9ನೇ ತರಗತಿ ನಾನು ಕಂಡಂತೆ ಡಾ|| ಬಿ. ಜಿ .ಎಲ್. ಸ್ವಾಮಿ ಕನ್ನಡ ನೋಟ್ಸ್, 9th Standard Naanu Kandanthe Dr B.G.L Swami Kannada Notes Question Answer Pdf in Kannada Medium Karnataka State Syllabus 2023, Kseeb Solutions for Class 9 kannada Chapter 3 Notes 9th Standard Kannada 3rd Chapter Notes Pdf 9th Class Kannada 3rd Lesson Question Answer 2023 ನಾನು ಕಂಡಂತೆ ನೋಟ್ಸ್
9th Naanu Kandanthe Dr B.G.L Swamy Notes
ತರಗತಿ : 9ನೇ ತರಗತಿ
ಪಾಠದ ಹೆಸರು : ನಾನು ಕಂಡಂತೆ ಡಾ|| ಬಿ. ಜಿ .ಎಲ್. ಸ್ವಾಮಿ
ಕೃತಿಕಾರರ ಹೆಸರು : ಡಾ . ಎಸ್ . ಎಲ್ . ಭೈರಪ್ಪ
Naanu Kandanthe Dr B.G.L Swamy Kannada Notes
ಕೃತಿಕಾರರ ಪರಿಚಯ
ಡಾ . ಎಸ್ . ಎಲ್ . ಭೈರಪ್ಪ ಭಾರತದ ಪ್ರಸಿದ್ಧ ಸಾಹಿತಿ , ಕಾದಂಬರಿಕಾರರು . ಇವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ೨೦ ಆಗಸ್ಟ್ ೧೯೩೧ ರಲ್ಲಿ ಜನಿಸಿದರು . ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದ ಇವರು ನಂತರ ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ” ಸತ್ಯ ಮತ್ತು ಸೌಂದರ್ಯ ” ಮಹಾಪ್ರಬಂಧಕ್ಕೆ ಪಿಎಚ್.ಡಿ . ಪದವಿ ಪಡೆದರು . ಗುಜರಾತ್ , ದೆಹಲಿ , ಮೈಸೂರು – ಹೀಗೆ ಹಲವೆಡೆ ಪ್ರಾಧ್ಯಾಪಕರಾಗಿ ಕೆಲಸ – ಮಾಡಿದರು .
ಇಪ್ಪತ್ತೈದಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಡಾ . ಭೈರಪ್ಪನವರ ಧರ್ಮಶ್ರೀ , ಗೃಹಭಂಗ , ವಂಶವೃಕ್ಷ , ಅನ್ವೇಷಣ , ದಾಟು , ಪರ್ವ , ಮಂದ್ರ ಆವರಣ ಮೊದಲಾದ ಕೃತಿಗಳು ಭಾರತದ ಹಲವುಭಾಷೆಗಳಿಗೆ ಅನುವಾದಗೊಂಡಿವೆ . ಮನುಷ್ಯನ ಭಾವಪ್ರಪಂಚದ ಆಳಗಳಿಗೆ ಪಾತಾಳಗರಡಿಯನ್ನಿಳಿಸಿ ಅಲ್ಲಿರುವ ಸಕಲ ಗುಣಾವಗುಣಗಳನ್ನೂ ಅತ್ಯಂತ ಸ್ಪಷ್ಟವಾಗಿ ತೆರೆದುತೋರುವ ಭೈರಪ್ಪನವರ ಬರವಣಿಗೆಗೆ ಮನಸೋಲದವರಿಲ್ಲ .
ಇವರು ಸಾಹಿತ್ಯದಂತೆಯೇ ಸಂಗೀತದಲ್ಲೂ ಆಸಕ್ತರು , ಆಳವಾದ ಪರಿಶ್ರಮ ಉಳ್ಳವರು . ಇವರ ಮಂದ್ರ ಕಾದಂಬರಿಯಲ್ಲಿ ಭಾರತೀಯ ಸಂಗೀತದ ಹಲವಾರು ಸೂಕ್ಷ್ಮವಿವರಗಳು , ವ್ಯಕ್ತಿತ್ವಗಳ ಸಂಕೀರ್ಣತೆಗಳು , ಬದುಕಿನ ಒಳನೋಟಗಳು ಅತ್ಯಂತ ಮನೋಜ್ಞವಾಗಿ ಬಂದಿವೆ . ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಸರಸ್ವತಿ ಸಮ್ಮಾನ್ , ನಾಡೋಜ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳೂ ಡಾ . ಭೈರಪ್ಪ ಅವರಿಗೆ ಸಂದಿವೆ . ಇವರ ಕಾದಂಬರಿಗಳು ಚಲನಚಿತ್ರಗಳಾಗಿ , ಧಾರಾವಾಹಿಗಳಾಗಿಯೂ ಪ್ರಸಿದ್ಧಿ ಹೊಂದಿವೆ . ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ ‘ ಸಾಹಿತ್ಯ ಮತ್ತು ಪ್ರತೀಕ ‘ , ‘ ಕಥೆ ಮತ್ತು ಕಥಾವಸ್ತು ‘ , ‘ ನಾನೇಕೆ ಬರೆಯುತ್ತೇನೆ ‘ ಎಂಬ ಕೃತಿಗಳನ್ನೂ ಭೈರಪ್ಪ ಅವರು ರಚಿಸಿದ್ದಾರೆ . ಪ್ರಸ್ತುತ ಇವರು ದೇಶದ ಪ್ರತಿಷ್ಠಿತ “ ನ್ಯಾಷನಲ್ ಪ್ರೊಫೆಸರ್ ಹುದ್ದೆಯನ್ನು ಅಲಂಕರಿಸಿದ್ದಾರೆ .
9thClass Naanu Kandanthe Dr B.G.L Swami Kannada Notes
ಪಠ್ಯದ ಆಶಯ :
ಡಾ . ಬಿ . ಜಿ . ಎಲ್ . ಸ್ವಾಮಿ , ಕರ್ನಾಟಕದ ಪ್ರಭಯಹಿತಿಗಳಲ್ಲಿ ಒಬ್ಬರಾಗಿದ್ದರು . ಸಸ್ಯವಿಜ್ಞಾನಿಯಾಗಿ ಕೂಡ ನ ಕಾರ್ಯ ನಿರ್ವಹಿಸುತ್ತಿದ್ದ ಇವರು , ತಮ್ಮ ಹಾಸ್ಯಬರಹಗಳಿಗೆ ಕೂಡ ಜನಜನಿತರು . ಹಸಿರುಹೊನ್ನು , ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ , ಕಾಲೇಜು ರಂಗ ಮೊದಲಾದ ಪ್ರಸಿದ್ಧ ಕೃತಿಗಳ ಕರ್ತೃ . ಡಿ.ವಿ.ಜಿ.ಯವರ ಮಗನಾಗಿದ್ದ ಬಿ . ಜಿ . ಎಲ್ ಸ್ವಾಮಿಯವರು ತಮ್ಮ ವೃತ್ತಿಯ ಹೊರತಾಗಿ , ಸಾಹಿತ್ಯ ಸಂಗೀತ ಕ್ಷೇತ್ರಗಳಲ್ಲಿ ಕೂಡ ಆಸಕ್ತಿಯನ್ನು ಹೊಂದಿದ್ದ ವ್ಯಕ್ತಿ . ಎಸ್ . ಎಲ್ . ಭೈರಪ್ಪನವರು ಈ ಪ್ರಬಂಧದಲ್ಲಿ ಸ್ವಾಮಿಯವರ ಬಹುಮುಖೀ ವ್ಯಕ್ತಿತ್ವದ ಬಗ್ಗೆಯೇ ಬೆಳಕು ಚೆಲ್ಲಿದ್ದಾರೆ . ಸಂಗೀತದ ಮೇಲಿನ ಪ್ರೀತಿ , ಸಸ್ಯಶಾಸ್ತ್ರದ ಕುರಿತ ಪಾಂಡಿತ್ಯ , ಕಾಡುಗಳ ಓಡಾಟ , ಬರವಣಿಗೆಯ ಸಾಂಗತ್ಯ ಅಧ್ಯಯನದ ಆಸ್ಥೆ ಹೀಗೆ ವ್ಯಕ್ತಿಯೊಬ್ಬರು ತನ್ನ ಬದುಕಿನಲ್ಲಿ ಮಾಡಬಹುದಾದ ಅನಂತ ಸಾಧ್ಯತೆಗಳ ಕುರಿತು ಇಲ್ಲಿ ಲೇಖಕರು ವಿವರಿಸುತ್ತಾರೆ . ಕೇವಲ ವೃತ್ತಿ ಮಾತ್ರವೇ ಮುಖ್ಯವಲ್ಲ ಪ್ರವೃತ್ತಿಯೂ ಅವಶ್ಯ ಎನ್ನುವುದು ಇಲ್ಲಿನ ಭಾವ . ಯೋಚನಾಶಕ್ತಿಯನ್ನು ಹರಿಬಿಟ್ಟರೆ ಸಾಧಿಸಲು ಸಾಧ್ಯವಾಗದೇ ಇರುವುದು ಇಲ್ಲ ಎಂಬ ವಿಚಾರವನ್ನು ಅರಿತುಕೊಳ್ಳಬೇಕಿದೆ .
ಪದಗಳ ಅರ್ಥ
ಉಪೇಕ್ಷೆ – ತಾತ್ಸಾರ
ಮೇಧಾಶಕ್ತಿ – ಬುದ್ಧಿಮತ್ತೆ
ವೈಖರಿ – ಶೈಲಿ , ಧಾಟಿ
ಮಾರ್ಪಾಟು – ಬದಲಾವಣೆ
ನಿಮಿತ್ತ – ಕಾರಣ
9ನೇ ತರಗತಿ ನಾನು ಕಂಡಂತೆ ಡಾ|| ಬಿ. ಜಿ .ಎಲ್. ಸ್ವಾಮಿ ಕನ್ನಡ ನೋಟ್ಸ್
I. ಒಂದು ವಾಕ್ಯದಲ್ಲಿ ಉತ್ತರಿಸಿ.
1. ಸ್ವಾಮಿಯವರಿಗೂ ಲೇಖಕರಿಗೂ ಪರಿಚಯವಾಗಿದ್ದು ಎಲ್ಲಿ?
ಸ್ವಾಮಿಯವರಿಗೂ ಲೇಖಕರಿಗೂ ಪರಿಚಯವಾಗಿದ್ದು ವೈಸೂರು ವಿಶ್ವವಿದ್ಯಾನಿಲಯದಲ್ಲಿ.
2. ಸ್ವಾಮಿಯವರು ನುಡಿಸುತ್ತಿದ್ದ ಸಂಗೀತವಾದ್ಯ ಯಾವುದು?
ಸ್ವಾಮಿಯವರು ನುಡಿಸುತ್ತಿದ್ದ ಸಂಗೀತವಾದ್ಯ ಪಿಟೀಲು.
3. ಸ್ವಾಮಿಯವರು ವಿಜ್ಞಾನದ ಯಾವ ವಿಭಾಗದಲ್ಲಿ ಪರಿಣಿತರಾಗಿದ್ದರು?
ಸ್ವಾಮಿಯವರು ವಿಜ್ಞಾನದ ಸಸ್ಯಶಾಸ್ತ್ರದ ವಿಭಾಗದಲ್ಲಿ ಪರಿಣಿತರಾಗಿದ್ದರು.
4. ಸ್ವಾಮಿಯವರಿಗೆ ಯಾರ ಪಿಟೀಲು ವಾದನವೆಂದರೆ ಬಹಳ ಆಸೆ?
ಸ್ವಾಮಿಯವರಿಗೆ ಎಹೂದಿ ಮೆನೋಹಿನ್ ರ ಪಿಟೀಲು ವಾದನವೆಂದರೆ ಬಹಳ ಆಸೆ.
Naanu Kandanthe Dr B.G.L Swamy Notes Pdf
II. ಮೂರು /ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಸ್ವಾಮಿಯವರ ಸಂಗೀತಾಸಕ್ತಿಯನ್ನು ವಿವರಿಸಿ.
ಸ್ವಾಮಿಯವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿಯಿತ್ತು. ಅವರು ಬೆಳಗಿನ ಜಾವ ಪಿಟೀಲು ಅಭ್ಯಾಸಮಾಡುವ ಕ್ರಮವನ್ನು ಹೊಂದಿದ್ದರು. ಪಿಟೀಲು ನುಡಿಸುವಾಗ ಅವರು ಹುಡುಕುತ್ತಿದ್ದುದು ಶಬ್ದ ರಚನಾ ವೈಖರಿಯನು. ಸ್ವಾಮಿಯವರು ಲೇಖಕರ ಮನೆಗೆ ಬಂದಾಗ ಅವರಲ್ಲಿರುವ ಸಂಗೀತದ ರೆಕಾರ್ಡುಗಳನ್ನು ಕೇಳುತ್ತಿದ್ದರು. ಎಹೂದಿ ಮೆನೋಹಿನ್ ರ ಪಿಟೀಲು ಎಂದರೆ ಅವರ ರೆಕಾರ್ಡುಗಳು ಕೇಳುವುದೆಂದರೆ ತುಂಬಾ ಇಷ್ಟ.
2. ಸ್ವಾಮಿಯವರ ಸಂಶೋಧನೆಯ ಆಸಕ್ತಿ ಹೇಗಿತ್ತು?
ಸ್ವಾಮಿಯವರ ಕಣ್ಣಲ್ಲಿ ಚಿಕ್ಕಮಕ್ಕಳಿಗೆ ಸಹಜವೆನ್ನುವ ರೂಪದಲ್ಲಿ ಕೌತುಕತೆ ಇರುತ್ತಿತ್ತು. ಸಸ್ಯಗಳ ರಚನಾ ರಹಸ್ಯವನ್ನು ತಮ್ಮ ಕಲ್ಪನಾ ಶಕ್ತಿಗಳಿಂದ ರೂಪಿಸಿ, ರೂಢಿಸಿ ಬೆಳೆಸಿಕೊಂಡಿದ್ದರು. ಸೂಕ್ಷ್ಮ ದರ್ಶಕದ ಮೊದಲ ನೋಟದಲ್ಲೇ ಅವರು ಅದರ ಗುಟ್ಟು ಬಿಡಿಸುತ್ತಿದ್ದರು. ಕಲೆಯ ರಸ ಆನಂದ ಮತ್ತು ಕೌತುಕಗಳು ಅವರ ಸಂಶೋಧನೆಯ ಇನ್ನೊಂದು ಮುಖವಾಗಿರುತ್ತಿತ್ತು. ಅವರ ಸಂಶೋಧನಾ ಕ್ಷೇತ್ರ ತುಂಬಾ ವಿಸ್ಕೃತವಾದದ್ದು. ಇತಿಹಾಸ ಸಾಹಿತ್ಯ ಹಾಗೂ ಇತರ ಲಲಿತ ಕಲೆಗಳಲ್ಲಿ ಅವರ ಸಂಶೋಧಕ ಬುದ್ದೀ ಕೆಲಸ ಮಾಡುತ್ತಲೇ ಇತ್ತು.
3. ಸ್ವಾಮಿಯವರ ಸಾವು ಲೇಖಕರನ್ನು ಯಾಕೆ ಕಾಡಿತು?
ಲೇಖಕರು ತಿಳಿಸಿರುವಂತೆ ಸಾವು ಯಾವತ್ತು ಅವರನ್ನು ದುಃಖದಲ್ಲಿ ಮುಳುಗಿಸುವುದಿಲ್ಲ. ಆದರೆ ಬಿ.ಜಿ.ಎಲ್. ಸ್ವಾಮಿಯವರ ಸಾವು ಪ್ರಶ್ನಾತೀತವಾಗಿ ಕಾಡಿತು. ಅವರು ಆಹಾರದಲ್ಲಿ ಕ್ಲುಪ್ತವಾಗಿದ್ದವರು. ಸಿಗರೇಟು ಅತಿ ಎನ್ನುವಷ್ಟು ಸೇದುತ್ತಿರಲಿಲ್ಲ. ಸಂಶೋಧನೆ ಮತ್ತು ಬರಹಗಳಲ್ಲಿ ತಮ್ಮನ್ನು ಮಗ್ನರಾಗಿಸಿಕೊಂಡರೂ ಸಂತೋಷಪಡುತ್ತದ್ದರು. ಸಂತೋಷ ಯಾರನ್ನು ಸವೆಯುವುದಿಲ್ಲ. ಕ್ರಮವಾಗಿ ಲಘು ವ್ಯಾಯಾಮ ಮಾಡುತ್ತಿದ್ದರು. ಆದರೂ ಅನೇಕರು ಇದಾವದೂ ಇಲ್ಲದೆ ದೀರ್ಘಾಐುಗಳಾಗಿದ್ದಾರೆ. ಸಾವಿನ ಕಾರಣ ಹುಡುಕ ಹೋಗುವುದು ದುಃಖವನ್ನು ತಗಲುಹಾಕಲು ನಾವು ಸೃಷ್ಟಿಸುವ ಒಂದು ನಿಮಿತ್ತ ಮಾತ್ರ ಎಂದು ಪರಿಪರಿಯಾಗಿ ಸ್ವಾಮಿ ಅವರ ಸಾವು ಲೇಖಕರಿಗೆ ಕಾಡಿತು.
III. ಎಂಟು ವಾಕ್ಯಗಳಲ್ಲಿ ಉತ್ತರಿಸಿ.
1. ಸ್ವಾಮಿಯವರ ಸಂಗೀತಾಸಕ್ತಿಯನ್ನು ವಿವರಿಸಿ.
ಸ್ವಾಮಿಯವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿಯಿತ್ತು. ಅವರು ಬೆಳಗಿನ ಜಾವ ಪಿಟೀಲು ಅಭ್ಯಾಸಮಾಡುವ ಕ್ರಮವನ್ನು ಹೊಂದಿದ್ದರು. ಪಿಟೀಲು ನುಡಿಸುವಾಗ ಅವರು ಹುಡುಕುತ್ತಿದ್ದುದು ಶಬ್ದ ರಚನಾ ವೈಖರಿ. ಅವರ ಮೇಲೆ ಎಹೂದಿ ಮೆನೋಹಿನ್ ರ ಪಿಟೀಲುವಾದನ ತುಂಬಾ ಪ್ರಭಾವ ಬೀರಿತ್ತು. ಲೇಖಕರ ಮನೆಗೆ ಬಂದಾಗೆಲ್ಲಾ ಅವರ ರೆಕಾರ್ಡುಗಳನ್ನು ಕೇಳುತ್ತಿದ್ದರೂ ಮತ್ತು ಅವರ ಹಾಗೆ ಪಿಟೀಲಿನ ಸರ್ವ ಸಾಧ್ಯತೆಗಳನ್ನು ಹುಡುಕಿ ಹುಡುಕಿ ಹೊರ ಹೊಮ್ಮಿಸುವ ವಾದಕರು ಬೇರಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ನಮ್ಮವರು ಪಿಟೀಲಿನಲ್ಲಿ ಬ್ರೋಚೇವರೆವರೂರಾ ನುಡಿಸಲಾರರು. ಅದು ಬ್ರೊಚೇವಾ ಕುಯ್ದ ಹಾಗೆ ಆಗುತ್ತದೆ. ಅದೇ ಕೃತಿಯನ್ನು ರಾಗಬಂಧ ಪಿಟೀಲಿನಲ್ಲೂ ಅದೇ ವೀಣೆಯಲ್ಲೂ ಅದೇ ಕ್ಲಾರಿಯೋನೆಟ್ ನಲ್ಲೂ ಹಾಡುಗಾರಿಕೆಯಲ್ಲೂ ಅದೇ ಆ ವಾದ್ಯದ ವಿಶೇಷವೇನು ಬಂತು? ನಮ್ಮ ಸಂಗೀತಗಾರರಿಗೆ ಇದು ತಿಳಿಯದು ಎಂಬುದು ಅವರು ಸಂಗೀತದಲ್ಲಿ ತಾವು ಕಂಡುಕೊಂಡ ಸತ್ಯ ವಿವರಿಸಿದ್ದಾರೆ.
ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ ಬಿ.ಜಿ.ಎಲ್. ಸ್ವಾಮಿಯವರು ಲೇಖಕರ ಸಲಹೆಯ ಮೇರೆಗೆ ಎಲ್ಲಾ ಸಂಗೀತ ಪ್ರಿಯರು ಇಷ್ಟಪಡುವಂತಹ ಲೇಖನ ಬರೆಯುವ ಒಪ್ಪಂದವಾಯಿತು. ಸ್ವಾಮಿಯವರು ಸಂಗೀತ ಕಲಿಸುವ ಒಬ್ಬ ಯೋಗ್ಯ ಗುರುಗಳಿಗಾಗಿ ಸಾಕಷ್ಟು ಹುಡುಕಿದರು. ಆದರೆ ಪಿಟೀಲು ಕಲಿಸಲು ಯಾವ ಯೋಗ್ಯ ಗುರು ದೊರೆಯಲಿಲ್ಲ.
2. ಸ್ವಾಮಿಯವರ ಸಂಶೋಧನೆಯ ಬುದ್ಧಿ ಹೇಗಿತ್ತು?
ಸ್ವಾಮಿಯವರು ಅಧ್ಬುತ ಮೇಧಾಶಕ್ತಿಯುಳ್ಳವರಾಗಿದ್ದರು. ಅವರು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಒಮ್ಮೆ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ವಿದ್ಯುತ್ ಸೂಕ್ಷ್ಮದರ್ಶಕ ಯಂತ್ರ ಇದು ಕಡಿಮೆಯಾದಲ್ಲಿ ಇದರ ಸಹಾಯದಿಂದ ಇವುಗಳ ಸಹಾಯದಿಂದ ದೊಡ್ಡ ದೊಡ್ಡ ಸಂಶೋಧನೆ ಮಾಡಬಹುದು ಎಂಬುದು ಅವರ ಅಭಿಪ್ರಾಯವಾಗಿತ್ತು. ಎಷ್ಟೋಸಲ ಸ್ವಾಮಿಯವರ ಕಣ್ಣಿಗೆ ತಕ್ಷಣವೇ ಕಂಡದ್ದು ಅವರ ಸಹೋದ್ಯೋಗಿಗಳಿಗೆ ನೂರಾರು ಸಲ ನೋಡಿದಾಗ ಅದು ಕಾಣುತ್ತಿತ್ತು. ಏಕೆಂದರೆ ಏನನ್ನು ಹುಡುಕಬೇಕೆಂಬ ಅರ್ಧದಷ್ಟು ಕಲ್ಪನೆ ಸ್ವಾಮಿಯವರಿಗೆ ಮೊದಲೇ ಇರುತ್ತಿತ್ತು. ಸಸ್ಯದ ಕಾಂಡ, ನರ, ರಚನೆಗಳಲ್ಲಿರುವ ವಿನ್ಯಾಸಗಳನ್ನು ಗ್ರಹಿಸುವ ಕಲ್ಪನಾಶಕ್ತಿ ಅವರಿಗಿತ್ತು. ಒಂದು ಸಣ್ಣ ಕಾಂಡವನ್ನು ಕತ್ತರಿಸಿ ವಿದ್ಯುತ್ ಸೂಕ್ಷದರ್ಶಕದಲ್ಲಿ ನೋಡಿದರೆ ಎಂತಹ ಅದ್ಭುತ ರಚನಾ ವೈಖರಿ ಕಾಣುತ್ತೆ ಗೊತ್ತೇ! ಒಂದೊಂದು ಜಾತಿಯ ಸಸ್ಯದ ಕಾಂಡಕ್ಕೂ ತನ್ನದೇ ಆದ ರಚನಾ ವೈಖರಿ ಇರುತ್ತದೆ. ಪೋಟೋ ತೆಗೆದು ಮುದ್ರಿಸಿಕೊಂಡರೆ ನಮ್ಮ ಸೀರೆಯ ಬಣ್ಣಗಳನ್ನು ಮುದ್ರಿಸುವವರಿಗೆ ಎಂಥ ಸಿರಿಯ ಗಣಿ ಸಿಕ್ಕುತ್ತೆ ಅಂತೀರಿ ಅವರ ಸಂಶೋಧಕ ಮನೋಧರ್ಮವೇ ಅಂತಹದ್ದು.
ಸಸ್ಯ ಮತ್ತು ವನಗಳನ್ನು ಅವರೆಂದು ಒಣ ಸಂಶೋಧಕಗಾಗಿ ನೋಡುತ್ತಿರಲಿಲ್ಲ. ಕಲೆಯ ರಸ ಆನಂದ ಅವರು ಮತ್ತು ಕೌತುಕಗಳು ಅವರ ಸಂಶೋಧನೆಯ ಇನ್ನೊಂದು ಮುಖವಾಗಿರುತ್ತಿತ್ತು. ಇದೊಂದೇ ಅವರ ಸಂಶೋಧನೆಯ ಕ್ಷೇತ್ರವಾಗಿರಲಿಲ್ಲ. ಇತಿಹಾಸ, ಸಾಹಿತ್ಯ ಇತರ ಲಲಿತ ಕಲೆಗಳಲ್ಲಿಯೂ ಅವರ ಸಂಶೋಧಕ ಬುದ್ಧಿ ಕೆಲಸ ಮಾಡುತ್ತಲೇ ಇತ್ತು.
Naanu Kandanthe Dr B.G.L Swamy Question Answer
IV. ಸ್ವಾರಸ್ಯ ವಿವರಿಸಿ ಬರೆಯಿರಿ.
1. “ಒಳಗೆ ಬಂದಿದ್ದರೆ ನೀವು ನುಡಿಸುತ್ತಿರಲಿಲ್ಲ”
ಆಯ್ಕೆ:- ಈ ಮೇಲಿನ ವಾಕ್ಯವನ್ನು ನಾಡಿನ ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಬರೆದಿರುವ “ನಾನು ಕಂಡಂತೆ ಡಾ. ಬಿ.ಜಿ.ಎಲ್. ಸ್ವಾಮಿ” ಎಂಬ ಗದ್ಯ ಪಾಠದಿಂದ ಆಯ್ದುಕೊಳ್ಳಲಾಗಿದೆ. ಪ್ರಸ್ತುತ ವಾಕ್ಯವನ್ನು ಎಸ್. ಎಲ್. ಭೈರಪ್ಪ ಅವರು ಬಿ.ಜಿ.ಎಲ್. ಸ್ವಾಮಿಯವರಿಗೆ ನುಡಿದರು.
ಸಂದರ್ಭ:- ಬಿ.ಜಿ.ಎಲ್. ಸ್ವಾಮಿಯವರು ತುಂಬಾ ಸಂಗೀತಾಸಕ್ತಿಯುಳ್ಳ ಬಹುಮುಖ ಪ್ರತಿಭಾವಂತರಾಗಿದ್ದರು. ಶ್ರೀಯುತರು ಗಂಗೋತ್ರಿಯ ಅತಿಥಿ ಗೃಹದ ಕೋಣೆಯೊಂದರಲ್ಲಿ ತಂಗಿದ್ದರು. ಮುಂಜಾನೆ ಐದೂವರೆ ಹೊತತಿಗೆ ಲೇಖಕರು ಅ ಮಾರ್ಗವಾಗಿಯೇ ವಾಕಿಂಗ್ ಹೋಗುವಾಗ ಅವರ ಕೋಣೆಯ ಬಳಿಯಲ್ಲಿ ನಿಂತರು. ಕಿಟಕಿಯ ಬಾಗಿಲುಗಳನ್ನು ಮುಚ್ಚಿ ಸ್ವಾಮಿಯವರು ಪಿಟೀಲು ಅಭ್ಯಾಸ ಮಾಡುತ್ತಿದ್ದರು. ಅವರು ಪಿಟೀಲು ಗುರು ಹೇಳಿಕೊಟ್ಟದ್ದಕ್ಕೆ ಸೀಮಿತರಾಗಿದೆ ಹೊಸ-ಹೊಸದುದನ್ನು ಪಿಟೀಲಿನಲ್ಲಿ ಪ್ರಯೋಗಿಸಲು ಯತ್ನಿಸುತ್ತಿದ್ದರು. ಅರ್ಧಗಂಟೆಗೂ ಹೆಚ್ಚು ಸಮಯ ಅಲ್ಲಿಯೇ ನಿಂತು ಆಲಿಸಿದರು. ಮೇಟಿ ಕಾಫಿ ತಂದನಂತರ ಹೊರಬಂದ ಸ್ವಾಮಿಯವರು ” ನೀವೇಕೆ ಬಾಗಿಲು ತಟ್ಟಲಿಲ್ಲ? ಎಂದಾಗ ಲೇಖಕರು ಈ ಮೇಲಿನಂತೆ ನುಡಿದರು.
ಸ್ವಾರಸ್ಯ:- ಸಂಗೀತವು ಹೃದಯಕ್ಕೆ ಅಪ್ಯಾಯಮಾನವಾದದ್ದು. ಸಂಗಿತಗಾರರಿಗೆ ತೊಂದರೆಯಾಗದಂತೆ ಅದನ್ನು ಸವಿಯಬೇಕೆಂದು ಈ ವಾಕ್ಯದ ಸ್ವಾರಸ್ಯ. ಒಂದುವೇಳೆ ಲೇಖಕರ ಬಾಗಿಲು ತಟ್ಟಿ ಒಳಗಡೆ ಹೋಗಿದ್ದರೆ ಅದು ನಿಲ್ಲುತ್ತಿತ್ತು.
2. “ಒಂದೊಂದು ಜಾತಿಯ ಸಸ್ಯದ ಒಂದೊಂದು ಕಾಂಡಕ್ಕೂ ತನ್ನದೇ ಆದ ರಚನಾ ವೈಖರಿ ಇರುತ್ತದೆ”
ಆಯ್ಕೆ:– ಈ ಮೇಲಿನ ವಾಕ್ಯವನ್ನು ನಾಡಿನ ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಬರೆದಿರುವ “ನಾನು ಕಂಡಂತೆ ಡಾ. ಬಿ.ಜಿ.ಎಲ್. ಸ್ವಾಮಿ” ಎಂಬ ವ್ಯಕ್ತಿ ಚಿತ್ರಣ ಕುರಿತಾದ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಪ್ರಸ್ತುತ ವಾಕ್ಯವನ್ನು ಡಾ. ಬಿ.ಜಿ.ಎಲ್. ಸ್ವಾಮಿಯವರು ಲೇಖಕರನ್ನು ಉದ್ದೇಶಿಸಿ ನುಡಿದರು.
ಸಂದರ್ಭ:- ವಿದ್ಯುತ್ ಸೂಕ್ಷ್ಮದರ್ಶಕ ಸಂಶೋಧಕನಿಗೆ ತೀರ ಅಗತ್ಯ ಸಾಧನ. ತಾನು ಏನನ್ನು ಹುಡುಕಬೇಕು ಕಲ್ಪನೆ ಸ್ವಾಮಿಗೆ ಸದಾ ಇರುತ್ತಿತ್ತು. ಒಂದು ಸಣ್ಣ ಕಾಂಡವನ್ನು ಕತ್ತರಿಸಿ ವಿದ್ಯುತ್ ಸೂಕ್ಷದರ್ಶಕದಲ್ಲಿ ನೋಡಿದರೆ ಎಂತಹ ಅದ್ಭುತ ರಚನಾ ವೈಖರಿ ಎಂದು ಅದನ್ನು ಕುರಿತಾಗಿ ಹೇಳುವಾಗ ಸ್ವಾಮಿಯವರು , ಒಂದೊಂದು ಸಸ್ಯದ ಕಾಂಡ ಇನ್ನೊಂದಕ್ಕಿಂತ ಭಿನ್ನವಾಗಿದೆ ಎನ್ನುವಲ್ಲಿ ಈ ಮೇಲಿನಂತೆ ಉದ್ಗರಿಸಿದರು.
ಸ್ವಾರಸ್ಯ:- ಪ್ರತಿಯೊಂದು ಸಸ್ಯದ ಕಾಂಡ ಗಮನಿಸಿದರೆ ಒಂದರಂತೆ ಒಂದಿಲ್ಲ. ತುಂಬಾ ವೈವಿಧ್ಯತೆಯ ರಚನೆ ಹೊಂದಿರುತ್ತವೆ. ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.
V. ಬಿಟ್ಟ ಸ್ಥಳ ತುಂಬಿ ಬರೆಯಿರಿ.
1.ರೇಖೆ, ವರ್ಣಗಳ ಎಂಥೆಂಥ ರಚನಾ ಬಂಧಗಳನ್ನು ಸಾಧಿಸಬಹುದು.
2. ಹೊರಗಿನ ಬೆಳಕು ಬರದಂತೆ ಗಾಳಿ ಬಾಗಿಲಿನ ಗಾಜಿಗೆ ಕಪ್ಪು ಕಾಗದ ಅಂಟಿಸಿದ್ದರು.
VI. ವಿರುದ್ದಾರ್ಥಕ ಪದ ಬರೆಯಿರಿ.
ಕಲ್ಪನೆ X ನೈಜತೆ
ಪ್ರಸಿದ್ದ X ಅಪ್ರಸಿದ್ದ
ಧೀರ್ಘಾಯು X ಅಲ್ಪಾಯು
FAQ :
ಸ್ವಾಮಿಯವರು ನುಡಿಸುತ್ತಿದ್ದ ಸಂಗೀತವಾದ್ಯ ಪಿಟೀಲು.
ಸ್ವಾಮಿಯವರು ವಿಜ್ಞಾನದ ಸಸ್ಯಶಾಸ್ತ್ರದ ವಿಭಾಗದಲ್ಲಿ ಪರಿಣಿತರಾಗಿದ್ದರು.
ಸ್ವಾಮಿಯವರಿಗೂ ಲೇಖಕರಿಗೂ ಪರಿಚಯವಾಗಿದ್ದು ವೈಸೂರು ವಿಶ್ವವಿದ್ಯಾನಿಲಯದಲ್ಲಿ.
ಇತರೆ ವಿಷಯಗಳು:
9th Standard All Subject Notes
9th Standard Kannada Textbook karnataka Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
Excellent
Hi
9 th standard notes I want to writing
all the best
Please sir pdf