9th Standard Prajanishte Question and Answer | 9ನೇ ತರಗತಿ ಪ್ರಜಾನಿಷ್ಠೆ ಕನ್ನಡ ಪಾಠ ನೋಟ್ಸ್

Contents

9th Standard Prajanishte Question and Answer Notes | 9ನೇ ತರಗತಿ ಪ್ರಜಾನಿಷ್ಠೆ ಕನ್ನಡ ಪಾಠ ನೋಟ್ಸ್

9ನೇ ತರಗತಿ ಪ್ರಜಾನಿಷ್ಠೆ ಕನ್ನಡ ಪಾಠ ನೋಟ್ಸ್ ಪ್ರಶ್ನೆ ಉತ್ತರ, 9th Standard Prajanishte Question and answer Notes 9th class prajanishte lesson pdf

9ನೇ ತರಗತಿ ಕನ್ನಡ ಪ್ರಜಾನಿಷ್ಠೆ ನೋಟ್ಸ್ ಪ್ರಶ್ನೆ ಉತ್ತರ ಗೈಡ್ ಪ್ರಜಾನಿಷ್ಠೆ 9th prajaanishte Notes Question Answer Prajaanishte chapter quastion and answer

 

ಗದ್ಯ ಭಾಗ 5.

 

ಪ್ರಜಾನಿಷ್ಠೆ

  • ಸಾ.ಶಿ .ಮರುಳಯ್ಯ

 

ಕೃತಿಕಾರರ ಪರಿಚಯ

 

 ಸಾ . ಶಿ .ಮರುಳಯ್ಯ : ಶ್ರೀ ಸಾಸಲು ಶಿವರುದ್ರಯ್ಯ ಮರುಳಯ್ಯ ಇವರು ಕ್ರಿ.ಶ. 1931 ರಲ್ಲಿ              ತುಮಕೂರು

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಜನಿಸಿದರು .

             ಇವರ ತಂದೆ ಶಿವರುದ್ರಯ್ಯ , ತಾಯಿ ಸಿದ್ದಮ್ಮ , ಇವರು ಕ್ರಿಶ 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ  ಕನ್ನಡ ಎಂ . ಎ . ಪದವಿಯನ್ನು ಮತ್ತು ಕ್ರಿ ಶ 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ‘ ಕೆಳದಿಯ   ಅರಸರು ಮತ್ತು ಕನ್ನಡ ಸಾಹಿತ್ಯ ‘ ಕುರಿತ ಮಹಾಪ್ರಬಂಧಕ್ಕೆ ಪಿಎಚ್.ಡಿ . ಪದವಿಯನ್ನು ಪಡೆದರು .

ಕ್ರಿ . ಶ . 1999 ರಿಂದ 1998 ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು . ರಾಜ್ಯಭಾಷಾ ಆಯೋಗದ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸಿದರು .

ಇವರು ಶಿವತಾಂಡವ , ಕೆಂಗನಕಲ್ಲು , ವಚನ ವೈಭವ , ನೆಲದ ಸೊಗಡು , ನಾಟ್ಯ ಮಯೂರಿ ,

ವಿಜಯ ವಾತಾಪಿ ಮೊದಲಾದ ೨೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ .

ಶ್ರೀಯುತರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ದೇವರಾಜ್ ಬಹದ್ದೂರ್ ಪ್ರಶಸ್ತಿಗ್ಗಳನ್ನು ನೀಡಿ ಗೌರವಿಸಲಾಗಿದೆ . ಇವರು ದಿನಾಂಕ 5-12-2016 ರಂದು ವಿಧಿವಶರಾದರು .

ಪ್ರಕೃತ ‘ ಪ್ರಜಾನಿಷ್ಠೆ ‘ ಗದ್ಯಪಾಠವನ್ನು ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದು ನಿಗದಿಪಡಿಸಿದೆ

.

 

ಆಶಯ ಭಾವ

ಹೊಯ್ಸಳ ವಂಶದ ಪ್ರಸಿದ್ಧ ದೊರೆ ವಿಷ್ಣುವರ್ಧನ , ಆತನ ಮಹಾರಾಣಿ ಶಾಂತಲಾದೇವಿ . ಪ್ರಜಾಪ್ರೇಮಿಯಾಗಿದ್ದ ಈಕೆಯು ಒಮ್ಮೆ ಮಾರುವೇಷದಲ್ಲಿ ರಾಜ್ಯ ಸಂಚಾರ ಮಾಡುತ್ತಿದ್ದಳು .

ಆ ಸಮಯದಲ್ಲಿ ಪ್ರಜೆಗಳ ಪಾಮಾಣಿಕತೆಯನ್ನು ಕಂಡಳು . ಭೂಮಿಯಲ್ಲಿ ದೊರಕಿದ ಸಂಪತ್ತು ಪ್ರಜೆಗಳಿಗೆ ಸೇರಿದ್ದಾದ್ದರಿಂದ ಅದನ್ನು ಪ್ರಜೆಗಳಿಗಾಗಿಯೇ ಬಳಸಬೇಕು ಎಂಬ ಅಭಿಪ್ರಾಯದಂತ ದೇವಾಲಯ ನಿರ್ಮಾಣಕ್ಕೆ ಆ ಸಂಪತ್ತನ್ನು ಬಳಸಲು ಮಾಡಿದ ತೀರ್ಮಾನವನ್ನು ಈ ಪ್ರಜಾನಿಷ್ಟ ಎಂಬ ಪಾಠದಲ್ಲಿ ಕಾಣಬಹುದಾಗಿದೆ .

ಪದಗಳ ಅರ್ಥ

ಕಿಸುರು = ಕೆಂಪು ಬಣ್ಣ

ಕೊಪ್ಪರಿಗೆ – ಅಗಲವಾದ ಬಾಯಿಯುಳ್ಳ ಲೋಹದ ಪಾತ್ರ

ಗಾವುಂಡ = ಗ್ರಾಮದ ಮುಖ್ಯಸ್ಥ

ಚೈತ್ರಯಾತ್ರೆ – ವಿಜಯಯಾತ್ರೆ

ದೈವದವರು – ಊರಿನ ಹಿರಿಯರು , ಕುಲದ ಹಿರಿಯರು .

ಪ್ರವರ್ಧಮಾನ – ಅಭಿವೃದ್ಧಿ ಹೊಂದುವುದು ,

 

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

Prajanishte Question and Answer in one sentence

1 , ಚೋಳರು ಮತ್ತು ಹೊಯ್ಸಳರ ನಡುವೆ ಎಲ್ಲಿ ಯುದ್ಧ ನಡೆಯಿತು ?

ಉತ್ತರ : ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆಯಿತು ,

೨. ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ಯಾರು ?

ಉತ್ತರ : ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ರಾಣಿ ಶಾಂತಲಾದೇವಿ ,

3 , ಬನದಮ್ಮನ ಹಳ್ಳಿಯ ಜನರು ಎಲ್ಲಿ ಪಂಚಾಯಿತಿ ಸೇರಿದ್ದರು ?

ಉತ್ತರ : ಬನದಮ್ಮನ ಹಳ್ಳಿಯ ಜನರು ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ಪಂಚಾಯಿತಿ ಸೇರಿದ್ದರು

4. ಬನದಮ್ಮನಹಳ್ಳಿಯ ಪಂಚಾಯಿತಿಯಲ್ಲಿ ಯಾವ್ಯಾರ ನಡುವಿನ ನ್ಯಾಯ ತೀರ್ಮಾನವಾಗುತ್ತಿತ್ತು ?

ಉತ್ತರ : ಬನದಮ್ಮನಹಳ್ಳಿಯ ಪಂಚಾಯಿತಿಯಲ್ಲಿ ಈರಣ್ಣ ಮತ್ತು ಬೀರಣ್ಣನ ನಡುವೆ – ನ್ಯಾಯ ತೀರ್ಮಾನವಾಗುತ್ತಿತ್ತು .

 

ಅ ) ಕೊಟ್ಟಿರುವ ಪ್ರಶ್ನೆಗಳಿಗೆ 3-4 ವಾಕ್ಯದಲ್ಲಿ ಉತ್ತರಿಸಿ .

9th class Prajanishte Question and Answer in sentence 3-4

1, ಹಲವರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ದೊರೆ ವಿಷ್ಣುವರ್ಧನನು ಏನೆಂದು ಹೇಳಿದನು ?

.             ಹಲವರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ದೊರೆ ಉತ್ತರ ವಿಷ್ಣುವರ್ಧನನು ಸುಲಭವಾಗಿ ಸುಲಭವಾಗಿ ತಲಕಾಡನ್ನು ವಶಪಡಿ ವಶಪಡಿಸಿಕೊಂಡನು . ಎಂಡನು . ಸಮಸ್ತ ಸೇನೆಯು ‘ ತಲಕಾಡುಗೊಂಡನಿಗೆ ಜಯವಾಗಲಿ ‘ ಎಂದು ಜೈಕಾರ ಹಾಕಿತು ,

ಹಲವರು ತಲಕಾಡು ನಗರವನ್ನು ಲೂಟಿ ಮಾಡಬೇಕೆಂದು ಇಚ್ಚಿಸಿದರು . ಆಗ ವಿಷ್ಣುವರ್ಧನನು “ ಕೆಚ್ಚೆದೆಯ ಕಟ್ಟಾಳುಗಳೇ , ಇದು ನಮ್ಮ ವಿಜಯದ ದಿನವೆಂದು ತಿಳಿದು ಮೈಮರೆಯಬಾರದು .

ಇದು ನಮ್ಮ ಸತ್ಯ ಪರೀಕ್ಷೆಯ ಸಮಯವೂ ಹೌದು . ಆದ್ದರಿಂದ ಎಷ್ಟೇ ಸ್ಥಾನಮಾನ ಪದವಿ ಪ್ರಶಸ್ತಿಗಳು ಲಭಿಸಲಿ , ಮಾನವ ತನ್ನ ಮಾನವೀಯ ಗುಣಗಳನ್ನು ಮಾತ್ರ ಗಾಳಿಯಲ್ಲಿ ತೂರಿಬಿಡಬಾರದು .

ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮ ಅಲ್ಲ ; ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು ಯುದ್ಧ ಧರ್ಮವಲ್ಲ .

ಆ ಕಾರಣ ನೀವೆಲ್ಲರೂ ತಲಕಾಡಿನವರನ್ನು ತಮ್ಮವರೆಂದೇ * ಮನೋಭೀತಿಯನ್ನು ದೂರ ಮಾಡಿ ಶಾಂತಿ ಸ್ಥಾಪನೆ ಮಾಡಿ , ನಾಲ್ಕು ದಿನಗಳಾದ ಮೇಲೆ ರಾಜಧಾನಿಗೆ ಹಿಂದಿರುಗೋಣ , ” ಎಂದು ಹೇಳಿದರು .

2. ತಲಕಾಡಿನ ಊಟಿಯ ವಿಚಾರದಲ್ಲಿ ವಿಷ್ಣುವರ್ಧನನ ನಿಲುವೇನು ?

ಉತ್ತರ : ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆಯಿತು . ಈ ಈ ಯುದ್ಧದಲ್ಲಿ ಆದಿಯಮನು ಮಡಿದು , ತಲಕಾಡು ವಿಷ್ಣುವರ್ಧನನ ಕೈ ವಶವಾಯಿತು .

ಅನೇಕರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ವಿಷ್ಣುವರ್ಧನನು ಅದಕ್ಕೆ ಅವಕಾಶ ಕೊಡಲಿಲ್ಲ . “ ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮವಲ್ಲ .

ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು . ಯದ್ಧ ಧರ್ಮವಲ್ಲ . ಆದ್ದರಿಂದ ತಲಕಾಡಿನ ಜನ ತಮ್ಮವರೆಂದೇ ತಿಳಿದು ನಡೆದುಕೊಳ್ಳಿ , ಅವರ ಮನೋಭೀತಿಯನ್ನು ದೂರ ಮಾಡಿ ಶಾಂತಿ ಸ್ಥಾಪನೆ ಮಾಡಿ ” ಎಂದು ವಿಷ್ಣವರ್ಧನನು ತನ್ನ ಸೈನಿಕರಿಗೆ ಹೇಳಿದನು .

3 , ಬನದಮ್ಮನ ಹಳ್ಳಿಯ ದೇವಾಲಯದ ಮುಂದೆ ಯಾವ ವಿಚಾರವಾಗಿ ಚರ್ಚೆ ನಡೆದಿತ್ತು ?

ಉತ್ತರ : ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ನೂರಾರು ಜನರು ಒಂದು ಪಂಚಾಯಿತಿ ಸೇರಿದ್ದರು . ಬೀರಣ್ಣ ತನ್ನ ಮೂಡಲ ದಿಕ್ಕಿನಲ್ಲಿರುವ ಹಳ್ಳಿ ಹೊಲವನ್ನು ಈರಣ್ಣನಿಗೆ ನೂರಾ ಎಂಟು ಹೊನ್ನಿಗೆ ಕೊಟ್ಟಿದ್ದ ಎರಡು ವರ್ಷಗಳ – ಹೊಲದಲ್ಲಿ ಉಳುಮೆ ಮಾಡೋವಾಗ ನಿನ್ನೆ ದಿನಾ ಒಂದು ಕೊಪ್ಪರಿಗೆ ಬಂಗಾರ ಸಿಗುತ್ತದೆ .

ಇದನ್ನು ಈರಣ್ಣ ಪೂಜೆ ಮಾಡಿ ಬೀರಣ್ಣನ ಮನೆಗೆ ತೆಗೆದುಕೊಂಡು ಹೋಗಿ , ‘ ತೆಗೆದುಕೊಳ್ಳಷ್ಟ ಇದು ನೀನು ಕೊಟ್ಟ ಹೊಲದಾಗೆ ಸಿಕ್ಕಿತು … ಯಾರೋ ನಿನ್ನ ಹೂರ್ವಿಕರು ನಿನಗಾಗಿ ಇಟ್ಟುದು ಅಂತಾ ಕಾಣಿಸುತ್ತದೆ ‘ ಎಂದು ಹೇಳಿದನು .

ಆದರೆ ಹೊಲ ಮಾರಿದ ಮೇಲೆ ಆ ನೆಲದ ಹಕ್ಕು ತನಗಿಲ್ಲ ಎಂದು ಬೀರಣ್ಣ ವಾದಿಸಿದನು . ಹೀಗೆ ಬೀರಣ್ಣ ಕೊಪ್ಪರಿಗೆಯ ಬಂಗಾರ ನನಗೆ ಬೇಡ ಎಂದು . ಈರಣ್ಣನೂ ಸಹ ನನಗೂ ಬೇಡ ಎಂದಾಗ ಈ ವಿಚಾರವಾಗಿ ಚರ್ಚೆ ನಡೆದಿತ್ತು .

4. ದೈವದವರ ತೀರ್ಪಿನ ಬಗೆಗೆ ಶಾಂತಲೆಯ ಅಭಿಪ್ರಾಯವೇನು ?

ಉತ್ತರ : ಈರಣ್ಣ ಮತ್ತು ಬೀರಣ್ಣ ಇಬ್ಬರೂ ಕೊಪ್ಪರಿಗೆ ಬಂಗಾರವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಒಪ್ಪದಿದ್ದಾಗ ಗ್ರಾಮದ ಮುಖ್ಯಸ್ಥ ಕೇತುಮಲ್ಲ ‘ ಇಬ್ಬರಿಗೂ ಬೇಡವಾದ ಹಣ ರಾಜ್ಯದ ಬೊಕ್ಕಸ ಸೇರಲಿ ‘ ಎಂದನು . ನ್ಯಾಯ ತೀರ್ಮಾನ ಮಾಡುತ್ತಾನೆ .

ಕೂಡಲೆ ಮರದ ಮರೆಯಲ್ಲಿದ್ದ ಶಾಂತಲೆ ಮುಂದೆ ಬಂದು , “ ಕೂಡದು … ಕೂಡದು … ‘ – ಎಂದು ಕೂಗಿದಳು . ಬೊಕ್ಕಸಕ್ಕೆ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ …

ಅವರ ಬೆವರಿನ ಫಲ ಅಲ್ಲ … ಅದು ಪ್ರಜೆಗಳ ಬೆವರಿನ ಫಲ ” ಆದ್ದರಿಂದ ಅದು ನಿಮ್ಮ ಊರಿನ ಹಣ ನಿಮೂರಿನ ಏಳಿಗೆಗಾಗಿಯೇ ವಿನಿಯೋಗವಾಗಲಿ . ” ಎಂದು ಅಭಿಪ್ರಾಯ ಪಟ್ಟಳು

 5 , ಶಾಂತಲೆಯು ನೀಡಿದ ತೀರ್ಪೇನು ?

ಉತ್ತರ : ಕೊಪ್ಪರಿಗೆ ಹಣವು ರಾಜ್ಯದ ಬೊಕ್ಕಸಕ್ಕೆ ಸೇರಬೇಕೆಂದು ಕೇತುಮಲ್ಲ ತೀರ್ಪನ್ನು ನೀಡಿದಾಗ ಶಾಂತಲೆ “ ಅಣ್ಣಂದಿರಾ , ತಾಯಂದಿರೆ , ಇದೋ ಈ ಹೊನ್ನನ್ನು ನೇರವಾಗಿ ನಾನು ರಾಜ್ಯದ ಕೋಶಕ್ಕೆ ಸೇರಿಸುವುದಿಲ್ಲ …

ಇದು ದೈವದ ದುಡ್ಡು , ದೇವಕಾರ್ಯಕ್ಕೆ ವಿನಿಯೋಗವಾಗಬೇಕಾದ್ದು ಧರ್ಮ … ಕೇಳಿ , ನನಗೆ ಬಹಳ ದಿನಗಳಿಂದಲೂ ಒಂದು ಆಸೆ ಇದೆ … ನಮ್ಮ ಹಿಂದೆ , ಕ್ರಯಕ್ಕೆ ತಕ್ಕೊಂಡು : ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾಗಿ ಒಂದು ಕಲಾದೇಗುಲವನ್ನು ರಾಜಧಾನಿ ದ್ವಾರಸಮುದ್ರದಲ್ಲಿ ನಿರ್ಮಿಸಬೇಕು ಎಂದು .

ಅವಳ ದೇಗುಲಗಳ ಶಿಲ್ಪಕಲೆ ಹೊಯ್ಸಳರ ಶೈಲಿಗೆ ಮಾದರಿಯಾಗಿರಬೇಕು … ವೇಲಾಪುರಿಯ ಚೆನ್ನಕೇಶವ ದೇವಾಲಯಕ್ಕಾಗಿ ಈ ಹೊನ್ನು ವಿನಿಯೋಗವಾಗಲಿ..ಎಂದು ಶಾಂತಲೆ ತೀರ್ಪು ನೀಡಿದಳು .

 ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ

9th Standard Prajanishte Question and Answer Notes Eight – in ten sentences

1 , ಚೋಳ ದೊರೆ ಕುಲೋತ್ತುಂಗನು ಹೊಯ್ಸಳ ಸಾಮ್ರಾಜ್ಯದ ಮೇಲೆ ಯುದ್ಧ ಸಾರಲು ಇದ್ದ ಕಾರಣ ಹಾಗೂ ಪರಿಣಾಮವನ್ನು ವಿವರಿಸಿ,

ಉತ್ತರ : ಹೊಯ್ಸಳ ಸಾಮ್ರಾಜ್ಯದ ಪ್ರಗತಿಯನ್ನು ಕಂಡ ಪರರಾಜರ ಕಣ್ಣುಗಳು ಕೆಂಪಾದವು , ಅದರಲ್ಲೂ ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಿರುವ ವಿಷ್ಣುವರ್ಧನ ಭೂಪಾಲನನ್ನು ಬಡಿಯಬೇಕೆಂದು ಶತ್ರು ರಾಜರುಗಳು ಕಾಯುತ್ತಿದ್ದರು .

ಅವರಲ್ಲಿ ಚೋಳಮಂಡಲದ ಕುಲೋತ್ತುಂಗನು ಪ್ರಮುಖನಾದವನು . ಗಂಗರ ತಲಕಾಡು ಅವನ ಸ್ವಾಧೀನದಲ್ಲಿತ್ತು . ಕುಲೋತ್ತುಂಗ ಪ್ರಚಂಡ ಆಶಾವಾದಿ . ಅಖಂಡ ಭರತಖಂಡದ ಒಡೆತನವನ್ನು ಬಯಸುತ್ತಿದ್ದ ದುರಾತಾಪಿಶಾಚಿಯಾಗಿದ್ದನು .

ಹೊಯ್ಸಳ ಸಾಮ್ರಾಜ್ಯವನ್ನು ತನ್ನ ವಶ ಮಾಡಿಕೊಳ್ಳಲೆಂದು ಆಶಿಸಿ , ಹೊಯ್ಸಳ ಸಾಮ್ರಾಜ್ಯದ ಮೇಲೆ ಯುದ್ಧ ಸಾರಿದನು , ಚೋಳರಿಗೂ ಮತ್ತು ಹೊಯ್ಸಳರಿಗೂ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆದು ; ಹೊಯ್ಸಳರ ಕೈ ಮೇಲಾಗಿ ಚೋಳಸೇನೆ ಕಂಗಾಲಾಯಿತು ,

ಆದಿಯಮ ಯುದ್ಧದಲ್ಲಿ ಮಡಿದ . ಅವನ ಸತ್ತ ಸುದ್ದಿ ತಿಳಿಯುತ್ತಲೆ ಚೋಳಸೇನೆ ದಿಕ್ಕಾಪಾಲಾಗಿ ಓಡಿತು . ತಲಕಾಡ ಕೋಟೆ ಸುಲಭವಾಗಿ ವಿಷ್ಣುವರ್ಧನ ಭೂಪಾಲನ ಕೈವಶವಾಯಿತು . ಸಮಸ್ತ ಸೇನೆಯು “ ತಲಕಾಡುಗೊಂಡನಿಗೆ ಜಯವಾಗಲಿ ‘ ಎಂದು ಜೈಕಾರ ಹಾಕಿತು .

2 , ಬನದಮ್ಮನ ಹಳ್ಳಿಯ ಪಂಚಾಯಿತಿಯಲ್ಲಿ ನಡೆದ ನ್ಯಾಯ ಹಾಗೂ ಅದರ ತೀರ್ಪಿನ ಬಗ್ಗೆ ವಿವರಿಸಿ

ಉತ್ತರ : ವಿಷ್ಣುವರ್ಧನ ಭೂಪಾಲನು ರಾಜ್ಯದಲ್ಲಿ ಇಲ್ಲದಿದ್ದಾಗ ರಾಜಧಾನಿಯಲ್ಲಿ ಸಂರಕ್ಷಕಳಾಗಿ ನಿಂತಿದ್ದ ದೇವತೆ ಎಂದರೆ ಮಹಾರಾಣಿ ಶಾಂತಲಾದೇವಿ . ಗಂಡುಡೆಯನ್ನುಟ್ಟು ಯುವರಾಜ ಕುಮಾರ ಉದಯಾದಿತ್ಯನನ್ನು ಜೊತೆಯಲ್ಲಿ ಕರೆದುಕೊಂಡು ರಾಜ್ಯ ಸಂಚಾರ ಮಾಡಲು ಹೊರಟಳು .

ಬನದಮ್ಮನಳ್ಳಿಯ ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ನೂರಾರು ಜನರು ಒಂದು ಪಂಚಾಯಿತಿ ನೆರೆದಿದ್ದುದು ಕಾರಣ ಬೀರಣ್ಣ ಎಂಬುವವನು

ತನ್ನ ಹೊಲವನ್ನು ಈರಣ್ಣನಿಗೆ ಮಾರಾಟ ಮಾರಣ್ಣ ಈರಣ್ಣ ಹೊಲವನ್ನು ಉಳುಮೆ ಮಾಡುತ್ತಿರುವಾಗ ಅವನಿಗೆ ಒಂದು ಕೊಪ್ಪರಿಗೆ ಬಂಗಾರ ದೊರೆಯಿತು ,

ಅದನ್ನು ಈರಣ್ಣ ಬಳಿ ಇಟ್ಟುಕೊಳ್ಳಲಿಲ್ಲ . ಈ ವಿಚಾರವಾಗಿ ಪಂಚಾಯಿತಿಯಲ್ಲಿ ಚರ್ಚೆ ನಡೆದ ಮೇಲೆ ಅಧ್ಯಕ್ಷ ಕೇತುಮಲ್ಲ ನಾಯಕ ‘ ಈ ಹೊನ್ನು ರಾಜ್ಯದ ಬೊಕ್ಕಸ ಸೇರಲಿ ‘ ಎಂದು ಹೇಳಿದ . ಜನರೆಲ್ಲರೂ ಒಪ್ಪಿದರು .

ಆದರೆ ಮಾರುವೇಷದಲ್ಲಿದ್ದ ಶಾಂತಲಾ “ ಈ ಕೊಪ್ಪರಿಗೆಯ ಬಂಗಾರ ರಾಜ್ಯದ ಬೊಕ್ಕಸ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ ” ಎಂದಾಗ ,

ನಾವೆಲ್ಲರೂ ಹೊಯ್ಸಳೇಶ್ವರನ ಮಕ್ಕಳು ಎಂದ ಮೇಲೆ ಇದು ಅವರಿಗೆ ಸೇರಬೇಕು ಎಂದು ಕೇತುಮಲ್ಲ ಹೇಳಿದ ,

“ ಅಣ್ಣಗಳಿರಾ ನಿಮ್ಮಂತಹ ಪ್ರಜೆಗಳನ್ನು ಪಡೆದ ರಾಜ ಅದೆಷ್ಟು ಪುಣ್ಯವಂತನೋ ” ಎಂದಳು ಶಾಂತಲೆ , ಆಗ ಶಾಂತಲೆ ಮುಂಡಾಸು ತೆಗೆದಳು . ಜನರೆಲ್ಲರಿಗೂ ಬಹಳ ಸಂತೋಷವಾಯಿತು , ನಂತರ ಶಾಂತಲೆ ಕೊಪ್ಪರಿಗೆ ಬಂಗಾರವು ದೇವ ಕಾರ್ಯಕ್ಕೆ ವಿನಿಯೋಗವಾಗಬೇಕು

ಎಂದು ಹೇಳಿ ಕೇತುಮಲ್ಲ ನಾಯಕರು ನಮಗೆಲ್ಲರಿಗೂ ಹಿರಿಯರು ದ್ವಾರ ಸಮುದ್ರದಲ್ಲಿ ನಿರ್ಮಾಣವಾಗುವ ಅವಳಿ ದೇವಾಲಯಗಳು ಅವರ ಹೆಸರಿನಲ್ಲಿಯೇ ನಿರ್ಮಾಣವಾಗಲಿ ಎಂದು ಹೇಳಿದಳು .

ಕಟ್ಟುವ ದೇವಾಲಯಗಳು ಹೊಯ್ಸಳೇಶ್ವರ ಶಾಂತಲೇಶ್ವರ ಎಂಬ ಹೆಸರಿನಲ್ಲಿರಲಿ ಎಂದು ಒಕ್ಕೊರಲಿನಿಂದ ಜನರೆಲ್ಲರೂ ಕೂಗಿದರು .

 

ಈ ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ ,

1 , “ತಲಕಾಡುಗೊಂಡನ ಜಯವಾಗಲಿ”

ಆಯ್ಕೆ : ಈ ವಾಕ್ಯವನ್ನು ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಹೊಯ್ಸಳರ ರಾಜನಾದ ವಿಷ್ಣುವರ್ಧನನು ಚೋಳರ ದಂಡನಾಯಕನಾದ ಆದಿಯಮನನ್ನು ಯುದ್ಧದಲ್ಲಿ ಸೋಲಿಸಿ ತಲಕಾಡನ್ನು ತನ್ನ ಕೈ ವಶಮಾಡಿಕೊಳ್ಳುತ್ತಾನೆ . ಆ ಸಂದರ್ಭದಲ್ಲಿ ಗೆದ್ದ ರಾಜನಿಗೆ ತನ್ನ ಸೈನಿಕರು ಈ ಮೇಲಿನಂತೆ ಜೈಕಾರ ಸಹ ಈ ಹಾಕಿದರು .

ಸ್ವಾರಸ್ಯ : ಹೊಯ್ಸಳರ ರಾಜನಾದ ವಿಷ್ಣುವರ್ಧನ ಮೇಲೆ ಸೈನಿಕರು ಇಟ್ಟ ಗೌರವ , ಪ್ರೀತಿ , ಅಭಿಮಾನಗಳು , ಯುದ್ಧ ಗೆದ್ದಾಗ ಆಗುವ ಹರ್ಷವನ್ನು ವ್ಯಕ್ತಿ ಪಡಿಸಿರುವುದು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ

2. “ ಸೆರೆಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮದಲ್ಲ”

. ಆಯ್ಕೆ : ಈ ವಾಕ್ಯವನ್ನು ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆಯಿತು . ಈ ಯುದ್ಧದಲ್ಲಿ ಆದಿಯಮನು ಮಡಿದು , ತಲಕಾಡು ವಿಷ್ಣುವರ್ಧನನ ಕೈ ವಶವಾಯಿತು .

ಅನೇಕರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ವಿಷ್ಣುವರ್ಧನನು ಅದಕ್ಕೆ ಅವಕಾಶ ಕೊಡಲಿಲ್ಲ . ಆ ಸಂದರ್ಭದಲ್ಲಿ ವಿಷ್ಣುವರ್ಧನನು ಈ

ಸ್ವಾರಸ್ಯ : ಸಾಮಾನ್ಯವಾಗಿ ಗೆದ್ದ ರಾಜ್ಯವನ್ನು ಲೂಟಿ ಮಾಡುವುದು , ಸೆರೆ ಸಿಕ್ಕ ಸೈನಿಕರನ್ನು ಹಿಂಸೆ ಕೊಡುವುದನ್ನು ಕಾಣುತ್ತೇವೆ . ಆದರೆ ಇಲ್ಲಿ ಸೋತ ರಾಜ್ಯದ ಮೇಲೆ ವಿಷ್ಣುವರ್ಧನನಿಗೆ ಇರುವ ಭಾವನೆಯು ಸ್ವಾರಸ್ಯಕರವಾಗಿದೆ .

3 , “ ತಂಬುಲ ಆಗದ ಮ್ಯಾಲೆ ಮತ್ತೆ ಎತ್ತಿ ಬಾಯಿಗಾಕೊಳೋ ಕೆಟ್ಟತನ ಬ್ಯಾಡಾ “

ಆಯ್ಕೆ : ಈ ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಈರಣ್ಣನು ಬೀರಣ್ಣನಿಂದ ಕೊಡು ಕೊಂಡ ಹೊಲದಲ್ಲಿ ಉಳುಮೆ ಮಾಡುತ್ತಿರುವಾಗ ಒಂದು ಕೊಪ್ಪರಿಗೆ ಬಂಗಾರ ಸಿಗುತ್ತದೆ .

ಇದಕ್ಕೆ ಪೂಜೆ ಮಾಡಿ ಈರಣ್ಣನು ಬೀರಣ್ಣನಿಗೆ “ ಇದು ನಿನ್ನ ಹೊಲದಲ್ಲಿ ಸಿಕ್ಕಿದೆ ತೆಗೆದು ಕೊ ‘ ಎಂದು ಕೊಡಲು ಬಂದ ಸಂದರ್ಭದಲ್ಲಿ ಬೀರಣ್ಣನು ಈ ಮಾತನ್ನು ಹೇಳುತ್ತಾನೆ ,

ಸ್ವಾರಸ್ಯ : ಬನದಮ್ಮನಹಳ್ಳಿಯ ರೈತರಾದ ಬೀರಣ್ಣ , ಇದಣ್ಣನ ಪ್ರಮಾಣಿಕತೆಯು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ .

 

ಉ ) ಬಿಟ್ಟ ಸ್ಥಳದಲ್ಲಿ ಸೂಕ್ತಪದವನ್ನು ತುಂಬಿರಿ ,

1 ದ್ವಾರಸಮುದ್ರದ ಸೇನ……………..ಕಡೆಗೆ ಚೈತ್ರಯಾತ್ರೆ ಹೊರಟಿತು .

2. ಮಾನವ ತನ್ನ…………… ರ್ಗುಣಗಳನ್ನು ಗಾಳಿಯಲ್ಲಿ ತೂರಿಬಿಡಬಾರದು .

3 , ನಿಮ್ಮ ಊರಿನ ಹಣ ನಮ್ಮೂರಿನ …………………ಯೇ ವಿನಿಯೋಗವಾಗಲಿ ,

4 , ಬನದಮ್ಮನ ಹಳ್ಳಿಯ ಜನರಿಗೆ …………..ಒಂದೇ ಮೆಟ್ಟಿಲಲ್ಲಿ ಉಳಿಯಿತು .

ಸರಿ ಉತ್ತರಗಳು .

1 ತಲಕಾಡಿನ

2 ಮಾನವೀಯ

3 ಏಳಿಗೆಗಾಗಿ

4 ಸ್ವರ್ಗ

 

ಭಾಷಾ ಚಟುವಟಿಕೆ

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

1 , ಅನುನಾಸಿಕ ಸಂಧಿ ಎಂದರೇನು ? ಉದಾಹರಣೆ ಕೊಡಿ.

ಉತ್ತರ : ಕ.ಚ,ಟ ಕಾರಗಳಿಗೆ ಯಾವುದೇ ಅನುನಾಸಿಕವು ಪರವಾದರೂ ಕ ,ಕೈ  , ಚ ಕೈ ಟ ಕೈ ಣ , ತ ಕೈ ನ ಪ ಕ್ಕೆ ಮ ಅನುನಾಸಿಕವು ಆದೇಶವಾಗಿ ಬಂದರೆ ಅನುಷಾಸಿಕ ಎನ್ನುವರು .

ಉದಾ:

ಚಿತ್‌      +     ಮೂರ್ತಿ  =ಚಿನ್ಮೂರ್ತಿ

ಷಟ್‌     +     ಮುಖ      =ಷಣ್ಮುಖ

ಸತ್‌      +     ಮಾನ      =ಸನ್ಮಾನ

ಚಿತ್‌     +     ಮಯ      =ಚಿನ್ಮಯ

 

2 , ಕ್ರಿಯಾಸಮಾಸ ಎಂದರೇನು ? ಉದಾಹರಣೆ ಕೊಡಿ,

ಉತ್ತರ : ಪೂರ್ವಪದವು ದ್ವಿತೀಯ ವಿಭಂಶವಾಗಿದ್ದು ಉತ್ತರಪದದಲ್ಲಿರುವ ಕ್ರಿಯೆಯೊಡನೆ ಸೇರಿ ಆದ ಸಮಾಸವೆ . ಕ್ರಿಯಾಸಮಾಸ ,

ಉದಾ : ಮನೆಯನ್ನು + ಕಟ್ಟಿದನು = ಮನೆಕಟ್ಟಿದನು . ..

ಮೈದಡವಿ . ಬಟ್ಟೆಯನ್ನು ಮೈಯನ್ನು ಮರೆತು ಮೈಮರೆತು .

ಕೈಯಂ         + ಪಿಡಿದು   = ಕೈವಿಡಿದು

ತಲೆಯನ್ನು   + ಇಟ್ಟು     = ತಲೆಯಿಟ್ಟು

ಮೈಯನ್ನು  + ತಡವಿ     = ಮೈದಡವಿ

ಕಣ್ಣನ್ನು       + ತೆರೆ        = ಕಣ್ಣರೆ

ಬಟ್ಟೆಯನ್ನು + ತೋರು = ಬಟ್ಟೆದೋರು .

 

ಆ ) ಕೊಟ್ಟಿರುವ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದವನ್ನು ಬರೆಯಿರಿ

1,ಯ್‌,ರ್‌,ಲ್‌,ವ್‌, ಅವರ್ಗೀಯ ವ್ಯಂಜನಗಳು :ಙ್‌, ಞ್‌, ಣ್‌, ನ್‌, ಮ್  : ……….

2 , ಷಡಂಗ : ಜಶ್ವಸಂದಿ: ಷಣ್ಮಾಸ :………

3. ಈ ಹೊನ್ನು : ಗಮಕ ಸಮಾಸ : ಸ್ಥಾಪನೆ ಮಾಡು:…………

4. ವಾಗ್ದೇವಿ :ಜಶ್ವಸಂದಿ :: ಜಗಜ್ಯೋತಿ:……….

ಸರಿ ಉತ್ತರಗಳು,

೧, ಅನುನಾಸಿಕಾಕ್ಷರಗಳು .  2 ,ಅನುನಾಸಿಕ ಸಂಧಿ   3,ಕಿಯಾ ಸಮಾಸ  4. ಶ್ಚುತ್ವ ಸಂಧಿ

 

ಈ ) ಕೊಟ್ಟಿರುವ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ ,

 

1. ” ಹಿತ್ತಲ ಗಿಡ ಮದ್ದಲ್ಲ “

          ವೇದ ಸುಳ್ಳಾದರೂ ಗಾದೆ ಸುಳ್ಳಾಗದು , ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು , ಗಾದೆಗಳು ನೋಡಲು ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ , ಆಂತಹ ಗಾದೆಗಳಲ್ಲಿ ಈ ಗಾದೆ ಮಾತು ಸಹ ಒಂದು.

      ತಮ್ಮ ತಮ್ಮ ಮನೆಯ ಅಂಗಳದಲ್ಲಿ ಬೆಳೆದ ಗಿಡ ಮರಗಳಿಗೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡುವುದಿಲ್ಲ .

ತಮ್ಮ ಬಳಿ ಇರುವ ವಸ್ತುಗಳಿಗೆ , ಮನುಷ್ಯರಿಗೆ ನಮ್ಮ ಮನಸ್ಸಿನಲ್ಲಿ ಗೌರವ , ಬೆಲೆ ಇರುವುದಿಲ್ಲ , ಹಳೆಯ ಕಾಲದಲ್ಲಿ ಎಲ್ಲಾ ರೋಗಗಳಿಗೆ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ರೋಗವನ್ನು ಗುಣ ಪಡಿಸುತ್ತಿದ್ದರು .

ನಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಗಿಡಗಳಿಂದ ಮಾಡಿದ ಮದ್ದನ್ನು ಕುಲ್ಲಕವಾಗಿ ಕಾಣುವ ಮನೋಭಾವನೆ ಇತ್ತು ,

ಅದೇ ಬೇರೆಯವರ ತೋಟದ ಗಿಡದಿಂದ ತಯಾರಿಸಿದ ಔಷಧಿಗೆ ಬೆಲೆ ಹೆಚ್ಚು ಕೊಡುತ್ತಿದ್ದರು.ಆದರಿಂದ ಈ ಗಾದೆ ಹುಟ್ಟಿದೆ . ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಮನೆಯಲ್ಲಿ ಇರುವ ವಸ್ತಗಳಿಗೆ ನಾವು ಬೆಲೆಕೊಡದೆ ಅಕ್ಕಪಕ್ಕದ ಮನೆಗಳ ವಸ್ತುಗಳನ್ನು ನೋಡಿ ದುಭಾರಿ ವಸ್ತುಗಳು ,ಬೆಲೆ ಬಾಳುವ ವಸ್ತುಗಳು ಅವರ ಬಳಿ ಇವೆ .

ನಮ್ಮಲ್ಲಿ ಈ ರೀತಿ ವಸ್ತುಗಳು ಎಲ್ಲಾ ಎಂದು ಕೊರಗುತ್ತೇವೆ , ಒಮ್ಮೊಮ್ಮೆ ಖಿನ್ನತೆಗೂ ನಮ್ಮ ಬಳಿ ಏನಿರುತ್ತದೆ ಅದು ಯಾವಾಗಲೂ ಬೆಲೆ ಕಡಿಮೆ ನಮ್ಮ ಕೈಗೆ ಯಾವುದು ಎಟಕುವುದಿಲ್ಲವೋ ಅದರ ಬೆಲೆ ಜಾಸ್ತಿ ಅನ್ನಿಸುತ್ತದೆ ,

ಸುಲಭವಾಗಿ ಸಿಗುತ್ತದೆ ‘ ಎಂದ ಮಾತ್ರಕ್ಕೆ ಆ ವಸ್ತುವಿಗೆ ಬೆಲೆ ಇಲ್ಲ ಎಂದು ಭಾವಿಸಬಾರದು . ನಮ್ಮ ಜೊತೆಗೆ ಇರುವ ವಸ್ತು , ವ್ಯಕ್ತಿಗಳನ್ನು ಅರ್ಥಮಾಡಿಕೊಂಡು ಜೀವನ ನಡೆಸಬೇಕು .

2. ” ದೂರದ ಬೆಟ್ಟ ನುಣ್ಣಗೆ “

ವೇದ ಸುಳ್ಳಾದರೂ ಗಾದೆ ಸುಳ್ಳಾಗದು . ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು . ಗಾದೆಗಳು ನೋಡಲು ವಾಮನನಾದರೂ ಆರ್ಥದಲ್ಲಿ ತ್ರಿವಿಕ್ರಮನಂತೆ , ಅಂತಹ ಗಾದೆಗಳಲ್ಲಿ ಈ ಗಾದೆ ಮಾತು ಸಹ ಒಂದು . ದೂರದಲ್ಲಿರುವ ಬೆಟ್ಟ ನೋಡುವುದಕ್ಕೆ ಚಿಕ್ಕದಾಗಿ ಕಾಣಿಸುತ್ತದೆ .

ದೂರದಿಂದ ಅದನ್ನು ಸುಲಭವಾಗಿ ಹತ್ತಬಹುದು ಎಂದು ಅನ್ನಿಸುತ್ತದೆ . ಆದರೆ ಬೆಟ್ಟದ ನಿಜ ಸ್ವರೂಪ ತಿಳಿಯಬೇಕಾದರೆ ಹತ್ತಿರ ಹೋಗಿ ನೋಡಬೇಕು . ಆಗ ಬೆಟ್ಟದ ಮೇಲಿರುವ ಕಲ್ಲು ಮುಳ್ಳು , ಅದರ ಎತ್ತರ ಎಷ್ಟು ಎಂದು ತಿಳಿಯುತ್ತದೆ .

ಹತ್ತಿರ ಹೋಗಿ ನೋಡಿದಾಗ , ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನು ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವು ನಮಗೆ ಆಗುತ್ತದೆ .ಹಾಗೆಯೇ ಸಂಬಂಧಗಳು ಸಹ ದೂರದಿಂದ ನೋಡಿದಾಗ ಎಲ್ಲಾರೂ ನಮ್ಮವರೇ ಎಂದು ಗೊತ್ತಾಗುತ್ತದೆ .

‘ದೂರವಿದ್ದರೆ ಪರಿಮಳ , ಹತ್ತಿರ ಬಂದರೆ ವಾಸನೆ ‘ ಎಂಬ ಮಾತಿನಂತೆ ಮನುಷ್ಯನ ನಿಜವಾದ ಬಣ್ಣ ತಿಳಿಯಲು ಅವನ ಜೊತೆಗೆ ಇದ್ದು ನೋಡಬೇಕು . ಪ್ರಪಂಚದಲ್ಲಿ ಎಲ್ಲಾರಿಗೂ ಕಷ್ಟ ಬರುತ್ತದೆ ಎಂಬ ಅಂಶವನ್ನು ನಾವು ಮರೆಯಬಾರದು .

ದೇವರು ನನಗೆ ಮಾತ್ರ ಕಷ್ಟ ಕೊಟ್ಟಿದ್ದಾನೆ . ಬೇರೆಯವರು ನಗುನಗುತ್ತಾ ಜೀವನ ಸಾಗಿಸುತ್ತಿದ್ದಾರೆ . ಎಂದು ಕೊಂಡು ಕೊರಗಬಾರದು . ಅವರ ಜೀವನದಲ್ಲಿ ಎಷ್ಟು ಕಷ್ಟಗಳಿವೆ ಎಂದು ಅವರ ಹತ್ತಿರ ಹೋದಾಗ ತಿಳಿಯುತ್ತದೆ .

ಎಲ್ಲಾರ ಮನೆಯ ದೋಸೆನೂ ತೂತೆ ಎಂಬ ಸತ್ಯ ತಿಳಿದು ಬದುಕಬೇಕಾಗಿದೆ.

9th  Prajaanishte | ಪ್ರಜಾನಿಷ್ಠೆ

9th Standard Kannada notes | 9ನೇ ತರಗತಿ ಕನ್ನಡ ನೋಟ್ಸ್, Kannada Deevige 9th standard kannada notes Prajanishte Question and Answer

Download all 9th Standard Kannada notes Click Here

 

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh