9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ-25 ಸಾಮಾಜೀಕರಣ ಹಾಗೂ ಕುಟುಂಬದ ಸಂಬಂಧಗಳು ನೋಟ್ಸ್‌ | Samajikarana Hagu Kutumbada Sambandhagalu Notes

9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ-25 ಸಾಮಾಜೀಕರಣ ಹಾಗೂ ಕುಟುಂಬದ ಸಂಬಂಧಗಳು ನೋಟ್ಸ್‌, Samajikarana Hagu Kutumbada Sambandhagalu Notes Pdf Question Answer Guide Extract Mcq Pdf download in Kannnada Medium Karnataka State Syllabus 2026 Kseeb Solutions For Class 9 Social Science Chapter 25 Notes ಸಾಮಾಜೀಕರಣ ಹಾಗೂ ಕುಟುಂಬದ ಸಂಬಂಧಗಳು ಪ್ರಶ್ನೆ ಉತ್ತರ question answer Samajikarana Hagu Kutumbada Sambandagalu in Kannada 9th class social science chapter 25 question answer in kannada 9th social science notes in kannada pdf part 2

Samajikarana hagu kutumbada sambandhagalu Notes

1. ಮಾನವನನ್ನು ಸಾಮಾಜಿಕ ವ್ಯಕ್ತಿಯಾಗಿ ರೂಪುಗೊಳ್ಳುವ ಪ್ರಕ್ರಿಯೆಯನ್ನು ಸಾಮಾಜಿಕೀಕರಣ ಎನ್ನುತ್ತೇವೆ.

2. ತಾಯಿಯೇ ಮಗುವಿನ ಮೊದಲ ಗುರು.

3. ಮಲ್ಲಿಗೆ ಮೊಗ್ಗುಗಳಂತಿದ್ದ ಮಕ್ಕಳ ಮನಸ್ಸು ಸಾಮಾಜಿಕೀಕರಣದಿಂದ ಅರಳುತ್ತದೆ.

4. ಸಾಮಾಜಿಕೀಕರಣದಲ್ಲಿ ಸಮವಯಸ್ಕರ ಪಾತ್ರವನ್ನು ವಿವರಿಸಿ.

ಸಾಮಾಜಿಕೀಕರಣದ ಪ್ರಮುಖ ನಿಯೋಗಿಗಳಲ್ಲಿ ಸಮವಯಸ್ಕರು, ಜೊತೆ ಆಟಗಾರರು ಮತ್ತು ಸ್ನೇಹಿತರು ಸೇರಿದ್ದಾರೆ. ಈ ಸಂಬಂಧವು ಸಹಕಾರ ಹಾಗೂ ಪರಸ್ಪರ ಹೊಂದಾಣಿಕೆಯನ್ನು ಆಧರಿಸಿದೆ. ಮಕ್ಕಳು ತಮ್ಮ ಪೋಷಕರಿಂದ ಮತ್ತು ಶಿಕ್ಷಕರಿಂದ ತಿಳಿಯಲಾಗದ ಕೆಲವು ವಿಷಯಗಳನ್ನು ಸ್ನೇಹಿತರಿಂದ ತಿಳಿಯುತ್ತಾರೆ. ಸಮಾಜದ ದೃಷ್ಟಿಯಿಂದ ಈ ಅರಿವು ಅಗತ್ಯವಾಗಿದೆ.

5. ಕುಟುಂಬದ ಪರಿಸರದಲ್ಲಿ ಮಗು ಕಲಿಯುವ ಮೌಲ್ಯಗಳು ಯಾವುವು?

ಕುಟುಂಬದ ಪರಿಸರದಲ್ಲಿ ಮಗು ಪ್ರೀತಿ, ವಾತ್ಸಲ್ಯ, ವಿಶ್ವಾಸ, ಸಹನೆ, ಸಹೃದಯತೆ ಮತ್ತು ಸಹಕಾರ ಮೊದಲಾದ ಜೀವನ ಮೌಲ್ಯಗಳನ್ನು ಕಲಿಯುತ್ತದೆ.

6. ಸಾಮಾಜಿಕೀಕರಣದ ಪ್ರಕ್ರಿಯೆಯಲ್ಲಿ ಧರ್ಮದ ಪಾತ್ರವೇನು?

ಸಾಮಾಜಿಕೀಕರಣದ ಪ್ರಕ್ರಿಯೆಯಲ್ಲಿ ಧರ್ಮದ ಪಾತ್ರ ಮುಖ್ಯವಾಗಿದೆ. ಧರ್ಮವು ಸಾಮಾಜಿಕ ಜೀವನಕ್ಕೆ ಆದರ್ಶದ ತಳಹದಿಯನ್ನು ಹಾಕುತ್ತದೆ ಮತ್ತು ನೀತಿಯುತ ಜೀವನ ನಡೆಸಲು ಬೋಧಿಸುತ್ತದೆ. ಮಕ್ಕಳು ತಂದೆ-ತಾಯಿ, ಹಿರಿಯರು ಮತ್ತು ಸಂಬಂಧಿಕರು ಧಾರ್ಮಿಕ ಸ್ಥಳಗಳಿಗೆ ಹೋಗುವುದನ್ನು ಗಮನಿಸುತ್ತಾರೆ. ಪೂಜೆ, ಹಬ್ಬ, ಜಾತ್ರೆ ಮತ್ತು ಉತ್ಸವಗಳಂತಹ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಧಾರ್ಮಿಕ ಚಟುವಟಿಕೆಗಳ ಮೂಲಕ ಸಮಾಜಸೇವೆ, ದಾನ ಮತ್ತು ಧರ್ಮ ಮೊದಲಾದ ಮೌಲ್ಯಗಳನ್ನು ಕಲಿತು ಸಮಾಜದ ಒಳಿತಿಗೆ ನೆರವಾಗುತ್ತಾರೆ.

7. ಸಾಮಾಜಿಕೀಕರಣದ ಮಹತ್ವವನ್ನು ತಿಳಿಸಿ.

ಸಾಮಾಜಿಕೀಕರಣದ ಮಹತ್ವ ಹಾಗೂ ಕಾರ್ಯಗಳು:

  1. ಮಾನವನನ್ನು ಸಮೂಹಜೀವಿಯನ್ನಾಗಿ ಮಾಡುತ್ತದೆ.
  2. ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯಕವಾಗಿದೆ.
  3. ಜೀವನದಲ್ಲಿ ಶಿಸ್ತನ್ನು ಮೂಡಿಸುತ್ತದೆ.
  4. ವಿವಿಧ ಕೌಶಲ್ಯಗಳ ಕಲಿಕೆ ಮತ್ತು ಅಳವಡಿಕೆಗೆ ಅವಕಾಶ ನೀಡುತ್ತದೆ.
  5. ಸರಿಯಾದ ಆಕಾಂಕ್ಷೆಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.
  6. ಸಾಮಾಜಿಕ ಅಂತರವನ್ನು ತಗ್ಗಿಸುತ್ತದೆ.
  7. ಭವ್ಯ ಭವಿಷ್ಯವನ್ನು ರೂಪಿಸಲು ಅವಕಾಶ ನೀಡುತ್ತದೆ.
  8. ಸಂಸ್ಕೃತಿಯ ನಿರಂತರ ಮುಂದುವರಿಕೆಗೆ ಸಹಕಾರಿಯಾಗಿದೆ.
  9. ಸಾಮಾಜಿಕ ವ್ಯವಸ್ಥೆಗೆ ಭದ್ರತೆ ನೀಡುತ್ತದೆ.

8. ಸಾಮಾಜಿಕೀಕರಣದ ಪ್ರಕ್ರಿಯೆಯಲ್ಲಿ ಶಾಲೆಯ ಪಾತ್ರವನ್ನು ವಿವರಿಸಿ.

ಮಗುವಿನ ಸಾಮಾಜಿಕೀಕರಣದಲ್ಲಿ ಶಾಲೆಯ ಪಾತ್ರ ಮಹತ್ವದ್ದಾಗಿದೆ. ಶಾಲೆಯಲ್ಲಿ ಶಿಕ್ಷಣದ ಪರಿಣಾಮದ ಜೊತೆಗೆ ಶಿಕ್ಷಕರು ಮತ್ತು ಸ್ನೇಹಿತರ ವ್ಯಕ್ತಿತ್ವದ ಪ್ರಭಾವಕ್ಕೂ ಮಗು ಒಳಗಾಗುತ್ತದೆ. ಶಿಕ್ಷಣದಿಂದ ಮಗುವಿನ ನಡವಳಿಕೆ, ಜ್ಞಾನ, ಶೀಲ ಮತ್ತು ಮನೋಭಾವಗಳು ರೂಪುಗೊಳ್ಳುತ್ತವೆ. ಮಗುವಿನ ಸುಪ್ತಶಕ್ತಿ ಮತ್ತು ಸಾಮರ್ಥ್ಯಗಳು ಪ್ರಕಟಗೊಳ್ಳುತ್ತವೆ.

ಶಿಕ್ಷಕರು ತಮ್ಮ ನಡವಳಿಕೆಯ ಮೂಲಕ ಸನ್ನಡತೆ, ಸದ್ಭಾವನೆ ಮತ್ತು ಸಮಾನತೆಯಂತಹ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಪ್ರೀತಿ, ವಿಶ್ವಾಸ, ಸಹನೆ ಮತ್ತು ಸಹೃದಯತೆಯಂತಹ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು. ಪಠ್ಯೇತರ ಚಟುವಟಿಕೆಗಳು ಮತ್ತು ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತೇಜಿಸಬೇಕು.

9. ಆಧುನಿಕ ಸಮಾಜದಲ್ಲಿ ಸಾಮಾಜಿಕೀಕರಣದ ನಿಯೋಗಿಯಾಗಿ ಸಮೂಹ ಮಾಧ್ಯಮಗಳು ಹೇಗೆ ಕೆಲಸ ಮಾಡುತ್ತವೆ?

ಆಧುನಿಕ ಸಮಾಜದಲ್ಲಿ ಸಮೂಹ ಮಾಧ್ಯಮಗಳು ಪ್ರಮುಖ ಸಾಮಾಜಿಕೀಕರಣದ ನಿಯೋಗಿಗಳಾಗಿವೆ. ದೂರದರ್ಶನ, ಚಲನಚಿತ್ರಗಳು, ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು, ನಾಟಕಗಳು ಮತ್ತು ರೇಡಿಯೋ ಮುಂತಾದ ಮಾಧ್ಯಮಗಳು ಜನರ ಮೇಲೆ ಪ್ರಭಾವ ಬೀರುತ್ತವೆ.

ಜಾಹೀರಾತುಗಳು, ರೇಡಿಯೋ ಕಾರ್ಯಕ್ರಮಗಳು, ಕಥೆ, ಕವನ, ಕಾದಂಬರಿ, ನಾಟಕ, ನೃತ್ಯರೂಪಕ, ಸಂಗೀತ, ಮಹಾನ್ ವ್ಯಕ್ತಿಗಳ ಭಾಷಣಗಳು ಮತ್ತು ಅನುಭವದ ನುಡಿಗಳ ಮೂಲಕ ಜನರು ಪ್ರಭಾವಿತರಾಗುತ್ತಾರೆ. ವಾರ್ತೆ, ರಸಪ್ರಶ್ನೆ, ಪರಿಚಯ, ಸಂವಾದ, ವಿಚಾರ ಸಂಕಿರಣ, ವಿವಿಧ ಸ್ಥಳಗಳ ವೀಕ್ಷಣೆ ಮತ್ತು ಅನ್ವೇಷಣೆ ಮುಂತಾದ ಕಾರ್ಯಕ್ರಮಗಳು ಸಮೂಹ ಮಾಧ್ಯಮಗಳ ಸದ್ಬಳಕೆಗೆ ನೆರವಾಗುತ್ತವೆ.

ಉತ್ತಮ ಸಂಸ್ಕಾರ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಾಯಕವಾಗುವ ಶೈಕ್ಷಣಿಕ ಕಾರ್ಯಕ್ರಮಗಳು ಉತ್ತಮ ಪರಿಣಾಮ ಬೀರುತ್ತವೆ.

9th Standard All Subject Notes

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *