rtgh

ದ್ವಿತೀಯ ಪಿ.ಯು.ಸಿ. ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್‌ | 2 PUC Urilingapeddiya Vachanagalu Kannada Notes.

ದ್ವಿತೀಯ ಪಿ.ಯು.ಸಿ. ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್‌ . 2 PUC Urilingapeddiya Vachanagalu Kannada 2 Poem Notes Question Answer Pdf Download

ಉರಿಲಿಂಗಪೆದ್ದಿ ವಚನಗಳು Notes

ತರಗತಿ : ದ್ವಿತೀಯ ಪಿ.ಯು.ಸಿ.

ಪದ್ಯದ ಹೆಸರು : ವಚನಗಳು (ಉರಿಲಿಂಗಪೆದ್ದಿಯ ವಚನಗಳು)

ಕೃತಿಕಾರರ ಹೆಸರು : ಉರಿಲಿಂಗಪೆದ್ದಿ

೨.೨ ಉರಿಲಿಂಗಪೆದ್ದಿಯ ವಚನಗಳು

ದ್ವಿತೀಯ ಪಿ.ಯು.ಸಿ. ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್‌. 2 PUC Urilingapeddiya Vachanagalu Kannada Notes.

ಕವಿ ಪರಿಚಯ :

“ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ” ಎಂಬ ಅಂಕಿತದಲ್ಲಿ ಉರಿಲಿಂಗಪೆದ್ದಿಯ 366 ವಚನಗಳು ಇದುವರೆಗೂ ದೊರೆತಿವೆ . ಈತ ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಿದ್ದ , ತಂದೆ – ತಾಯಿಗಳು ಇವನಿಗೆ ಪೆದ್ದಣ್ಣ ಎಂಬ ಹೆಸರಿಟ್ಟರು . ಕಳ್ಳತನ ಮಾಡಿಕೊಂಡು ಜೀವಿಸುತ್ತಿದ್ದ . ಈತ ಒಮ್ಮೆ ಉರಿಲಿಂಗದೇವರ ಮನೆಗೆ ಕನ್ನ ಹಾಕಿದ . ಆಗ ಉರಿಲಿಂಗದೇವರು ನಂದವಾಡ ಗ್ರಾಮದ ಸೂರಯ್ಯನಿಗೆ ದೀಕ್ಷೆ ನೀಡುತ್ತಿದ್ದರು . ಇದನ್ನು ಕಂಡು ಮನಃ ಪರಿವರ್ತನೆ ಹೊಂದಿದ ಪೆದ್ದಣ್ಣ ದಿನವೂ ಉರಿಲಿಂಗಪೆದ್ದಿಗಳ ಮಠಕ್ಕೆ ಒಂದು ಹೊರೆ ಸೌದೆ ತಂದು ಹಾಕುತ್ತಿದ್ದ . ಕೊನೆಗೊಂದು ದಿನ ಗುರುವನ್ನು ಕಾಡಿ ಬೇಡಿ ದೀಕ್ಷೆಯನ್ನು ಪಡೆದು ‘ ಉರಿಲಿಂಗಪೆದ್ದಿ ‘ ಎಂಬ ಹೆಸರನ್ನು ಧರಿಸಿ ಗುರುವಿಗೆ ತಕ್ಕ ಶಿಷ್ಯನಾದನು . ಗುರುವಿನ ನಂತರ ಸಕಲಶಾಸ್ತ್ರ ಪಾರಂಗತನಾಗಿ ತಾನೇ ಆ ಪೀಠಕ್ಕೆ ಒಡೆಯನಾದ ಮಹಾನುಭವಿ ಈತ .

ಚಿಂತೆಯಿಲ್ಲದ ಅತಿಶ್ರೇಷ್ಠನಾದ ಮನಸ್ಥಿತಿಯನ್ನು ಶಿವಧ್ಯಾನದಿಂದ ಸಾಧಿಸ ಬಹುದೆಂಬುದನ್ನು ಮಂಗಳಕರವಾದ ಅಂಗದ ಸಾಂಗತ್ಯವುಳ್ಳವನೆಂದೂ ಬೇರೆಯವರ ಬಗ್ಗೆ ಚಿಂತಿಸನೆಂಬುದನ್ನು ಗುರುವಿನ ನಡತೆಯು ಘನತೆಯುಳ್ಳದಾಗಿರ ಬೇಕೆಂಬುದನ್ನು ಉರಿಲಿಂಗಪೆದ್ದಿಯ ವಚನಗಳು ನಿರೂಪಿಸುತ್ತವೆ . ತನ್ನ ವಿಚಾರಗಳನ್ನು ಮಂಡಿಸುವಾಗ ಬಳಸುವ ಹೋಲಿಕೆಗಳ ಔಚಿತ್ಯವನ್ನು ವಚನ ಬಂಧುರದಲ್ಲಿ ಹಿಡಿದಿರುವ ಕುಶಲತೆ , ಕಲೆಗಾರಿಕೆಗಳಿಂದಾಗಿ ಈ ವಚನಗಳು ಗಮನಾರ್ಹವೆನಿಸಿವೆ .

ಪದಗಳ ಅರ್ಥ:

ಸಕಲ-ಸಮಗ್ರವಾದುದು . ಪರಿಪೂರ್ಣವುಳ್ಳದ್ದು ( ಸಕಲತತ್ತ್ವವೆಂದರೆ ಪರಶಿವನ ಸ್ವರೂಪವೇ ಆಗಿದೆ . ಸಕಲ – ನಿಷ್ಕಲವೆಂಬವು ವಚನಕಾರರ ಆಕಾರ ಮತ್ತು ನಿರಾಕಾರ ಸ್ವರೂಪವನ್ನು ಕುರಿತ ಜಿಜ್ಞಾಸೆಯಾಗಿದೆ ) ; ನಿಷ್ಕಲ – ನಿರಾಕಾರವಾದ , ಅಖಂಡವಾದ , ಕಲಾರಹಿತವಾದ ( ನಿರಾಕಾರ ಸ್ವರೂಪವಾದ ಪರವಸ್ತು , ಶಿವಲಿಂಗ ) : ಮಹಾಘನ – ಅತಿಶ್ರೇಷ್ಠವಾದ , ಉನ್ನತವಾದ. ನಿರಾಳ – ಚಿಂತೆಯಿಲ್ಲದ , ಪರುಷ – ಮುಟ್ಟಿದ್ದನ್ನು ಚಿನ್ನವಾಗಿಸುವ ( ಮಣಿ ) ಶಿಲೆ ; ಗೃಹ – ಮನೆ ; ತಿರಿ – ಬೇಡು ; ತೊರೆ – ನದಿ ; ತೃಷೆ – ಬಾಯಾರಿಕೆ ; ಉದಕ – ನೀರು ; ಲಘು – ಸಣ್ಣದು ; ಗುರು – ದೊಡ್ಡದು , ಬೋಧಕ .

2nd Puc Urilingapeddiya Vachanagalu Question Answer

ಆ ) ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

1 ) ಯಾವುದರಿಂದ ಪರಿಮಳವನ್ನು ಅರಿಯಬಹುದು ?

ಹೂವಿನಿಂದ ಪರಿಮಳವನ್ನು ಅರಿಯಬಹುದು .

2) ಗುರು ಹೇಗೆ ವರ್ತಿಸಬಾರದು ?

ಗುರು ಲಘುವಾಗಿ ವರ್ತಿಸಬಾರದು .

3 ) ಯಾರು ಅನ್ಯಲಿಂಗವನ್ನು ನೆನೆಯುವುದಿಲ್ಲ ?

ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾನ ಭಕ್ತನಾದವನು ಅನ್ನಲಿಂಗವನ್ನು ನೆನೆಯುವುದಿಲ್ಲ .

4 ) ಉರಿಲಿಂಗಪೆದ್ದಿಯ ವಚನಗಳ ಅಂಕಿತ ಯಾವುದು ?

ಉರಿಲಿಂಗಪೆದ್ದಿಯ ವಚನಗಳ ಅಂಕಿತ ‘ ಉರಿಲಿಂಗಪೆದ್ದಿಯ ವಿಶ್ವೇಶ್ವರಾ ‘ ಎಂಬುದು .

ಇ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

1 ) ಗುರುವಿನ ಲಕ್ಷಣಗಳೇನು ?

ಗುರು ಶ್ರೀಗುರುವಾಗಿದ್ದಾನೆ . ಆತನ ಆಚಾರ – ವಿಚಾರ , ನಡೆ – ನುಡಿ ಎಲ್ಲವೂ ಗುರುತರವಾಗಿರುತ್ತದೆ . ಶ್ರೇಷ್ಠತರವಾಗಿರುತ್ತದೆ . ಆತ ಎಂದು ಶ್ರೀಗುರುವಾಗಿಯೇ ಉಳಿಯುವನೇ ಹೊರತು ಲಘುವಾಗಿ ನಡೆದುಕೊಳ್ಳಲು . ಗುರು ಗುರುವಾಗಿ ಶ್ರೇಷ್ಠನಾಗಿರುವನು . ಬೋಧಕನಾಗಿ , ಮಾರ್ಗದರ್ಶಕನಾಗಿ ಇರುವನು .

2 ) ಯಾರು ಮನೆಮನೆಯನ್ನು ತಿರಿಯನು ? ಕೆರೆಯುದಕವನ್ನರಸದವನು ಯಾರು ?

ಸ್ಪರ್ಶ ಮಣಿಯಿಂದ ( ಪರುಷ ಮಣಿಯಿಂದ ) ನಿರ್ಮಿಸಿದ ಮನೆಯಲ್ಲಿ ವಾಸಿಸುವವನು ಅಂದರೆ ಶ್ರೀಮಂತನು ಮನೆಮನೆಗೆ ಹೋಗಿ ಭಿಕ್ಷೆ ಬೇಡನು . ತೊರೆಯೊಳಗಿದ್ದವನು ( ನದಿಯ ಬಳಿ ಇರುವವನು ) ಬಾಯಾರಿಕೆಯನ್ನಾರಿಸಿಕೊಳ್ಳಲು ಕೆರೆಯ ನೀರನ್ನು ಬಯಸುವುದಿಲ್ಲ .

3 ) ಸೂರ್ಯ ಮತ್ತು ದೀಪಗಳಿಂದಾಗುವ ಉಪಯೋಗಗಳಾವುವು ?

ಸೂರ್ಯನಿಲ್ಲದೆ ಹಗಲು ಇರುವುದಿಲ್ಲ , ದೀಪವಿಲ್ಲದೆ ಬೆಳಕು ಇರುವುದಿಲ್ಲ , ಅಂದರೆ ಸೂರ್ಯನಿಂದ ನಮಗೆ ಬೆಳಕು ಹಗಲು ಹಾಗೂ ದೀಪದಿಂದ ಬೆಳಕು ರಾತ್ರಿ ದೊರೆಯುತ್ತದೆ .

ಈ ) ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )

1 ) ಉರಿಲಿಂಗಪೆದ್ದಿಯ ವಚನಗಳಲ್ಲಿನ ಆಶಯವೇನು ?

ಅತಿ ಶ್ರೇಷ್ಠವಾದ ಮನಸ್ಥಿತಿಯಿಂದ ಶಿವಧ್ಯಾನ ಮಾಡುತ್ತಾ ಮಂಗಳಕರವಾದ ಅಂಗಳದ ಸಾಂಗತ್ಯದಿಂದ ಇತರರ ಬಗ್ಗೆ ಚಿಂತಿಸಬೇಕೆಂಬುದನ್ನು ಉರಿಲಿಂಗಪೆದ್ದಿಯ ವಚನಗಳಲ್ಲಿನ ಆಶಯವಾಗಿದೆ . ಅಲ್ಲದೆ ಗುರುವಿನ ನಡತೆಯು ಗುರುತರವಾಗಿದ್ದು , ಘನತೆಯುಳ್ಳದ್ದಾಗಿಯೂ ಇರಬೇಕೆಂಬುದನ್ನು ಅದರ ಔಚಿತ್ಯವನ್ನು ಹಲವಾರು ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸುವುದೇ ಉರಿಲಿಂಗಪೆದ್ದಿಯ ವಚನಗಳ ಆಶಯವಾಗಿದೆ .

2 ) ಮಂಗಳಲಿಂಗದ ಮಹತ್ವವನ್ನು ಹೇಗೆ ವಿವರಿಸಲಾಗಿದೆ ?

ಮಂಗಳಲಿಂಗವು ಅತ್ಯಂತ ಮಹತ್ವ ಪೂರ್ಣವಾದುದಾಗಿದೆ . ಏಕೆಂದರೆ ಮಂಗಳಲಿಂಗದಂಗಳದಲ್ಲಿಯೇ ಇಡೀ ಜಗತ್ತು ಅಡಗಿದೆ . ಈ ಮಂಗಳಲಿಂಗದಂಗಳವು ಪರುಷದ ಗೃಹದಂತೆ , ಇಡೀ ಜಗತ್ತಿನ ಕೃಷಿಯನ್ನರಿಸುವ ತೊರೆಯಂತಿರುವವನು . ಆದ್ದರಿಂದಲೇ ಮಂಗಳಲಿಂಗ ಅಂಗಳವಿರಲು ಅನ್ಯಲಿಂಗಗಳನ್ನು ಭಕ್ತನು ನೆನೆವನೆ ? ಅಂದರೆ ಅಷ್ಟೊಂದು ಮಹತ್ವಪೂರ್ಣದ್ದಾಗಿದೆ .

3 ) ಗುರು ಲಘುವರ್ತನದಲ್ಲಿ ವರ್ತಿಸಬಾರದೇಕೆ ?

ಗುರು ಶ್ರೇಷ್ಠತಮ , ಬೋಧಕ , ಮಾರ್ಗದರ್ಶಕ , ಗುರುತರ ಮಾತ್ರವಲ್ಲದೆ ಶ್ರೀಗುರುವೇ ಆಗಿರುವನು . ಆತನ ಆಚಾರ – ವಿಚಾರ , ವರ್ತನೆ ಎಲ್ಲದರಲ್ಲಿಯೂ ಗುರುವಾಗಿಯೇ ಇರಬೇಕು . ಲಘುತರನಾಗಿ ವರ್ತಿಸಿದರೆ ಆ ಶ್ರೀಗುರುವಿಗೆ ಅಪಮಾನಕರ , ಯಾರು ಗೌರವ ಕೊಡಲಾರರು , ಗುರುಸ್ಥಾನಕ್ಕೆ ಚ್ಯುತಿ ಬರುವುದು . ಆದ್ದರಿಂದ ಗುರು ಗುರುವಾಗಿಯೇ ಇರಬೇಕೆ ಹೊರತು ಲಘುತರನಾಗಿ ವರ್ತಿಸಬಾರದು .

೨.೧೧ ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

1 “ ತಾನೆ ಲಘುಮಾಡಿ ಲಘುವಾದನಯ್ಯ ”

ಈ ಮೇಲಿನ ವಾಕ್ಯವನ್ನು ಉರಿಲಿಂಗಪೆದ್ದಿಯ ವಚನದಿಂದ ಆಯ್ದುಕೊಳ್ಳ ಲಾಗಿದೆ . ಗುರುವು ಲಘುವಾದ ರೀತಿಯಲ್ಲಿ ವರ್ತಿಸಬಾರದೆಂಬುದನ್ನು ನಿರೂಪಿಸುವಾಗ ಕವಿಯು ಈ ವಾಕ್ಯವನ್ನಾಡಿದ್ದಾನೆ . ಗುರುವಿನ ಸ್ಥಾನ ಹಿರಿದು . ತನ್ನ ಸಚ್ಚಾರಿತ್ರ್ಯ ವರ್ತನೆ ಮತ್ತು ವ್ಯಕ್ತಿತ್ವಗಳಿಂದ ಆತ ಸದಾ ತನ್ನ ಗುರುಸ್ಥಾನದ ಘನತೆಯನ್ನು ಕಾಯ್ದುಕೊಳ್ಳಬೇಕು . ಆ ಮೂಲಕ ತನ್ನ ಶಿಷ್ಯರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು . ಗುರುವು ಲಘುವರ್ತನೆಯನ್ನು ತೋರಿದರೆ ಅವನು ಉಳಿದವರ ದೃಷ್ಟಿಯಲ್ಲಿ ಲಘುವಾಗಿ ಹೋಗುತ್ತಾನೆ . ಆದ್ದರಿಂದ ಹಗುರವಾದ ನಡವಳಿಕೆಯನ್ನು ತೋರದೆ ಘನವ್ಯಕ್ತಿತ್ವವನ್ನು ಕಾಯ್ದುಕೊಳ್ಳುವುದು ನಿಜವಾದ ಗುರುವಾದವನ ಕರ್ತವ್ಯವಾಗಿದೆ ಎಂಬುದನ್ನು ಕವಿಯು ಇಲ್ಲಿ ವಿವರಿಸಿ ಹೇಳಿದ್ದಾನೆ .

2. “ ಅನ್ಯ ಲಿಂಗಗಳ ನೆನೆವನೆ ನಿಮ್ಮ ಭಕ್ತನು ”

ಈ ಮೇಲಿನ ವಾಕ್ಯವನ್ನು ಉರಿಲಿಂಗಪೆದ್ದಿಯ ವಚನದಿಂದ ಆಯ್ದುಕೊಳ್ಳ ಲಾಗಿದೆ . ಲಿಂಗಸಾಮಿಪ್ಯವು ಉಳಿದೆಲ್ಲವನ್ನೂ ಮರೆಯುವಂತೆ , ನೆನೆಯದಂತೆ ಮಾಡುವು ದೆಂಬುದನ್ನು ನಿರೂಪಿಸುವಾಗ ಕವಿ ಈ ಮೇಲಿನ ಮಾತನ್ನು ಹೇಳಿದ್ದಾನೆ . ಪರುಷಗೃಹದಲ್ಲಿರುವವನು ಮನೆಮನೆ ತಿರುಗಿ ತಿರಿಯುವ ( ಬೇಡುವ ) ಅಗತ್ಯವಿಲ್ಲ , ತೊರೆಯೊಳಗಿರುವವನು ಕೆರೆಯ ನೀರನ್ನು ಬಯಸನು . ಅದರಂತೆಯೇ ಮೈಮೇಲೆ ಲಿಂಗವನ್ನು ಧರಿಸಿದ ಮಹಾಭಕ್ತನು ಅನ್ಯಲಿಂಗಗಳನ್ನು ನೆನೆಯುವುದಿಲ್ಲ ಎಂದು ಉರಿಲಿಂಗಪೆದ್ದಿಯು ಅಭಿಪ್ರಾಯಪಟ್ಟಿರುವನು .

3 “ ಪುಷ್ಟವಿಲ್ಲದೆ ಪರಿಮಳವನರಿಯಬಹುದೆ “

ಉರಿಲಿಂಗಪೆದ್ದಿಯ ವಚನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಮಹಾಘನ ನಿರಾಳನಾದ ಪರಶಿವನಿಂದ ಲಿಂಗವು ವೇದ್ಯವಾಗುವುದೆನ್ನುವುದನ್ನು ನಿರೂಪಿಸುವಾಗ ಕವಿಯು ನಿದರ್ಶನವಾಗಿ ಈ ಮೇಲಿನ ವಾಕ್ಯವನ್ನು ರಚಿಸಿದ್ದಾನೆ . ಪುಷ್ಟವಿದ್ದರೆ ಸುಗಂಧದ ಅನುಭವ ನಮಗಾಗುತ್ತವೆ . ಪುಷ್ಪವೇ ಇಲ್ಲದಿದ್ದರೆ ಪರಿಮಳವನ್ನು ಅನುಭವಿಸಲು , ಅರಿಯಲು ಹೇಗೆ ನಮಗೆ ಅಸಾಧ್ಯವೋ ಅದರಂತೆಯೇ ಪರಶಿವನಿಂದಾಗಿ ಲಿಂಗವು ಅನುಭವಕ್ಕೆ ಬರುತ್ತದೆಂದು ಕವಿ ಅಭಿಪ್ರಾಯಪಟ್ಟಿರುವನು . ಹೂವು – ಪರಿಮಳಗಳು ಹೇಗೆ ಅಭಿನ್ನವೋ ಪರಶಿವಲಿಂಗಗಳೂ ಭಿನ್ನವಲ್ಲವೆಂಬುದು ಆತನ ಅಭಿಪ್ರಾಯವಾಗಿದೆ .

2nd puc kannada Urilingapeddiya vachanagalu notes pdf

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *