10th Kannada Veeralava Poem Notes | 10ನೇ ತರಗತಿ ವೀರಲವ ಕನ್ನಡ ನೋಟ್ಸ್ 

10th Kannada Veeralava Poem Notes 10ನೇ ತರಗತಿ ವೀರಲವ ಕನ್ನಡ ನೋಟ್ಸ್ 

10th Standard Veeralava Notes 10ನೇ ತರಗತಿ ವೀರಲವ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ question answer, text book pdf download Kannada deevige

10th Kannada Veeralava Poem Notes | 10ನೇ ತರಗತಿ ವೀರಲವ ಕನ್ನಡ ನೋಟ್ಸ್ 

Veeralava Kannada Poem

ಪದ್ಯ -೭ ವೀರಲವ

 ಕವಿಪರಿಚಯಲಕ್ಷ್ಮೀಶ

 ಕವಿ ಲಕ್ಷ್ಮೀಶನು ಕ್ರಿ . ಶ . ಸುಮಾರು ೧೫೫೦ ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ

ದೇವನೂರಿನಲ್ಲಿ ಜನಿಸಿದನು . ಇವನಿಗೆ ಲಕ್ಷ್ಮೀರಮಣ , ಲಕ್ಷ್ಮೀಪತಿ ಎಂಬ ಹೆಸರುಗಳೂ ಇದ್ದವು . ಇವರು

‘ ಜೈಮಿನಿ ಭಾರತ ‘ ಎಂಬ ಪ್ರಸಿದ್ಧ ಕಾವ್ಯವನ್ನು ರಚಿಸಿದ್ದಾನೆ . ಈತನಿಗೆ ಉಪಮಾಲೋಲ , ಕರ್ಣಾಟ

ವಿಚೂತವನಚೈತ್ರ ಎಂಬ ಬಿರುದುಗಳನ್ನು ನೀಡಿಗೌರವಿಸಲಾಗಿದೆ . 

veeralava kannada poem question answer

ಅ ] ಒಂದು ವಾಕ್ಯದಲ್ಲಿ ಉತ್ತರಿಸಿ . 

೧. ‘ ಜೈಮಿನಿ ಭಾರತ ‘ ಕಾವ್ಯವನ್ನು ಬರೆದ ಕವಿ ಯಾರು ? 

ಜೈಮಿನಿ ಭಾರತಕಾವ್ಯವನ್ನು ಬರೆದ ಕವಿ ಲಕ್ಷ್ಮೀಶ 

೨. ಯಜ್ಞಾಶ್ವವನ್ನು ಕಟ್ಟಿದವರು ಯಾರು ? 

ಯಜ್ಞಾಶ್ವವನ್ನು ಕಟ್ಟಿದವರು ಲವ

 ೩ ಕುದುರೆಯನ್ನು ಅವನು ಯಾವುದರಿಂದ ಕಟ್ಟಿದನು ? 

ಕುದುರೆಯನ್ನು ಅವನು ತನ್ನ ಉತ್ತರೀಯದಿಂದ ಕಟ್ಟಿದನು . 

೪. ಮುನಿಸುತರು ಹೆದರಲು ಕಾರಣವೇನು ? 

ಅವನು ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದರಿಂದ ಮುನಿಸುತರು ಹೆದರಿದರು .

 ಆ ] ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ . 

೧. ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ . 

ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು , ಶತ್ರುಘ್ನನ ಬೆಂಗಾವಲಿನಲ್ಲಿ

ಯಜ್ಞಾಶ್ವವನ್ನು ಕಳುಹಿಸಿದನು . ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ

ರಾಜರುಗಳು ತಡೆಯಲು ಹೆದು ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು . ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ

ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು . 

೨. ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ? 

ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಭೂಮಂಡಲದಲ್ಲಿ ಕೌಸಲ್ಯಯು ಮಗನಾದ 

ರಾಮನು ಒಬ್ಬನೇ ವೀರನು ಇದು ಅವನ ಯಜ್ಞಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು

ಯಾರೇ ಆದರು ತಡೆಯಲಿ ” ಎಂದ ಬರೆಯಲಾಗಿತ್ತು . 

೩. ಕುದುರೆಯನ್ನುಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ

ಲವನು ಆಶ್ರಮವನ್ನು ಹೊಕ್ಕ ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದ್ದನ್ನು

ಕಂಡು ಹೆದರಿದ ಮುನಿಸುತರು ” ಬೇಡಬೇಡ ಅರಸುಗಳ ಕುದುರೆಯನ್ನು ಬಿಡು , ನಮ್ಮನ್ನು ಹೊಡೆಯವರು

” ಎಂದು ಹೇಳಿದರು . ಆಗ ಅವನು ನಗುತ “ ಬ್ರಾಹ್ಮಣರ ಮಕ್ಕಳು ಹೆದರಿದರೆ , ಜಾನಕಿಯ ಮಗನು ಇದಕ್ಕೆ

ಹೆದರುವನೇ , ನೀವು ಹೋಗಿ ” ಎಂದು ಶೌರ್ಯದಿಂದ ಹೇಳಿದನು . 

ಇ ] ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

 ೧. ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವೇನು ? 

ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು , ಶತ್ರುಘ್ನನ ಬೆಂಗಾವಲಿನಲ್ಲಿ

ಯಜ್ಞಾಶ್ವವನ್ನು ಕಳುಹಿಸಿದನು . ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ

ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು . ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ

ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು . ಆಗ ಇದನ್ನು ಕಂಡ

ಅವನು ಯಾವ ಕಡೆಯ ಕುದುರೆಯು . ಹೊಕ್ಕು , ಹೂತೋಟವನ್ನು . ನುಗ್ಗುನುರಿಯಾಗುವಂತೆ ತುಳಿದುದು . ” ಎಂದು

ಕುದುರೆ ಯಕಡೆಗೆ ನಡೆದು ಬಂದು ನೋಡಿದನು . ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ “ ಭೂಮಂಡಲದಲ್ಲಿ ಕೌಸಲ್ಯಯ

ಮಗನಾದ ರಾಮನ ಒಬ್ಬನೇ ವೀರನು ಇದು ಅವನ ಯಜ್ಞಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು

ತಡೆಯಲಿ ” ಎಂದು ಬರೆಯಲಾಗಿತ್ತು . ಇದನ್ನು ಓದಿದ ಅವನು ಕೋಪಗೊಂಡು “ ಅಹಂಕಾರವನ್ನು ಬಿಡಿಸದಿದ್ದರೆ ತನ್ನ

ತಾಯಿಯನ್ನು ಎಲ್ಲ ಜನರೂ ಬಂಜೆ ಎನ್ನದಿರುವರೇ , ತನಗೆ ರುವ ತೋಳುಗಳು ಇವು ಏತಕೆ ? ” ಎಂದು ಪ್ರತಿಜ್ಞೆಯನ್ನು

ಕೈಗೊಂಡು , ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಕಟ್ಟಿಹಾಕಿದನು . 

೨. ಲವನ ನಡೆವಳಿಕೆ ಮೆಚ್ಚುಗೆಯಾಯಿತೆ ? ಏಕೆ ? 

ಲವನು ಬಾಲಕನಾಗಿದ್ದರು ಸ್ವಾಭಿಮಾನಿ , ಅವನ ಮಾತುಗಳು ವೀರೋಚಿತ . ಆತನ ಮಾತೃಪ್ರೇಮ ಅನನ್ಯ . ವಾಲ್ಮೀಕಿ

ಮಹರ್ಷಿಗಳು ಆಶ್ರಮದಿಂದ ಹೊರಗೆ ಹೋಗುವಾಗ ಅವನಿಗೆ ಆಶ್ರಮದ ಜವಾಬ್ದಾರಿಯನ್ನು ವಹಿಸಿರುತ್ತಾರೆ . ಇಂತಹ

ಸಮಯದಲ್ಲಿ ರಾಮನ ಯಜಾಶ್ವವು ಆಶ್ರಮವನ್ನು ಪ್ರವೇಶಿಸಿ ಹೂದೋಟವನ್ನು ಹಾಳುಮಾಡುತ್ತದೆ . ಇದನ್ನು ಕಂಡು

ಅವನು ಕುದುರೆಯ ಬಳಿಬಂದು , ಕುದುರೆಯ ನೆತ್ತಿಯ ಮೇಲೆ ಮೆರೆಯುತ್ತಿದ್ದ ಪಟ್ಟದ ಲಿಖಿತವನ್ನು ಓದಿ . ರಾಮನೊಬ್ಬನೇ

ಜಗತ್ತಿಗೆ ವೀರನೆಂಬ ವಾಕ್ಯವನ್ನು ಕಂಡು ಕೆರಳಿ , ಇವನ ಗರ್ವವನ್ನು ಬಿಡಿಸುತ್ತೇನೆ . ಇಲ್ಲದಿದ್ದಲ್ಲಿ ನನ್ನ ತಾಯಿಯನ್ನು

ಎಲ್ಲರೂ ಹೇಡಿಯನ್ನು ಹೆತ್ತವಳೆಂದು ದೂರಿಬಿಡುತ್ತಾರೆ ಎಂದು ಚಿಂತಿಸಿ , ತನ್ನ ತೋಳಲವನ್ನು ತೋರಿಸಿಬಿಡುತ್ತೇನೆ ಎಂದು

ಕುದುರೆಯನ್ನು ಕಟ್ಟಿಹಾಕುತ್ತಾನೆ . ಋಷಿ ಮುನಿಗಳ ಮಕ್ಕಳು ಹೆದರಿಕೆಯಿಂದ ಬೇಡವೆಂದಾಗ , “ ಬ್ರಾಹ್ಮಣರ ಮಕ್ಕಳು

ಯುದ್ಧಕ್ಕೆ ಹೆದರಿದರೆ ; ಜಾನಕಿಯ ಸುತನು ಹೆದರುವನೇ ? ” ಎಂದು ವೀರನಂತೆ ಇಲ್ಲಿನ ಹೆಡೆಯೇರಿಸಿ ಠೇಂಕಾರವನ್ನು

ಮಾಡಿ ನಿಂತನು . ಮೇಲಿನ ಮಮತೆ . ದುರಹಂಕಾರವನ್ನು ಮೆಟ್ಟುವ ಸಾಹಸ ಇಂತಹ ವೀರ ಬಾಲಕನ ಶೌರ್ಯ ,

ಎಂತಹವರಿಗೂ ಮೆಚ್ಚುಗೆಯಾಗುತ್ತದೆ . 

ಈ ] ಸಂದರ್ಭ ಸಹಿತ ಸ್ವಾರಸ್ಯ ತಿಳಿಸಿ .

೧. “ ರಘದಹನ ಸೊಲ್ಲೇಳಿ ನಮಿಸಲ್ 

ಆಯ್ಕೆ : – ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ ಜೈಮಿನಿ ಭಾರತ ಮಹಾ ಕಾವ್ಯದಿಂದ ಆಯ್ದ

‘ ವೀರಲವ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . 

ಸಂದರ್ಭ : ಶ್ರೀರಾಮನ ಅಶ್ವಮೇಧ ಯಾಗದ ಯಜ್ಞಾಶ್ವವು ಸಂಚರಿಸಿದ ಕಡೆಯಲ್ಲೆಲ್ಲ ರಾಜರುಗಳಿಂದ

ಅದಕ್ಕೆ ದೊರೆತ ಭವ್ಯ ಸ್ವಾಗತ ಹಾಗೂ ನೀಡಿದ ಗೌರವವನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿಯು ಈ ಮಾತನ್ನು ಹೇಳುತ್ತಾನೆ . 

ಸ್ವಾರಸ್ಯ : ಶ್ರೀರಾಮನ ಹೆಸರನ್ನು ಕೇಳಿಯೇ ಪರಾಕ್ರಮಿಗಳಾದ ರಾಜರುಗಳು ಗೌರವದಿಂದ ನಮಿಸಿ ಶರಣಾಗಿ

ಯಜ್ಞಾಶ್ವವು ಮುಂದೆ ಸಂಚರಿಸಲು ಅನುವು ಮಾಡಿಕೊಟ್ಟರು ಎಂದು ವರ್ಣಿಸಿರುವುದು ಸ್ವಾರಸ್ಯಪೂರ್ಣವಾಗಿದೆ . 

೨ “ ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪದೆ ” 

ಸಂದರ್ಭ : ಲವನು ತನ್ನ ಆಶ್ರಮದ ತೋಟವನ್ನು ಧ್ವಂಸ ಮಾಡಿದ ಶ್ರೀರಾಮನ ಯಜ್ಞಾಶ್ವದ ಹಣೆಯಲ್ಲಿದ್ದ

ಪಟ್ಟಿಯ ಬರಹವನ್ನು ಓದಿ ಅದನ್ನು ಕಟ್ಟಿಹಾಕಲು ನಿರ್ಧರಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

 ಸ್ವಾರಸ್ಯ : ಕ್ಷತ್ರಿಯನಾದ ವೀರಲವನು ಬಾಲಕನಾದರೂ ಹೆದರದೆ ಕುದುರೆಯನ್ನು ಕಟ್ಟಲು ನಿರ್ಧರಿಸಿ , ತನ್ನ

ವೀರತ್ವವನ್ನು ಪ್ರದರ್ಶಿಸುವುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ . 

೩. “ ಅರಸುಗಳ ವಾಜಿಯ ಬಿಡು ” 

ಸಂದರ್ಭ : – ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿಹಾಕಿದ

ಸಂದರ್ಭದಲ್ಲಿ ಮುನಿಪುತರು ಈ ಮಾತನ್ನು ಹೇಳುತ್ತಾರೆ . 

ಸ್ವಾರಸ್ಯ : ರಾಜನ ಯಜ್ಞಾಶ್ವವನ್ನು ಕಟ್ಟಿಹಾಕುವುದು ಅಪರಾಧ ಅದರಿಂದ ಮುಂದೆ ತೊಂದರೆ ಉಂಟಾಗುತ್ತದೆ

ಎಂದು ಮುನಿಪುತ್ತರು ಭಯಗೊಳ್ಳುವುದನ್ನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ . 

೪. “ ಜಾನಕಿಯ ಮಗನಿದಕೆ ಬೆದರುವನೆ “ 

ಸಂದರ್ಭ – ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು

ಮುನಿಪುತ್ರರು ಕುದುರೆಯನ್ನು ಬಿಡು ಎಂದು ಹೇಳಿದ ಸಂದರ್ಭದಲ್ಲಿ ಈ ಮಾತನ್ನು ಲವರು ಹೇಳುತ್ತಾನೆ . 

ಸ್ವಾರಸ್ಯ : – ಸೀತೆಯ ಮಗನಾದ ಲವನ ಧೈರ್ಯವು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ . 

 ಭಾಷಾ ಚಟುವಟಿಕೆ 

೧. ವಿಗ್ರಹಿಸಿ ಸಮಾಸವನ್ನು ಹೆಸರಿಸಿ , 

೧. ಸೊಲ್ಗಳಿ      -ಸೊಲ್ಲನ್ನು + ಕೇಳಿ=ಕಿಯಾಸಮಾಸ

 ೨. ನಲ್ಲುದುರೆ  -ನಲ್ಲಿತು + ಕುದುರೆ=ಕರ್ಮಧಾರಯ ಸಮಾಸ

೩. ಬಿಲ್ಗೊಂಡು  -ಬಿಲ್ಲನ್ನು + ಕೊಂಡು=ಕ್ರಿಯಾಸಮಾಸ

೪. ಬಿಲ್ಲಿರುವನೇರಿಸಿ -ಬಿಲ್ಲಿನತಿರುವನ್ನು + ಏರಿಸಿ = ಕ್ರಿಯಾಸಮಾಸ

 ೫. ಪೂದೋಟ -ಪೂವಿನ + ತೋಟ= ತತ್ಪುರುಷಸಮಾಸ 

 ೬. ಲಿಖಿತವನೋದಿ – ಲಿಖಿತವನ್ನು + ಓದ=ಕ್ರಿಯಾಸಮಾಸ

೭. ಯಜತುರುಗ  -ಯಜ್ಞದ + ತುರುಗ=ತತ್ಪುರುಷಸಮಾಸ 

 ೮. ಕದಳೆದುಮ  – ಕದಳಿಯ + ದುಮ = ತತ್ಪುರುಷಸಮಾಸ 

೯. ಅಭಿಪ     -ಅಬ್ಬಿಗೆ ( ಸಮುದ್ರಕ್ಕೆ ) ಪತಿ ( ಒಡೆಯ ) ಯಾರೋ ಆತ ( ವರುಣ ) = ಬಹುವೀಹಿಸಮಾಸ 

 ೨. ತತ್ಸಮ – ತದ್ಭವ ಬರೆಯಿರಿ.

 ೧. ವೀರ – ಬೀರ  ೨ , ಯಜ್ಞ – ಜನ್ನ  ,  ೩,ಬಂಜೆ – ವಂದ್ಯಾ ೪ , ಕುವರ – ಕುಮಾರ ೫. ಲೋಕ – ಲೋಗ

ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ. 

೧. ಚರಿಸುತಧ್ವರದ   -ಚರಿಸುತ   + ಅಡ್ವರದ  = ಲೋಪಸಂಧಿ

೨. ನಿಜಾಶ್ರಮ    – ನಿಜ    + ಆಶ್ರಮ   = ಸವರ್ಣದೀರ್ಘಸಂಧಿ

 ೩. ಲೇಖನವನೋದಿ  – ಲೇಖನವನು + ಓದಿ    = ಲೋಪಸಂಧಿ

೪. ತೆಗೆದುತ್ತರೀಯಮಂ    -ತೆಗೆದು  + ಉತ್ತರೀಯಮಂ  = ಲೋಪಸಂಧಿ

 ೫. ಬೇಡಬೇಡರಸುಗಳ    – ಬೇಡಬೇಡ + ಅರಸುಗಳ   = ಲೋಪಸಂಧಿ

 ೬ ನಿಂತಿರ್ದನ್   – ನಿಂತು + ಇರ್ದನ್  = ಲೋಪಸಂಧಿ 

೭ ಪೂದೋಟ     -ಪೂ – ತೋಟ  = ಆದೇಶಸಂಧಿ

೮. ಸೊಳ್ಳೇಳಿ     – ಸೊಲ್ಲು + ಕೇಳಿ   =ಆದೇಶಸಂಧಿ .

 

ವರ್ಧಕ ಷಟ್ಪದಿ ಲಕ್ಷಣಗಳು :

* ಆರು ಸಾಲುಗಳಿರುತ್ತವೆ

*೧ ,೩ ೪ ಮತ್ತು ೫ ನೇ ಸಾಲುಗಳು ತಲಾ ೨೦ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೪ ಗಣಗಳಿರುತ್ತವೆ

* ೩ ಮತ್ತು ೪ನೇ ಸಾಲುಗಳು ತಲಾ ೩೨ ಮಾತೃಗಳನ್ನು ಹೊಂದಿದ್ದು ೫ ಮಾತ್ರೆಯ ೬ ಗಣಗಳೊಂದಿಗೆ ಒಂದು ಗುರು ಇರುತ್ತದೆ .

* ಮೊದಲನೇ ಸಾಲಿನನ ಗಣವಿನ್ಯಾಸ ೫\೫\೫\೫

ಬಹು ಅಂಶ ಆಯ್ಕೆ ಪ್ರಶ್ನೆಗಳು 

 ೧. ‘ ರಗಳೆ ‘ ಪದದ ತದ್ಭವ ರೂಪವಿದೆ . 

ಎ ) ರಘಟಾ  ಬಿ )ರಗಳಾ  ಸಿ)ರಾಗಟ  ಸಿ)ರಂಗಗೀತೆ  

೨. ಇವುಗಳಲ್ಲಿ ಬಹುಪಾದಗಳುಳ್ಳ ಪದ್ಯ :

ಎ ) ಕಂದ  ಬಿ ) ಷಟ್ಟದಿ  ಸಿ ) ವೃತ್ತ ಡಿ ) ರಗಳೆ

೩. ವಾರ್ಧಕ ಷಟ್ನದಿಯ ಒಂದು ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ :

ಎ ) ೧೦೨   ಬಿ ) ೧೪೦ ಸಿ ) ೧೪೪ ಡಿ ) ೬೪ 

೪. ಇವುಗಳಲ್ಲಿ ಯಾವುದು ರಗಳೆಯ ವಿಧವಾಗಿಲ್ಲ :

ಎ ) ಉತ್ಸಾಹ  ಬಿ ) ಲಲಿತ  ಸಿ ) ಸರಸಿ   ಡಿ ) ಮಂದಾನಿಲ

೫ . ವಾರ್ಧಕ ಷಟ್ನದಿಯಲ್ಲಿ ಪ್ರತಿ ಗಣವು ಎಷ್ಟು ಮಾತ್ರೆಗಳಿಂದ ಕೂಡಿರುತ್ತದೆ ?

ಎ) ೩  ಬಿ) ೬ ಸಿ)೪  ಡಿ ) ೫

೬. * ನೆತ್ತಿಯೊಳ್ ” ಇದು ಈ ವಿಭಕ್ತಿಗೆ ಉದಾಹರಣೆಯಾಗಿದೆ .

ಎ ) ಪ್ರಥಮ  ಬಿ ) ದ್ವಿತೀಯ  ಸಿ ) ತೃತೀಯ  ಡಿ ) ಸಪ್ತಮಿ

೭.’ ಲಿಖಿತಮಂ ‘ ಇಲ್ಲಿರುವ ವಿಭಕ್ತಿ :

ಎ ) ಪ್ರಥಮ  ಬಿ ) ದ್ವಿತೀಯ  ಸಿ ) ತೃತೀಯ  ಡಿ ) ಸಪ್ತಮಿ

೮. ‘ ಕುವರಂ ‘ ಇಲ್ಲಿರುವ ಅಕ್ಷರಗಣ :

ಎ ) ಭ – ಗಣ ಬಿ ) ಸ-ಗಣ ಸಿ ) ಮ – ಗಣ ಡಿ)ತ -ಗಣ 

೯). ಉರ್ವಿಯೊಳ್ ? ಈ ಪದದಲ್ಲಿರುವ ಕಾರಕಾರ್ಥ .

ಎ)ಕರ್ಮಾರ್ಥ ಬಿ)ಸಂಪ್ರದಾನ ಸಿ) ಅಪಾದಾನ ಸಿ) ಅಧಿಕರಣ

೧೦. ‘ ಅಗಡು ‘ ಪದದ ಹೊಸಗನ್ನಡ ರೂಪವಾಗಿದೆ .

ಎ )ಅಡಗಿಕೋ ಬಿ)ಶೌರ್ಯ ಸಿ)ಕುದುರೆ ಡಿ)ಹಡಗು 

ಉತ್ತರ : ಎ ) ರಘಟಾ ಬಿ ) ರಗಳೆ  ಸಿ ) ೧೪೪  ಸಿ ) ಸರಸಿ   ಸಿ ) ೫  ಡಿ ) ಸಪ್ತಮಿ  ಬಿ ) ದ್ವಿತೀಯ   ಬಿ ) ಸ – ಗಣ   ಡಿ ) ಅಧಿಕರಣ   ಬಿ) . ಶೌರ್ಯ

ಮೊದಲೆರಡು ಪದಗಳಿಗಿರುವ ಸಂಬಂಧದಂತೆ   ಮೂರನೆಯ ಬದಕ್ಕೆ ಸಂಬಂಧಿಸಿದಂತೆ ಪದ ಬರೆಯಿರಿ  

೧. ಭಾಮಿನಿ: ೦೦೨ : :ವರ್ಧಕ:____

೨. ವೃತ್ತಗಳು : ಅಕ್ಷರಗಣ   :ರಗಳೆ :_____

 ೩. ಸೊಲ್ಲೇಳಿ :ಕ್ರಿಯಾಸಮಾಸ :ಪೂದೋಟ____

೪. ಬಿಲ್ಲಿರುವನೇರಿಸಿ:ಕ್ರಿಯಾಸಮಾಸ : ನಲ್ಲುದುರೆ______

 ೫. ನೃಪ:ರಾಜ :ಅಭಿಪ  :_______

 ೬. ಸೊಳ್ಳೇಳಿ :ಸೊಲ್ಲನ್ನು + ಕೇಳಿ :_______

೭. ವೀರ ; ಬೀರ :: ಬಂಜೆ :_________

೮. ಗಳ :ಕೊರಳು:: ವಾಜಿ :______

ಉತ್ತರಗಳು :  ೧ . ೧೪೪ ೨ .ಮಾತ್ರಾಗಣ  ೩.ತತ್ಪುರುಷಸಮಾಸ  ೪.ಕರ್ಮಧಾರಯ 

 ೫. ವರುಣ  ೬.ನಲ್ಲಿ ತ್ತು +ಕುದುರೆ  ೭.ವಂದ್ಯಾ  ೮.ಕುದುರೆ 

10th Kannada Deevige 10th Notes Lesson question answer pdf textbook Veeralava Poem summary in Kannada deevige 10ನೇ ತರಗತಿ ವೀರಲವ ಪ್ರಶ್ನೆ ಉತ್ತರ

10th kannada Veeralava Poem Notes 10ನೇ ತರಗತಿ ವೀರಲವ ನೋಟ್ಸ್  ಪ್ರಶ್ನೆ ಉತ್ತರ Kannada Deevige 10th Notes Veeralava Poem padya Notes question answer text book pdf download

ಆತ್ಮೀಯರೇ..

ನಮ್ಮ ಕನ್ನಡ ದೀವಿಗೆ.ಇನ್   ವೆಬ್ಸೈಟ್ ಮತ್ತು ಆಪ್  ನಲ್ಲಿ 1ನೇ ತರಗತಿಯಿಂದ 1೦ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ

Kannada Deevige app

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

10ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

2 thoughts on “ 10th Kannada Veeralava Poem Notes | 10ನೇ ತರಗತಿ ವೀರಲವ ಕನ್ನಡ ನೋಟ್ಸ್ 

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh