rtgh

ಪ್ರಥಮ ಪಿ.ಯು.ಸಿ ಅಧ್ಯಾಯ 9.3 ಜರ್ಮನಿ ಏಕೀಕರಣ ಇತಿಹಾಸ ನೋಟ್ಸ್‌ | 1st Puc Jarmany Ekikarana History Notes

ಪ್ರಥಮ ಪಿ.ಯು.ಸಿ ಅಧ್ಯಾಯ 9.3 ಜರ್ಮನಿ ಏಕೀಕರಣ ಇತಿಹಾಸ ನೋಟ್ಸ್‌, 1st Puc Jarmany Ekikarana History Notes Question Answer Pdf in Kannada Medium 2023 Kseeb Solution For Class 11 Chapter 9 Notes jarmany ekikarana 1st puc Unification of Germany Notes napoleon mattu rashtiyateya udaya notes in kannada pdf

 

ಅಧ್ಯಾಯ 9.3 ಜರ್ಮನಿ ಏಕೀಕರಣ

1st Puc Jarmany Ekikarana History Notes
ಜರ್ಮನಿ ಏಕೀಕರಣ

1. ಕೆಳಗಿನವುಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ ,

1 . ಆಸ್ಟ್ರೋ – ಪ್ರಷ್ಯನ್ ಯುದ್ಧವನ್ನು ಯಾವ ಒಪ್ಪಂದವು ಕೊನೆಗೊಳಿಸಿತು ?

1866 ರಲ್ಲಿ ಜರುಗಿದ ಪ್ರಾಗ್ ಒಪ್ಪಂದದೊಂದಿಗೆ ಕೊನೆಗೊಂಡಿತು .

2. ಫ್ರಾಂಕೋ – ಪ್ರಷ್ಯನ್ ಯುದ್ಧವನ್ನು ಯಾವ ಒಪ್ಪಂದವು ಕೊನೆಗೊಳಿಸಿತು ?

ಫ್ರಾಂಕ್ ಫರ್ಟ್ ಒಪ್ಪಂದವು ಕೊನೆಗೊಳಿಸಿತು .

3. ಬಿಸ್ಮಾರ್ಕ್‌ನ ಪ್ರಸಿದ್ಧ ನೀತಿ ಯಾವುದು

ಉಕ್ಕು ಮತ್ತು ರಕ್ತ ‘ ನೀತಿ

4 . ಪ್ರಷ್ಯಾ ಯಾವ ವರ್ಷದಲ್ಲಿ ಡೆನ್ಮಾರ್ಕಿನ ಮೇಲೆ ದಾಳಿ ಮಾಡಿತು ?

1864 ರಲ್ಲಿ .

5 . ಹಾಲ್‌ಸ್ಟಿನ್ ಹಾಗೂ ಪಲ್ಸ್‌ವಿಗ್‌ಗಳನ್ನು ವಿಲೀನಗೊಳಿಸಲು ಘೋಷಣೆಯನ್ನು ಡೆನ್ಮಾರ್ಕಿನ ಯಾವ ದೊರೆ ಮಾಡಿದನು ?

ಒಂಬತ್ತನೆಯ ಕ್ರಿಶ್ಚಿಯನ್ ,

ಜರ್ಮನಿ ಏಕೀಕರಣ ಇತಿಹಾಸ ನೋಟ್ಸ್‌

II . ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ :

1 ) ಝಾಲ್ವೇರಿಯನ್ ಎಂದರೇನು ?

“ ಝಾಲ್ವೇರಿಯನ್ ” ಎಂಬುದು ಸುಂಕದ ಒಕ್ಕೂಟ . ಇದು ಜರ್ಮನನ್ನು ಆರ್ಥಿಕ ಏಕೀಕರಣಕ್ಕಾಗಿ 1834 ರಲ್ಲಿ ಅಸ್ತಿತ್ವಕ್ಕೆ ಬಂದಿತು .

2 ) ಫ್ರಾಂಕ್ ಪರ್ಟ್ ಸಂಸತ್ತಿನ ಪ್ರಸ್ತಾಪವನ್ನು ನಾಲ್ಕನೆಯ ಫೆಡ್ರಿಕ್‌ ಎಲಿಯಂ ಏಕೆ ತಿರಸ್ಕರಿಸಿದನು ?

ಪ್ರಷ್ಯಾದ ಆರಸ ನಾಲ್ಕನೆಯ ಫೆಡ್ರಿಕ್‌ ವಿಲಿಯಂಗೆ ಏಕೀಕೃತ ಜರ್ಮನಿಯ ನಾಯಕತ್ವವನ್ನು ‘ ಕೈಸರ್ ‘ ಎಂಬ ಬಿರುದಿನೊಂದಿಗೆ ನೀಡುವ ನಿರ್ಣಯ ಕೈಗೊಂಡಿತು . ಜರ್ಮನ್ ರಾಜ್ಯಗಳ ಅರಸರ ಬದಲಾಗಿ ಅವುಗಳ ಪ್ರತಿನಿಧಿಗಳು ನೀಡಿದ ಈ ನಾಯಕತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಹೇಳಿಕೆಯೊಂದಿಗೆ ನಾಲ್ಕನೇ ಫೆಡಿಕ ವಿಲಿಯಂ ಈ ಪ್ರಸ್ತಾಪವನ್ನು ತಿರಸ್ಕರಿಸಿದನು . ಅಲ್ಲದೆ ಇಂತಹ ಪ್ರಸ್ತಾಪವನ್ನು ಒಪ್ಪುವುದರಿಂದ ರಸ್ತ್ರೀಯ ಮತ್ತು ರಷ್ಯಾದ ಸೈನ್ಯಗಳ ಹಸ್ತಕ್ಷೇಪದ ಭಯವೂ ಸಹ ಅವನಿಗಿತ್ತು .

3 ) ಬಿಸ್ಮಾರ್ಕ್ ನಿಗೆ ಸೈನ್ಯದ ಪುನರ್ ಸಂಘಟನೆಯಲ್ಲಿ ಸಹಾಯ ಮಾಡಿದವರು ಯಾರು ?

ಬಿಸ್ಮಾರ್ಕ್ ನಿಗೆ ಸೈನ್ಯದ ಪುನರ್ ಸಂಘಟನೆಯಲ್ಲಿ ಸಹಾಯ ಮಾಡಿದವರು ಜನರಿಗೆ ರೂಪ ಮತ್ತು ಜನರಲ್ ಮಾರು ಕೆಳಗಿನವುಗಳಿಗೆ

15 -10 ವಾಕ್ಯದಲ್ಲಿ ಉತ್ತರಿಸಿರಿ ;

1 ) ಜರ್ಮನಿಯ ಏಕೀಕರಣದಲ್ಲಿ ಬಿಸ್ಮಾರ್ಕ್‌ನ ಪಾತ್ರವನ್ನು ಚರ್ಚಿಸಿ .

ಉತ್ತಮ ವಿದ್ಯಾಭ್ಯಾಸವನ್ನು ಪಡೆದಿದ್ದು , ಯೂರೋಪಿನ ಪರ್ಯಾಟನೆಯ ಅನುಭವ ಹೊಂದಿದ್ದನು . ರಷ್ಯಾ ಹಾಗೂ ಫ್ರಾನ್ಸ್‌ಗಳಲ್ಲಿ ಪ್ರಷ್ಯಾದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದನು . ಯೂರೋಪಿನ ರಾಜಕೀಯದ ಬಗ್ಗೆ ಅಪಾರ ಜ್ಞಾನ ಮತ್ತು ಅನುಭವ ಪಡೆದುಕೊಂಡನು . 1862 ರಲ್ಲಿ ಪ್ರಷ್ಯಾದ ಅರಸ ಮೊದಲನೆಯ ವಿಲಿಯಂ ಬಿಸ್ಕಾರ್‌ನನ್ನು ಪ್ರಷ್ಯಾದ ಭಾನ್ಸಲರ್ ಆಗಿ ನೇಮಿಸಿದನು .

ಪ್ರಷ್ಯಾದ ರಾಜಪ್ರಭುತ್ವದಡಿಯಲ್ಲಿ ಜರ್ಮನಿಯ ಏಕೀಕರಣವನ್ನು ಕೈಗೊಳ್ಳಬೇಕೆಂದು ಬಿಸ್ಮಾರ್ಕ್ ನಿರ್ಧರಿಸಿದರು . ಪ್ರಷ್ಯಾ ಮಾತ್ರವೇ ಜರ್ಮನ್ ರಾಜ್ಯಗಳು ಮುನ್ನಡೆಸುವ ಕ್ಷಮತೆ ಹೊಂದಿದ್ದು ಮತ್ತು ಏಕೀಕರಣವನ್ನು ಸಾಧಿಸಲು ಆತ್ಮೀಯವನ್ನು ಸೋಲಿಸುವುದು ಅವಶ್ಯಕವೆಂದು ತಿಳಿದು , ಬಿಸ್ಮಾರ್ಕ್‌ನು ಜನರಲ್ ರೂಲ್ ಹಾಗೂ ಜನರಲ್ ಮಾಲ್ಕರ ಸಹಾಯದಿಂದ ಮನರ್ ಸಂಘಟಿಸಿದನು . ಈತನು ಸತತ ಪ್ರಯತ್ನದಿಂದಾಗಿ ಯೂರೋಪಿನ ಅತ್ಯುತ್ತಮ ಸೈನ್ಯ ಎಂದು ಪರಿಗಣಿಸಲ್ಪಟ್ಟಿತು . ಸಮಯದ ಪ್ರಮುಖ ಸಮಸ್ಯೆಗಳನ್ನು ಭಾಷಣಗಳು ಹಾಗೂ ಬಹುಮತದಿಂದ ಪರಿಹರಿಸಲಾಗದು ಇದು ಸಾಧ್ಯವಾಗುವುದು , “ ಉಕ್ಕು ಮತ್ತು ರಕ್ತದಿಂದ ” ಎಂಬ ಬಿಸ್ಮಾರ್ಕ್‌ನ ಹೇಳಿಕೆಯು ” ಉಕ್ಕು ಮತ್ತು ರಕ್ತ ನೀತಿ ” ಯೆಂದು ಪ್ರಸಿದ್ಧವಾಗಿದೆ . ಜರ್ಮನಿ ಏಕೀಕರಣಕ್ಕಾಗಿ ಬಿಸ್ಮಾರ್ಕನು ಕೆಲವು ರಾಜತಂತ್ರಗಳನ್ನು ಬಳಸಿದನು . ಅದಕ್ಕೆ ಕೆಲವು ಉದಾಹರಣೆಗಳೆಂದರೆ – ಷಲ್ಸ್ ವಿಗ್ ಮತ್ತು ಹಾಲ್‌ ಸ್ಟಿನ್ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳಲು ಅಡ್ಡಿಯಾದೊಂದಿಗೆ ಮೈತ್ರಿ ಮಾಡಿಕೊಂಡನು .

ಮುಂದೆ ಆಸ್ಟ್ರಿಯಾ ಈ ಪ್ರಾಂತ್ಯ ಆಡಳಿತದ ಜವಾಬ್ದಾರಿ ತೆಗೆದುಕೊಂಡಾಗ ಆಸ್ಟ್ರಿಯಾದೊಂದಿಗೆ ಯುದ್ಧ ಮಾಡಲು ಸಿದ್ಧನಾದನು , ಆಗ ಈ ಯುದ್ಧದಲ್ಲಿ ಫ್ರಾನ್ಸ್ ತಟಸ್ಥವಾಗಿರಬೇಕೆಂದು ಮೂರನೇ ವಿಲಿಯಂನೊಂದಿಗೆ ಪರಿಹಾರದ ಭರವಸೆಯನ್ನು ನೀಡಿದ ಪ್ರಷ್ಯಾ ಮತ್ತು ಇಟಲಿ ಪರಸ್ಪರ ಗುಪ್ತ ಒಪ್ಪಂದ ಮಾಡಿಕೊಂಡವು . ಸಡೋವಾ ಸಮೀಪ ನಡೆದ ನಿರ್ಣಾಯಕ ಕಾಂಗ್ರಾನ್ಸ್ ಕದನದಲ್ಲಿ ಆಸ್ಟ್ರಿಯಾವನ್ನು ಸಂಪೂರ್ಣವಾಗಿ ಸೋಲಿಸಿತು.

ಇವರ ಈ ಯುದ್ಧವನ್ನು ಸತ್ತದಾರಗಳ ಯುದ್ಧ ಎಂದು ಕರೆಯಲಾಯಿತು . ನಂತರ ಉತ್ತರ ` ಜರ್ಮನ್ ಒಕ್ಕೂಟದ ರಚನೆಯಾಯಿತು . ಇದರಿಂದಾಗಿ ಜರ್ಮನಿಯ ಏಕೀಕರಣ ಭಾಗಶಃ ಪೂರ್ಣಗೊಂಡಿತು . ಬಿಸ್ಮಾರ್ಕ್ ನೀಡಿದ ಭರವಸೆಯನ್ನು ನೆರವೇರಿಸಲಿಲ್ಲ ಆದಕಾರಣ ಮೂರನೇ ನಮೋಲಿಯನ್ ಪ್ರಷ್ಯದ ಮೇಲೆ ಯುದ್ಧ ಸಾರಿದನು . ಬಿಸ್ಮಾರ್ಕ್ ತನ್ನ ರಾಜತಾಂತ್ರಿಕ ಕೌಶಲ್ಯದಿಂದ ಫ್ರಾನ್ಸ್‌ನ್ನು ಒಂಟಿಯನ್ನಾಗಿಸಿ ಯೂರೋಪಿನ ಯಾವ ದೇಶವು ಬೆಂಬಲಕ್ಕೆ ಬಾರದಂತೆ ನೋಡಿಕೊಂಡನು . ದಕ್ಷಿಣದ ಜರ್ಮನ್ ರಾಜ್ಯಗಳು ಪ್ರಷ್ಯಾಕ್ಕೆ ಬೆಂಬಲ ನೀಡಲು ಉತ್ತೇಜಿಸಿದನು . ಪರಿಣಾಮ ನೆಪೋಲಿಯನ್ ಸೋತನು . ಆತನನ್ನು ಸೆರೆಹಿಡಿಯಲಾಯಿತು . ಪ್ರಷ್ಯ ದೊರೆಯ ನೇತೃತ್ವದಲ್ಲಿ ಜರ್ಮನ್ ಏಕೀಕರಣ ಪೂರ್ಣಗೊಂಡಿತು . ಈ ಏಕೀಕರಣ ಶಿಲ್ಪಿ ಬಿಸ್ಮಾರ್ಕ್ ಅತ್ಯಂತ ಪ್ರಭಾವಿ ಶಾಲಿ ಶಕ್ತಿಯಾಗಿ ಹೊರಹೊಮ್ಮಿದನು .

IV . ಕೆಳಗಿನವುಗಳಿಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

1. ಜರ್ಮನಿಯ ಏಕೀಕರಣದ ವಿವಿಧ ಹಂತಗಳನ್ನು ವಿವರವಾಗಿ ಚರ್ಚಿಸಿ .

ರೈನ್ ಒಕ್ಕೂಟದ 39 ರಾಜ್ಯಗಳಲ್ಲಿ ಪ್ರಷ್ಯಾ ಅತ್ಯಂತ ಬಲಿಷ್ಠ ರಾಜ್ಯವಾಗಿತ್ತು . ಅದು ಜರ್ಮನ್ ರಾಜ್ಯಗಳ ಆರ್ಥಿಕ ಏಕೀಕರಣಕ್ಕಾಗಿ ಪ್ರಯತ್ನಿಸಿತು . ಈ ಪ್ರಯತ್ನಗಳಿಂದಾಗಿ 1834 ರಲ್ಲಿ ‘ ಝಾಲ್ವೇರಿನ್ ‘ ಎಂಬ ಸುಂಕದ ಒಕ್ಕೂಟ ಅಸ್ತಿತ್ವಕ್ಕೆ ಬಂದಿತು . ಆರ್ಥಿಕ ಏಕತೆಯ ಮುಂದಿನ ರಾಜಕೀಯ ಏಕತೆಯ ಕಡೆಗೆ ಇಟ್ಟ ಮೊದಲ ಹೆಜ್ಜೆಯಾಗಿತ್ತು . ಪ್ರಷ್ಯಾದ ಮಾತ್ರವೇ ಜರ್ಮನ್ ರಾಜ್ಯಗಳನ್ನು ಮುನ್ನಡೆಸುವ ಕ್ಷಮತೆ ಹೊಂದಿದೆ ಮತ್ತು ಆಸ್ಟ್ರಿಯಾವನ್ನು ಯುದ್ಧದಲ್ಲಿ ಸೋಲಿಸುವುದು ಅವಶ್ಯವೆಂದು ತಿಳಿದಿದ್ದನು . ಅದಕ್ಕಾಗಿ ಜನರಲ್ ರೂಸ್ ಮತ್ತು ಜನರಲ್ ಮಾಲ್ಕರ ಸಹಾಯದೊಂದಿಗೆ ಪ್ರಷ್ಯಾದ ಸೈನ್ಯವನ್ನು ಪುನರ್ ಸಂಘಟಿಸಿ ‘ ಉಕ್ಕು ಮತ್ತು ರಕ್ತ ‘ ನೀತಿಯನ್ನು ಅನುಸರಿಸಿದುದು ಮತ್ತೊಂದು ಹಂತವಾಗಿತ್ತು . ಕಾನಿಗ್ರಾಡ್ ಕದನದಲ್ಲಿ ಪ್ರಷ್ಯಾ ಸೇನೆವು ಸಂಪೂರ್ಣವಾಗಿ ಸೋತಿತು . ಆಸ್ಟ್ ಪ್ರಷ್ಯಾ ಯುದ್ಧವು 1866 ರಲ್ಲಿ ಜರುಗಿದ ಪ್ರಾಗ್ ಒಪ್ಪಂದದೊಂದಿಗೆ ಕೊನೆಗೊಂಡಿತು . ಉತ್ತರ ಜರ್ಮನ್ ಒಕ್ಕೂಟ ರಚನೆಯಾದುದು ಮತ್ತೊಂದು ಹಂತವಾಗಿತ್ತು .

ಫ್ರಾನ್ಸ್‌ನ ತಟಸ್ಥತೆಗಾಗಿ ನೀಡಿದ್ದ ಪರಿಹಾರದ ಭರವಸೆಯನ್ನು ಬಿಸ್ಮಾರ್ಕ್‌ನು ಪೂರೈಸಲಿಲ್ಲ . ಏಕೀಕರಣವನ್ನು ಪೂರ್ಣಗೊಳಿಸಲು ಫ್ರಾನ್ಸ್‌ನೊಂದಿಗೆ ಯುದ್ಧವಾದ್ದಲ್ಲಿ ಉಳಿದ ಜರ್ಮನ್ ರಾಜ್ಯಗಳು ಉತ್ತರ ಜರ್ಮನ್ ಒಕ್ಕೂಟಕ್ಕೆ ಸೇರುತ್ತವೆಯೆಂದು ಅರಿತುಕೊಂಡಿದ್ದ . ಬಿಸ್ಮಾರ್ಕ್ ತನ್ನ ರಾಜತಾಂತ್ರಿಕ ಕೌಶಲ್ಯದಿಂದ ಫ್ರಾನ್ಸ್‌ನ್ನು ಒಂಟಿಯಾಗಿಸಿ ಯೂರೋಪಿನ ಯಾವ ದೇಶವೂ ಅವರ ಬೆಂಬಲಕ್ಕೆ ಬಾರದಂತೆ ನೋಡಿಕೊಂಡನು . ದಕ್ಷಿಣ ಜರ್ಮನ್ ರಾಜ್ಯಗಳು ಬೆಂಬಲ ನೀಡಿದವು . ಈ ಯುದ್ಧದಲ್ಲಿ ಫ್ರಾನ್ಸ್ ಹೀನಾಯವಾಗಿ ಸೋತಿತು . ನೆಪೋಲಿಯನನ್ನು ಬಂಧಿಸಿ ದೊರೆ ವಿಲಿಯಂನನ್ನು ಕೈಸರ್ ಬಿರುದುನೊಂದಿಗೆ ಕಿರೀಟ ಧಾರಣೆ ಮಹೋತ್ಸವ ಆಚರಿಸುವುದರಿಂದ ಜರ್ಮನಿಯ ಏಕೀಕರಣ ಪೂರ್ಣಗೊಂಡಿತು . ಜರ್ಮನ್ ಏಕೀಕರಣದ ಶಿಲ್ಪಿ ಬಿಸ್ಮಾರ್ಕನು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದನು .

FAQ

1 . ಪ್ರಷ್ಯಾ ಯಾವ ವರ್ಷದಲ್ಲಿ ಡೆನ್ಮಾರ್ಕಿನ ಮೇಲೆ ದಾಳಿ ಮಾಡಿತು ?

1864 ರಲ್ಲಿ .

2. ಬಿಸ್ಮಾರ್ಕ್‌ನ ಪ್ರಸಿದ್ಧ ನೀತಿ ಯಾವುದು

ಉಕ್ಕು ಮತ್ತು ರಕ್ತ ‘ ನೀತಿ

ಇತರೆ ವಿಷಯಗಳು :

1st PUC History Notes

First PUC All Textbooks Pdf

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *