ದ್ವಿತೀಯ ಪಿ.ಯು.ಸಿ ಹಬ್ಬಲಿ ಅವರ ರಸಬಳ್ಳಿ ಕನ್ನಡ ಸಾರಾಂಶ | 2nd PUC Habbali Avara Rasaballi Kannada Summary

ಹಬ್ಬಲಿ ಅವರ ರಸಬಳ್ಳಿ ಕನ್ನಡ ಪದ್ಯದ ಸಾರಾಂಶ, 2nd Puc Kannada Poems Summary Habbali Avara Rasaballi Kannada Summary Pdf Download 2022

ತರಗತಿ : ದ್ವಿತೀಯ ಪಿ.ಯು.ಸಿ

ಪದ್ಯದ ಹೆಸರು : ಹಬ್ಬಲಿ ಅವರ ರಸಬಳ್ಳಿ

2nd Puc Kannada Poems Summary | ಹಬ್ಬಲಿ ಅವರ ರಸಬಳ್ಳಿ ಪದ್ಯದ ಸಾರಾಂಶ

2nd Puc Kannada Poems Summary

ಶ್ರೀಮಂತಿಕೆ ಬಂದಾಗ ಬಂಗಾರದ ಬಳೆಯನ್ನು ಕೈಗೆ ತೊಟ್ಟು , ಬಡತನ ದಲ್ಲಿರುವವರ ಅಸಹಾಯಕತೆಯನ್ನು ನಿಂದಿಸಬಾರದು , ಬೈಯಬಾರದು . ಬಂಗಾರ ಯಾರಲ್ಲೂ ಸ್ಥಿರವಾಗಿರುವುದಿಲ್ಲ . ಅದು ಬಂದಷ್ಟೇ ವೇಗವಾಗಿ ನಮ್ಮಿಂದ ದೂರಾಗ ಬಹುದು . ಮಧ್ಯಾಹ್ನದ ಬಿಸಿಲು ಸ್ವಲ್ಪ ಹೊತ್ತು ಇರುತ್ತದೆ , ಬಿಸಿಲಿಳಿದು ನೆರಳು ಬರುವಂತೆ , ಶ್ರೀಮಂತಿಕೆ ಹೋಗಿ ಮತ್ತೆ ಬಡತನವು ಬರಬಹುದು . ಹೀಗಿರುವಾಗ ಶ್ರೀಮಂತಿಕೆ ಇದೆಯೆಂದು ಬೀಗಿ ಬಡವರನ್ನು ಬಯ್ಯುವುದು ಸರಿಯಲ್ಲ . ಶ್ರೀಮಂತಿಕೆ ಅಶಾಶ್ವತವೆಂದು ತಿಳಿದಿದ್ದರೂ ಬೀಗುವುದೇಕೆಂದು ಜಾನಪದರು ಪ್ರಶ್ನಿಸಿದ್ದಾರೆ .

“ ಬಡತನದಿಂದ ಬಳಲಿದಾಗ , ಆ ಬಳಲಿಕೆಯನ್ನು ಚಿಕ್ಕಮಕ್ಕಳನ್ನು ಬೈಯ್ಯುವುದು ಹೊಡೆಯುವುದರ ಮೂಲಕ ತೀರಿಸಿಕೊಳ್ಳಬಾರದು . ಹೊರಗೆ ಓಡಾಡಿ – ಆಡಿ ಬಂದ ಮಕ್ಕಳು ತಾಯಿ ಮಡಿಲಿಗೆ ಬಂದಾಗ ಎಲ್ಲಾ ಬಳಲಿಕೆಯು ದೂರವಾಗುವುದು . ಬಡತನದ ಕೊರಗು ಮಾಯವಾಗುವುದು ‘ ಎಂಬುದಾಗಿ ತಿಳಿಸುತ್ತಾ ತಾಯಿಯ ಮಮತೆಯನ್ನು ಇಲ್ಲಿ ವಿವರಿಸಲಾಗಿದೆ .

ಸಹವಾಸವೆಂಬುದು ತುಂಬ ಮುಖ್ಯ . ನಾವು ಯಾರೊಂದಿಗೆ ಸ್ನೇಹ ಬೆಳೆಸುತ್ತೇವೆನ್ನುವುದರ ಮೇಲೆ ನಮ್ಮ ವ್ಯಕ್ತಿತ್ವದ ಬೆಳವಣಿಗೆ ಅವಲಂಬಿಸಿರುತ್ತದೆ . ಆದ್ದರಿಂದ ಜಾನಪದರು ಉತ್ತಮರ ಗೆಳೆತನ ಮಾಡಿದರೆ ನಮ್ಮ ವ್ಯಕ್ತಿತ್ವಕ್ಕೆ ಅಪ್ಪಟ ಬಂಗಾರದ ಬೆಲೆ ಲಭಿಸುತ್ತದೆ . ಅದನ್ನು ಬಿಟ್ಟು ಬುದ್ಧಿಹೀನರೊಂದಿಗೆ ಗೆಳೆತನ ಮಾಡಿದರೆ ನಾವು ಹಿತ್ತಾಳೆ ಎಂಬ ಲೋಹಕ್ಕಿಂತಲೂ ಬಲುಹೀನರಾಗುತ್ತೇವೆ ಎಂದಿದ್ದಾರೆ . ಉತ್ತಮರ ಗೆಳೆತನ ಮುಖ್ಯ ಎಂಬ ಆಶಯವಿಲ್ಲಿದೆ .

ನಮ್ಮ ಜೀವನ ಕಾಲದಲ್ಲಿ ಎಲ್ಲರೊಡನೆ ಬೆರೆತು , ಕೈಲಾದ ಸಹಾಯ ಮಾಡುತ್ತ ಸವಿಯಾದ ಮಾತುಗಳನ್ನಾಡುತ್ತಾ ಹೊಂದಿಕೊಂಡು ಬಾಳ ಬೇಕು . ಇದರಿಂದ ಆ ಶಿವನು ನಮ್ಮನ್ನು ಮೆಚ್ಚುವನು . ಇಂಥಹ ವ್ಯಕ್ತಿಯನ್ನು ಬದುಕಿರುವಾಗ ಮಾತ್ರವಲ್ಲ ಸತ್ತಾಗಲೂ ಬಾಯಿ ತುಂಬಾ ಹೊಗಳಿಕೊಂಡಾಡವರು . ಇದೇ ನಿಜವಾದ ಸಾರ್ಥಕ ಜೀವನವಾಗಿರುತ್ತದೆ ಎಂಬ ನೈತಿಕತೆಯು ಈ ಜನಪದದಲ್ಲಿ ಮೂಡಿಬಂದಿದೆ .

ನಾವು ವಾಸಮಾಡುವ ಸ್ಥಳವು ಅಂದರೆ ನಮ್ಮ ನೆರೆಹೊರೆಯವರು ಒಳ್ಳೆಯ ನಡೆಯುಳ್ಳವರಾಗಿ , ಬುದ್ಧಿವಂತರಾಗಿ , ಹೊಂದಿಕೊಂಡು ಹೋಗುವ ಗುಣವುಳ್ಳವರಾಗಿರಬೇಕು , ನೆರೆಹೊರೆಯವರು ಕುಲಗೇಡಿಗಳಾದರೆ ಶಾಂತಿ ನೆಮ್ಮದಿ ಸುಖ ಎಲ್ಲವನ್ನು ಕಳೆದುಕೊಳ್ಳುವುದರ ಜೊತೆಗೆ ನಮ್ಮನ್ನೆ ಕಳೆದುಕೊಳ್ಳುತ್ತೇವೆ ಎಂಬ ಬುದ್ಧಿವಾದದ ಜನಪದ ತ್ರಿಪದಿ ಇದಾಗಿದೆ .

ಹುಟ್ಟಿನಿಂದ ಸಾಯುವವರೆಗೂ ಬಡತನದಲ್ಲಿಯೇ ಬೆಂದು ಬಳಲುವ ಬಡವನೊಬ್ಬನು ದೇವರನ್ನು ಕುರಿತು “ ಹುಟ್ಟಿದಾಗಲೂ ಇರಲಿಲ್ಲ . ಸತ್ತು ಹೋಗುವಾಗಲೂ ಏನನ್ನು ಕೊಂಡೊಯ್ಯಲಾರೆ , ಬದುಕುವವರೆಗೂ ಸುಣ್ಣದಂತೆ ಸುಟ್ಟು – ಸುಟ್ಟು ಬದುಕಿದ್ದುದಾಯ್ತು . ಇನ್ನಾದರ ನನ್ನ ಬಗೆಹರಿಸು ‘ ಎಂದು ಕಂಗಾಲಾಗಿ ಬೇಡಿಕೊಳ್ಳುತ್ತಿದ್ದಾನೆ .

ಹೆಣ್ಣು ಮಗಳೊಬ್ಬಳು ತನ್ನ ತವರನ್ನು ನೆನೆಯುತ್ತ ತನ್ನ ತವರನ್ನು ಪವಿತ್ರವಾದ , ತಂಪಾದ , ಬೇವಿನ ಮರಕ್ಕು , ತುಂಬಿ ಹರಿಯುವ ಭೀಮಾನದಿಗೂ ಹೋಲಿಸುತ್ತಾ ಹೀಗೆ ಹೇಳುತ್ತಾಳೆ . “ ಬೇಸಿಗೆ ದಿನಗಳಿಗೆ ಬೇವಿನ ಮರ ಹೇಗೆ ತಂಪು ನೀಡುವುದೋ , ಅದೇ ಭೀಮನದಿ ಜನಗಳಿಗೆ ತಂಪನೆರೆಯುವುದೋ ತನ್ನನ್ನು ಹಡೆದ ಹಡೆದವ್ವಳು ತನ್ನ ತವರನ್ನು ತಂಪಾಗಿರಿಸಿವಳು ಎಂದು ತನ್ನ ಹಡೆದವ್ವನ ಪ್ರೀತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ .

ಅಂತೆಯೇ ತಾಯಿ ತನ್ನ ಮಗುವಿಗೆ ಇತರರ ದೃಷ್ಟಿತಾಗಬಾರದೆಂದು ( ಕಣ್ಣೆಂಜಲು ) ಕಾಡಿಗೆಯನ್ನು ಹಣೆಗೆ ಕೆನ್ನೆಗೆ ಹಚ್ಚಿ ಮಗುವನ್ನು ಕಾಪಾಡುತ್ತಾಳೆ . ಹಾಗೆಯೇ ಎಲೆಯಡಿಕೆಯ ಉಗುಳಿನಿಂದ ಧೂ ಎಂದು ಉಗುಳಿ ದೃಷ್ಟಿ ತೆಗೆದಿರುತ್ತಾಳೆ , ಅವಳಿಟ್ಟ ಕಣ್ಣೆಂಜಲು , ಉಗುಳೆಂಜಲನ್ನು ಉಂಡು ಮಗು ಬೆಳೆಯುತ್ತದಾದ್ದರಿಂದ ಇಲ್ಲಿ ಕವಿಯು ತಾನು ತಾಯಿಯ ಎಂಜಲುಂಡು ಬೆಳೆದೆನೆಂದು ಹೇಳಿಕೊಂಡಿರುವುದನ್ನು ಗಮನಿಸ ಬಹುದು . ತಾಯಿ ಮಕ್ಕಳ ನಡುವೆ ಎಂಜಲಿನ ಭೇದವಿಲ್ಲ . ಬದಲಿಗೆ “ ಎಂಜಲು ‘ ಅವರಿಬ್ಬರನ್ನು ಬಂಧಿಸಿದೆ ಎನ್ನಬಹುದು .

ತಾಯಿಗಿಂತ ದೊಡ್ಡ ಬಂಧು ಇನ್ನೊಬ್ಬರಿಲ್ಲ . ಆದ್ದರಿಂದ ಅವಳ ಸ್ಥಾನವನ್ನು ಬೇರೆ ಯಾರಿಗೂ ತುಂಬಲು ಸಾಧ್ಯವಿಲ್ಲ . ಯಾರಿದ್ದರೂ ತಾಯಿ ಇದ್ದಂತೆ ಆಗುವುದಿಲ್ಲ . ಒಲೆಯೊಳಗೆ ಸಾವಿರ ಕೊಳ್ಳಿ ಧಗಧಗನೆ ಉರಿಯುತ್ತಿರಬಹುದು , ಆದರೆ ಅವು ಮನೆಯನ್ನು ಬೆಳಗುವ ಹಣತೆಯ ಜ್ಯೋತಿಗೆ ಸರಿಸಾಟಿಯಲ್ಲ . ಅದರಂತೆಯೇ ನಮ್ಮ ಬಾಳನ್ನು ತಾನುರಿದು ಬೆಳಗುವ ತಾಯಿಗೆ ಇನ್ಯಾರೂ ಹೋಲಿಕೆಯಾಗರೆಂಬ ತ್ರಿಪದಿಯು ಅತ್ಯಂತ ಸುಂದರವಾಗಿದೆ .

ಹೆಣ್ಣುಮಕ್ಕಳ ದುಃಖವನ್ನು ತಾಯಿ ಮಾತ್ರವೇ ಅರ್ಥಮಾಡಿಕೊಳ್ಳಬಲ್ಲಳು . ತಂದೆಗಾಗಲಿ – ಗಂಡನಿಗಾಗಲಿ ಹೆಣ್ಣುಮಕ್ಕಳ ದುಃಖದ ತೀವ್ರತೆಯ ಅರಿವಾಗುವುದಿಲ್ಲ . ತನ್ನ ತಲೆಯ ಮೇಲಿರುವ ಸರ್ಪದ ವಿಷದ ಬೇಗೆಯ ಅರಿವು ಶಿವನಿಗಾಗುವಂತೆ , ಹೆಣ್ಣಿನ ದುಃಖ ಹೆತ್ತ ತಾಯಿಗೆ ಮಾತ್ರವೇ ಅರ್ಥವಾಗುವುದೆಂದು ಇಲ್ಲಿ ಹೇಳಲಾಗಿದೆ .ಹೆತ್ತ ತಾಯಿಯು ಸದಾ ಸ್ಮರಣೀಯಳು . ಅವಳನ್ನು ನೆನಪಿಸಿಕೊಳ್ಳಲು ಕಾಲದ ಪರಿಮಿತಿಯಿರುವುದಿಲ್ಲ .

ಯಾವ ವೇಳೆ ಯಾವ ಸ್ಥಳದಲ್ಲಾದರೂ ನೆನಪಿಸಿಕೊಳ್ಳಬಹುದು . ಆದರೂ ಇಲ್ಲಿ ಜಾನಪದ ಕವಯಿತ್ರಿಯು ಊರೆಲ್ಲ ಉಂಡು ಮಲಗಿದ ಮೇಲೆ , ಬೆಳ್ಳಿ ಚಿಕ್ಕಿ ಮೂಡುವ ಸಮಯದಲ್ಲಿ ತಾನು ತನ್ನ ಹಡೆದವ್ವನನ್ನು ನೆನೆಯುವುದಾಗಿ ಹೇಳಿದ್ದಾಳೆ . ಬಹುಶಃ ಬಿಡುವಿರದ ದುಡಿತದಲ್ಲಿ ಅವಳಿಗೆ ಸಮಯ ದೊರೆತಿರುವುದಿಲ್ಲ . ಆದ್ದರಿಂದ ಊರೆಲ್ಲ ನಿದ್ರಿಸಿದ ಮೇಲೆ ಏಕಾಂತದಲ್ಲಿ ತಾಯಿಯನ್ನು ನೆನೆವುದಾಗಿ ಹೇಳಿಕೊಂಡಿದ್ದಾಳೆ .

ಹೆಣ್ಣು ಮಕ್ಕಳಿಗೆ ತನ್ನ ಹೆತ್ತವ್ವನ ಮೇಲೆ ಇರುವಷ್ಟು ಮಮಕಾರ ಪ್ರೀತಿ , ಗಂಡು ಮಕ್ಕಳಿಗೆ ಇರದು . ದುಡುಕು ಸ್ವಭಾವದ ಗಂಡು ಮಕ್ಕಳು ಯೋಚಿಸದೆ ಬೈಯಲು ಪಾರಂಭಿಸುತ್ತಾರೆ . ಆಗ ಹೆತ್ತವನಿಗೆ ಎಷ್ಟು ನೋವಾಗಬಹುದು ಎಂಬುದನ್ನು ಹೆಣ್ಣು ಮಗಳೊಬ್ಬಳು ಅರಿತು ಹೆತ್ತವನನ್ನು ಬೈದ ತಮ್ಮನಿಗೆ ಹೇಳುವ ಬುದ್ಧಿಮಾತು ಈ ತ್ರಿಪದಿಯಲ್ಲಿ ಮೂಡಿ ಬಂದಿದೆ – “ ಹೇ ತಮ್ಮ ಹೆತ್ತವ್ವನ ಬೈ ಬ್ಯಾಡ , ನೀನು ಬೈದರೂ ಅವಳು ಏನೂ ಬಾಯ್ದಿಟ್ಟು ಹೇಳುವುದಿಲ್ಲ . ಆದರೆ ಮನದೊಳದೊಳಗೆ ಅದು ಬಹಳ ದಿನಗಳವರೆಗೂ ಕೊರಗುತ್ತಾ ಇರುತ್ತದೆ ಎಂಬುದಾಗಿ ಬುದ್ಧಿವಾದ ಹೇಳುವಳು .

ಜನಪದದಲ್ಲಿ ತಾಯಿಯಿಲ್ಲದ ತವರಿಗೆ ಹೋಗುವ ಮುನ್ನ ಹೆಣ್ಣು ಮಕ್ಕಳು ಯೋಚಿಸುವ ಪರಿ ಇಲ್ಲಿದೆ – ‘ ತಾಯಿಯಲ್ಲದ ತವರಿಗೆ ಎಂದೂ ಹೋಗಬೇಡ . ಅಲ್ಲಿಗೆ ಹೋಗುವುದು , ನೀರಿಲ್ಲದೆ ಕೆರೆಗೆ ಕರು ಬಂದು ಹೋದಂತಾಗುವುದು . ಆದ್ದರಿಂದ ತಾಯಿಲ್ಲದ ತವರಿಗೆ ಹೋಗಬಾರದು ” ಎಂದು ಹೆಣ್ಣು ಮಗಳು ತನ್ನ ಮನಸ್ಸನ್ನು ಸಂತೈಸುವ ಪರಿ ಇದಾಗಿದೆ .

ತಂದೆ – ತಾಯಿಯ ಮಹತ್ವವನ್ನು ಸಾರುವ ಈ ತ್ರಿಪದಿಯಲ್ಲಿ ಜನಪದದ ಸೊಗಡು ಉದಾಹರಣೆಯ ಮೂಲಕ ಬಹಳ ಸೊಗಸಾಗಿ ಮೂಡಿಬಂದಿದೆ – “ ಬಂಗಾರ ಬೆಳ್ಳಿಯ ಉಂಗುರ , ಉಡದಾರ ( ಮಕ್ಕಳಿಗೆ ಸೊಂಟಕ್ಕೆ ಕಟ್ಟುವ ಬೆಳ್ಳಿಯ ಆಭರಣ ) ಮುರಿದೊದರೆ ಮತ್ತೆ ಅದನ್ನು ಸರಿಪಡಿಸಿಕೊಂಡು ಉಪಯೋಗಿಸಬಹುದು . ಹೆಂಡತಿ ಸತ್ತರೆ , ಮತ್ತೊಂದು ಮದುವೆ ಮಾಡಿಕೊಂಡು ಮಡದಿಯೆಂದು ಕರೆತರಬಹುದು . ಆದರೆ ಹೆತ್ತ ತಂದೆ – ತಾಯಿಗಳನ್ನು ಈ ರೀತಿ ತರಲು ಸಾಧ್ಯವೇ ? ” ಎಂದು ಹೇಳಿದ್ದಾರೆ .

ಮದುವೆಯಾಗಿ ಗಂಡನ ಮನೆಗೆ ಬರುವ ಹೆಣ್ಣುಮಗಳೊಬ್ಬಳು ಚಿಕ್ಕಂದಿನಿಂದ ಹಾಲುಂಡು ಬೆಳೆದು ಪ್ರೀತಿಯಿಂದ ಬೆಳೆಸಿದ ತವರಿಗೆ ಏನೆಂದು ಹರಸಲಿ ಎಂದು ಯೋಚಿಸುತ್ತಲೆ ಈ ರೀತಿ ಹರಸುತ್ತಾಳೆ – “ ನನ್ನ ತವರು ಹೊಳೆಯದಂಡೆಯಲ್ಲಿ ಹರಡುವ ಗರಿಕೆಯಂತೆ ಹೆಚ್ಚು ಹೆಚ್ಚು ಹಬ್ಬಲಿ ” ಹೆಚ್ಚು ಹೆಚ್ಚು ಬೆಳೆಯಲಿ ಎಂಬುದಾಗಿ ಹೆಣ್ಣು ಮಗಳು ತುಂಬು ಮನಸ್ಸಿನಿಂದ ಹರಸುತ್ತಾಳೆ .

2nd Puc Kannada Poems Summary Habbali Avara Rasaballi Kannada Summary Pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh