ಪ್ರಥಮ ಪಿ.ಯು.ಸಿ ಅಧ್ಯಾಯ-8 ನ್ಯಾಯಾಂಗ ನೋಟ್ಸ್‌ | 1st Puc Political Science Chapter 8 Nyayanga Notes in Kannada

ಪ್ರಥಮ ಪಿ.ಯು.ಸಿ ಅಧ್ಯಾಯ-8 ನ್ಯಾಯಾಂಗ ನೋಟ್ಸ್‌, 1st Puc Political Science Chapter 8 Nyayanga Notes in Kannada Question Answer Judiciary Notes Pdf Kseeb Solution For Class 11 Political Science Chapter 8 Notes judiciary class 11 question answer in Kannada ನ್ಯಾಯಾಂಗ Notes Pdf 2023

 

ಅಧ್ಯಾಯ-8 ನ್ಯಾಯಾಂಗ ನೋಟ್ಸ್‌

1st Puc Political Science Chapter 8 Nyayanga Notes in Kannada

ಕೆಳಗಿನವುಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1 ) ಹೈಕೋರ್ಟ್‌ನ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ ?

ರಾಷ್ಟ್ರಾಧ್ಯಕ್ಷರು ನೇಮಿಸುತ್ತಾರೆ .

2 ) ಅತ್ಯುನ್ನತ ನ್ಯಾಯಾಲಯ ಯಾವುದು ?

ಸರ್ವೋಚ್ಛ ನ್ಯಾಯಾಲಯ ಅತ್ಯುನ್ನತ ನ್ಯಾಯಾಲಯವಾಗಿದೆ .

3 ) ಮೇಲ್ಮನವಿ ಎಂದರೇನು ?

ನ್ಯಾಯಾಧೀಕರಣಗಳ ತೀರ್ಪನ್ನು ಪ್ರಶ್ನಿಸಿ ಮೇಲ್ಮಟ್ಟದ ನ್ಯಾಯಾಲಕ್ಕೆ ಸಲ್ಲಿಸುವ ಮನವಿಯೇ ಮೇಲ್ಮನವಿ .

4 ) ಜಿಲ್ಲಾ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ ?

ಜಿಲ್ಲಾ ನ್ಯಾಯಾಧೀಶರನ್ನು ರಾಜ್ಯಪಾಲರು ನೇಮಿಸುತ್ತಾರೆ .

5 ) ನ್ಯಾಯಾಂಗ ಎಂದರೇನು ?

ಕಾನೂನುಗಳನ್ನು ವಿಶ್ಲೇಷಿಸುವ ಸರ್ಕಾರದ ಮೂರನೆಯ ಅಂಗವೇ ನ್ಯಾಯಾಂಗ

6 ) ಏಕೀಕೃತ ನ್ಯಾಯಾಂಗ ವ್ಯವಸ್ಥೆ ಎಂದರೇನು ?

ಏಕೀಕೃತ ನ್ಯಾಯಾಂಗ ವ್ಯವಸ್ಥೆಯೇ ಏಕೀಕೃತ ನ್ಯಾಯಾಂಗ ವ್ಯವಸ್ಥೆಯಾಗಿದೆ .

7 ) ಭಾರತದ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ ?

ರಾಷ್ಟ್ರಾಧ್ಯಕ್ಷರು ನೇಮಿಸುತ್ತಾರೆ .

8 ) ಅಂತಿಮ ಅಪೀಲು ನ್ಯಾಯಾಲಯ ಯಾವುದು ?

ಅಂತಿಮ ಅಪೀಲು ನ್ಯಾಯಾಲಯ ಸರ್ವೋಚ್ಛ ನ್ಯಾಯಾಲಯ ( ಸುಪ್ರೀಂ ಕೋರ್ಟ್ ) .

9 ) ಭಾರತದಲ್ಲಿ ಎಷ್ಟು ಹೈಕೋರ್ಟುಗಳಿವೆ ?

21 ಹೈಕೋರ್ಟುಗಳಿವೆ .

10 ) ಸಂವಿಧಾನದ ರಕ್ಷಕ ಯಾರು ?

ನ್ಯಾಯಾಂಗ ಸಂವಿಧಾನದ ರಕ್ಷಕ ,

11 ) ಲೋಕ ಅದಾಲತ್ ಎಂದರೇನು ?

ರಾಜೀಸಂಧಾನ ಏರ್ಪಡಿಸುವುದರ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ರಚಿಸಲಾದ ಯಾಯಾಲಯವೇ ಲೋಕ ಅದಾಲತ್

12 ) PIL ಅನ್ನು ವಿಸ್ತರಿಸಿ ,

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ .

13 ) ನ್ಯಾಯಾಂಗದ ಸ್ವಾತಂತ್ರ್ಯ ಎಂದರೇನು ?

ಶಾಸಕಾಂಗ ಮತ್ತು ಕಾರಾಂಗಗಳ ಒತ್ತಡ ಮತ್ತು ಪ್ರಭಾವಗಳಿಂದ ಮುಕ್ತವಾಗಿರುವುದೇ ನ್ಯಾಯಾಂಗದ ಸ್ವಾತಂತ್ರ್ಯ

14 ) ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಯಾರು ?

ಪಿ.ಸದಾಶಿವಂ .

15 ) ಕರ್ನಾಟಕದ ಹೈಕೋರ್ಟ್‌ನ ಮುಖ್ಯನ್ಯಾಯಾಧೀಶರು ಯಾರು ?

ಡಿ.ಎಚ್ . ವಘೇಲ

16 ) PIL ಎಲ್ಲಿ ಉಗಮವಾಯಿತು ?

ನ್ಯೂಯಾರ್ಕ್ ನಗರದಲ್ಲಿ 1876 ರಲ್ಲಿ

17 ) ಕೌಟುಂಬಿಕ ನ್ಯಾಯಾಲಯ ಎಲ್ಲಿ ಮೊದಲು ಅಸ್ತಿತ್ವಕ್ಕೆ ಬಂದಿತು ?

ಅಮೇರಿಕಾದಲ್ಲಿ 1910 ರಲ್ಲಿ ಅಸ್ತಿತ್ವಕ್ಕೆ ಬಂತು .

18 ) ಭಾರತದಲ್ಲಿ ಕೌಟುಂಬಿಕ ನ್ಯಾಯಾಲಯದ ಕಾಯ್ದೆ ಯಾವಾಗ ಅನುಷ್ಟಾನಕ್ಕೆ ಬಂದಿತು ?

ಸೆಪ್ಟೆಂಬರ್ 14 , 1948

19 ) ಭಾರತದಲ್ಲಿ ಎಷ್ಟು ಕೌಟುಂಬಿಕ ನ್ಯಾಯಾಲಯಗಳಿವೆ ?

190 ಕೌಟುಂಬಿಕ ನ್ಯಾಯಾಲಯಗಳು ,

20 ) ಕರ್ನಾಟಕದಲ್ಲಿ ಎಷ್ಟು ಕೌಟುಂಬಿಕ ನ್ಯಾಯಾಲಯಗಳಿವೆ ?

12 ಕೌಟುಂಬಿಕ ನ್ಯಾಯಾಲಯಗಳು ,

21 ) ಅಂತಿಮ ಮೇಲ್ಮನವಿಯ ನ್ಯಾಯಾಲಯ ಯಾವುದು ?

ಸರ್ವೋಚ್ಚ ನ್ಯಾಯಾಲಯ ,

1st Puc Political Science Notes In Kannada Pdf Chapter 8

II . ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ :

1 ) ಅಧೀನ ನ್ಯಾಯಾಲಯಗಳನ್ನು ಹೆಸರಿಸಿ .

ಜಿಲ್ಲಾ ನ್ಯಾಯಾಲಯಗಳು

ಕಂದಾಯ ನ್ಯಾಯಾಲಯಗಳು

ಗ್ರಾಹಕ ನ್ಯಾಯಾಲಯಗಳು

ಕೌಟುಂಬಿಕ ನ್ಯಾಯಾಲಯಗಳು

ಜನತಾ ನ್ಯಾಯಾಲಯಗಳು .

2 ) ನ್ಯಾಯಿಕ ವಿಮರ್ಶೆ ಎಂದರೇನು ?

ಶಾಸಕಾಂಗ ರೂಪಿಸುವ ಕಾನೂನು ಹಾಗೂ ಕಾರ್ಯಾಂಗ ಪ್ರಮುಖ ನೀಡುವ ಆಜ್ಞೆಗಳ ಸಂವಿಧಾನ ಬದ್ಧತೆಯನ್ನು ಪರೀಕ್ಷಿಸುವ ಅಧಿಕಾರವೇ ನ್ಯಾಯಿಕ ವಿಮರ್ಶೆ .

3 ) ಜಿಲ್ಲಾ ನ್ಯಾಯಾಧೀಶರ ಅರ್ಹತೆಗಳನ್ನು ತಿಳಿಸಿ ,

1 .ಭಾರತದ ಪ್ರಜೆಯಾಗಿರಬೇಕು

2 . 7 ವರ್ಷ ವಕೀಲರಾಗಿ ಕಾವ್ಯ ನಿರ್ವಹಿಸಿರಬೇಕು .

3. ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಸೇವೆಯಲ್ಲಿರಬೇಕು .

4 ) ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ವೇತನ ಮತ್ತು ಸವಲತ್ತುಗಳ ಬಗ್ಗೆ ಬರೆಯಿರಿ .

ಇವರು ಸಂಸತ್ತು ಕಾಲಕಾಲಕ್ಕೆ ನಿರ್ಧರಿಸುವ ವೇತನ ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಾರೆ . ಮುಖ್ಯ ನ್ಯಾಯಾಧೀಶರು ತಿಂಗಳಿಗೆ ರೂ . 1,00,000 / – ಇತರೆ ನ್ಯಾಯಾಧೀಶರು ರೂ . 90,000 / – ವೇತನ ಪಡೆಯುತ್ತಾರೆ . ಇದಲ್ಲದೆ ಇತರ ಭತ್ಯೆಗಳನ್ನು ಸವಲತ್ತುಗಳನ್ನು , ಉಚಿತ ನಿವಾಸವನ್ನು ಹಾಗೂ ವಾಹನ ಇತ್ಯಾದಿಗಳನ್ನು ಪಡೆಯುತ್ತಾರೆ .

5 ) ಗ್ರಾಹಕ ನ್ಯಾಯಾಲಯ ಎಂದರೇನು ?

ಗ್ರಾಹಕರ ಹಿತಾಸಕ್ತಿ ರಕ್ಷಣೆಗೋಸ್ಕರ ಇರುವ ನ್ಯಾಯಾಲವೇ ಗ್ರಾಹಕ ನ್ಯಾಯಾಲಯ , 1986 ರಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ .

6 ) ಕಂದಾಯ ನ್ಯಾಯಾಲಯ ಎಂದರೇನು ?

ಕಂದಾಯಕ್ಕೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆಯನ್ನು ಮಾಡುವ ನ್ಯಾಯಾಲಯಗಳೇ ಕಂದಾಯ ನ್ಯಾಯಾಲಯಗಳು , ಇವು ಭೂಕಂದಾಯ ದಾಖಲೆಗಳ ಸಂರಕ್ಷಣೆ , ತೆರಿಗೆ ವಸೂಲಾತಿ ಮತ್ತು ಜಮಾ ಬಂದಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತವೆ .

7 ) ಕೌಟುಂಬಿಕ ನ್ಯಾಯಾಲಯ ಎಂದರೇನು ?

ವಿವಾಹ , ವಿವಾಹ ವಿಚ್ಛೇದನ , ಮಕ್ಕಳ ಸುಪರ್ದು ಮುಂತಾದ ಕೌಟುಂಬಿಕ ವಿಷಯಗಳ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡುವ ನ್ಯಾಯಾಲಯಗಳೇ ಕೌಟುಂಬಿಕ ನ್ಯಾಯಾಲಯಗಳು .

8 ) ಹೈಕೋರ್ಟ್‌ನ ನ್ಯಾಯಾಧೀಶರ ಅರ್ಹತೆಗಳಾವುವು ?

1. ಭಾರತೀಯ ಪೌರರಾಗಿರಬೇಕು .

2. ಯಾವುದೇ ಉಚ್ಚನ್ಯಾಯಾಲಯದಲ್ಲಿ 10 ವರ್ಷಗಳ ಕಾಲ ಸತತವಾಗಿ ವಕೀಲ ವೃತ್ತಿಯನ್ನು ಕೈಗೊಂಡಿರಬೇಕು .

3. 10 ವರ್ಷ ಯಾವುದೇ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ‍್ಯ ನಿರ್ವಹಿಸಿರಬೇಕು

9 ) ನ್ಯಾಯಾಂಗ ನಿಂದನೆ ಎಂದರೇನು ?

ನ್ಯಾಯಾಲಯದ ತೀರ್ಪುಗಳನ್ನು ಮತ್ತು ನ್ಯಾಯಾಧೀಶರ ವರ್ತನೆಗಳನ್ನು ಟೀಕಿಸಿದರೆ ಅಥವಾ ನ್ಯಾಯಾಲಯದ ತೀರ್ಪುಗಳನ್ನು ಉಲ್ಲಂಘಿಸಿದರೆ ಅದನ್ನು ನ್ಯಾಯಾಂಗ ನಿಂದನೆ ಎನ್ನುವರು .

10 ) ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೇಗೆ ದಾಖಲಿಸಬಹುದು ?

ತೊಂದರೆಗೆ ಒಳಗಾದ ವರ್ಗದವರು ಅಥವಾ ಅವರ ಪರವಾಗಿ ಯಾರ ಖಾಸಗಿ ವ್ಯಕ್ತಿಗಳು ಅಥವಾ ಸ್ವತಃ ನ್ಯಾಯಾಂಗ ಅಥವಾ ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಬಹುದು .

11 ) ಲೋಕ್ ಅದಾಲತ್‌ನ ಅರ್ಥವನ್ನು ಬರೆಯಿರಿ .

ಪ್ರಕರಣವೊಂದರ ಉಭಯ ಪಕ್ಷಗಳಲ್ಲಿ ರಾಜೀಸಂಧಾನ ಏರ್ಪಡಿಸುವುದರ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ರಚಿಸಲಾದ ನ್ಯಾಯಾಲಯವೇ ಲೋಕ್ ಅದಾಲತ್ .

12 ) ಸುಪ್ರೀಂ ಕೋರ್ಟ್‌ನ ಸಲಹಾ ಅಧಿಕಾರ ಎಂದರೇನು ?

ಸಂವಿಧಾನದ 143 ನೇ ವಿಧಿ ಅನ್ವಯ ಸಾರ್ವಜನಿಕ ಮಹತ್ವವುಳ್ಳ ಕಾನೂನಿನ ವಿಷಯಗಳು , ಮತ್ತು ಸಂವಿಧಾನಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷರಿಗೆ ವಿನಂತಿಯ ಮೇರೆಗೆ ಸರ್ವೋಚ್ಛ ನ್ಯಾಯಾಲಯವು ತನ್ನ ಸಲಹೆ ಮತ್ತು ಅಭಿಪ್ರಾಯಗಳನ್ನು ನೀಡುತ್ತದೆ . ಆದರೆ ಇವುಗಳಿಗೆ ರಾಷ್ಟ್ರಾಧ್ಯಕ್ಷರು ಬದ್ಧರಲ್ಲ .

KSEEB Solutions for Class 11 Political Science Chapter 8

III . ಕೆಳಗಿನವುಗಳಿಗೆ 15-20 ವಾಕ್ಯದಲ್ಲಿ ಉತ್ತರಿಸಿರಿ :

1 ) ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಪದಚ್ಯುತಿ ವಿಧಾನವನ್ನು ಬರೆಯಿರಿ .

ಸಂವಿಧಾನದ ಉಲ್ಲಂಘನೆ , ಅದಕ್ಷತೆ , ದುರ್ವತ್ರನೆ ಮುಂತಾದ ಆರೋಪಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನು ಅಧಿಕಾರವಧಿಗೆ ಮುನ್ನವೇ ಪದಚ್ಯುತಿಗೊಳಿಸುವ ವಿಧಾನವನ್ನು ‘ ಮಹಾಭಿಯೋಗ ‘ ಅಥವಾ ‘ ದೋಷಾದೋಪಣಾ ವಿಧಾನ ‘ ಎನ್ನುವರು . ಈ ಸಂಬಂಧ ಸಂಸತ್ತಿನ ಉಭಯ ಸದನಗಳಲ್ಲಿ ನ್ಯಾಯಾಧೀಶರನ್ನು ವಜಾಮಾಡುವ ಗೊತ್ತುವಳಿಗೆ ಸದನದ ಒಟ್ಟು ಸದಸ್ಯರ ಬಹುಮತ ಮತ್ತು ಸದನದಲ್ಲಿ ಹಾಜರಿದ್ದು ಮತ ಚಲಾಯಿಸುವವರಲ್ಲಿ 23 ರಷ್ಟು ಭಾಗದಷ್ಟು ಬಹುಮತ ಪಡೆಯಬೇಕು . ಇಲ್ಲಿಯವರೆಗೆ ಈ ವಿಧಾನದ ಮೂಲಕ ಯಾವ ನ್ಯಾಯಾಧಿಶರನ್ನು ಪದಚ್ಯುತಿಗೊಳಿಸಿಲ್ಲ 1991 ರಲ್ಲಿ ನ್ಯಾಯಾಧೀಶರಾದ ಆರ್.ರಾಮಸ್ವಾಮಿಯ ವಿರುದ್ಧ ಈ ಪ್ರಕ್ರಿಯೆಯು ಆರಂಭವಾಯಿತಾದರೂ ಪೂರ್ಣಗೊಳ್ಳಲಿಲ್ಲ .

2 ) ಸುಪ್ರೀಂ ಕೋರ್ಟ್‌ನ ಮೂಲ ಅಧಿಕಾರ ವ್ಯಾಪ್ತಿಯನ್ನು ವಿವರಿಸಿ .

ಸಂವಿಧಾನದ 131 ನೇ ವಿಧಿ ಅನ್ವಯ ಸರ್ವೋಚ್ಛ ನ್ಯಾಯಾಲಯವು ಕೆಲವು ಮೊಕದ್ದಮೆಗಳನ್ನು ನೇರವಾಗಿ ಸ್ವೀಕರಿಸಿ ವಿಚಾರಣೆ ನಡೆಸುವ ಅಧಿಕಾರ ಹೊಂದಿದ ಇದೇ ಮೂಲ ಅಧಿಕಾರ ವ್ಯಾಪ್ತಿ , ಈ ಮೂಲ ವ್ಯಾಪ್ತಿಯಲ್ಲಿ ಬರುವ ಮೊಕದ್ದಮೆಗಳನ್ನು ಭಾರತದ ಬೇರೆ ಯಾವ ನ್ಯಾಯಾಲಯವು ಕೈಗೆತ್ತಿಕೊಳ್ಳುವಂತಿಲ್ಲ . ಈ ವ್ಯಾಪ್ತಿಯಲ್ಲಿ ಕೆಳಗಿನ ವಿವಾದಗಳು ಬರುತ್ತವೆ .

* ಭಾರತ ಸರ್ಕಾರ ಮತ್ತು ಒಂದು / ಹೆಚ್ಚು ರಾಜ್ಯಗಳ ನಡುವಿನ ವಿವಾದ

* ರಾಜ್ಯ – ರಾಜ್ಯಗಳ ನಡುವಣ ವಿವಾದ

* ಸಂವಿಧಾನವನ್ನು ಅರ್ಥೈಸುವುದು

* ಸಂವಿಧಾನದ 32 ನೇ ವಿಧಿ ಅನ್ವಯ ಭಾರತದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರಿಟ್ ಆಜ್ಞೆಗಳನ್ನು ಹೊರಡಿಸುವ ಅಧಿಕಾರ .

3 ) ಸುಪ್ರೀಂ ಕೋರ್ಟ್‌ನ ಅಪೀಲು ಅಧಿಕಾರ ವ್ಯಾಪ್ತಿಯನ್ನು ವಿವರಿಸಿ .

ಸುಪ್ರೀಂ ಕೋರ್ಟ್ , ಮನವೀಯ ಅಂತಿಮ ನ್ಯಾಯಾಲವಾಗದೆ , ಉಚ್ಛ ನ್ಯಾಯಾಲಯ ಹಾಗೂ ಇತರ ನ್ಯಾಯಾಧಿಕರಣಗಳ ತೀರ್ಪುಗಳನ್ನು ಪ್ರಶ್ನಿಸಿ ಯಾವುದೇ ವ್ಯಕ್ತಿಯು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು . ಸುಪ್ರೀಂಕೋರ್ಟ್ ಅಂತಹ ಮೇಲ್ಮನವಿಗಳ ವಿಚಾರಣೆ ನಡೆಸಿ ತೀರ್ಪನ್ನು ನೀಡುವ ಅಧಿಕಾರ ಹೊಂದಿದೆ . ಇಂತಹ ವಿವಾದಗಳನ್ನು ಮನವಿಯ ಮೇರೆಗೆ ಮಾತ್ರ ಸುಪ್ರೀಂಕೋರ್ಟ್ ಸ್ವೀಕರಿಸುತ್ತದೆ . ಈ ವ್ಯಾಪ್ತಿಯಲ್ಲಿ ಬರುವ ಮೊಕದ್ದಮೆಗಳು ಕೆಳಗಿನಂತಿವೆ .

* ಸಂವಿಧಾನಾತ್ಮಕ ವಿವಾದಗಳು + ಸಿವಿಲ್ ಮೊಕದ್ದಮೆಗಳು + ಕ್ರಿಮಿನಲ್ ಮೊಕದ್ದಮೆಗಳು

* ಸರ್ವೋಚ್ಛ ನ್ಯಾಯಾಲಯದ ವಿಶೇಷ ಅನುಮತಿ ಶಾಸಕಾಂಗ ರಚಿಸಿದ ಶಾಸನಗಳು ಸಂವಿಧಾನಕ್ಕೆ ವಿರುದ್ಧವಾಗಿದ್ದಾಗ ಅಂತಹ ಶಾಸನಗಳನ್ನು ನ್ಯಾಯಾಂಗವು ಅಸಿಂಧುಗೊಳಿಸುತ್ತದೆ .

* ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಚುನಾವಣೆಗೆ ಸಂಬಂಧಿಸಿದ ವಿವಾದಗಳು ರಾಜ್ಯ ವಿಧಾನಸಭೆಯ ವಿಸರ್ಜನೆಗೆ ಸಂಬಂಧಿಸಿದಂತೆ ಉಂಟಾಗುವ ವಿವಾದಗಳು

4 ) ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ಅಗತ್ಯವಾದ ಕ್ರಮಗಳನ್ನು ವಿವರಿಸಿ

ನ್ಯಾಯಾಂಗವು ಶಾಸಕಾಂಗ ಮತ್ತು ಕಾರಾಂಗಗಳ ಒತ್ತಡ ಮತ್ತು ಪ್ರಭಾವಗಳಿಂದ ಮುಕ್ತವಾಗಿರುವುದೇ ನ್ಯಾಯಾಂಗದ ಸ್ವಾತಂತ್ರ್ಯ ,

ಈ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ಅಗತ್ಯವಾದ ಕ್ರಮಗಳೆಂದರೆ :

1. ನ್ಯಾಯಾಧೀಶರ ನೇಮಕ ವಿಧಾನ : ನ್ಯಾಯಾಧೀಶರನ್ನು ಜನರಿಂದ , ಶಾಸಕಾಂಗದಿಂದ ಮತ್ತು ಕಾರಾಂಗದಿಂದ ಆಯ್ಕೆ ಮಾಡುವ 3 ವಿಧಾನಗಳಿವೆ . ಈ ವಿಧಾನದಲ್ಲಿ ಕಾರಾಂಗದಿಂದ ನ್ಯಾಯಾಧೀಶರ ನೇಮಕಾತಿ ವಿಧಾನವನ್ನು ಹೆಚ್ಚಿನ ರಾಷ್ಟ್ರಗಳು ಅಳವಡಿಸಿಕೊಂಡಿದೆ . ಈ ವಿಧಾನದಿಂದ ನ್ಯಾಯಾಂಗದ ಸ್ವಾತಂತ್ರ್ಯ ಸಾಧ್ಯ .

2. ಉದ್ಯೋಗದ ಭದ್ರತೆ / ಲಸ್ಥಿತ ಅಧಿಕಾರವಧಿ : ನ್ಯಾಯಾಧೀಶರ ಅಧಿಕಾರವಧಿ ನಿಶ್ಚಿತವಾಗಿರುತ್ತದೆ . ದುರ್ನಡತೆ , ಅಧಿಕಾರ ದುರುಪಯೋಗ ಮತ್ತು ಸಂವಿಧಾನ ವಿರೋಧಿಕೃತ್ಯದ ಕಾರಣದಿಂದ ಅವರನ್ನು ಪದಚ್ಯುತಿಗೊಳಿಸಬಹುದೇ ಹೊರತೆ ಬೇರೆ ಮಾರ್ಗದಿಂದ ಸಾಧ್ಯವಿಲ್ಲ .

3 . ಉತ್ತಮ ವೇತನ ಮತ್ತು ಭತ್ಯೆಗಳು : ನ್ಯಾಯಾಧೀಶರಿಗೆ ಉತ್ತಮವಾದ ವೇತನ ಮತ್ತು ಭತ್ಯೆಗಳು ಇರಬೇಕು ಮತ್ತು ವೇತನವನ್ನು ಕಡಿತಗೊಳಿಸುವಂತಿರಬಾರದು . ಸರ್ವೋಕ್ಕೆ ನ್ಯಾಯಾಲಯದ ಅಧಿಕಾರ ಮತ್ತು ಕಾರ ವ್ಯಾಪ್ತಿ ಸರ್ವೋಚ್ಛನ್ಯಾಯಾಲಯದ ಅಧಿಕಾರವನ್ನು ಸಂಸತ್‌ ಹೆಚ್ಚಿಸಬಹುದೇ ಹೊರತು ಕಡಿತಗೊಳಿಸಲು ಸಾಧ್ಯವಿಲ್ಲ .

4. ಕಾರ‍್ಯಾಂಗದಿಂದ ನ್ಯಾಯಾಂಗವನ್ನು ಬೇರ್ಪಡಿಸುವುದು : ನ್ಯಾಯಾಂಗವು ಕಾರಾಂಗ ಮತ್ತು ಶಾಸಕಾಂಗಗಳ ನಿಯಂತ್ರಣಕ್ಕೊಳ ಪಟ್ಟಿರಬಾರದು .

5. ನಿವೃತ್ತಿ ನಂತರ ವಕೀಲ ವೃತ್ತಿ ನಿಷೇಧ : ನ್ಯಾಯಾಧೀಶರು ನಿವೃತ್ತಿಯ ನಂತರ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತಿಲ್ಲ .

6 . ನ್ಯಾಯಾಂಗ ನಿಂದನೆಗೆ ಶಿಕ್ಷೆ : ನ್ಯಾಯಿಕ ತೀರ್ಪುಗಳನ್ನು ಪಾಲಿಸದಿದ್ದರೆ , ಅಂತಹವರನ್ನು ಶಿಕ್ಷಿಸುವ ಅಧಿಕಾರ ಸರ್ವೋಚ್ಛನ್ಯಾಯಾಲಯ ಮತ್ತು ಉಚ್ಚನ್ಯಾಯಾಲಯಗಳೆರಡಕ್ಕೂ ನೀಡಲಾಗಿದೆ .

5 ) ‘ ಲೋಕ್ ಅದಾಲತ್ʼ ಬಗ್ಗೆ ಟಿಪ್ಪಣಿ ಬರೆಯಿರಿ .

ಪ್ರಕರಣವೊಂದರ ಉಭಯ ಪಕ್ಷಗಳವರಲ್ಲಿ ರಾಜೀಸಂಧಾನ ಏರ್ಪಡಿಸುವುದರ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ / ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ರಚಿಸಲಾದ ನ್ಯಾಯಾಲಯವೇ ‘ ಲೋಕ ಅದಾಲತ್ .

ಅಸ್ತಿತ್ವದಲ್ಲಿರುವ ನ್ಯಾಯಾಲಯಗಳು ಮತ್ತು ಅದರ ವಿಧಿ ವಿಧಾನಗಳು ಹೆಚ್ಚು ಸಂಕೀರ್ಣತೆಯಿಂದ ಕೂಡಿದ್ದು ಅನಾವಶ್ಯಕವಾಗಿ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತವೆ ಹಾಗೂ ದುಬಾರಿಯಾದ ನ್ಯಾಯಾಂಗ ಪದ್ಧತಿಯಾಗಿದೆ . ಶೀಘ್ರವಾಗಿ ಪ್ರಕರಣಗಳ ಇತ್ಯರ್ಥ ಮತ್ತು ನ್ಯಾಯಾಂಗದ ಕಾವ್ಯಗಳ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಲೋಕ್ ಅದಾಲತ್‌ಗಳನ್ನು ಅಸ್ತಿತ್ವಕ್ಕೆ ತರಲಾಗದೆ , ಸರ್ವೋಚ್ಛ ನ್ಯಾಯಾಲಯವು ಲೋಕ ಅದಾಲತ್‌ನ್ನು 1987 ರ ಲೀಗಲ್ ಸರ್ವಿಸಸ್ ಅಢಾರಿಟೀಸ್ ಕಾಯ್ದೆಯ ಮೂಲಕ ರಚಿಸಿದೆ . ಲೋಕ್‌ಅದಾಲತ್ ಕೆಳಗಿನ ಪ್ರಕರಣಗಳನ್ನು ಇತ್ಯರ್ಥ ಪಡಿಸುತ್ತಾರೆ .

* ಅಪಘಾತಕ್ಕಾಗಿ ಪರಿಹಾರ ಧನ ಕೋರಿ ಸಲ್ಲಿಸಿದ ಪ್ರಕರಣ :

* ಭೂ ಸ್ವಾಧೀನ ಸಂಬಂಧ ಸರ್ಕಾರದಿಂದ ಪರಿಹಾರ ಧನ ಕೋರಿ ಸಲ್ಲಿಸಿದ ಪ್ರಕರಣದಲ + ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣ

* ವೈವಾಹಿಕ ಮತ್ತು ಜೀವನಾಂಶಕ್ಕೆ ಸಂಬಂಧಿಸಿದ ಪ್ರಕರಣ

* ಕಾರ್ಮಿಕ ನ್ಯಾಯಾಲಯದಲ್ಲಿರುವ ಪ್ರಕರಣಗಳು

* ಗ್ರಾಹಕ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳು ಲೋಕ್ ಅದಲಾತ್ ನೀಡಿದ ತೀರ್ಪ ಅಂತಿಮವಾದದ್ದು ಅದರ ವಿರುದ್ಧ ಮೇಲ್ಮನವಿಗೆ ಅವಕಾಶವಿಲ್ಲ .

6 ) ಕಂದಾಯ ನ್ಯಾಯಾಲಯ ಎಂದರೇನು ?

ಕಂದಾಯ ನ್ಯಾಯಾಲಯಗಳು ಭೂಕಂದಾಯ ದಾಖಲೆಗಳ ಸಂರಕ್ಷಣೆ , ತೆರಿಗೆ ವಸೂಲಾತಿ ಮತ್ತು ಜಮಾ ಬಂದಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತದೆ . ಕಂದಾಯ ನ್ಯಾಯಾಲಯ ವ್ಯವಸ್ಥೆಯಲ್ಲಿ ಕೆಳಗಿನ ನ್ಯಾಯಾಲಯಗಳನ್ನು ಕಾಣುತ್ತೇವೆ .

1. ತಹಶೀಲ್ದಾರ್ ನ್ಯಾಯಾಲಯ : ಇದು ಪ್ರಾಥಮಿಕ ಹಂತದ ಕಂದಾಯ ನ್ಯಾಯಾಲಯವಾಗಿದೆ . ಇಲ್ಲಿ ತಹಶೀಲ್ದಾರರು ನ್ಯಾಯಾಧೀಶರ ಸ್ಥಾನದಲ್ಲಿರುತ್ತಾರೆ .

2 , ಉಪವಿಭಾಗಾಧಿಕಾಲಗಳ ನ್ಯಾಯಾಲಯ : ಸಹಾಯಕ ಆಯುಕ್ತರು ಇಲ್ಲ . ನ್ಯಾಯಾಧೀಶರಾಗಿರುತ್ತಾರೆ . ಇದು ತಹಶೀಲ್ದಾರ್‌ ನ್ಯಾಯಾಲಯ ನಿರ್ಣಯಗಳ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಸ್ವೀಕರಿಸಿ ವಿಚಾರಣೆ ನಡೆಸುತ್ತದೆ .

3 ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ : ಜಿಲ್ಲಾಧಿಕಾರಿಗಳು ಇಲ್ಲಿ ನ್ಯಾಯಾಧೀಶರಾಗಿರುತ್ತಾರೆ . ತಹಶೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿಗಳು ನ್ಯಾಯಾಲಯಗಳು ನೀಡಲಾದ ನಿರ್ಣಯಗಳ ವಿರುದ್ಧ ಸಲ್ಲಿಸುವ ಮೇಲ್ಮನವಿಯನ್ನು ಸ್ವೀಕರಿಸಿ ವಿಚಾರಣೆಯನ್ನು ನಡೆಸುತ್ತದೆ .

4. ಆಯುಕ್ತರ ನ್ಯಾಯಾಲಯ : ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ನೀಡುವ ನಿರ್ಣಯವನ್ನು ಪ್ರಶ್ನಿಸಿ ಸಲ್ಲಿಸುವ ಮೇಲ್ಮನವಿಯನ್ನು ಸ್ವೀಕರಿಸಿ ವಿಚಾರಣೆ ನಡೆಸುತ್ತದೆ .

5. ಕಂದಾಯ ಮಂಡಳಿ : ಇದು ರೆವಿನ್ಯೂ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಅತ್ಯುನ್ನತ ನ್ಯಾಯಾಲಯವಾಗಿದೆ.

7 ) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದರೇನು ? ಅದರ ಮಹತ್ವವನ್ನು ವಿವರಿಸಿ .

ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಾಗ ಭಯೋತ್ಪಾದನೆ , ವಾಯುಮಾಲಿನ್ಯ , ರಸ್ತೆಸಂರಕ್ಷಣೆ , ಪರಿಸರ ಸಂರಕ್ಷಣೆ , ಶಿಕ್ಷಣ ಸುಧಾರಣೆ , ಉದ್ಯೋಗವಕಾಶ ಇತ್ಯಾದಿ ವಿಷಯಗಳಲ್ಲಿ ಜನರ ಹಿತರಕ್ಷಣೆಗಾಗಿ ಹೂಡಲಾದ ಅರ್ಜಿಯೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಈ ಅರ್ಜಿಯನ್ನು ತೊಂದರೆಗೆ ಒಳಗಾದ ವರ್ಗ್ರದವರು ಅಥವಾ ಅವರ ಪರವಾಗಿ ಯಾರೇ ಖಾಸಗಿ ವ್ಯಕ್ತಿಗಳು ಅಥವಾ ಸ್ವತಃ ನ್ಯಾಯಾಂಗ ಅಥವಾ ಸರ್ಕಾರೇತರ ಸಂಸ್ಥೆಗಳು ಸಲ್ಲಿಸಬಹುದು .

ಇದು ವ್ಯಕ್ತಿಯನ್ನು ಸಮಾಜದ ಇತರ ಸದಸ್ಯರ ಕ್ರೂರ ವರ್ತನೆಯಿಂದ ಕಾಪಾಡುತ್ತದೆ . ಅದು ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಯನ್ನು ಹಾಗೂ ಕಾನೂನು ಬದ್ಧ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಉತ್ತಮ ನ್ಯಾಯಕ ಕ್ರಮವನ್ನು ಒದಗಿಸಿಕೊಡುತ್ತದೆ . ಸಂವಿಧಾನ ಕಾನೂನುಗಳನ್ನು ಉಲ್ಲಂಘಿಸುವ ಮೂಲಕ ಸಮಾಜದ ದುರ್ಬಲ ವರ್ಗದ ಹಿತಾಸಕ್ತಿಗಳ ಮೇಲೆ ಬೀರುವ ದುಷ್ಪರಿಣಾಮಗಳನ್ನು ತಡೆಗಟ್ಟುವ ದೃಷ್ಟಿಯಿಂದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯು ನ್ಯಾಯಶಾಸ್ತ್ರದಲ್ಲಿ ಒಂದು ಹೊಸ ಸುಧಾರಣೆಯಾಗಿದೆ .

8 ) .ಕೌಟುಂಬಿಕ ನ್ಯಾಯಾಲಯ ಎಂದರೇನು ? ಅದರ ಕಾರ‍್ಯಗಳನ್ನು ವಿವರಿಸಿ

ವಿವಾಹ , ವಿವಾಹ – ವಿಚ್ಛೇದನ ಮಕ್ಕಳ ವಾರಸುದಾರಿಕೆ ಮುಂತಾದ ಕೌಟುಂಬಿಕ ವಿಷಯಗಳ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡುವ ನ್ಯಾಯಾಲಯಗಳೇ ಕೌಟುಂಬಿಕ ನ್ಯಾಯಾಲಯಗಳು , ಈ ನ್ಯಾಯಾಲಯಗಳನ್ನು ಕಾನೂನಿನ ಅನ್ವಯ ರಚಿಸಲಾಗುತ್ತದೆ . ಕೌಟುಂಬಿಕ ವ್ಯಾಜ್ಯಗಳನ್ನು ವಿಚಾರಣೆ ನಡೆಸಿ ಶೀಘ್ರವಾಗಿ ಬಗೆಹರಿಸುವುದಕ್ಕಾಗಿ ಹಲವಾರು ಮಹಿಳಾ ಸಂಘಟನೆಗಳು , ಸಂಘ – ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಬಂದ ಒತ್ತಡದ ಪರಿಣಾಮವಾಗಿ ಕೌಟುಂಬಿಕ ನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು . ಇದು ವಿವಾಹ – ವಿಚ್ಛೇದನ , ನ್ಯಾಯಿಕ ಪ್ರತ್ಯೇಕೀಕರಣ ವ್ಯಕ್ತಿಯ , ವೈವಾಹಿಕ ಸ್ಥಾನಮಾನದ ಪೋಷಣೆ , ವಿವಾಹದ ನಂತರ ಹೊಂದಿದ ಆಸ್ತಿ , ಜೀವನಾಂಶ , ಪೋಷಕತ್ವ , ವಿಚಾರಣೆ ನಡೆಸಿ ತೀರ್ಪು ನೀಡುತ್ತದೆ .

9 ) ಗ್ರಾಹಕ ನ್ಯಾಯಾಲಯಗಳ ಬಗ್ಗೆ ಟಿಪ್ಪಣೆ ಬರೆಯಿರಿ .

ಗ್ರಾಹಕ ನ್ಯಾಯಾಲಯವು ಬಂದು ಅಧೀನ ನ್ಯಾಯಾಲಯವಾಗಿದ್ದು , ಗ್ರಾಹಕರ ಹಿತಾಸಕ್ತಿಗಳ ರಕ್ಷಣೆಯೋ ಇದರ ಪ್ರಮುಖ ಕರ್ತವ್ಯವಾಗಿದೆ . ಇಂದು ಗ್ರಾಹಕನೇ ಸಾರ್ವಭೌಮ ಸರಕು ಸೇವೆಗಳ ಪೂರೈಕೆಯಲ್ಲಿ ಗ್ರಾಹಕ ನನ್ನ ಅನೇಕ ರೀತಿಯಲ್ಲಿ ವಂಚಿಸಲಾಗುತ್ತಿದೆ . ಈ ವಂಚನೆಯ ವಿರುದ್ಧ ಗ್ರಾಹಕ ವೈಯಕ್ತಿಕವಾಗಿ ಹೋರಾಡಲು ಸಾಧ್ಯವಾಗುವುದಿಲ್ಲ . ಆದ್ದರಿಂದ ಸರಕುಸೇವೆಗಳ ಪೂರೈಕೆಯಲ್ಲಿ ಉಂಟಾಗುವ ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸಲು ಭಾರತ ಸರ್ಕಾರವು 1986 ರಲ್ಲಿ ಗ್ರಾಹಕ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿತು . ಇದನ್ನು 1986 ರ ಗ್ರಾಹಕ ರಕ್ಷಣಾ ಕಾಯ್ದೆ ಎನ್ನುವರು . ಈ ಕಾಯ್ದೆಯು ವಂಚನೆಗೊಳಗಾದ ಗ್ರಾಹಕನಿಗೆ ಗ್ರಾಹಕ ನ್ಯಾಯಾಲಯಗಳ ಮೂಲಕ ಪರಿಹಾರವನ್ನು ಪಡೆಯುವ ಅವಕಾಶವನ್ನು ಕಲ್ಪಿಸಿದೆ . ಈ ಕಾಯ್ದೆ ವ್ಯಾಪ್ತಿಯಲ್ಲಿ ಸರಕುಗಳಲ್ಲದೆ ಸೇವೆಗಳು ಕೂಡ ಬರುತ್ತದೆ . ಈ ಕಾಯ್ದೆಯ ಅನ್ವಯ ಕೇಂದ್ರ ಸರ್ಕಾರವು ಅಧಿಕೃತ ಪ್ರಕಟಣೆಯ ಮೂಲಕ ವಿವಿಧ ಕೌನ್ಸಿಲ್‌ಗಳನ್ನು ಸ್ಥಾಪಿಸಬಹುದು . ಅವುಗಳೆಂದರೆ

1. ಕೇಂದ್ರ ಗ್ರಾಹಕ ರಕ್ಷಣಾ ಕೌನ್ಸಿಲ್

2.ರಾಜ್ಯ ಗ್ರಾಹಕ ರಕ್ಷಣಾ ಕೌನ್ಸಿಲ್

3. ಗ್ರಾಹಕ ವಿವಾದಗಳ ನಿವಾರಣ ಏಜೆನ್ಸಿಸ್ .

8 ) ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲು ಕಾರಣವಾಗುವ ಹತ್ತು ಅಂಶಗಳನ್ನು ಬರೆಯಿರಿ .

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲು ಕಾರಣವಾಗುವ ಹತ್ತು ಅಂಶಗಳು ಕೆಳಗಿನಂತಿವೆ .

1 . ಮೂಲಭೂತ ಸೌಕರ್ಯಗಳು

2. ಸ್ಥಳಾಂತರಿಕ ವ್ಯಕ್ತಿಗಳ ಮರುವಸತಿ ವ್ಯವಸ್ಥೆ

3. ಪೋಲಿಸರಿಂದಾಗುವ ದೌರ್ಜನ್ಯಗಳು

4 . ಕಾಲೇಜುಗಳಲ್ಲಿ ಉಂಟಾಗುವ ರ‍್ಯಾಗಿಂಗ್‌, ಪರಿಶಿಷ್ಠ ಜಾತಿ / ಪಂಗಡಗಳ ವಿರುದ್ಧದ ದೌರ್ಜನ್ಯಗಳು ಭ್ರಷ್ಟಾಚಾರದ ಆರೋಪಗಳು

5 . ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿನ ಲೋಪ ದೋಷಗಳು

6. ದೂರದರ್ಶನದಲ್ಲಿ ಪ್ರಸಾರವಾಗುವ ಅಸಭ್ಯ ಕಾಠ್ಯಕ್ರಮಗಳು

7. ಪರಿಸರಕ್ಕೆ ಸಂಬಂಧಿಸಿದ ವಿಷಯಗಳು

8. ದುರ್ಬಲ ವರ್ಗಗಳ ಮೂಲಭೂತ ಹಕ್ಕುಗಳ ಅತಿಕ್ರಮಣ

IV . ಹತ್ತು ಅಂಕದ ಪ್ರಶ್ನೆಗಳು :

1 ) ನ್ಯಾಯಾಂಗದ ಅರ್ಥ ಮತ್ತು ಮಹತ್ವವನ್ನು ವಿವರಿಸಿ .

ಕಾನೂನುಗಳನ್ನು ವಿಶ್ಲೇಷಿಸುವ ಸರ್ಕಾರದ ಮೂರನೆಯ ಅಂಗವೇ ನ್ಯಾಯಾಂಗ ಇದು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಅನ್ವಯಿಸಿ ನಿಷ್ಪಕ್ಷಪಾತವಾದ ತೀರ್ಪುಗಳನ್ನು ನೀಡುವುದರ ಮೂಲಕ ತನ್ನ ಮುಂದೆ ಬರುವ ವಿವಾದಗಳನ್ನು ಇತ್ಯರ್ಥಪಡಿಸುತ್ತದೆ , ಪ್ರತಿಯೊಂದು ರಾಜ್ಯವು ತನ್ನದೇ ಆದ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿರುತ್ತದೆ . ರಾಜ್ಯದ ಎಲ್ಲಾ ಪ್ರಜೆಗಳು ನಿರ್ಭೀತಿಯಿಂದ ಮತ್ತು ಮುಕ್ತವಾಗಿ ಜೀವಿಸಲು ಸಹಾಯ ಮಾಡುತ್ತದೆ . ನ್ಯಾಯಾಂಗವು ಒಬ್ಬ ವ್ಯಕ್ತಿಯ ಹಾಗೂ ಒಂದು ರಾಷ್ಟ್ರದ ಜೀವನದಲ್ಲಿ ಅಕತ್ಯಂತ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ . ಲಾರ್ಡ್ ಬೈಸ್‌ರವರು ನ್ಯಾಯಾಂಗದ ಪ್ರಾಮುಖ್ಯತೆಯನ್ನು ಕುರಿತು ಹೀಗೆಂದಿದ್ದಾರೆ – “ ಸರ್ಕಾರದ ಶ್ರೇಷ್ಠತೆಯನ್ನು ನಿರ್ಧರಿಸಲು ನ್ಯಾಯಾಂಗದ ದಕ್ಷತೆಯ ಪರೀಕ್ಷೆಗಿಂತ ಮಿಗಿಲಾದ ಇನ್ನೊಂದು ಪರೀಕ್ಷೆ ಇಲ್ಲ . ಇದರ ಪ್ರಾಮುಖ್ಯತೆ ಕೆಳಗಿನಂತಿದೆ .

1. ಸಂವಿಧಾನದ ಅರ್ಥ ವಿವರಣೆ : ಸಂವಿಧಾನದ ನಿಯಮಗಳನ್ನು ನ್ಯಾಯಾಂಗವು ಅರ್ಥೈಸುತ್ತದೆ . ನ್ಯಾಯಾಂಗದ ಮೂಲಕ ರಾಜ್ಯದ ಕಾನೂನನ್ನು ನಿರ್ಧರಿಸಲಾಗುತ್ತದೆ . ನ್ಯಾಯಾಂಗವು ಕಾನೂನುಗಳನ್ನು ಸೂಕ್ತವಾಗಿ ಅನ್ವಯಿಸಿಕೊಂಡು ವಿವಾದಗಳನ್ನು ಪರಿಹರಿಸುತ್ತದೆ . ಅಂದರೆ ಸಂವಿಧಾನದ ಯಾವುದೇ ವಿಧಿ / ನಿಯಮಗಳ ಬಗ್ಗೆ ಸಂದೇಹಗಳು ಉದ್ಭವಿಸಿದಲ್ಲಿ ವಿವರಣೆ ನೀಡುವುದು ಇದು ಜವಾಬ್ದಾರಿಯಾಗಿದೆ .

2. ಸಂವಿಧಾನ ರಕ್ಷಣೆ : ಪ್ರಜೆಗಳಿಂದಾಗಲೀ ಅಥವಾ ಸರ್ಕಾರದಿಂದಾಗಲಿ ಸಂವಿಧಾನದ ಮೂಲತತ್ವಗಳಿಗೆ ಚ್ಯುತಿಬಾರದಂತೆ ಸಂವಿಧಾನವನ್ನು ಸಂರಕ್ಷಿಸುವ ಅಧಿಕಾರ ನ್ಯಾಯಾಂಗದ್ದಾಗಿದೆ . ಶಾಸಕಾಂಗ ರೂಪಿಸುವ ಕಾನೂನುಗಳು ಮತ್ತು ಕಾರಾಂಗದ ಆಡಳಿತ ಸಂವಿಧಾನದ ಚೌಕಟ್ಟಿನಲ್ಲಿ ನಡೆಯುತ್ತದೆಯೇ ಎಂಬುದನ್ನು ನೋಡುವುದು ನ್ಯಾಯಾಂಗದ ಕಾರವಾಗಿದೆ . ಒಂದು ವೇಳೆ ಸಂವಿಧಾನಕ್ಕೆ ವಿರುದ್ಧವಾಗಿದ್ದರೆ , ‘ ಸಂವಿಧಾನಬಾಹಿರ ” ಎಂದು ಘೋಷಿಸಿ ಅವುಗಳನ್ನು ರದ್ದುಪಡಿಸಿ ಸಂವಿಧಾನವನ್ನು ರಕ್ಷಿಸುವ ಅಧಿಕಾರ ನ್ಯಾಯಾಂಗಕ್ಕಿದೆ .

3. ಪ್ರಜೆಗಳ ಹಕ್ಕು ಮತ್ತು ಸ್ವಾತಂತ್ರ್ಯದ ರಕ್ಷಣೆ : ನ್ಯಾಯಾಂಗವು ಸರ್ಕಾರದ ಹಾಗೂ ವ್ಯಕ್ತಿಗಳ ಆಕ್ರಮಣದಿಂದ ಪ್ರಜೆಗಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ . ಹಲವಾರು ರಿಟ್ ‘ ಆಜ್ಞೆಗಳನ್ನು ಹೊರಡಿಸುವುದರ ಮೂಲಕ ಹಕ್ಕು ಮತ್ತು ಸ್ವಾತಂತ್ರ್ಯಗಳಿಗೆ ರಕ್ಷಣೆ ನೀಡುತ್ತದೆ .

4. ಥಂಯುಕ್ತ ವ್ಯವಸ್ಥೆಯ ರಕ್ಷಕ : ನ್ಯಾಯಾಂಗವನ್ನು ಸಂಯುಕ್ತ ವ್ಯವಸ್ಥೆಯ ರಕ್ಷಕ ಎನ್ನುವರು . ಸಂಯುಕ್ತ ವ್ಯವಸ್ಥೆಯಲ್ಲಿ ದ್ವಿಸರ್ಕಾರ ವ್ಯವಸ್ಥೆ ಇದ್ದು , ಇವುಗಳ ನಡುವೆ ಸಂವಿಧಾನಾತ್ಮಕವಾಗಿ ಅಧಿಕಾರ ಹಂಚಿಕೆಯಾಗಿರುತ್ತದೆ . ಆದರೂ ಕೆಲವೊಮ್ಮೆ ಅಧಿಕಾರಕ್ಕೆ ಸಂಬಂಧಿಸಿದಂತೆ ಘರ್ಷಣೆ ಮತ್ತು ವಿವಾದಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ . ಅಂತಹ ಸಂದರ್ಭದಲ್ಲಿ ನ್ಯಾಯಾಂಗವು ಕೇಂದ್ರದ ಸರ್ವಾಧಿಕಾರಿ ಧೋರಣೆಯನ್ನು ತಡೆಗಟ್ಟಿ ಉದ್ಭವಿಸುವ ಬಿಕ್ಕಟ್ಟನ್ನು ಪರಿಹರಿಸಿ ಸಂಯುಕ್ತ ವ್ಯವಸ್ಥೆಯನ್ನು ರಕ್ಷಿಸುತ್ತದೆ .

5. ಪ್ರಜಾಪ್ರಭುತ್ವ ಸಂರಕ್ಷಕ : ನ್ಯಾಯಾಂಗವು ಪ್ರಜೆಗಳ ಹಕ್ಕು ಮತ್ತು ಸ್ವಾತಂತ್ರ್ಯಗಳಿಗೆ ಸರಿಯಾದ ರಕ್ಷಣೆಯನ್ನು ನೀಡುವುದರ ಮೂಲಕ ಪ್ರಜಾಪ್ರಭುತ್ವದ ಯಶಸ್ವಿ ಕಾರಚರಣೆಗೆ ಸಹಾಯ ಮಾಡುತ್ತದೆ .

6. ಸರ್ಕಾರದ ನಿರಂಕುಶಾಧಿಕಾರವನ್ನು ತಡೆಯುತ್ತದೆ : ನ್ಯಾಯಾಂಗವು ಸರ್ಕಾರವನ್ನು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರದಂತೆ ನಿರ್ಬಂಧಿಸುವುದರ ಮೂಲಕ ಸರ್ಕಾರದ ನಿರಂಕುಶಾಧಿಕಾರವನ್ನು ತಡೆಗಟ್ಟುತ್ತದೆ . ಹೀಗೆ ನ್ಯಾಯಾಂಗವು ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಆಧುನಿಕ ಕಾಲದಲ್ಲಿ ಪಡೆದುಕೊಂಡಿದೆ . ಈ ಕಾರಣದಿಂದಲೇ ಗೌರರ್‌ರವರು ಹೀಗೆಂದಿದ್ದಾರೆ . “ ಶಾಸಕಾಂಗವಿಲ್ಲದ ಸಮಾಜವನ್ನು ಊಹಿಸಿಕೊಳ್ಳಬಹುದು ಆದರೆ ನ್ಯಾಯಾಂಗವಿಲ್ಲದ ನಾಗರೀಕ ರಾಜ್ಯವನ್ನು ಊಹಿಸಲು ಸಾಧ್ಯವಿಲ್ಲ ” ಎಂದು . ನ್ಯಾಯಾಂಗವು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ಕಾಠ್ಯ ನಿರ್ವಹಿಸಬೇಕಾದರೆ , ಅದು ಸ್ವತಂತ್ರ್ಯ ಮತ್ತು ನಿಷ್ಪಕ್ಷಪಾತವಾದ ನ್ಯಾಯಾಂಗವಾಗಿರಬೇಕು .

2 ) ಭಾರತದ ಸುಪ್ರೀಂಕೋರ್ಟ್‌ನ ರಚನೆ ಮತ್ತು ಅಧಿಕಾರಗಳನ್ನು ವಿವರಿಸಿ .

ಭಾರತದಲ್ಲಿ ಅತ್ಯುನ್ನತ ಸ್ಥಾನದಲ್ಲಿ ಸರ್ವೋಚ್ಛ ನ್ಯಾಯಾಲವಿದ್ದು , ಇದು ದೆಹಲಿಯಲ್ಲಿದೆ . ಇಲ್ಲಿ ಒಬ್ಬ ಮುಖ್ಯ ನ್ಯಾಯಾಧೀಶ ಹಾಗೂ ಇತರೆ ನ್ಯಾಯಾಧೀಶರಿರುತ್ತಾರೆ . ಪ್ರಸ್ತುತ 30 ನ್ಯಾಯಾಧೀಶರು ಹಾಗೂ ಒಬ್ಬ ಮುಖ್ಯ ನ್ಯಾಯಾಧೀಶರಿದ್ದಾರೆ . ಈ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಅಧಿಕಾರ ಸಂಸತ್ತಿಗಿದೆ . ನ್ಯಾಯಾಧೀಶರ ಸಂಖ್ಯೆಯು ನ್ಯಾಯಾಲಯದ ಮುಂದೆ ತಿರುವ ಮೊಕದ್ದಮೆಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ . ರಾಷ್ಟ್ರಾಧ್ಯಕ್ಷರು ತಾತ್ಕಾಲಿಕವಾಗಿ ಹೆಚ್ಚುವರಿ ನ್ಯಾಯಾಧೀಶರನ್ನು ಹಾಗೂ ಹಂಗಾಮಿ ನ್ಯಾಯಾಧೀಶರನ್ನು ನೇಮಿಸಬಹುದು . ಮುಖ್ಯ ಮತ್ತು ಇತರ ನ್ಯಾಯಾಧೀಶರನ್ನು ರಾಷ್ಟ್ರಾಧ್ಯಕ್ಷರು ನೇಮಿಸುತ್ತಾರೆ . ಮುಖ್ಯ ನ್ಯಾಯಾಧೀಶರನ್ನು ನೇಮಕ ಮಾಡುವಾಗ ಸಚಿವ ಸಂಪುಟದ ಸಲಹೆ ಮೇರೆಗೆ ಮತ್ತು ಇತರ ನ್ಯಾಯಾಧೀಶರನ್ನು ನೇಮಕ ಮಾಡುವಾಗ ಸರ್ವೋಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಸಲಹೆಯ ಮೇರೆಗೆ ನೇಮಿಸಲಾಗುವುದು .

ಸುಪ್ರೀಂ ಕೋರ್ಟ್‌ನ ಅಧಿಕಾರಗಳು ಕೆಳಗಿನಂತಿವೆ .

1. ಮೂಲ ಅಧಿಕಾರ ವ್ಯಾಪ್ತಿ:

ಕೆಳಕಂಡ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್‌ ಮೂಲ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ .

a ) ಭಾರತ ಸರ್ಕಾರ ಮತ್ತು ಒಂದು / ಹೆಚ್ಚು ರಾಜ್ಯಗಳ ನಡುವಿನ ವಿವಾದ

b ) ರಾಜ್ಯ – ರಾಜ್ಯಗಳ ನಡುವಣ ವಿವಾದ

c ) ಸಂವಿಧಾನವನ್ನು ಅರ್ಥೈಸುವುದು

d ) ಸಂವಿಧಾನದ 32 ನೇ ವಿಧಿ ಅನ್ವಯ ಭಾರತದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರಿಟ್ ಆಜ್ಞೆಗಳನ್ನು ಹೊರಡಿಸುವ ಅಧಿಕಾರ

2. ಮನವಿ ಅಧಿಕಾರ :

ಸುಪ್ರೀಂ ಕೋರ್ಟ್‌ ಮನವಿಯ ಅತ್ಯುನ್ನತ ಮತ್ತು ಅಂತಿಮ ನ್ಯಾಯಾಲಯವಾಗಿದೆ ಮನವಿಗಳು ಕೆಳಕಂಡಂತಿವೆ .

a ) ಸಂವಿಧಾನಾತ್ಮಕ ವಿವಾದಗಳು

b ) ಸಿವಿಲ್‌ ವಿವಾದಗಳು

c ) ಕ್ರಿಮಿನಲ್ ಮೊಕದ್ದಮೆಗಳು

d ) ಸರ್ವೋಚ್ಛ ನ್ಯಾಯಾಲಯದ ವಿಶೇಷ ಅನುಮತಿ

e ) ಶಾಸಕಾಂಗ ರಚಿಸಿದ ಶಾಸನಗಳು ಸಂವಿಧಾನಕ್ಕೆ ವಿರುದ್ಧವಾಗದ್ದಾಗ ಅಂತಹ ಶಾಸನಗಳನ್ನು ನ್ಯಾಯಾಂಗವು ಅಸಿಂಧುಗೊಳಿಸುತ್ತದೆ .

f ) ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಚುನಾವಣೆಗೆ ಸಂಬಂಧಿಸಿದ ವಿವಾದಗಳು .

3. ಸಲಹಾತ್ಮಕ ಅಧಿಕಾರ ವ್ಯಾಪ್ತಿ :

ಸಾರ್ವಜನಿಕ ಮಹತ್ವವುಳ್ಳ ಕಾನೂನಿನ ವಿಷಯಗಳು , ಮತ್ತು ಸಂವಿಧಾನಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷರ ಕೋರಿಕೆಯ ಮೇರೆಗೆ ಸರ್ವೋಚ್ಛ ನ್ಯಾಯಾಲಯವು ತನ್ನ ಸಲಹೆ ಮತ್ತು ಅಭಿಪ್ರಾಯಗಳನ್ನು ನೀಡುತ್ತವೆ .

4. ಸುನರ್‌ ಪರಿಶೀಲನಾ ವ್ಯಾಪ್ತಿ :

ಸರ್ವೋಚ್ಛ ನ್ಯಾಯಾಲಯವು ತನ್ನ ಆದೇಶ ಮತ್ತು ತೀರ್ಪುಗಳಲ್ಲಿ ಇರಬಹುದಾದ ತಪ್ಪು ಮತ್ತು ದೋಷಗಳನ್ನು ನಿವಾರಿಸುವ ಸಲುವಾಗಿ ತನ್ನ ತೀರ್ಪ ಮತ್ತು ಆದೇಶಗಳನ್ನು ಪುನರ್ ಪರಿಶೀಲಿಸುವ ಅಧಿಕಾರ ಹೊಂದಿದೆ .

5. ರಿಟ್ ಗಳನ್ನು ನೀಡುವ ಅಧಿಕಾರ ವ್ಯಾಪ್ತಿ :

ಸಂವಿಧಾನದ 32 ನೇ ವಿಧಿ ಅನ್ವಯ ಸರ್ವೋಚ್ಛ ನ್ಯಾಯಾಲಯವು ಈ ಕೆಳಗಿನ ರಿಟ್‌ಗಳನ್ನು ಹೊರಡಿಸುವ ಮೂಲಕ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ .

a ) ಹೆಬಿಯಸ್ ಕಾರ್ಪಸ್

b ) ಮ್ಯಾಂಡ್ ಮಸ್

c ) ದ್ರೋಹಿಬಿಷನ್

d ) ಇಂಜೆಕ್ಷನ್

e ) ಪರ್ಷಿಯಾರರಿ

f ) ಕೋವಾರಂಟೋ

6. ಸಂಯುಕ್ತ ವ್ಯವಸ್ಥೆ ರಕ್ಷಣೆ :

ಸಂಯುಕ್ತ ವ್ಯವಸ್ಥೆಯಲ್ಲಿ ಉದ್ಭವಿಸುವ ಘರ್ಷಣೆಗಳನ್ನು ಬಗೆಹರಿಸುವ ಮೂಲಕ ಸಂಯುಕ್ತ ವ್ಯವಸ್ಥೆಯನ್ನು ರಕ್ಷಿಸುವುದು .

7. ಸಂವಿಧಾನದ ರಕ್ಷಣೆ :

ಶಾಸಕಾಂಗ ಮತ್ತು ಕಾರ್ಯಾಂಗಗಳ ಉಲ್ಲಂಘನೆಯಿಂದ ಸಂವಿಧಾನವನ್ನು ರಕ್ಷಿಸುವುದು .

8. ದಾಖಲೆಗಳ ನ್ಯಾಯಾಲಯ :

ತನ್ನ ತೀರ್ಪು ಮತ್ತು ಕಾವ್ಯ ಕಲಾಪಗಳನ್ನು ದಾಖಲೆಯ ರೂಪದಲ್ಲಿ ಸರ್ವೋಚ್ಛ ನ್ಯಾಯಾಲಯ ರಕ್ಷಿಸುತ್ತದೆ .

9. ನ್ಯಾಯಿಕ ನಿಮರ್ಶೆ :

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ಮತ್ತು ಕಾವ್ಯಗಳ ಸಂವಿಧಾನ ಬದ್ಧತೆಯನ್ನು ವಿಮರ್ಶಿಸುವ ಅಧಿಕಾರ.

10 , ನ್ಯಾಯಾಂಗ ಉಲ್ಲಂಘನೆಗೆ ಶಿಕ್ಷೆ ವಿಧಿಸುವ ಅಧಿಕಾರ :

ಸರ್ವೋಚ್ಛ ನ್ಯಾಯಾಲಯದ ನಿರ್ಣಯಗಳನ್ನು ಮತ್ತು ನ್ಯಾಯಾಧೀಶರ ವರ್ತನೆಯನ್ನು ಟೀಕಿಸಿದರೆ ಹಾಗೂ ದಿಕ್ಕಿರಿಸಿದರೆ ಅದು ನ್ಯಾಯಾಂಗ ಉಲ್ಲಂಘನೆಯಾಗುತ್ತದೆ . ಇದಕ್ಕೆ ಈ ನ್ಯಾಯಾಲಯ ಶಿಕ್ಷೆ ವಿಧಿಸುತ್ತದೆ .

11). ನಿಯಮಗಳನ್ನು ರಚಿಸುವ ಅಧಿಕಾರ :

ತನ್ನ ಕಾವ್ಯ ಕಲಾಪಗಳು ಹಾಗೂ ಆಡಳಿತಕ್ಕೆ ಸಂಬಂಧಿಸಿದ ನಿಯಮಗಳನ್ನು ರಚಿಸಿಕೊಳ್ಳುವುದು .

12). ನೇಮಕಾತಿ ಮತ್ತು ಮೇಲ್ವಿಚಾರಣೆಯ ಅಧಿಕಾರ :

– ತನ್ನ ಆಡಳಿತ ಸಿಬ್ಬಂದಿ ನೇಮಕ ಮತ್ತು ಇವರ ಮೇಲ್ವಿಚಾರಣೆಯ ಅಧಿಕಾರ

13) , ಶಿಫಾರಸ್ಸು ಮಾಡುವ ಅಧಿಕಾರ :

ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ವಜಾಗೊಳಿಸುವಂತೆ ರಾಷ್ಟ್ರಾಧ್ಯಕ್ಷರಿಗೆ ಶಿಫಾರಸ್ಸು ಮಾಡುವುದು.

14) ಹಂಗಾಮ ರಾಷ್ಟ್ರಾಧ್ಯಕ್ಷರಾಗಿ ಕಾರ‍್ಯ ನಿರ್ವಹಿಸುವುದು .

3 ) ಹೈಕೋರ್ಟ್‌ನ ರಚನೆ ಮತ್ತು ಅಧಿಕಾರಗಳನ್ನು ವಿವರಿಸಿ .

ಹೈಕೋರ್ಟ್ ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನವನ್ನು ಹೊಂದಿದೆ . ಸಂವಿಧಾನವು ಹೈಕೋರ್ಟ್‌ನ ನ್ಯಾಯಾಧೀಶರ ಸಂಖ್ಯೆಯನ್ನು ನಿರ್ದಿಷ್ಟ ಪಡಿಸಿಲ್ಲವಾದ್ದರಿಂದ ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ . ಇದು ಒಬ್ಬ ಮುಖ್ಯ ನ್ಯಾಯಾಧೀಶ ಮತ್ತು ಇತರ ನ್ಯಾಯಾಧೀಶರನ್ನೊಳಗೊಂಡಿದೆ . ರಾಷ್ಟ್ರಾಧ್ಯಕ್ಷರು ಮೊಕದ್ದಮೆಗಳ ಸಂಖ್ಯೆ ಹೆಚ್ಚಿದರೆ , ತಾತ್ಕಾಲಿಕ ಹೆಚ್ಚುವರಿ ನ್ಯಾಯಾಧೀಶರನ್ನು ಹಾಗೂ ಹಂಗಾಮಿ ನ್ಯಾಯಾಧೀಶರನ್ನು ನೇಮಿಸುತ್ತಾರೆ . ರಾಷ್ಟ್ರಾಧ್ಯಕ್ಷರು ಕೇಂದ್ರ ಸಚಿವ ಸಂಪುಟದ ಸಲಹೆ ಮೇರೆಗೆ ಸಂಬಂಧಪಟ್ಟ ರಾಜ್ಯಗಳ ರಾಜ್ಯಪಾಲರೊಂದಿಗೆ ಸಮಾಲೋಚನೆ ನಡೆಸಿ ಮುಖ್ಯ ನ್ಯಾಯಾಧೀಶರನ್ನು ನೇಮಿಸುತ್ತಾರೆ . ಇತರ ನ್ಯಾಯಾಧೀಶರನ್ನು ಇದರೊಂದಿಗೆ ಸಂಬಂಧಪಟ್ಟ ರಾಜ್ಯಗಳ ಮುಖ್ಯ ನ್ಯಾಯ ಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಿ ನೇಮಿಸುತ್ತಾರೆ .

1. ಮೂಲ ಅಧಿಕಾರಗಳು :

ಸಂವಿಧಾನದ 225 ನೇ ವಿಧಿಯು ಈ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದೆ . ಕೊಲ್ಕತ್ತಾ ,ರಾಜ್ಯದ ಮುಂಬಯಿ , ಮತ್ತು ಚೆನ್ನೈನ ಉಚ್ಛ ನ್ಯಾಯಾಲಯಗಳು ಅತ್ಯಂತ ಹಳೆಯ ನ್ಯಾಯಾಲಗಳಾಗಿದ್ದು , ಈ ನ್ಯಾಯಾಲಗಳಿಗೆ ಮೂಲ ನ್ಯಾಯಾಧಿಕಾರವನ್ನು ನೀಡಲಾಗಿದೆ . ಈ ಅಧಿಕಾರ ವ್ಯಾಪ್ತಿಯಲ್ಲಿ ನೌಕಾಯಾನ , ವೈವಾಹಿಕ ಸಂಬಂಧಗಳು , ಮರಣ ಪತ್ರ ಹಾಗೂ ನ್ಯಾಯಾಂಗ ನಿಂದನೆ ಈ ವಿಷಯಗಳಿಗೆ ಸಂಬಂಧಿಸಿದ ಮೊಕದ್ದಮೆಗಳು ಬರುತ್ತವೆ .

2. ಮನನಿಯ ಅಧಿಕಾರ : ಹೈಕೋರ್ಟ್ ರಾಜ್ಯದ ಮನವಿಯ ಅಂತಿಮ ನ್ಯಾಯಾಲಯವಾಗಿದೆ . ಅಧೀನ ಸಿವಿಲ್ ಹಾಗೂ ಕ್ರಿಮಿನಲ್ ನ್ಯಾಯಾಲಯಗಳು ನೀಡುವ ತೀರ್ಪನ್ನು ಪ್ರಶ್ನಿಸಿ ಅವುಗಳನ್ನು ಪರಿಶೀಲಿಸುವಂತೆ ಉಚ್ಛ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದು .

3. ಮೇಲ್ವಿಚಾರಣಾಧಿಕಾರ : ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧೀನ ನ್ಯಾಯಾಲಯಗಳ ಕಾರ ನಿರ್ವಹಣೆಯ ಮೇಲ್ವಿಚಾರಣೆಯನ್ನು ಮಾಡುವ ಅಧಿಕಾರ

4. ರಿಟ್‌ಗಳನ್ನು ನೀಡುವ ಅಧಿಕಾರ : ಸಂವಿಧಾನದ 226 ನೇ ವಿಧಿ ಅನ್ವಯ ಈ ಕೆಳಗಿನ ರಿಟ್‌ಗಳನ್ನು ಹೊರಡಿಸುವ ಮೂಲಕ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತವೆ .

1 ) ಹೇಬಿಯಸ್ ಕಾರ್ಪಸ್

2 ) ಮ್ಯಾಂಡಮಸ್

3 ) ಪ್ರೊಹಿಬಿಷೆನ್ ‌

4 ) ಪರ್ಷಿಯೋರರಿ

5 ) ಕೋವಾರಂಟೋ

5. ಸಂವಿಧಾನ ರಕ್ಷಣೆ : ಶಾಸಕಾಂಗ ಮತ್ತು ಕಾರಾಂಗಗಳ ಉಲ್ಲಂಘನೆಯಿಂದ ಸಂವಿಧಾನವನ್ನು ರಕ್ಷಿಸುವುದು .

6. ದಾಖಲೆಗಳ ನ್ಯಾಯಾಲಯ : ತನ್ನ ಕಾವ್ಯಕಲಾಪಗಳು ಹಾಗೂ ತೀರ್ಪುಗಳನ್ನು ದಾಖಲೆ ರೂಪದಲ್ಲಿ ಸಂಗ್ರಹಿಸುತ್ತದೆ .

7. ನ್ಯಾಯಿಕ ವಿಮರ್ಶೆ : ಗಾದ ರಾಜ್ಯ ಸರ್ಕಾರದ ಅಧಿಕಾರ ಮತ್ತು ಕಾರಗಳ ಸಂವಿಧಾನ ಬದ್ಧತೆಯನ್ನು ವಿಮರ್ಶಿಸುವ ಅಧಿಕಾರ .

8. ನ್ಯಾಯಾಂಗ ಉಲ್ಲಂಘನೆಗೆ ಶಿಕ್ಷೆ ವಿಧಿಸುವ ಅಧಿಕಾರ : ನ್ಯಾಯಾಲಯದ ನಿರ್ಣಯಗಳನ್ನು ಮತ್ತು ನ್ಯಾಯಾಧೀಶರ ವರ್ತನೆಯನ್ನು ಟೀಕಿಸಿದರೆ ಹಾಗೂ ದಿಕ್ಕರಿಸಿದರೆ ಅದು ನ್ಯಾಯಾಂಗ ಉಲ್ಲಂಘನೆಯಾಗುತ್ತದೆ ಇದ ನ್ಯಾಯಾಲಯ ಶಿಕ್ಷೆ ವಿಧಿಸುತ್ತವೆ .

9. ನಿಯಂತ್ರಣಾಧಿಕಾರ : ಅಧೀನ ನ್ಯಾಯಾಲಯಗಳನ್ನು ನಿಯಂತ್ರಿಸುವ ಅಧಿಕಾರ

10. ವಿಚಾರಣಾಧಿಕಾರ : ರಾಜ್ಯ ಸರ್ಕಾರವು ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಉಚ್ಚನ್ಯಾಯಾಲಯದ ಹಾಲಿ / ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗವನ್ನು ನೇಮಿಸುತ್ತದೆ .

4 ) ಅಧೀನ ನ್ಯಾಯಾಲಯಗಳ ಸಂಘಟನೆ ಮತ್ತು ಕಾರ‍್ಯ ನಿರ್ವಹಣೆಯನ್ನು ವಿವರಿಸಿ

ಸಂವಿಧಾನದ 233 ರಿಂದ 237 ರವರೆಗಿನ ವಿಧಿಗಳು ಅಧೀನ ನ್ಯಾಯಾಲಯಗಳ ಕುರಿತವುಗಳಾಗಿವೆ . ಅಂತಹ ಅಧೀನ ನ್ಯಾಯಾಲಯಗಳ ಸಂಘಟನೆ ಮತ್ತು ಕಾರ ನಿರ್ವಹಣೆ ಕೆಳಗಿನಂತಿದೆ .

1. ಸೆಫೆನ್ಸ್ ನ್ಯಾಯಾಲಯಗಳು : ಪ್ರತಿ ಜಿಲ್ಲೆಯಲ್ಲೂ ಒಂದು ಸೆಷನ್ಸ್ ನ್ಯಾಯಾಲವಿರುತ್ತದೆ . ಇದು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ವಿಚಾರಣೆ ನಡೆಸುತ್ತದೆ .

*ಜಿಲ್ಲಾ ಸಿವಿಲ್ ನ್ಯಾಯಾಲಯ : ಸಿವಿಲ್ ಮೊಕದ್ದಮೆಗಳ ವಿಚಾರಣೆಗಾಗಿ ಪ್ರತಿಯೊಂದು ಜಿಲ್ಲೆಯಲ್ಲಿಯೂ ಈ ನ್ಯಾಯಾಲಯವಿರುತ್ತದೆ . ಇವರಲ್ಲಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಮುನ್ಸಿಫ್ ನ್ಯಾಯಾಲಯಗಳು ಬರುತ್ತವೆ .

*ಕ್ರಿಮಿನಲ್ ನ್ಯಾಯಾಲಯಗಳು : ಇದು ಕೊಲೆ , ದರೋಡೆ ಮುಂತಾದ ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆಯನ್ನು ನಡೆಸುತ್ತದೆ .

2. ಕಂದಾಯ ನ್ಯಾಯಾಲಯಗಳು : ಪ್ರತಿಯೊಂದು ಜಿಲ್ಲೆಯು ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಲಯಗಳೊಂದಿಗೆ ಕಂದಾಯ ನ್ಯಾಯಾಲಯಗಳನ್ನು ಹೊಂದಿರುತ್ತದೆ . ಇದು ಕಂದಾಯಕ್ಕೆ ಸಂಬಂಧಿಸಿದ ಮೊಕದ್ದಮೆಗಳನ್ನು ವಿಚಾರಣೆ ನಡೆಸುತ್ತದೆ . ಇದರಲ್ಲಿ ಕೆಳಗಿನ ನ್ಯಾಯಾಲಯಗಳನ್ನು ಕಾಣುತ್ತವೆ .

1 ) ತಹಶೀಲ್ದಾರ್‌ ನ್ಯಾಯಾಲಯ

2 ) ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ

3 ) ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ

4 ) ಆಯುಕ್ತರ ನ್ಯಾಯಾಲಯ

5 ) ಕಂದಾಯ ಮಂಡಳಿ

3. ಲೋಕ್ ಅದಾಲತ್ : ಪ್ರಕರಣವೊಂದರ ಉಭಯ ಪಕ್ಷಗಳದವರಲ್ಲಿ ರಾಜೀ ಸಂಧಾನ ಏರ್ಪಡಿಸುವುದರ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ರಚಿತವಾದ ನ್ಯಾಯಾಲಯ .

4. ಗ್ರಾಹಕರ ನ್ಯಾಯಾಲಯ – ಗ್ರಾಹಕರ ಹಿತರಕ್ಷಣೆಗಾಗಿ ಇರುವ ನ್ಯಾಯಾಲಯ , ಕಡಿಮೆ ತೂಕ , ಕಳಪೆ ಗುಣಮಟ್ಟ ಮತ್ತು ಕಲಬೆರಿಕೆಯಿಂದ ಕವಾಡಿದ ಸರಕುಗಳ ಪೂರೈಕೆಗಳಂತೆ ವಂಚನೆಗೊಳಗಾದ ಗ್ರಾಹಕನಿಗೆ ಈ ನ್ಯಾಯಾಲಯ ಪರಿಹಾರ ಪಡೆಯುವ ಅವಕಾಶವನ್ನು ಕಲ್ಪಿಸುತ್ತಾರೆ .

5. ಕೌಟುಂಜಕ ನ್ಯಾಯಾಲಯ : ವಿವಾಹ , ವಿವಾಹ ವಿಚ್ಛೇದನ , ಮಕ್ಕಳ ವಾರಸುದಾರಿಕೆ ಮುಂತಾದ ಕೌಟುಂಬಿಕ ವಿಷಯಗಳ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡುವ ನ್ಯಾಯಾಲಗಳು . ಕೌಟುಂಬಿಕ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ವಿಚಾರಣೆ ನಡೆಸಿ ಶೀಘ್ರವಾಗಿ ಬಗೆಹರಿಸುವುದಕ್ಕಾಗಿ ರಾಜ್ಯ ಸರ್ಕಾರವು ಉಚ್ಛನ್ಯಾಯಾಲಯದ ಸಲಹೆ ಮೇರೆಗೆ ರಚಿಸಲಾಗಿದೆ .

FAQ

1 ) ನ್ಯಾಯಾಂಗ ಎಂದರೇನು ?

ಕಾನೂನುಗಳನ್ನು ವಿಶ್ಲೇಷಿಸುವ ಸರ್ಕಾರದ ಮೂರನೆಯ ಅಂಗವೇ ನ್ಯಾಯಾಂಗ

2 ) ಸಂವಿಧಾನದ ರಕ್ಷಕ ಯಾರು ?

ನ್ಯಾಯಾಂಗ ಸಂವಿಧಾನದ ರಕ್ಷಕ ,

3 ) PIL ಅನ್ನು ವಿಸ್ತರಿಸಿ ,

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ .

ಇತರೆ ವಿಷಯಗಳು :

First PUC All Textbooks Pdf

First Puc Political Science Notes

First PUC History Notes

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

All Notes App

Leave a Reply

Your email address will not be published. Required fields are marked *

rtgh