9th Janapada Kalegala Vaibhava Kannada Notes 9ನೇ ತರಗತಿ ಜನಪದ ಕಲೆಗಳ ವೈಭವ ನೋಟ್ಸ್

Contents

9th Janapada Kalegala Vaibhava Kannada Notes 9ನೇ ತರಗತಿ ಜನಪದ ಕಲೆಗಳ ವೈಭವ ನೋಟ್ಸ್

9th standard Janapada Kalegala Vaibhava Kannada Notes ಜನಪದ ಕಲೆಗಳ ವೈಭವ, 9th class 6th chapter notes, janapada kalegala vaibhava question and answers in kannada deevige

ಗದ್ಯ ಭಾಗ- 6         ಜನಪದ ಕಲೆಗಳ ವೈಭವ

– ಸಮಿತಿ ರಚನೆ

ಕೃತಿಕಾರರ ಪರಿಚಯ

ಪ್ರಕೃತ ಜನಪದ ಕಲೆಗಳ ವೈಭವ – ಜಾನಪದ ಗದ್ಯ ಭಾಗವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ [ ಕರ್ನಾಟಕ ] ಹೊರತಂದಿರುವ ‘ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ – ಕನ್ನಡ ಭಾಷ ” ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಈ ಗದ್ಯ ಭಾಗವನ್ನು ನಿಗದಿಪಡಿಸಿದೆ

ಆಶಯ ಭಾವ

ಜನಪದ ಕಲೆ . ಅತ್ಯಂತ ಪ್ರಾಚೀನವಾದುದು , ಪರಂಪರೆಯಿಂದ ಉಳಿದು ಬಂದಿರುವ ಸಂಪ್ರದಾಯವಾಗಿದ್ದು , ಆಂಗಿಕ | ಅಭಿನಯದ ಮೂಲಕ ವ್ಯಕ್ತವಾಗುವ ಕಲೆ ಹೆಚ್ಚು ಜನಪ್ರಿಯವಾಗಿದೆ .

ವಿವಿಧ ಪ್ರಕಾರಗಳಲ್ಲಿ ವ್ಯಕ್ತವಾಗುವ ಕಲೆ , ಪ್ರಾದೇಶಿಕ ಮಹತ್ವ ಪಡೆದಿದೆ . ಆಧುನಿಕತೆಯ ಪ್ರಭಾವದಿಂದ ಜನಪದ ಕಲೆ ನಶಿಸುತ್ತಿದೆ .

ಇದರಿಂದ ಎಷ್ಟೋ ಪ್ರಕಾರಗಳು ಕಣ್ಮರೆಯಾಗಿವೆ . ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಕಲೆ ಮನರಂಜನೆಯ ಮಾಧ್ಯಮವೂ ಕ್ರಿಯಾಶೀಲತೆಯ ಸಂಕೇತವೂ ಆಗಿರುವುದು ಗಮನಾರ್ಹ ಅಂಶ , ವಿಶಿಷ್ಟ ನಂಬಿಕೆ ,

ಆಚರಣೆಯ ಪ್ರಾತಿನಿಧಿಕ ರೂಪವಾಗಿ ಜನಪದ ಕಲೆ ರೂಪಗೊಂಡಿದ್ದು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ

ಆದರ ಕಿರು ಪರಿಚಯವೇ ಈ ‘ ಜನಪದ ಕಲೆಗಳ ವೈಭವ ‘ ಪಾಠ ,

 

ಪದಗಳ ಅರ್ಥ

ಏಕತಾನತೆ – ಒಂದೇ ರೀತಿಯ ಕಥನಕವನ – ಹಾಡಿನ ಮೂಲಕ ಹೇಳುವ ಕತೆ ;

ಕಾಳಗ – ಯುದ್ದ ಕುಪ್ಪೆ – ಗೂನು ಬೆನ್ನಿನವಳು ( ಮಂಥರೆ ) :

ದಕಿ = ತಿರುಗು ರ್ಗುಣೆ – ಡೊಳ್ಳು ಬಾರಿಸುವ ಮರದ ತುಂಡು ;

ಚಂಡೆ – ಚರ್ಮವಾದ್ಯ ಮಂತ್ರಮುಗ್ಧ- ಪರವಶ :

ದೀವಟಿಗೆ = ಪಂಜು

ಹಾಸುಹೊಕ್ಕು – ಆವರಿಸು ಒಟ್ಟು = ವೃತ್ತಾಕಾರದ ಹೊನ್ನಾವಿಗೆ – ಚಿನ್ನದ ಪಾದುಕೆ ರಾಳ – ಬೆಂಕಿಯ ಜ್ವಾಲೆ ಹೆಚ್ಚಿಸಲು ಬಳಸುವ ಪುಡಿ ;

ವಾಡಿಕೆ – ರೂಢಿ

ವೈಖರಿ – ರೀತಿ

ಗದ್ಯದ ಸರಳ ಸಾರಾಂಶ

  ವೀರಗಾಸೆ

ವೀರಗಾಸೆಯು ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ , ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ ,ಆದ್ದರಿಂದ ಸಾಮೂಹಿಕ ನೃತ್ಯ ಎಂದು ಪ್ರಸಿದ್ಧಿಯಾದ ಕರ್ನಾಟಕ ಜನಪದ ಕಲೆ .

ಪಂಚವಾದ್ಯಗಳಾದ ತಾಳ , ಶ್ರುತಿ , ಚಮಾಳ , ಓಲಗ , ಕರಡೆ ಬಳಕೆಯಾಗುತ್ತವೆ . ವೀರಗಾಸೆ ಕುಣಿತದವರ ವೇಷಭೂಷಣ ವಿಶೇಷವಾಗಿರುತ್ತದೆ . ಬಿಳಿಯ ಪಂಚೆಯ ವೀರಗಚ್ಚೆ , ತಲೆಗೆ ಅರಿಶಿಣ ಹೆಚ್ಚುತ್ತಾ ಹೋಗುತ್ತದೆ .

ವೀರಭದ ಅಥವಾ ನೀಲಿ ಬಣ್ಣದ ರುಮಾಲು , ಕಾವಿ ಬಣ್ಣದ ಕಸಯಂಗಿ , ಕೊರಳಲ್ಲಿ ರುದ್ರಾಕ್ಷಿ ಸರ , ಹಣೆಗೆ ವಿಭೂತಿ , ಕರ್ಣಕುಂಡಲ , ಸೊಂಟಪಟ್ಟಿ , ಬಿಚ್ಚುಗತ್ತಿ , ಕಾಲ್ಗೆಜ್ಜೆ ಧರಿಸುತ್ತಾರೆ .

          “ ಆಹಹಾ ರುದ್ರಾ ಆಹಹಾ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ ,

ಈ ಕುಣಿತದಲ್ಲಿ ವೀರಭದ್ರ ಹುಟ್ಟಿದ ಸಂದರ್ಭದ ವರ್ಣಯಿದೆ . “ ವೀರಭದ್ರದೇವರು ಹುಟ್ಟಿದ ರೂಪ ಎಂತು ಎಂದೊಡೆ ಹುಟ್ಟಿದಾಗಲೆ ಹೂವಿನಗಾಸ್ ಮಂಜುಳಗಾಸ , ಬ್ರಹ್ಮಗಾಸೆ ,

ವಿಷ್ಣುಗಾಸ , ರುದ್ರಗಾಸೆ , ಮೆಟ್ಟಿದ ಹೊನ್ಯಾವಿಗೆ , ಸಾವಿರ ಶಿರ , ಮೂರುಸಾವಿರ ನಯನ , ಎರಡುಸಾವಿರ ಭುಜ , ಕಕ್ಕರಿಸಿದ ರ್ಶು , ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರದೇವರು .

ನಾಲ್ಡ್ದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಆನಂತರ ಮತ್ತೊಬ್ಬ ನರ್ತಕ ಒಡಪು ಹೇಳುತ್ತಾನೆ . ವಾದ್ಯಗಳ ಭೋರ್ಗರೆತದೊಂದಿಗೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ . ಗತಿಯಿಂದ ಗತಿಗೆ , ಶುಣಿತ , ಬಡಿತಗಳ ವೇಗ ಕುಣಿತಕ್ಕೆ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಲಿಂಗಬೀರ ,

ಲಿಂಗಧೀರ , ಲಿಂಗವೀರ ಕುಣಿತವೆಂದು ಹೆಸರಿದೆ , ಉತ್ತರ ಕರ್ನಾಟಕದಲ್ಲಿ ಪುರವಂತರ ಕುಣಿತವೆಂದು ಜನಪ್ರಿಯವಾಗಿದೆ . ವೀರಶೈವ ಸಂಪ್ರದಾಯದವರು ವಂಶಪಾರಂಪರ್ಯವಾಗಿ ಈ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ .

ವೀರಭದ್ರ ವೇಷಧಾರಿ ದಕ್ಷಯಾಗ , ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ . ಇದಕ್ಕೆ ‘ ಖಡ್ಗ ‘ ಎಂದು ಕರೆಯುತ್ತಾರೆ . ಉತ್ತರಕರ್ನಾಟಕದಲ್ಲಿ ‘ ಒಡದು ‘ ಎನ್ನುವರು .

ಮತ್ತೊಬ್ಬ ವ್ಯಕ್ತಿ “ ಭಲರೇ ವೀರ , ಆಹಹಾ ವೀರ ” ಎಂದು ಕಾಕು ಹೇಳುತ್ತ ಜಾಗಟೆ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ , ಸಾಮಾನ್ಯವಾಗಿ ಮದುವೆ , ಗೃಹಪ್ರವೇಶ , ಜಾತ್ರೆ , ಉತ್ಸವ , ಹಬ್ಬ – ಹರಿದಿನಗಳಲ್ಲಿ ವೀರಭದ್ರನ ಕುಣಿತ ಏರ್ಪಡಿಸುತ್ತಾರೆ .

ವೀರಗಾಸೆ ಸಾಮಾಜಿಕ ಸಂದರ್ಭಗಳಲ್ಲಿ ಮನರಂಜನೆಗಾಗಿಯೂ ಬಳಕೆಯಾಗುತ್ತಿದೆ , ಕುಣಿತ ನೋಡುವವರಿಗೆ ರೋಮಾಂಚನವನ್ನುಂಟು ಮಾಡುತ್ತದೆ .

 ಕಂಸಾಳೆ

ಕಂಸಾಳೆಯು ಮಲೆಯ ಮಹದೇಶ್ವರನ ಭಕ್ತರಾದ ದೇವರ ಗುಡ್ಡರು ಎಂಬ ಧಾರ್ಮಿಕ ವೃತ್ತಿಗಾಯಕರು ಬಳಸುವ ಕಂಚಿನ ತಾಳಗಳು , ದೇವರ ಗುಡ್ಡರು ಇದನ್ನು ಬಿರುದು ಎಂದು ಕರೆಯುವರು .

ಸಾಧಾರಣ ಬಿಟ್ಟು ತಾಳಗಳಿಗಿಂತ ಕಂಸಾಳೆ ಗಾತ್ರದಲ್ಲಿ ದೊಡ್ಡದು , ಆಕೃತಿಯಲ್ಲಿ ವಿಶಿಷ್ಟವಾದುದು . ಅಂಗೈ ಅಗಲದ ಚಕ್ರಾಕಾರದ ಬಟ್ಟಲು ಚಿಕ್ಕ ಜಾಗಟೆಯಂತಿರುವ ಮಟ್ಟಸವಾದ ಮೇಲುತಾಳ ,

ಮೇಲುತಾಳಕ್ಕೆ ಸೇರಿದಂತೆ ಹಿಡಿದುಕೊಳ್ಳಲು ಮಾಡಿಕೊಂಡ ಗೊಂಡವದ ಕಲಾತ್ಮಕ ಹುರಿ , ತಾವು ಕಂಸಾಳೆಯ ಮುಖ್ಯ ಭಾಗಗಳು , ಬಟ್ಟಲನ್ನು ಮೇಲು ಮುಖವಾಗಿ ಎಡ ಅಂಗೈ ಮೇಲೆ ಇರಿಸಿಕೊಂಡು ಬಲಗೈಯಲ್ಲಿ ಹಿಡಿದ ಮೇಲುತಾಳವನ್ನು ಅದರ ಮೇಲೆ ಕುಟ್ಟುತ್ತಾರೆ ,

ಈ ನಾದದ ಹಿನ್ನೆಲೆಯಲ್ಲಿ ಗುಡ್ಡರು ಹಾಡುತ್ತಾರೆ , ಕಂಸಾಳೆಯ ದೇವರ ಗುಡ್ಡದವರಿಗೆ ಕಾಣಿಕೆ ಪಡೆಯುವ ಪಾತ್ರೆಯಾಗಿಯೂ ಬಳಕೆಯಾಗುತ್ತದೆ . ಇವರು ಕಾಣಿಕೆಯನ್ನು ಪಡೆಯುವಾಗ ಕಂಸಾಳೆಯನ್ನು ಮುಂದೆ ಚಾಚಿ ಕಾಣಿಕೆ ಪಡೆಯುತ್ತಾರೆ .

ಈ ರೀತಿ ಪಡೆದ ಕಾಣಿಕೆ ಮಲೆ ಮಹೇಶ್ವರನಿಗೆ ಆರ್ಪಿತವಾಗುತ್ತದೆ ಎಂಬ ಭಾವನೆ ಕೈಗೆತ್ತಿಕೊಳ್ಳುವ ಮೊದಲು ಬರೆದು , ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಪೂಜಿಸುತ್ತಾರೆ ,

ದಲು “ ಏಳ್ಳಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ ” ಎಂದು ನಮಸ್ಕರಿಸಿ ಕಣ್ಣಿಗೊತ್ತಿಕೊಂಡು ಆನಂತರ ಬಾರಿಸಲು ಪ್ರಾರಂಭಿಸುವರು .

ದಾಯಿಕವಾದ ವೇಷಭೂಷಣಗಳನ್ನು ಧರಿಸಿ , ಎತ್ತರವಾದ ರಂಗದಲ್ಲಿ ಕುಳಿತು ಕಥೆ ಮಾಡುತ್ತಾರೆ . ಇದನ್ನು ನಡೆಸಲು ಕೊನೇ ಪಕ್ಷ ಮೂವರು ಗುಡ್ಡರಾದರೂ ಇರಬೇಕು . ಮೇಳದಲ್ಲಿ ಏಕತಾರಿ , ದಮ್ಮಡಿಗಳನ್ನು ಹಿಮ್ಮೇಳದವರು ಬಳಸುತ್ತಾರೆ .

ಮುಖ್ಯ ಗುಡ್ಡ . ಮುಮ್ಮೇಳಗಾರ ಕಂಸಾಳೆಯನ್ನು ಹಿಡಿಯುವರು . ಉಳಿದವರು ತಾಳದ ಗತ್ತಿಗೆ ತಕ್ಕಂತೆ ವಿವಿಧ ಮಟ್ಟುಗಳಲ್ಲಿ ಹಾಡುತ್ತಾರೆ . ಗತ್ತಿಗೆ ತಕ್ಕಂತೆ ತಾಳಕ್ಕೆ ಅನುಗುಣವಾಗಿಯೇ ಕಥೆಯನ್ನು ಪದ್ಯರೂಪದಲ್ಲಿ ನಡುನಡುವೆ ವಿಶೇಷವಾಗಿ ವಚನದಲ್ಲಿ ನಿರೂಪಿಸಲಾಗುತ್ತದೆ .

ಇದು ವಿಶಿಷ್ಟವಾದ ಪದ್ಯಗಂಧಿಯಾದ ಗದ್ಯ , ವಚನವನ್ನು ಪ್ರಧಾನ ಗಾಯಕ ನಿರೂಪಿಸುತ್ತಿರುವಾಗ ಅದರ ಪ್ರತಿ ಸಾಲಿನ ಅಂತ್ಯದಲ್ಲಿ ಸೊಲ್ಲಿನವರು “ ಹೌದು , ಸೌದೌದು , ಶಿವಶಿವಾ , ಮಾದೇವ , ಹಂ ” ಮುಂತಾಗಿ ಧನಿ ಕೊಡುತ್ತಿದ್ದು ಇದು ಕಥಾವಾಹಿನಿ ನಿರರ್ಗಳವಾಗಿ ಹರಿಯಲು ಪೋಷಕವಾಗಿರುತ್ತದೆ .

ದೇವರ ಜನಪದ ಮಹಾಕಾವ್ಯಗಳಲ್ಲೊಂದಾದ ಮಲೆಯ ಮಹದೇಶ್ವರನ ಕಥೆಯನ್ನು ಪ್ರಧಾನವಾಗಿ ಹಾಡುತ್ತಾರೆ , ಇದಲ್ಲದೆ ಪಿರಿಯಾಪಟ್ಟಣದ ಕಾಳಗ , ಸಾರಂಗಧರ , ಬಿಳಿಗಿರಿ ರಂಗಸ್ವಾಮಿ , ಬೆಟ್ಟದ ಚಾಮುಂಡಿ , ಬಾಲನಾಗಮ್ಮ ,

ಮುಡುಕುತೊರೆ ಮಲ್ಲಪ್ಪ , ಕೋಳೂರ ಕೊಡಗೂಸು ಮೊದಲಾದ ಲೌಕಿಕ , ಧಾರ್ಮಿಕ ಹಾಗೂ ಐತಿಹಾಸಿಕ ಕಾವ್ಯಗಳನ್ನು ಹಾಡುತ್ತಾರೆ .

ಮಂಟೇಸ್ವಾಮಿ ಕಾವ್ಯವನ್ನು ಅದರಲ್ಲೂ ಸಿದ್ದಪ್ಪಾಜಿಗೆ ಸಂಬಂಧಿಸಿದ ಭಾಗವನ್ನು ಕಂಸಾಳೆ ಗತ್ತಿಗೆ ಅಳವಡಿಸಿಕೊಂಡು ಹಾಡುತ್ತಾರೆ .ದೇವರ ಗುಡ್ಡರು . ಸಾಮಾನ್ಯವಾಗಿ ಗುಡ್ಡರು ಇದರಲ್ಲಿ ತಾರ್‌ಬಟ್ಟು , ತಟ್ಬಟ್ಟು ಮುಂತಾದ ಬಗೆಗಳಿವೆ .

 

ಡೊಳ್ಳುಕುಣಿತ

ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತ , ಡೊಳ್ಳು ‘ ಚರ್ಮವಾದ್ಯ , ಭರಮದೇವರ ಬ್ರಹ್ಮಪಲ್ಲಕ್ಕಿ ಉತ್ಸವ ಕಾಲಕ್ಕೆ ಡೊಳ್ಳಿನ ಕಾರ್ಯಕ್ರಮಗಳು ನಡೆಯುತ್ತವೆ .

ಡೊಳ್ಳು ಬಾರಿಸುವವರು ದೇಹದ ಮೇಲುಭಾಗಕ್ಕೆ ಕರಿಯ ಕಂಬಳಿಯನ್ನೂ ಸೊಂಟದ ಭಾಗಕ್ಕೆ ಮೊಳಕಾಲು ಮೇಲೆ ಬರುವಂತೆ ಕಚ್ಚೆಪಂಚೆಯನ್ನೂ ಉಡುತ್ತಾರೆ . ಕೆಲವೊಮ್ಮೆ ಹುಲಿಯ ಚರ್ಮದ ರೀತಿಯ ಉಡುಪನ್ನೂ ಧರಿಸುತ್ತಾರೆ .

ಎರಡೂ ಕೈಗಳಲ್ಲೂ ಅದೇ ಬಣ್ಣದ ಕರವಸ್ತ್ರ ಹಿಡಿದಿರುತ್ತಾರೆ . ಕುಣಿತಕ್ಕೆ ಹಿನ್ನೆಲೆಯಾಗಿ ಡೊಳ್ಳು , ತಾಳ ಮತ್ತು ಕೊಳಲು ಇರುತ್ತವೆ . ಶ್ರಾವಣ ಸೋಮವಾರ , ಅಮಾವಾಸ್ಯೆಯ ದಿನ ಮತ್ತು ಯುಗಾದಿಯಂದು ಪಲ್ಲಕ್ಕಿ ಉತ್ಸವದ ತರುವಾಯ

ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯುತ್ತದೆ ,

ಸಾಮಾನ್ಯವಾಗಿ ಹಾಡಿನ ವಿಷಯ ದೈವಮಹಿಮೆ ಅಥವಾ ದೈವಭಕ್ತರ ಕಥೆಯಾಗಿರುತ್ತದೆ .

ಡೊಳ್ಳು ಕುಣಿತದಲ್ಲಿ ಹಲವಾರು ಕಸರತ್ತುಗಳೇ ಅಲ್ಲದೆ , ಕುದುರೆಕುಣಿತ , ಕೋಲುಕುಣಿತ , ಸಾರು ಕುಣಿತ , ಹುಚ್ಚೆಳ್ಳುಬಡಿತ , ಕೈಬಾರಿಕೆ , ಒಂದ್ದೆಜ್ಜೆ , ಎರಡೆಜ್ಜೆಕುಣಿತ , ಜೋಡು ಸಾಲಿನ ಜಗ್ಗಿನ ಕೈದಿ – ಮೊದಲಾದ ವೈವಿಧ್ಯಮಯ ಕುಣಿತಗಳಿವೆ .

ಬೀರಪ್ಪನ ಡೊಳ್ಳು ಎಂದೇ ಬೆಳೆದು ಬಂದ ಈ ಅದ್ಭುತ ಪ್ರದರ್ಶನ ಕಲೆ ,

ಯಕ್ಷಗಾನ

ಯಕ್ಷಗಾನವು ನೃತ್ಯ ಪ್ರಧಾನ ಕಲೆಯಾಗಿದೆ . ಇದರಲ್ಲಿ ಮುಖ್ಯವಾದ ಮೂರು ಶೈಲಿಗಳು ತೆಂಕುತಿಟ್ಟು ,

ಬಡಗುತಿಟ್ಟು ಮತ್ತು ಬಡಬಡಗುತಿಟ್ಟು ಯಕ್ಷಗಾನಕ್ಕೆ ದಶಾವತಾರ , ಬಯಲಾಟ , ಭಾಗವತರಾಟ ಎಂಬ ಹೆಸರೂ ಇವೆ.

ಸಾಮಾನ್ಯವಾಗಿ ಬಯಲಾಟ ಪ್ರದರ್ಶಿತವಾಗುವುದು ಹಳ್ಳಿಯ ಬಯಲಿನಲ್ಲಿ . ಆದ್ದರಿಂದ ಅದು ಬಯಲಾಟ , ಯಕ್ಷಗಾನ ಕಲಿಸುವವನೇ ಭಾಗವತನಾದ್ದರಿಂದ ಭಾಗವತರಾಟ ಎಂಬ ಹೆಸರು ಬಂದಿದೆ . ಗೀತ , ಕುಣಿತ , ವೇಷಭೂಷಣ ,

ಮಾತುಗಾರಿಕೆ , ವಾದ್ಯ ಇವು ಬಯಲಾಟದ ಪಂಚ ಅಂಗಗಳು ಆಡಿಸುವ ರಂಗಸ್ಥಳವನ್ನು ಬಿದಿರು ಅಥವಾ ಕಂಬಗಳನ್ನು ಕಟ್ಟಿ ಮಾವಿನ ತೋರಟಗಳಿಂದ ಅಲಂಕರಿಸುತ್ತಿದ್ದರು .

ರಂಗಸ್ಥಳ ಸಮೀಪವಿರುವ ನೇಪಥ್ಯರ್ವ ಚೌಕಿ ಅಥವಾ ಬಣ್ಣದ ಮನ ಇರುತ್ತದೆ . ಯಕ್ಷಗಾನದಲ್ಲಿ ಪಾತ್ರಧಾರಿಗಳು ತಮ್ಮ ಬಣ್ಣವನ್ನು ತಾವೇ : ಹಚ್ಚಿಕೊಳ್ಳುತ್ತಾರೆ . ಮೊದಲು ಚೌಕಿಯಲ್ಲಿ ಗಣಪತಿ ಪೂಜೆ ನಡೆಯುತ್ತದೆ .

ತದನಂತರ ಕೋಡಂಗಿಗಳು ರಂಗ ಪ್ರವೇಶಿಸುವರು . ಗಣಪತಿ ಸ್ತುತಿಯ ಬಳಿಕ ವಿಷ್ಣು , ಪರಮೇಶ್ವರ , ದುರ್ಗೆ ಮೊದಲಾದ ದೇವತೆಗಳ ಸ್ತುತಿಯನ್ನು ಭಾಗವತರು ಮಾಡುತ್ತಾರೆ .

ಹಾಡಿನ ಅನಂತರ ಭಾಗವತರಿಂದ ಸಭಾವಂದನೆ ಆನಂತರ ಕೋಡಂಗಿಗಳು ಕುಣಿದು ಕುಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ .

ಅನಂತರ ಬಾಲಗೋಪಾಲರ ಆಗಮನ ಪೂರ್ವರಂಗ ಎಂದು ಕರೆಯಲಾಗುವ ಬಾಲಗೋಪಾಲ , ಸ್ತ್ರೀ ವೇಷಗಳ ಉದ್ದೇಶ ಮುಂದಿನ ಕಥಾ ಪ್ರಸಂಗಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ಅಣಿಗೊಳಿಸುವುದು ಇದರ ಉದ್ದೇಶ . ರಾಮಾಯಣ , ಮಹಾಭಾರತ ಮತ್ತು ಭಾಗವತದ ಪ್ರಸಂಗಗಳನ್ನು ಆಡಲಾಗುತ್ತದೆ .

ಸಾಮಾನ್ಯವಾಗಿ ಕಾಳಗ , ಸಂಹಾರ ಮತ್ತು ಕಲ್ಯಾಣಗಳಿಗೆ ಸಂಬಂಧಿಸ ಪ್ರಸಂಗಗಳೇ ಹೆಚ್ಚು ಕೃಷ್ಣಾರ್ಜುನ ಕಾಳಗ , ಕರ್ಣಾರ್ಜುನ ಕಾಳಗ , ಬಭ್ರುವಾಹನ ಕಾಳಗ , ಸುಧನ್ವಾರ್ಜುನ ಕಾಳಗ ಮೊದಲಾದವು ವೀರರಸ ಪ್ರಧಾನವಾದವುಗಳು .

ಚಂದ್ರಾವಳಿ ವಿಲಾಸ , ರತಿಕಲ್ಯಾಣ , ರತ್ನಾವತಿ ಕಲ್ಯಾಣ ಮೊದಲಾದವು ಶೃಂಗಾರ ರಸ ಪ್ರಧಾನ ಪ್ರಸಂಗಗಳು . ಇವಲ್ಲದೆ ಪ್ರಸಿದ್ಧ ಕ್ಷೇತ್ರಗಳ ಕ್ಷೇತ್ರಮಹಾತ್ಮಗಳಿವೆ . ಯಕ್ಷಗಾನದ ಎಲ್ಲ ಪ್ರಸಂಗಗಳಲ್ಲೂ ಹಾಸ್ಯ ಕಂಡುಬರುತ್ತದೆ .

ಯಕ್ಷಗಾನ ಜನರಲ್ಲಿ ಧಾರ್ಮಿಕ ಮತ್ತು ನೀತಿ ಪ್ರಶ್ನೆಗಳನ್ನು ಬೆಳೆಸಲು ಸಹಕಾರಿಯಾಗಿದೆ . ಯಕ್ಷಗಾನ ಪ್ರಸಂಗ ರಚಿಸಿದವರು ದುಷ್ಟನಿಗ್ರಹ ಶಿಷ್ಟಪರಿಪಾಲನೆ ತತ್ವಗಳನ್ನು ಪ್ರಸಂಗಗಳಲ್ಲಿ ಅಳವಡಿಸಿರುತ್ತಾರೆ .

 

 ಅ ) ಒಟ್ಟಿರುವ ಪ್ರಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

janapada kalegala vaibhava 9th standard notes Answer in one sentence

 1 , ವೀರಗಾಸಯಲ್ಲಿ ಬಳಸುವ ವಾದ್ಯಗಳು ಯಾವುವು ?

ಉತ್ತರ : ವೀರಗಾಸೆಯಲ್ಲಿ ಬಳಸುವ ಪಂಚವಾದ್ಯಗಳಾದ ತಾಳ , ಶ್ರುತಿ , ಚಮಾಳ , ಓಲಗ , ಕರಡೆ ಬಳಕೆಯಾಗುತ್ತವೆ .

2 , ‘ ಕಂಸಾಳೆ ‘ ಎಂಬ ಹೆಸರು ಹೇಗೆ ಬಂದಿತು ?

ಉತ್ತರ : ಕಾಂಸತಾಲ್ಯ ಎಂಬ ಪದದ ತದ್ಭವ ರೂಪದಿಂದ ಕಂಸಾಳೆ ಎಂಬ ಪದ ಬಂದಿದೆ .

3 , ಡೊಳ್ಳು ಕುಣಿತ ಯಾವ ಸಂಪ್ರದಾಯಕ್ಕೆ ಸೇರಿದ ಕುಣಿತವಾಗಿದೆ ?

ಉತ್ತರ : ಡೊಳ್ಳು ಕುಣಿತವು ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತವಾಗಿದೆ .

4. ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಯಾವಾಗ ನಡೆಯುತ್ತದೆ ?

ಉತ್ತರ : ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮವು ಭರಮದೇವರ ಬ್ರಹ್ಮಪಲ್ಲಕ್ಕಿ ಉತ್ಸವ ಕಾಲಕ್ಕೆ

5 , ಯಕ್ಷಗಾನದ ಮೂರು ಶೈಲಿಗಳು ಯಾವುವು ?

ಉತ್ತರ : ಯಕ್ಷಗಾನದ ಮೂರು ಶೈಲಿಗಳು ತೆಂಕುತಿಟ್ಟು , ಬಡಗುತಿಟ್ಟು ಮತ್ತು ಬಡಬಡಗುತಿಟ್ಟು , ನಡೆಯುತ್ತದೆ .

 

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

Kannada Deevige Notes Janapada Kalegala Vaibhava Answer in three – four sentences

1 , ವೀರಗಾಸೆ ಕುಣಿತದ ಔಷಭೂಷಣಗಳು ಹೇಗಿರುತ್ತವೆ ? ವಿವರಿಸಿ ,

ಉತ್ತರ : ವೀರಗಾಸೆ ಕುಣಿತದವರ ವೇಷಭೂಷಣ ವಿಶೇಷವಾಗಿರುತ್ತದೆ . ಬಿಳಿಯ ಪಂಚೆಯ ವೀರಗಚ್ಚಿ , ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ರುಮಾಲು , ಕಾವಿ ಬಣ್ಣದ ಕಸೆಯಂಗಿ , ಕೊರಳಲ್ಲಿ ರುದ್ರಾಕ್ಷಿ ಸರ , ಹಣೆಗೆ ವಿಭೂತಿ , ಕರ್ಣಕುಂಡಲ , ಸೊಂಟಪಟ್ಟಿ ಬಿಚ್ಚುಗತ್ತಿ , ಕಾಲ್ಗೆಜ್ಜೆ ಧರಿಸುತ್ತಾರೆ .

2 . ದೇವರಗುಡ್ಡರಿಗೆ ಕಂಸಾಳೆಯ ಬಗ್ಗೆ ಇರುವ ಗೌರವ ಭಾವನೆ ಹೇಗೆ ವ್ಯಕ್ತಗೊಂಡಿದೆ ? ವಿವರಿಸಿ ,

ಉತ್ತರ : ಕಂಸಾಳೆಯು ಮಲೆಯ ಮಹದೇಶ್ವರನ ಭಕ್ತರಾದ ದೇವರ ಗುಡ್ಡರು ಎಂಬ ಧಾರ್ಮಿಕ ವೃತ್ತಿಗಾಯಕರು ಬಳಸುವ ಕಂಚಿನ ತಾಳಗಳು ,

ಇದೊಂದು ಧಾರ್ಮಿಕ ಜನಪದವಾದ್ಯ ವೃತ್ತಿಗಾಯಕರು ಬಳಸುವ ವಾದ್ಯಗಳಲ್ಲೆಲ್ಲ ಕಾ ಣಿಕೆ ಪಡೆಯುವ ಪಾತ್ರೆಯಾಗಿಯೂ ಬಳಕೆಯಾಗುವ ಏಕಮಾತ್ರ ಸಾಧನ ಕಂಸಾಳೆ ,

ಗುಡ್ಡರು ಕಾಣಿಕೆಯನ್ನು ಸ್ವೀಕರಿಸುವಾಗ ಕಂಸಾಳೆಯ ಬಟ್ಟಲನ್ನು ಮಾತ್ರ ಮುಂದೆ ಒಡ್ಡಿ ಪಡೆದು ಅನಂತರ ಜೋಳಿಗೆಗೆ ಸುರಿದುಕೊಳ್ಳುತ್ತಾರೆ .

ಇದೊಂದು ಪವಿತ್ರ ಸಾಧನವಾದುದರಿಂದ ಅರ್ಪಿಸುವ ಕಾಣಿಕೆ ಮಲೆಯ ಮಹದೇಶ್ವರನಿಗೆ ಸಮರ್ಪಿತವಾದಂತೆಯೇ ಎಂಬ ಭಾವನೆ ಗುಡ್ಡನಿಗೂ ದಾನಿಗೂ ಇರುತ್ತದೆ . ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಪೂಜಿಸುತ್ತಾರೆ .

ಕೈಗೆತ್ತಿಕೊಳ್ಳುವ ಮೊದಲು “ ಏಳ್ಳಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ ” ಎಂದು ನಮಸ್ಕರಿಸಿ ಕಣ್ಣಿಗೊತ್ತಿಕೊಂಡು ಆನಂತರ ಭಾರಿಸಲು ಪ್ರಾರಂಭಿಸುವರು ,

 

3 , ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಹೇಗೆ ನಡೆಯುತ್ತದೆ ?ವಿವರಿಸಿ

ಉತ್ತರ : ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತ , ಡೊಳ್ಳು ಚರ್ಮವಾದ್ಯ ಭರಮದೇವರ ಬ್ರಹ್ಮಪಲ್ಲಕ್ಕಿ ಉತ್ಸವ ಕಾಲಕ್ಕೆ ಡೋಳ್ಳಿನ ಕಾರ್ಯಕ್ರಮಗಳು ನಡೆಯುತ್ತವೆ .

ಶ್ರಾವಣ ಸೋಮವಾರ , ಅಮಾವಾಸ್ಯೆಯ ದಿನ ಮತ್ತು ಯುಗಾದಿಯಂದು ಪಲ್ಲಕ್ಕಿ ಉತ್ಸವದ ತರುವಾಯ ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯುತ್ತದೆ .

ಅದರಂತೆ ಭಕ್ತರು ದೇವರ ಮುಮ್ಮೇಳದವರಾಗಿ ಒಬ್ಬರು ಡೊಳ್ಳು ಬಾರಿಸುತ್ತ ಹಾಡು ಹೇಳುತ್ತಾರೆ . ಹಿಮ್ಮೇಳದಲ್ಲಿ ಹಲವರು ತಾಳ ಮತ್ತು ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ . ಸಾಮಾನ್ಯವಾಗಿ ಅಥವಾ ದೈವಭಕ್ತರ ಕಥೆಯಾಗಿರುತ್ತದೆ .

4, ಬಡಗುತಿಟ್ಟುಗಳ ವೈಶಿಷ್ಟ್ಯವೇನು ? ವಿವರಿಸಿ

ಉತ್ತರ : ಯಕ್ಷಗಾನದ ಶೈಲಿಗಳು ತೆಂಕುತಿಟ್ಟು , ಬಡಗುತಿ ಬಡಗುತಿಟ್ಟು ಮತ್ತು ಬಡಬಡಗುತಿಟ್ಟು , ತೆಂಕುತಿಟ್ಟಿನ ಚಂಡೆ ವಾದಕನಿಗೆ ಆಸನ ವವು ವ್ಯವಸ್ಥೆಯಿರುವುದಿಲ್ಲ . ಪಾತ್ರಧಾರಿಗಳಿಗೆ ಒಂದು ಸಿಂಹಾಸನವಿರುತ್ತದೆ .

ಬಡಗುತಿಟ್ಟಿನಲ್ಲಿ ಇದರ ಬದಲಿಗೆ ರಥದ ಆಕೃತಿಯ ಆಸನವನ್ನು ಸಾಂಪ್ರದಾಯಿಕವಾಗಿ ಬಳಸುತ್ತಿದ್ದರು . ಹಿಮ್ಮೇಳದ ಪ್ರಮುಖ ವಾದ್ಯ ಪರಿಕರಗಳೆಂದರೆ , ಚಂಡೆ , ಮದ್ದಳೆ , ಶ್ರುತಿ , ತಾಳ ಆಥವಾ ಜಾಗಟ .

ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳು ತಿಟ್ಟು ಮತ್ತು ಪಾತ್ರಕ್ಕನುಗುಣವಾಗಿ ವೈವಿಧ್ಯಮಯವಾಗಿರುತ್ತವೆ .

ತೆಂಕಿನಲ್ಲಿ ಅರ್ಥಗಾರಿಕೆಗೆ ಪ್ರಾಧಾನ್ಯ ಇದ್ದು , ದೊಡ್ಡ ದೊಡ್ಡ ಹೆಜ್ಜೆ ಹಾಕಿ ಗಿರಕಿ ಹೊಡೆಯುವುದು ಇದರ ವೈಶಿಷ್ಟ್ಯ . ಬಡಗಿನಲ್ಲಿ ಕುಣಿತ ಹಾಗೂ ಅಭಿನಯಕ್ಕೆ ಪ್ರಾಧಾನ್ಯತೆ ಇರುತ್ತದೆ .

5, ಚೌಕಿಯಲ್ಲಿ ನಡೆಯುವ ವಿಶೇಷಗಳೇನು ? .

ಉತ್ತರ : ರಂಗಸ್ಥಳ ಸಮೀಪವಿರುವ ನೇಪಥ್ಯವೇ ಚೌಕಿ ಅಥವಾ ಬಣ್ಣದ ಮನೆ . ಭಾಗವತರು ಹಿಮ್ಮೇಳ ಹಾಗೂ ಪಾತ್ರಧಾರಿಗಳೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ . ಪಾತ್ರಧಾರಿಗಳು ತಮ್ಮ ಬಣ್ಣಗಳನ್ನು ತಾವೇ ಹಚ್ಚಿಕೊಳ್ಳುತ್ತಾರೆ .

ಮೊದಲು ಚೌಕಿಯಲ್ಲಿ ಗಣಪತಿ ಪೂಜೆ ನಡೆಯುತ್ತದೆ . ತದನಂತರ ಕೋಡಂಗಿಗಳು ರಂಗ ಪ್ರವೇಶಿಸುವರು . ಗಣಪತಿ ಸ್ತುತಿಯ ಬಳಿಕ ವಿಷ್ಣು , ಪರಮೇಶ್ವರ . ದುರ್ಗೆ ಮೊದಲಾದ ದೇವತೆಗಳ ಸ್ತುತಿಯನ್ನು ಭಾಗವತರು ಮಾಡುತ್ತಾರೆ .

ಹಾಡಿನ ಆನಂತರ ಭಾಗವತರಿಂದ ಸಭಾವಂದನೆ ಆನಂತರ ಕೋಡಂಗಿಗಳು ಕುಣಿದು ಕುಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ .

 

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

9th class Kannada Janapada Kalegala Vaibhava Answer in eight – ten sentences

1 , ವೀರಗಾಸ ಪರ್ತಕನ ಒಡಪಂದನ ಕುಣಿತ ಹೇಗಿರುತ್ತದೆ ?

ಉತ್ತರ : ವೀರಗಾಸೆ ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ . ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಜನಪದ ಕಲೆ , ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ .

ಸಾಮಾನ್ಯವಾಗಿ ವೀರಗಾಸೆಯವರು ಬಿಳಿಯ ಪಂಚೆಯ ವೀರಗಚ್ಚೆ , ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ರುಮಾಲು , ಕಾವಿ ಬಣ್ಣದ ಕಸೆಯಂಗಿ , ಕೊರಳಲ್ಲಿ ರುದ್ರಾಕ್ಷಿ ಸರ , ಹಣೆಗೆ ವಿಭೂತಿ , ರ್ಕಣ್ರಕುಂಡಲ , ಸೊಂಟಪಟ್ಟಿ , ಬಿಚ್ಚುಗತ್ತಿ , ಕಾಲ್ಗೆಜ್ಜೆ ಧರಿಸುತ್ತಾರೆ .

“ ಆಪದ ರುದ್ರಾ ಅಪಹ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ .

ಈ ಕುಣಿತದಲ್ಲಿ ವೀರಭದ್ರನ ಹುಟ್ಟಿದ ಸಂದರ್ಭದ ವರ್ಣನೆಯನ್ನು ಮಾಡುತ್ತಾರೆ ” ವೀರಭದ್ರದೇವನು ಹುಟ್ಟಿದ ರೂಪ ಎಂತು ಎಂದೊಡೆ ಹುಟ್ಟಿಗಾದಲೇ ಹೂವಿನಗಾಸೆ ,

ಕೊಳಲು ಬಾರಿ ಹಾಡಿನ ವಿಷಯ – ದೈವಮಹಿಮ ಅಥವಾ 4. ಯಕ್ಷಗಾನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿನ ನದ ಮೂರು  .

ಮಂಜುಳಗಾಸ , ಬ್ರಹ್ಮಗಾಸ , ವಿಷ್ಣಗಾಸ ರುದ್ರಗಾಸ , ಮಟ್ಟದ ಹೊನ್ನಾವಿಗೆ , ಸಾವಿರ ಶಿರ ಮೂರು ಸಾವಿರ ನಯನ , ಎರಡು ಸಾವಿರ ಭುಜ , ಕಕ್ಕರಿಸಿದ ಕಣಣ್ಣ ,

ಜುಂಜುಮಂಡ ಇಂತಪ್ಪ ಶ್ರೀ ವೀರಭದ್ರದವರು ಹೋಮದ ಕುಂಡದ ಒಳಗೆ ಹೇಗ ಬರುತ್ತಾರೆಂದರ ” ಎಂದು ಹೇಳುತ್ತಾ ಕುಣಿತವು ನಡರಿರುತ್ತದೆ .

2 , ಬೀಸು ಕಂಸಾಳೆಯ  ವೈಶಿಷ್ಟ್ಯತೆಯನ್ನು ,ವಿವರಿಸಿ

ಉತ್ತರ: ಬೀಸುಕಂಸಾಳ ದೇವರಗುಡ್ಡರ ವಿಶಿಷ್ಟ ನೃತ್ಯ , ಕರ್ನಾಟಕದ ಜನಪದ ನೃತ್ಯಗಳಲ್ಲಿ ಅಪೂರ್ವವಾದುದು . ಇದರಲ್ಲಿ ಫಾರ್‌ಬಟ್ಟು , ತಟ್ಬಟ್ಟು ಮುಂತಾದ ಬಗೆಗಳಿವೆ .

ನಾಲ್ಕು ಮಂದಿ ಗುಡ್ಡರು ಒಂದು ಕಡೆ ನಿಂತು ಲಿಂಗ ಬಾ , ಮುದ್ದುಲಿಂಗ ಬಾ , ನಮ್ಮ ಮುದ್ದು ಮಾದಯ್ಯ ಲಿಂಗ ಬಾ ಎಂದು ಹಾಡುತ್ತಾರೆ . ಕಂಸಾಳೆ ಹಿಡಿದ ಗುಡ್ಡ ತಾಳಕ್ಕೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ಬಾರಿಸುತ್ತಾ ಕುಣಿಯುತ್ತಾನ .

ತಲೆಯು ಮೇಲೆ , ಬೆನ್ನಹಿಂದೆ , ಕಾಲ ಕಳಗೆ ಕುಳಿತು , ನಿಂತು , ಬಾಗಿ , ಬಳುಕಿ ತೀವ್ರಗತಿಯಲ್ಲಿ ವರ್ತಿಸುವ ಭಂಗಿ ಹಾಗೂ ಅದ್ಭುತ . ಒಮ್ಮೊಮ್ಮೆ ಇಬ್ಬರು ಗುಡ್ಡರು ಕಲೆತು ನರ್ತಿಸುವುದುಂಟು . ಒಬ್ಬರ ಕಂಸಾಳೆಗೆ ಮತ್ತೊಬ್ಬರು ಕುಟ್ಟುತ್ತಾ ಕುಣಿಯುವ ವೈಖರಿ ಆಕರ್ಷಕವಾಗಿರುತ್ತದೆ .  .

 

3 , ಡೊಳ್ಳು ಬಾರಿಸುವ ಕಲಾವಿದರ ವೇಷಭೂಷಣಗಳು ಹೇಗಿರುತ್ತವೆ ?

ಉತ್ತರ : ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತ , ಡೊಳ್ಳು ಚರ್ಮವಾದ್ಯ , ಡೊಳ್ಳುಬಾರಿಸುವ ಕಲಾವಿದರ ವೇಷಭೂಷಣಗಳು ವಿಶಿಷ್ಟವಾಗಿರುತ್ತವೆ .

ಸಾಮಾನ್ಯವಾಗಿ ಡೊಳ್ಳು ಬಾರಿಸುವವರು ದೇಹದ ಮೇಲಿಭಾಗಕ್ಕೆ ಕರಿಯ ಕಂಬಳಿಯನ್ನು ಸೊಂಟದ ಭಾಗಕ್ಕೆ ಮೊಳಕಾಲು ಮೇಲೆ ಬರುವಂತ ಕಚ್ಚೆಪಂಚೆಯನ್ನು ಉಡುತ್ತಾರೆ . ಕೆಲವೊಮ್ಮೆ ಹುಲಿಯ ಚರ್ಮದ ರೀತಿಯ ಉಡುಪನ್ನು ಧರಿಸುತ್ತಾರೆ .

ಕುಣಿತದ ಕಾಲಕ್ಕೆ ವಾದ್ಯಗಾರರು ಹಸಿರು ಇಲ್ಲವೇ ಕೆಂಪು ಬಣ್ಣದ ಗಗ್ಗರಿ , ಅಂಗಿ ಟೊಪ್ಪಿಗೆ ಕೊಡುವರು . ಎರಡು ಕೈಗಳಲ್ಲೂ ಅದೇ ಬಣ್ಣದ ಕರವಸ್ತ್ರ ಹಿಡಿದಿರುತ್ತಾರೆ .

4 , ಯಕ್ಷಗಾನದ ವೈಶಿಷ್ಟ್ಯ : ಹಾಗೂ ಪೂರ್ವರಂಗದ ಉದ್ದೇಶವೇನು ?

ಉತ್ತರ : ಯಕ್ಷಗಾನಕ್ಕೆ ದಶಾವತಾರ , ಬಯಲಾಟ , ಭಾಗವತರಾಟ ಎಂಬ ಹೆಸರೂ ಇವೆ . ಸಾಮಾನ್ಯವಾಗಿ ಬಯಲಾಟ ಪ್ರದರ್ಶಿತವಾಗುವುದು ಹಳ್ಳಿಯ ಬಯಲಿನಲ್ಲಿ . ಆದ್ದರಿಂದ ಅದು ಬಯಲಾಟ , ಯಕ್ಷಗಾನ ಕಲಿಸುವವನೇ ಭಾಗವತನಾದ್ದರಿಂದ ಭಾಗವತರಾಟ ಎಂಬ ಹೆಸರು ಬಂದಿದೆ ,

ಗೀತ , ಕುಣಿತ , ವೇಷಭೂಷಣ , ಮಾತುಗಾರಿಕೆ , ವಾದ್ಯ ಇವು ಬಯಲಾಟದ ಪಂಚ ಆಂಗಗಳು , ಯಕ್ಷಗಾನದಲ್ಲಿ ಸಾಮಾನ್ಯವಾಗಿ ಕಾಳಗ , ಸಂಹಾರ ಮತ್ತು ಕಲ್ಯಾಣಗಳಿಗೆ ಸಂಬಂಧಿಸಿದ ಪ್ರಸಂಗಗಳು ಇರುತ್ತವೆ .

ಪುರುಷರೇ ಸ್ತ್ರೀ ವೇಷಹಾಕುವುದು ಯಕ್ಷಗಾನದ ವೈಶಿಷ್ಟ್ಯ . ಯಕ್ಷಗಾನದ ಪೂರ್ವರಂಗ ಎಂದು ಕರೆತಲಾಗುವ ಬಾಲಗೋಪಾಲ , ಸ್ತ್ರೀ ವೇಷಗಳ ಉದ್ದೇಶ ಮುಂದಿನ ಕಥಾ ಪ್ರಸಂಗಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ಅಣಿಗೊಳಿಸುವುದೇ ಆಗಿದೆ ,

ಮತ್ತೆ ದೇವತಾಸುತ್ತಿ ಆದನಂತರ ಅಂದಿನ ಪ್ರಸಂಗಕ್ಕೆ ಸಂಬಂಧಿಸಿದಂತೆ ಓಡೋಲಗ ಪ್ರಾರಂಭವಾಗುತ್ತದೆ . ಪಾತ್ರಧಾರಿಗಳು ಭಾಗವತರಿಗೆ , ಆನಂತರ ರಂಗಸ್ಥಳಕ್ಕೆ ವಂದಿಸಿ ಕುಣಿದು ತಮ್ಮ ಸಾಮರ್ಥ್ಯ ಪ್ರದರ್ಶಿಸುವರು ,

 

ಈ ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ 

1, ” ಆಹಹಾ ರುದ್ರಾ ಆಹಹಾ ದೇವಾ ”

ಆಯ್ಕೆ ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ‘ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ ಕನ್ನಡ ಭಾಷೆ ‘ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ` ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಅಹಹ ರುದ್ರಾ ಆಹಹ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ . ಈ ಕುಣಿತದಲ್ಲಿ ವೀರಭದ್ರನ ಹುಟ್ಟಿದ ಸಂದರ್ಭದ ವರ್ಣನೆಯನ್ನು ಮಾಡುತ್ತಾರೆ ” ಆ ಸಂದರ್ಭದಲ್ಲಿ ವೀರಗಾಸೆಯ ವೇಷದಾರಿಗಳು ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : ವೀರಗಾಸೆಯ ಅವರ ಕುಣಿತವು ರೌದ್ರಮಯವಾಗಿರುತ್ತದೆ . ವೀರಭದ್ರನ ಹುಟ್ಟಿನ ವರ್ಣನೆಯನ್ನು ನೃತ್ಯದ ಮೂಲಕ ಸ್ವಾರಸ್ಯಪೂರ್ಣವಾಗಿ ವರ್ಣಿಸಿಲಾಗಿದೆ ,

2. “ ಭಲರೇ ವೀರ , ಆಹಹಾವೀರ ”

ಆಯ್ಕೆ : ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ‘

ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ ಕನ್ನಡ ಭಾಷೆ ‘ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ` ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ ,

ಸಂದರ್ಭ : ವೀರಭದ್ರ ವೇಷಧಾರಿ ದಕ್ಷಯಾಗ , ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ .

ಮತ್ತೊಬ್ಬ ವ್ಯಕ್ತಿ “ ಭಲರೇ ವೀರ , ಆಹಹಾ ವೀರ ” ಎಂದು ಕಾಶು ಹೇಳುತ್ತ ಜಾಗಟೆ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ . ಆ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ವೀರಭದ್ರನ ವಿಜಯವನ್ನು ವೀರಗಾಸೆಯ ವೇಷಧಾರಿಯು ಕುಣಿಯುತ್ತಾ ಒಡಪಿಗೆ ತಕ್ಕಂತೆ ಕಾಲು ಹಾಕುತ್ತಾ ಕುಣಿಯುವುದು ರೋಮಾಂಚನಕಾರಿಯಾಗಿರುತ್ತದೆ ಎಂಬ ಅಂಶವು ಸ್ವಾರಸ್ಯ ಪೂರ್ವವಾಗಿ ಮೂಡಿ ಬಂದಿದೆ .

3. ” ಮಳ್ಳಲೆ ಹೆತ್ತಯ್ಯ ನಮ್ಮ ಹಾಜಿ ಮಾಯಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ ” :

ಆಯ್ಕೆ   ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ

ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ – ಕನ್ನಡ ಭಾಷೆ ‘ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ‘ ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಹಲಗಿದ .

ಸಂದರ್ಭ : ಗುಡ್ಡದವರು ಕಾಣಿಕೆಯನ್ನು ಪಡೆಯುವ ಮೊದಲು ಕಂಸಾಳೆಯನ್ನು ಮುಂದೆ ಚಾಚಿ ಕಾಣಿಕೆಯನ್ನು ಪಡೆಯುತ್ತಾರೆ , ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಪೂಜಿಸುತ್ತಾರೆ ,

ಕೈಗೆತ್ತಿಕೊಳ್ಳುವ ಮೊದಲು ” ಮಳ್ಳಲೆ ಹೆತ್ತಯ್ಯ ನಮ್ಮ ಸ್ವಾಣಿ ಮಾಯಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣ ಶರಣಾರ್ಥಿ ” ಎಂದು ನಮಸ್ಕರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ ,

ಸ್ವಾರಸ್ಯ : ದೇವರ ಗುಡ್ಡದವರು ಮಲೆಮಹೇಶ್ವರನ ಮೇಲೆ ಇಟ್ಟಿರುವ ಭಕ್ತಿಯಷ್ಟೆ ಕಂಸಾಳೆಯ ಮೇಲೂ ಎಂಬದು ಸ್ವಾರಸ್ಯಕರವಾಗಿದೆ .

4. “ ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ” :

ಆಯ್ಕೆ  ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ – ಕನ್ನಡ ಭಾಷೆ ‘ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ “ ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸ ದೆ .

ಸಂದರ್ಭ : ಹಿಮ್ಮೇಳದಲ್ಲಿ ಹಲವರು ತಾಳ ಮತ್ತು ಕೊಳಲು ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ , ಕಥೆಗಳನ್ನು ರಗಳೆಯ ಧಾಟಿಯಲ್ಲಿ ಹಾಡುವಾಗ ಈ ಸಾಲುಗಳನ್ನು ಹಾಡುತ್ತಾರೆ ಆ ಸಂದರ್ಭದಲ್ಲಿ ಈ ರೀತಿ ಹಾಡಿದ್ದಾರೆ .

ಸ್ವಾರಸ್ಯ  ಸಾಮಾನ್ಯವಾಗಿ ಹಾಡಿನ ವಿಷಯ ದೈವಮಹಿಮೆ ಅಥವಾ ದೈವಭಕ್ತರ ಕಥೆಯಾಗಿರುತ್ತದೆ . ಎಂಬುದನ್ನು ಸ್ವಾರಸ್ಯಕರವಾಗಿ ಮೂಡಿ ಬಂದಿದೆ .

5 , “ ದುಷ್ಟ ನಿಗ್ರಹ , ಶಿಷ್ಟ ಪರಿಪಾಲನೆ ”

ಆಯ್ಕೆ : ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ

ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ‘ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ – ಕನ್ನಡ ಭಾಷೆ ‘

ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ` ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಕಾಳಗ , ಸಂಹಾರ ಮತ್ತು ಕಲ್ಯಾಣಗಳಿಗೆ ಸಂಬಂದಪಟ್ಟ ಏಪ್ರಸಂಗಗಳೇ ಹೆಚ್ಚು ಕಾಳಗವಿಲ್ಲದೇ ಯಕ್ಷಗಾನ ಇರುವುದಿಲ್ಲ ,

ಯಕ್ಷಗಾನ ಪ್ರಸಂಗ ರಚಿಸಿದವರು ದುಷ್ಟನಿಗ್ರಹ ಶಿಷ್ಟಪರಿಪಾಲನೆ ತತ್ವಗಳನ್ನು ಪ್ರಸಂಗಗಳಲ್ಲಿ ಅಳವಡಿಸಿರುತ್ತಾರೆ , ಆ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಯಕ್ಷಗಾನ ಜನರಲ್ಲಿ ಧಾರ್ಮಿಕ ಮತ್ತು ನೀತಿ ಪ್ರಶ್ನೆಗಳನ್ನು ಬೆಳೆಸಲು ಸಹಕಾರಿಯಾಗಿದೆ . ಎಂಬುದು ಸ್ವಾರಸ್ಯ ಪೂರ್ಣವಾಗಿ ವರ್ಣಿಸಲಾಗಿದೆ .

 

 ಉ) ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಸಂಭಾವ್ಯ ಉತ್ತರಗಳನ್ನು ನೀಡಿದೆ . ಅವುಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ ,

1.ವೀರಗಾಸೆ ,,,,,,,,,ಸಂಪ್ರದಾಯಕ್ಕೆ ಸೇರಿದ ನೃತ್ಯ ( ಶೈವ . ವೈಷ್ಣವ , ಬೀರೇಶ್ವರ . ಶ್ರೀವೈಷ್ಣವ )

2. ಕಂಸಾಳೆಗುಡ್ಡರು ಕಂಸಾಳೆಯನ್ನು ಕೈಗೆತ್ತಿಕೊಳ್ಳವ ಮೊದಲು,,,,,,,,,, ದೇವರನ್ನು ಸ್ಮರಿಸುತ್ತಾರೆ .  ( ಭೈರವೇಶ್ವರ , ಮಹದೇಶ್ವರ , ನಂಜುಡೇಶ್ವರ , ವೈದೈಶ್ವರ )

3 , ಡೊಳ್ಳು ಕುಣಿತದ ಕಲಾವಿದರು ಹಾಡುವ ಬೀರೇಶ್ವರ ದೇವರ ಹಾಡು,,,,,,,,,,, ಉದಾಹರಣೆ ಕರೆಯುತ್ತಾರೆ . ( ಭಕ್ತಿಗೀತೆ , ಭಾವಕ್ಕೆ ಕಾವ್ಯಗೀತೆ . ಜನಪದಗೀತೆ )

4. ಯಕ್ಷಗಾನದಲ್ಲಿ ರಂಗಸ್ಥಳದ ಸಮೀಪವಿರುವ ನೇಪಥ್ಯವನ್ನು…….ಎಂದು ಕರೆಯುತ್ತಾರೆ ( ವೇದಿಕೆ ಸಭಾಮಂಟಪ , ಚಕಿ ತೆರೆ)

 

ಊ) ಹೊಂದಿಸಿ ಬರೆಯಿರಿ

ಅ ಪಟ್ಟಿ                                     ಆ ಪಟ್ಟಿ

1. ವೀರಭದ್ರ                            ಕಾಲಿಸತಾಲ್ಯ

2. ಕಂಸಾಳ                              ಚರ್ಮವಾದ್ಯ

3 , ಡೊಳ್ಳು                              ಮಹಾಕಾವ್ಯ

4. ಯಕ್ಷಗಾನ                            ವೇಷಭೂಷಣ

5. ಮಹದೇಶ್ವರ                        ಭಾಗವತ

ಏಳ್ಳಲೆ ಹೆತ್ತಯ್ಯ

ದೀವಟಿ

 

ಸರಿ ಉತ್ತರಗಳು .

1, ಒಡಪು

2. ಕಾಲಸಪಾಳ್ಯ

3. ಧರ್ಮವಾದ್ಯ

4 ಭಾಗವತ

5 ,ಒಳ್ಳಲೆ ಹೆತ್ತಯ್ಯ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

1 ಕ್ರಿಯಾಪದ ಎಂದರೇನು ?

ಉತ್ತರ : ಕ್ರಿಯೆಯನ್ನು ಸೂಚಿಸುವ ಪದಗಳೇ ಕ್ರಿಯಾಪದಗಳು ,

2. ಕ್ರಿಯಾಪ್ರಕೃತಿ ಎಂದರೇನು ? ಉದಾಹರಣೆ ಕೊಡಿ ,

ಉತ್ತರ : ಕ್ರಿಯಾರ್ಥವನ್ನು ಸೂಚಿಸುವ ಪ್ರತ್ಯಯವನ್ನು ಹೊಂದದಿರುವ ಪದವೇ ಕ್ರಿಯಾಪ್ರಕೃತಿ ಅಥವಾ ಧಾತು , ಕ್ರಿಯಾಪದದ ಮೂಲರೂಪವೇ ಧಾತು .

ಉದಾ : ನೋಡು , ಹಾಡು , ಜೋಗ , ಕೇಳು , ಮಾಡು .

1 ಸಕರ್ಮಕ ಧಾತುವನ್ನು ಉದಾಹರಣೆ ಸಹಿತ ವಿವರಿಸಿ ,

ಉತ್ತರ : ಕರ್ಮಪದವನ್ನು ಬಯಸುವ ಧಾತುಗಳೇ ಸಕರ್ಮಕ ಧಾತುಗಳು ,

ಉದಾ : ರಾಮನು ಗಿಡವನ್ನು ನೆಟ್ಟನು . ಶಿಲ್ಪಿಗಳು ಗುಡಿಯನ್ನು ಕಟ್ಟಿದರು . ವಿದ್ಯಾರ್ಥಿಗಳು ಪಾಠವನ್ನು ಓದಿದರು .

2 , ಅಕರ್ಮಕ ಧಾತುಗಳಿಗೆ ಐದು ನಿದರ್ಶನ ಕೊಡಿ .

ಉತ್ತರ : ಅಕರ್ಮಕ ಧಾತುಗಳು : -ಕರ್ಮಪದವನ್ನು ಬಯಸದೇ ಇರುವ ಧಾತುಗಳೇ ಅಕರ್ಮಕ ಧಾತುಗಳು .

ಉದಾ : ಕೂಸು ಮಲಗಿತು . ಅವನು ಬದುಕಿದನು . ಆಕಾಶ ಹೊಳೆಯುತ್ತಿದೆ ; ಗಾಳಿಯು ಬೀಸುತ್ತಿದೆ . ಮಲಗು , ಬದುಕು , ಹೋಳಿ , ಬೀಸು ಎಂಬ ಧಾತುಗಳು ಕರ್ಮಪದಗಳನ್ನು ಬಯಸುವುದಿಲ್ಲ ,

 

ಆ ) ಕೊಟ್ಟಿರುವ ವಾಕ್ಯಗಳಲ್ಲಿ ಸಕರ್ಮಕ ಮತ್ತು ಅಕರ್ಮಕ ಧಾತುಗಳನ್ನು ಗುರುತಿಸಿ ಬರೆಯಿರಿ ,

1. ರೈತನು ಹೊಲವನ್ನು ಉಳುತ್ತಾನೆ .

ಉತ್ತರ : ಉಳುತ್ತಾನೆ = ಸಕರ್ಮಠ ಧಾತು – ಉಳು

2. ಗಾಳಿಯು ಬೀಸುತ್ತಿದೆ .

ಉತ್ತರ : ಬೀಸುತ್ತಿದೆ . ಅಕರ್ಮಕ ಧಾತು ~ ಬೀಸು .

3 , ಹಕ್ಕಿಗಳು ಚಿಲಿಪಿಲಿಗುಟ್ಟಿದವು ,

ಉತ್ತರ : ಗುಟ್ಟಿದವು = ಅಕರ್ಮಕಧಾತು = ಗುಟ್ಟು

4 ವಿದ್ಯಾರ್ಥಿನಿಯರು ಆಟವನ್ನು ಆಡಿದರು ,

ಉತ್ತರ : ಆಡಿದರು = ಸಕರ್ಮಕ ಧಾತು – ಆಡು

 

ಪ್ರಬಂಧ Janapada Kalegala Vaibhava Prabandha Kannada

ಇ ) ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ಬರೆಯಿರಿ .

1) ಸಾವಯವ ಕೃಷಿ

ಪೀಠಿಕೆ : ಇಂದು ಕೃಷಿ ಕ್ಷೇತ್ರದಲ್ಲಿ ಅನೇಕ ರೀತಿಯ ಸಂಶೋಧನೆಗಳು ನಡೆಯುತ್ತಿವೆ . ಪಾರಂಪರಿಕ ಪದ್ಧತಿ ಹಾಗೂ ವೈಜ್ಞಾನಿಕ ಕೃಷಿ ಪದ್ದತಿಗಳ ಸಾಧಕ ಭಾದಕಗಳ ಬಗ್ಗೆ ಕೃಷಿ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಸುತ್ತಿದ್ದರೆ , ಹೊಸಹೊಸ ಪ್ರಯೋಗಗಳು ನಡೆಯುತ್ತಿವೆ . ಇದರ ಫಲಸ್ವರೂಪದ ಸಾವಯವ ಕೃಷಿ ಪದ್ಧತಿ .

ವಿಷಯ ನಿರೂಪಣೆ : – ಗಳ ಆವರ್ತನ , ಹಸಿರು ಗೊಬ್ಬರ , ಮಿಶ್ರಗೊಬ್ಬರ , ಜೈವಿಕವಾಗಿ ಕೀಟಗಳ ನಿಯಂತ್ರಣಗಳನ್ನು ಅವಲಂಬಿತಗೊಂಡಿರುವುದು ಸಾವಯವ ಕೃಷಿ ,

ಹಲವು ರಾಷ್ಟ್ರಗಳಲ್ಲಿ ಸಾವಯವ ಬೇಸಾಯ ಪದ್ಧತಿಗಳನ್ನು ಅಂತಾರಾಷ್ಟ್ರೀಯವಾಗಿ ನಿಯಮಗಳಿಗೊಳಪಡಿಸಲಗಿದೆ .

ಸಾವಯವ ಚಳುವಳಿ 1934-1940 ರ ದಶಕದಲ್ಲಿ ಬೇಸಾಯ ಕ್ಷೇತ್ರವನ್ನು ಕೃತಕ ಗೊಬ್ಬರಗಳ ಮೇಲೆ ಹೆಚ್ಚು ಅವಲಂಬಿಸುವುದನ್ನು ಹಿಮ್ಮೆಟ್ಟಿಸುವ ಸಲುವಾಗಿ ಪ್ರಾರಂಭವಾಯಿತು .

ಸಾವಯವ ಕೃಷಿ ಪದ್ಧತಿಯ ಪಿತಾಮಹನೆಂದು ಸರ್ , ಆಲ್ಬರ್ಟ ಹೋವಾರ್ಡ ಅವರನ್ನು ವಿಶೇಷವಾಗಿ ಗುರುತಿಸಲಾಗಿದೆ .

ವಿಶ್ವದ ಒಟ್ಟು ಕೃಷಿ ಉತ್ಪನ್ನದ ಪ್ರಮಾಣವನ್ನು ಪರಿಗಣಿಸಿದಾಗ ಸಾವಯವ ಉತ್ಪನ್ನ ಸಣ್ಣ ಪ್ರಮಾಣವೆನಿಸಿದರೂ ಅದು ಅನೇಕ ದೇಶಗಳಲ್ಲಿ ವೇಗವಾಗಿ ಬೆಳೆಯುತ್ತಿದೆ .

ಸಾವಯವ ವ್ಯವಸಾಯವು ಅರ್ಥಪೂರ್ಣವಾದ ಸಾಮಾಜಿಕ ಆರ್ಥಿಕ ಮತ್ತು ಪರಿಸರ ವಿಜ್ಞಾನದ ಸಮರ್ಥನೀಯ ಬೆಳವಣಿಗೆಗಾಗಿ , ವಿಶೇವಾಗಿ ಬಡ ರಾಷ್ಟ್ರಗಳ ಬೆಳವಣಿಗೆಗೆ ಮಹತ್ವಪೂರ್ಣ ಕೊಡುಗೆ ನೀಡುತ್ತದೆ .

ಕರ್ನಾಟಕದಲ್ಲಿ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲೆಂದು ಸಾವಯವ ಕೃಷಿ ಮಿಶನ್ ರಚಿಸಲಾಗಿದೆ .

ಉಪಸಂಹಾರ : – ಸಾವಯವ ಕೃಷಿ ಪದ್ಧತಿಯು ಒಂದು ಉತ್ತಮ ವಿಧಾನವಾಗಿದ್ದು , ಜ್ಞಾನಯುಕ್ತ ಕೇಂದ್ರಿಕೃತ ಉತ್ಪಾದನೆಯ ವ್ಯವಸ್ಥೆಯಾಗಿದೆ .

ಇಷ್ಟಲ್ಲದೆ ಹೆಚ್ಚು ಇಳುವರಿ ನೀಡುವ ಬೇಸಾಯ ವ್ಯವಸ್ಥೆಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿದೆ . ಆದ್ದರಿಂದ ಇದನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳಬಹುದೆಂಬುದು ನನ್ನ ಅಭಿಪ್ರಾಯವಾಗಿದೆ

2) ಮಳೆ ನೀರು ಕೊಯ್ದು

ಪೀಠಿಕೆ : – ಮಳೆ ನೀರು ಕೊಯ್ತು ಎಂಬುದು ಮಳೆನೀರನ್ನು ಸಂಗ್ರಹಿಸುವ ವಿಧಾನಕ್ಕಿರುವ ಹೆಸರು ಭೂಮಿಗೆ ಬಿದ್ದಂತಹ ನೀರನ್ನು ವಿವಿಧ ಅವಶ್ಯತೆಗಳಿಗೆ ಸದಾ ಉಪಯೋಗಿಸಲು ಅನುಕೂಲವಾಗುವಂತ ಶೇಖರಿಸುವ ವಿಧಾನವೇ ಮಳೆ ನೀರು ಕೊಯ್ದು ,

ಕೃಷಿ ಮತ್ತು ಕೃಷಿಯೇತರ ಪ್ರದೇಶಗಳಲ್ಲಿ ನೀರನ್ನು ಹೆಚ್ಚಿನ ಮಟ್ಟದಲ್ಲಿ ಸಂಗ್ರಹಣೆ ಮಾಡಬೇಕು . ಇದರಿಂದ ತುಂಬಾ ಅನುಕೂಲಗಳಿವೆ ,

ವಿಷಯ ನಿರೂಪಣೆ : – ಮಳೆ ಬಂದು ನೀರು ವ್ಯರ್ಥವಾಗಿ ಹೋಗುವ ಬದಲು ಮಳೆ ನೀರನ್ನ ಸಂಗ್ರಹಿಸುವ ಕೆಲಸವಾಗಬೇಕು . ಹರಿದು ಹೋಗುವ ನೀರನ್ನು ತಡೆಗಟ್ಟಿ ಭೂಮಿಯಲ್ಲಿ ಇಂಗುವಂತೆ ಮಾಡಿದರೆ ,

ಅಂತರ್ಜಲ ಹೆಚ್ಚುತ್ತದೆ . ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಕಲಸವಾದರೆ ದನಕರುಗಳಿಗೆ , ಕುರಿ ಮೇಕೆಗಳಿಗೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವುದಕ್ಕೆ ಅನುಕೂಲಕರವಾಗಿರುತ್ತದೆ .

ನಮ್ಮ ರೈತರು ಉತ್ತಮವಾದ ಬೇಸಾಯದ ಕ್ರಮಗಳನ್ನು ಅನುಸರಿಸಬೇಕು . ಮಳೆಯ ನೀರು ಬಿದ್ದಲ್ಲಿಯೇ ಸಂರಕ್ಷಿಸುವ ಬೇಸಾಯವನ್ನು ಮಾಡಬೇಕು .

ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ , ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ನೀರು ಮಣ್ಣಿನಲ್ಲಿ ಹೆಚ್ಚು ಇಂಗಲು ಅವಕಾಶವಾಗುತ್ತದೆ , ಹೊಲದ ಎರಡು ಬದಗಳ ಮಧ್ಯದ ಜಾಗದಲ್ಲಿ ಸಣ್ಣ ತಗ್ಗುಗಳನ್ನು ನಿರ್ಮಿಸುವುದರಿಂದ ನೀರು ಸಂಗ್ರಹಣೆ ಮಾಡಬಹುದು

. ಮಳೆಗಾಲದ ಪ್ರಾರಂಭದ ದಿನಗಳಲ್ಲಿ ರೈತರು ತಮ್ಮ ಹೊಲವನ್ನು ಇಳಿಜಾರಿಗೆ ಅಡ್ಡವಾಗಿ ಇಳುಮೆ ಮಾಡಿದರೆ ಮಳೆ ನೀರು ಹೆಚ್ಚು ಭೂಮಿಯಲ್ಲಿ ಇಂಗಲು ಸಹಾಯಕವಾಗಿತ್ತದೆ .

ಈ ಮಳೆ ನೀರು ಕೊಯ್ದು ಕೇವಲ ಕೃಷಿ ಭೂಮಿಯಲ್ಲಿ ಮಾತ್ರವಲ್ಲದೆ , ಕೃಷಿಯೇತರ ಪ್ರದೇಶಗಳಲ್ಲೂ ಮಾಡಬಹುದು , ಮನೆಯ ಮೇಲ್ಮಾವಣಿ ಮಳೆ ನೀರು ಕೊಯ್ದು ಎಂಬ ವಿಧಾನದ ಮೂಲಕ ಮಾಡಬಹುದು .

ಉಪಸಂಹಾರ : – ಮಳೆ ನೀರು ಸಂರಕ್ಷಣೆ ಮಾಡುವುದರಿಂದ ಮನುಷ್ಯನಿಗೆ ದಿನನಿತ್ಯ ಬಳಸಲು ನೀರು ಸಮೃದ್ಧವಾಗಿ ಸಿಗುತ್ತದೆ . ಬೆಳೆಗಳಿಗೆ ಸಸ್ಯಗಳಿಗೆ , ಧನಕರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಸಿಗುತ್ತದೆ .

ಇಷ್ಟೇ ಅಲ್ಲದೇ ನಮ್ಮ ರೈತರು ನೀರಾವರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಕೆ ಮಾಡಿಕೊಂಡು ಅವರ ಕೃಷಿ ಉತ್ಪಾದನೆ ಹೆಚ್ಚಿಸಲು ನೆರವಾಗುತ್ತದೆ . ನೀರು ಅಮೂಲ್ಯವಾದದ್ದು , ಅದನ್ನು ಉಳಿಸು ಹೊಣೆ ಪ್ರತಿಯೊಬ್ಬ ಜವಾಬ್ದಾರಿ ನಾಗರಿಕನಾ ಆದ್ಯ ಕರ್ತವ್ಯವಾಗಬೇಕು .

ನಾವು ನೀವು ಎಲ್ಲರೂ ಮಳೆ ನೀರನ್ನು ಸಂರಕ್ಷಣೆ ಮಾಡಲು ಕಂರ್ಕಣ ಬದ್ಧರಾಗಬೇಕು . ಇಲ್ಲದೇ ಹೋದರೆ ಮುಂದೊಂದು ದಿನ ನೀರು ಸಿಗದೇ ಸಾಯುವ ಸ್ಥಿತಿ ಬಂದರು ಬರಬಹುದು .

9th standard Janapada Kalegala Vaibhava Kannada Notes 9ನೇ ತರಗತಿ ಜನಪದ ಕಲೆಗಳ ವೈಭವ ನೋಟ್ಸ್ 9th class 6th chapter question and answers kannada

janapada kalegala vaibhava information in kannada

9th kannada | ಜನಪದ ಕಲೆಗಳ ವೈಭವ

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ

9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

One thought on “9th Janapada Kalegala Vaibhava Kannada Notes 9ನೇ ತರಗತಿ ಜನಪದ ಕಲೆಗಳ ವೈಭವ ನೋಟ್ಸ್

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh