9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ – 26 ಸಮುದಾಯ ನೋಟ್ಸ್, 9th Standard Social Science Samudaya Notes Question Answer Guide Extract Mcq Pdf Download in Kannada Medium Karnataka State Syllabus 2026 Kseeb Solutions For Class 9 Social Science Samudaya Notes Pdf Samudaya 9th Standard Notes Kseeb Solutions for Class 9 Social Science Part 2 9ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್ pdf ಭಾಗ 2 9th Class Social Science Sociology Chapter 4 Samudaya Questions and Answers, Notes Pdf, 9th samudaya pata notes samudaya patada question answer samudaya question answer samudaya 9th standard question answer 9th social science chapter 26 notes in kannada

ಅಭ್ಯಾಸ
I. ಖಾಲಿ ಬಿಟ್ಟಿರುವ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.
- ನಿರ್ದಿಷ್ಟ ಪ್ರದೇಶದಲ್ಲಿ ಸಾಮಾನ್ಯ ಸಾಮಾಜಿಕ ಬದುಕು ನಡೆಸುವ ಪರಿಕಲ್ಪನೆಯೇ ಸಮುದಾಯ.
- ಭಾರತೀಯ ಸಮಾಜದ ಆಧಾರಸ್ತಂಭ ಗ್ರಾಮೀಣ ಸಮುದಾಯ.
- ಈಶಾನ್ಯ ವಲಯದ ಆದಿವಾಸಿಗಳು ಮಂಗೋಲಿಯನ್ ಜನಾಂಗಕ್ಕೆ ಸೇರಿದವರಾಗಿರುತ್ತಾರೆ.
II. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
4. ನಗರ ಎಂದರೇನು?
ನಗರವೆಂಬುದು ಸಾಕಷ್ಟು ದೊಡ್ಡ ಗಾತ್ರದ, ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿರುವ ಹಾಗೂ ಸಾಮಾಜಿಕವಾಗಿ ವೈವಿಧ್ಯತೆಯನ್ನು ಹೊಂದಿದ ಜನರ ಶಾಶ್ವತ ನೆಲೆಯಾಗಿದೆ.
5. ಕೈಗಾರಿಕೀಕರಣ ಯಾವುದನ್ನು ಸೂಚಿಸುತ್ತದೆ?
ಸರಕು ಮತ್ತು ಸೇವೆಗಳ ಉತ್ಪಾದನೆಯಲ್ಲಿ ಬಳಸುವ ತಂತ್ರಜ್ಞಾನದಲ್ಲಿ ಉಂಟಾಗುವ ಬದಲಾವಣೆಯ ಪ್ರಕ್ರಿಯೆಯನ್ನು ಕೈಗಾರಿಕೀಕರಣ ಎಂದು ಕರೆಯುತ್ತಾರೆ. ಮುಖ್ಯವಾಗಿ ತಯಾರಿಕಾ ಉದ್ಯಮಗಳ ಬೆಳವಣಿಗೆಯನ್ನು ಸೂಚಿಸಲು ಈ ಪದವನ್ನು ಬಳಸಲಾಗುತ್ತದೆ.
6. ಗ್ರಾಮ ಎಂಬ ಪರಿಕಲ್ಪನೆಯನ್ನು ತಿಳಿಸಿ.
ಗ್ರಾಮವೆಂಬುದು ಕೃಷಿಯನ್ನು ಕೇವಲ ಉದ್ಯೋಗವಾಗಿ ಮಾತ್ರವಲ್ಲದೆ ಜೀವನ ವಿಧಾನವಾಗಿಯೂ ಅನುಸರಿಸುವ, ಸಾಮಾನ್ಯ ಜೀವನ ನಡೆಸುವ ಸಣ್ಣ ಜನಸಂಖ್ಯೆಯ ಸಮೂಹವಾಗಿದೆ.
7. ಮಾನವಶಾಸ್ತ್ರದ ಪದಕೋಶವು ‘ಬುಡಕಟ್ಟು’ ಎಂಬ ಪದಕ್ಕೆ ಯಾವ ವಿವರಣೆ ನೀಡುತ್ತದೆ?
ಸಾಮಾನ್ಯವಾಗಿ ನಿರ್ದಿಷ್ಟ ಭೂಪ್ರದೇಶ, ಭಾಷೆ, ಸಾಂಸ್ಕೃತಿಕ ಸಾಮ್ಯತೆ ಮತ್ತು ಸಾಮಾಜಿಕ ಸಂಘಟನೆಯನ್ನು ಹೊಂದಿರುವ ಜನರ ಸಮೂಹವನ್ನು ಬುಡಕಟ್ಟು ಎಂದು ಮಾನವಶಾಸ್ತ್ರದ ಪದಕೋಶವು ವ್ಯಾಖ್ಯಾನಿಸುತ್ತದೆ.
8. ನಗರ ಸಮುದಾಯದ ಲಕ್ಷಣಗಳನ್ನು ನಿರೂಪಿಸಿ.
ನಗರ ಸಮುದಾಯದ ಪ್ರಮುಖ ಲಕ್ಷಣಗಳು:
- ಸಾಮಾಜಿಕ ವೈವಿಧ್ಯತೆ.
- ಅನಾಮಿಕತೆ.
- ಹೆಚ್ಚಿನ ಪ್ರಮಾಣದ ಸಾಮಾಜಿಕ ಚಲನೆ.
- ವ್ಯಕ್ತಿವಾದ, ವಿಲಾಸವಾದ ಹಾಗೂ ವೈಯಕ್ತಿಕತೆಗೆ ಹೆಚ್ಚಿನ ಒತ್ತು.
- ಸಂಘ-ಸಂಸ್ಥೆಗಳ ಬೆಳವಣಿಗೆ.
- ಚಿಕ್ಕ ಗಾತ್ರದ ಕುಟುಂಬ.
- ಸಾಮಾಜಿಕ ಪರಿವರ್ತನೆಯ ತೀವ್ರ ವೇಗ.
9. ಗ್ರಾಮ ಸಮುದಾಯದ ಲಕ್ಷಣಗಳನ್ನು ಪಟ್ಟಿಮಾಡಿ.
- ಚಿಕ್ಕ ಗಾತ್ರದ ಸಮುದಾಯ.
- ಅನ್ಯೋನ್ಯ ಸಂಬಂಧಗಳು.
- ಸಾಮಾಜಿಕ ಐಕ್ಯತೆ.
- ಅನೌಪಚಾರಿಕ ನಿಯಂತ್ರಣ.
- ಅವಿಭಕ್ತ ಕುಟುಂಬಗಳಿಗೆ ಪ್ರಾಧಾನ್ಯತೆ.
- ಕೃಷಿಯ ಪ್ರಾಧಾನ್ಯತೆ.
- ನಿಸರ್ಗದ ಪ್ರಭಾವ.
- ನೆರೆಹೊರೆಯವರ ಪ್ರಭಾವ.
- ಸರಳತೆ.
- ಅತಿಯಾದ ಧಾರ್ಮಿಕ ಶ್ರದ್ಧೆ.
- ಸಾಂಪ್ರದಾಯಿಕ ದೃಷ್ಟಿಕೋನ.
- ವ್ಯಾಪಕವಾಗಿ ಕಂಡುಬರುವ ಜಾತಿ ವ್ಯವಸ್ಥೆ.
- ಅನಕ್ಷರತೆ ಮತ್ತು ಬಡತನ ಮುಂತಾದ ಸಮಸ್ಯೆಗಳು.
10. ಗ್ರಾಮ ಸಮುದಾಯದ ಸಮಸ್ಯೆಗಳನ್ನು ತಿಳಿಸಿ.
ಗ್ರಾಮ ಸಮುದಾಯದ ಪ್ರಮುಖ ಸಮಸ್ಯೆಗಳು:
- ಕೃಷಿ ಸಮಸ್ಯೆಗಳು.
- ಗುಡಿ ಕೈಗಾರಿಕೆಗಳ ಸಮಸ್ಯೆಗಳು.
- ಅನಕ್ಷರತೆ, ಬಡತನ ಮತ್ತು ನಿರುದ್ಯೋಗ.
- ಆರೋಗ್ಯ ವ್ಯವಸ್ಥೆಯ ಕೊರತೆ.
- ನಾಗರಿಕ ಸೌಲಭ್ಯಗಳ ಕೊರತೆ.
11. ಬುಡಕಟ್ಟು ಜನಾಂಗದ ವಿಶಿಷ್ಟ ಲಕ್ಷಣಗಳನ್ನು ಗುರುತಿಸಿ.
- ಸಾಮಾನ್ಯ ಭೂಪ್ರದೇಶ.
- ಕುಟುಂಬ ಅಥವಾ ಕುಟುಂಬ ಸಮೂಹಗಳ ಗುಂಪು.
- ಒಳಬಾಂಧವ್ಯದ ಕ್ರಮ.
- ಸಾಮಾನ್ಯ ಭಾಷೆ.
- ಸರಳತೆ ಮತ್ತು ಸ್ವಯಂಪರಿಪೂರ್ಣತೆ.
- ಸಾಮಾನ್ಯ ಧರ್ಮ.
- ಸಾಮಾನ್ಯ ಸಂಸ್ಕೃತಿ.
- ಸಾಮಾನ್ಯ ಹೆಸರು.
- ಸಂಘಟಿತ ಏಕತೆಯ ಪ್ರಜ್ಞೆ.
- ನಿರಕ್ಷರತೆ.
12. ಭಾರತೀಯ ಬುಡಕಟ್ಟು ಜನಾಂಗವನ್ನು ಹೇಗೆ ವಿಭಜಿಸಬಹುದು?
ಭಾರತೀಯ ಬುಡಕಟ್ಟು ಜನಾಂಗವನ್ನು ಭೌಗೋಳಿಕವಾಗಿ ನಾಲ್ಕು ವಲಯಗಳಾಗಿ ವಿಂಗಡಿಸಬಹುದು.
- ಈಶಾನ್ಯ ವಲಯದ ಆದಿವಾಸಿಗಳು: ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಅಸ್ಸಾಂ, ತ್ರಿಪುರ ಮತ್ತು ಮಣಿಪುರಗಳಲ್ಲಿ ವಾಸಿಸುತ್ತಾರೆ.
- ಕೇಂದ್ರ ವಲಯದ ಆದಿವಾಸಿಗಳು: ಕೃಷ್ಣಾ ನದಿಯ ಉತ್ತರ ಮತ್ತು ಗಂಗಾ ನದಿಯ ದಕ್ಷಿಣ ಭಾಗಗಳಲ್ಲಿನ ಪರ್ವತ ಹಾಗೂ ತಪ್ಪಲು ಪ್ರದೇಶಗಳಲ್ಲಿ ವಾಸಿಸುತ್ತಾರೆ.
- ದಕ್ಷಿಣದ ಆದಿವಾಸಿಗಳು: ಆಂಧ್ರ ಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ವಾಸಿಸುತ್ತಾರೆ.
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆದಿವಾಸಿಗಳು: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವಾಸಿಸುತ್ತಾರೆ. ಇವರಲ್ಲಿ ಜಾರವ, ಓಂಗೆ, ಸೆಂಟಿನೆಲಿ ಮತ್ತು ನಿಕೋಬಾರಿ ಬುಡಕಟ್ಟುಗಳು ಪ್ರಮುಖವಾಗಿವೆ.
ಇತರೆ ವಿಷಯಗಳು:
9th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.