ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-7.5 ಮೈಸೂರು ಒಂದು ಮಾದರಿ ರಾಜ್ಯ ನೋಟ್ಸ್, 2nd Puc History Chapter 7.5 Notes Question Answer Mcq in Kannada Pdf 2023 Kseeb Solution For Class 12 History Chapter 7.5 Notes in Kannada Mysore Ondu Madari Rajya in Kannada Pdf 2nd Puc History Chapter 7 Notes
ಅಧ್ಯಾಯ-7.5 ಮೈಸೂರು ಒಂದು ಮಾದರಿ ರಾಜ್ಯ

2nd Puc History Chapter 7.5 Notes Question Answer
1. ಮೈಸೂರಿನ ವಿಶ್ವವಿದ್ಯಾಲಯ ಸ್ಥಾಪನೆಯಾದದ್ದು ಯಾವಾಗ ?
1916 ರಲ್ಲಿ .
2. ಕನ್ನಡ ಸಾಹಿತ್ಯ ಪರಿಷತ್‌ನ್ನು ಸ್ಥಾಪಿಸಿದವರು ಯಾರು ?
ಸರ್.ಎಂ. ವಿಶ್ವೇಶ್ವರಯ್ಯ .
3 . ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಬ್ಯಾಂಕ್ ಅನ್ನು ಹೆಸರಿಸಿ .
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ( ಮೈಸೂರು ಬ್ಯಾಂಕ್ ]
4. ವಿಶ್ವೇಶ್ವರಯ್ಯನವರು ಕೈಗಾರಿಕಾಭಿವೃದ್ಧಿ ಕುರಿತು ನೀಡಿ ಜನಪ್ರಿಯ ಘೋಷಣೆ ಏನು ?
‘ ಕೈಗಾರಿಕೀಕರಣ ಇಲ್ಲವೇ ವಿನಾಶ ‘ .
5. ಮೈಸೂರಿನಿಂದ ಬೆಂಗಳೂರಿಗೆ ರಾಜಧಾನಿಯನ್ನು ವರ್ಗಾಯಿಸಿದವರು ಯಾರು ?
ಮಾರ್ಕ್ ಕಬ್ಬನ್ .
6. ಮೈಸೂರು ರಾಜ್ಯದಲ್ಲಿ ಹಾಕಲಾದ ಪ್ರಥಮ ರೈಲು ಮಾರ್ಗವನ್ನು ಹೆಸರಿಸಿ .
ಬೆಂಗಳೂರಿನಿಂದ ಜೋಲಾರಪೇಟೆ ರೈಲುಮಾರ್ಗ
7. ವಿಶ್ವೇಶ್ವರಯ್ಯನವರ ಜನ್ಮಸ್ಥಳ ಯಾವುದು ?
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ,
8. ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ?
ಸರ್.ಎಂ. ವಿಶ್ವೇಶ್ವರಯ್ಯ .
9. ಕೃಷ್ಣರಾಜಸಾಗರ ಅಣೆಕಟ್ಟನ್ನು ನಿರ್ಮಿಸಿದವರು ಯಾರು ?
ಸರ್.ಎಂ. ವಿಶ್ವೇಶ್ವರಯ್ಯ
10 . ಬೆಂಗಳೂರಿನಲ್ಲಿ ನಿಮ್ಹಾನ್ಸ್ ಸ್ಥಾಪಕರನ್ನು ಹೆಸರಿಸಿ ?
ಸರ್.ಮಿರ್ಜಾ ಇಸ್ಮಾಯಿಲ್
11. ಬೃಂದಾವನ ಗಾರ್ಡನ್ ಅನ್ನು ನಿರ್ಮಿಸಿದವರು ಯಾರು ?
ಸರ್.ಮಿರ್ಜಾ ಇಸ್ಮಾಯಿಲ್ ,
2nd Puc History Chapter 7.5 Notes in Kannada
1. ಬೌರಿಂಗ್‌ನ ಯಾವುದಾದರೂ ಎರಡು ಆಡಳಿತ ಸುಧಾರಣೆಗಳನ್ನು ಬರೆಯಿರಿ .
ಭೂ ಕಂದಾಯಗಳ ಸುಧಾರಣೆ .
ನ್ಯಾಯಾಂಗ ಮತ್ತು ಪೋಲಿಸ್ ಇಲಾಖೆಗಳ ಸಂಘಟನೆ .
2. ಮೈಸೂರಿನ ಯಾರಾದರೂ ಇಬ್ಬರು ಮುಖ್ಯ ದಿವಾನರು ಗಳನ್ನು ಹೆಸರಿಸಿ .
ಸರ್.ಎಂ. ವಿಶ್ವೇಶ್ವರಯ್ಯ ಮತ್ತು ಸರ್.ಮಿರ್ಜಾ ಇಸ್ಮಾಯಿಲ್ .
3. ವಿಶ್ವೇಶ್ವರಯ್ಯನವರ ತಂದೆ – ತಾಯಿಗಳನ್ನು ಹೆಸರಿಸಿ .
ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ .
4. ಮೈಸೂರಿನ ಇಬ್ಬರು ಪ್ರಮುಖ ಕಮಿಷನರ್‌ಗಳನ್ನು ಹೆಸರಿಸಿ .
ಮಾರ್ಕ್ ಕಬ್ಬನ್ ಮತ್ತು ಲೆವಿಸ್ ಬೆಂಥಾಮ್ ಬೌರಿಂಗ್ .
5. ಮಾರ್ಕ್ ಕಬ್ಬನ್‌ರ ಯಾವುದಾದರೂ ಎರಡು ಆಡಳಿತ ಸುಧಾರಣೆಗಳನ್ನು ಬರೆಯಿರಿ .
ಮೈಸೂರಿನಿಂದ ಬೆಂಗಳೂರಿಗೆ ರಾಜಧಾನಿಯನ್ನು ವರ್ಗಾಯಿಸಿದ್ದು .
ಕಾಫಿ ತೋಟಗಳ ಅಭಿವೃದ್ಧಿ ,
6. ವಿಶ್ವೇಶ್ವರಯ್ಯನವರು ರಚಿಸಿದ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ .
“ ಪ್ಲಾನಡ್ ಎಕಾನಮಿ ಫಾರ್ ಇಂಡಿಯಾ , “ ರೀಕನ್ನಕ್ಸಿಂಗ್ ಇಂಡಿಯಾ ”
7. ಮಿರ್ಜಾ ಇಸ್ಮಾಯಿಲ್‌ರು ಸ್ಥಾಪಿಸಿದ ಯಾವುದಾದರೂ ಎರಡು ಕೈಗಾರಿಕೆಗಳನ್ನು ಹೆಸರಿಸಿ .
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ , ಮಂಡ್ಯದ ಸಕ್ಕರೆ ಕಾರ್ಖಾನೆ .
ಮೈಸೂರು ಒಂದು ಮಾದರಿ ರಾಜ್ಯ Notes
1. ಸರ್ . ಎಂ . ವಿಶ್ವೇಶ್ವರಯ್ಯನವರನ್ನು ‘ ಆಧುನಿಕ ಮೈಸೂರಿನ ನಿರ್ಮಾತೃ ‘ ಎಂದು ಕರೆಯಲಾಗಿದೆ . ವಿವರಿಸಿ.
ಚಿಕ್ಕಬಳ್ಳಾಪುರದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಬೆಂಗಳೂರಿನಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿದ ಇವರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದು , ಪುಣೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು , 1884 ರಿಂದ 1909 ರವರೆಗೆ ಬಾಂಬೇ ಸರ್ಕಾರದಲ್ಲಿ ಸೇವೆ ಸಲ್ಲಿಸಿದರು .
1912 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಇವರನ್ನು ಮೈಸೂರಿನ ದಿವಾನರನ್ನಾಗಿ ನೇಮಕ ಮಾಡಿದರು . ಇವರ ಕಾಲದಲ್ಲಿ ಮೈಸೂರು ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿತು .
ಆಡಳಿತಾತ್ಮಕ ಸುಧಾರಣೆಗಳು :
ಶಾಸನ ಸಭೆಯ ಸದಸ್ಯರ ಸಂಖ್ಯೆಯನ್ನು 18 ರಿಂದ 24 ಕ್ಕೆ ಹೆಚ್ಚಿಸಲಾಯಿತು . ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಮ ಪಂಚಾಯಿತಿ ಕಾಯ್ದೆಯು ಜಿಲ್ಲೆ ಮತ್ತು ತಾಲ್ಲೂಕು ಮಂಡಳಿಗಳಲ್ಲಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿತು . ಹಳ್ಳಿಗಳ ಪ್ರಗತಿಗಾಗಿ ಗ್ರಾಮ ಸುಧಾರಣಾ ಸಮಿತಿಗಳನ್ನು ಸ್ಥಾಪಿಸಲಾಯಿತು . ಮಲೆನಾಡು ಪ್ರದೇಶಗಳ ಅಭಿವೃದ್ಧಿಗಾಗಿಯೇ ಒಂದು ಪ್ರತ್ಯೇಕ ಯೋಜನೆಯನ್ನು ರಚಿಸಲಾಯಿತು .
ಕೈಗಾರಿಕಾ ಅಭಿವೃದ್ಧಿ :
“ ಕೈಗಾರಿಕೀಕರಣ ಇಲ್ಲವೇ ವಿನಾಶ ” ಎಂಬುದು ಇವರ ಘೋಷಣೆಯಾಗಿತ್ತು . ಭದ್ರಾವತಿಯಲ್ಲಿನ ಕಬ್ಬಿಣದ ಕಾರ್ಖಾನೆ . ಮೈಸೂರಿನಲ್ಲಿ ಗಂಧದ ಎಣ್ಣೆ ಕಾರ್ಖಾನೆ , ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆ ಕೇಂದ್ರ ಕೈಗಾರಿಕಾ ಕಾರ್ಯಾಗಾರ , ಚರ್ಮ ಹದ ಮಾಡುವ ಕಾರ್ಖಾನೆ . ಲೋಹದ ಕಾರ್ಖಾನೆಗಳು , ಬೆಂಗಳೂರಿನಲ್ಲಿ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯನ್ನು ಸ್ಥಾಪಿಸಿದರು . ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ನೇಕಾರಿಕೆ , ಕುಂಬಾರಿಕೆ , ಹೆಂಚು , ಮರಗೆಲಸ , ಚಾಪೆ , ಚರ್ಮದ ವಸ್ತುಗಳು , ಬೀಡಿ ಮತ್ತು ಅಗರಬತ್ತಿ ಕೈಗಾರಿಕೆಗಳು ಪ್ರವರ್ಧಮಾನಕ್ಕೆ ಬಂದವು .
ಶೈಕ್ಷಣಿಕ ಸುಧಾರಣೆಗಳು :
ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಿದರು . ವಿದ್ಯಾರ್ಥಿವೇತನ , ಸ್ತ್ರೀ ಶಿಕ್ಷಣಕ್ಕೆ ಒತ್ತು ನೀಡಿದರು . ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು , ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಆರಂಭಿಸಿದರು . ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ಶಾಲೆಯೊಂದನ್ನು ಸ್ಥಾಪಿಸಿದರು . 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು , 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸಿದರು .
ಇನ್ನಿತರ ಸಾಧನೆಗಳು :
ಕೃಷ್ಣರಾಜ ಸಾಗರ ಅಣೆಕಟ್ಟನ್ನು [ K.R.S ] ನಿರ್ಮಿಸಿ ಮಂಡ್ಯ ಜಿಲ್ಲೆ ಕೃಷಿ ಸಮೃದ್ಧಿಗೆ ಕಾರಣರಾದರು . 1913 ರಲ್ಲಿ ಮೈಸೂರು ಅರಸೀಕೆರೆ ಮತ್ತು ಬೌರಿಂಗ್ ಪೇಟೆ , ಕೋಲಾರ ರೈಲ್ವೆ ಮಾರ್ಗಗಳನ್ನು ಹಾಕಲಾಯಿತು . ಪ್ರಥಮ ಜಾಗತಿಕ ಯುದ್ಧದ ಪರಿಣಾಮವಾಗಿ ಆಹಾರ ವಸ್ತುಗಳ ಕೊರತೆಯುಂಟಾದಾಗ ನ್ಯಾಯಬೆಲೆ ಅಂಗಡಿಗಳನ್ನು ತೆರೆದರು . -ಸರ್ . ಎಂ.ವಿಶ್ವೇಶ್ವರಯ್ಯನವರು 1918 ರಲ್ಲಿ ರಾಜೀನಾಮೆ ನೀಡಿದರು . ಬ್ರಿಟಿಷ್ ಸರ್ಕಾರವು ಇವರಿಗೆ ‘ ಸರ್ ‘ ಪದವಿಯನ್ನು ನೀಡಿತು . 1955 ರಲ್ಲಿ ಭಾರತ ಸರ್ಕಾರವು ‘ ಭಾರತರತ್ನ ಪ್ರಶಸ್ತಿ ನೀಡಿತು . ತನ್ನ 101 ನೇ ವಯಸ್ಸಿನಲ್ಲಿ 1962 ರಲ್ಲಿ ನಿಧನರಾದರು .
ಹೆಚ್ಚುವರಿ ಪ್ರಶ್ನೋತ್ತರಗಳು
1. ಸರ್.ಎಂ.ವಿಶ್ವೇಶ್ವರಯ್ಯನವರು 1884 ರಿಂದ 1909 ರ ವರೆಗೆ ಯಾವ ಸರ್ಕಾರದಲ್ಲಿ ಸೇವೆ ಸಲ್ಲಿಸಿದರು ?
ಬಾಂಬೇ ಸರ್ಕಾರದಲ್ಲಿ .
2. ಸರ್.ಎಂ.ವಿಶ್ವೇಶ್ವರಯ್ಯನವರನ್ನು ಯಾರು ಮೈಸೂರಿನ ದಿವಾನರಾಗಿ ನೇಮಕ ಮಾಡಿಕೊಂಡರು ?
ನಾಲ್ವಡಿ ಕೃಷ್ಣರಾಜ ಒಡೆಯರ್
3 . ಮೈಸೂರು ಬ್ಯಾಂಕನ್ನು ಯಾವಾಗ ಸ್ಥಾಪಿಸಲಾಯಿತು ?
1913 ರಲ್ಲಿ .
4. ‘ ಎವ್ಹಿಜನ್ ಆಫ್ ಪ್ರಾಸ್ಪರಸ್ ಮೈಸೂರು ‘ ಇದು ಯಾರ ಕೃತಿ ?
ಸರ್.ಎಂ.ವಿಶ್ವೇಶ್ವರಯ್ಯ
5. ಮೈಸೂರು ಮತ್ತು ಬೆಂಗಳೂರುಗಳಲ್ಲಿ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಿದವರಾರು ?
ಸರ್ ಮಿರ್ಜಾ ಇಸ್ಮಾಯಿಲ್
6. ನಗರ ದಂಗೆಯು ಯಾವಾಗ ನಡೆಯಿತು ?
ಕ್ರಿ.ಶ .1831 ರಲ್ಲಿ .
7. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದವರಾರು ?
ಮಾರ್ಕ್ ಕಬ್ಬನ್
8.1881 ರಲ್ಲಿ ಮೈಸೂರು ರಾಜ್ಯವನ್ನು ಯಾರಿಗೆ ‘ ಪುನರ್‌ದಾನ ‘ ಮಾಡಲಾಯಿತು ?
ಹತ್ತನೇ ಚಾಮರಾಜ ಒಡೆಯರಿಗೆ
FAQ
ಸರ್.ಎಂ. ವಿಶ್ವೇಶ್ವರಯ್ಯ .
ಸರ್.ಎಂ. ವಿಶ್ವೇಶ್ವರಯ್ಯ
1913 ರಲ್ಲಿ .
ಇತರೆ ವಿಷಯಗಳು:
ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್
ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್
1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF