rtgh

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ- 4.5 ಗುಪ್ತರು ನೋಟ್ಸ್‌ | 2nd Puc History Guptaru Notes in Kannada

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ- 4.5 ಗುಪ್ತರು ನೋಟ್ಸ್‌, 2nd Puc History 4.5 Question Answer Notes in Kannada 2nd Puc History Guptaru Notes Pdf Kseeb Solution For Class 12 History Chapter 4.5 Notes 2nd Puc History Guptas 4.5 Question Answer Pdf Download

ಅಧ್ಯಾಯ- 4.5 ಗುಪ್ತರು

2nd Puc History Chapter 4.5

2nd Puc History Chapter 4.5 Question Answer in Kannada

I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :

1. ಗುಪ್ತವಂಶದ ಶ್ರೇಷ್ಠ ದೊರೆ ಯಾರು ?

ಸಮುದ್ರಗುಪ್ತ

2 . ಯಾವ ಗುಪ್ತ ಅರಸನು ‘ ಅಶ್ವಮೇಧಯಾಗ’ವನ್ನು ನೆರವೇರಿಸಿದನು ?

ಸಮುದ್ರಗುಪ್ತ

3. ‘ ಕವಿರಾಜ ‘ ಎಂಬ ಬಿರುದನ್ನು ಹೊಂದಿದ್ದವರು ಯಾರು ?

ಸಮುದ್ರಗುಪ್ತ

4 . ಗುಪ್ತ ಸಂತತಿಯ ಸ್ಥಾಪಕ ಯಾರು ?

ಶ್ರೀಗುಪ್ತ

5 . ‘ ಗುಪ್ತಶಕೆ ‘ ಯಾವಾಗ ಆರಂಭವಾಯಿತು ?

ಸಾ.ಶ .320 ರಲ್ಲಿ ಮೊದಲನೇ ಚಂದ್ರಗುಪ್ತನ ಸಿಂಹಾಸನಾರೋಹಣದೊಂದಿಗೆ ಆರಂಭವಾಯಿತು .

6. ಅಲಹಾಬಾದ್ ಸ್ತಂಭ ಶಾಸನವನ್ನು ರಚಿಸಿದವರು ಯಾರು ?

ಹರಿಸೇನ

7. ಸಮುದ್ರಗುಪ್ತನ ದಿಗ್ವಿಜಯಗಳನ್ನು ತಿಳಿಸುವ ಶಾಸನ ಯಾವುದು ?

ಅಲಹಾಬಾದ್ ಸ್ತಂಭ ಶಾಸನ .

8. ಕಾವ್ಯಮೀಮಾಂಸೆಯ ಕತೃ ಯಾರು ?

ರಾಜಶೇಖರ

9. ‘ ಶಾಕುಂತಲ’ವನ್ನು ಬರೆದವರು ಯಾರು ?

ಕಾಳಿದಾಸ

10. ಆರ್ಯಭಟೀಯವನ್ನು ಬರೆದವರು ಯಾರು ?

ಆರ್ಯಭಟ

11. ವಿಕ್ರಮಾದಿತ್ಯ ಎಂಬ ಬಿರುದನ್ನು ಹೊಂದಿದ್ದವರು ಯಾರು ?

ಎರಡನೇ ಚಂದ್ರಗುಪ್ತ

12. ಅಮರಕೋಶವನ್ನು ಬರೆದವರು ಯಾರು ?

ಅಮರಸಿಂಹ

13. ಬೃಹತ್ ಸಂಹಿತೆಯನ್ನು ಬರೆದವರು ಯಾರು ?

ವರಹಮೀರ

14. ‘ ಘೋ – ಕೋ – ಕಿ ‘ ಯನ್ನು ಬರೆದವರು ಯಾರು ?

ಫಾಹಿಯಾನ್

15. ಕಿರಾತಾರ್ಜುನೀಯದ ಲೇಖಕನನ್ನು ಹೆಸರಿಸಿ .

ಭಾರವಿ

16. ಭಾರತದ ವೈದ್ಯಶಾಸ್ತ್ರದ ‘ ಪಿತಾಮಹ’ವೆಂದು ಯಾರನ್ನು ಕರೆಯಲಾಗಿದೆ ?

ಧನ್ವಂತ್ರಿ

17. ಗುಪ್ತರ ಕಾಲದ ಕಬ್ಬಿಣಸ್ತಂಭ ಕಂಡುಬಂದಿರುವುದು ಎಲ್ಲಿ ?

ದೆಹಲಿಯ ಸಮೀಪದ ಮೆಹ್ರೌಲಿಯಲ್ಲಿ .

II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ :

1.ಕಾಳಿದಾಸನ ಯಾವುದಾದರೂ ಎರಡು ಕೃತಿಗಳನ್ನು ತಿಳಿಸಿ .

ವಿಕ್ರಮೋರ್ವಶೀಯ , ಮೇಘದೂತ ,

2. ಗುಪ್ತರ ಇತಿಹಾಸ ತಿಳಿಯಲು ಸಹಾಯಕವಾಗಿರುವ ಯಾವುದಾದರೂ ಎರಡು ಮೂಲಾಧಾರಗಳನ್ನು ತಿಳಿಸಿ .

  • ಸಮುದ್ರಗುಪ್ತನ ಅಲಹಾಬಾದ್ ಸ್ತಂಭಶಾಸನ .
  • ಕಾಳಿದಾಸನ ಕೃತಿಗಳು .

3. ಸಮುದ್ರಗುಪ್ತನಿಂದ ಸೋಲಿಸಲ್ಪಟ್ಟ ಯಾರಾದರೂ ಇಬ್ಬರು ಉತ್ತರ ಭಾರತದ ರಾಜರುಗಳನ್ನು ಹೆಸರಿಸಿ .

ನಂದಿ ಬಾಲವರ್ಮ , ನಾಗದತ್ತ .

4. ಗುಪ್ತರ ಎರಡು ರಾಜಧಾನಿಗಳು ಯಾವುವು ?

ಪಾಟಲೀಪುತ್ರ , ಉಜ್ಜಯಿನಿ .

5. ಸಮುದ್ರಗುಪ್ತನ ದಿಗ್ವಿಜಯಗಳನ್ನು ವಿವರಿಸುವ ಶಾಸನ ಯಾವುದು ?

ಅಲಹಾಬಾದ್ ಸ್ತಂಭಶಾಸನ , ಇದನ್ನು ರಚಿಸಿದವರು ಸಮುದ್ರಗುಪ್ತನ ದಂಡನಾಯಕ ಹಾಗೂ ಆಸ್ತಾನ ಕವಿಯಾದ ಹರಿಸೇನ .

6. ಗುಪ್ತರ ಕಾಲದ ಇಬ್ಬರು ಪ್ರಮುಖ ಕವಿಗಳನ್ನು ಹೆಸರಿಸಿ .

ಕಾಳಿದಾಸ , ಅಮರಸಿಂಹ .

7 . ಫಾಹಿಯಾನ್ ಯಾರು ? ಅವನು ಏಕೆ ಭಾರತಕ್ಕೆ ಬಂದನು ?

ಫಾಹಿಯಾನ್ ಒಬ್ಬ ಚೀನೀ ಯಾತ್ರಿಕ , ಬೌದ್ಧಧರ್ಮದ ತತ್ವಗಳನ್ನು ಅಧ್ಯಯನ ಮಾಡುವ ಸಲುವಾಗಿ ಭಾರತಕ್ಕೆ ಬಂದನು .

8. ಸಮುದ್ರಗುಪ್ತನಿಂದ ಸೋಲಿಸಲ್ಪಟ್ಟ ಯಾರಾದರೂ ಇಬ್ಬರು ದಕ್ಷಿಣ ಭಾರತದ ರಾಜರುಗಳನ್ನು ಹೆಸರಿಸಿ.

ಕೋಸಲ ಮಹೇಂದ್ರ , ದೇವರಾಷ್ಟ್ರದ ಕುಬೇರ .

9. ಗುಪ್ತರ ಕಾಲದ ಯಾವುದಾದರೂ ಎರಡು ಹೆಸರಾಂತ ವಿಶ್ವವಿದ್ಯಾನಿಲಯಗಳನ್ನು ಹೆಸರಿಸಿ .

ತಕ್ಷಶಿಲ , ನಳಂದ

10. ವರಾಹಮಿಹಿರನ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ .

ಪಂಚಸಿದ್ಧಾಂತಿಕ , ಬೃಹತ್ಸಂಹಿತೆ .

11. ಗುಪ್ತರ ಕಾಲದ ಯಾವುದಾದರೂ ಎರಡು ವಾಸ್ತುಶಿಲ್ಪದ ಕೇಂದ್ರಗಳನ್ನು ಹೆಸರಿಸಿ .

ಮಥುರಾ , ಉದಯಗಿರಿ ,

III . ಕೆಳಗಿನ ಪ್ರಶ್ನೆಗೆ 15-20 ವಾಕ್ಯಗಳಲ್ಲಿ ಉತ್ತರಿಸಿ .

2nd Puc History Chapter 4.5 Question Answer in Kannada

1. ಸಮುದ್ರಗುಪ್ತನ ದಿಗ್ವಿಜಯಗಳನ್ನು ವಿವರಿಸಿ .

ಸಮುದ್ರಗುಪ್ತನು ಗುಪ್ತ ಸಂತತಿಯ ಪ್ರಸಿದ್ದ ದೊರೆ . ಅಲಹಾಬಾದ್‌ನ ಸ್ತಂಭ ಶಾಸನವು ಈತನ ದಿಗ್ವಿಜಯಗಳನ್ನು ವಿವರಿಸುತ್ತದೆ . ಈತನ ದಿಗ್ವಿಜಯಗಳನ್ನು ನಾಲ್ಕು ಭಾಗವಾಗಿ ವಿಂಗಡಿಸಬಹುದು .

1. ಉತ್ತರ ಭಾರತದ ದಂಡಯಾತ್ರೆ :

ಈತನು ಪ್ರಾರಂಭದ ದಿನಗಳನ್ನು ಆರ್ಯಾವರ್ತ ‘ ಎನ್ನಲಾಗುವ ಗಂಗಾನದಿ ಬಯಲಿನ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳಲು ವಿನಿಯೋಗಿಸಿ 9 ಜನ ಅರಸರಾದ ನಂದಿಬಾಲವರ್ಮ , ಚಂದ್ರವರ್ಮನ್ , ನಾಗದತ್ತ , ನಾಗಸೇನ , ಗಣಪತಿನಾಗ , ಅಚ್ಯುತ , ಮಾತಿಲ ಮತ್ತು ರುದ್ರದೇವರನ್ನು ಸೋಲಿಸಿದನು.ಇದನ್ನು ‘ ದಿಗ್ವಿಜಯ ‘ ಎಂದು ಕರೆದನು .

2. ಅರಣ್ಯ ರಾಜ್ಯಗಳ ಆಕ್ರಮಣ :

ವಿಂಧ್ಯಪರ್ವತ ( ಮಧ್ಯಭಾರತ ) ದ ಅರಣ್ಯ ರಾಜ್ಯಗಳಾದ ಜಬ್ಬಲ್‌ಪುರ , ರೇವಾ , ನಾಗಪುರ ಮತ್ತು ಬಾಫೇಲ್ ಖಂಡಗಳನ್ನು ಆಕ್ರಮಿಸಿಕೊಂಡನು .

3. ದಕ್ಷಿಣ ಭಾರತದ ದಂಡಯಾತ್ರೆ :

ಈತನ ಸೈನ್ಯ ಸುಮಾರು 3.000 ಮೈಲುಗಳನ್ನು ಕ್ರಮಿಸಿ ದಕ್ಷಿಣ ಭಾರತದ 12 ರಾಜರುಗಳಾದ ಕೋಸಲದ ಮಹೇಂದ್ರ , ಮಹಾಕಾಂತರದ ವ್ಯಾರ್ಘರಾಜ , ಕೌರಾಲದ ಮಂಟರಾಜ , ಪಿಸ್ತಪುರದ ಮಹೇಂದ್ರ , ಕೊಟ್ಟೂರದ ಸ್ವಾಮಿದತ್ತ , ಯರಾಂಡಪಲ್ಲಿಯ ದಮನ , ಕಂಚಿಯ ವಿಷ್ಣುಗೋಪ , ವೆಂಗಿಯ ಹಸ್ತಿವರ್ಮ , ಅವಮುಕ್ತದ ನೀಲರಾಜ , ಫಲಕ್ಕಾಡದ ಉಗ್ರಸೇನ , ದೇವರಾಷ್ಟ್ರದ ಕುಬೇರ , ಕುಸ್ತಲಾಪುರದ ಧನಂಜಯರನ್ನು ಸೋಲಿಸಿ ಅವರನ್ನು ಅವರ ಸ್ಥಾನದಲ್ಲಿಯೇ ಪುನರ್‌ನೇಮಿಸಿ , ಸಾಮಂತರನ್ನಾಗಿ ಮಾಡಿಕೊಂಡು ಕಪ್ಪ ಕಾಣಿಕೆಗಳನ್ನು ಸ್ವೀಕರಿಸಿದನು . ಇದನ್ನು ಅವನು ‘ ಧರ್ಮ ವಿಜಯ ‘ ಎಂದು ಕರೆದನು .

4. ಗಡಿರಾಜ್ಯಗಳ ಮೇಲಿನ ಆಕ್ರಮಣ :

ಗಡಿರಾಜ್ಯಗಳಾದ ಅಸ್ಸಾಮಿನ ಕಾಮರೂಪ , ಬಂಗಾಳದ ಸಮತಟ , ಪಂಜಾಬಿನ ಕರ್ತಿಪುರ ಮತ್ತು ರೋಹಿತ್ ಖಂಡವನ್ನು ಆಕ್ರಮಿಸಿದನು . ಈತನ ಸಾಮ್ರಾಜ್ಯವು ಉತ್ತರದಲ್ಲಿ ರ ಕಾಶ್ಮೀರದಿಂದ , ದಕ್ಷಿಣದಲ್ಲಿ ತಮಿಳುನಾಡಿನವರೆಗೆ , ಪೂರ್ವದಲ್ಲಿ ಬಂಗಾಳದಿಂದ ಪಶ್ಚಿಮದಲ್ಲಿ ಪಂಜಾಬಿನವರೆಗೆ ಹಬ್ಬಿತ್ತು .

2nd Puc History Guptaru Notes Pdf

IV . ಕೆಳಗಿನ ಪ್ರಶ್ನೆಗೆ 30-40 ವಾಕ್ಯಗಳಲ್ಲಿ ಉತ್ತರಿಸಿ .

1. ಗುಪ್ತರ ಕಾಲವನ್ನು ಭಾರತದ ಇತಿಹಾಸದಲ್ಲಿ ಸುವರ್ಣ ಯುಗ ‘ ಎಂದು ಏಕೆ ಕರೆಯುತ್ತಾರೆ ?

ಭಾರತೀಯ ಇತಿಹಾಸದಲ್ಲಿ ಗುಪ್ತರ ಕಾಲವು ಸರ್ವಾಂಗೀಣ ಅಭಿವೃದ್ಧಿಯಿಂದಾಗಿ ‘ ಸುವರ್ಣಯುಗ ಎಂದೆನಿಸಿಕೊಂಡಿದೆ . ಯೂರೋಪಿನ ಬರಹಗಾರರು ಈ ಕಾಲವನ್ನು ಗ್ರೀಕ್‌ನ ಪೆರಿಕ್ಲಸ್ , ರೋಮ್‌ನ ಅಗಸ್ಟಸ್ ಸೀಜರ್ ಹಾಗೂ ಇಂಗ್ಲೆಂಡಿನ ರಾಣಿ ಎಲಿಜೆಬತ್ ಕಾಲಕ್ಕೆ ಹೋಲಿಸಿದ್ದಾರೆ . ಧರ್ಮ , ಶಿಕ್ಷಣ , ಸಾಹಿತ್ಯ , ಕಲೆ ಮತ್ತು ವಾಸ್ತುಶಿಲ್ಪ , ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅವರ ಸಾಧನೆ ಅಸಾಮಾನ್ಯವಾಗಿದೆ .

ಹಿಂದೂ ಧರ್ಮದ ಪುನರುತ್ಥಾನ :

ಗುಪ್ತ ಸಾಮ್ರಾಟರು ಹಿಂದೂ ಧರ್ಮದ ಅನುಯಾಯಿಗಳಾಗಿದ್ದು , ಬೇರೆ ಧರ್ಮಗಳಾದ ಜೈನ ಮತ್ತು ಬೌದ್ಧ ಧರ್ಮದ ಏಳಿಗೆಗೆ ಕಾರಣವಾದರು . ವಿಷ್ಣು , ಶಿವ ಮತ್ತು ದುರ್ಗಾ ಆರಾಧನೆ ತುಂಬಾ ಜನಪ್ರಿಯವಾಗಿತ್ತು . ವೈದಿಕ ವಿಧಗಳಾದ ಅಶ್ವಮೇಧ , ವಾಜಪೇಯ ಮತ್ತು ವಿಧಿ ವಿಧಾನ ಸಂಪ್ರದಾಯಗಳನ್ನು ಆಚರಿಸಿದರು . ಇವರ ಅವಧಿಯಲ್ಲಿ ಅನೇಕ ವಿಷ್ಣು ದೇವಾಲಯಗಳನ್ನು ನಿರ್ಮಿಸಲಾಯಿತು .

ಶಿಕ್ಷಣ :

ರಾಜರು ಸ್ವತಃ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರಾಗಿದ್ದು ಅನೇಕ ವಿಶ್ವವಿದ್ಯಾನಿಲಯಗಳು ಸ್ಥಾಪಿಸಲ್ಪಟ್ಟು ಇವು ದೇಶೀಯರಲ್ಲದೆ ವಿದೇಶಿ ವಿದ್ಯಾರ್ಥಿಗಳನ್ನೂ ಆಕರ್ಷಿಸಿದವು . ತಕ್ಷಶಿಲ , ನಳಂದ , ಅಜಂತ ಮತ್ತು ಸಾರನಾಥಗಳು ಗುಪ್ತರ ಹೆಸರಾಂತ ವಿಶ್ವವಿದ್ಯಾನಿಲಯಗಳಾಗಿದ್ದವು . ಪಾಟಲೀಪತ ಮತ್ತು ವಲ್ಲಭಿ ಪ್ರಸಿದ್ದ ಶಿಕ್ಷಣ ಕೇಂದ್ರಗಳಾಗಿದ್ದವು . ಮುಖ್ಯ ವಿಷಯಗಳಾದ ಪುರಾಣಗಳು , ಸಾಹಿತ್ಯ , ತತ್ವಶಾಸ್ತ್ರ , ಅಂಕಗಣಿತ , ಖಗೋಳಶಾಸ್ತ್ರ ಮತ್ತು ವಿಜ್ಞಾನ ಪ್ರಮುಖವಾಗಿ ಬೋಧಿಸಲ್ಪಡುತ್ತಿದ್ದವು .

ಸಾಹಿತ್ಯ :

ಶ್ಲೋಕ ರೂಪದಲ್ಲಿದ್ದ ವೇದಗಳನ್ನೊಳಗೊಂಡಂತೆ ಧಾರ್ಮಿಕ ಸಾಹಿತ್ಯವನ್ನು ಗುಪ್ತರ ಅವಧಿಯಲ್ಲಿ ಬರವಣಿಗೆಯ ರೂಪಕ್ಕೆ ತರಲಾಯಿತು . ಗುಪ್ತರ ಯುಗವನ್ನು ‘ ಸಂಸ್ಕೃತ ಸಾಹಿತ್ಯದ ಸುವರ್ಣಯುಗ ‘ ಎಂದು ಕರೆಯಲಾಗಿದೆ . ಸಮುದ್ರಗುಪ್ತನು ಕವಿಗಳಲ್ಲಿ ರಾಜನೆಂದು ಅಲಹಾಬಾದ್ ಶಾಸನಗಳಲ್ಲಿ ವಿವರಿಸಲಾಗಿದೆ . ಅವನೊಬ್ಬ ಶ್ರೇಷ್ಠ ಸಂಗೀತಗಾರ ಮತ್ತು ಪ್ರಸಿದ್ದ ವೇದ ವಿದ್ವಾಂಸನಾಗಿದ್ದನು . ಎರಡನೇ ಚಂದ್ರಗುಪ್ತನ ಆಸ್ಥಾನದಲ್ಲಿ ‘ ನವರತ್ನ ‘ ರಿದ್ದರು . ಇವರಲ್ಲಿ ಕಾಳಿದಾಸನು ಪ್ರಾಚೀನ ಭಾರತದ ಶ್ರೇಷ್ಠ ಕವಿ ಹಾಗೂ ನಾಟಕಗಾರನಾಗಿದ್ದನು . ಅವನು ಮಾಳವಿಕಾಗ್ನಿ ಮಿತ್ರ , ವಿಕ್ರಮೋರ್ವಶೀಯ ಮತ್ತು ಶಕುಂತಲ ಎಂಬ ಪ್ರಸಿದ್ಧ ನಾಟಕಗಳನ್ನು , ರಘುವಂಶ ಮತ್ತು ಕುಮಾರಸಂಭವ ಎಂಬ ಮಹಾಕಾವ್ಯಗಳನ್ನು ಹಾಗೂ ಮೇಘದೂತ ಮತ್ತು ಋತುಸಂಹಾರ ಎಂಬ ಗೀತಾಕಾವ್ಯಗಳನ್ನು ಬರೆದಿದ್ದಾನೆ . ವರಹಮೀರ – ಬೃಹತ್‌ಸಂಹಿತೆ , ಘಟಕರ್ಪಣ – ಘಟಕ ಪೇರಣಕಾವ್ಯ , ವರರುಚಿ – ವ್ಯಾಕರಣ , ಅಮರಸಿಂಹ , ಅಮರಕೋಶ , ಧನ್ವಂತ್ರಿ , ಆಯುರ್ವೇದ ನಿಘಂಟು , ಶಂಕು , ಶಿಲ್ಪಶಾಸ್ತ್ರ , ವಿಷ್ಣುಶರ್ಮ – ಪಂಚತಂತ್ರ , ಚರಕ – ಚರಕಸಂಹಿತೆ , ಸುಶ್ರತ – ಸುಶೃತ ಸಂಹಿತೆ , ಹೀಗೆ ಹಲವಾರು ಮಹಾನ್ ಕವಿಗಳು ಕೃತಿಗಳನ್ನು ರಚಿಸಿದ್ದಾರೆ .

ವಿಜ್ಞಾನ ಮತ್ತು ತಂತ್ರಜ್ಞಾನ :

ವಿಜ್ಞಾನ , ಗಣಿತ , ಖಗೋಳಶಾಸ್ತ್ರ , ವೈದ್ಯಶಾಸ್ತ್ರ ಮತ್ತು ಲೋಹಶಾಸ್ತ್ರಗಳಲ್ಲಿ ಅದ್ಭುತ ಪ್ರಗತಿ ಸಾಧಿಸಲಾಗಿತ್ತು . ಆರ್ಯಭಟನು ಈ ಕಾಲದ ಶ್ರೇಷ್ಠ ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿಯಾಗಿದ್ದನು . ಅವನು ತನ್ನ ಗ್ರಂಥ ‘ ಸೂರ್ಯಸಿದ್ಧಾಂತದಲ್ಲಿ ‘ ಭೂಮಿಯು ತನ್ನ ಅಕ್ಷದ ಮೇಲೆ ಹೇಗೆ ಸುತ್ತುತ್ತದೆ ಹಾಗೂ ಚಂದ್ರ ಮತ್ತು ಸೂರ್ಯ ಗ್ರಹಣಗಳು ಹೇಗೆ ಸಂಭವಿಸುತ್ತವೆ ಎಂದು ಚರ್ಚಿಸಿದ್ದಾನೆ . ‘ ಆರ್ಯಭಟೀಯ ‘ ಅವನ ಇನ್ನೊಂದು ಕೃತಿಯಾಗಿದೆ . ಅವನು ತನ್ನ ಈ ಕೃತಿಯಲ್ಲಿ ದಶಮಾಂಶ ಪದ್ಧತಿಯ ಬಗ್ಗೆ ವಿವರಿಸಿದ್ದಾನೆ . ಬ್ರಹ್ಮಗುಪ್ತ ಇನ್ನೊಬ್ಬ ಗಣಿತಶಾಸ್ತ್ರಜ್ಞ , ಅವನು ಶೂನ್ಯದ ಪ್ರಾಮುಖ್ಯತೆಯನ್ನು ತಿಳಿಸಿದ್ದಾನೆ .

ವರಹಾಮಿಹಿರ ಈ ಕಾಲದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬನಾಗಿದ್ದಾನೆ . ಅವನು ‘ ಪಂಚಸಿದ್ಧಾಂತಿಕ ‘ ‘ ಬೃಹತ್ ಜಾತಕ ‘ ಮತ್ತು ‘ ಲಘು ಜಾತಕ ‘ ಗಳನ್ನು ಬರೆದಿದ್ದಾನೆ . ಇವನು ಖಗೋಳಶಾಸ್ತ್ರ , ಜೀವಶಾಸ್ತ್ರ , ಗಣಿತ ಮತ್ತು ಭೂಗೋಳಶಾಸ್ತ್ರಗಳಲ್ಲಿ ಪಂಡಿತನಾಗಿದ್ದನು . ಬೃಹತ್ ಸಂಹಿತೆಯು ಆಕಾಶಕಾಯಗಳ ಚಲನೆಯನ್ನು ಕುರಿತು ವಿವರಿಸುತ್ತದೆ . ವೈದ್ಯಕೀಯ ಕ್ಷೇತ್ರದಲ್ಲಿ ಚರಕ ಮತ್ತು ಸುಶ್ರುತರು ಸಂಹಿತೆಗಳನ್ನು ರಚಿಸಿದ್ದಾರೆ . ಧನ್ವಂತರಿಯನ್ನು “ ಭಾರತೀಯ ವೈದ್ಯಶಾಸ್ತ್ರದ ಪಿತಾಮಹ ‘ [ ಆಯುರ್ವೇದ ಎಂದು ಕರೆಯಲಾಗಿದೆ . ವಾಫ್‌ಘಟನು ‘ ಅಷ್ಟಾಂಗ ಸಂಗ್ರಹ ‘ ವನ್ನು ಬರೆದಿದ್ದಾನೆ . ದೆಹಲಿಯ ಸಮೀಪದ ಮೆಹೌಲಿಯಲ್ಲಿ ಸಂಶೋಧಿಸಲ್ಪಟ್ಟಿರುವ ಕಬ್ಬಿಣದ ಸಂಭವು ಅವರ ಲೋಹಶಾಸ್ತ್ರ ಕೌಶಲ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ .

ಕಲೆ ಮತ್ತು ವಾಸ್ತುಶಿಲ್ಪ :

ಭಾರಿತೀಯ ದೇವಾಲಯ ವಾಸ್ತುಶಿಲ್ಪದ ಮೂಲ ರಚನಾತ್ಮಕ ಲಕ್ಷಣಗಳು ಗುಪ್ತರ ಕಾಲದಲ್ಲಿ ಅಭಿವೃದ್ಧಿ ಯಾಯಿತು . ಮಥುರಾ , ಬನಾರಸ್ , ಪಾಟ್ನಾ , ಉದಯಗಿರಿ , ದೇವಗಡ ಮುಂತಾದವುಗಳು ಅವರ ಕಾಲದ ಪ್ರಮುಖ ಕಲಾಚಟುವಟಿಕೆಯ ಕೇಂದ್ರಗಳಾಗಿದ್ದವು . ದೇವಗಡ್‌ನ ದಶಾವತಾರ ದೇವಾಲಯವು ಗುಪ್ತರ ಕಾಲದ ಮೊದಲ ದೇವಾಲಯವಾಗಿದೆ . ಭೂಮಾರದ ಶಿವದೇವಾಲಯ ಮತ್ತು ಬಿಟ್ಟಿರ್‌ಗಾಂವ್‌ನ ಇಟ್ಟಿಗೆ ದೇವಾಲಯ ಗುಪ್ತರ ಇತರ ದೇವಾಲಯಗಳಾಗಿವೆ . ಗುಪ್ತರ ಅವಧಿಯಲ್ಲಿ ಅನೇಕ ಬುದ್ಧನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ . ಸುಲ್ತಾನ್‌ಗಂಜ್‌ನ ಅಡಿ ಎತ್ತರದ ಸುಂದರವಾದ ಬುದ್ಧನ ವಿಗ್ರಹವು ಈಗ ಬರ್ಮಿಂಗ್ ಹ್ಯಾಮ್‌ನ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲ್ಪಟ್ಟಿದೆ .

ಗುಪ್ತರು ಚಿತ್ರಕಲೆಗೆ ವಿಶೇಷವಾದ ಪ್ರೋತ್ಸಾಹ ನೀಡಿದರು . ಗುಪ್ತರ ವರ್ಣಕಲೆಯ ಅತ್ಯುತ್ತಮ ಉದಾ ಹರಣೆಗಳು ಗ್ವಾಲಿಯರ್ ಸಮೀಪದ ಬಾಗ್‌ನ ಗೋಡೆಗಳ ಮೇಲಿವೆ . ಗುಪ್ತ ಅರಸರು ಅಜಂತದಲ್ಲಿ ಅನೇಕ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದ್ದಾರೆ . 635 ಗುಪ್ತರ ಕಾಲದ ಕಲಾವಿದರು ಬುದ್ಧನ ಜೀವನಕ್ಕೆ ಸ ೦ ಬ ೦ ಧಪಟ್ಟ ಚಿತ್ರಗಳನ್ನು ಚಿತ್ರಿಸಿದ್ದಾರೆ . 17 ನೇ ಗುಹೆಯಲ್ಲಿರುವ ‘ ತಾಯಿ ಮಗು ‘ ವರ್ಣ ಚಿತ್ರ ತುಂಬಾ ನೈಜತೆ ಮತ್ತು ಸುಂದರವಾಗಿದ್ದು , ಇದು ಅಜಂತಾ ಚಿತ್ರಕಲೆಗಳಲ್ಲಿ ಅತ್ಯಂತ ಶ್ರೇಷ್ಟವಾಗಿದೆ .

ಹೆಚ್ಚುವರಿ ಪ್ರಶ್ನೋತ್ತರಗಳು:

2nd Puc History Chapter 4.5 Mcq Questions

1. ಸಮುದ್ರಗುಪ್ತನ ಪ್ರಸಿದ್ದ ದಂಡನಾಯಕನ ಹೆಸರೇನು ?

ಹರಿಸೇನ

2. ‘ ಅಶ್ವಮೇಧ ಪರಾಕ್ರಮ ‘ ಇದು ಯಾರ ಬಿರುದು ?

ಸಮುದ್ರಗುಪ್ತ

3 . ‘ ಆಯುರ್ವೇದ ನಿಘಂಟು ‘ ಈ ಕೃತಿ ಯಾರದು ?

ಧನ್ವಂತರಿ

4 . ಪಂಚತಂತ್ರವನ್ನು ರಚಿಸಿದವನಾರು ?

ವಿಷ್ಣುಶರ್ಮ

5. ಮೌರ್ಯರ ನಂತರ ಭಾರತದಲ್ಲಿ ಬಲಿಷ್ಠವಾದ ರಾಜಪ್ರಭುತ್ವವನ್ನು ಏರ್ಪಡಿಸಿದವರಾರು ?

ಗುಪ್ತರು

6. ಶ್ರೀಗುಪ್ತನ ಮಗನಾರು ?

ಘಟೋತ್ಕಚ ಗುಪ್ತ

7. ಸಮುದ್ರಗುಪ್ತನ ತಾಯಿಯ ಹೆಸರೇನು ?

ಕುಮಾರದೇವಿ

FAQ

1 . ಗುಪ್ತ ಸಂತತಿಯ ಸ್ಥಾಪಕ ಯಾರು ?

ಶ್ರೀಗುಪ್ತ

2. ಕಾವ್ಯಮೀಮಾಂಸೆಯ ಕತೃ ಯಾರು ?

ರಾಜಶೇಖರ

3. ಗುಪ್ತವಂಶದ ಶ್ರೇಷ್ಠ ದೊರೆ ಯಾರು ?

ಸಮುದ್ರಗುಪ್ತ

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

Leave a Reply

Your email address will not be published. Required fields are marked *