2nd Puc Kannada Vachanagalu Summary
ತರಗತಿ : ದ್ವಿತೀಯ ಪಿ.ಯು.ಸಿ.
ಪದ್ಯದ ಹೆಸರು : ವಚನಗಳು (ಬಸವಣ್ಣನವರ ವಚನಗಳು)
ಕೃತಿಕಾರರ ಹೆಸರು : ಬಸವಣ್ಣ.
2nd Puc Kannada Vachanagalu Summary
ಭಕ್ತಿಭಂಡಾರಿ ಬಸವಣ್ಣನವರ ವಚನಗಳು ಅಧ್ಯಾತ್ಮ ಮತ್ತು ವ್ಯಕ್ತಿತ್ವ ವಿಕಸನದ ಮೂಲಕ ಸಾಮಾಜಿಕ ಸಾಮರಸ್ಯದ ಮಹತ್ತ್ವವನ್ನು ಸಾರುತ್ತವೆ . ಪ್ರಸ್ತುತ ವಚನದಲ್ಲಿ ಮನುಷ್ಯರ ನಡುವೆ ಹೊಮ್ಮಬೇಕಾದ ಮಾನವೀಯ ಅಂತಃಕರಣವನ್ನು , ಹೃದಯ ವೈಶಾಲ್ಯತೆಯನ್ನು ಒತ್ತಿ ಹೇಳಲಾಗಿದೆ .
ಪ್ರಸ್ತುತ ವಚನದಲ್ಲಿ ಬಸವಣ್ಣನವರು ನೈಜಭಕ್ತಿಯ ಸ್ವರೂಪವನ್ನು ವಿವರಿಸಿದ್ದಾರೆ . ದೇವರ ಮತ್ತು ಭಕ್ತನ ಮನಗಳೆರಡೂ ಬೆರೆತಾಗ ದೇಹ ಕರಗಬೇಕು . ದೇವರ ವಿಗ್ರಹವನ್ನು ಭಕ್ತ ಮುಟ್ಟಿದಾಗ ಅವನಿಗೆ ರೋಮಾಂಚನ , ಪುಳಕವಾಗಬೇಕು . ಅದನ್ನು ಕಂಡಾಗ ಸಂತೋಷದಿಂದ ಕಣ್ಣಿನಿಂದ ನೀರು ಸುರಿಯಬೇಕು . ಸ್ತೋತ್ರ ಮಾಡುವಾಗ ಗಂಟಲು ಗದ್ಗದವಾಗಬೇಕು . ಇದೆಲ್ಲವೂ ಕೂಡಲಸಂಗಮದೇವನನ್ನು ನಿಜವಾಗಿ ಆರಾಧಿಸುವುದರ ಚಿನ್ನೆಗಳು . ನನ್ನಲ್ಲಿ ಇವೆಲ್ಲ ಇಲ್ಲವಾಗಿ ನಾನೊಬ್ಬ ಬೂಟಾಟಿಕೆಯವನಾಗಿದ್ದೇನೆ ಎಂದು ಬಸವಣ್ಣನವರು ಹಲುಬಿದ್ದಾರೆ .
ಶಿವಪಥವನ್ನರಿಯದವನು ಕೈಯಲ್ಲಿ ಲಿಂಗವನ್ನು ಹಿಡಿದುಕೊಂಡು ಫಲಪುಷ್ಪಗಳಿಂದ ಅರ್ಚಿಸಿದ ಮಾತ್ರಕ್ಕೆ ಅದು ಸದ್ಭಕ್ತಿಯ ಲಕ್ಷಣವಲ್ಲ . ಶಿವಪಥವನ್ನು ಅರಿತುಕೊಳ್ಳುವುದು ಮುಖ್ಯವೆಂಬುದು ಬಸವಣ್ಣನವರ ಅಭಿಪ್ರಾಯ . ಅವನ್ನು ಹಲವಾರು ನಿದರ್ಶನಗಳ ಮೂಲಕ ನಿರೂಪಿಸಿದ್ದಾರೆ . ಮನುಷ್ಯನ ಕೈಯಲ್ಲಿ ಅರ್ಥರೇಖೆಯಿರಬಹುದು ; ಆದರೆ ಅನುಭವಿಸಲು ಆಯಸ್ಸು ಮುಖ್ಯವಲ್ಲವೆ ? ವೀರನ ಕೈಯಲ್ಲಿ ಚಂದ್ರಾಯುಧವಿದ್ದರೆ ಉಪಯುಕ್ತವಾದೀತು ; ಆದರೆ ಹೇಡಿಯಾದವನ ಕೈಯಲ್ಲಿದ್ದರೆ ನಿರುಪಯುಕ್ತ ಅದೇ ರೀತಿ ಕುರುಡನ ಕೈಯಲ್ಲಿ ಕನ್ನಡಿ ಇರುವುದರಿಂದ ಯಾವ ಪ್ರಯೋಜನವೂ ಇಲ್ಲ . ಕಾಣುವ ಕಣ್ಣೆ ಇಲ್ಲದ ಮೇಲೆ ಕನ್ನಡಿಯನ್ನು ಉಪಯೋಗಿಸುವ ಪ್ರಶ್ನೆಯೇ ಎದುರಾಗದು . ಹಾಗೆಯೇ ಮಾಣಿಕ್ಯದ ಬೆಲೆ ತಿಳಿಯದ ಮಂಗನ ಕೈಯಲ್ಲಿ ಮಾಣಿಕ್ಯವಿದ್ದರೆ ವ್ಯರ್ಥ – ಇವುಗಳಂತೆಯೇ ಶಿವಪಥವನ್ನರಿಯದ ಡಾಂಬಿಕನ ಬಳಿಯಲ್ಲಿ ಲಿಂಗವಿದ್ದ ಮಾತ್ರಕ್ಕೆ ಯಾವ ಪ್ರಯೋಜನವೂ ಇಲ್ಲ .ಲಿಂಗಧಾರಣೆಗಿಂತ ಶಿವಪಥದಲ್ಲಿ ನಡೆಯುವುದು ಮುಖ್ಯವೆಂಬುದು ಬಸವಣ್ಣನವರ ಅಭಿಪ್ರಾಯವಾಗಿದೆ.
ಕಾಯಬೇಕಾದ ದೇವರೇ ಕೊಲ್ಲುವ ನಿರ್ಧಾರ ಮಾಡಿದಾಗ ರಕ್ಷಿಸಲು ಇನ್ಯಾರಿಂದಲೂ ಸಾಧ್ಯವಿಲ್ಲವೆಂಬುದನ್ನು ಬಸವಣ್ಣನವರು ಪ್ರಸ್ತುತ ವಚನದಲ್ಲಿ ಹಲವು ಉದಾಹರಣೆಗಳ ಮೂಲಕ ಸೊಗಸಾಗಿ ನಿರೂಪಿಸಿದ್ದಾರೆ . ಅಡುಗೆ ಮನೆಯೊಳಗಿರುವ ಒಲೆಯು ಹತ್ತಿ ಉರಿಯುತ್ತಿದ್ದಾಗ ನಾವು ಅದರ ಶಾಖವನ್ನು ತಾಳಿಕೊಂಡು ನಿಲ್ಲಬಹುದು . ಅದರ ಉಪಯೋಗವನ್ನೂ ಪಡೆದುಕೊಳ್ಳಬಹುದು . ಆದರೆ ನಾವು ಜೀವಿಸುತ್ತಿರುವ ನೆಲವೇ ಹತ್ತಿ ಉರಿಯತೊಡಗಿದರೆ ಆಶ್ರಯಕ್ಕೆ ಎಲ್ಲಿ ನಾವು ಹೋಗಬೇಕು ? ನೀರಿನ ರಕ್ಷಣೆಗಾಗಿ ಕಟ್ಟಿದ ಏರಿಯೇ ನೀರನ್ನು ಕುಡಿದುಬಿಟ್ಟರೆ , ರಕ್ಷಣೆಗೆಂದು ನಿರ್ಮಿಸಿದ ಬೇಲಿಯೇ ಬೆಳೆಯನ್ನು ಮೇಯ್ದಡೆ , ಗೃಹಿಣಿಯಾದವಳು ಸದ್ಗುಣಗಳನ್ನು ತೊರೆದು ಮನೆಯಲ್ಲಿ ಕಳ್ಳತನ ಮಾಡಿದರೆ , ಶಿಶುವನ್ನು ತೊರೆಯಬೇಕಾದ ತಾಯಿಯ ಮೊಲೆಹಾಲು ವಿಷವಾಗಿಬಿಟ್ಟರೆ – ರಕ್ಷಿಸುವುದು ಯಾರಿಂದಲೂ ಸಾಧ್ಯವಿಲ್ಲ . ಕಷ್ಟ ಬಂದಾಗ ರಕ್ಷಣೆಗೆ ದೇವರ ಮೊರೆ ಹೋಗುವುದು ಸಹಜ , ಆದರೆ ಆತನೇ ಕಷ್ಟಕೊಟ್ಟಾಗ ನಾವು ಯಾರಿಗೆ ದೂರನ್ನು ಸಲ್ಲಿಸುವುದು ” ಕೂಡಲಸಂಗಮದೇವ ” ಎಂಬುದಾಗಿ ಬಸವಣ್ಣನವರು ಪ್ರಶ್ನಿಸಿದ್ದಾರೆ .
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
- Basavannanavara Vachanagalu Notes
- 2 PUC Notes PDF
- 1 PUC Notes
- ವಿರುದ್ಧಾರ್ಥಕ ಪದಗಳು
- ತತ್ಸಮ ತದ್ಭವ
- 50+ ಪ್ರಬಂಧಗಳು
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.