9ನೇ ತರಗತಿ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ಕನ್ನಡ ನೋಟ್ಸ್, 9th Adarsha Shikshaka Sarvepalli Radhakrishnan Notes Question Answer Mcq Pdf Download in Kannada Medium 2023 Kseeb Solutions For Class 9 Kannada Chapter 4 Notes 9th Standard Kannada 4th Chapter Notes Adarsh Shiksha ka Sarvepalli Radhakrishnan Kannada Question Answer Adarsha Shikshaka Sarvepalli Radhakrishnan Kannada Notes 9th Standard Kannada 4th Lesson Notes
Adarsh Shiksha Ka Sarvepalli Radhakrishnan Kannada Question Answer
ಗದ್ಯ ಭಾಗ – 4.
ಪಾಠದ ಹೆಸರು : ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ – ಸಮಿತಿ ರಚನೆ
ಕೃತಿಕಾರರ ಪರಿಚಯ
ಪ್ರಸ್ತುತ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ವ್ಯಕ್ತಿಚಿತ್ರ ಗದ್ಯ ಭಾಗವನ್ನು ಕೆ . ಎಸ್ , ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿ , ನಿಗದಿ ಮಾಡಿದೆ .
ಆಶಯ ಭಾವ
ಡಾ . ಎಸ್ . ರಾಧಾಕೃಷ್ಣನ್ ಅವರು ಭಾರತದ ತತ್ತ್ವಜ್ಞಾನ ಕ್ಷೇತ್ರದ ಅಸಾಮಾನ್ಯ ಪ್ರತಿಭೆ , ಇವರು ತಾತ್ವಿಕರೂ ದಾರ್ಶನಿಕರೂ ಹೌದು ಆಧ್ಯಾತ್ಮಿಕ ಸಂಪತ್ತನ್ನೂ ಬೌದ್ಧಿಕ ನಿಲುವನ್ನು ಪ್ರಚುರಪಡಿಸಿದ ರಾಜಕೀಯ ಧುರೀಣರು . ಇವರ ವಿದ್ವತ್ತೂರ್ಣ ವಿಚಾರ ಮತ್ತು ಚಿಂತನೆ ಉದ್ರೋಧಕವೂ ಸ್ಫೂರ್ತಿಯುತವೂ ಆಗಿವೆ .
ಆದರ್ಶ ಶಿಕ್ಷಕರಾಗಿದ್ದ ಇವರು ಗುರುವಿನ ಸ್ಥಾನ ಹಾಗೂ ಗೌರವವನ್ನು ಹೆಚ್ಚಿಸಿ , ಆದರ್ಶ ಸಮಾಜದ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಗತ್ಯವೆಂಬುದನ್ನು ತೋರಿಸಿಕೊಟ್ಟರು .
ಆತ್ಮವಂಚನೆ ಇಲ್ಲದೆ ಶ್ರದ್ಧಾಪೂರ್ವಕವಾಗಿ ಸಚ್ಚಾರಿತ್ರ್ಯ ಮೌಲ್ಯಗಳನ್ನು ವೃದ್ಧಿಸಿಕೊಂಡು ಭಾರತದ ರಾಷ್ಟ್ರಪತಿಗಳಾಗಿ ಆನುಪಮ ಸೇವೆಗೈದವರು .
ಇಂಥ ಮೇರು ಆದರ್ಶ ವ್ಯಕ್ತಿತ್ವದ ಡಾ . ಎಸ್ . ರಾಧಾಕೃಷ್ಣನ್ ಅವರ ಜೀವನ ಸಾಧನೆಯನ್ನು ಪರಿಚಯಿಸುವುದೇ ಪ್ರಸ್ತುತ ಗದ್ಯಭಾಗದ ಆಶಯ ಭಾವ .
ಪ್ರಕೃತ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ವ್ಯಕ್ತಿಚಿತ್ರ ಗದ್ಯ ಭಾಗವನ್ನು ಕೆ ಎಸ್ . ರತ್ನಮ್ಮ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿ , ನಿಗದಿ ಮಾಡಿದೆ .
9th Adarsha Shikshaka Sarvepalli Radhakrishnan Notes
ಪದಗಳ ಅರ್ಥ
ಗ್ರಹಣ ಶಕ್ತಿ – ವಿಷಯವನ್ನು ತಿಳಿದುಕೊಳ್ಳುವ ಸಾಮರ್ಥ್ಯ
ಆಮರ – ಶಾಶ್ವತ
ಆನುಪಮ – ಎಣೆಯಿಲ್ಲದ
ನಾಧಿ – ತಳಹದಿ , ಅಡಿಪಾಯ
ಬೇಗೆ – ಸಂಕಟ
ಮಂತ್ರಮುಗ್ಧ – ಮೌನ , ಆಶ್ಚರ್ಯಚಕಿತ
ಬೆರಗು – ಆಶ್ಚರ್ಯ
ಭಾವೋದ್ರೇಕ – ಭಾವನಾ ಪರವಶ
ವ್ಯಾಪಕ – ವಿಸ್ತಾರವಾದ
ಪಾಠದ ಸಾರಾಂಶ
Adarsha Shikshaka Sarvepalli Radhakrishnan Summary
ರಾಧಾಕೃಷ್ಣನ್ ಅವರ ಬಹುಮುಖ ಪ್ರತಿಭೆಯನ್ನು ಹತ್ತಿರದಿಂದ ಬಲ್ಲವರಾಗಿದ್ದ ನೆಹರೂ ಅವರು ಇವರನ್ನು ಮಾಸ್ಕೋದಲ್ಲಿ ಭಾರತದ ರಾಯಭಾರಿಯಾಗಿ ನೇಮಿಸಿದರು . ರಷ್ಯಾದ ಅಧ್ಯಕ್ಷರಾಗಿದ್ದ ಸ್ಟಾಲಿನ್ “ ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು .
ನೀವು ನಮ್ಮನ್ನು ಬಿಟ್ಟು ಹೋಗುತ್ತಿರುವಿರಿ . ನನಗೆ ಇದು ದುಃಖ ನೀಡಿದೆ . ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ . ನಾನು ಹೆಚ್ಚು ಕಾಲ ಬಾಳುವುದಿಲ್ಲ ” ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ ಹೇಳಿದರು .
ಅಷ್ಟೇ ಅಲ್ಲ ” ಅಶೋಕನು ಕಳಿಂಗ ಯುದ್ಧದ ಅನಂತರ ಶ್ರೇಷ್ಠ ಮನುಷ್ಯನಾದಂತ ನೀವೂ ಆಗುವಿರಿ ” ಎಂದು ಸ್ಮರಿಸಿಕೊಂಡರು . ರಾಧಾಕೃಷ್ಣನ್ ಅವರು ಎಲ್ಲಾ ಧರ್ಮಗಳನ್ನು ಅಧ್ಯಯನ ಮಾಡಿಕೊಂಡಿದ್ದರು . ಪ್ರತಿಯೊಂದು ಧರ್ಮದ ಅಂತಿಮ ಸತ್ಯ ಒಂದೇ ಎಂದು ತಿಳಿದುಕೊಂಡರು ,
ರಾಧಾಕೃಷ್ಣನ್ ಅವರು ಕ್ರಿಸ್ತಶಕ 1888 ಸೆಪ್ಟೆಂಬರ್ 5 ರಂದು ತಿರುತ್ತಣಿ ಎಂಬ ಪುಟ್ಟ ಗ್ರಾಮದಲ್ಲಿ ಮೀರಸ್ವಾಮಿ , ಮತ್ತು ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದರು .
ತನ್ನ ತಂದೆಗೆ ದೇಶೀ ಭಾಷೆಯಾಗಿದ್ದ ಸಂಸ್ಕೃತವನ್ನು ಕಲಿಯಲಿ ಎಂಬ ಆಪೇಕ್ಷೆ ಇತ್ತು ಆದರೆ ಇದು ಸಾಧ್ಯವಾಗಲಿಲ್ಲ . ತಿರುಪತಿಯ ಮಿಷನರಿ ಶಾಲೆಯಲ್ಲಿ ಹೆಚ್ಚು ಇಂಗ್ಲೀಷ್ ಕಲಿಕೆಗೆ ಮನ್ನಣೆಯಿತ್ತು .
ರಾಧಾಕೃಷ್ಣನ್ ಅವರ ವಿದ್ಯಾಭ್ಯಾಸವು ತಿರುಪತಿಯ ಹರ್ಮನ್ಸ್ ಬರ್ಗ್ ಮಿಷನರಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು . ವೆಲ್ಲೂರಿನ ವೂರ್ ಕಾಲೇಜಿಗೆ ಬಿ . ಎ . ಪೂರ್ವದ ಎರಡು ವಷಗಳ ಕಲಾ ಪದವಿಗೆ ಸೇರಿದರು .
ಮಿಷನರಿ ಶಾಲೆಯ ಶಿಸ್ತಿನ ತರಬೇತಿಯಿಂದ ರಾಧಾಕೃಷ್ಣನ್ ಅವರ ಮನಸ್ಸು ನಿಧಾನವಾಗಿ ಅಧ್ಯಯನದತ್ತ ವಾಲಿತು , ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ , ಎ . ಪದವಿಗೆ ಸೇರಿದರಲ್ಲದೆ ತತ್ತ್ವಶಾಸ್ತ್ರದ ಉತ್ತಮ ವಿದ್ಯಾರ್ಥಿ ಎನಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು . ತಮ್ಮ ಆಸಕ್ತಿಯ ವಿಷಯವಾದ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದರು .
ಹೀಗೆ ರಾಧಾಕೃಷ್ಣನವರು ವಿದ್ಯಾಭ್ಯಾಸ ನಡೆಯಿತು . ರಾಧಾಕೃಷ್ಣನ್ ಅವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು , ಸಯ್ಯದ್ ಪೇಟೆಯ ಟೀಚರ್ ಟ್ರೈನಿಂಗ್ ಕಾಲೇಜು , ಆಂಧ್ರದ ಅನಂತಪುರ ಹಾಗೂ ರಾಜಮಂಡ್ರಿಯ ಸರ್ಕಾರಿ ಕಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು .
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ತ್ವಶಾಸ್ತ್ರದ ಉಪಪ್ರಾಧ್ಯಾಪಕರಾಗಿ ಹಾಗೂ ಕೊಳ್ಕೊತಾದಲ್ಲಿ ( ಹಿಂದಿನ ಕಲ್ಕತ್ತಾ ) ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಸ್ಮರಣೀಯ . ಇದಲ್ಲದೆ ಆಂಧ , ದೆಹಲಿ , ಬನಾರಸ್ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ , ಅವುಗಳ ಪುರೋಭಿವೃದ್ಧಿಗೆ ಶ್ರಮಿಸಿದರು ,
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲೂ ಸಂದರ್ಶಕ ಪ್ರಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು . ರಾಧಾಕೃಷ್ಣನ್ ಅವರ ಬೋಧನಾ ಶೈಲಿ , ನಿರರ್ಗಳತೆ , ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು . ತಮ್ಮ ಪಾದ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು ,
ವಿಷಯ ಮೇಲಿನ ಪ್ರಭುತ್ವ , ಹಾಸ್ಯ ಪ್ರವೃತ್ತಿಗಳಿಂದ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು . ಕೋಲ್ಲೊತ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ಕೊಟ್ಟಂತಹ ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು. ಇದೇ ಸಾಕ್ಷಿ . ರಾಧಾಕೃಷ್ಣನ್ ಅವರು ಬೇರೆ ಬೇರೆ ದೇಶಗಳಲ್ಲಿ ತಮ್ಮ ಭಾಷಣದ ಶಕ್ತಿಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು . ಹಿಂದೂ ಧರ್ಮದ ತತ್ವಶಾಸ್ತ್ರದ ಬಗ್ಗೆ ಮೆಚ್ಚುಗೆಯ ಮಾತುಗನ್ನಾಡಿದ್ದಾರೆ. ಶಿಕ್ಷಣವು ಮಾನವನ ಅವಿಭಾಜ್ಯ ಅಂಗ ಎಂದಿದ್ದಾರೆ . ಇವರನ್ನು ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮಕರಣ ಮಾಡಲಾಯಿತು .
ಎರಡು ಬಾರಿ ಉಪರಾಷ್ಟ್ರಪತಿಗಳಾಗಿ ರಾಷ್ಟ್ರಕ್ಕೆ ಅನುಪಮ ಸೇವೆ ಸಲ್ಲಿಸಿದರು . ಈ ಅವಧಿಯಲ್ಲಿ ಹಲವಾರು ರಾಷ್ಟ್ರಗಳಿಗೆ ಭೇಟಿ ನೀಡಿ ನೀಡಿದರು . ವಿಶ್ವದ ಬುದ್ಧಿವಂತರ ಮೆಚ್ಚುಗೆ ಗಳಿಸಿದರು . ವಿಶ್ವದೆಲ್ಲೆಡೆಗಳಿಂದ ಶ್ಲಾಘಿಸಲ್ಪಟ್ಟ ಇವರನ್ನು ಪದವಿ ಹಾಗೂ ಹುದ್ದೆ ಅನಾಯಾಸವಾಗಿ ಹಂತ ಹಂತವಾಗಿ ಅರಸಿ ಬಂದವು .
ಉಪರಾಷ್ಟ್ರಪತಿಯ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅನಂತರ ರಾಷ್ಟ್ರಪತಿ ಸ್ಥಾನಕ್ಕೆ ಸರ್ವಾನುಮತದಿಂದ ನಾಮಕರಣ ಮಾಡಲಾಯಿತು . ರಾಧಾಕೃಷ್ಣನ್ ಅವರ ಸ್ಮರಣೀಯ ಸೇವೆಯನ್ನು ಗುರುತಿಸಿ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ‘ ಭಾರತರತ್ನ’ವನ್ನು ನೀಡಿ ಗೌರವಿಸಲಾಯಿತು
, ಬಸಿನ ಫ್ರಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿತು . ಭಾರತೀಯ ವಿದ್ಯಾಭವನದ ‘ ಬ್ರಹ್ಮವಿದ್ಯಾಭಾಸ್ಕರ ‘ ಬಿರುದಿಗೂ ಪಾತ್ರರಾದರು , ಹೀಗೆ ಇವರಿಗೆ ದೇಶ ವಿದೇಶಗಳ ಹಲವಾರು ಗೌರವ ಪದವಿಗಳು , ಮರಸ್ಕಾರಗಳು ದೊರಕಿದವು ,
ಪ್ರಪಂಚದ ಫ್ಯಾಷನ್ ಎಷ್ಟೇ ಬದಲಾದರೂ ಬಿಸ್ಕೆಟ್ ಬಣ್ಣದ ರೇಷ್ಮೆಯ ನಿಲುವಂಗಿ , ಶುಭ್ರವೂ ನಿರಾಡಂಬರವೂ ಆದ ಬಿಳಿಯ ಪಂಚೆ ಮತ್ತು ರುಮಾಲು ರಾಧಾಕೃಷ್ಣನ್ ಅವರ ವೇಷಭೂಷಣವಾಗಿತ್ತು .
ರಾಧಾಕೃಷ್ಣನ್ ಅವರು ಸಾಹಿತಿಯಾಗಿ ಸಾಕಷ್ಟು ಕೃತಿಗಳನ್ನು ಬರೆದಿದ್ದಾರೆ . ಶಿಕ್ಷಕ ಹುದ್ದೆಯಿಂದ ರಾಷ್ಟ್ರಪತಿ ಹುದ್ದೆಯವರೆಗೆ ಹಂತಹಂತವಾಗಿ ಮೇಲೇರಿದ ಮಹಾನ್ ನಾಯಕ ಕಿಸ್ತಶಕ 1975 ರಲ್ಲಿ ಇಹಲೋಕ ತ್ಯಜಿಸಿದರು .
ಅಭ್ಯಾಸ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,
1. ರಾಧಾಕೃಷ್ಣನ್ ಅವರ ತಂದೆತಾಯಿಯರ ಹೆಸರೇನು ?
ಉತ್ತರ : ರಾಧಾಕೃಷ್ಣನ್ ಅವರ ತಂದೆ ವೀರಸ್ವಾಮಿ , ತಾಯಿ ಸೀತಮ್ಮ .
2 , ರಾಧಾಕೃಷ್ಣನ್ ಅವರ ತಂದೆಯ ಅಪೇಕ್ಷೆ ಏನಾಗಿತ್ತು ?
ಉತ್ತರ : ರಾಧಾಕೃಷ್ಣನ್ ಅವರ ತಂದೆಗೆ ತನ್ನ ಮಗನು ದೇಶೀ ಭಾಷೆಯಾಗಿದ್ದ ಸಂಸ್ಕೃತವನ್ನು ಕಲಿಯಲಿ ಎಂಬ ಅಪೇಕ್ಷೆಯಾಗಿತ್ತು ,
3 , ರಾಷ್ಟ್ರಪತಿಗಳಾಗಿ ಪಡೆಯುತ್ತಿದ್ದ ವೇತನವನ್ನು ರಾಧಾಕೃಷ್ಣನ್ ಅವರು ಹೇಗೆ ಸದುಪಯೋಗ ಪಡಿಸಿಕೊಂಡರು ?
ಉತ್ತರ : ಹತ್ತು ಸಾವಿರ ರೂಪಾಯಿಗಳ ವೇತನದಲ್ಲಿ ಎರಡು ಸಾವಿರದ ಐನೂರು ರುಪಾಯಿಗಳನ್ನು ಮಾತ್ರ ಪಡೆದು , ಉಳಿದ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರನಿಧಿಗೆ ವಂತಿಗೆಯಾಗಿ ನೀಡುತ್ತಿದ್ದರು .
4. ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಯಾವ ಹೆಸರಿನಿಂದ ಆಚರಿಸಲಾಗುತ್ತಿದೆ ?
ಉತ್ತರ : ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ‘ ರಾಷ್ಟ್ರೀಯ ಶಿಕ್ಷಕರ ದಿನ ‘ ಎಂಬ ಹೆಸರಿನಿಂದ ಆಚರಿಸಲಾಗುತ್ತಿದೆ .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ ,
1 , ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಏನು ಹೇಳಿದರು ?
ಉತ್ತರ : “ ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು . ನೀವು ನಮ್ಮನ್ನು ಬಿಟ್ಟು ಹೋಗುತ್ತಿರುವಿರಿ . ನನಗೆ ಇದು ದುಃಖ ನೀಡಿದೆ . ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ . ನಾನು ಹೆಚ್ಚು ಕಾಲ ಬಾಳುವುದಿಲ್ಲ
” ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ ಹೇಳಿದರು .
2. ರಾಧಾಕೃಷ್ಣನ್ ಅವರ ವಿದ್ಯಾಭ್ಯಾಸ ಎಲ್ಲೆಲ್ಲಿ ನಡೆಯಿತು ?
ಉತ್ತರ : ರಾಧಾಕೃಷ್ಣನ್ ಅವರ ವಿದ್ಯಾಭ್ಯಾಸವು ತಿರುಪತಿಯ ಹರ್ಮನ್ಸ್ ಬರ್ಗ್ ಮಿಷನರಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು , ವೆಲ್ಲೂರಿನ ಮೂರ್ ಕಾಲೇಜಿಗೆ ಬಿ . ಎ . ಪೂರ್ವದ ಎರಡು ವರ್ಷಗಳ ಕಾಲ ಪದವಿಗೆ ಸೇರಿದರು .
ಮಿಷನರಿ ಶಾಲೆಯ ಶಿಸ್ತಿನ ತರಬೇತಿಯಿಂದ ರಾಧಾಕೃಷ್ಣನ್ ಅವರ ಮನಸ್ಸು ನಿಧಾನವಾಗಿ ಅಧ್ಯಯನದತ್ತ ವಾಲಿತು . ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ . ಎ . ಪದವಿಗೆ ಸೇರಿದರಲ್ಲದೆ ತತ್ತ್ವಶಾಸ್ತ್ರದ ಉತ್ತಮ ವಿದ್ಯಾರ್ಥಿ ಎನಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು . ತಮ್ಮ ಆಸಕ್ತಿಯ ವಿಷಯವಾದ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದರು . ಹೀಗೆ ರಾಧಾಕೃಷ್ಣನವರು ವಿದ್ಯಾಭ್ಯಾಸ ನಡೆಯಿತು ,
3 , ರಾಧಾಕೃಷ್ಣನ್ ಅವರ ವೇಷಭೂಷಣಗಳ ಬಗ್ಗೆ ಬರೆಯಿರಿ .
ಉತ್ತರ : ರಾಧಾಕೃಷ್ಣನ್ ಅವರ ಬಾಹ್ಯರೂಪ ಎತ್ತರವಾದ ನಿಲುವು , ಬಿಸ್ಕೆಟ್ ಬಣ್ಣದ ರೇಷ್ಮೆಯ ನಿಲುವಂಗಿ , ಶುಭ್ರವೂ ನಿರಾಡಂಬರವೂ ಆದ ಬಿಳಿಯ ಪಂಚೆ ಮತ್ತು ರುಮಾಲು , ಕೋಪಸೂಚಕವಲ್ಲದ ಹುಬ್ಬು , ಯಾವುದೋ ಸಮಸ್ಯೆಯ ಒಳಹೋಗುವಂತಿರುವ ಕಣ್ಣನೋಟ , ಮುಗುಳುನಗೆಯ ಸುಳಿವು ಇವು ಭಾರತೀಯರೆಲ್ಲರಿಗೂ ಪರಿಚಿತ . ಪ್ರಪಂಚದ ಫ್ಯಾಷನ್ ಎಷ್ಟೇ ಬದಲಾದರೂ ರಾಧಾಕೃಷ್ಣನ್ ತಮ್ಮ ವೇಷಭೂಷಣಗಳನ್ನು ಕೊನೆಯವರೆಗೂ ಜತನವಾಗಿ ಉಳಿಸಿಕೊಂಡಿದ್ದರು .
4. ಶಿಕ್ಷಣದ ಮಹತ್ವವನ್ನು ಕುರಿತು ರಾಧಾಕೃಷ್ಣನ್ ಅವರು ಏನು ಹೇಳಿದ್ದಾರೆ ?
ಉತ್ತರ : ಶಿಕ್ಷಣದ ಮಹತ್ವವನ್ನು ಮನಗಂಡ ರಾಧಾಕೃಷ್ಣನ್ ಅವರು “ ಶಿಕ್ಷಣವು ಜೀವನದ ಅವಿಭಾಜ್ಯ ಅಂಗ , ಅದು ಮಾನವನನ್ನು ಪರಿಪೂರ್ಣತೆ ಹಾಗೂ ಸುಸಂಸ್ಕೃತಿಯತ್ತ ಒಯ್ಯುವ ಸಾಧನ ಮಾರ್ಗ ” ಎಂದಿದ್ದಾರೆ . ಮನುಷ್ಯನಿಗೆ ಕಣ್ಣು , ಕಿವಿ , ಬಾಯಿ , ಮುಂತಾದ ಅಂಗಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಶಿಕ್ಷಣ ಎಂದಿದ್ದಾರೆ .
5. ರಾಧಾಕೃಷ್ಣನ್ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಯಾವುವು ?
ಉತ್ತರ : ರಾಧಾಕೃಷ್ಣನ್ ಅವರ ಸ್ಮರಣೀಯ ಸೇವೆಯನ್ನು ಗುರುತಿಸಿ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ‘ ಭಾರತರತ್ನ’ವನ್ನು ನೀಡಿ ಗೌರವಿಸಲಾಯಿತು . ಬ್ರಸೆಲ್ಸ್ನ ಮೈ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿತು .
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಭಾರತೀಯ ವಿದ್ಯಾಭವನದ ‘ ಬ್ರಹ್ಮವಿದ್ಯಾಭಾಸ್ಕರ ‘ ಬಿರುದಿಗೂ ಪಾತ್ರರಾದರು ಹೀಗೆ ಇವರಿಗೆ ದೇಶ ವಿದೇಶಗಳ ಹಲವಾರು ಗೌರವ ಪದವಿಗಳು , ಮರಸ್ಕಾರಗಳು ದೊರಕಿದವು .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,
1 ) ರಾಧಾಕೃಷ್ಣನ್ ಅವರು ಅಧ್ಯಾಪಕರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ವಿವರಿಸಿ .
ಉತ್ತರ : ರಾಧಾಕೃಷ್ಣನ್ ಅವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು , ಸಯ್ಯದ್ ಪೇಟೆಯ ಟೀಚರ್ ಟ್ರೈನಿಂಗ್ ಕಾಲೇಜು , ಆಂಧ್ರದ ಅನಂತಪುರ ಹಾಗೂ ರಾಜಮಂಡ್ರಿಯ ಸರ್ಕಾರಿ ಕಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು .
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ತ್ವಶಾಸ್ತ್ರದ ಉಪಪ್ರಾಧ್ಯಾಪಕರಾಗಿ ಹಾಗೂ ಕೋಡ್ಕೊತಾದಲ್ಲಿ ( ಹಿಂದಿನ ಕಲ್ಕತ್ತಾ ) ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಸ್ಮರಣೀಯ . ಇದಲ್ಲದೆ ಆಂಧ್ರ , ದೆಹಲಿ , ಬನಾರಸ್ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ , ಅವುಗಳ ಪುರೋಭಿವೃದ್ಧಿಗೆ ಶ್ರಮಿಸಿದರು .
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲೂ ಸಂದರ್ಶಕ ಪ್ರಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು . ರಾಧಾಕೃಷ್ಣನ್ ಅವರ ಬೋಧನಾ ಶೈಲಿ , ನಿರರ್ಗಳತೆ , ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು ,
ತಮ್ಮ ಪಾದ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು ,
2 ) ರಾಧಾಕೃಷ್ಣನ್ ಅವರಿಗೆ ಮೈಸೂರಿನಲ್ಲಿ ನೀಡಿದ ಬೀಳ್ಕೊಡುಗೆಯ ವಿಶೇಷತೆಯನ್ನು ಕುರಿತು ವಿವರಿಸಿ ,
ಉತ್ತರ : ಕೋಲ್ಗೊತ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ಕೊಟ್ಟಂತಹ ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು .
ಅಂದಿನ ವಾತಾವರಣದಲ್ಲಿದ್ದುದು ವೈಭವಕ್ಕಿಂತ ಹೆಚ್ಚಾಗಿ ಹೃದಯದಿಂದ ನೇರವಾಗಿ ಹೊರಹೊಮ್ಮಿದ ಗುರುಪ್ರೇಮ , ವಿದ್ಯಾರ್ಥಿಗಳೆಲ್ಲರಲ್ಲೂ ಭಕ್ತಿಪ್ರೇಮದ ಚಿಲುಮೆ ಉಕ್ಕಿಬಂತು .
ರಾಧಾಕೃಷ್ಣನ್ ಅವರನ್ನು ಮಹಾರಾಜ ಕಾಲೇಜಿನಿಂದ ರೈಲು ನಿಲ್ದಾಣಕ್ಕೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆಯನ್ನು ಕಟ್ಟಲಿಲ್ಲ . ಸ್ವತಃ ವಿದ್ಯಾರ್ಥಿಗಳೇ ಎಳೆದೊಯ್ದರು .
ಧಾಕೃಷ್ಣನ್ ಅವರಿಗಾಗಿ ಕಾದಿರಿಸಿದ್ದ ಕಂಪಾರ್ಟ್‌ಮೆಂಟ್‌ನ್ನು ಒರಗು ದಿಂಬು ಹಾಗೂ ರತ್ನಗಂಬಳಿಯನ್ನು ಹಾಸಿ ಮಲಗುವ ಸೀಟನ್ನು ನೆಲವನ್ನು ಹೂವಿನಿಂದ ಸುಪ್ಪತ್ತಿಗೆಯಂತೆ ಮಾಡಿ ದೈವಮಂದಿರವನ್ನು ಭಕ್ತರು ಅಲಂಕಾರ ಮಾಡುವಂತೆ ಮಾಡಿದ್ದರು .
“ ರಾಧಾಕೃಷ್ಣನ್ ಅವರಿಗೆ ಜಯವಾಗಲಿ ” ಎಂಬ ಕೂಗು ರೈಲ್ವೆ ಸ್ಟೇಷನ್ನಿನ ಆವರಣದಲ್ಲೆಲ್ಲ ಮೊಳಗುತ್ತಿತ್ತು . ಆ ದಿನ ಭಾವೋದ್ರೇಕದಿಂದ ಆದಷ್ಟು ಜನ ಅತ್ತರೋ , ವಿದ್ಯಾರ್ಥಿಗಳು ತೋರಿದ ವಿಶ್ವಾಸ ಅವರ ಕಣ್ಣಿನಲ್ಲೂ ನೀರು ತಂದಿತು .
3) . ಹಿಂದೂ ಧರ್ಮ ಮತ್ತು ತತ್ತ್ವಶಾಸ್ತ್ರದ ಬಗ್ಗೆ ರಾಧಾಕೃಷ್ಣನ್ ಅಭಿಪ್ರಾಯವೇನು ? ವಿವರಿಸಿ
ಉತ್ತರ : ರಾಧಾಕೃಷ್ಣನ್ ಅವರು ಹಿಂದೂ ಧರ್ಮದ ತತ್ವಶಾಸ್ತ್ರ ಮತ್ತು ಸಾಹಿತ್ಯವನ್ನೆಲ್ಲ ಅಧ್ಯಯನ ಮಾಡಿದರು . ಯೂರೋಪಿಯನ್ ತತ್ತ್ವಶಾಸ್ತ್ರ ಮತ್ತು ಸಾಹಿತ್ಯದ ಅಭಿವ್ಯಕ್ತಿ ವಿಚಾರಗಳಿಂದ ಅವರ ವಿಶ್ವದೃಷ್ಟಿ ಮತ್ತು ತಾತ್ವಿಕ ದೃಷ್ಟಿಕೋನ ಪ್ರಭಾವಿತವಾಯಿತು .
ಸ್ವಾಮಿ ವಿವೇಕಾನಂದರ ವಿಚಾರಧಾರೆ ಅವರ ಮನವನ್ನು ಆಕರ್ಷಿಸಿತು . ಅವರು “ ಹಿಂದೂ ಧರ್ಮವು ಒಂದು ವೈಚಾರಿಕ ಜೀವನ ಮಾರ್ಗವೆಂದೂ , ನೈತಿಕ ಗುಣಾತ್ಮಕ ವಿಷಯಗಳಿಂದ ಕೂಡಿದ್ದು , ಮಾನವನ ಆಂತರಿಕ ಜೀವನದ ಬಗ್ಗೆ ಪ್ರಾಮುಖ್ಯತೆವುಳ್ಳದ್ದಾಗಿದೆ . ಹಿಂದೂಧರ್ಮವಾಗಲಿ , ವೇದಾಂತವಾಗಲಿ ಅಸತ್ಯವನ್ನು ಹೇಳುವುದಿಲ್ಲ .
ಭಾರತೀಯ ಚಿಂತನೆಗಳು ಯಾವುದೇ ವಿಚಿತ್ರ ಮತ್ತು ನಿಗೂಢ ಪರಿಕಲ್ಪನೆಗಳಾಗಿಲ್ಲ ಜೀವನದ ನಾಡಿಮಿಡಿತಗಳನ್ನು ಸೂಕ್ಷ್ಮ ಮನಸ್ಸಿನ ಚಿಂತನೆಗಳನ್ನು ತಿಳಿಯಪಡಿಸುವುದಾಗಿದೆ ” ಎಂದು ಸರಳವಾಗಿ ಹೇಳಿದರು .
ಈ ) ಕೊಟ್ಟಿರುವ ವಾಕ್ಯಗಳ ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ ,
9th Adarsha shikshaka sarvepalli radhakrishnan kannada notes pdf
1 , ನೀವೊಬ್ಬರೆ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ . ರತ್ನಮ್ಮ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ ನೆಹರೂ ಅವರು ರಾಧಾಕೃಷ್ಣನ್ ಅವರನ್ನು ಮಾಸ್ಕೋದಲ್ಲಿ ಭಾರತದ ರಾಯಭಾರಿಯಾಗಿ ನೇಮಿಸಿ ಕಳುಹಿಸಿದರು , ರಷ್ಯಾದ ಅಧ್ಯಕ್ಷರಾಗಿದ್ದ ಸ್ಟಾಲಿನ್
ಅವರ ಸ್ನೇಹ ಸೌಹಾರ್ದಗಳ ಭೇಟಿ ಫಲಪ್ರದವಾಗಿ ಮತ್ತೆ ಭಾರತಕ್ಕೆ ಹಿಂತಿರುಗುವ ಸಂದರ್ಭದಲ್ಲಿ ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ ಹೇಳಿದರು .
ಸ್ವಾರಸ್ಯ : ರಷ್ಯಾದ ಅಧ್ಯಕ್ಷರಾಗಿದ್ದ ಸ್ಟಾಲಿನ್ ಅವರನ್ನು ಇಡೀ ರಷ್ಯಾ ದೇಶವೇ ಒಂದು ರೀತಿ ನೋಡಿದರೆ ರಾಧಾಕೃಷ್ಣನ್ ಅವರು ಬೇರೆ ರೀತಿ ನೋಡಿದ್ದಾರೆ . ಇವರ ಸ್ನೇಹಪರತೆ , ಸನ್ನಡತೆಗಳು ಸ್ವಾರಸ್ಯಕರವಾಗಿದೆ
2. “ ಆರ್ಥಿಕ ಪರಿಸ್ಥಿತಿ ತಮ್ಮ ಸಾಧನೆಯಲ್ಲಿ ನಿವಾರಿಸಲಾಗದ ತೊಡಕೆಂದು ಭಾವಿಸಲಿಲ್ಲ ”
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ . ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ
ಸಂದರ್ಭ ; ರಾಧಾಕೃಷ್ಣನ್ ಅವರು ವಿದ್ಯಾರ್ಥಿಯಾಗಿದ್ದಾಗ ಮನೆಯ ಜವಾಬ್ದಾರಿ ಹೊತ್ತ ಇವರು ಕಿರಿಯ ಸಹಪಾಠಿಗಳಿಗೆ ಮನೆಯ ಪಾಠ ಹೇಳಿ ಹಣಗಳಿಸುತ್ತಿದ್ದರು , ಆರ್ಥಿಕ ಪರಿಸ್ಥಿತಿ ತಮ್ಮ ಸಾಧನೆಯಲ್ಲಿ ನಿವಾರಿಸಲಾಗದ ತೊಡಕೆಂದು ಭಾವಿಸಲಿಲ್ಲ .
ಬಡತನದ ಬೇಗೆಯಲ್ಲೇ ತಮ್ಮ ಆಸಕ್ತಿಯ ವಿಷಯವಾದ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದರು . ಆ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಸಾಧನೆ ಮಾಡುವ ಮನಸೊಂದು ಇದ್ದರೆ ಸಾಕು ಏನಾದರೂ ಒಂದು ಸಾಧನೆ ಮಾಡಬಹುದು , ರಾಧಾಕೃಷ್ಣನ್ ಅವರು ವಿದ್ಯಾಭ್ಯಾಸ ಮಾಡುವಾಗ ಅವರ ಮನೆಯ ಪರಿಸ್ಥಿತಿ ಅಷ್ಟು ಚನ್ನಾಗಿ ಇರಲಿಲ್ಲ ಆದರೂ ಮನೆ ಪಾಠ ಹೇಳಿ ತತ್ವಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿರುವುದನ್ನು ಸ್ವಾರಸ್ಯಕರವಾಗಿ ವರ್ಣಿಸಲಾಗಿದೆ
3 “ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು ”
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ , ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ರಾಧಾಕೃಷ್ಣನ್ ಅವರ ಬೋಧನಾ ಶೈಲಿ , ನಿರರ್ಗಳತೆ , ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು . ತಮ್ಮ ಪ್ರಾಧ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು . ಆ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಶಿಕ್ಷಕನೊಬ್ಬನ ಗೌರವವು ಬೋಧನೆಯಿಂದಲೇ ವೃದ್ಧಿಸುತ್ತದೆ . ಜತೆಗೆ ವ್ಯಕ್ತಿತ್ವದ ಸೌಜನ್ಯ , ಸ್ನೇಹಶೀಲತೆ ಎಲ್ಲರ ಗಮನವನ್ನೂ ಸೆಳೆಯುತ್ತದೆ . ಎಂಬುದು ಸ್ವಾರಸ್ಯಕರವಾಗಿದೆ .
4. “ ಆಶೋಕನು ಕಳಿಂಗ ಯುದ್ಧದ ಅನಂತರ ಶ್ರೇಷ್ಠ ಮನುಷ್ಯನಾದಂತೆ ನೀವೂ ಆಗುವಿರಿ ”
ಆಯ್ಕೆ : ಈ ವಾಕ್ಯವನ್ನು ಕೆ , ಎಸ್ , ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಸ್ಟಾಲಿನ್ ಅವರು ಭಾಷಣ ಮಾಡುವ ಸಂದರ್ಭದಲ್ಲಿ ರಾಧಾಕೃಷ್ಣನ್ ಅವರ ಪ್ರಥಮ ಭೇಟಿಯ ಮಾತುಗಳನ್ನು ಸ್ಮರಿಸಿಕೊಂಡರು .
ಸ್ವಾರಸ್ಯ : ರಷ್ಯಾ ದೇಶದ ಅಧ್ಯಕ್ಷರಾದ ಸ್ಟಾಲಿನ್ ಅವರನ್ನು ಬೇರೆಯವರು ನೋಡಿ ಮಾತನಾಡಿಸಿದ ರೀತಿಯೇ ಬೇರೆ ರಾಧಾಕೃಷ್ಣನ್ ಅವರು ನೋಡಿದ ರೀತಿಯೇ ಬೇರೆ ಎಂಬುದು ಸ್ವಾರಸ್ಯಕರವಾಗಿದೆ .
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ . ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ ,
ಸಂದರ್ಭ : ಕೆನಡಾ ದೇಶದ ರೇಡಿಯೋ ಪ್ರಸಾರ ಭಾಷಣದಲ್ಲಿ “ ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ” ಎಂದು ತಮ್ಮ ನಿಲುವನ್ನು ಅಭಿವ್ಯಕ್ತಿಸಿದ ಸಂದರ್ಭದಲ್ಲಿ ರಾಧಾಕೃಷ್ಣನ್ ಅವರು ಈ ಮಾತನ್ನು ಹೇಳಿದ್ದಾರೆ ,
ಸ್ವಾರಸ್ಯ : ಪ್ರತಿಯೊಂದು ಧರ್ಮದ ಅಂತಿಮ ಸತ್ಯ ಒಂದೇ . ಪ್ರತಿ ಧರ್ಮವೂ ಅದರ ಶ್ರೇಷ್ಟ ಗುಣವನ್ನು ತೋರುತ್ತದೆ . ಅದು ಮಾನವತೆಯೇ ಎಂಬ ರಾಧಾಕೃಷ್ಣನ್ ಅವರ ಮಾತಿನಲ್ಲಿ ಸ್ವಾರಸ್ಯಕರವಾಗಿದೆ .
ಉ ) ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ .
1. ರಾಧಾಕೃಷ್ಣನ್ ಅವರ ಸಾಧನೆಯಲ್ಲಿ ವಿಶೇಷ ಸಹಕಾರ ನೀಡಿದವರು…………………………….
( ತಂದೆ , ತಾಯಿ , ಪತ್ನಿ , ಸಹೋದರಿ )
2. ಮದಾಸ್ತಿನ ಕಿಶ್ಚಿಯನ್ ಶಾಲೆಯಲ್ಲಿ ರಾಧಾಕೃಷ್ಣನ್ ಅವರು ಉತ್ತಮ ವಿದ್ಯಾರ್ಥಿ ಎಂದು ಪರಿಗಣಿಸಲ್ಪಟ್ಟ ವಿಷಯ………………………
( ಸಮಾಜಶಾಸ್ತ್ರ , ರಾಜ್ಯಶಾಸ್ತ್ರ , ಧರ್ಮಶಾಸ್ತ್ರ , ತತ್ತ್ವಶಾಸ್ತ್ರ )
3. ರಾಧಾಕೃಷ್ಣನ್ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ವಿಶ್ವವಿದ್ಯಾನಿಲಯ…………….
( ಬನಾರಸ್ , ಕೇಂಬ್ರಿಡ್ , ಆಕ್ಸ್‌ಫರ್ಡ್ , ಉಸ್ಮಾನಿಯ )
4 , “ ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ” ಎಂದು ರಾಧಾಕೃಷ್ಣನ್ ಅವರು ರೇಡಿಯೋ ಪ್ರಸಾರ ಭಾಷಣ ಮಾಡಿದ ದೇ………………………
( ಇಂಗ್ಲೆಂಡ್ , ಕೆನಡಾ , ಆಮೇರಿಕ , ರಷ್ಯಾ )
5. ಭಾರತ ಮತ್ತು ರಷ್ಯಾದ ಬಾಂಧವ್ಯವನ್ನು ವೃದ್ಧಿಗೊಳಿಸಿದ ರಾಧಾಕೃಷ್ಣನ್ ಅವರನ್ನು ಪ್ರಶಂಸಿಸಿದವರು…………….
( ಮಹಾತ್ಮಗಾಂಧೀಜಿ , ಜವಾಹರಲಾಲ್ ನೆಹರು ಸ್ಟಾಲಿನ್ , ಸಿಇ.ಎಂ , ಜೋಡ್ )
ಸರಿಯುತ್ತರಗಳು ,
I , ಪತ್ನಿ
2. ತತ್ವಶಾಸ್ತ್ರ
3 , ಆಕ್ಸ್ ಫರ್ಡ್
4 ಕಿನಂಶ
5 , ಜವಾಹರಲಾಲ್ ನೆಹರು
ಊ) ಹೊಂದಿಸಿ ಬರೆಯಿರಿ ,
9th Adarsha Shikshaka Sarvepalli Radhakrishnan Notes in Kannada
“ಅ” ಪಟ್ಟಿ “ಆ” ಪಟ್ಟಿ
1 , ಸ್ಟಾಲಿನ್ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ
2 , ಹರ್ಮನ್ಸ್ ಬರ್ಗ್ ಮಿಷನರಿ ಶಾಲೆ
3 , ಭಾರತೀಯ ವಿದ್ಯಾಭವನ ಮಾಸ್ಕೊ
4 , ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಬ್ರಹ್ಮವಿದ್ಯಾಭಾಸ್ಕರ
5, ಸೆಪ್ಟೆಂಬರ್ 05 ಬ್ರಹ್ಮವಿದ್ಯಾಭಾಸ್ಕರ
ಸ್ವಾತಂತ್ರ್ಯ ದಿನಾಚರಣೆ ,
ಉತ್ತರಗಳು :
1 ಮಾಸ್ಕೋ
2 ಮಿಷನರಿ ಶಾಲಿ
3 , ಬ್ರಹ್ಮವಿದ್ಯಾಭಾಸ್ಕರ
4. ವಿಶ್ವವಿದ್ಯಾಲಯ
5. ರಾಷ್ಟ್ರೀಯ ಶಿಕ್ಷಕರ ದಿನಾಚರಣೆ
ಭಾಷಾ ಚಟುವಟಿಕೆ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1 , ಜಶ್ತ್ವ ಸಂಧಿಯ ಸೂತ್ರವೇನು ?
ಉತ್ತರ : ಪೂರ್ವಪದದ ಕೊನೆಯಲ್ಲಿರುವ ವರ್ಗ ಪ್ರಥಮಾಕ್ಷರಕ್ಕೆ ಅಂದರೆ ಕ್ ಚ್ ಟ್ ತ್ ಪ್ ಗಳಿಗೆ ಅದೇ ವರ್ಗದ ತೃತೀಯಾಕ್ಷರಗಳು ಅಂದರೆ ಗ್ ಜ್ ಡ್ ದ್ ಬ್ ” ಗಳು ಅಂದರೆ ಜಶ್ ಅಕ್ಷರಗಳು ಆದೇಶವಾಗಿ ಬಂದರೆ ಅದೇ ಜಶ್ತ್ವ ಸಂಧಿ .
2. ಶ್ಚುತ್ವ ಸಂಧಿಯನ್ನು ನಿದರ್ಶನದೊಂದಿಗೆ ವಿವರಿಸಿ
. ಉತ್ತರ : ಸ ಕಾರ ತ ವರ್ಗಗಳಿಗೆ ಈ ಕಾರ ಚ ವರ್ಗಗಳು ಅಂದರೆ ಶ್ಚು ಅಕ್ಷರಗಳು ಆದೇಶವಾಗಿ ಬರುವುದಕ್ಕೆ ಶ್ಚುತ್ವ ಸಂದಿ ಎನ್ನುವರು
ಮನಸ್ + ಶಾಂತಿ = ಮನಶ್ಯಾಂತಿ
ಶರತ್ + ಚಂದ್ರ = ಶರಚ್ಚಂದ್ರ
ಜಗತ್ + ಜ್ಯೋತಿ = ಜಗಜ್ಯೋತಿ
ಆ ) ಕೊಟ್ಟಿರುವ ಪದಗಳ ಸಮಾಸ ಹೆಸರಿಸಿ ,
ಮುಕ್ಕಣ್ಣ , ಹಣೆಗಣ್ಣ
– ಮೂರು ಕಣ್ಣು ಉಳ್ಳವನು = ಮುಕ್ಕಣ್ಣ = ಶಿವ
– ಹಣೆಯಲ್ಲಿ ಕಣ್ಣುಳ್ಳವನು = ಹಣೆಗಣ್ಣ = ಶಿವ
ಇ ) ಕೊಟ್ಟಿರುವ ಪದಗಳ ಸಂಧಿ ಹೆಸರಿಸಿ
ವಾಗ್ಗೇವಿ ಚಿದಾನಂದ
ವಾಕ್ + ದೇವಿ = ವಾಗ್ರೇವಿ .
ಚಿತ್ + ಆನಂದ = ಚಿದಾನಂದ
FAQ :
ಉತ್ತರ : ರಾಧಾಕೃಷ್ಣನ್ ಅವರ ತಂದೆ ವೀರಸ್ವಾಮಿ , ತಾಯಿ ಸೀತಮ್ಮ .
ಉತ್ತರ : ರಾಧಾಕೃಷ್ಣನ್ ಅವರ ತಂದೆಗೆ ತನ್ನ ಮಗನು ದೇಶೀ ಭಾಷೆಯಾಗಿದ್ದ ಸಂಸ್ಕೃತವನ್ನು ಕಲಿಯಲಿ ಎಂಬ ಅಪೇಕ್ಷೆಯಾಗಿತ್ತು ,
ಉತ್ತರ : ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ‘ ರಾಷ್ಟ್ರೀಯ ಶಿಕ್ಷಕರ ದಿನ ‘ ಎಂಬ ಹೆಸರಿನಿಂದ ಆಚರಿಸಲಾಗುತ್ತಿದೆ.
ಇತರೆ ವಿಷಯಗಳು:
9th Standard All Subject Notes
9th Standard Kannada Textbook karnataka Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
This is. So helpfull