ದ್ವಿತೀಯ ಪಿ.ಯು.ಸಿ ಜಾಲಿಯ ಮರದಂತೆ ಕನ್ನಡ ನೋಟ್ಸ್‌ | 2 PUC Jaliya Maradante Kannada Notes.

ಜಾಲಿಯ ಮರದಂತೆ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd Puc Kannada Jaliya Maradante Poem Question Answer Notes Pdf Download 5th chapter Notes

jaliya maradante kannada notes class 12

ತರಗತಿ : ದ್ವಿತೀಯ ಪಿ.ಯು.ಸಿ

ಪದ್ಯದ ಹೆಸರು : ಜಾಲಿಯ ಮರದಂತೆ

ಕೃತಿಕಾರರ ಹೆಸರು : ಪುರಂದರದಾಸರು

ದ್ವಿತೀಯ ಪಿ.ಯು.ಸಿ ಜಾಲಿಯ ಮರದಂತೆ ಕನ್ನಡ ನೋಟ್ಸ್‌, 2 PUC Jaliya Maradante Kannada Notes.

ಕವಿ ಪರಿಚಯ :

‘ ಪುರಂದರವಿಠಲ ‘ ಎಂಬ ಅಂಕಿತದಿಂದ ಪ್ರಸಿದ್ಧರಾಗಿರುವ ಪುರಂದರದಾಸರು ಸುಮಾರು ೧೪೮೪ ರಲ್ಲಿ ಜನಿಸಿದರೆಂದು ಸಾಹಿತ್ಯ ಚರಿತ್ರಕಾರರು ಅಭಿಪ್ರಾಯಪಟ್ಟಿದ್ದಾರೆ . ಇವರ ಪೂರ್ವದ ಹೆಸರು ಶ್ರೀನಿವಾಸನಾಯಕ ಎಂಬುದು , ಮುತ್ತುರತ್ನಗಳ ವ್ಯಾಪಾರಿಗಳಾಗಿದ್ದ ಇವರು ಐಹಿಕಾಸಕ್ತಿಗಳಲ್ಲಿ ವೈರಾಗ್ಯ ಉಂಟಾದ ಕಾರಣ ತಮ್ಮ ಸಮಸ್ತ ಐಶ್ವರ್ಯವನ್ನೂ ದಾನಮಾಡಿ ಹರಿದಾಸರಾದರು , ಶ್ರೀ ವ್ಯಾಸರಾಯರನ್ನು ಆಶ್ರಯಿಸಿದರು . ಶ್ರೀ ವ್ಯಾಸರಾಯರೇ ಇವರಿಗೆ ‘ ಪುರಂದರವಿಠಲ ‘ ಎಂಬ ಅಂಕಿತವನ್ನು ನೀಡಿದರಂತೆ . ಕೀರ್ತನೆ , ಪದ , ಸುಳಾದಿ , ಉಗಾಭೋಗ ಮುಂತಾದ ಪ್ರಕಾರಗಳಲ್ಲಿ ಲಕ್ಷಾಂತರ ಹಾಡುಗಳನ್ನು ರಚಿಸಿರುವೆನೆಂದು ತಾವೇ ತಮ್ಮ ದೇವರನಾಮವೊಂದರಲ್ಲಿ ಹೇಳಿಕೊಂಡಿರುವರಾದರೂ ನಮಗೆ ಸಿಕ್ಕಿರುವ ಅವರ ಕೀರ್ತನೆಗಳ ಸಂಖ್ಯೆ ಎಂಟುನೂರರಷ್ಟು ಮಾತ್ರ , ಪಕ್ವವಾದ ಜೀವನಾನುಭವ , ಸಮಾಜದ ಹಿತ , ಅಧ್ಯಾತ್ಮದ ಅಗತ್ಯಗಳನ್ನು ಪುರಂದರದಾಸರು ತಮ್ಮ ರಚನೆಗಳಲ್ಲಿ ಒತ್ತಿ ಹೇಳಿದ್ದಾರೆ . ಇವರ ಕೀರ್ತನೆಗಳು ಕರ್ನಾಟಕ ಸಂಗೀತವನ್ನು ಉಜ್ವಲಗೊಳಿಸಿದ್ದರಿಂದ ‘ ಕರ್ನಾಟಕ ಸಂಗೀತ ಪಿತಾಮಹ ‘ ಎಂಬ ಹೆಗ್ಗಳಿಕೆಯೂ ಇವರದಾಗಿದೆ . ‘ ದಾಸರೆಂದರೆ ಪುರಂದರ ದಾಸರಯ್ಯ ‘ ಎಂದು ವ್ಯಾಸರಾಯರಿಂದ ಹೊಗಳಿಸಿಕೊಂಡ ಪುರಂದರದಾಸರ ಸಾಹಿತ್ಯ ಕೃಷಿ ಅತ್ಯಂತ ಜನಪ್ರಿಯವಾದುದು . ೧೫೬೪ ಪುಷ್ಯ ಬಹುಳ ಅಮಾವಾಸ್ಯೆಯಂದು ಇವರು ಕಾಲವಾದರೆಂದು ನಂಬಲಾಗಿದೆ . ಪುರಂದರದಾಸರು ಸಮಾಜ ವಿಮರ್ಶೆಯನ್ನು ಕುರಿತು ರಚಿಸಿರುವ ಬಹುಪಾಲು ಕೀರ್ತನೆಗಳಲ್ಲಿ ಅನೀತಿ , ಅನಾಚಾರ , ಸುಳ್ಳು , ಕಪಟ , ಬೂಟಾಟಿಕೆ , ಡಾಂಬಿಕತೆಗಳನ್ನು ಕಟುವಾಗಿ ಟೀಕಿಸಿದ್ದಾರೆ . ಸತ್ಯಧರ್ಮ , ನೈಜನೀತಿ , ಜೀವನ ನಿಷ್ಠೆ , ಪ್ರಾಮಾಣಿಕತೆಯ ಮೌಲ್ಯಗಳನ್ನು ಅನುಸರಿಸಿ ಬದುಕುತ್ತಿರುವವರಿಗಿಂತಲೂ ದುರ್ಜನರಿಗೆ ಸಿಗುವ ಪ್ರಾಶಸ್ತ್ರವನ್ನು ಪ್ರಸ್ತುತ ಕೀರ್ತನೆಯಲ್ಲಿ ಲೇವಡಿ ಮಾಡಿದ್ದಾರೆ . ಸಮಾಜಕ್ಕೆ ನಿಯೋಜಕರಾದವರನ್ನು ಜಾಲಿಯ ಮರಕ್ಕೆ ಹೋಲಿಸಿರುವುದು ಔಚಿತ್ಯಪೂರ್ಣವಾಗಿದೆ . ಈ ಹೋಲಿಕೆಯ ಹಿಂದೆ ‘ ಮುಳ್ಳಾಗಬೇಡ , ಹೂವಾಗು ‘ ಎಂಬ ಆಶಯವಿರುವುದನ್ನು ಗಮನಿಸಿದರೆ ಪುರಂದರದಾಸರ ಸಾಮಾಜಿಕ ಕಳಕಳಿ , ನೀತಿಬೋಧೆಯ ಸತ್ವ ಅರಿವಾಗಬಹುದು .

ಕಾವ್ಯದ ಹಿನ್ನೆಲೆ :

ಸಮಾಜದಲ್ಲಿ ಅಪಾತ್ರರಾದವರಿಗೆ ದೊರೆಯುತ್ತಿರುವ ಮಹತ್ತ್ವ , ಗೌರವಗಳು ಸತ್ಪಾತ್ರರಿಗೆ ದೊರಕುತ್ತಿಲ್ಲ . ‘ ಜಾಲಿಯ ಮರವು ನೆರಳಲ್ಲ ‘ ಎಂದು ಜಾನಪದರೂ ಹಾಡಿದ್ದಾರೆ . ಆದರೂ ಜಾಲಿಮರದಂತಿರುವವರ ವಿಜೃಂಭಣೆಯು ಸಮಾಜ ಜೀವನದಲ್ಲಿ ಎಲ್ಲೆಂದರಲ್ಲಿ ಉಗ್ರವಾಗಿ ಬೆಳೆಯುತ್ತಾ ನಡೆದಿದೆ . ಜಾಲಿಮರ – ದುರ್ಜನರ ವೃಂದ ಎರಡನ್ನೂ ಸಮೀಕರಿಸಿ ಪುರಂದರದಾಸರು ರಚಿಸಿರುವ ಈ ರಚನೆಯಲ್ಲಿ ಹೂವಿಲ್ಲದ , ಹಣ್ಣಿಲ್ಲದ , ನೆರಳಿಲ್ಲದ ರಸಹೀನವಾದ ಜಾಲಿಯ ಮರವು ಸಮಾಜ ಕಂಟಕರ ಇದೇ ಬಗೆಯ ಅವಗುಣಗಳನ್ನು ಧ್ವನಿಸುತ್ತದೆ . ಸತ್ಪುರುಷರಿಗೆ ದುರ್ಜನರು ಆಶ್ರಯ ಕೊಡುವುದಿಲ್ಲ . ದುರ್ಬಲರಿಗೆ ಸಹಾಯ ಮಾಡುವುದಿಲ್ಲ . ಜ್ಞಾನಗಂಧವಾಗಲೀ , ಸ್ನೇಹರಸವಾಗಲೀ ಅವರಲ್ಲಿಲ್ಲ . ಆಮೂಲಾಗ್ರವಾಗಿ ಕಂಟಕ ವೃತ್ತಿಯನ್ನೇ ಮೆರೆಸುವ ದುರ್ಜನರ ಸ್ವಭಾವ ಚಿತ್ರಣ ಈ ಕೀರ್ತನೆಯಲ್ಲಿ ಸಮರ್ಥವಾಗಿ ರೂಪಿತವಾಗಿದೆ .

ಶಬ್ದಾರ್ಥ :

ಧರೆ – ಭೂಮಿ ; ದುರ್ಜನ – ಕೆಟ್ಟ ಜನ ; ಮೂಲಾಗ್ರ ಪರಿಯಂತ – ಬುಡದಿಂದ ತುದಿಯವರೆಗೆ ; ಬಳಲಿ -ಆಯಾಸಗೊಂಡು , ದಣಿದು ; ಕುಸುಮ – ಹೂವು , ಸ್ವಾದ – ರುಚಿ ; ಷಡ್ರಸಾನ್ನ – ಉಪ್ಪು , ಕಾರ , ಸಿಹಿ , ಕಹಿ , ಹುಳಿ ಮತ್ತು ಒಗರುಗಳೆಂಬ ಆರು ಬಗೆಯ ರುಚಿಭೇದಗಳುಳ್ಳ ಆಹಾರ ; ನಾರು – ವಾಸನೆ ಬೀರು : ಕರ್ಮ – ಕೆಲಸ ; ತೊಟಕು – ಸ್ವಲ್ಪವಾದರೂ ; ಬಿನ್ನಾಣ- ಒನಪು , ಒಯ್ಯಾರ , ಸೊಬಗು : ಹಾಸ್ಯ-ಗೇಲಿ ; ಕುನ್ನಿ – ನಾಯಿ ,

2nd PUC Kannada Jaliya Maradante Poem Question Answer

ಅ ) ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

1 ) ಜಾಲಿಯ ಮರದಂತಿರುವವರು ಯಾರು ?

ಜಾಲಿಯ ಮರದಂತಿರುವವರು ದುರ್ಜನರು .

2 ) ಯಾರಿಗೆ ನೆರಳು ಸಿಗುವುದಿಲ್ಲ ?

ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳು ಸಿಗುವುದಿಲ್ಲ .

3 ) ಜಾಲಿಯ ರಸಸ್ವಾದ ಹೇಗಿರುತ್ತದೆ ?

ಜಾಲಿಯ ರಸಸ್ವಾದ ವಿಷದಂತಿರುತ್ತದೆ .

4 ) ದುರ್ಗಂಧ ಬಿಡದಿರುವುದು ಯಾವುದು ?

ದುರ್ಗಂಧ ಬಿಡದಿರುವುದು ಊರಹಂದಿ

5 ) ಯಾವ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ ?

ಬಿನ್ನಾಣದ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ .

6 ) ಜಾಲಿಯ ಮುಳ್ಳು ಹೇಗೆ ಆವರಿಸಿರುತ್ತದೆ ?

ಬುಡದಿಂದ ತುದಿಯವರೆಗೂ ಜಾಲಿಯ ಮುಳ್ಳು ಆವರಿಸಿರುತ್ತದೆ .

7 ) ತತ್ವಜ್ಞಾನವನ್ನು ಕೇಳದವರಾರು ?

ತತ್ವಜ್ಞಾನವನ್ನು ಕೇಳದವರು ದುರ್ಜನರು .

ಆ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

1 ) ಜಾಲಿಯ ಮರದ ನಿರರ್ಥಕತೆಯನ್ನು ಪುರಂದರದಾಸರು ಹೇಗೆ ತಿಳಿಸಿದ್ದಾರೆ ?

ಜಾಲಿಯ ಮರವು ಆಮೂಲಾಗ್ರ ಅಂದರೆ ಬುಡದಿಂದ ತುದಿಯವರೆಗೂ ಮುಳ್ಳಿನಿಂದ ಕೂಡಿರುತ್ತದೆ . ಇದರಲ್ಲಿ ಎಲೆಗಳಾಗಲಿ , ಸುವಾಸನೆ ಬೀರುವ ಹೂವಾಗಲಿ , ಹಣ್ಣಾಗಲಿ ಬಿಡುವುದಿಲ್ಲ . ಇದರಿಂದಾಗಿ ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಾಗಲಿ , ಹಸಿದು ಬಂದವರಿಗೆ ಹಣ್ಣಾಗಲಿ ಸಿಗುವುದಿಲ್ಲ ಕೂರಲು ಕೂಡ ಸ್ಥಳ ದೊರಕದು . ಅದರಿಂದ ಬರುವ ರಸಸ್ವಾದವು ವಿಷದಂತೆ ಇರುತ್ತದೆ ಎಂಬುದಾಗಿ ಪುರಂದರದಾಸರು ಹೇಳಿದ್ದಾರೆ .

2 ) ಯಾರಿಗೆ ಷಡ್ರಸಾನ್ನವನಿಕ್ಕಿ ಉಪಯೋಗವಿಲ್ಲ ? ಏಕೆ ?

ಊರ ಹಂದಿಗೆ ಷಡ್ರಸಾನ್ನವನಿಕ್ಕಿ ಉಪಯೋಗವಿಲ್ಲ . ಏಕೆಂದರೆ ಅದಕ್ಕೆ ನಾರುವ ದುರ್ಗಂಧವೇ ಪ್ರಿಯವಾಗಿರುತ್ತದೆ .

3 ) ಯಾರಿಗೆ ತತ್ವಜ್ಞಾನ ಹೇಳಿ ಪ್ರಯೋಜನವಿಲ್ಲ ?

ದುರ್ಜನರಿಗೆ ತತ್ವಜ್ಞಾನ ಹೇಳಿ ಪ್ರಯೋಜನವಿಲ್ಲ .

4 ) ದುರ್ಜನರ ಕಾರ್ಯ ಯಾವ ಬಗೆಯದು ?

ದುರ್ಜನರು ಇತರರಿಗೆ ಉಪಕಾರ ಮಾಡುವುದಂತು ಇಲ್ಲವೆ ಇಲ್ಲ . ಕೇವಲ ಬಿನ್ನಾಣದ ಮಾತುಗಳನ್ನಾಡುತ್ತಾ , ಮೋಸಗೊಳಿಸುತ್ತಲೆ ಇರುತ್ತಾರೆ . ಇವರ ಕಾರ್ಯವೆಲ್ಲ ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ ಇರುತ್ತದೆ ಎಂಬುದಾಗಿ ಪುರಂದರದಾಸರು ಹೇಳಿದ್ದಾರೆ .

ಇ ) ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )

1 ) ಜಾಲಿಯ ಮರವು ನಿರಪಯುಕ್ತವೆಂಬುದನ್ನು ಪುರಂದರದಾಸರು ಹೇಗೆ ನಿರೂಪಿಸಿದ್ದಾರೆ ?

ಜಾಲಿಯ ಮರವು ಬುಡದಿಂದ ತುದಿಯವರೆಗೆ ಅಂದರೆ ಆಮೂಲಾಗ್ರ ಮುಳ್ಳಿನಿಂದ ತುಂಬಿಕೊಂಡಿರುತ್ತದೆ . ಬಿಸಿಲಲ್ಲಿ ಬಳಲಿ ಬಂದವರಿಗೆ ಎಲೆಗಳಿಲ್ಲ . ಕಾರಣ ನೆರಳು ಇರುವುದಿಲ್ಲ . ಹಸಿದು ಬಂದವರಿಗೆ ಈ ಮರದಿಂದ ಹಣ್ಣು ಕೂಡ ದೊರಕದು . ಏಕೆಂದರೆ ಇದರಲ್ಲಿ ಹಣ್ಣು ಕೂಡ ಬಿಡುವುದಿಲ್ಲ . ಇದು ಈ ಮರದಿಂದ ಹೂವಿನ ಸುವಾಸನೆಯೂ ಇರದು . ಕೂರಲು ಸ್ಥಳವು ಇರುವುದಿಲ್ಲ . ಇದರಲ್ಲಿ ವಿಷದ ಸ್ವಾದವಿರುತ್ತದೆ . ಆದ್ದರಿಂದ ಜಾಲಿಯ ಮರವು ನಿರುಪಯುಕ್ತವೆಂಬುದನ್ನು ಪುರಂದರದಾಸರು ನಿರೂಪಿಸಿದ್ದಾರೆ .

2 ) ಜಾಲಿಮರ ಮತ್ತು ದುರ್ಜನರನ್ನು ಸಮೀಕರಿಸುವುದರ ಔಚಿತ್ಯವನ್ನು ಚರ್ಚಿಸಿ .

ಜಾಲಿಮರ ಮತ್ತು ದುರ್ಜರನ್ನು ಪುರಂದರದಾಸರು ಸಮೀಕರಿಸುತ್ತ ಈ ರೀತಿ ಹೇಳಿದ್ದಾರೆ . “ ಹೇಗೆ ಜಾಲಿ ಮರವು ಹೂವಿಲ್ಲದ , ಹಣ್ಣಿಲ್ಲದ , ನೆರಳಿಲ್ಲದ , ರಸಹೀನವಾಗಿರುತ್ತದೆಯೋ ಅದೇ ರೀತಿ ದುರ್ಜನರು ಉತ್ತಮ ಗುಣಗಳಿಂದ ದೂರ ಉಳಿದು , ಅವಗುಣಗಳನ್ನು ಬೆಳೆಸಿಕೊಂಡಿರುತ್ತಾರೆ . ದುರ್ಜನರು ಸತ್ಪುರುಷರಿಗೆ ಆಶ್ರಯಕೊಡುವುದಿಲ್ಲ . ದುರ್ಬಲರಿಗೆ ಸಹಾಯ ಮಾಡುವುದಿಲ್ಲ . ಜ್ಞಾನದ ಗಂಧವು ಇವರಿಗಿರುವುದಿಲ್ಲ . ಸ್ನೇಹರಸದ ಅರಿವು ಇವರಿಗಿರುವುದಿಲ್ಲ . ಆಮೂಲಾಗ್ರ ಕಂಟಕ ವೃತ್ತಿಯನ್ನೇ ಮೆರೆಸುವ ದುರ್ಜನರು , ಜಾಲಿಯ ಮರದಂತೆಯೇ ಸರಿ . –

3 ) ಸಮಾಜ ಕಂಟಕರ ಬಗೆಗೆ ಪುರಂದರದಾಸರ ಅಭಿಪ್ರಾಯಗಳನ್ನು ಸಂಗ್ರಹಿಸಿರಿ .

ದುರ್ಜನರು ಸಮಾಜಕಂಟಕರಾಗಿರುತ್ತಾರೆ . ಇವರಿಂದ ಸಮಾಜದ ಜನರು ಮೋಸ ಹೋಗುತ್ತಾ ತೊಂದರೆಗೆ ಸಿಲುಕುವರು . ಇವರು ಸತ್ಪುರುಷರಿಗೆ ಆಶ್ರಯ ನೀಡುವುದಾಗಲಿ , ದುರ್ಬಲರಿಗೆ ಸಹಾಯ ಮಾಡುವ ಮನಸ್ಸಾಗಲಿ ಇರುವುದಿಲ್ಲ . ಇವರು ಸ್ನೇಹಪರರು ಕೂಡ ಆಗಿರುವುದಿಲ್ಲ . ಇವರಿಗೆ ಜ್ಞಾನದ ಗಂಧವು ಇರುವುದಿಲ್ಲ . ಹಿತನುಡಿಗಳು ಕೂಡ ಇವರಿಗೆ ರುಚಿಸದು . ಆದ್ದರಿಂದ ದುರ್ಜನರು ಸಮಾಜದ ಕಂಟಕರಾಗಿರುತ್ತಾರೆ ಎಂಬುದಾಗಿ ಪುರಂದರದಾಸರು ತಿಳಿಸಿಕೊಟ್ಟಿದ್ದಾರೆ .

ಈ ) ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

೧. “ ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ “

ʼಪುರಂದರದಾಸರು ರಚಿಸಿದ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯ ಆರಂಭದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು . ದುರ್ಜನರನ್ನು ಜಾಲಿಯ ಮರದೊಂದಿಗೆ ಹೋಲಿಸಿರುವ ಕವಿಯು , ಜಾಲಿಯ ಮರದಲ್ಲಿ ಬುಡದಿಂದ – ತುದಿಯವರೆಗೂ ಮುಳ್ಳುಗಳೇ ತುಂಬಿರುತ್ತವೆ . ಇದೇ ರೀತಿ ದುರ್ಜನರಲ್ಲಿಯೂ ಬರಿಯ ಕೆಟ್ಟ ವಿಚಾರ – ದುಷ್ಟಬುದ್ಧಿಗಳೇ ತುಂಬಿರುತ್ತವೆ . ಆದ್ದರಿಂದ ದುರ್ಜನರು ಸಮಾಜದಲ್ಲಿ ಜಾಲಿಯಮರದಂತೆ ನಿರುಪಯುಕ್ತರು , ಅವರು ಒಳ್ಳೆಯವರನ್ನು ಚುಚ್ಚುವ ಮುಳ್ಳುಗಳಿದ್ದಂತೆ ಎಂದು ಕವಿ ಹೇಳಿರುವರು .

೨. “ ಕುಸುಮವಾಸನೆಯಿಲ್ಲ ಕೂಡಲು ಸ್ಥಳವಿಲ್ಲ”

ʼಪುರಂದರದಾಸರ ‘ ಜಾಲಿಯ ಮರದಂತೆ ‘ ಎಂಬ ಸುಪ್ರಸಿದ್ಧ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಜಾಲಿಯ ಮರವನ್ನು ಕುರಿತು ಕವಿಯು ಈ ಮೇಲಿನ ಮಾತನ್ನಾಡಿದ್ದಾರೆ . ಜಾಲಿಯ ಮರವು ಅಡಿಯಿಂದ ಮುಡಿಯವರೆಗೆ ಮುಳ್ಳನ್ನೇ ತುಂಬಿಕೊಂಡಿರು ತದೆ . ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಾಗಲಿ , ಹಸಿದು ಬಂದವರಿಗೆ ಹಣ್ಣಾಗಲಿ ಅದರಿಂದ ಸಿಗುವುದಿಲ್ಲ . ಅದರ ಹೂವು ಕೂಡ ಸುವಾಸನೆಯನ್ನು ಬೀರುವುದಿಲ್ಲ .ಮರದ ಕೆಳಗೆಲ್ಲಾ ಮುಳ್ಳು ಬಿದ್ದಿರುತ್ತದೆಯಾದ್ದರಿಂದ ಜಾಲಿಯ ಮರದ ಕೆಳಗೆ ಕುಳಿತುಕೊಳ್ಳಲೂ ಸ್ಥಳವಿರುವುದಿಲ್ಲ . ಒಟ್ಟಾರೆ ಜಾಲಿಯ ಮರದಿಂದ ಯಾವ ಉಪಯೋಗವೂ ಇರುವುದಿಲ್ಲವೆಂದು ಕವಿ ವಿವರಿಸಿದ್ದಾರೆ .

೩. “ ನಾರುವ ದುರ್ಗಂಧ ಬಿಡಬಲ್ಲುದೆ “

ʼಪುರಂದರದಾಸರು ರಚಿಸಿರುವ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ದುರ್ಜನರಿಗೆ ಮಾನ್ಯತೆ ನೀಡುವುದು ವ್ಯರ್ಥವೆಂಬುದನ್ನು ವಿವರಿಸುವಾಗ ಕವಿಯು ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ . ಊರಿನ ಹೊಲಸಿನಲ್ಲಿ ಜೀವಿಸುವ ಹಂದಿಯನ್ನು ತಂದು , ಅದಕ್ಕೆ ಷಡ್ರಸಾನ್ನ ಭೋಜನ ಮಾಡಿಸಿದ ಮಾತ್ರಕ್ಕೆ ಅದು ತನ್ನ ಮೈಯಿಂದ ದುರ್ಗಂಧ ಬೀರುವುದನ್ನು ಬಿಡುವುದಿಲ್ಲ . ಇದರಂತೆಯೇ ಸದಾ ದುಷ್ಟ ಕೆಲಸದಲ್ಲಿ ಮುಳುಗಿರುವ ದುರ್ಜನರಿಗೆ ತತ್ರೋಪದೇಶಗಳನ್ನು ಹೇಳಿದರೆ ಅವರು ತಮ್ಮ ಸ್ವಭಾವ ಬದಲಾಯಿಸಿಕೊಳ್ಳುವುದಿಲ್ಲ . ಆದ್ದರಿಂದ ಕವಿಯು ಹಂದಿ ಮತ್ತು ದುರ್ಜನರ ಮೂಲಸ್ವಭಾವಗಳನ್ನು ಬದಲಾಯಿಸಲು ಪ್ರಯತ್ನಿಸುವುದು ವ್ಯರ್ಥವಾದ ಕೆಲಸವೆಂದಿದ್ದಾರೆ .

೪. “ ಬಿನ್ನಾಣದ ಮಾತಿಗೆ ಕೊನೆಯಿಲ್ಲ”

ʼಪುರಂದರದಾಸರ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ದುರ್ಜನರ ವರ್ತನೆಯನ್ನು ಈ ಮೇಲಿನ ವಾಕ್ಯದ ಮೂಲಕ ಕವಿಯು ಟೀಕೆ ಮಾಡಿರುವರು . ಸದಾ ದುಷ್ಟತನದ ಕಾರ್ಯಗಳಲ್ಲಿ ಮುಳುಗಿರುವ ದುರ್ಜನರಿಂದ ಸಮಾಜಕ್ಕೆ ಎಳ್ಳಷ್ಟು ಉಪಯೋಗವಿಲ್ಲ . ಆದರೂ ಅವರು ತನ್ನಿಂದಲೇ ಹಾಗಾಯ್ತು , ಹೀಗಾಯ್ತು ಎಂದು ಜಂಬ ಕೊಚ್ಚುತ್ತಿರುತ್ತಾರೆ . ಆದ್ದರಿಂದ ಕವಿಯು ಅವರ ಜಂಬದ ವರ್ತನೆಯನ್ನು “ ಬಿನ್ನಾಣದ ಮಾತಿಗೆ ಕೊನೆಯಿಲ್ಲ ‘ ಎಂದು ಟೀಕೆ ಮಾಡಿದ್ದಾರೆ .

2nd puc Kannada Jaliya Maradante poem Question Answer Notes Pdf Download

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh