ದ್ವಿತೀಯ ಪಿ.ಯು.ಸಿ ಜಾಲಿಯ ಮರದಂತೆ ಕನ್ನಡ ಪದ್ಯದ ಸಾರಾಂಶ, 2nd PUC Jaliya Maradante Kannada Summary Saramsha Pdf Download 2022
ತರಗತಿ : ದ್ವಿತೀಯ ಪಿ.ಯು.ಸಿ
ಪದ್ಯದ ಹೆಸರು : ಜಾಲಿಯ ಮರದಂತೆ
ಕೃತಿಕಾರರ ಹೆಸರು : ಪುರಂದರದಾಸರು
Jaliya Maradante Kannada Summary
ಪ್ರಸ್ತುತ ಈ ಪದ್ಯವನ್ನು ಪುರಂದರದಾಸರು ರಚಿಸಿರುವ “ಜಾಲಿಯ ಮರದಂತೆ ” ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಜಾಲಿಯ ಮರದ ಪ್ರತೀಕವಾಗಿಸಮಾಜವನ್ನು ತಿದ್ದುವ ಪ್ರಯತ್ನವನ್ನು ಈ ಪದ್ಯದ ಮೂಲಕ ತಿಳಿಸಿಕೊಟ್ಟೊದ್ದಾರೆ.
ಪುರಂದರದಾಸರು ಕೆಟ್ಟವರನ್ನು ದುರ್ಜನರನ್ನು ‘ ಜಾಲಿಯ ಮರದಂತೆ ಎಂದು ಟೀಕೆ ಮಾಡಿದ್ದಾರೆ . ಜಾಲಿಯ ಮರವು ಬುಡದಿಂದ ತುದಿಯವರೆಗೂ ಮುಳ್ಳನ್ನು ತುಂಬಿಕೊಂಡಿರುತ್ತದೆ . ಇದೇ ರೀತಿ ದುರ್ಜನರೂ ಕೂಡ ಅಡಿಯಿಂದ – ಮುಡಿಯವರೆಗೂ ಕೆಟ್ಟ ವಿಚಾರಗಳನ್ನೇ ತುಂಬಿಕೊಂಡಿರುತ್ತಾರೆ . ಜಾಲಿಮರ ಹೇಗೆ ಎಲ್ಲದಕ್ಕೂ ನಿರುಪಯುಕ್ತವೋ ಹಾಗೆ ದುರ್ಜನರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ . ಜಾಲಿಮರ ಮತ್ತು ದುರ್ಜನರು ಧರೆಯೊಳಿರುವುದು ವ್ಯರ್ಥ ಎಂಬುದು ಪುರಂದರದಾಸರ ಅಭಿಪ್ರಾಯವಾಗಿದೆ .
ಬಿಸಿಲಲ್ಲಿ ಬಳಲಿ ಬಂದವರಿಗೆ ಜಾಲಿಯ ಮರ ನೆರಳನ್ನು ಒದಗಿಸುವುದಿಲ್ಲ . ಹಸಿವು ಎಂದು ಬಂದವರಿಗೆ ಜಾಲಿಯ ಮರ ಹಣ್ಣನ್ನು ನೀಡಿ ಸಲಹುವುದಿಲ್ಲ . ಅದು ಹೂಬಿಟ್ಟು ಸುವಾಸನೆಯನ್ನು ಪಸರಿಸಿ ತನ್ನ ಸುತ್ತಲ ವಾತಾವರಣವನ್ನು ಆಹ್ಲಾದಗೊಳಿಸುವುದೂ ಇಲ್ಲ . ಜಾಲಿಯ ಮರದ ಕೆಳಗೆ ನೆರಳು ಸ್ವಲ್ಪವಾದರೂ ಸಿಗದೆ ಯಾರೂ ಕುಳಿತುಕೊಳ್ಳಲೂ ಆಗದು . ಇನ್ನು ಜಾಲಿಯ ಮರದ ರಸವೋ ವಿಷದಂತೆ ಕಹಿಯಾಗಿದ್ದು ಆಸ್ವಾದಿಸಲು ಸಾಧ್ಯವಿಲ್ಲ . ಹೀಗೆ ಜಾಲಿಯ ಮರವು ಈ ಮೇಲೆ ವಿವರಿಸಿರುವ ಯಾವ ಅರ್ಥದಲ್ಲಿಯೂ ಉಪಯೋಗಕ್ಕೆ ಬಾರದೆ , ಭೂಮಿಯ ಮೇಲೆ ನಿರುಪಯುಕ್ತವಾಗಿ ಎಲ್ಲೆಂದರಲ್ಲಿ ಬೆಳೆದಿರುತ್ತವೆಂದು ಪುರಂದರದಾಸರು ವಿವರಿಸಿದ್ದಾರೆ .
ಊರಲ್ಲಿರುವ ಹಂದಿಗೆ ಒಳ್ಳೆಯ ಊಟವನ್ನಿಟ್ಟರು ಅದು ಹೊಲಸು ಹುಡುಕಿಕೊಂಡು ಹೋಗಿ ತಿನ್ನುವುದು . ಅದಕ್ಕೆ ಹೊಲಸು ರುಚಿಸುವುದೇ ಹೊರತು ಮೃಷ್ಟನ್ನ ಭೋಜನವಲ್ಲ . ಅದರಲ್ಲೂ ಕೆಟ್ಟ ವಾಸನೆ ಹುಡುಕಿಕೊಂಡೆ ಅದು ಹೋಗುತ್ತದೆ . ಪಾಪಿಯಾದವನಿಗೆ ಉತ್ತಮವಾದ ಮಾತುಗಳು ಹಿಡಿಸುವುದಿಲ್ಲ . ಅಂದ ಮೇಲೆ ಹಂದಿಗೆ ಸಮಾನವಾಗಿರುವ ದುರ್ಜನರು ಮನೆಯಲ್ಲಿನ ರುಚಿ – ಶುಚಿ ಊಟವನ್ನು ಬಿಟ್ಟು ಬೀದಿಯ ತಿಂಡಿ ಸರಾಯಿಗಳಿಗೆ ಬಾಯ್ದಿಟ್ಟುಕೊಂಡು ಹೋಗುತ್ತಾರೆ . ಕುಡಿದು ಅಮಲಿನಲ್ಲಿರುವ ಅಂಥಹ ದುರ್ಜನರಿಗೆ ಹಿತನುಡಿಗಳು ಸ್ವಲ್ಪವೂ ರುಚಿಸುವುದಿಲ್ಲ . ಇಂಥಹವರು ತಮ್ಮ ಕೆಟ್ಟ ಕೆಲಸವನ್ನು ಬಿಟ್ಟು ಸಜ್ಜನರಾಗಲು ಸಾಧ್ಯವೇ ? ಎಂದಿಗೂ ಇಲ್ಲ .
ಯಾರಿಂದ ಸಮಾಜಕ್ಕೆ ಲಾಭವಿದೆಯೋ ಅಂಥವರಿಗೆ ಗೌರವ – ಮಾನ್ಯತೆಗಳು ಸಿಗುವುದಿಲ್ಲ ; ಬದಲಿಗೆ ಅಪಾತ್ರರಾದವರಿಗೆ ಅವು ಸಲ್ಲುತ್ತಿವೆ . ದುರ್ಜನರು ಸಮಾಜಕ್ಕೆ ಹೊರೆ . ಅನ್ನ ತಿನ್ನಲು ಕಚ್ಚಾಡುವ ನಾಯಿಗಳಂತೆ ದುರ್ಜನರು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋರಾಡುತ್ತಾರೆ . ಇದರಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ . ಹೇಗೆ ಜಾಲಿಮರವು ನಿರರ್ಥಕವಾಗಿ ಧರೆಯಲ್ಲಿ ಬೆಳೆವುದೋ ಹಾಗೆ ದುರ್ಜನರು ಸಮಾಜದಲ್ಲಿ ಬದುಕುವರೆಂದು ಪುರಂದರದಾಸರು ವಿವರಿಸಿದ್ದಾರೆ . ಸಮಾಜಕಂಟಕರನ್ನು ಚುಚ್ಚಿ ನೋಯಿಸುವ ಜಾಲಿಮರದ ಮುಳ್ಳಿನೊಂದಿಗೆ ಸಮೀಕರಿಸಿರುವುದು ಔಚಿತ್ಯಪೂರ್ಣವಾಗಿದೆ .
2nd PUC Jaliya Maradante Kannada Summary Saramsha Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.