rtgh

ದ್ವಿತೀಯ ಪಿ.ಯು.ಸಿ ಬೆಳಗು ಜಾವ ಕನ್ನಡ ನೋಟ್ಸ್‌ | 2 PUC Belagu Java Kannada Notes.

ಬೆಳಗು ಜಾವ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2 PUC Kannada Belagu java Notes Question Answer Pdf Download, Belagu Java Poem In Kannada Notes

ತರಗತಿ : ದ್ವಿತೀಯ ಪಿ.ಯು.ಸಿ

ಪದ್ಯದ ಹೆಸರು : ಬೆಳಗು ಜಾವ

ಕೃತಿಕಾರರ ಹೆಸರು : ದ. ರಾ. ಬೇಂದ್ರೆ

Belagu java Kannada Poem Notes

ದ್ವಿತೀಯ ಪಿ.ಯು.ಸಿ ಬೆಳಗು ಜಾವ ಕನ್ನಡ ನೋಟ್ಸ್‌ , 2 PUC Belagu Java Kannada Notes.

ಕವಿ ಪರಿಚಯ

ದ.ರಾ.ಬೇಂದ್ರೆಯವರ ಸಮಯ ಕ್ರಿ.ಶ. 1896 ರಿಂದ 1981 ರವರೆಗೆ

ದ.ರಾ.ಬೇಂದ್ರೆ ಎಂಬ ಹೆಸರಿನ ಮೂಲಕ ಖ್ಯಾತರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡ ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರು . ಅಂಬಿಕಾತನದತ್ತ ಇವರ ಕಾವ್ಯನಾಮ , ‘ ಸಾಧನಕೇರಿ ‘ ಬೇಂದ್ರೆಯವರ ಕಾವ್ಯಕ್ಕೆ ಪ್ರೇರಣೆ ನೀಡಿ ವಾಸವಾಗಿದ್ದ ಸ್ಥಳ , ಕಲಿತದ್ದು ಮರಾಠಿ ಪರಿಸರದಲ್ಲಾದರೂ ಬರೆದದ್ದು ಕನ್ನಡದಲ್ಲಿ ಧಾರವಾಡದಲ್ಲಿ ಗೆಳೆಯರ ಗುಂಪನ್ನು ಕಟ್ಟಿ , ಸಾಹಿತ್ಯ ವಾತಾವರಣ ಬೆಳೆಯುವಂತೆ ಮಾಡಿದ್ದು ಅವರಿಗಿದ್ದ ಸಾಹಿತ್ಯ ಪ್ರೀತಿಯ ದ್ಯೋತಕ . ಕೃಷ್ಣ ಕುಮಾರಿ , ಗರಿ , ಸಖೀಗೀತ , ಉಯ್ಯಾಲೆ , ನಾದಲೀಲೆ , ಗಂಗಾವತರಣಿ , ನಾಕುತಂತಿ ಮೊದಲಾದ ಇಪ್ಪತ್ತಕ್ಕು ಹೆಚ್ಚು ಕವನ ಸಂಕಲನಗಳನ್ನು , ಹುಚ್ಚಾಟ , ಹೊಸ ಸಂಸಾರ ಮತ್ತು ಇತರ ನಾಟಕಗಳು ಮೊದಲಾದ ನಾಟಕ ಕೃತಿಗಳನ್ನು ಬೇಂದ್ರೆ ರಚಿಸಿದ್ದಾರೆ . ‘ ಸಾಹಿತ್ಯದ ವಿರಾಟ ಸ್ವರೂಪ ‘ ಬೇಂದ್ರೆಯವರ ವಿದ್ವತ್ ಪ್ರತಿಭೆಯನ್ನು ಸಾರುವ ವಿಮರ್ಶಾ ಗ್ರಂಥಗಳಾಗಿವೆ . ಇದಲ್ಲದೆ ಅರವಿಂದರ ಅನೇಕ ಕೃತಿಗಳನ್ನು ಠಾಗೋರ್ , ಕಬೀರ್ ಮೊದಲಾದ ಕವಿಗಳ ಕವಿತೆಗಳನ್ನು ಬೇಂದ್ರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ . 1943 ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಬೇಂದ್ರೆಯವರಿಗೆ 1968 ರಲ್ಲಿ ಪದ್ಮಶ್ರೀ ಪ್ರಶಸ್ತಿಯೂ , 1973 ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿಯೂ ಲಭಿಸಿದೆ .

ಬೇಂದ್ರೆಯವರದು ನವ ನವೋನೈಶಾಲಿನಿಯಾದ ಪ್ರತಿಭೆ , ಉತ್ತರ ಕರ್ನಾಟಕದ ಆಡು ಭಾಷೆಯ ಲಯ , ಶಬ್ದ ಸಂಪತ್ತು , ಗಾದೆ ಮಾತು , ಧ್ವನಿ ಶಕ್ತಿ ಪೂರ್ಣರೂಪದಲ್ಲಿ ಬಳಸಿಕೊಂಡು ಕಾವ್ಯಕ್ಕೆ ಹೊಸ ರೂಪ ಕೊಟ್ಟವರು ಬೇಂದ್ರೆ , ಜಾನಪದ ಲಯ , ಶಬ್ದ ಸಂಪತ್ತು , ಗಾದೆಮಾತು , ಧ್ವನಿಶಕ್ತಿ ಪೂರ್ಣರೂಪದಲ್ಲಿ ಬಳಸಿಕೊಂಡು ಕಾವ್ಯಕ್ಕೆ ಹೊಸರೂಪ ಕೊಟ್ಟವರು ಬೇಂದ್ರೆ , ಜಾನಪದಲಯ , ಗತ್ತಿನ ಮೂಲಕ ನವೋದಯ ಕಾವ್ಯವನ್ನು ಉಚ್ಛಾಯಸ್ಥಿತಿಗೆ ಒಯ್ದವರು . ವ್ಯಕ್ತಿಯ ಬದುಕಿನ , ಸಂಸಾರದ , ನಿಸರ್ಗದ , ಮನುಷ್ಯನೊಬ್ಬನ ಬದುಕಿನಲ್ಲಿ ದೊರೆಯಬಹುದಾದ ಭಾವಸಂಕೀರ್ಣಗಳನ್ನೆಲ್ಲ ಅನನ್ಯವಾದ ರೀತಿಯಲ್ಲಿ ಬೇಂದ್ರೆ ಕಟ್ಟಿಕೊಟ್ಟಿದ್ದಾರೆ .

‘ ಬೆಳಗು ಜಾವ ‘ ಬೇಂದ್ರೆಯವರ ವಿಶಿಷ್ಟ ರಚನೆಗಳಲ್ಲೊಂದು . ನಿಸರ್ಗದ ಸೊಬಗಿನಲ್ಲಿ ಆನಂದವನ್ನು ಪಡೆಯುತ್ತಲೇ ಅದರ ಭವ್ಯತೆ , ದಿವ್ಯತೆಗಳ ಅರಿವನ್ನೂ ತಂದುಕೊಡುವುದು ಬೇಂದ್ರೆಯವರ ನಿಸರ್ಗಗೀತೆಗಳ ಮುಖ್ಯಗುಣ , ಇಲ್ಲಿ ಬೆಳಗು ಬೆಳಕೂ ಹೌದು . ಬೆಳಕು ಅವರ ಕಾವ್ಯದಲ್ಲಿ ಒಂದು ಸ್ಥಾಯಿ ಕಲ್ಪನೆ . ಈ ಕವಿತೆಯಲ್ಲಿ ಬೆಳಗಿನ ಸೌಂದರ್ಯವನ್ನು ವರ್ಣಿಸುತ್ತಲೇ ಯೌವನವು ಮಾನವ ಜೀವನದ ಬೆಳಗುಜಾವ , ನಿರಂತರವಾದ ಕ್ರಿಯೆಗಳ ಮೂಲಕ ಯೌವನವನ್ನು ದುಡಿಸಿ , ದಣಿಸಿ ಸಫಲತೆಯನ್ನು ಪಡೆಯಬೇಕು ಎಂದು ಬೇಂದ್ರೆ ಕರೆಕೊಟ್ಟಿದ್ದಾರೆ .

ಇಂಗ್ಲಿಷಿನ ಸಾನೆಟ್ ಪ್ರಕಾರಕ್ಕೆ ಸಂವಾದಿಯಾಗಿ ಬಂದ ಸುನೀತ ಪ್ರಕಾರದಲ್ಲಿರುವ ಈ ಕವಿತೆ ಷೇಕ್ಸ್‌ಪೀರಿಯನ್ ಮಾದರಿಯಲ್ಲಿದೆ . ಈ ಮಾದರಿಯ ಸುನೀತಗಳಲ್ಲಿ ಹನ್ನೆರಡು ಚರಣಗಳು ಮೂರು ಚೌಪದಿಗಳಿಂದ ಕೂಡಿದ್ದು ಕೊನೆಯ ಎರಡು ಚರಣಗಳು ದ್ವಿಪದಿಯ ರೂಪದಲ್ಲಿದ್ದು ವಸ್ತುವಿನ ಒಟ್ಟು ತಿರುಳನ್ನು ಕಟ್ಟಿಕೊಡುತ್ತವೆ . ಹಾಗೆಯೇ ಚೌಪದಿಯ ಮೊದಲ ಎರಡು ಪಂಕ್ತಿಗಳು ಒಂದು ಪ್ರಾಸದಿಂದ ಕೂಡಿದ್ದರೆ ಕೊನೆಯ ಎರಡು ಪಂಕ್ತಿಗಳು ಇನ್ನೊಂದು ಪ್ರಾಸವನ್ನು ಹೊಂದಿರುತ್ತವೆ . ಕಡೆಯ ದ್ವಿಪದಿ ಒಂದೇ ಪ್ರಾಸದಲ್ಲಿ ಮುಕ್ತಾಯವಾಗುತ್ತದೆ . ಈ ಪ್ರಾಸ ವಿನ್ಯಾಸದಲ್ಲಿ ರಚನೆಯಾದ ವಿಶಿಷ್ಟ ಕವನವಿದು .

ಕಾವ್ಯದ ಹಿನ್ನೆಲೆ :

ಬದುಕಿಗೆ ಅದಮ್ಯ ಚೈತನ್ಯವನ್ನು ನೀಡುವ ವಿಶಿಷ್ಟ ಕಾಲ ಬೆಳಗು ಜಾವ . ಇದು ಪ್ರಕೃತಿ ನಮಗೆ ನೀಡಿದ ವರ , ಈ ಭಾವಕ್ಷಣಗಳ ಜತೆಗಿನ ಅನುಬಂಧದಲ್ಲೇ ವ್ಯಕ್ತಿಯ , ಜಗತ್ತಿನ ವಿಕಾಸವೂ ಇದೆ . ಆದರೆ ಆಧುನಿಕತೆ , ಯಂತ್ರವಿಜ್ಞಾನದ ಬೆಳವಣಿಗೆ , ಹೊಸ ಬಗೆಯ ಕಲಿಕೆಯ ಕ್ರಮ ಇವೆಲ್ಲವೂ ಮನುಷ್ಯನನ್ನು ಈ ಸುಂದರ ಅನುಭವದಿಂದ ವಂಚಿತನನ್ನಾಗಿ ಮಾಡುತ್ತಿವೆ . ಹಾಗಾಗಿ ಪ್ರಕೃತಿಯ ಜತೆಗಿನ ನಿರಂತರ ಅನುಸಂಧಾನದ ಮೂಲಕ ಬದುಕಿನ ಬೆಳಗು ಜಾವವಾಗಿರುವ ಯೌವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಇಲ್ಲಿ ಕವಿ ನಿರೂಪಿಸಿರುವ ರೀತಿ ವಿಶಿಷ್ಟವಾದುದು . ಇಂಗ್ಲಿಷಿನ ಸಾನೆಟ್‌ಗೆ ಸಂವಾದಿಯಾಗಿ ಬಂದ ಕನ್ನಡದ ಸುನೀತ ಪ್ರಕಾರದಲ್ಲಿ ಈ ಕವನ ಅರಳಿದೆ .

ಶಬ್ದಾರ್ಥ :

ಮೂಡಲ – ಪೂರ್ವ ; ತಮ – ಕತ್ತಲು ; ಮಿಗಿಲು – ಅಧಿಕ ; ಹೆದೆ – ಬಿಲ್ಲಿನ ಹಗ್ಗ ; ಮಾರ – ಮನ್ಮಥ , ಕಾಮ ; ನಿಶೆ – ಕತ್ತಲು ; ಉಷೆ – ಮುಂಜಾವು ; ಬಗೆ – ರೀತಿ ; ತುಂಬಿ – ದುಂಬಿ , ಪೂರ್ಣವಾದ ; ಸೆಳವು – ರಭಸ ; ಹೊಗರು ಪ್ರಕಾಶ , ಕಾಂತಿ ,

2 PUC Kannada Belagu Java Notes Question Answer

ಅ ) ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

1 ) ಕವಿಯ ಪ್ರಕಾರ ಯಾವುದು ಮತ್ತೆ ಚಿಗುರುತ್ತದೆ ?

ಕವಿಯ ಪ್ರಕಾರ ಮತ್ತೆ ಚಿಗುರುವುದು ಮರ – ಗಿಡಗಳು .

2 ) ಬೇಟೆಗಾರ ಯಾರು ?

ಸೂರ್ಯದೇವನೇ ಬೆಳಕನ್ನು ಕೊಡುವ ಬೇಟೆಗಾರ .

3 ) ಯಾವುದಕ್ಕೆ ಸೆಳೆವಿದೆ ಎಂದು ಕವಿ ಹೇಳುತ್ತಾರೆ ?

ಜೀವನವೆಂಬ ನದಿಗೆ ಸೆಳೆವಿದೆ ಎಂದು ಕವಿ ಹೇಳುತ್ತಾರೆ .

4 ) ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವರು ಯಾರು ?

ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವರು ‘ ಮನ್ಮಥ .

5 ) ಯಾವುದು ಚಿಂತನದಿ ಮುಳುಗಿರಲಿ ಎಂದು ಕವಿ ಆಶಿಸುತ್ತಾರೆ ?

ಮುಪ್ಪು ಚಿಂತನದಿ ಮುಳುಗಿರಲಿ ಎಂದು ಕವಿ ಆಶಿಸುತ್ತಾರೆ .

6 ) ಹುಸಿ ನಿದ್ದೆ ಸಾಕು ಎಂದು ಕವಿ ಯಾರಿಗೆ ಹೇಳುತ್ತಾರೆ ?

‘ ಹುಸಿ ನಿದ್ದೆ ಸಾಕು ‘ ಎಂದು ಕವಿ ಮಕ್ಕಳಿಗೆ ಹೇಳುತ್ತಿದ್ದಾರೆ .

belagu java kannada poem question answer

ಆ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

1 ) ಬಾನು ಮತ್ತು ಮರದ ನಿತ್ಯನೂತನತೆಯ ಬಗ್ಗೆ ಕವಿ ಏನು ಹೇಳಿದ್ದಾರೆ ?

ಬಾನು ತಿಳಿಯಾದ ವಿಸ್ತಾರವಾದ ಸ್ವಚ್ಚ ಆಕಾಶ , ಇಲ್ಲಿ ಆಗಾಗ ಮಳೆ ಮೋಡಗಳು ತುಂಬಿದ್ದು ಧರೆಗೆ ಮಳೆ ಸುರಿಸುತ್ತವೆ . ಧರೆಯನ್ನು ಸುಭಿಕ್ಷವನ್ನಾಗಿಸುತ್ತವೆ . ಮೋಡ ಕರಗಿದ ಮೇಲೆ ಸ್ವಚ್ಛ ತಿಳಿಯಾದ ನೀಲಾಕಾಶ ಆಹ್ಲಾದತೆಯನ್ನು ನೀಡುತ್ತದೆ . ಬಾನು ಬೆಳಕು – ಬೆಳಗು ಎರಡನ್ನು ಕೂಡುತ್ತದೆ . ಮರದಲ್ಲಿಯೂ ಇದೇ ರೀತಿಯ ನಿತ್ಯ ನೂತನತೆ ಇರುತ್ತದೆ . ಪ್ರತಿದಿನ ಹೊಸ ಮೊಗ್ಗು ಹೂಗಳಿಂದ ಕಂಗೊಳಿಸುತ್ತವೆ . ಸುಗಂಧವನ್ನು ಬೀರುತ್ತವೆ . ಕಾಲಕ್ಕನುಗುಣವಾಗಿ ರುಚಿಯಾದ ಹಣ್ಣುಗಳನ್ನು ನೀಡುತ್ತವೆ . ಹಸಿರಿನಿಂದ ಕಂಗೊಳಿಸುತ್ತ ನೂತನ ಕಾಂತಿಯನ್ನು ಚಿಮ್ಮಿಸುತ್ತದೆ .

2 ) ಬೆಳಕು – ಬೇಟೆಗಾರ ಹೇಗೆ ಬರುತ್ತಾನೆ ?

ಗುಡಿಗೋಪುರಕ್ಕೂ ಬಲೆ ಬೀಸುತ್ತಾ ಬೆಳೆದು ಬೇಟೆಗಾರ ಬರುತ್ತಾನೆ .

3 ) ಕವಿ ಬೇಂದ್ರೆ ಮಕ್ಕಳಿಗೆ ಬಾಳಿನ ಬಗ್ಗೆ ಕೊಡುವ ಸಂದೇಶವೇನು ?

ಕವಿ ಬೇಂದ್ರೆಯವರು ಮಕ್ಕಳಿಗೆ ಬಾಳಿನ ಬಗ್ಗೆ ಜೀವನದ ನವರಸವನ್ನು ಕುಡಿದು ಚೈತನ್ಯ ಪೂರ್ಣವಾಗಿ ಬಾಳಬೇಕು , ಸೋಮಾರಿಗಳಂತೆ ಹುಸಿನಿದ್ದೆ ಬಿಟ್ಟು ಕ್ರಿಯಾಶೀಲರಾದ ನಾವು ಜೀವನದಲ್ಲಿ ಯಶಸ್ಸನ್ನು ಕಾಣಬಲ್ಲೆವು ಎಂಬುದಾಗಿ ಕವಿ ಸಂದೇಶವನ್ನು ನೀಡಿದ್ದಾರೆ .

3 ) ಹುಸಿನಿದ್ದೆ ಸಾಕು , ಎದ್ದೇಳಿ ಎಂದು ಕವಿ ಮಕ್ಕಳಿಗೆ ಹೇಳಲು ಕಾರಣವೇನು ?

ಹುಸಿನಿದ್ದೆ ಎಂದರೆ , ಎಚ್ಚರವಾಗಿದ್ದು ನಿದ್ದೆ ಬಾರದಿದ್ದರು ಸೋಮಾರಿಗಳಾಗಿ ಹಾಸಿಗೆಯಲ್ಲಿ ಹೊರಳಾಡುವ ಸ್ಥಿತಿ . ಇದು ಸೋಮಾರಿಗಳ ಸಂಕೇತವು ಹೌದು . ಸೋಮಾರಿತನವು ನಮ್ಮ ಜೀವನವನ್ನು ನಿಷ್ಪಲಗೊಳಿಸುತ್ತದೆ . ನಿಷ್ಕ್ರಿಯೆಗೊಳಿಸುತ್ತದೆ . ಆದ್ದರಿಂದ ಜೀವನದಲ್ಲಿ ಸಫಲತೆಯನ್ನು ಪಡೆಯಲು ನಾವು ಹುಸಿ ನಿದ್ದೆ ಬಿಟ್ಟು ಎದ್ದು ಎಚ್ಚರಗೊಂಡು ಕ್ರಿಯಾಶೀಲರಾಗಿ ಜೀವನದ ಸಾರ್ಥಕತೆಯನ್ನು ಪಡೆಯಬೇಕು ಎಂಬುದಾಗಿ ಕವಿ ‘ ಹುಸಿ ನಿದ್ದೆ ಸಾಕು , ಎದ್ದೇಳಿ ‘ ಎಂದು ಕವಿ ಹೇಳಿದ್ದಾರೆ .

4 ) ಕವಿಯ ಪ್ರಕಾರ ಮುಪ್ಪು ಮತ್ತು ಹರೆಯದ ನಡುವಿನ ವ್ಯತ್ಯಾಸವೇನು ?

ಕವಿಯ ಪ್ರಕಾರ ಮುಪ್ಪು ಅನುಭವಶಾಲಿಯಾದರೂ ಚಿಂತನದಲ್ಲಿ ಮುಳುಗಿರುತ್ತದೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ . ಹರೆಯ ಎಂಬುದು ಮಾನವ ಜೀವನದ ಬೆಳಗು ಜಾವ . ಈ ಅವಧಿಯಲ್ಲಿ ನಿರಂತರವಾಗಿ , ಕ್ರಿಯಾಶೀಲರಾಗಿ , ದುಡಿದು , ದಣಿದ ಜೀವನದಲ್ಲಿ ಸಫಲತೆಯನ್ನು ಸಾರ್ಥಕತೆಯನ್ನು ಪಡೆಯಬೇಕೆಂಬ ಮಾರ್ಗದರ್ಶನವನ್ನು ಕವಿ ನೀಡಿದ್ದಾರೆ .

ಇ ) ನಾಲ್ಕು ಅಂಕಗಳ ಪ್ರಶ್ನೆಗಳು :

1 ) ಜೀವನದ ಉದ್ದೇಶ ಮತ್ತು ಆದರ್ಶಗಳನ್ನು ಹೇಗೆ ಸಫಲಗೊಳಿಸಿಕೊಳ್ಳಬೇಕ ಎಂದು ಬೇಂದ್ರೆ ಕರೆಕೊಡುತ್ತಾರೆ ?

ಬೇಂದ್ರೆಯವರ ‘ ಬೆಳಗು ಜಾವ ‘ ಕವಿತೆಯು ಜೀವನದ ಉದ್ದೇಶ ಮತ್ತು ಆದರ್ಶಗಳನ್ನು ಸಫಲಗೊಳಿಸಿಕೊಳ್ಳಬೇಕೆಂಬ ಕರೆಯನ್ನು ಎಳೆಯರಿಗೆ ಇತ್ತಿದೆ . ಕವಿತೆಯ ಆರಂಭದ ಚರಣವು ಬೆಳಕಿನ ಆಗಮನದ ವರ್ಣನೆಗೆ ಮೀಸಲಾಗಿದೆ . ಉಳಿದ ಭಾಗ ದಲ್ಲಿ ಕವಿ ಮಲಗಿ ನಿದ್ರಿಸುತ್ತಿರುವವರನ್ನು ಎಚ್ಚರಗೊಳಿಸಿದ್ದಾರೆ . ಬೆಳಗು ಕ್ರಿಯಾಶೀಲತೆಯ ಸಂಕೇತ , ರಾತ್ರಿಯೆಲ್ಲಾ ನಿದ್ದೆಯ ವಿಶ್ರಾಂತಿಯಲ್ಲಿ ಮೈಮರೆತವರಿಗೆ ಹೊಸ ಚೈತನ್ಯವನ್ನು ತುಂಬಿ ದೈನಂದಿನ ಕ್ರಿಯೆಗೆ ಪ್ರೋತ್ಸಾಹಿಸುತ್ತದೆ . ಆದ್ದರಿಂದ ಬೆಳಕಿನಲ್ಲಿ ಎದ್ದು ಕತ್ತಲಾಗುವ ಮುನ್ನ ದುಡಿಮೆಯ ಉದ್ದೇಶವನ್ನು ಸಾರ್ಥಕ್ಯದಿಂದ ಪೂರೈಸಿಕೊಳ್ಳಿರೆಂದು ಕವಿ ಕರೆಯಿತ್ತಿದ್ದಾರೆ . ಇಲ್ಲಿ ಬೆಳಗು ಯೌವನದ , ಆದರ್ಶಗಳ ಸಂಕೇತವಾದರೆ , ಇರುಳು ಮುಪ್ಪಿನ ಸಂಕೇತವಾಗಿದೆ . ಇರುವ ಯೌವನವನ್ನು ಕನಸುಕಾಣುತ್ತಾ ಹಾಳು ಮಾಡಿ ಕೊಳ್ಳದೆ ದುಡಿದು ಗಳಿಸುವುದರ ಮುಖೇನ ಸಫಲಗೊಳಿಸಿಕೊಳ್ಳಿರೆಂದು ಕವಿಯು ಇಲ್ಲಿ ಎಚ್ಚರಿಸಿದ್ದಾರೆ .

2 ) ಬಾಳಿನ ಅಶಾಶ್ವತೆ ಮತ್ತು ಪ್ರಕೃತಿಯ ನಿತ್ಯನೂತನತೆಯ ಗುಣವನ್ನು ‘ ಬೆಳಗು ಜಾವ ‘ ಕವನದಲ್ಲಿ ಕವಿ ಹೇಗೆ ವಿವರಿಸಿದ್ದಾರೆ ?

ದ.ರಾ. ಬೇಂದ್ರೆಯವರ ‘ ಬೆಳಗು ಜಾವ ‘ ಕವಿತೆಯು ಪ್ರಕೃತಿಯ ನಿತ್ಯನೂತನತೆ ಯನ್ನು ಸಾರುವುದರ ಜೊತೆಜೊತೆಗೆ ಮನುಷ್ಯನ ಬಾಳಿನ ಅಶಾಶ್ವತತೆಯನ್ನು ವಿವರಿಸು ತ್ತದೆ . ಬೆಳಗಾಗುವುದು , ಕತ್ತಲಾಗುವುದು , ಋತುವಿಗೆ ತಕ್ಕಂತೆ ಮರ ಹಣ್ಣಾಗುವುದು , ಉದುರುವುದು , ಚಿಗುರುವುದು ಇವೆಲ್ಲವೂ ಪ್ರಕೃತಿಯ ನಿತ್ಯ ವ್ಯಾಪಾರಗಳು . ಮತ್ತೆ ಮತ್ತೆ ಹೊಸತನದಿಂದ ಮೈತುಂಬಿಕೊಳ್ಳುವುದು ಪ್ರಕೃತಿಯ ಲಕ್ಷಣ . ಕವಿ ಇದನ್ನು ಮರದ ಉದಾಹರಣೆಯ ಮೂಲಕ ದೃಢಪಡಿಸಿದ್ದಾರೆ . ಆದರೆ ಮನುಷ್ಯನ ಬದುಕು ಶಾಶ್ವತವಾದುದಲ್ಲ . ಜೀವನದ ನದಿಯಲ್ಲಿ ಯಾವಾಗ ಬೇಕಾದರೂ ಪ್ರವಾಹದ ಅಲೆ ಬಂದು ಅಪ್ಪಳಿಸಬಹುದು , ಏರುಪೇರುಗಳಾಗಬಹುದು . ಅದರಂತೆಯೇ ಯಾವ ಗಳಿಗೆಯಲ್ಲಿ ಬೇಕಾದರೂ ಸಾವು ಬಂದು ಮೇಲೆರಗಬಹುದು . ಮನುಷ್ಯನ ಜೀವನ ಅಶಾಶ್ವತ , ಪ್ರಕೃತಿ ಮಾತ್ರವೇ ಶಾಶ್ವತ – ನಿತ್ಯನೂತನ ಎಂದು ಕವಿ ಬೇಂದ್ರೆಯವರು ವಿವರಿಸಿ ಹೇಳಿದ್ದಾರೆ .

3 ) ‘ ಬೆಳಗು ಜಾವ ‘ ಕವನದ ಮೂಲಕ ಕವಿ ಬೇಂದ್ರೆ ಹೇಳಿರುವ ವಿಚಾರಗಳಾವುವು ?

‘ ಬೆಳಗು ಜಾವ ‘ ಕವನದ ಮೂಲಕ ಕವಿ ನಮ್ಮ ಬದುಕಿನ ಮಹತ್ವದ ವಿಚಾರಗಳ ಕಡೆಗೆ ಗಮನ ಸೆಳೆದಿದ್ದಾರೆ . ಬೆಳಕು ಮತ್ತು ಬೆಳಗು ಎರಡೂ ಅಭಿನ್ನವಾದಂತೆ ಅದು ಕ್ರಿಯಾಶೀಲತೆಯ ಸಂಕೇತವೂ ಹೌದು . ಬೆಳಗು ಹೊಸ ಹುರುಪನ್ನು ಚೈತನ್ಯವನ್ನು ತಂದಿರುವಾಗ ಅದನ್ನು ಸಾರ್ಥಕಪಡಿಸಿಕೊಳ್ಳಬೇಕು . ಯೌವನವು ನಮ್ಮ ಬದುಕಿನ ಬೆಳಕು . ಯೌವನದಲ್ಲಿ ದುಡಿದುಗಳಿಸುವ ಶಕ್ತಿ ದೇಹಕ್ಕಿರುತ್ತದೆ . ಆದ್ದರಿಂದ ನಿದ್ದೆಯಿಂದ ಮೇಲೆದ್ದು ದುಡಿಯಬೇಕಾಗಿದೆ . ಮುಪ್ಪು ಬಂದೇ ಬರುತ್ತದೆ . ಅದನ್ನು ತಪ್ಪಿಸಲಾಗದು . ಬೆಳಗು – ಕತ್ತಲು , ಒಣಗುವುದು – ಚಿಗುರುವುದು ಇವೆಲ್ಲವೂ ಪ್ರಕೃತಿಯಲ್ಲಿ ಸಹಜ . ಆದರೆ ಮನುಷ್ಯನ ಜೀವನ ಬಾಲ್ಯ , ಯೌವನ , ಮುಪ್ಪು ಎಂಬ ಮುಮ್ಮುಖ ಚಲನೆ ಯಲ್ಲಿ ಸಾಗುವುದೇ ವಿನಹ ಹಿಮ್ಮುಖವಾಗಿ ಚಲಿಸಲಾರದು . ಆದ್ದರಿಂದ ಜೀವನ ನದಿಯ ಪವಾಹ ಬಂದು ಅಪ್ಪಳಿಸುವ ಮುನ್ನ , ಮರಣ ಬರುವ ಮುನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಬೇಕೆಂದು ಬೇಂದ್ರೆ ತಿಳಿಸಿದ್ದಾರೆ .

4 ) ಮಾನವನ ಜೀವನದ ಸಾರ್ಥಕತೆ ಎಲ್ಲಿದೆಯೆಂದು ಕವಿ ಬೇಂದ್ರೆ ಹೇಳಿದ್ದಾರೆ ?

‘ ಬೆಳಗು ಜಾವ ‘ ಕವಿತೆಯಲ್ಲಿ ಕವಿ ಬೇಂದ್ರೆಯವರು ಬದುಕನ್ನು ಸಾರ್ಥಕಪಡಿಸಿ ಕೊಳ್ಳಬೇಕೆಂದು ಕರೆಕೊಟ್ಟಿದ್ದಾರೆ . ಮನುಷ್ಯನ ಜೀವನದಲ್ಲಿ ಬಾಲ , ಯೌವನ , ಮುತ್ತು ಗಳೆಲ್ಲವೂ ಹಂತಹಂತವಾಗಿ ಬರುವ ಸಂಗತಿಗಳು . ಬಾಲ್ಯದಲ್ಲಿ ಬೆರಗಿನಿಂದ ಸುತ್ತಮುತ್ತಲ ವಿಸ್ಮಯವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾ ಬೆಳೆಯುತ್ತೇವೆ . ಯೌವನವೆಂದರೆ ಅದುಮೋಜಿನ ಸಮಯವಲ್ಲ , ಕವಿಯ ಪ್ರಕಾರ ದುಡಿಯುವ , ದಣಿಯುವ ಸಮಯ ಇಂತಹ ಹೊತ್ತಿನಲ್ಲಿ ನಿದ್ದೆ ಮಾಡುತ್ತಾ ಕನಸುಕಾಣುತ್ತಾ ಕುಳಿತುಕೊಳ್ಳುವುದು ತರವಲ್ಲ . ಮುಪ್ಪು ಬರುವ ಮುನ್ನ ದುಡಿಮೆಯಲ್ಲಿ ಸಾರ್ಥಕ್ಯವನ್ನು ಕಾಣಬೇಕು . ಬಂದನಂತರ ಹಿಂದಿನ ದಿನಗಳ ಕನವರಿಕೆ ಮಾತ್ರ ಉಳಿಯುತ್ತದೆ . ಸಾವಿನ ಚಿಂತ ಆವರಿಸುತ್ತದೆ . ಆದ್ದರಿಂದ ಯೌವನವು ಬಹು ಅಮೂಲ್ಯ ಕ್ಷಣವಾದ್ದರಿಂದ ಅದನ್ನು ವ್ಯರ್ಥಗೊಳಿಸದೆ ಸಾರ್ಥಕವಾಗಿ ಬಳಸಿಕೊಳ್ಳುವಂತೆ ಕವಿ ಕರೆಯುತ್ತಿದ್ದಾರೆ .

ಈ ) ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ಸೂಚಿಸಿ :

1. ತುಂಬಿರುವ ತನಕ ತುಂತುಂಬಿ ಕುಡಿಯಬೇಕು “

ಅಂಬಿಕಾತನಯದತ್ತ ಕಾವ್ಯನಾಮದ ವರಕವಿ ದ.ರಾ. ಬೇಂದ್ರೆಯವರು ರಚಿಸಿರುವ ‘ ಬೆಳಗು ಜಾವ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸ ಲಾಗಿದೆ . ಮಲಗಿ ಹುಸಿನಿದ್ದೆಗೈಯುತ್ತಿರುವ ಯುವ ಮನಸ್ಸುಗಳನ್ನು ಎಚ್ಚರಿಸಿದ ಕವಿಯು ‘ ಈ ತುಂಬಿ ಬಾಳು ‘ ಎಂದರೆ ದುಂಬಿಯಂತೆ ಅಲ್ಲಿಂದಿಲ್ಲಿಗೆ ಹಾರುವ ಜೀವನದ ಮಜಲಿಗೆ ಹೋಲಿಸಿ , ಅದನ್ನು ಸಿಕ್ಕಾಗ ಸಿಕ್ಕಟ್ಟನ್ನು ತುಂಬಿತುಂಬಿ ಕುಡಿಯುವಂತೆ ಬುದ್ಧಿಮಾತು ಹೇಳಿದ್ದಾರೆ . ನಾಳೆ ಹೇಗೋ ಏನೋ ಎಂಬುದು ಯಾರಿಗೂ ಅರಿವಿರದು . ಇರುವಾಗ ಕೈಗೆ ಸಿಕ್ಕಷ್ಟನ್ನು ಮೊಗೆಮೊಗೆದು ಅನುಭವಿಸಿ , ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂಬ ಸಂದೇಶವನ್ನು ಕವಿಯು ಈ ಮೇಲಿನ ವಾಕ್ಯದಲ್ಲಿ ಕಾಣಿಸಿದ್ದಾರೆ .

2. “ ಮುಳುಗಿರಲಿ ಮುಪ್ಪು ಚಿಂತನದಿ ”

ಅಂಬಿಕಾತನಯದತ್ತರು ಬರೆದಿರುವ ‘ ಬೆಳಗು ಜಾವ ‘ ಕವಿತೆಯ ಅಂತ್ಯದಲ್ಲಿ ಈ ಮೇಲಿನ ವಾಕ್ಯವನ್ನು ಕಾಣಬಹುದಾಗಿದೆ . ಮರಣ – ಮುಪ್ಪಿನ ಚಿಂತೆಯ ಅಗತ್ಯವಿಲ್ಲ . ಏಕೆಂದರೆ ಇದು ಹರೆಯ ತುಂಬಿರುವ ಹೊತ್ತು . ಹೀಗಿರುವ ಹರೆಯ ಪುನಃ ಸಿಗಲಾರದು . ಮುಪ್ಪು ಬರುವ ಕಾಲಕ್ಕೆ ಬಂದೇ ಬರುತ್ತದೆ . ಈಗಲೇ ಏಕೆ ಅದರ ಚಿಂತೆ ? ಮುಪ್ಪು ಬಂದೇ ಬರುತ್ತದೆ , ಅದನ್ನು ತಪ್ಪಿಸಲು ಯಾರಿಂದಲೂ ಅಸಾಧ್ಯ . ಆದ್ದರಿಂದ ‘ ಮುಪ್ಪು ಮುಳುಗಿರಲಿ ಚಿಂತನದಿ ‘ ಎಂದು ಹೇಳುವುದರ ಮೂಲಕ ಬದುಕನ್ನು ಸ್ವೀಕರಿಸಬೇಕಾದ , ಅನುಭವಿಸ ಬೇಕಾದ ಬಗೆಯನ್ನು ಕವಿ ಇಲ್ಲಿ ತಿಳಿಸಿಕೊಟ್ಟಿರುತ್ತಾರೆ .

3. “ ಮರಣ ಬಂದೀತು ಕ್ಷಣವು ಉರುಳಿ ”

ಗಾರುಡಿಗ ಕವಿ ದ.ರಾ. ಬೇಂದ್ರೆಯವರ ‘ ಬೆಳಗು ಜಾವ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಬೆಳಗು ಮೂಡಿರುವಾಗ ಹುಸಿನಿದ್ದೆ ಬಿಟ್ಟು ದುಡಿಮೆಯಲ್ಲಿ ಕ್ರಿಯಾಶೀಲರಾಗ ಬೇಕೆಂದು ಹೇಳಿರುವ ಕವಿಯು , ಯೌವನ ಉತ್ಸಾಹ – ಹುರುಪುಗಳೆಲ್ಲವೂ ಸ್ವಲ್ಪಕಾಲ ಮಾತ್ರ ಇರುವುದು . ಅವುಗಳಿದ್ದಾಗ ದುಡಿದು ಸಂಪಾದಿಸಬೇಕು , ಬದುಕನ್ನು ಸಂಪೂರ್ಣ ವಾಗಿ ಆಸ್ವಾದಿಸಬೇಕು . ಜೀವನ ಒಂದು ನದಿಯ ರೀತಿ ಅಲ್ಲಿ ಪ್ರವಾಹದ ಏರುಪೇರು ಆಘಾತಗಳಿರುವುದು ಸಹಜ , ಯಾವಾಗ ಮರಣ ಬಂದು ಅಮರಿಕೊಳ್ಳುವುದೋ ಯಾರಿಗೂ ತಿಳಿಯದು . ಈಗ ಇದ್ದವರು ಇನ್ನೊಂದು ಕ್ಷಣದಲ್ಲಿ ಇಲ್ಲವಾಗಬಹುದು . ಆದುದರಿಂದ ಸಾವು ಬರುವ ಮುನ್ನ ಈ ಬದುಕಿನ ಸುಂದರ ಸಂಗತಿಗಳನ್ನು ಅನುಭವಿಸಿ ಆನಂದಿಸಬೇಕೆಂದು ಕವಿ ಕಿವಿಮಾತು ಹೇಳಿದ್ದಾರೆ .

4. “ ಬರಲುಂಟೆ ಸುಗ್ಗಿ ಮತ್ತೆ ? ”

ದ.ರಾ. ಬೇಂದ್ರೆಯವರು ಬರೆದಿರುವ ‘ ಬೆಳಗು ಜಾವ ‘ ಕವಿತೆಯ ವಾಕ್ಯವಿದು . ಜೀವನದಲ್ಲಿ ಸುಗ್ಗಿ ಸಂತಸದ ಕಾಲ ಮತ್ತೆ ಬರಬಹುದೇ ? ಎಂದು ಕವಿಯು ಪ್ರಶ್ನಿಸಿರುವ ಸಂದರ್ಭವಿದಾಗಿದೆ . ಮುಪ್ಪು – ಮರಣಗಳು ಆವರಿಸಿದ ನಂತರ ಮನಃ ಯೌವನ ತಿರುಗಿ ಬರಲಾರದು . ಋತು ಬದಲಾಗಬಹುದು , ಆಕಾಶ ಮತ್ತೆ ಬೆಳಕಿನಿಂದ ಪ್ರಜ್ವಲಿಸಬಹುದು , ಮರಗಳು ಮತ್ತೆ ಚಿಗುರಿ ಹಸಿರು ಹೊತ್ತು ಮೆರೆಯಬಹುದು ಇವೆಲ್ಲವೂ ಋತುನಿಯಮದ ಸಾಮಾನ್ಯ ಸಂಗತಿಗಳು , ಪ್ರಕೃತಿಯಲ್ಲಿ ಸುಗ್ಗಿ ಮತ್ತೆ ಬರಬಹುದು , ಆದರೆ ಬದುಕಿನಲ್ಲಿ ಯೌವನದ ಸುಗ್ಗಿ ಒಮ್ಮೆ ಮಾತ್ರವೇ ಬಂದು ಹೋಗುವಂತದ್ದು . ಹೋದ ಮೇಲೆ ತಿರುಗಿ ಬರಲಾರದು .

5. “ ಬಲೆಬೀಸಿ ಬಂದ , ಅಗೋ ಬೆಳಕು – ಬೇಟೆಗಾರ “

ʼದ.ರಾ. ಬೇಂದ್ರೆಯವರು ರಚಿಸಿರುವ ‘ ಬೆಳಗು ಜಾವ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಬೆಳಕಿನ ಆಗಮನವನ್ನು ಕುರಿತು ಕವಿ ಈ ಮೇಲಿನಂತೆ ವರ್ಣಿಸಿದ್ದಾರೆ . ಮೂಡಲದ ಕಣ್ಣು ತೆರೆಯುವಾಗ ಬಾನೆಲ್ಲ ಕೆಂಪೇರುವುದು. ಬಾನು ಮೊದಲಿಗೆ ಕೆಂಪಾಗಿ ಅರುಣೋದಯವಾಗುವುದನ್ನು ಸೂಚಿಸಿದ ನಂತರ ನಿಧಾನವಾಗಿ ಆಕಾಶ ಬೆಳಕು ಕಾಣುವುದು . ಇದನ್ನು ಕವಿಯು ಬೆಳಕಿನ ಬೇಟೆಗಾರನು ಗುಡಿಗೋಪುರದ ಮೇಲೆಲ್ಲಾ ಬಲೆಬೀಸಿ ಬರುವುದಕ್ಕೆ ಸಮೀಕರಿಸಿ , ಬೆಳಗುಜಾವದ ಆರಂಭವನ್ನು ಈ ಮೇಲಿನ ವಾಕ್ಯದಲ್ಲಿ ವರ್ಣಿಸಿದ್ದಾರೆ . ಬೆಳಕಿನ – ಬೇಟೆಗಾರ ‘ ಎಂಬ ಹೋಲಿಕೆ ವಿಶೇಷ ಪ್ರಯೋಗವಾಗಿರುವುದನ್ನು ಗಮನಿಸಬಹುದು .

2 PUC Kannada Belagu java Notes Question Answer Pdf Download

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *