ದ್ವಿತೀಯ ಪಿ.ಯು.ಸಿ. ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಕನ್ನಡ ಸಾರಾಂಶ | 2nd PUC Innu Huttadeyirali Nariyarennavolu Kannada Summary

2nd PUC ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಕನ್ನಡ ಸಾರಾಂಶ, Innu Huttadeyirali Nariyarennavolu Kannada Summary Pdf Download 2022

ತರಗತಿ : ದ್ವಿತೀಯ ಪಿ.ಯು.ಸಿ.

ಪದ್ಯದ ಹೆಸರು : ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು

ಕೃತಿಕಾರರ ಹೆಸರು : ಕುಮಾರವ್ಯಾಸ

Innu Huttadeyirali Nariyarennavolu Kannada Summary
Innu Huttadeyirali Nariyarennavolu Kannada Summary

Innu Huttadeyirali Nariyarennavolu Kannada Summary

ಪ್ರಸ್ತುತ ಕಾವ್ಯಭಾಗವನ್ನು ಕುಮಾರವ್ಯಾಸನ ʼಕರ್ಣಾಟ ಭಾರತ ಕಥಾಮಂಜರಿʼ ಎಂಬ ಮಹಾಕಾವ್ಯದ ವಿರಾಟಪರ್ವದಿಂದ ಆಯ್ದುಕೊಳ್ಳಲಾಗಿದೆ. ಪಾಂಡವರು ಒಂದು ವರ್ಷದ ಅಜ್ಞಾತವಾಸದ ಅವಧಿಯನ್ನು ವಿರಾಟ ರಾಜನ ಆಶ್ರಯದಲ್ಲಿ ವೇಷ ಮರೆಸಿಕೊಂಡು ಬೇರೆ – ಬೇರೆ ಹೆಸರುಗಳಿಂದ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡು ಕಾಲ ಕಳೆಯುತ್ತಿರುತ್ತಾರೆ . ದೌಪದಿ ಕೂಡಿ ಸೈರೇಂದ್ರಿ ಎಂಬ ಹೆಸರಿನಲ್ಲಿ ವಿರಾಟರಾಜನ ರಾಣಿ ಸುದೇಷ್ಟೆಯ ದಾಸಿಯಾಗಿರುತ್ತಾಳೆ . ಸುದೇಷ್ಠೆಯ ತಮ್ಮನಾದ ಕೀಚಕನು ಒಮ್ಮೆ ದಾಸಿ ಸೈರೇಂದ್ರಿಯನ್ನು ಕಂಡು ಮೋಹಿತನಾಗುತ್ತಾನೆ . ಆಗಾಗ ಪದೇ ಪದೇ ಅವಳನ್ನು ಕೆಣಕುತ್ತ ಪೀಡಿಸುತ್ತಿರುತ್ತಾನೆ . ಒಮ್ಮೆಯಂತು ವಿರಾಟರಾಜನ ಓಲಗದಲ್ಲಿ ದೌಪದಿಯನ್ನು ಹಿಡಿದೆಳೆಯಲೆತ್ನಿಸಿ ಸಾಧ್ಯವಾಗದಿದ್ದಾಗ ಕಾಲಿನಿಂದ ಒದೆದು ಅವಮಾನಿಸುತ್ತಾನೆ . ಹೀಗೆ ಕೀಚಕನ ನಿರಂತರವಾದ ಉಪಟಳದಿಂದ ನೊಂದು ದುಃಖಿತೆಯಾದ ದೌಪದಿಯು ಆತನನ್ನು ಕೊಲ್ಲುವಂತೆ ಭೀಮನಲ್ಲಿಗೆ ಬೇಡಿಕೊಳ್ಳಲು ಬರುವ ಪ್ರಸಂಗದೊಂದಿಗೆ ಪ್ರಸ್ತುತ ಪಠ್ಯಭಾಗ ಆರಂಭವಾಗುತ್ತದೆ .

ನನ್ನ ಸಂಕಟ – ನೋವುಗಳನ್ನು ಯಾರಿಗೆ ಹೇಳಲಿ ? ಯಾರ ಬಳಿ ಹೋಗಲಿ ? ಯಾರಿಗೆ ನನ್ನ ದುಃಖವನ್ನು ಹೇಳಿಕೊಳ್ಳಲಿ ? ನನ್ನನ್ನು ಕಾಪಾಡಿರಿ ಎಂದು ಯಾರನ್ನು ಬೇಡಿಕೊಳ್ಳಲಿ ? ಅಯ್ಯೋ ಈ ಹೆಣ್ಣು ಜನ್ಮವನ್ನು ಸುಡಬೇಕು . ಮಹಾಪಾಪಿ ಯಾದ ನನ್ನಂತೆ ಈ ಹಿಂದೆ ಯಾರು ಕಷ್ಟದಿಂದ ಸೊರಗಿದವರಿದ್ದಾರೆ ? ನನಗೆ ಮರಣ ವಾದರೂ ಬರುವುದಿಲ್ಲವೇಕೆ ? ಎಂದು ಮುಂತಾಗಿ ಚಿಂತೆಯಿಂದ ದುಃಖಿಸುತ್ತಾ ದೌಪದಿಯು ತನ್ನ ಹೊಟ್ಟೆಯನ್ನು ಹೊಡೆದುಕೊಂಡು ರೋದಿಸಿದಳು .

ತನ್ನ ಐವರು ಗಂಡಂದಿರಲ್ಲಿ ಯಾರು ತನ್ನ ದುಃಖವನ್ನು ತೊಡೆಯಲು ಯೋಗ್ಯರೆಂದು ದೌಪದಿಯು ಮನದಲ್ಲೇ ಯೋಚಿಸುವ ವಿವರಗಳು ಈ ಪದ್ಯದಲ್ಲಿವೆ . ಹಿರಿಯವನಾದ ಯುಧಿಷ್ಠಿರನಿಗೆ ಹೇಳೋಣವೆಂದರೆ ಅವನಿಗೆ ಧರ್ಮ ಮತ್ತು ಕ್ಷಮೆ ಗಳೆಂಬ ಗ್ರಹ ಬಡಿದಿದೆ . ಅರ್ಜುನನಿಗೆ ನನ್ನ ಮೇಲೆ ಮಮತೆಯಿದೆಯೆಂದುಕೊಳ್ಳೋಣ ವೆಂದರೆ ಅವನಿಗೆ ಅಣ್ಣನಾಜ್ಞೆಯ ಹುಚ್ಚು ಹಿಡಿದಿದೆ . ಇನ್ನು ನಕುಲ – ಸಹದೇವರಿಗೆ ಹೇಳೋಣವೆಂದರೆ ಅವರಲ್ಲಿ ಈ ನಾಯನ್ನೂ ಕೊಲ್ಲುವ ಸಾಮರ್ಥ್ಯವಿಲ್ಲ . ಇದರಲ್ಲಿ ಯಾವ ಸಂದೇಹವೂ ಇಲ್ಲವೆಂದು ತನ್ನೊಳಗೇ ಯೋಚಿಸಿದಳು .

ದೌಪದಿಯು ಮೆಲ್ಲನೆ ಭೀಮನು ಮಲಗಿದ್ದಲ್ಲಿಗೆ ಯೋಚಿಸುತ್ತಲೆ ಬಂದಳು . ಅವಳ ಮನಸ್ಸಿನಲ್ಲಿ ಹಲವಾರು ಆಲೋಚನೆಗಳು ಬಂದವು . ಭೀಮನನ್ನು ಎಬ್ಬಿಸಿದಾಗ ಎಬ್ಬಿಸಿದರೆ ಭುಗಿಲೆನ್ನುತ್ತಾನೋ ? ಅಥವಾ ಒಬ್ಬಳೆ ಏತಕ್ಕೆ ಬಂದೆ ? ಮುಖವೇಕೆ ಕಂದಿದೆ ? ಎಂದು ಸಂತೈಸುತ್ತಾನೋ ? ನಾನು ಬಂದ ಬರವು ಸಾರ್ಥಕವಾಗುವುದೋ , ಇಲ್ಲವೋ ? ಎಂದು ದೌಪದಿ ಹಲವು ಬಗೆಯಲ್ಲಿ ಆತಂಕದಲ್ಲಿ ಹೊಯ್ದಾಡಿದಳು . ಕಡೆಗೆ ಏನಾದರೂ ಆಗಲಿ ಎಬ್ಬಿಸಿಯೇ ನೋಡುತ್ತೇನೆ ಎಂದು ವಲ್ಲಭನ ಬದಿಗೆ ಸರಿದಳು . ಅಪ್ರತಿಮಲ್ಲನು ಮೆಲ್ಲನೆ ಕಣ್ಣಿಟ್ಟಿದ್ದು ಎದುರಿಗೆ ಪಾಂಚಲನಂದನೆಯನ್ನು ಕಂಡನು .ಭೀಮನ ಬಳಿ ಸಾರಿದ ದೌಪದಿಯು ಮೆಲ್ಲನೆ ಅವನ ಮುಸುಕನ್ನು ತೆಗೆದು ಹಾಕಿ , ನಿಧಾನವಾಗಿ ಗಲ್ಲವನ್ನು ಹಿಡಿದು ಅಲುಗಿಸಿದಾಗ ಮಹಾಮಲ್ಲನಾದ ಭೀಮನು ಎಚ್ಚರಗೊಂಡು ಮೇಲೆದ್ದನು . ಪಾಂಚಾಲನಂದನೆಯಾದ ದೌಪದಿಯ ಆಗಮನವನ್ನು ನೋಡಿ “ ಏಕೆ ಬಂದೆ ? ಮುಖದಲ್ಲಿ ಭಯ – ಉದ್ವೇಗಗಳು ಎದ್ದು ಕಾಣುತ್ತಿದೆಯೇಕೆ ? ಈ ರಾತ್ರಿ ವೇಳೆಯಲ್ಲೇಕೆ ಬಂದೆ ? ತಡಮಾಡದೆ ಹೇಳು ” ಎಂದು ಅವಸರಿಸಿದನು .

ದೌಪದಿಯು ಕೀಚಕನಿಂದ ತನಗಾದ ತೊಂದರೆ ಅಪಮಾನಗಳನ್ನು ವಿವರಿಸಿ , “ ಕೀಚಕನೆಂಬ ನಾಯಿಯು , ರಾಜ ಸಭೆಯೆದುರಿನಲ್ಲೇ , ನಿನ್ನೆಯ ದಿನ ನನ್ನನ್ನು ಕಾಲಲ್ಲಿ ಹೊಸಕಿ ಒದ್ದದ್ದನ್ನು ನೀನೇ ನೋಡಿದೆ . ನಿನ್ನಂತಹವನಿರುವಾಗ ನನಗೆ ಈ ಅಪಮಾನ ಉಚಿತವಾದುದೇ ? ಅವನು ನನ್ನ ಬೆನ್ನು ಹತ್ತದೆ ಬಿಡುವುದಿಲ್ಲ . ನಾನು ಬದುಕುವವಳಲ್ಲ . ನಾನು ಸತ್ತುಹೋದರೆ ಆ ಪಾಪ ನಿನಗೆ ತಟ್ಟದೆ ಬಿಡುವುದಿಲ್ಲ ” ಎಂದು ದೌಪದಿಯು ಹೇಳಲು ಭೀಮನು ಕೋಪಗೊಂಡನು .

ಭೀಮ ಕೋಪಗೊಂಡಿರುವುದನ್ನು ನೋಡಿ ದೌಪದಿಯು ತನ್ನ ಮಾತುಗಳನ್ನು ಈ ರೀತಿ ಮುಂದುವರಿಸಿದಳು . “ ರಮಣನೇ ಕೇಳು . ಉಳಿದ ನಿನ್ನ ಸಹೋದರರು ನನ್ನೊಡನೆ ರಮಿಸಿ ಸಂತೋಷಿಸುತ್ತಾರೆ . ನನ್ನ ಮಾನ ಕಾಪಾಡುವ ವಿಚಾರ ಬಂದಾಗ ಎತ್ತಲೋ ಹೋಗಿ ಬಿಡುತ್ತಾರೆ . ನಿನ್ನನ್ನು ಬಿಟ್ಟರೆ , ಉಳಿದವರೆಲ್ಲ ನನಗೆ ಪತಿಗಳೆನಿಸಲು ಯೋಗ್ಯತೆ ಇರದ ಬಾಹಿರರು . ನೀವಾದರೂ ನನ್ನನ್ನು “ ಇವಳು ನನ್ನವಳೆಂಬ ದೃಷ್ಟಿಯಿಂದ ನೋಡು , ಬುದ್ದಿ , ಮನಸ್ಸಿನ ಸಮತೆಯನ್ನು ಬಿಡು . ಈ ನೀಚನಾದ ಕೀಚಕನಿಗೆ ಯಮಲೋಕವನ್ನು ಕಾಣಿಸುವ ಕರುಣೆ ತೋರಿಸು ” ಎಂದು ದೌಪದಿಯು ಭೀಮನಿಗೆ ಕೈಮುಗಿದು ಬೇಡಿಕೊಂಡಳು .

ಭೀಮ ಕೋಪಗೊಂಡಿರುವುದನ್ನು ನೋಡಿ ದೌಪದಿಯು ತನ್ನ ಮಾತುಗಳನ್ನು ಈ ರೀತಿ ಮುಂದುವರಿಸಿದಳು . “ ರಮಣನೇ ಕೇಳು . ಉಳಿದ ನಿನ್ನ ಸಹೋದರರು ನನ್ನೊಡನೆ ರಮಿಸಿ ಸಂತೋಷಿಸುತ್ತಾರೆ . ನನ್ನ ಮಾನ ಕಾಪಾಡುವ ವಿಚಾರ ಬಂದಾಗ ಎತ್ತಲೋ ಹೋಗಿ ಬಿಡುತ್ತಾರೆ . ನಿನ್ನನ್ನು ಬಿಟ್ಟರೆ , ಉಳಿದವರೆಲ್ಲ ನನಗೆ ಪತಿಗಳೆನಿಸಲು ಯೋಗ್ಯತೆ ಇರದ ಬಾಹಿರರು . ನೀವಾದರೂ ನನ್ನನ್ನು “ ಇವಳು ನನ್ನವಳೆಂಬ ದೃಷ್ಟಿಯಿಂದ ನೋಡು , ಬುದ್ದಿ , ಮನಸ್ಸಿನ ಸಮತೆಯನ್ನು ಬಿಡು . ಈ ನೀಚನಾದ ಕೀಚಕನಿಗೆ ಯಮಲೋಕವನ್ನು ಕಾಣಿಸುವ ಕರುಣೆ ತೋರಿಸು ” ಎಂದು ದೌಪದಿಯು ಭೀಮನಿಗೆ ಕೈಮುಗಿದು ಬೇಡಿಕೊಂಡಳು .

“ ಜನರ ಮುಂದೆ ನನ್ನ ಮಾನ ಕಳೆಯಲು ಬಯಸಿದ ಪಾಪಿಯಾದ ಕೌರವನು ಅಂದು ನನ್ನ ಮುಂದಲೆಗೂದಲನ್ನು ಹಿಡಿದು ಎಳೆಸಿದನು . ಅರಣ್ಯವಾಸದಲ್ಲಿರುವಾಗ ಸೈಂಧವನು ನನ್ನನ್ನು ಹೊತ್ತುಕೊಂಡು ಹೋದ . ಈ ದಿನ ಕೀಚಕ ನಾಯಿಯು ನನ್ನನ್ನು ಕಾಲಿನಿಂದ ಒದ್ದು ನೋಯಿಸಿದ . ಈ ಮೂರು ಅಪಮಾನ – ಭಂಗಗಳೇ ನನಗೆ ಸಾಕಾಗಿದೆ ” ಎಂದು ದೌಪದಿಯು ಮಿತಿಮೀರಿದ ದುಃಖದಿಂದ ಪ್ರಲಾಪಿಸಿದಳು .ಮುನಿದರೆ ಕಾಲವನ್ನು ಮುಂದೊರಗಿಸುವ ಮಹಾ ಶೂರರು ನೀವು , ನನ್ನೊಬ್ಬಳನ್ನು ಆಳಲಾರಿರಿ . ಪಾಪಿಗಳಿರಾ , ಅಪಕೀರ್ತಿಗೆ ಅಳುಕಿದರಲ್ಲ ? ತೋಳಿನ ಹೊರೆ ನಿಮಗೇಕೆ ? ರಾಜವಂಶದಲ್ಲಿ ಅದೇಕೆ ಹುಟ್ಟಿದಿರೋ ? ಕೂಳುಗೇಡಿಗೆ ಒಡಲನ್ನು ಹೊರೆಯುತ್ತಿದ್ದೀರಿ ಎಂಬುದಾಗಿ ದೌಪದಿಯು ಹೀಗೆನ್ನುತ್ತಿರಲು ಭೀಮನ ಅಂತಃಕರಣ ಪೂರ್ತಿಯಾಗಿ ಕರಗಿತು . ಕೇಳಿ ಕಂಬನಿದುಂಬಿದನು . ಅವನ ರೋಷದ ಘನತೆ ಹೆಚ್ಚಿತು .

ಮನಸ್ಸಿನಲ್ಲಿಯೇ ಹಗೆಗಳನ್ನು ಹಿಂಡಿ ಹಾಕಿದನು . ಮೈಯಲ್ಲಿ ಪುಳಕವುಬ್ಬರಿಸಿ ಬರುತ್ತಿರಲು ಮೆಲ್ಲನೆ ವನಿತೆಯನ್ನು ತೆಗೆದಪ್ಪಿದನು . ಕಲಿಭೀಮನು ಆ ಮಾನಿನಿಯ ಕಂಬನಿಯನ್ನು ಸೆರಗಿನಿಂದ ತೊಡೆದನು . ಕುರುಳನ್ನು ನೇವರಿಸಿದನು . ಗಲ್ಲವನ್ನೊರಸಿ ಮುದ್ದಾಡಿದನು . ಮಂಚದ ಪಕ್ಕದಲ್ಲಿ ಗಿಂಡಿಯ ನೀರಿನಿಂದ ಅವಳ ಮುಖವನ್ನು ತೊಳೆದನು . ಅರಸೀ ಬೆಟ್ಟವನ್ನೇ ದಾಟಿದೆ . ಕೀಚಕನ ಬಸುರನ್ನು ಬಗೆಯುತ್ತೇನೆ . ಸ್ವಲ್ಪ ಮಿಸುಕಿದರೆ ಸಾಕು ವಿರಾಟ ವಂಶದ ಹೆಸರನ್ನೇ ತೊಡೆಯುತ್ತೇನೆ . ನಮ್ಮನ್ನು ಗೊತ್ತು ಮಾಡಿ ತಿಳಿದವರಾದರೆ ಕೌರವನನ್ನು ಚೂರು ಚೂರಾಗಿ ತರಿದು ಹಾಕುತ್ತೇನೆ . ಅಯ್ಯೋ ! ಈ ಭೀಮ ಕಷ್ಟವನ್ನೆಸಗಿದನು ಎಂದು ದೇವತೆಗಳೆಂದರೆ ಅವರ ಮುಸುಡನ್ನು ಅಮರಾದ್ರಿಗೆ ತಿಕ್ಕಿ ತೀಡಿ ಬೀಡುತ್ತೇನೆ ” ಎಂದು ಆವೇಶದಲ್ಲಿ ಮಾತಾಡಿ ದೌಪದಿಯನ್ನು ಸಂತೈಸಿದನು .

Innu Huttadeyirali Nariyarennavolu Kannada Summary Pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh