ಕದಡಿದ ಸಲಿಲಂ ತಿಳಿವಂದದೆ ಕನ್ನಡ ಪದ್ಯದ ಸಾರಾಂಶ, 2nd Puc Kannada Kadadida Salilam Tilivandade Summary, 1st poem Kannada Summary Pdf Download
ತರಗತಿ : ದ್ವಿತೀಯ ಪಿ.ಯು.ಸಿ.
ಪದ್ಯದ ಹೆಸರು : ಕದಡಿದ ಸಲಿಲಂ ತಿಳಿವಂದದೆ
ಕೃತಿಕಾರರ ಹೆಸರು : ನಾಗಚಂದ್ರ
ಕದಡಿದ ಸಲಿಲಂ ತಿಳಿವಂದದೆ ಪದ್ಯದ ಸಾರಾಂಶ
2nd Puc Kannada Kadadida Salilam Tilivandade Summary
ಕದಡಿದ ಸಲಿಲಂ ತಿಳಿವಂದದೆ ಕನ್ನಡ ಪದ್ಯದ ಸಾರಾಂಶ :
“ ಕದಡಿದ ಸಲಿಲಂ ತಿಳಿವಂದದೆ ” ಎಂಬ ಪ್ರಸ್ತುತ ಕಾವ್ಯಭಾಗವು ರಾವಣನ ಮನಃಪರಿವರ್ತನೆಯನ್ನು ಕುರಿತ ಸಂದರ್ಭವನ್ನು ವರ್ಣಿಸುತ್ತದೆ . ಇದನ್ನು ನಾಗಚಂದ್ರ ರಚಿಸಿದ “ ರಾಮಚಂದ್ರಚರಿತ ಪುರಾಣ ” ದ ಹದಿನಾಲ್ಕನೆಯ ಆಶ್ವಾಸದಿಂದ ಆಯ್ದುಕೊಳ್ಳಲಾಗಿದೆ . ಇದು ಲೌಕಿಕ ಕಾವ್ಯದಂತೆ ಭಾಸವಾದರೂ ವಾಸ್ತವವಾಗಿ ಇದು ಕೂಡ ಧಾರ್ಮಿಕ ಕಾವ್ಯವೇ ಆಗಿದೆ . ಇದು ಜೈನಧರ್ಮ ರಾಮಾಯಣ ಸಂಪ್ರದಾಯದ್ದಾಗಿದೆ .
ಇಲ್ಲಿನ ರಾಮಲಕ್ಷ್ಮಣ ರಾವಣರು ಜೈನ ತ್ರಿಷಷ್ಟಿ ಶಲಾಕಾ ಪುರುಷರು , ರಾಮ – ಲಕ್ಷ್ಮಣರು ಬಲದೇವ ವಸುದೇವರಾದರೆ , ರಾವಣ ಪ್ರತಿವಾಸುದೇವ , ವಾಲ್ಮೀಕಿ ರಾಮಾಯಣಕ್ಕೂ ಪಂಪ ರಾಮಾಯಣಕ್ಕೂ ಪ್ರಮುಖವಾದ ವ್ಯತ್ಯಾಸವಿರುವುದು ರಾವಣನ ಪಾತ್ರದಲ್ಲಿ . ನಾಗಚಂದ್ರನ ರಾವಣ ಮೂಲತಃ ಸದ್ಗುಣಿಯಾದ ಮಹಾಪುರುಷ , ಇಂಥಹವನು ಕಾಲಕರ್ಮ ಸಂಯೋಗದಿಂದ ಅಲ್ಪ ದೌರ್ಬಲ್ಯ ವಶವಾಗಿ ಆ ದೌರ್ಬಲ್ಯ ಆಕಸ್ಮಿಕವೆ ಹೊರತು ಸ್ವಭಾವ ಸಹಜವಾದುದಲ್ಲ . ವಿಧಿ ಸಂಕಲ್ಪ ಪ್ರೇರಿತನಾಗಿ ಪತನಾಭಿಮುಖನಾಗುತ್ತಾನೆ . ನಮ್ಮ ಸಹಾನುಭೂತಿ ಅನುಕಂಪಗಳಿಗೆ ಪಾತ್ರನಾಗುತ್ತಾನೆ .
ರಾವಣನು ಮನಸ್ಸನ್ನು ನಿಯಂತ್ರಿಸಿಕೊಂಡು ದಿವ್ಯಮಂತ್ರಗಳಿಂದ ಬಹುರೂಪಿ ವಿದ್ಯೆಯನ್ನು ಒಲಿಸಿಕೊಂಡನು.ನಂತರ ಬಹುರೂಪಿಣಿ ವಿದ್ಯಾದೇವತೆಯು ಪ್ರತ್ಯಕ್ಷಳಾಗಿ ರಾವಣನ ಎದರು ನಿಂತು ತಾನು ಯುದ್ಧದಲ್ಲಿ “ಚಕ್ರಾಧಾರಿಯಾದ ಲಕ್ಷ್ಮಣ ಮತ್ತು ಚರ್ಮದೇಹಧಾರಿಯಾದ ರಾಮ ಇಬ್ಬರನ್ನುಳಿದು ಮಿಕ್ಕೆಲ್ಲರನ್ನೂ ನಾಶಗೊಳಿಸುತ್ತೇನೆ” ಎಮದು ರಾವಣನಿಗೆ ಹೇಳಿತು. ಆಗ ರಾವಣನು ಮಿಕ್ಕೆಲ್ಲರ ಸಾವಿನಿಂದ ನನಗೇನು ಪ್ರಯೋಜನ? ಎಂದು ದೇವತೆಗೆ ನಮಸ್ಕರಿಸಿ ಅಲ್ಲಿಂದ ಹೊರನಡೆಯುತ್ತಾನೆ.
ಈ ರಾವಣ ಸತ್ಕುಲ ಪ್ರಸೂತ . ಜಿನಭಕ್ತ , ಅಹಿಂಸರತ , ಮಹಾಪರಾಕ್ರಮಿ , ವಾಸ್ತವವಾಗಿ ಆತ ಭಯಂಕರಾಕಾರದ ರಾಕ್ಷಸನಲ್ಲ . ರಾವಣನು ಪರಾಂಗನಾವಿರತಿ ಎಂಬ ವ್ರತವನ್ನು ಕೈಹಿಡಿದಿದ್ದನು . ಆತನ ಅಂತಃಪುರದ ಹೆಣ್ಣುಗಳೆಲ್ಲ ಅವನಿಗೆ ಒಲಿದು ಬಂದವರೆ ವಿನಃ ಬಲಾತ್ಕಾರದಿಂದ ಬಂದವರಲ್ಲ . ನಳರೂಬರನ ಪತ್ನಿ ರಂಬೆಯೆಂಬುವಳು ತಾನಾಗಿಯೇ ಒಲಿದು ಬಂದಾಗ ಅವಳಿಗೆ ಸದುಪದೇಶ ನೀಡಿ ಕಳುಹಿಸಿದುದು ಅವನ ಉದಾತ್ತ ಚರಿತಕ್ಕೆ ನಿದರ್ಶನವಾಗಿದೆ . ಇಂತಹ ಮಹಾಸತ್ವನ ಬದುಕಿನಲ್ಲಿ ವಿಧಿ ಪ್ರವೇಶಿಸುತ್ತದೆ . ಅವನ ಅಥಃ ಪತನಕ್ಕೆ ಸಂಚು ಹೂಡುತ್ತದೆ . ಹಿಂದೆಂದೂ ಪರಸತಿಗೆ ಮನಸೋಲದವನು ಸೀತೆಗೆ ಮರುಳಾಗುತ್ತಾನೆ . ಅವಳನ್ನು ಅಪಹರಿಸುತ್ತಾನೆ . ಪ್ರಮದವನದಲ್ಲಿ ಅವಳನ್ನು ಒಲಿಸಿಕೊಳ್ಳಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾಗುತ್ತದೆ . ಮುಂದೆ ರಾಮಸೈನ್ಯ ಲಂಕೆಯನ್ನು ಮುತ್ತುತ್ತದೆ . ವಿಜಯಕ್ಕಾಗಿ ರಾವಣ ಬಹುರೂಪಿಣಿ ವಿದ್ಯೆಯನ್ನು ಸಾಧಿಸಲು ಜೀನಾಲಯದಲ್ಲಿ ಅನನ್ಯ ಭಕ್ತಿಯಿಂದ ಪೂಜಾ ಮಗ್ನನಾಗುತ್ತಾನೆ . ರಾವಣನು ಮನಸ್ಸನ್ನು ನಿಯಂತ್ರಿಸಿಕೊಂಡು ದಿವ್ಯಮಂತ್ರಗಳಿಂದ ಬಹುರೂಪಿ ವಿದ್ಯೆಯನ್ನು ಒಲಿಸಿಕೊಂಡನು.ನಂತರ ಬಹುರೂಪಿಣಿ ವಿದ್ಯಾದೇವತೆಯು ಪ್ರತ್ಯಕ್ಷಳಾಗಿ ರಾವಣನ ಎದರು ನಿಂತು ತಾನು ಯುದ್ಧದಲ್ಲಿ “ಚಕ್ರಾಧಾರಿಯಾದ ಲಕ್ಷ್ಮಣ ಮತ್ತು ಚರ್ಮದೇಹಧಾರಿಯಾದ ರಾಮ ಇಬ್ಬರನ್ನುಳಿದು ಮಿಕ್ಕೆಲ್ಲರನ್ನೂ ನಾಶಗೊಳಿಸುತ್ತೇನೆ” ಎಮದು ರಾವಣನಿಗೆ ಹೇಳಿತು. ಆಗ ರಾವಣನು ಮಿಕ್ಕೆಲ್ಲರ ಸಾವಿನಿಂದ ನನಗೇನು ಪ್ರಯೋಜನ? ಎಂದು ದೇವತೆಗೆ ನಮಸ್ಕರಿಸಿ ಅಲ್ಲಿಂದ ಹೊರನಡೆಯುತ್ತಾನೆ. ನಂತರ ಅದಕ್ಕೆ ಮೊದಲು ಆತ ಸೀತೆಯನ್ನು ನೋಡಲು ಹೋಗುತ್ತಾನೆ . ಆತನು ಭರದಿಂದ ಬರುವ ರಾವಣನ ಗಂಡು ಪರಾಕ್ರಮದ ವೀರ ಸೌಂದರ್ಯವನ್ನು ಕೆಲಬಲದಲ್ಲಿರುವ ವಿದ್ಯಾಭರ ಸ್ತ್ರೀಯರು ಸೀತಾದೇವಿಗೆ ತೋರಿಸುತ್ತಾರೆ .
ರಾಮನ ಹಾಗೂ ಲಕ್ಷ್ಮಣನ ಬಗ್ಗೆ ಮತ್ತೆನು ಕೆಟ್ಟಸುದ್ದಿ ಕೇಳಬೇಕಾಗುವುದೋ ಎಂದು ತಾವರೆ ಕಣ್ಣಿನವಳಾದ ಸೀತೆಯು ತಳಮಳಗೊಳ್ಳುತ್ತಾಳೆ. ಹಾಗೆ ತಲ್ಲಣಿಸುತ್ತಿರುವ ಮಾನವತಿ ಸೀತೆಯ ಹತ್ತಿರ ಬಂದು ರಾವಣನು ಹೀಗೆ ಹೇಳಿದನು ನನಗೆ ಬಹುರೂಪಿಣಿ ವಿದ್ಯೆಯು ಸಿದ್ಧಿಯಾಗಿದೆ . ಇನ್ನು ನನಗೆ ಅಸಾಧ್ಯವಾಗುವಂತಹ ಶತೃ ಪಕ್ಷವೆಂಬುದೇ ಇಲ್ಲ . ನಿನ್ನ ನೆಚ್ಚಿನ ರಾಮನ ಆಸೆಯನ್ನು ಬಿಟ್ಟು ನನ್ನ ಜೊತೆ ಬಾ, ಸಾಮ್ರಾಜ್ಯ ಸುಖವನ್ನು ಅನುಭವಿಸು ಎನ್ನಲು , ಸೀತೆಯು ತಳಮಳಗೊಂಡ ಮನಸ್ಸಿನವಳಾಗಿ ರಾವಣನನ್ನು ಕುರಿತು- “ ಎಲೈ ರಾವಣನೇ ಕರುಣಿಸುವುದಾದರೆ ನನಗೆ ರಾಮಚಂದ್ರನ ಆಯಸ್ಸಿನ ಪ್ರಾಣದವರೆಗೆ ಬಾರದಿರು ಅಂದರೆ ರಾಮಚಂದ್ರನನ್ನು ಕೊಲ್ಲುವ ಆಸೆಯನ್ನು ಇಟ್ಟು ಕೊಳ್ಳಬೇಡ ಅಂದೆಂದಿಗೂ ಆಗದು ” ಎಂದು ಹೇಳ ಹೇಳುತ್ತಲೆ ಭೂಮಿಯ ಮೇಲೆ ಬಿದ್ದು ಮೂರ್ಛಹೋದಳು . ಜಾನಕಿಯು ಮೂರ್ಛಯಾದುದ್ದನ್ನು ಕಂಡು ರಾವಣನ ಮನಸ್ಸು ಪರಿವರ್ತನೆ ಗೊಂಡಿತು . ಆಕೆಯ ಬಗ್ಗೆ ಅನುಕಂಪ ಹುಟ್ಟಿತು , ತನ್ನ ಕರ್ಮಾಧಿನತೆಯಿಂದ ಹುಟ್ಟಿದ ಪಾಪದ ಕೆಟ್ಟ ಪರಿಣಾಮವನ್ನು ತಾನೇ ಹಳಿದುಕೊಂಡನು . ಕದಡಿದ ನೀರು ತಿಳಿಯಾಗುವಂತೆ , ತನ್ನನ್ನು ತಾನೇ ತಿಳಿದುಕೊಂಡು , ಮನಸ್ಸು ತಿಳಿಯಾದ ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯದ ಭಾವನೆಯನ್ನು ಹೊಂದಿದನು . ಉದಾತ್ತಮನೋ ಭಾವನೆಯುಳ್ಳ ರಾವಣನ ಮನಸ್ಸಿನಲ್ಲಿ ಕೂಡ ತಿಳಿನೀಲಿಯಾಕಾಶದಂತೆ ಸ್ವಚ್ಚ – ಸ್ಥಿರ ಭಾವನೆಯು ಹೊರಹೊಮ್ಮಿತು . ಸಂಜೆಯ ಸೂರ್ಯನು ಹೊಂಗಿರಣ ರೂಪದ ಅನುರಾಗವನ್ನು ಹೊಂದಿದಂತೆ , ಉತ್ತಮನಾದ ವ್ಯಕ್ತಿಯಲ್ಲಿ ದುರಾಸೆಯಿಂದ ಹುಟ್ಟಿದ ದುರ್ಗುಣವು , ದುರ್ಗುಣದ ಆಭನ ಉಂಟಾದ ಮೇಲೆ ಅದನ್ನು ತೊರೆದುಬಿಡದಿರುವನೇ ಅಂತೆಯೇ ರಾವಣನ ಮನಸ್ಸು ಕೂಡ ಪರಿವರ್ತನೆಗೊಂಡಿತು . ಇದಕ್ಕೆ ಆಕೆಯು ಮೂರ್ಛ ಹೋದುವೆ ಕಾರಣವೋ ಅಥವಾ ಸೀತೆಯ ಮೇಲಿದ್ದ ಕಾಮಾಂಧತೆಯು ತೊಳೆದು ಹೋಯಿತೊ ? ಒಟ್ಟಾರೆ ರಾವಣನು ಸ್ವಭಾವದ ಪರಿಣತಿಯಲ್ಲಿ ಸ್ಥಿರವಾಗಿ ನಿಂತು ತನ್ನವರಾದ ಆಪ್ತ ಪುರುಷರ ಮಂತ್ರಿ ಪರಿಷತ್ತಿನ ಜನರಿಗೆ ಹೀಗೆಂದು ಹೇಳಿದನು . ಗುಣವನ್ನು ಪರಿಪಾಲನೆ ಮಾಡುವುದಕ್ಕಾಗಿ ನನಗೆ ಮನಸ್ಸು ಕೋರಲಿಲ್ಲ , “ ಸೀತೆಯು ತನ್ನ ನಿಶ್ಚಲಗುಣದಿಂದ ನನ್ನ ಬಗೆಗೆ ಗಮನಹರಿಸಲಿಲ್ಲ . ನನ್ನ ದಿವ್ಯಭೂಷಣ ವಸನಗಳನ್ನಾಗಲೀ , ಖೇಚರ ರಾಜ್ಯವನ್ನಾಗಲೀ ಆಕೆ ತೃಣಸಮಾನವಾಗಿ ಕಂಡಳು . ಹೀಗಾಗಿ ಪೌರುಷ ಪ್ರಣಯಿಯಂತೆ ನಾನು ಪಾಪಗೈದು ಇವಳನ್ನು ಬಯಸುತ್ತೇನೆಯೆ ? ” ಎಂದು ರಾವಣನು ಆಡುವ ಮಾತುಗಳಲ್ಲಿ ಅವನ ಮನಃ ಪರಿವರ್ತನೆಯ ಛಾಯೆಯನ್ನು ಗುರುತಿಸಬಹುದು .
ಇಂತಹ ಮಹಾ ಸತಿಯಿಂದ ನನ್ನಂತಹ ಪೌರುಷ ಪುರುಷನು ಪಾಪವನ್ನು ಮಾಡಿ ತನ್ನ ಗುಣವನ್ನು ಹಾನಿ ಮಾಡಿಕೊಳ್ಳಲಾರೆ . ಕಾರಣವಿಲ್ಲದೆ , ಕರ್ಮವಶವೇ ಕಾರಣವಾಗಿರಲು ಕಾಮನ ಆಕರ್ಷಣೆಯ ದೆಸೆಯಿಂದ ನನ್ನ ವಂಶದ ಹಿರಿಮೆಯು ಅಳಿಯುವಂತೆ ಪ್ರಾಣ ಪ್ರಿಯರಾದ ಇವರನ್ನು ಅಗಲಿಸಿ ಅವಿವೇಕಿಯಾದೆನು . ಕಾಮವ್ಯಾಮೋಹದಿಂದ , ಅಪಕೀರ್ತಿಯ ನಗಾರಿಯ ಧ್ವನಿಯು ದಿಗಂತದವರೆಗೂ ವ್ಯಾಪಿಸುವಂತಾಗಲು , ರಾಮನನ್ನು ಅಗಲಿಸಿ , ಈ ಮಾನಿನಿಗೆ ಇಷ್ಟೊಂದು ದುಃಖವನ್ನು ಉಂಟುಮಾಡಿದೆ ಎಂದು ನೊಂದನು . “ ನನಗೆ ವಿಭಿಷಣನು ಆದರದಿಂದ – ಗೌರವದಿಂದಲೇ ಹಿತ ನುಡಿಗಳನ್ನು ಹೇಳಲು ಆತನನ್ನು ವಿನಯವಂತನಲ್ಲದ ನಾನು ದುರ್ವ್ಯಸನಿಯಾಗಿ , ಗದರಿ ಗರ್ಜಿಸಿ , ಬೈದು , ವಿನಯವಂತನಾದ ತಮ್ಮನನ್ನು ಹೊಡೆದೊಡಿಸಿದೆ . ವ್ಯಸನಗಳ ಹಿಡಿತಕ್ಕೆ ಸಿಲುಕಿದ ಯಾವನೋ ಆದರೂ ಸರಿ ಅನುರಾಗದ ಸೆಳವಿನಿಂದ ಹಿತ ಅಹಿತ ಎಂಬ ಯೋಚನೆಯನ್ನು ಮಾಡುವುದಿಲ್ಲ . ತನ್ನಿಂದ ಯಶಸ್ಸಿನ ನಾಶವಾಯಿತು . ಸೋಲಿನ ಸಂಬಂಧವನ್ನು ಪಡೆದುಕೊಂಡ ತಾನು , ತನ್ನ ಅಭಿಮಾನದ ಕೇಡನ್ನು ಹಿರಿತನದ ಬವಣೆಯನ್ನು ಬೇರೆ ಜನ್ಮಗಳಿಂದ ಪಡೆದುಕೊಂಡ ತಾನು , ಬೇರೆಜನ್ಮಗಳಿಂದ ಪಡೆದುಕೊಂಡ ಉತ್ತಮಗತಿಯನ್ನು ಆತ್ಮೀಯ ಗೆಳೆಯರ ವ್ಯಥೆಯನ್ನು , ಜನರು ಆಡಿಕೊಳ್ಳುವ ಅಪವಾದವನ್ನು ವಿಷಯಲಾಲಸೆಗಳೆಂಬ ಮದ್ಯದ ಅಮಲೇರಿದ ಮನಸ್ಸಿನವರಾದ ವ್ಯಸನಿಗಳಾದವರು ಯಾರೇ ಆಗಲಿ , ಇದನ್ನೆಲ್ಲ ತಿಳಿಯಲಾರರು ಎಂದು ಉದ್ವೇಗದಿಂದ ನುಡಿದು ತನ್ನಲ್ಲಿ ತಾನು ಹೀಗೆಂದುಕೊಂಡನು .ಆದರೆ ಆ ಕ್ಷಣವೇ ಅವಳನ್ನೊಪ್ಪಿಸುವ ಉದ್ದೇಶ ಅವನದಲ್ಲ . ಬದಲಿಗೆ ಆತ “ ಈಗಲೇ ಸೀತೆಯನ್ನು ರಾಮನಿಗೊಪ್ಪಿಸಿಬಿಟ್ಟರೆ , ಇದುವರೆಗೆ ತಾನು ತೋರಿದ ಪರಾಕ್ರಮ ಮತ್ತು ಅಧಿಕ ಸಾಮರ್ಥ್ಯ , ಬೀರ ಬಿರುದುಗಳು ವ್ಯರ್ಥಗೊಳ್ಳುತ್ತವೆ . ಹಾಗಾಗಬಾರದು . ಆದ್ದರಿಂದ ಎರಡೂ ಕಡೆಯ ಸೈನ್ಯ ನನ್ನ ಬಾಹುಬಲದ ಪರಾಕ್ರಮ ವನ್ನು ಕಂಡು ಹೊಗಳುವಂತೆ ಯುದ್ಧಮಾಡಿ , ರಾಮ – ಲಕ್ಷ್ಮಣರನ್ನು ವಿರಥರನ್ನಾಗಿಸಿ ಸೆರೆಹಿಡಿದು ತಂದು , ಆನಂತರ ರಾಮನಿಗೆ ಸೀತೆಯನ್ನು ಒಪ್ಪಿಸುವೆ ” ಎಂದು ಯೋಚಿಸು ತ್ತಾನೆ .
2nd Puc Kannada Kadadida Salilam Tilivandade Summary, 1st poem Kannada Summary Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
- Kadadida Salilam Tilivandade Notes
- 2 PUC Notes PDF
- 1 PUC Notes
- ವಿರುದ್ಧಾರ್ಥಕ ಪದಗಳು
- ತತ್ಸಮ ತದ್ಭವ
- 50+ ಪ್ರಬಂಧಗಳು
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
ಚೆನ್ನಾಗಿ ಇದೆ ಎಲ್ಲ ತರಹದ ಸಾರಾಂಶಗಳನ್ನು ಬಿಡಿ ಧನ್ಯವಾದಗಳು 🙏