ಬೆಳಗು ಜಾವ ಕನ್ನಡ ಪದ್ಯದ ಸಾರಾಂಶ, 2nd PUC Belagu Java Kannada Summary Saramsha Bhavartha Pdf Belagu Java Summary Download 2022
ತರಗತಿ : ದ್ವಿತೀಯ ಪಿ.ಯು.ಸಿ
ಪದ್ಯದ ಹೆಸರು : ಬೆಳಗು ಜಾವ
ಕೃತಿಕಾರರ ಹೆಸರು : ದ. ರಾ. ಬೇಂದ್ರೆ
Belagu Java Summary Kannada
ದ.ರಾ. ಬೇಂದ್ರೆಯವರ ‘ ಬೆಳಗು ಜಾವ ‘ ಎಂಬ ಈ ಕವಿತೆಯು ಅತ್ಯಂತ ಪ್ರಸಿದ್ಧವಾದ ಗೀತೆಯಾಗಿದೆ . ‘ ಬೆಳಗು ‘ ಎಂಬ ಬೆಳಕು ಉದಯಿಸಿ ನಮ್ಮ ಬಾಳನ್ನು ಬೆಳಗುವುದನ್ನೂ , ಯೌವನವೆಂಬ ಮಾನವ ಜೀವನದ ಬೆಳಗಿನಲ್ಲಿ ಕ್ರಿಯಾಶೀಲರಾಗಿ ಬದುಕಿನ ಸಫಲತೆಯನ್ನು ಅನುಭವಿಸಬೇಕೆಂಬುದನ್ನು ಕವಿ ಸುಂದರವಾಗಿ ಈ ಕವಿತೆಯಲ್ಲಿ ನಿರೂಪಿಸಿದ್ದಾರೆ .
ಸೂರ್ಯೋದಯವಾಗಿದೆ , ಬೆಳಕು ಹರಿದಿದೆ , ಬೇಗ ಏಳು ಎನ್ನುವ ಪರಿಯನ್ನೆ ಕವಿ ವಿಶಿಷ್ಟ ರೀತಿಯಲ್ಲಿ ಮುದ್ದಾಗಿ ಪ್ರೀತಿಯಿಂದ ವರ್ಣಿಸಿದ್ದಾರೆ . ‘ ಏಳು ಚಿನ್ನ , ಬೆಳಕು ಹರಿದಿದೆ . ಪೂರ್ವದಲ್ಲಿ ಸೂರ್ಯನು ಮಾಡಿಬಂದಿದ್ದಾನೆ . ಇರುಳಿನಲ್ಲಿ ಕಾಣುತ್ತಿದ್ದ ನಕ್ಷತ್ರಗಳೆಲ್ಲ , ಸೂರ್ಯನ ಬೆಳಕಿಗೆ ಮಾಯಾವಾಗಿದೆ . ಹಕ್ಕಿಗಳೆಲ್ಲ ಚಿಲಿಪಿಲಿ ಗುಟುತ್ತಾ ಸಾಗಿವೆ . ಮನ್ಮಥನು ಹೂ ಬಾಣಬಿಟ್ಟು ಪ್ರಕೃತಿಯನ್ನು ಎಬ್ಬಿಸಿರುವನೆನೋ ಎಂಬಂತೆ ಎಲ್ಲೆಲ್ಲೂ ಬೆಳಗಿನ ಬೆಳಕು ಚೆಲ್ಲಿದೆ . ರಾತ್ರಿಯಲ್ಲಿ ಕನಸು ಕಾಣುತ್ತಾ ಮಲಗಿದ್ದ ಮಕ್ಕಳನ್ನು ಕವಿ ಎಬ್ಬಿಸಿರುವ ಪರಿ ಅಮೋಘವಾಗಿದೆ . ಮಕ್ಕಳಿರಾ ಹೇಳಿ , ಕಳ್ಳನಿದ್ದೆ ಸಾಕು , ಬೆಳಗಿನ ಈ ಸುಂದರ ವಾತಾವರಣದಲ್ಲಿ ರಸವನ್ನು ಹೀರುತ್ತಾ ನಮ್ಮ ನಮ್ಮ ಕೆಲಸಗಳಲ್ಲಿ ಮಗ್ನರಾಗಿ , ಚಟುವಟಿಕೆಯಿಂದ ಇದ್ದು ತುಂತುಂಬಿ ಬಾಳಬೇಕು , ಏಳಿ , ಬೇಗ ಏಳಿ ಎಂಬುದಾಗಿ ಕವಿ ತಿಳಿಸಿದ್ದಾನೆ .
ಸಾಮಾನ್ಯವಾಗಿ ಕೋಳಿ ಕೂಗಿದಾಗ ಎಲ್ಲರೂ ಬೆಳಗಾಯಿತೆಂದು ಮೇಲೇಳುವುದು ರೂಢಿ . ಆದರೆ ಯುವಕರು ಕೋಳಿ ಕೂಗಿ ಎಷ್ಟೋ ಹೊತ್ತಾದರೂ ಮಲಗಿಯೇ ಇರುವರಾದ್ದರಿಂದ ಕವಿಯು ಯಾವಾಗಲೋ ಕೋಳಿ ಕೂಗಿದ್ದಾಯ್ತು ಎದ್ದೇಳಿ ಎಂದು ಎಚ್ಚರಿಸಿದ್ದಾರೆ . ಎದ್ದ ತಕ್ಷಣ ಏನಾದರೂ ಕುಡಿಯುವ ಪರಿಪಾಠವಿರುವುದರಿಂದ ತಡಮಾಡದೇ ಕುಡಿಯಲು ಪಾನೀಯವನ್ನು ಕೇಳಬೇಕೆಂದು ಕವಿ ಹೇಳಿದ್ದಾರೆ . ಅಲ್ಲದೆ ಬೇಗ ಅಂಗಡಿಯ ಕದವನ್ನು ತೆರೆದು ಜೀವನದ ವ್ಯಾಪಾರದಲ್ಲಿ ತೊಡಗಿ ಸಂಪಾದನೆ ಮಾಡಬೇಕೆಂದು ಎಚ್ಚರಿಸಿದ್ದಾರೆ . ಜೀವನವೆಂಬ ನದಿಗೆ ಪ್ರವಾಹ ಬರಬಹುದು ಎಂದಿ ದ್ದಾರೆ . ಅಂದರೆ ಯಾವಾಗಬೇಕಾದರೂ ಸಾವು ಪ್ರವಾಹದೋಪಾದಿಯಲ್ಲಿ ಬಂದು ನಮ್ಮನ್ನು ಸೆಳೆದೊಯ್ಯಬಹುದು . ಮರಣ ಬಂದ ಮೇಲೆ ಬದುಕಲು ಅವಕಾಶವಿಲ್ಲ . ಸತ್ತವರು ಈ ಭೂಮಿಗೆ ಹಿಂದಿರುಗಿ ಬಾರರು . ಆದ್ದರಿಂದ ಸಾವು ಬರುವ ಮೊದಲು ಯೌವನವನ್ನು ಸಾರ್ಥಕಪಡಿಸಿಕೊಳ್ಳಲು ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ವೆಂಬುದು ಕವಿಯ ಅಭಿಪ್ರಾಯವಾಗಿದೆ .
ಆಕಾಶ ಮತ್ತೆಮತ್ತೆ ಪ್ರಕಾಶಿಸಬಹುದು , ಒಣಗಿದ ಮರ ಮತ್ತೆ ಚಿಗುರಬಹುದು , ಸುಗ್ಗಿಯೂ ಮತ್ತೆಮತ್ತೆ ಬರಬಹುದು , ಬಾರದಿರಬಹುದು . ಆದರೆ ಯೌವನದ ಕಾಲ ಕಳೆದು ಹೋದರೆ ಹಿಂದಿರುಗಿ ಬರುವುದಿಲ್ಲ . ಆದ್ದರಿಂದ ಮುಪ್ಪು ಬಂದು ಆವರಿಸುವ ಚಿಂತೆಯಿರಲಿ , ಯೌವನವು ಇನ್ನೊಮ್ಮೆ ಸಿಗುವುದಿಲ್ಲವೆಂಬ ಎಚ್ಚರವಿರಲಿ . ಈಗ ಹರೆಯ ಇರುವುದರಿಂದ ಉಳಿದೆಲ್ಲ ಚಿಂತೆಯನ್ನು ಬಿಟ್ಟು ದುಡಿಯಲು ಮುಂದಾಗಿ , ಯೌವನದ ಸಾರ್ಥಕತೆಯನ್ನು ಅನುಭವಿಸಬೇಕೆಂದು ಕವಿ ಕರೆಯುತ್ತಿದ್ದಾರೆ .
2nd PUC Belagu Java Kannada Summary Saramsha Bhavartha Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.