarala Habba notes

10th Class Kseeb Solutions Swadeshi Sutrada Sarala Habba Notes

ಈ ಹಬ್ಬದ ಒಂದು ಹಳೆಯ ಲೆಕ್ಕ ಹೀಗಿದೆ : ಹಿಂದುಸ್ತಾನದಲ್ಲಿ ಪ್ರತಿಯೊಬ್ಬನ ದಿನದ ಉತ್ಪನ್ನ ಸರಾಸರಿ ಒಂದು ಆಣೆ ಮೂರು ಪೈಸೆಗಳು ಮಾತ್ರ ಇಲ್ಲಿ ೫೫ ಕೋಟಿ ಜನರ ಸರಾಸರಿ ವರ್ಷದ ಉತ್ಪನ್ನ ೧೨೫೦ ಕೋಟಿಯಿದೆ . ದೇಶದ ಸಾಲವು ೧೧೦೦ ಕೋಟೆಯಿದೆ . ಇದಲ್ಲದೆ ಪ್ರತಿವರ್ಷ ೧೨೫ ಕೋಟಿ ಪರದೇಶಕ್ಕೆ ಹೋಗುತ್ತಿದೆ . ವಸ್ತುಸ್ಥಿತಿ ಹೀಗಿರುವಾಗ ಹಬ್ಬ ಹುಣ್ಣಿಮೆಗಳು ಸಮೀಪಿಸಿದ ದಿನಗಳಲ್ಲಿ ಪರದೇಶಿ ವಸ್ತುಗಳನ್ನು ಕೊಳ್ಳುವುದು ಸರಿಯಲ್ಲ . ಬಣ್ಣದ ಕಾಗದ , ಗಾಜಿನ ಮಣಿಗಳು , ಬೇಗಡಿ , ಇಮಿಟೇಶನ್ ಮುತ್ತು , ತುರಾಯಿಗಳು ನಮ್ಮ ಹಿಂದುಸ್ತಾನದಂತಹ ಬಡದೇಶಕ್ಕೆ ಅನವಶ್ಯಕ . ಪಟಾಕಿ , ಧಡಾಕಿ , ನೆಲಗುಮ್ಮ ಮುಂತಾದ ವಸ್ತುಗಳು , ವಿದೇಶಿ ಎಂದು ಮಾರಲ್ಪಡುವ ಕರ್ಪೂರ , ಪರದೇಶಿ ಅತ್ತರುಗಳನ್ನು ಖರೀದಿಸಿ ದೇಶಕ್ಕೆ ಒದಗಿರುವ ಸಂಕಟ ಪರಂಪರೆಯನ್ನು ಯಾರೂ ಹೆಚ್ಚಿಸಬಾರದು ! ದೇವರ ಪೂಜಾದಿಗಳನ್ನು ಶುದ್ಧ ಶುಭ್ರ ದೇಶೀ ವಸ್ತುಗಳಿಂದಲೇ ಮಾಡಿರಿ , ಪರದೇಶಿ ವಸ್ತುಗಳಿಂದ ದೇವರ ಮೂರ್ತಿಗಳನ್ನು ಭ್ರಷ್ಟ ಮಾಡಬೇಡಿರಿ ! – ನಮ್ಮ ದೇಶದ ವ್ಯಾಪಾರಿಗಳಿಗೆ , ಗಿರಾಕಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರು ಕ್ರಿ.ಶ. ೧೯೩೨ ರಲ್ಲಿ ವಿನಂತಿಸಿದ್ದ ಪತ್ರದ ಸಾಲುಗಳಿವು . ಅಂದು ಪ್ರಕಟವಾದ ಸತ್ಯಾಗ್ರಹ ಕರಪತ್ರ ಪತ್ರಿಕೆಯ ತಡೆ ಒಡ್ಡುವ , ದೇಶ ಕಟ್ಟುವ ಸಂದೇಶಗಳಿಗೆ ಆದ್ಯತೆ ನೀಡಿತ್ತು .

ಪಟಾಕಿ , ಕರ್ಪೂರಗಳಿಗೆ ಸಂಪೂರ್ಣ ಬಹಿಷ್ಕಾರ ಹಾಕಬೇಕು ! ಕರ್ಪೂರ ನಮ್ಮ ದೇಶದಲ್ಲಿ ಆಗುವುದಲ್ಲ . ವಿದೇಶದ ಕರ್ಪೂರದ ಬದಲು ನಮ್ಮ ಅರಳೆಯ ಬತ್ತಿಗಳನ್ನು ದೀಪಕ್ಕೆ ಉಪಯೋಗಿಸಬೇಕು . ಬತ್ತಿಯ ಆರತಿ ಮಾಡಿದರೆ ದೇವರು ಸಿಟ್ಟಿಗೇಳಲಿಕ್ಕಿಲ್ಲ . ಪಟಾಕಿ ಹೊಡೆಯದಿದ್ದರೆ ಅವನು ಕೋಪಿಸಿಕೊಳ್ಳಲಿಕ್ಕಿಲ್ಲ . ಮಣಿಮುತ್ತುಗಳ ಹಾರ ಹಾಕದಿದ್ದರೆ ಮುನಿಯಲಿಕ್ಕಿಲ್ಲ . ಹಬ್ಬಕ್ಕೆಂದು ಹಣ ಖರ್ಚು ಮಾಡಬೇಕೆಂಬ ಮನಸ್ಸಿದ್ದರೆ ಯಾವುದಾದರೂ ಪುಣ್ಯ ಕಾರ್ಯಗಳಿಗೆ ಮಾಡಿರಿ , ಬಡವರಿಗೆ ಕರೆದು ಅನ್ನದಾನ ಮಾಡಿರಿ ಹೊರತೂ ಸುಮ್ಮನೆ ಇಂಥ ನಿರುಪಯೋಗಿ ಪದಾರ್ಥಗಳ ಮೇಲೆ ಹಣವನ್ನು ಕಳಕೊಳ್ಳಬೇಡಿರಿ ಎಂದು ಮಾರ್ಮಿಕವಾಗಿ ಹೇಳಿದ್ದರು . ಬರೋಬ್ಬರಿ ೮೦ ವರ್ಷಗಳ ಹಿಂದೆ ಸ್ವಾತಂತ್ರ್ಯ ಹೋರಾಟಗಾರರ ಹಬ್ಬದ ಮಾತುಗಳಿವು .

ಆಗ ದೇವರಿಗೆ ಕರ್ಪೂರ ಬಳಸಬಾರದೆಂದು ಆರಿವು ಮೂಡಿಸಲು ಪ್ರತ್ಯೇಕ ಕರಪತ್ರಗಳು ಪ್ರಕಟವಾಗಿದ್ದವು . ಹಬ್ಬದ ಪೂಜಾ ವಿಧಾನಗಳನ್ನು ಸೂಕ್ಷ್ಮವಾಗಿ ಗಣನೆಗೆ ತೆಗೆದುಕೊಂಡಿದ್ದವರು ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ಮನೆ ಮನೆಯ ದೇವರ ಪೀಠಗಳಿಂದ ಜಾಗೃತಿಯ ಕಾರ್ಯ ಆರಂಭಿಸಿದರು . ನಾವು ಖರೀದಿಸುವ ವಸ್ತು ಹೇಗೆ ದೇಶದ ವಿದೇಶಿ ಸಾಲ ಏರಿಕೆಗೆ ಕಾರಣವಾಗುತ್ತದೆಂದು ವಿವರಿಸಿ ದಾಸ್ಯದ ಪರಿಣಾಮಗಳನ್ನು ಮನಮುಟ್ಟುವಂತೆ ಮಾರ್ಮಿಕವಾಗಿ ಬಿಂಬಿಸಿದ್ದರು .

ನಮ್ಮ ಪಶ್ಚಿಮ ಘಟ್ಟದ ಕಾಡುಗಳಲ್ಲಿ ತೊಡಕಲುಕುಡಿ ಎಂಬ ಗಿಡವಿದೆ . ಬೂದು ಬಣ್ಣದ ಗಿಡದ ಎಳೆ ಚಿಗುರು ಪೂಜಾರತಿಗೆ ಬಳಕೆ ! ಎಳೆಯ ಕುಡಿ ಸಂಗ್ರಹಿಸಿ , ಒಣಗಿಸಿ ಡಬ್ಬದಲ್ಲಿ ಶೇಖರಿಸಿಡಲಾಗುತ್ತಿತ್ತು . ಒಣಗಿದ ಕುಡಿಯನ್ನು ಎಣ್ಣೆಯನ್ನು ಅದ್ದಿ ನಿತ್ಯ ಆರತಿಗೆ ಬಳಸಲಾಗುತ್ತಿತ್ತು . ಇದು ಎಣ್ಣೆಯನ್ನು ಹತ್ತಿಯಂತೆ ಹೀರಿಕೊಂಡು ದೀಪ ಉರಿಯಲು ಸಹಾಯಕವಾಗಿತ್ತು . ಅಂದರೆ ಹತ್ತಿ ಬೆಳೆಯದ ಮಲೆನಾಡಿನಲ್ಲಿ ಕಾಡುಗಿಡದ ಎಳೆಚಿಗುರು ದೀಪದ ಕುಡಿಯಾಗಿತ್ತು . ಇದಲ್ಲದೇ ಅಡಿಕೆ , ತೆಂಗಿನ ತೋಟ , ಹಳ್ಳದಂಚುಗಳಲ್ಲಿ ನಾಗಸಂಪಿಗೆ ಮರಗಳಿದ್ದವು , ಅವುಗಳ ಬೀಜ ಸಂಗ್ರಹಿಸಿ ದೀಪಕ್ಕೆ ಬಳಕೆ , ಇದರ ಹಸಿಬೀಜಗಳಲ್ಲಿ ಎಣ್ಣೆಯ ಅಂಶ ಜಾಸ್ತಿಯಿರುವುದರಿಂದ ಚೆನ್ನಾಗಿ ಉರಿಯುತ್ತದೆ . ದೀಪಾವಳಿ , ಕಾರ್ತೀಕಮಾಸದಲ್ಲಿ ನಾಗಸಂಪಿಗೆ ಬೀಜಗಳನ್ನು ಕುಟ್ಟಿ ಚಿಕ್ಕ ಚಿಕ್ಕ ಉಂಡೆಗಳನ್ನು ಕಟ್ಟಿ ಉರಿಸಲಾಗುತ್ತಿತ್ತು . ಇದಲ್ಲದೆ ಅಡಿಕೆ ತೋಟಗಳಂಚಿನಲ್ಲಿ ಗಿಡಗಳಿರುತ್ತಿದ್ದವು . ಅವು ಹಲವು ವರ್ಷಗಳಿಂದ ಬೆಳೆಯುತ್ತ ಹತ್ತಿಯನ್ನು ದೀಪಕ್ಕೆ ಬಳಸುವ ಪರಿಪಾಠವಿತ್ತು . ಒಟ್ಟಿನಲ್ಲಿ ಪೇಟೆ ಖರೀದಿಯ ಯಾವ ಅಗತ್ಯವಿಲ್ಲದೇ ಹಬ್ಬದ ದೀಪ ಬೆಳಗುವ ಸುಲಭ ಅವಕಾಶಗಳಿದ್ದವು .

ಈ ಈಗ ಹಬ್ಬ ಅಂದರೆ ಖರೀದಿ , ಬಟ್ಟೆಗಳು ಬೇಕು , ಒಂದಿಲ್ಲೊಂದು ವಸ್ತುಗಳು ಬೇಕು . ಒಟ್ಟಿನಲ್ಲಿ ಸಂ ಫ್ರಿಜ್ , ಹೊಸ ಟಿವಿ , ವಾಹನ ಹೀಗೆ ಹಬ್ಬ ಅಂದರೆ ಮಾರುಕಟ್ಟೆ ಜನಸಂದಣಿ , ಹಬ್ಬ ಅಂದರೆ ‘ ಹಬ್ಬದ ವಿಶೇಷ ರಿಯಾಯತಿ , ಹಬ್ಬದ ಡಬ್ಬಲ್ ಧಮಕಾ ‘ ಎಂದು ನಮ್ಮ ಮಾಧ್ಯಮ ಜಾಹಿರಾತು ತಂತ್ರಗಳು ಕೊಳ್ಳುಬಾಕರನ್ನು ಸೃಷ್ಟಿಸುತ್ತಿವೆ , ದೇಶ ಕಟ್ಟುವ ಮೊರೆ ಹೋಗಿವೆ . ಕಿಸೆ ಖಾಲಿಮಾಡಿಸಿ ಮರೆತು ಜಾಹಿರಾತು ಲಾಭ , ವ್ಯಾವಹಾರಿಕ ಗಿಮಿಕ್‌ಗಳ ಕೈ ಯಲ್ಲಿ ಮಂಗನನ್ನಾಗಿಸುವ ಸೂತ್ರಗಳಿಗೆ ನಮ್ಮ ನರ್ತನ ನಡೆದಿದೆ . ಹಬ್ಬದ ಹೊಸ ಸಾಲ ಹನುಮಂತನ ಬಾಲವಾಗಿ ಬೆಳೆಯುತ್ತಿದೆ . ಸರಳ ಬದುಕು ಆದರ್ಶವಾಗಿದ್ದ ನೆಲದಲ್ಲಿ ಆಡಂಬರ , ರಂಗು , ನಾಟಕೀಯತೆ ಸೇರಿಕೊಂಡು ಬದುಕು ಲಗಾಮಿಲ್ಲದ ಓಟ ಕಿತ್ತಿದೆ . ಸಂಪ್ರದಾಯ , ದೇವರ ನಂಬಿಕೆಗಳಿಗಿಂತ ಹಬ್ಬಗಳು ಖರೀದಿಯ ಸವಾಲು ಒಡ್ಡಿ ಮನೆ ಮನಗಳನ್ನು ಕಾಡುತ್ತಿವೆ . ಆಚರಣೆಯ ಶ್ರದ್ಧೆ ಮರೆಯಾಗಿ ಖರೀದಿ ವಿಜೃಂಭಿಸಿದೆ . ಅಷ್ಟೇಕೆ , ರಾತ್ರಿ ಹಗಲಾಗಿಸುವ ವಿದ್ಯುತ್ ದೀಪಾಲಂಕಾರದಲ್ಲಿ ಪರದೇಶಿ ಚೈನಾ ಬಲ್ಸ್ ಮೆರೆದಿದೆ ! ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ .

ಸ್ವಾತಂತ್ರ್ಯ ಸಮರ ಕಾಲದಲ್ಲಿ ಖಾದಿ ಪ್ರಸಾರ ಜೋರಾಗಿತ್ತು . ಹೋರಾಟಗಾರರು ನುಡಿದಂತೆ ನಡೆಯುವವರಾಗಿದ್ದರು . ಮಕ್ಕಳಿಗೆ ಹಬ್ಬಗಳಲ್ಲಿ ಜರಿ ಟೋಪಿ ತೊಡಿಸುವ ಪದ್ಧತಿ ಬೆಳೆಯುತ್ತಿತ್ತು . ಬೆಳ್ಳಿ , ಬಂಗಾರದ ಜರಿಗಳಿದ್ದ ಈ ಟೋಪಿಗಳು ವಿದೇಶದಿಂದ ಆಮದಾಗುತ್ತಿದ್ದವು . ಮಕ್ಕಳ ತಲೆಯಲ್ಲಿ ವಿದೇಶಿ ಟೋಪಿ ಏಕೆ ? ಪ್ರತಿಭಟನೆ ಶುರುವಾಯಿತು . ಉತ್ತರ ಕನ್ನಡದ ಸಿದ್ದಾಪುರದಲ್ಲಿ ಟೋಪಿಗಳನ್ನು ರಾಶಿ ಹಾಕಿ ಸುಡಲಾಯಿತು . ಕ್ರಿ.ಶ. ೧೯೩೨ ರ ಒಂದು ದಿನ ಸುಟ್ಟ ಇಂತಹ ಜರಿ ಟೋಪಿಗಳಿಂದ ಮೂವತ್ತು ತೊಲೆ ಬೆಳ್ಳಿ ದೊರಕಿತ್ತಂತೆ ! ಆದರೆ ಈಗ ನಾವು ಬಹಳ ಬದಲಾಗಿದ್ದೇವೆ . ಹಬ್ಬಗಳ ಆಡಂಬರದ ಪ್ರದರ್ಶನದಲ್ಲಿ ವಿದೇಶಗಳಿಂದ ಬಂದು ಗುಡ್ಡೆಬೀಳುವ ಅಗ್ಗದ ಸರಕುಗಳಿಂದ ಸ್ವದೇಶಿ , ಸ್ವಾವಲಂಬನೆ ಸೂತ್ರಗಳು ಕರ್ಪೂರದಂತೆ ಕರಗಿವೆ .

ಕೃತಿಕಾರರ ಪರಿಚಯ

ಶಿವಾನಂದ ಕಳವೆಯವರು ಶಿರಸಿಯ ಕಳವೆಯವರು , ಕಾಲೇಜು ದಿನಗಳಿದ್ದಾಗಲೇ ಬರವಣಿಗೆಯತ್ತ ಹೊರಳಿಕೊಂಡರು . ಪರಿಸರ ಕುರಿತು ವಿಶೇಷ ಆಸಕ್ತಿ ಬೆಳೆಸಿಕೊಂಡರು . ತಮ್ಮ ಶಿಕ್ಷಣ ಪೂರೈಸಿಕೊಂಡ ನಂತರ ಪತ್ರಕರ್ತರಾಗಿ ವೃತ್ತಿಜೀವನ ಪ್ರಾರಂಭಿಸಿದ ಕಳವೆಯವರು ಫ್ರಾನ್ಸಿಸ್ ಬುಕಾನನ್ ಸಂಚರಿಸಿದ್ದ ಪ್ರದೇಶಗಳಿಗೆ ಭೇಟಿಕೊಟ್ಟು ವಿಶಿಷ್ಟ ಸಂಗತಿಗಳನ್ನು ದಾಖಲಿಸಿದರು . ಶಿರಸಿ ಸಮೀಪದ ನೀರ್ನಳ್ಳಿಯಲ್ಲಿರುವ “ ಮಲೆನಾಡ ಮಳೆಕೇಂದ್ರ ” ದ ರೂವಾರಿಗಳು , ಕಾನ್ ಗೌರಿ , ಗೌರಿ ಜಿಂಕೆಯ ಆತ್ಮಕಥೆ , ಅರಣ್ಯ , ಮಳೆ ಮನೆಯ ಮಾತುಕತೆ , ಕಾನ್ ಬಾಗಿಲು , ಮಣ್ಣಿನ ಓದು , ಒಂದು ತುತ್ತಿನ ಕಥೆ , ಕ್ಷಾಮ ಡಂಗುರ , ಜಲ ವರ್ತಮಾನ , ಕಾನನೆಯ ಕಥೆಗಳು ಮುಂತಾದ ಹಲವು ಮಹತ್ವದ ಕೃತಿಗಳನ್ನು ಬರೆದಿದ್ದಾರೆ . ಮಧ್ಯಘಟ್ಟ ಇವರ ಒಂದು ವಿಶಿಷ್ಟ ಕಾದಂಬರಿ .

10th Class Swadeshi Sutrada Sarala Habba Notes in Kannada 2024

ಅಭ್ಯಾಸ

ಪ್ರಶ್ನೆಗಳಿಗೆ ಉತ್ತರಿಸಿ :

1. ಸ್ವಾತಂತ್ರ್ಯಪೂರ್ವದಲ್ಲಿ ಹೋರಾಟಗಾರರು ಗಿರಾಕಿಗಳು ಮತ್ತು ಅಂಗಡಿಯವನನ್ನು ಏನೆಂದು ವಿನಂತಿಸಿಕೊಂಡರು ?

ಉತ್ತರ: ಹಿಂದೂಸ್ತಾನದಲ್ಲಿ ಪ್ರತಿಯೊಬ್ಬನ ದಿನದ ಉತ್ರನ್ನ ಸರಾಸರಿ ಒಂದು ಆಣೆ ಮೂರು ಪೈಸೆಗಳು ಮಾತ್ರ! ಇಲ್ಲಿ 55 ಕೋಟಿ ಜನರ ಸರಾಸರಿ ವರ್ಷದ ಉತ್ಪನ್ನ 1250 ಕೋಟಿಯಿದೆ. ದೇಶದ ಸಾಲವು 1100 ಕೋಟಿಯಿದೆ. ಇದಲ್ಲದೆ ಪ್ರತಿವರ್ಷ 125 ಕೋಟಿ ಪರದೇಶಕ್ಕೆ ಹೋಗುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಹಬ್ಬ, ಹುಣ್ಣಿಮೆಗಳು ಸಮೀಪಿಸಿದ ಈ ದಿನಗಳಲ್ಲಿ ಪರದೇಶಿ ವಸ್ತುಗಳನ್ನು ಕೊಳ್ಳುವುದು ಸರಿಯಲ್ಲ. ಬಣ್ಣದ ಕಾಗದ, ಗಾಜಿನ ಮಣಿಗಳು, ಬೇಗಡಿ, ಇಮಿಟೇಶನ್‌ ಮುತ್ತು, ತುರಾಯಿಗಳು ನಮ್ಮ ಹಿಂದುಸ್ತಾನದಂತಹ ಬಡದೇಶಕ್ಕೆ ಅನವಶ್ಯಕ ಪಟಾಕಿ, ಧಡಾಕಿ, ನೆಲಗುಮ್ಮ, ಮುಂತಾದ ವಸ್ತುಗಳು, ವಿದೇಶಿ ಎಂದು ಮಾರಲ್ಟಡುವ ಕರ್ಪೂರ, ಪರದೇಶಿ ಅತ್ತರುಗಳನ್ನು ಖರೀದಿಸಿ ದೇಶಕ್ಕೆ ಒದಗಿರುವ ಸಂಕಟ ಪರಂಪರೆಯನ್ನು ಯಾರೂ ಹೆಚ್ಚಿಸಬಾರದು! ದೇವರ ಪೂಜಾದಿಗಳನ್ನು ಶುದ್ದ ಶುಭ್ರ ದೇಶೀ ವಸ್ತುಗಳಿಂದಲೇ ಮಾಡಿರಿ, ಪರದೇಶಿ ವಸ್ತುಗಳಿಂದ ದೇವರ ಮೂರ್ತಿಗನ್ನು ಭ್ರಷ್ಟ ಮಾಡಬೇಡಿರಿ!

2.ಯಾವ ಯಾವ ವಸ್ತುಗಳನ್ನು ಬಳಸಬೇಡಿರೆಂದು ಜನಾಂದೋಲನ ಮಾಡಲಾಯಿತು ?

ಉತ್ತರ: ಪರದೇಶದಿಂದ ಬರುವ ಬಣ್ಣದ ಕಾಗದ, ಗಾಜಿನ ಮಣಿಗಳು, ಬೇಗಡಿ, ಇಮಿಟೇಶನ್‌ ಮುತ್ತು, ತುರಾಯಿಗಳು, ಪಟಾಕಿ, ಧಡಾಕಿ, ನೆಲಗುಮ್ಮ, ಕರ್ಪೂರ ಹಾಗೂ ಜರಿಯ ಟೋಪಿಗಳನ್ನು ಬಳಸಬೇಡಿರೆಂದು ಜನಾಂದೋಲನ ಮಾಡಲಾಯಿತು.

3. ಮಲೆನಾಡಿನಲ್ಲಿ ದೀಪದ ಬತ್ತಿಯ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಲಾಯಿತು?

ಉತ್ತರ: ಮಲೆನಾಡಿನ ಪಶ್ಚಿಮ ಘಟ್ಟದ ಕಾಡುಗಳಲ್ಲಿ ತೊಡಕಲು ಕುಡಿಯ ಎಂಬ ಗಿಡವಿದೆ ಇದರ ಎಳೆಯ ಕುಡಿ ಸಂಗ್ರಹಿಸಿ ಡಬ್ಬದಲ್ಲಿ ಶೇಖರಿಸಿ ಇಡಲಾಗುತ್ತಿತ್ತು ಒಣಗಿದ ಕುಡಿಯನ್ನು ಎಣ್ಣೆಯಲ್ಲಿ ಅದ್ದಿ ನಿತ್ಯ ಆರತಿಗೆ ಬಳಸಲಾಗುತ್ತಿತ್ತು. ಇದಲ್ಲದೆ ನಾಗಸಂಪಿಗೆ ಮರದ ಬೀಜಗಳಲ್ಲಿ ಎಣ್ಣೆ ಅಂಶ ಜಾಸ್ತಿ ಇರುವುದರಿಂದ ಅದನ್ನೂ ದೀಪಕ್ಕೆ ಉಪಯೋಗಿಸಲಾಗುತ್ತದೆ. ಅಡಿಕೆ ತೋಟಗಳ ಅಂಚಿನಲ್ಲಿ ಒಂದೆರಡು ಜವಾರಿ ಹತ್ತಿ ಗಿಡಗಳು ಇರುತ್ತಿದ್ದವು. ಈ ಹತ್ತಿಯನ್ನು ದೀಪಕ್ಕೆ ಬಳಸುವ ಪರಿಪಾಠವಿತ್ತು.

೪. ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ – ಏಕೆ?

ಉತ್ತರ: ಆದರ್ಶವಾಗಿದ್ದ ನೆಲದಲ್ಲಿ ಆಡಂಬರ, ರಂಗು, ನಾಟಕೀಯತೆ ಸೇರಿಕೊಂಡು ಬದುಕು ಲಗಾಮಿಲ್ಲದ ಓಟ ಕಿತ್ತಿದೆ. ಸಂಪ್ರದಾಯ ದೇವರ ನಂಬಿಕೆಗಳಿಗಿಂತ ಹಬ್ಬಗಳು ಖರೀದಿಯ ಸವಾಲು ಒಡ್ಡಿ ಮನೆ ಮನಗಳನ್ನು ಕಾಡುತ್ತಿವೆ. ರಾತ್ರಿ ಹಗಲಾಗಿಸುವ ವಿದ್ಯುತ್‌ ದೀಪಾಲಂಕಾರದಲ್ಲಿ ಪರದೇಶಿ ಚೈನಾ ಬಲ್ಬ್‌ ಮೆರೆದಿವೆ! ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ.

೫. ಸ್ವದೇಶೀ ಆರ್ಥಿಕತೆ ಬಲಪಡಿಸಲು ಹಬ್ಬಗಳಲ್ಲಿ ಸ್ವದೇಶೀ ವಸ್ತುಗಳನ್ನೇ ಬಳಸಲು ಪ್ರಾರಂಭಿಸಬೇಕು – ಈ ಕುರಿತು ನಿಮ್ಮ ಅಭಿಪ್ರಾಯವೇನು ?

ಉತ್ತರ: ನಮ್ಮ ದೇಶದಲ್ಲಿ ಹಬ್ಬದ ಸಮಯದಲ್ಲಿ ಬಟ್ಟೆಗಳನ್ನು ವಿವಿಧ ವಸ್ತುಗಳಿಂದ ಬೆಳೆದು ಬಂದಿವೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ನಡೆದಿದೆ. ಇದಕ್ಕೆ ಕಾರಣ ಹಬ್ಬ ಎಂದರೆ ಉತ್ಸಾಹ ಸಂಭ್ರಮವನ್ನು ಆಚರಿಸುವ ಕಾಲ ಎಂಬ ಭಾವನೆ. ಜನರು ಈ ಸಮಯದಲ್ಲಿ ಹೆಚ್ಚು ಕೊಳ್ಳುತ್ತಾರೆ ಅಥವಾ ಅವರನ್ನು ಕೊಳ್ಳುವಂತೆ ಮಾಡಬೇಕು ಎಂದು ಅಂಗಡಿಗಳು ಈ ಸಮಯದಲ್ಲಿ ರಿಯಾಯಿತಿ ( ಡಿಸ್ಕೌಂಟ್)‌ ಗಳನ್ನು ಘೋಷಿಸುತ್ತದೆ. ಜನರು ಈ ಸಮಯದಲ್ಲಿ ಸ್ವದೇಶಿ ವಸ್ತುಗಳನ್ನು ಖರೀದಿಸುವ ಮನಸ್ಸು ಮಾಡಿದರೆ ಖಂಡಿತ ಸ್ವದೇಶಿ ಆರ್ಥಿಕತೆಯು ಬಲವಾಗುತ್ತದೆ. ಅದರೆ ಇದು ಅಷ್ಟು ಸುಲಭವಾಗಿಲ್ಲ. ಜನರು ವಿದೇಶಿ ವಸ್ತಗಳನ್ನು ಏಕೆ ಖರೀದಿಸುತ್ತಾರೆ ಎಂಬುದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಕೊಡಬಹುದು. ಕೆಲವು ವಿದೇಶಿ ವಸ್ತುಗಳು ಉದಾಹರಣೆಗೆ ಚೈನಾದಿಂದ ಆಮದಾಗುಬ ಹಲವಾರು ವಸ್ತುಗಳು ಸ್ವದೇಶಿ ವಸ್ತುಗಳಿಗಿಂತ ತುಂಬಾ ಅಗ್ಗವಾಗಿತ್ತದೆ. ಎರಡನೆಯದು ವಿದೇಶಿ ವಸ್ತುಗಳು ಗುಣಮಟ್ಟದಲ್ಲಿ ಸ್ವದೇಶಿ ವಸ್ತುಗಳಿಗಿಂತ ಚೆನ್ನಾಗಿರುತ್ತದೆ ಎಂಬುದು. ಇದು ಲೋಕಲ್‌ (ಸ್ವದೇಶಿ) ಚೆನ್ನಾಗಿರುವುದಿಲ್ಲ. ಇದು ಇಂಪೋರ್ಟೆಡ್‌ (ವಿದೇಶದಿಂದ ತರಿಸಿದ್ದು ) ತುಂಬಾ ಚೆನ್ನಾಗಿರುತ್ತದೆ ಎಂಬ ಭಾವನೆ ಜನರಲ್ಲಿ ಬಲವಾಗಿ ಬೇರೂರಿದೆ. ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ತಯಾರಿಸುವ ಸವಾಲು ದೇಶಿಯ ಉತ್ಪಾದಕರ ಮುಂದಿದೆ. ನಾವು ಧರಿಸುವ ವಿವಿಧ ಬಟ್ಟೆಗಳು ಉಡುಪುಗಳು, ಮನೆಬಳಕೆ ವಸ್ತುಗಳು, ಮನೆಯ ಅಲಂಕಾರದ ಸಾಮಗ್ರಿ , ಸವಾರಿ ಮಾಡುವ ವಿವಿಧ ಗಾಡಿಗಳನ್ನು ಹಬ್ಬದ ಸಮಯದಲ್ಲಿ ಖರೀದಿಸುವುದು ರೂಢಿ. ಈ ಎಲ್ಲವನ್ನೂ ಖರೀದಿಸುವಾಗ ಜನರು ಆದಷ್ಟು ಸ್ವದೇಶಿ ವಸ್ತುಗಳನ್ನೆ ಕೊಳ್ಳಬೇಕು. ಎಂಬ ಮನಸ್ಸು ಮಾಡಿದರೆ ಸ್ವದೇಶಿ ಆರ್ಥಿಕತೆಗೆ ಖಂಡಿತ ಬಲ ಸಿಗುತ್ತದೆ.

FAQ :

1. ಮಲೆನಾಡಿನಲ್ಲಿ ದೀಪದ ಬತ್ತಿಯ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಲಾಯಿತು?

ಉತ್ತರ: ಮಲೆನಾಡಿನ ಪಶ್ಚಿಮ ಘಟ್ಟದ ಕಾಡುಗಳಲ್ಲಿ ತೊಡಕಲು ಕುಡಿಯ ಎಂಬ ಗಿಡವಿದೆ ಇದರ ಎಳೆಯ ಕುಡಿ ಸಂಗ್ರಹಿಸಿ ಡಬ್ಬದಲ್ಲಿ ಶೇಖರಿಸಿ ಇಡಲಾಗುತ್ತಿತ್ತು ಒಣಗಿದ ಕುಡಿಯನ್ನು ಎಣ್ಣೆಯಲ್ಲಿ ಅದ್ದಿ ನಿತ್ಯ ಆರತಿಗೆ ಬಳಸಲಾಗುತ್ತಿತ್ತು. ಇದಲ್ಲದೆ ನಾಗಸಂಪಿಗೆ ಮರದ ಬೀಜಗಳಲ್ಲಿ ಎಣ್ಣೆ ಅಂಶ ಜಾಸ್ತಿ ಇರುವುದರಿಂದ ಅದನ್ನೂ ದೀಪಕ್ಕೆ ಉಪಯೋಗಿಸಲಾಗುತ್ತದೆ. ಅಡಿಕೆ ತೋಟಗಳ ಅಂಚಿನಲ್ಲಿ ಒಂದೆರಡು ಜವಾರಿ ಹತ್ತಿ ಗಿಡಗಳು ಇರುತ್ತಿದ್ದವು. ಈ ಹತ್ತಿಯನ್ನು ದೀಪಕ್ಕೆ ಬಳಸುವ ಪರಿಪಾಠವಿತ್ತು.

2. ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ – ಏಕೆ?

ಉತ್ತರ: ಆದರ್ಶವಾಗಿದ್ದ ನೆಲದಲ್ಲಿ ಆಡಂಬರ, ರಂಗು, ನಾಟಕೀಯತೆ ಸೇರಿಕೊಂಡು ಬದುಕು ಲಗಾಮಿಲ್ಲದ ಓಟ ಕಿತ್ತಿದೆ. ಸಂಪ್ರದಾಯ ದೇವರ ನಂಬಿಕೆಗಳಿಗಿಂತ ಹಬ್ಬಗಳು ಖರೀದಿಯ ಸವಾಲು ಒಡ್ಡಿ ಮನೆ ಮನಗಳನ್ನು ಕಾಡುತ್ತಿವೆ. ರಾತ್ರಿ ಹಗಲಾಗಿಸುವ ವಿದ್ಯುತ್‌ ದೀಪಾಲಂಕಾರದಲ್ಲಿ ಪರದೇಶಿ ಚೈನಾ ಬಲ್ಬ್‌ ಮೆರೆದಿವೆ! ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ.

ಇತರೆ ವಿಷಯಗಳು :

10th Standard All Subject Notes

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 10ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh