ದ್ವಿತೀಯ ಪಿ.ಯು.ಸಿ. ಪಗೆಯಂ ಬಾಲಕನೆಂಬರೇ ಕನ್ನಡ ನೋಟ್ಸ್‌ | 2 PUC Pageyam Balakanembare Kannada Notes.

ದ್ವಿತೀಯ ಪಿ.ಯು.ಸಿ ಪಗೆಯಂ ಬಾಲಕನೆಂಬರೇ ಕನ್ನಡ ನೋಟ್ಸ್‌ , 2 PUC Pageyam Balakanembare Kannada Question Answer Notes pdf Download

ತರಗತಿ : ದ್ವಿತೀಯ ಪಿ.ಯು.ಸಿ

ಪದ್ಯದ ಹೆಸರು : ಪಗೆಯಂ ಬಾಲಕನೆಂಬರೇ

ಕೃತಿಕಾರರ ಹೆಸರು : ಪುಲಿಗೆರೆ ಸೋಮನಾಥ

Pageyam Balakanembare Notes

ದ್ವಿತೀಯ ಪಿ.ಯು.ಸಿ. ಪಗೆಯಂ ಬಾಲಕನೆಂಬರೇ ಕನ್ನಡ ನೋಟ್ಸ್‌. 2 PUC Innu Pageyam Balakanembare Kannada Notes.

ಕವಿ ಪರಿಚಯ :

ಪುಲಿಗೆರೆ ಸೋಮನಾಥ ಸುಮಾರು ಹದಿನಾರನೆಯ ಶತಮಾನದಲ್ಲಿದ್ದ ವೀರಶೈವ ಕವಿ , ‘ ಸೋಮೇಶ್ವರ ಶತಕ ‘ ಎಂಬ ಗ್ರಂಥದ ಕರ್ತೃ, ಧಾರವಾಡ ಜಿಲ್ಲೆಯ ಮಲಿಗೆರೆ ( ಈಗಿನ ಲಕ್ಷೇಶ್ವರ ) ಇವನ ಜನ್ಮಸ್ಥಳವಿರಬಹುದೆಂದು ವಿದ್ವಾಂಸರು ಊಹಿಸಿದ್ದಾರೆ . ತನ್ನ ಕೃತಿಯಲ್ಲಿ ಈತ ತನ್ನ ಸ್ವಂತ ವಿಚಾರವಾಗಿ ಏನನ್ನೂ ಹೇಳಿಕೊಂಡಿಲ್ಲ . ಸೋಮೇಶ್ವರ ಶತಕದಲ್ಲಿ ‘ ಹರಹರಾ ಶ್ರೀಚೆನ್ನಸೋಮೇಶ್ವರ ‘ ಎಂಬ ಅಂಕಿತವನ್ನು ಕವಿ ಕಾಣಿಸಿರುವನು . ಮೊದಲ ಹಾಗೂ ಕೊನೆಯ ಪದ್ಯಗಳನ್ನು ಸಗ್ಧರಾ ವೃತ್ತದಲ್ಲಿ ರಚಿಸಿರುವ ಕವಿಯು ಮಿಕ್ಕವನ್ನು ಮತ್ತೇಭವಿಕ್ರೀಡಿತದಲ್ಲಿ ರಚಿಸಿದ್ದಾನೆ . ಪ್ರತಿಯೊಂದು ಪದ್ಯವೂ ಒಂದು ಮುಕ್ತಕ. ಸ್ವಯಂಪೂರ್ಣ ಭಾವವುಳ್ಳ ಸ್ವತಂತ್ರ ಪದ್ಯಗಳಾಗಿವೆ . ಲವಲವಿಕೆಯ ಶೈಲಿ ಉಪಮೆಗಳ ಸೊಗಸಿನಿಂದಾಗಿ ಸೋಮೇಶ್ವರ ಶತಕ ಕನ್ನಡಿಗರ ಮನಗೆದ್ದಿದೆ .

ಪುಲಿಗೆರೆ ಸೋಮನಾಥನ ‘ ಸೋಮೇಶ್ವರ ಶತಕ’ವು ಕನ್ನಡದ ಅತ್ಯಂತ ಜನಪ್ರಿಯ ಶತಕ ಗ್ರಂಥವಾಗಿದ್ದು ಇದರಲ್ಲಿ ಒಟ್ಟು ನೂರಾಮೂರು ವೃತ್ತಗಳಿವೆ . ಕನ್ನಡಿಗರಲ್ಲಿ ಬಳಕೆಯಲ್ಲಿದ್ದ ಹಲವು ಜಾಣ್ಣುಡಿಗಳೂ ಗಾದೆಯ ಮಾತುಗಳೂ ಈ ವೃತ್ತಗಳಲ್ಲಿ ಹಾಸುಹೊಕ್ಕಾಗಿ ಬಂದಿವೆ . ನೀತಿಬೋಧೆ ಈ ಶತಕದ ಮೂಲೋದ್ದೇಶ , ಸಂಸ್ಕೃತ ಸುಭಾಷಿತಗಳ ಛಾಯೆ ಈ ಶತಕಗಳಲ್ಲಿ ಕಂಡು ಬರುವುದಾದರೂ ಸ್ವತಂತ್ರ ಲೋಕಾನುಭವ , ಸ್ಪೋಪಜ್ಞ ಕವಿತಾಶಕ್ತಿ , ಮಾರ್ಮಿಕತೆ ಮೊದಲಾದ ಉನ್ನತ ಗುಣಗಳು ಕಂಡುಬರುತ್ತವೆ . ಶತಕದ ಭಾಷೆ ಸರಳವಾಗಿದ್ದು ಎಲ್ಲರಿಗೂ ಎಟುಕುವಂತಿದೆ .

ಕಾವ್ಯದ ಹಿನ್ನೆಲೆ :

ನಡೆನುಡಿ , ಆಚಾರ ವಿಚಾರಗಳಲ್ಲಿ ಮೌಲ್ಯಗಳನ್ನು ಮೇಳವಿಸಿಕೊಂಡಾಗಲೇ ಬದುಕಿಗೊಂದು ಅರ್ಥ ಪ್ರಾಪ್ತವಾಗುತ್ತದೆ . ಮೌಲ್ಯಗಳಿಗೆಲ್ಲ ನೀತಿಯೇ ಮೂಲ ಬೀಜ. ನೈತಿಕತೆ ಎಲ್ಲಾ ಧರ್ಮ ತತ್ವಸಿದ್ಧಾಂತಗಳ ಹಾಗೆಯೇ ಎಲ್ಲ ದಾರ್ಶನಿಕರ . ಕವಿಗಳ ಉತ್ಕಟೇಚ್ಛೆಯಾಗಿದೆ . ಇವೆಲ್ಲದರಿಂದಲೂ ಮಾನವಮತಿಗೆ ನೀತಿಬೋಧೆ ಆಗುತ್ತದೆ . ಲೋಕದ ಡೊಂಕು ತಿದ್ದುವುದರೊಂದಿಗೆ ತಮ್ಮ ತಮ್ಮ ಡೊಂಕನ್ನೂ ತಿದ್ದಿಕೊಳ್ಳುವ ನೈತಿಕ ಅನುಸಂಧಾನವಿದ್ದವರು ಮಹಾತ್ಮರಾದರು . ಅವರ ಮಾತು ಮತ್ತು ಕೃತಿಗಳು ಸಮಾಜದಲ್ಲಿ ಆದರ್ಶವಾಗಿ ನೆಲೆನಿಂತು ನೀತಿಯ ಸೂಕ್ತಿಯಾದವು . ಪುಲಿಗೆರೆ ಸೋಮನಾಥನ ಶತಕವು ಕನ್ನಡ ನಾಡಿನಲ್ಲಿ ಕವಿವಾಣಿಯಾಗಿ , ಜನವಾಣಿಯಾಗಿ ಹಬ್ಬಿ ಹರಡಿ ನೀತಿಯ ಹಂದರದಲ್ಲಿ ಬದುಕಿನ ತನಿವಣ್ಣುಗಳನ್ನು ತುಂಬಿ ತಂದಿದೆ . ಈ ನೀತಿ ಅಮೃತದ ಸವಿಯುಂಡವರು ಸಂಸ್ಕೃತಿ ಮತ್ತು ಸಜ್ಜನಿಕೆಯ ವಾರಸುದಾರರಾಗಿ ಲೋಕಪ್ರಿಯವಾಗುವುದರಲ್ಲಿ ಸಂದೇಹವಿಲ್ಲ . ಭಕ್ತಿ , ಜ್ಞಾನ , ವೈರಾಗ್ಯ , ನೀತಿಗಳನ್ನು ಪ್ರತಿಪಾದಿಸುವ ಇಲ್ಲಿನ ಪದ್ಯಗಳು ಮುಲಿಗೆರೆ ಸೋಮನಾಥನ ಹೆಸರನ್ನು ಜನಮಾನಸದಲ್ಲಿ ಸ್ಥಿರವಾಗಿಸಿದೆ .

ಪದಗಳ ಅರ್ಥ:

. ಕೆಲವಂ – ಕೆಲವನ್ನು ಬಲ್ಲವ – ಬಲ್ಲಿದ , ಪಂಡಿತ , ಕಲ್ಲು – ಕಲಿತು ; ಶಾಸ್ತ್ರ – ಸಂಪ್ರದಾಯ , ಆಚರಣೆ , ನಿಯಮ , ಮತ , ವಿಜ್ಞಾನ ಮುಂತಾದುವುಗಳ ಬಗೆಗೆ ಬರೆದ ಗ್ರಂಥ : ಮಾಳವ – ಆಚರಿಸುವವ , ಮಾಡುವವ ; ಸುಜ್ಞಾನ – ಉತ್ತಮವಾದ ತಿಳಿವಳಿಕೆ ; ಸಜ್ಜನರ ಸಂಘ – ಒಳ್ಳೆಯವರ , ವಿವೇಕವುಳ್ಳವರ ಸಹವಾಸ ; ಅರಿಯಲ್ – ತಿಳಿದುಕೊಳ್ಳಲು ; ಸರ್ವಜ್ಞನಪ್ಪಂ – ಎಲ್ಲವನ್ನೂ ತಿಳಿಯಬಲ್ಲವನಾಗುವ ; ನರ ಮನುಷ್ಯ : ಪಲವು – ಹಲವು ; ಪಳ್ಳ – ಹಳ್ಳ , ಸಣ್ಣ ಜಲಪ್ರದೇಶ ,

. ಉಣದಿರ್ಪ – ಅನುಭೋಗಿಸಲಾಗದ ; ಧನ – ಹಣ , ಸಂಪತ್ತು , ಸುತನಿರ್ದೆಂ – ಮಗನಿದ್ದರೇನು ; ಆಪತ್ತಿನೊಳ – ಕಷ್ಟಕಾಲದಲ್ಲಿ : ಮಣಿದು – ಸೋತು ; ಎಣಿಸಲ್ – ಲೆಕ್ಕಮಾಡಿ ನೋಡಲು , ಆಲೋಚನೆ ಮಾಡಿ ನೋಡಲು ; ಕಾಲೋಚಿತಕ್ಕೆ – ಸಮಯಕ್ಕೆ ಸರಿಯಾಗಿ ; ಐದಿದಾ – ಒದಗಿ ಬಂದ ; ತೃಣ ಹುಲ್ಲು .

ಚಿಗುರು – ಕುಡಿ , ಪಲ್ಲವ ; ಮೆಲೆ – ತಿನ್ನಲು : ಸ್ವಾದ – ರುಚಿ , ಸವಿ , ಸ್ವಾರಸ್ಯ ಅಳ್ಳರಿಂ – ಅಕ್ಕರೆಯಿಂದ ಪ್ರೀತಿಯಿಂದ ; ಪಾಲಮಾಡು – ಹಾಲನ್ನು ಉಣಿಸಲು ; ಫಣಿ – ಸರ್ಪ ( ಫಣ ಎಂದರೆ ಹೆಡೆ , ಫಣಿ ಎಂದರೆ ಹೆಡೆಯುಳ್ಳ ಹಾವು ) : ಖಗ – ಪಕ್ಷಿ : ಗೂಗೆ – ಗೂಬೆ ; ಸಂಪ್ರೀತಿ – ಮುದ್ದಿನಿಂದ ; ಓವರೇ ಸಲಹುವರೇ : ಪಗೆ – ಹಗೆ .

. ಅರೆ – ಬಂಡೆ ; ಸೀಳುವೊಡೆ – ಸೀಳಬೇಕಾದರೆ : ಆನೆ ಮೆಟ್ಟಲಹುದೇ ಆನೆ ತುಳಿದರಾದೀತೇ ? ಚಾಣ ಉಳಿ , ಟಂಕ ; ಕಿರು – ಚಿಕ್ಕದಾದ ; ಉಪಾಯಪರ – ಉಪಾಯವನ್ನು ಬಲ್ಲವನು ; ಓರ್ವ ೦ – ಒಬ್ಬನು ; ಈಡು – ಸಮಾನ ; ಹೆಮ್ಮರ – ಹಿರಿದಾದ ಮರ ; ಬಳ್ಳಾರಮಂ – ಬಲು ಭಾರವಾದುದನ್ನು ; ಸನ್ನೆ ಮೀಟುಗೋಲು ; ಕಾಲಾಳು – ಚತುರಂಗ ಬಲದಲ್ಲಿ ಒಂದು , ಸೈನ್ಯ

. ಇರಿ – ಕೊಲ್ಲು , ಚುಚ್ಚು , ತಿವಿ ; ಧರೆ – ಭೂಮಿ ; ಚಮತ್ಕಾರ – ಸೋಜಿಗ , ವಿಸ್ಮಯ , ಚತುರತೆ ; ಅರಿ ತಿಳಿದುಕೊ ; ವಿಭು – ಪ್ರಭು ; ತೊರೆ – ತ್ಯಜಿಸು ; ಯೋಗಿ – ಚಿತ್ತವೃತ್ತಿ ನಿರೋಧ ಮಾಡಬಲ್ಲವನು , ಯತಿ ; ಅರಿಷಡ್ವರ್ಗಗಳು – ಕಾಮ , ಕ್ರೋಧ , ಲೋಭ , ಮೋಹ , ಮದ , ಮತ್ಸರಗಳು ; ಮೊಣೆ ಹೊಣೆ .

ಹೊಡೆ – ಹೊಟ್ಟೆ ; ಪಂಕ – ಕೆಸರು ; ಮೀಯ್ – ಸ್ನಾನಮಾಡು ; ಕಾಕಾಳಿ – ಕಾಗೆಗಳು ; ಗುಡಪಾನಂ ಬೆಲ್ಲದ ಪಾನಕ ; ಮಡಿ – ನೈರ್ಮಲ್ಯ , ಪರಿಶುದ್ಧತೆ ; ಚಿತ್ತ – ಮನಸ್ಸು .

2nd puc kannada pageyam balakanembare question answer

ಅ). ಒಂದು ವಾಕ್ಯದಲ್ಲಿ ಉತ್ತರಿಸಿ . ( ಒಂದು ಅಂಕದ ಪ್ರಶ್ನೆಗಳು )

1 ) ನಿಷ್ಟ್ರಯೋಜಕನಾದ ಮಗ ಯಾರು ?

ಮುಪ್ಪಿನಲ್ಲಿ ಆಗದವನು ನಿಷ್ಟ್ರಯೋಜಕನಾದ ಮಗ

2 ) ವೀರನಾದವನು ಏನನ್ನು ಬಲ್ಲವನಾಗಿರಬೇಕೆಂದು ಸೋಮನಾಥನು ಹೇಳಿದ್ದಾನೆ ?

ವೀರನಾದವನು ಶತೃಗಳನ್ನು ಇರಿಯಬಲ್ಲವನಾಗಿರಬೇಕೆಂದು ಸೋಮನಾಥನು ಹೇಳಿದ್ದಾನೆ .

3 ) ಹಗೆಯನ್ನು ಏನೆಂದು ಉಪೇಕ್ಷಿಸಬಾರದೆಂದು ಸೋಮನು ಹೇಳಿದ್ದಾನೆ ?

ಹಗೆಯನ್ನು ಚಿಕ್ಕದೆಂದು ಬಾಲಕನೆಂದು ಉಪೇಕ್ಷಿಸಬಾರದು ಎಂದು ಸೋಮನಾಥನು ಹೇಳಿದ್ದಾನೆ .

4 ) ಯಾರನ್ನು ಯೋಗಿ ಎನ್ನಬಹುದು ?

ಅರಿಷಡ್ವರ್ಗಗಳಾದ ಕಾಮ , ಕ್ರೋಧ , ಲೋಭ , ಮೋಹ , ಮದ , ಮತ್ಸರಗಳನ್ನು ಗೆದ್ದವನನ್ನು ‘ ಯೋಗಿ ‘ ಎನ್ನಬಹುದು .

5) ಹಲವು ಹಳ್ಳಗಳು ಸೇರಿ ಏನಾಗುತ್ತದೆ ?

ಹಲವು ಹಳ್ಳಗಳು ಸೇರಿ ಸಮುದ್ರವಾಗುತ್ತದೆ .

ಆ). ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕಗಳ ಪ್ರಶ್ನೆಗಳು )

1 ) ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವೇನು ?

ಬೇಕಾದಷ್ಟು ಧನವಿದ್ದ ಮಾತ್ರಕ್ಕೆ ಹೊಟ್ಟೆ ತುಂಬದು . ಹಸಿವಾದಾಗ ಹೊಟ್ಟೆ ತುಂಬಬೇಕಾದರೆ ಊಟ ( ಆಹಾರ ) ಬೇಕೆ ಹೊರತು ಹಣ ತಿಂದು ಹೊಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ , ಹೊಟ್ಟೆಯ ಹಸಿವು ನೀಗಿಸದ ಹಣವ ಪ್ರಯೋಜನಕ್ಕೆ ಬಾರದು . ಇದೇ ರೀತಿ ಮುಪ್ಪಿನ ಸಮಯದಲ್ಲಿ ಯೋಗಕ್ಷೇಮ ವಿಚಾರಿ ಪ್ರೀತಿಯಿಂದ ನೋಡಿಕೊಳ್ಳುವವನೇ ನಿಜವಾದ ‘ ಮಗ ‘ ಎಂಬುದಾಗಿ ಸೋಮನಾಥನು ಅಭಿಪ್ರಾಯ ಪಡುತ್ತಾನೆ .

2 ) ಶುಚಿ ಮತ್ತು ಸ್ವಾದಗಳನ್ನು ಕುರಿತು ಸೋಮನಾಥನ ಅಭಿಪ್ರಾಯವೇನು ?

ಮೈಮೇಲೆ ಅಂಟಿಕೊಂಡ ಕೆಸರನ್ನು ನೀರಿನಿಂದ ಶುಚಿಗೊಳಿಸಬಹುದು ಎಂಬುದಾಗಿ ಸೋಮನಾಥನು ಶುಚಿಯ ಬಗ್ಗೆ ಹೇಳಿದ್ದಾನೆ . ಉದಾಹರಣೆಗೆ ಸ್ವಾದ ‘ ಎಂಬುದು ( ರುಚಿ ) ಒಂದು ವಸ್ತುವಿನ ಗುಣವನ್ನು ಸೂಚಿಸುತ್ತದೆ . ಬೆಲ್ಲದ ಗುಣ ಸಿಹಿಯಾದರೆ , ಬೇವಿನ ಗುಣ ಕಹಿ , ಕಹಿಯಾದ ಬೇವನ್ನು ಬೆಲ್ಲದಲ್ಲಿ ಅದ್ದಿದ ಮಾತ್ರಕ್ಕೆ ನಾಲಿಗೆಗೆ ಬೆಲ್ಲದ ಸಿಹಿಯ ಸ್ವಾದ ದೊರೆತರು ಗಂಟಲಿಗೆ ಕಹಿಯ ಸ್ವಾದವೇ ದೊರೆಯುವುದು ಎಂಬುದಾಗಿ ಸ್ವಾದದ ಬಗ್ಗೆ ಅಭಿಪ್ರಾಯಪಟ್ಟಿದ್ದಾನೆ .

3 ) ಯಾರಿಂದ ಯಾವುದನ್ನು ಹೇಗೆ ಕಲಿಯಬೇಕೆಂದು ಸೋಮನಾಥನು ಹೇಳಿದ್ದಾನೆ ?

ಕೆಲವನ್ನು ಬಲ್ಲವರಿಂದ ಕಲಿಯಬೇಕು , ಶಾಸ್ತ್ರಗಳನ್ನು ಕೇಳುತ್ತಾ ಕೆಲವನ್ನು ಕಲಿಯಬೇಕು . ಕೆಲವನ್ನು ನಮ್ಮ ಉತ್ತಮ ಜ್ಞಾನದಿಂದ ಕಲಿಯಬೇಕು . ಕೆಲವನ್ನು ಸಜ್ಜನರ ಸಹವಾಸದಲ್ಲಿದ್ದು ಕಲಿಯಬೇಕೆಂದು ಸೋಮನಾಥನು ಹೇಳದ್ದಾನೆ .

4 ) ರಾಜ ಮತ್ತು ಮಂತ್ರಿಗಳಿಗೆ ಯಾವ ಅರ್ಹತೆಗಳಿರಬೇಕೆಂದು ಸೋಮನಾಥನು ಹೇಳಿದ್ದಾನೆ ?

ಕೋಪ – ಪಾಪಗಳನ್ನು ತೊರೆದು ಪ್ರೀತಿಯಿಂದ ಪ್ರಜೆಗಳ ೧ ಗಕ್ಷೇಮವನ್ನು ನೋಡಿಕೊಳ್ಳಬಲ್ಲವನು ರಾಜನಾಗಲು ಅರ್ಹನು . ಇದೇ ರೀತಿ ಸಮಯಕ್ಕೆ ತಕ್ಕ ಚತುರೋಪಾಯಗಳನ್ನು , ಚಮತ್ಕಾರಗಳನ್ನು ಬಲ್ಲವನು ಮಂತ್ರಿಯಾಗಲು ಅರ್ಹನ ಎಂಬುದಾಗಿ ಸೋಮನಾಥನು ಹೇಳಿದ್ದಾನೆ .

ಇ). ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )

1 ) ಸಕಾಲಕ್ಕೆ ಒದಗುವ ಸಹಾಯವೇ ಶ್ರೇಷ್ಠ ಎಂಬುದನ್ನು ಕವಿ ಹೇಗೆ ತಿಳಿಸಿದ್ದಾನೆ ?

ಹಸಿದಾಗ ಉಣ್ಣಲು ( ಊಟ ಮಾಡಲು ) ಆಗದಿದ್ದ ಮೇಲೆ ಹಣ ಎಷ್ಟಿದರೂ ಪ್ರಯೋಜನವಿಲ್ಲ . ಮಗನಿದ್ದು , ಮುಪ್ಪಿನಲ್ಲಿ ಯೋಗ – ಕ್ಷೇಮ ವಿಚಾರಿಸಿ ನೋಡಿಕೊಳ್ಳದಿದ್ದರೆ ಅಂಥಹ ಮಗನಿಂದಲೂ ಪ್ರಯೋಜನವಿಲ್ಲ . ಕಷ್ಟದಲ್ಲಿದ್ದಾಗ ಬಂದು ಸಹಾಯ ಮಾಡದಿದ್ದರೆ ಅಂಥಹ ಬಂಧುಗಳು ಏಕೆ ? ಅಂದರೆ ಅಂಥಹ ಬಂಧುಗಳಿಂದಲೂ ಏನು ಪ್ರಯೋಜನವಿಲ್ಲ . ಸಕಾಲಕ್ಕೆ ಒದಗುವ ಸಹಾಯವೇ ಶ್ರೇಷ್ಠ ಹೊರತು . ಅದು ಸಕಾಲಕ್ಕೆ ಪ್ರಯೋಜನವಾಗದಿದ್ದಲ್ಲಿ ಅಂಥಹ ಹಣವಾಗಲಿ , ಮಗನಾಗಲಿ , ಬಂಧುಗಳಾಗಲಿ ಶ್ರೇಷ್ಠರಲ್ಲ ಎಂಬುದಾಗಿ ಕವಿ ತಿಳಿಸಿದ್ದಾನೆ .

2 ) ವೀರ , ಮಂತ್ರಿ , ರಾಜ ಮತ್ತು ಯೋಗಿಗಳಿಗೆ ಇರಬೇಕಾದ ಅರ್ಹತೆಗಳೇನು ?

ವೀರನಾದವನಿಗೆ ಇರಿಯಬಲ್ಲ ಅರ್ಹತೆ ಇರಬೇಕು . ಸಮಯಕ್ಕನುಗುಣವಾಗಿ ಚಮತ್ಕಾರಗಳನ್ನು , ಜಾಣತನವನ್ನು ತೋರಿಸುವ ಅರ್ಹತೆ ಮಂತ್ರಿಯಲ್ಲಿರಬೇಕು . ಪ್ರಜೆಗಳನ್ನು ಸದಾ ಮಕ್ಕಳಂತೆ ಪ್ರೀತಿಯಿಂದ – ತಾಳ್ಮೆಯಿಂದ ನೋಡಿಕೊಳ್ಳುವ ಅರ್ಹತೆ ಉಳ್ಳವನೇ ನಿಜವಾದ ರಾಜನಾಗಬಲ್ಲನು . ಹಾಗೂ ಅರಿಷಡ್ವರ್ಗಗಳಾದ -ಕಾಮ , ಕೋಧ , ಮದ , ಮೋಹ , ಲೋಭ , ಮತ್ಸರಗಳನ್ನು ತ್ಯಜಿಸಿ ಸದ್ಗುಣಿಯಾಗಿ ಜ್ಞಾನಿಯಾಗಿರುವವನೇ ನಿಜವಾಗಿ ಯೋಗಿ ಎನಿಸಿಕೊಳ್ಳಲು ಅರ್ಹನಾಗಿರುತ್ತಾನೆ ಎಂಬುದಾಗಿ ಸೋಮನಾಥನು ತಿಳಿಸಿದ್ದಾನೆ

3 ) ಯಾವ ಯಾವ ಸಂಗತಿಗಳನ್ನು ಉಪೇಕ್ಷಿಸಬಾರದಾಗಿ ಸೋಮನಾಥನು ತಿಳಿಸಿದ್ದಾನೆ ?

ಚೇಳು ಚಿಕ್ಕದೆಂದು ಹಿಡಿದರೆ ಕಚ್ಚದೆ ಬಿಡದು , ಹಾವಿನಲ್ಲಿ ಮಣಿಯಿದ್ದರೂ ಹಾಲುಣಿ – ಸಾಕಿದರೆ ವಿಷ ಹೆಚ್ಚುವುದೇ ಹೊರತು ಅಮೃತವಲ್ಲ . ಪಕ್ಷಿಗಳ ರಕ್ಷಣೆ ಒಳಿತೆಂದು ಯಾರು ಗೂಬೆಯನ್ನು ಸಾಕಲಾರರು , ಚಿಕ್ಕ ಬಾಲಕ , ಇವನಲ್ಲಿ ಯಾವ ಹಗೆಯು ಇಲ್ಲ ಎಂದು ಕೆಲವೊಮ್ಮೆ ಕೈಚೆಲ್ಲಿ ಕುಳಿತುಕೊಳ್ಳುವುದು ಮುಂದೆ ನಾವೇ ಅಪಾಯಕ್ಕೆ ಆಹ್ವಾನವಿತ್ತಂತೆ ಆಗುವುದು . ಆದ್ದರಿಂದ ನಾವು ಯಾವುದೇ ಚಿಕ್ಕ ಸಂಗತಿಯಾದರು ಉಪೇಕ್ಷಿಸಬಾರದೆಂದು ಸೋಮನಾಥನು ತಿಳಿಸಿದ್ದಾನೆ .

4 ) ನಿರ್ಮಲಚಿತ್ತದ ಅಗತ್ಯವನ್ನು ಸೋಮನಾಥ ಹೇಗೆ ನಿರೂಪಿಸಿದ್ದಾನೆ ?

ಮೈ ಮೇಲೆ ಕೆಸರು ತಗುಲಿದರೆ ಅದನ್ನು ನೀರಿನಿಂದ ತೊಳೆಯಬಹುದು . ಆದರೆ ಮನಸ್ಸಿಗೆ ಕೆಸರೆಂಬ ದುರ್ಗುಣಗಳು ಅಂಟದಂತೆ ಸದ್ಗುಣಿಗಳಾಗಿ ಪರಿಶುದ್ಧವಾದ ಮನಸ್ಸನ್ನು , ನಿರ್ಮಲವಾದ ಚಿತ್ರವನ್ನು ಹೊಂದಿರಬೇಕು ಎಂಬುದಾಗಿ ಹೇಳಿದ್ದಾನೆ . ಅಷ್ಟೆ ಅಲ್ಲದೆ ಪಾಪ ಮಾಡಿ , ಆ ಪಾಪ ಕಳೆಯಲು ಪವಿತ್ರ ನದಿಯಲ್ಲಿ ಮಿಂದ ಮಾತ್ರಕ್ಕೆ ಮನಸ್ಸಿನ ಪಾಪ ಕಳೆಯುವುದಿಲ್ಲ . ಅದು ಕಾಗೆಮಿಂದಂತಾಗುವುದು ಎಂಬುದಾಗಿ ಕವಿ ಸೋಮೇಶ್ವರನು ಸದಾಕಾಲ ಸದಾಚಾರಿಯಾಗಿದ್ದು , ಸದ್ಗುಣಿಯಾಗಿ ನಿರ್ಮಲಚಿತ್ತವನ್ನು ಹೊಂದಿರಬೇಕು . ಆಗ ಮಾತ್ರ ನಮ್ಮ ಸೋಮೇಶ್ವರ ನಮ್ಮನ್ನು ಮೆಚ್ಚುವನು ಎಂಬುದಾಗಿ ಹೇಳಿದ್ದಾನೆ .

5 ) ಜ್ಞಾನವನ್ನು ಹೊಂದುವ ಮಾರ್ಗ ಯಾವುದೆಂಬುದನ್ನು ಕವಿ ಹೇಗೆ ವಿವರಿಸಿದ್ದಾನೆ ?

ಕವಿಯ ಪ್ರಕಾರ ಜ್ಞಾನವನ್ನು ಹೊಂದುವ ಸರಳ ಮಾರ್ಗವೆಂದರೆ – “ ಕೆಲವನ್ನು ಬಲ್ಲವರು ಅಂದರೆ ತಿಳಿದವರಿಂದ ಕೇಳಿ ಅರಿಯಬೇಕು . ಮತ್ತೆ ಕೆಲವನ್ನು ಶಾಸ್ತ್ರಗಳನ್ನು ಓದಿ ತಿಳಿಯಬೇಕು . ಕೆಲವನ್ನು ಮಾಡುವವರನ್ನು ಅಂದರೆ ಸಂಪ್ರದಾಯ – ರೂಢಿಗತವಾಗಿ ಬಂದುದನ್ನು ನೋಡಿ ತಿಳಿಯಬೇಕು ಮತ್ತೆ ಕೆಲವನ್ನು ನಮ್ಮ ಜ್ಞಾನದಿಂದ ಅರಿಯಬೇಕು . ಮತ್ತೆ ಕೆಲವನ್ನು ಸಜ್ಜನರೊಂದಿಗೆ ಬೆರೆತು ಕಲಿಯಬೇಕು ” . ಆಗ ಮಾತ್ರ ನಾವು ಜ್ಞಾನವನ್ನು ಸಂಪಾದಿಸಬಹುದು ಎಂಬುದಾಗಿ ಕವಿ ವಿವರಿಸಿದ್ದಾನೆ .

ಈ) ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

1 ) “ ಆಪತ್ತಿನೊಳ್ ಮಣಿದುಂ ನೋಡದ ಬಂಧುವೇತಕೆ . ”

‘ಪುಲಿಗೆರೆ ಸೋಮನಾಥನ ‘ ಸೋಮೇಶ್ವರ ಶತಕ’ದಿಂದಾಯ್ದ ‘ ಪಗೆಯಂ ಬಾಲಕನೆಂಬರೇ ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಸಕಾಲಕ್ಕೆ ಒದಗುವ ಸಹಾಯವು ಮಾತ್ರ ಉಪಯುಕ್ತವೆಂಬುದನ್ನು ವಿವರಿಸುತ್ತಾ ಕವಿ ಈ ಮೇಲಿನ ಮಾತನ್ನು ಹೇಳಿರುವನು . ಬಂಧುವಾದವನು ಆಪತ್ತಿನ ಕಾಲದಲ್ಲಿ ಬಂದು ಕಷ್ಟ – ಸುಖಗಳನ್ನು ವಿಚಾರಿಸಿ ಕೊಂಡು ನೆರವಿಗೆ ಬರಬೇಕು . ಅದು ಬಿಟ್ಟು ಸುಖವಿರುವಾಗ ಮಾತ್ರ ಬಂದು ಭೇಟಿ ಮಾಡಿ ಸಂತೋಷಿಸುವುದು , ಕಷ್ಟಬಂದಾಗ ತಿರುಗಿಯೂ ನೋಡದೆ ಹೊರಗುಳಿಯುವವನು ಬಂಧುವೇ ಅಲ್ಲ . ನಿಜವಾದ ಬಂಧು ಯಾರೆಂದರೆ ಕಷ್ಟದಲ್ಲಿ ಜೊತೆಗಿರುವವನು ಮಾತ್ರ ಎಂಬುದು ಪುಲಿಗೆರೆ ಸೋಮನಾಥನ ಅಭಿಪ್ರಾಯವಾಗಿದೆ .

2 ) “ತೃಣವೇ ಪರ್ವತವಲ್ಲವೇ . ”

‘ಪುಲಿಗೆರೆ ಸೋಮನಾಥನ ‘ ಸೋಮೇಶ್ವರ ಶತಕ’ದಲ್ಲಿನ ಈ ಸುಪ್ರಸಿದ್ಧ ಮಾತನ್ನು ಕವಿಯೇ ಹೇಳಿದ್ದಾನೆ . ಕಷ್ಟಕಾಲದಲ್ಲಿ ಒಂದು ಹುಲ್ಲುಕಡ್ಡಿಯಷ್ಟು ಸಹಾಯ ದೊರೆತರೂ ಅದು ಪರ್ವತದಷ್ಟು ದೊಡ್ಡದೆಂಬುದನ್ನು ಕವಿ ಇಲ್ಲಿ ವಿವರಿಸಿದ್ದಾನೆ . ಸಹಾಯ ಚಿಕ್ಕದಿರಲಿ , ದೊಡ್ಡದಿರಲಿ ಅದರ ಪ್ರಮಾಣ ಮುಖ್ಯವಲ್ಲ . ಸಕಾಲಕ್ಕೆ ಒದಗುವ ಸಹಾಯವು ಎಲ್ಲದಕ್ಕಿಂತಲೂ ದೊಡ್ಡದು . ಅದಕ್ಕೆ ಬೆಲೆ ಕಟ್ಟಲಾಗದು . ಚಿಕ್ಕಮಟ್ಟ ಸಹಾಯಗಳು ನಮಗೆ ಭರವಸೆಯನ್ನು ತುಂಬುತ್ತವೆ . ಆದ್ದರಿಂದ ಕವಿಯು ಕಷ್ಟಕಾಲದಲ್ಲಿ ಒದಗಿಬಂದ ಹುಲ್ಲುಕಡ್ಡಿ ಕೂಡ ಪರ್ವತ ಸದೃಶವಾದುದೆಂದಿರುವನು .

3 ) “ ಕಡುಪಾಪಂ ಬಲು ಮೀಯಲಾತ ಶುಚಿಯೇ . ”

‘ಸೋಮೇಶ್ವರ ಶತಕ’ದ ಕವಿ ಪುಲಿಗೆರೆಯ ಸೋಮನಾಥ ಈ ಮೇಲಿನಂತೆ ಪ್ರಶ್ನಿಸಿದ್ದಾನೆ . ಅಂತರಂಗದ ಶುಚಿತ್ವ ಮುಖ್ಯವೇ ಹೊರತು , ಬಹಿರಂಗದ ಶುಚಿಯಲ್ಲ ಎಂಬುದನ್ನು ವಿವರಿಸುವಾಗ ಆತ ಈ ಮೇಲಿನಂತೆ ಪ್ರಶ್ನಿಸಿರುವನು . ಕೆಲವರು ಸದಾ ಪಾಪಕಾರ್ಯಗಳಲ್ಲಿ ತೊಡಗಿಕೊಂಡಿದ್ದು , ಮೇಲಿಂದ ಮೇಲೆ ತೀರ್ಥಯಾತ್ರೆಗೆ ತೆರಳಿ , ಪವಿತ್ರ ತೀರ್ಥಗಳಲ್ಲಿ ಮಿಂದು ಪುಣ್ಯವಂತರಾದೆವೆಂಬ ಭ್ರಮೆಯಲ್ಲಿರುತ್ತಾರೆ . ತೀರ್ಥಸ್ನಾನ ಮಾಡಿದಾಕ್ಷಣ ಅವರ ಪಾಪ ದೂರಾಗಿ ಪುಣ್ಯ ಲಭಿಸುವುದೆ ? ತೀರ್ಥಸ್ನಾನ ಮಾಡಿ ಶುಚಿಗೊಳ್ಳುವುದಕ್ಕಿಂತ , ಪಾಪ ಕೆಲಸಗಳನ್ನು ಮಾಡದೆ ಅಂತರಂಗವನ್ನು ಶುಚಿಯಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯವೆಂದು ಕವಿ ಇಲ್ಲಿ ವಿವರಿಸಿರುವುದನ್ನು ಮನಗಾಣಬೇಕು .

4 ) “ ಪಗೆಯಂ ಬಾಲಕನೆಂಬರೇ . ”

‘ಈ ಮೇಲಿನ ವಾಕ್ಯವನ್ನು ಪುಲಿಗೆರೆ ಸೋಮನಾಥನು ರಚಿಸಿರುವ ಸೋಮೇಶ್ವರ ಶತಕದಿಂದ ಆಯ್ದುಕೊಳ್ಳಲಾಗಿದ್ದು ಇದೇ ಈ ಕಾವ್ಯಭಾಗದ ಶೀರ್ಷಿಕೆಯೂ ಆಗಿರುವುದನ್ನು ಗಮನಿಸಬಹುದು . ಶತ್ರುವನ್ನು ಬಾಲಕನೆಂದು , ಕಡೆಗಣಿಸಬಾರದು . ಇನ್ನು ಚಿಕ್ಕ ಬಾಲಕ ತಾನೆ ? ಆತ ನಮಗೇನು ಮಾಡಿಯಾನು ಎಂದು ಉದಾಸೀನ ಮಾಡಿದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ . ಚಿಕ್ಕವನಿರಲಿ , ದೊಡ್ಡವನಿರಲಿ ಶತ್ರು ಶತ್ರುವೇ . ಅವರ ಬಗ್ಗೆ ನಿರ್ಲಕ್ಷ್ಯ ತಾಳದೆ ಎಚ್ಚರದಿಂದ ಇರುವುದು ಅಗತ್ಯವೆಂದು ಕವಿ ನೀತಿಬೋಧೆ ಮಾಡಿರುವನು .

5 ) “ ಚೇಳ್ ಚಿಕ್ಕದೆಂದಳ್ಳರಿಂ ತೆಗೆಯಲ್ ಕಚ್ಚದೇ ”

‘ಪುಲಿಗೆರೆ ಸೋಮನಾಥನ ‘ ಸೋಮೇಶ್ವರ ಶತಕ’ದಿಂದಾಯ್ದ ‘ ಪಗೆಯಂ ಬಾಲಕನೆಂಬರೇ ‘ ಎಂಬ ಕಾವ್ಯಭಾಗದಲ್ಲಿ ಕವಿಯು ಈ ಮೇಲಿನ ವಾಕ್ಯವನ್ನು ಹೇಳಿ ದ್ದಾನೆ . ದುಷ್ಟತನ ಚಿಕ್ಕದಾಗಿದ್ದರೂ ಅದರಿಂದ ಅಪಾಯವೇ . ಅದನ್ನು ನಿರ್ಲಕ್ಷಿಸು ವಂತಿಲ್ಲ . ಶತ್ರುವನ್ನು ಬಾಲಕನೆಂದು ಅಲಕ್ಷ್ಯ ಮಾಡಿದರೆ ಅಪಾಯಕ್ಕೆ ಈಡಾಗಬಹುದು . ಚೇಳು ಚಿಕ್ಕದೆಂದು ಪ್ರೀತಿಯಿಂದ ಕೈಯಲ್ಲಿ ಹಿಡಿದುಕೊಂಡರೆ ಅದು ಕುಟುಕದೆ ಬಿಡದು . ಆದ್ದರಿಂದ ಚಿಕ್ಕದಿರಲಿ , ದೊಡ್ಡದಿರಲಿ ಅಪಾಯ ತರುವ ಸಂಗತಿಗಳಿಂದ ದೂರವಿದ್ದು , ಆ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಸೋಮನಾಥ ಕವಿಯು ನೀತಿಬೋಧೆ ಮಾಡಿರುವನು .

6 ) “ ಕೆಲವಂ ಬಲ್ಲವರಿಂದ ಕಲ್ಲು” .

‘ಪುಲಿಗೆರೆ ಸೋಮನಾಥನು ರಚಿಸಿರುವ ಶತಕದ ಪದ್ಯವೊಂದರ ಆರಂಭದ ಮಾತುಗಳಿವು . ಮನುಷ್ಯ ತಿಳಿವಳಿಕೆಯ ಮೂಲಕ ಸರ್ವಜ್ಞತೆಯನ್ನು ಹೊಂದಬೇಕು . ಹಲವು ಹಳ್ಳಗಳು ಸೇರಿ ಸಮುದ್ರವಾಗುವಂತೆ ಹಲವು ಮೂಲಗಳಿಂದ ವಿಚಾರವನ್ನು ತಿಳಿದುಕೊಳ್ಳಬೇಕೆಂಬುದನ್ನು ವಿವರಿಸುತ್ತಾ ಕವಿಯು ಈ ಮೇಲಿನ ವಾಕ್ಯವನ್ನು ಹೇಳಿರು ವನು . ನಮಗೆ ತಿಳಿದಿರದ ವಿಚಾರವನ್ನು ವಿಷಯತಜ್ಞರಾದ ಪಂಡಿತರಿಂದ ಕೇಳಿ ತಿಳಿದುಕೊಳ್ಳಬೇಕೆಂದು ಕವಿ ಈ ಮೇಲಿನ ವಾಕ್ಯದ ಮೂಲಕ ಸೂಚಿಸಿದ್ದಾನೆ .

7 ) “ ಲೋಕದೊಳ್ ಮಡಿಯೇ ನಿರ್ಮಲ ಚಿತ್ತವೆ . ”

‘ಈ ಮೇಲಿನ ವಾಕ್ಯವನ್ನು ಪುಲಿಗೆರೆ ಸೋಮನಾಥನ ‘ ಸೋಮೇಶ್ವರ ಶತಕ ‘ ದಿಂದಾಯ್ದ ‘ ಪಗೆಯಂ ಬಾಲಕನೆಂಬರೇ ‘ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ . ಕೆಟ್ಟದ್ದನ್ನು ಒಳ್ಳೆಯದರ ಜೊತೆಗಿಟ್ಟ ಮಾತ್ರಕ್ಕೆ ಅದರ ಕೆಟ್ಟ ಗುಣ ದೂರಾಗುವು ದಿಲ್ಲವೆಂಬುದನ್ನು ವಿವರಿಸುವಾಗ ಕವಿ ಈ ಮಾತನ್ನು ಹೇಳಿದ್ದಾನೆ . ಪಾಪಕಾರ್ಯಗಳಲ್ಲಿ ತೊಡಗಿದವನು ಪಂಚತೀರ್ಥಗಳಲ್ಲಿ ಮಿಂದ ಮಾತ್ರಕ್ಕೆ ಶುಚಿಯೆನಿಸುವುದಿಲ್ಲ . ಬೇವನ್ನು ಬೆಲ್ಲದ ಪಾನಕದೊಳಿಟ್ಟ ಮಾತ್ರಕ್ಕೆ ಅದರ ಕಹಿ ಗುಣ ದೂರಾಗಿ ಸಿಹಿಯಾಗುವುದೆ ? ಆದ್ದರಿಂದ ಮನಸ್ಸಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದೇ ನಿಜವಾದ ಮಡಿ , ಇತರ ಮಡಿಯ ಆಚರಣೆಗಳೆಲ್ಲ ಅರ್ಥಹೀನವೆಂದು ಕವಿಯು ವಿವರಿಸಿದ್ದಾನೆ .

2 PUC Kannada Pageyam Balakanembare Question Answer Notes pdf Download

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *