ದ್ವಿತೀಯ ಪಿ.ಯು.ಸಿ. ಪಗೆಯಂ ಬಾಲಕನೆಂಬರೇ ಕನ್ನಡ ಸಾರಾಂಶ | 2 PUC Pageyam Balakanembare Kannada Summary

ಪಗೆಯಂ ಬಾಲಕನೆಂಬರೇ ಕನ್ನಡ ಪದ್ಯದ ಸಾರಾಂಶ, 2nd PUC Pageyam Balakanembare Poem Summary Kannada, Saramsha Pdf Download 2022

ತರಗತಿ : ದ್ವಿತೀಯ ಪಿ.ಯು.ಸಿ

ಪದ್ಯದ ಹೆಸರು : ಪಗೆಯಂ ಬಾಲಕನೆಂಬರೇ

ಕೃತಿಕಾರರ ಹೆಸರು : ಪುಲಿಗೆರೆ ಸೋಮನಾಥ

Pageyam Balakanembare Poem Summary

ಸಮಾಜದಲ್ಲಿ ಸಮಾಜ ಜೀವಿಯಾದ ಮಾನವನು ಹೇಗೆ ಬದುಕಬೇಕೆಂಬುದನ್ನು ಪುಲಿಗೆರೆ ಸೋಮನಾಥರು ಈ ಪದ್ಯದಲ್ಲಿ ತಿಳಿಸಿಕೊಟ್ಟಿದ್ದಾರೆ.

ನಾವು ಕೆಲವು ವಿಷಯಗಳನ್ನು ಬಲ್ಲವರಿಂದ ತಿಳಿದವರಿಂದ , ಕೇಳಿ ತಿಳಿದುಕೊಳ್ಳಬೇಕು . ಮತ್ತೆ ಕೆಲವು ಒಳ್ಳೆಯ ವಿಷಯಗಳನ್ನು ನಮ್ಮ ಶಾಸ್ತ್ರಗಳಿಂದ ( ಗ್ರಂಥಗಳಿಂದ ) ಸಂಪ್ರದಾಯಗಳನ್ನು ಕೇಳುತ್ತಾ , ಅದನ್ನು ಆಚರಿಸುತ್ತಾ ಕಲಿಯಬೇಕು . ಕೆಲವು ವಿಷಯಗಳನ್ನು ಪರಿಣತರು ಅಥವಾ ವಿದ್ವಾಂಸರು ಮಾಡುವುದನ್ನು ನೋಡಿಕಲಿಯಬೇಕು , ಮತ್ತೆ ಕೆಲವನ್ನು ಒಳ್ಳೆಯ ಜ್ಞಾನವಂತರಾಗಿ , ತಿಳಿವಳಿಕೆಯುಳ್ಳವರಾಗಿ ನೋಡುತ್ತಾ ಕಲಿಯಬೇಕು ಮತ್ತೆ ಕೆಲವನ್ನು ನಾವು ಸಜ್ಜನರ ಸಹವಾಸದಲ್ಲಿದ್ದು ಕಲಿಯಬೇಕು . ಆಗ ಮಾತ್ರ ಮನುಷ್ಯನಾದವನು ಸ್ವಲ್ಪಮಟ್ಟಿಗೆ ಕಲಿತಂತೆ ಆಗುತ್ತದೆ . ಹೇಗೆ ಸಣ್ಣ – ಸಣ್ಣ ಕೆರೆ ಹಳ್ಳಗಳು ಸೇರಿ ( ದೊಡ್ಡ ) ಅಗಾಧ ಸಮುದ್ರವಾಗುವುದೋ ಅಂತೆಯೇ ತಿಳಿದವರಿಗೆ , ಜ್ಞಾನಿಗಳಿಂದ , ವಿದ್ವಾಂಸರಿಂದ , ಶಾಸ್ತ್ರ ಸಂಪ್ರದಾಯಗಳಿಂದ , ಸಜ್ಜನವರ ಸಹವಾಸದಿಂದ ಸ್ವಲ್ಪ – ಸ್ವಲ್ಪ ಕಲಿತು ಸಾಕಷ್ಟು ವಿಷಯವನ್ನು ನಾವು ಅರಿಯಬಹುದು ಎಂಬುದಾಗಿ ಸೋಮನಾಥನು ನಮಗೆ ಕಿವಿ ಮಾತನ್ನು ಹೇಳಿದ್ದಾನೆ .

ಅಗತ್ಯಬಿದ್ದಾಗ ಸಕಾಲದಲ್ಲಿ ಪ್ರಯೋಜನಕ್ಕೆ ಬಾರದ ವಸ್ತು – ಸಂಗತಿ – ವ್ಯಕ್ತಿಗಳಿಂದ ಯಾವ ಉಪಯೋಗವೂ ಇಲ್ಲವೆಂಬುದನ್ನು ಸೋಮೇಶ್ವರ ಹಲವು ಉದಾಹರಣೆಗಳ ಮೂಲಕ ಇಲ್ಲಿ ವಿವರಿಸಿ ಹೇಳಿದ್ದಾನೆ . ಹಣವಿರುವುದು ಉಪಯೋಗಿಸುವುದಕ್ಕೆ ಉಪಯೋಗಕ್ಕೆ ಬಾರದ ಧನದಿಂದ ಲಾಭವಿಲ್ಲ . ಅಂತೆಯೇ ಮಗ ಮುಪ್ಪಿನಲ್ಲಿ ತಂದೆ – ತಾಯಿಯರನ್ನು ಸಲಹಬೇಕು . ಸಲಹದಿರುವ ಮಗನಿದ್ದು ಉಪಯೋಗವಿಲ್ಲ . ಮಳೆ ಸಕಾಲದಲ್ಲಿ ಬಂದರೆ ಪ್ರಯೋಜನವಿದೆಯೇ ಹೊರತು , ( ಪೈರು ಒಣಗುತ್ತಿರುವಾಗ ಸುರಿದರೆ ಲಾಭವೇ ಹೊರತು ) , ಬೇರೆ ಸಮಯದಲ್ಲಿ ಸುರಿವುದು ವ್ಯರ್ಥ , ಅದರಂತೆಯೇ ಕಷ್ಟಕಾಲದಲ್ಲಿ ಬಂದು ವಿಚಾರಿಸಿಕೊಳ್ಳುವವನೇ ನಿಜವಾದ ನಂಟ , ಕಷ್ಟಕ್ಕೊದಗಿ ಬಾರದ ನೆಂಟ ನಿಷ್ಟ್ರಯೋಜಕ , ಸಮಯಕ್ಕೆ ದೊರೆತ ಹುಲ್ಲುಕಡ್ಡಿಯಷ್ಟು ಸಹಾಯ ಕೂಡ ಅಲ್ಪನಿಸದೆ ಮಹತ್ತರವೆನಿಸುವುದೆಂದು ಕವಿ ಹೇಳಿದ್ದಾನೆ .

ಸಣ್ಣ ಹುಡುಗ ನಮಗೇನು ಮಾಡಬಲ್ಲನೆಂದು ಶತ್ರುವಾದವನನ್ನು ಎಂದಿಗೂ ಅಲಕ್ಷ್ಯ ಮಾಡಬಾರದು . ದುಷ್ಟರನ್ನು ಅವರ ದುಷ್ಟಗುಣದ ಕಾರಣದಿಂದ ದೂರವಿಡ ಬೇಕೆಂದು ಕವಿ ಸೋಮನಾಥ ಈ ಪದ್ಯದಲ್ಲಿ ವಿವರಿಸಿದ್ದಾನೆ . ಬೇವಿನ ಎಲೆಯನ್ನು ಚಿಗುರೆಂದು ತಿಂದರೆ ಸಿಹಿಯಾಗಿರುವುದೆ ? ಚೇಳನ್ನು ಚಿಕ್ಕದೆಂದು ಪ್ರೀತಿಯಿಂದ ಹಿಡಿದುಕೊಂಡರೆ ಅದು ಕುಟುಕದಿರುತ್ತದೆಯೆ ? ಹಾವಿಗೆ ಹಾಲನ್ನು ಕುಡಿಸಿ ಪೋಷಿಸಿದರೆ ಅದು ನಮಗೆ ವಿಶ್ವಾಸವನ್ನು ತೋರುತ್ತದೆಯೆ ? ಹಕ್ಕಿ ಸಾಕುವ ಅಪೇಕ್ಷೆಯಿಂದ ಯಾರಾದರೂ ಗೂಬೆಮರಿಯನ್ನು ಅಕ್ಕರೆಯಿಂದ ಸಾಕುವರೆ ? ಅದೇ ರೀತಿ ಶತ್ರುವನ್ನು ಕೂಡ ಬಾಲಕನೆಂದು ಅಲಕ್ಷ್ಯ ಮಾಡುತ್ತಾರೆಯೇ ? ಎಂದು ಪ್ರಶ್ನಿಸುವ ಮೂಲಕ ಶತ್ರುಗಳ ವಿಚಾರದಲ್ಲಿ ಎಚ್ಚರದಿಂದಿರಬೇಕೆಂದು ಕವಿ ಹೇಳಿದ್ದಾನೆ .

ಬಂಡೆಯನ್ನು ಸೀಳಬೇಕಾದರರೆ ಅದರದೆ ಆದ ಉಳಿ , ಟಂಕ ಮುಂತಾದ ಸಾಮಗ್ರಿಗಳನ್ನು ಉಪಯೋಗಿಸಿ ಚೂರು ಮಾಡಬೇಕೆ ಹೊರತು ಬಲಶಾಲಿಯಿಂದ ಆನೆಯ ಕಾಲಿನಿಂದ ತುಳಿಸಿ ಬಂಡೆಯನ್ನು ಸೀಳಿಸಲಾಗದು ( ಚೂರು ಮಾಡಲಾಗದು ) ಚತುರನಾದ ಮನುಷ್ಯ ದೊಡ್ಡ ಆಕಾರದಿಂದಲೇ ಇರಬೇಕೆಂಬುದೇನಿಲ್ಲ . ಆತ ಚಿಕ್ಕವನಾಗಿಯೂ ಇರಬಹುದು . ( ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ , ಚಿಕ್ಕ ( ಸಣ್ಣ ) ವಸ್ತುವಿನಿಂದಲೂ ದೊಡ್ಡ ಕಾರ್ಯಗಳನ್ನು ಮಾಡಬಹುದು . ಬಲು ಭಾರವಾದ ಹೆಮ್ಮರವನ್ನು ಹಾರೆಯಂತಹ ಸಣ್ಣ ಸನ್ನೆಯಿಂದ ಎತ್ತಬಹುದು . ಅದೇ ರೀತಿ ಯುದ್ಧದಲ್ಲಿ ಕಾದಾಡುವ ಒಬ್ಬ ಸೈನಿಕನು ಕೂಡ ಯುದ್ಧದಲ್ಲಿ ಗೆಲ್ಲಲು ಸಹಾಯಕವಾಗಬಹುದು ಎಂಬುದರ ಸತ್ಯಾಸತ್ಯೆಯನ್ನು ಕವಿ ಈ ಪದ್ಯದಲ್ಲಿ ತೋರಿಸಿಕೊಟ್ಟಿದ್ದಾನೆ . ಎಂಥಹ ಗುಣಗಳು ನಮ್ಮಲ್ಲಿ ಇದ್ದಾಗ ನಾವು ಅದಕ್ಕೆ ತಕ್ಕ ಯೋಗ್ಯ ವ್ಯಕ್ತಿಯಾಗಬಹುದು ಎಂಬುದನ್ನು ಕವಿ ಈ ಪದ್ಯದಲ್ಲಿ ತಿಳಿಸಿಕೊಟ್ಟಿದ್ದಾನೆ .

ಪ್ರತಿಯೊಂದು ಕೆಲಸಕ್ಕೂ ಅದನ್ನು ನಿರ್ವಹಿಸುವ ಸಾಮರ್ಥ್ಯವಿರುವುದು ಮುಖ್ಯವೆಂಬುದನ್ನು ಕವಿ ಸೋಮನಾಥ ಈ ಪದ್ಯದಲ್ಲಿ ತಿಳಿಸಿದ್ದಾನೆ . ಅವನ ಅಭಿಪ್ರಾಯ ದಂತೆ ; ಯುದ್ಧ ಮಾಡುವುದಕ್ಕೆ ತಿಳಿದಿರುವವನೇ ಸೈನಿಕ ಅಥವಾ ಭಟನಾಗಬೇಕು . ನಾನಾ ವಿಧವಾದ ಬುದ್ಧಿವಂತಿಕೆಯ ಚಮತ್ಕಾರಗಳನ್ನು ತಿಳಿದಿರುವವನು ಮಂತ್ರಿಯಾಗ ಬೇಕು . ಯಾರು ಏನೆಂದರೂ ಕೋಪಿಸಿಕೊಳ್ಳದೆ ತಾಳ್ಮೆಯಿಂದಿರುವವನೇ ದೊರೆಯಾಗ ಬೇಕು . ಕಾಮ – ಕ್ರೋಧ ಮೊದಲಾದ ಅರಿಷಡ್ವರ್ಗವನ್ನು ಗೆಲ್ಲುವ ಸಾಮರ್ಥ್ಯ ಉಳ್ಳವನೇ ಯೋಗಿಯಾಗಬೇಕು . ತನ್ನ ಕೈಯಿಂದ ದಂಡ ತೆರುವ ಯೋಗ್ಯತೆಯುಳ್ಳವನೇ ಮತ್ತೊಬ್ಬರು ಮಾಡುವ ಸಾಲಕ್ಕೆ ಹೊಣೆಯಾಗಬೇಕು ಎಂಬುದಾಗಿ ಕವಿ ಈ ನೀತಿ ಹೇಳಿದ್ದಾನೆ .

ಮೇಲೆ ಕಾಣುವ ಥಳುಕುಬಳುಕಿಗಿಂತ ಒಳಗಿನ ಅಂತಃಸತ್ವ ಗುಣ ಮುಖ್ಯವೆಂಬು ದನ್ನು ಕವಿ ಇಲ್ಲಿ ವಿವರಿಸಿದ್ದಾನೆ . ಹೊಟ್ಟೆಯಲ್ಲಿ ಕಲ್ಮಷವನ್ನು ತುಂಬಿಕೊಂಡು ಮೇಲೆ ತೊಳೆದ ಮಾತ್ರಕ್ಕೆ ಪರಿಶುದ್ಧವಾಗುವುದೆ ? ವಿಪರೀತ ಕೆಟ್ಟ ಕೆಲಸ ಮಾಡಿ ಪಾಪಗಳಲ್ಲಿ ತೊಡಗಿರುವವನು ಅನೇಕ ತೀರ್ಥಸ್ನಾನಗಳನ್ನು ಮಾಡಿದರೆ ಶುದ್ಧನಾಗುವನೆ ? ಕಾಗೆಗಳ ಗುಂಪು ಸ್ನಾನ ಮಾಡುವುದಿಲ್ಲವೆ ? ಬೇವಿನ ಹಣ್ಣನ್ನು ಬೆಲ್ಲದ ಪಾನಕದಲ್ಲಿ ಅದ್ದಿಟ್ಟರೆ ಅದರ ಕಹಿಯು ಹೋಗಿ ಸಿಹಿಯಾಗುವುದೆ ? ಆದ್ದರಿಂದ ನಿಜವಾದ ‘ ಮಡಿ ‘ ಎಂದರೆ ಮನಸ್ಸನ್ನು ಶುದ್ಧವಾಗಿಟ್ಟುಕೊಂಡಿರುವುದು . ಹೊರನೋಟಕ್ಕೆ ಶುಚಿಯಾಗಿರುವುದರಿಂದ ಯಾವ ಉಪಯೋಗವೂ ಇಲ್ಲ ಎಂಬುದನ್ನು ಕವಿ ಹಲವು ಉದಾಹರಣೆಗಳ ಮೂಲಕ ವಿವರಿಸಿದ್ದಾನೆ .

2nd PUC Pageyam Balakanembare Kannada Summary, Saramsha Pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh