ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-7.6 ಭಾರತದ ರಾಷ್ಟ್ರೀಯ ಚಳುವಳಿ ನೋಟ್ಸ್‌ | 2nd Puc History 7.6 Chapter Notes in Kannada

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-7.6 ಭಾರತದ ರಾಷ್ಟ್ರೀಯ ಚಳುವಳಿ ನೋಟ್ಸ್‌, 2nd Puc History 7.6 Chapter Notes in Kannada Question Answer Pdf Download Kseeb Solution For Class 12 History Chapter 7.6 Notes Pdf ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರ Bharatada Rashtriya Chaluvali Notes in Kannada Medium

Contents

ಅಧ್ಯಾಯ-7.6 ಭಾರತದ ರಾಷ್ಟ್ರೀಯ ಚಳುವಳಿ

2nd Puc History 7.6 Chapter Notes in Kannada

2nd Puc History Chapter 7 Modern India in Kannada

I. ಈ ಕೆಳಗಿನವುಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿ :

1.1905 ರಲ್ಲಿ ಬಂಗಾಳವನ್ನು ಏಕೆ ವಿಭಜಿಸಲಾಯಿತು ?

ಬ್ರಿಟಿಷರು ಒಡೆದು ಆಳುವ ನೀತಿಯಿಂದ ಹಿಂದೂ , ಮುಸ್ಲಿಂರಲ್ಲಿ ಒಡಕನ್ನು ಮೂಡಿಸಲು .

2. ಗಾಂಧೀಜಿಯವರು ಯಾವ ಸತ್ಯಾಗ್ರಹವನ್ನು ಬ್ರಿಟಿಷರನ್ನು ‘ ತೀನ್ ಕಾತಿಯ ಪದ್ಧತಿಯನ್ನು ನಿಷೇಧಿಸು ವಂತೆ ಮಾಡಿತು ?

1917 ರ ಚಂಪಾರನ್ ಸತ್ಯಾಗ್ರಹ .

3.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು ?

ಉಮೇಶ್ ಚಂದ್ರ ಬ್ಯಾನರ್ಜಿ ,

4 . ಯಾವ ಘಟನೆಯು ಗಾಂಧೀಜಿ ಅಸಹಕಾರ ಚಳುವಳಿಯನ್ನು ಹಿಂಪಡೆಯುವಂತೆ ಮಾಡಿತು ?

ಚೌರಿ ಚೌರ ಘಟನೆ .

5. ಭಾರತಕ್ಕೆ ಸೈಮನ್ ಕಮಿಷನ್ ಭೇಟಿ ಕೊಟ್ಟಾಗ ಜನಪ್ರಿಯ ಘೋಷಣೆ ಯಾವುದಾಗಿತ್ತು ?

ಸೈಮನ್ ಹಿಂದಿರುಗು [ Simon Go Back ]

6. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವ ವರ್ಷ ‘ ಪೂರ್ಣ ಸ್ವರಾಜ್ ‘ ಘೋಷಿಸಿತು ?

1929 ರಲ್ಲಿ .

7. ಯಾವ ದುಂಡು ಮೇಜಿನ ಸಮ್ಮೇಳನದಲ್ಲಿ ಗಾಂಧೀಜಿ ಭಾಗವಹಿಸಿದ್ದರು ?

1931 ರ ದ್ವಿತೀಯ ದುಂಡುಮೇಜಿನ ಸಮ್ಮೇಳನದಲ್ಲಿ ,

8.’ ಪೂನಾ ಒಪ್ಪಂದ ‘ ಯಾವ ವರ್ಷ ಸಹಿ ಹಾಕಲ್ಪಟ್ಟಿತು ?

1932 .

9. ನೇತಾಜಿ ಎಂದು ಪ್ರಸಿದ್ಧರಾಗಿದ್ದವರು ಯಾರು ?

ಸುಭಾಷ್ ಚಂದ್ರ ಬೋಸ್ ,

10. INA ವಿಸ್ತರಿಸಿ ಬರೆಯಿರಿ .

ಇಂಡಿಯನ್ ನ್ಯಾಷನಲ್ ಆರ್ಮಿ ,

11. ಐ.ಎನ್.ಐ ವಿಚಾರಣೆಗಳು ಎಲ್ಲಿ ನಡೆಯಿತು ?

ಜಪಾನ್ .

12. “ ನೇರ ಕಾರ್ಯಾಚರಣೆ ದಿನ ‘ ದ ಕರೆ ನೀಡಿದವರು ಯಾರು ?

ಮಹಮದ್ ಅಲಿ ಜಿನ್ನಾ ,

13. ‘ ಭಾರತದಲ್ಲಿ ಉಕ್ಕಿನ ಮನುಷ್ಯ ‘ ಎಂದು ಪ್ರಸಿದ್ಧರಾದವರು ಯಾರು ?

ಸರ್ದಾರ್ ವಲ್ಲಭಾಬಾಯಿ ಪಟೇಲ್ .

14. ಕರ್ನಾಟಕದಲ್ಲಿ ಹೋಂ ರೂಲ್ ಲೀಗಿನ ಶಾಖೆ ಸ್ಥಾಪನೆಯಾಗಿದ್ದು ಎಲ್ಲಿ ?

ಧಾರವಾಡದಲ್ಲಿ .

15. KPCC ವಿಸ್ತರಿಸಿ ಬರೆಯಿರಿ .

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ .

16. ಈಸೂರಿನ ಜನಪ್ರಿಯ ಘೋಷಣೆ ಏನಾಗಿತ್ತು ?

“ ಏಸೂರ ಕೊಟ್ಟರೂ ಈಸೂರು ಕೊಡೆವು ”

II . ಈ ಕೆಳಗಿನವುಗಳಿಗೆ ಎರಡು ಪದ ಇಲ್ಲವೇ ಎರಡು ವಾಕ್ಯಗಳಲ್ಲಿ ಉತ್ತರಿಸಿ :

2nd Puc History 7th Chapter Notes in Kannada

1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಸಭೆ ಯಾವಾಗ ಮತ್ತು ಎಲ್ಲಿ ನಡೆಯಿತು ?

27-12-1885 ರಲ್ಲಿ ಬೊಂಬಾಯಿಯಲ್ಲಿ ನಡೆಯಿತು .

2. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿರಿ .

ರಾಷ್ಟ್ರೀಯ ಏಕತೆಯನ್ನು ಪ್ರೋತ್ಸಾಹಿಸುವುದು ಮತ್ತು ಬಲಪಡಿಸುವುದು .

ಸಾರ್ವಜನಿಕ ಅಭಿಪ್ರಾಯಕ್ಕೆ ಸಂಧಿಸುವಂತೆ ಬ್ರಿಟಿಷರನ್ನು ಒತ್ತಾಯಿಸುವುದು .

3. ಯಾರಾದರೂ ಇಬ್ಬರು ಮಂದಗಾಮಿ ನಾಯಕರನ್ನು ಹೆಸರಿಸಿ .

ದಾದಾಬಾಯಿ ನವರೋಜಿ , ಗೋಪಾಲ ಕೃಷ್ಣ ಗೋಖಲೆ .

4. ‘ ಕರ್ನಾಟಕದ ಕೇಸರಿ ‘ ಎಂದು ಪ್ರಸಿದ್ದರಾದವರುಯಾರು ?

ಗಂಗಾಧರರಾವ್ ದೇಶಪಾಂಡೆ ,

5. ಬಂಗಾಳವನ್ನು ಯಾರು ಮತ್ತು ಯಾವಾಗ ವಿಭಜಿಸಿದರು ?

ಬಂಗಾಳವನ್ನು ಲಾರ್ಡ್ ಕರ್ಜನ್ 1905 ರಲ್ಲಿ ವಿಭಜಿಸಿದನು .

6. ಹೋಂರೂಲ್ ಲೀಗ್ ಚಳುವಳಿಯನ್ನು ಯಾರು ಆರಂಭಿಸಿದರು ?

ಶ್ರೀಮತಿ ಆ್ಯನಿಬೆಸೆಂಟ್ ಮತ್ತು ಬಾಲಗಂಗಾಧರ ತಿಲಕ್.

7. ಯಾರಾದರೂ ಇಬ್ಬರು ತೀವ್ರಗಾಮಿ ನಾಯಕರನ್ನು ಹೆಸರಿಸಿ .

ಲಾಲಾ ಲಜಪತ್ ರಾಯ್ , ಬಾಲಗಂಗಾಧರ ತಿಲಕ್ .

8. ಜಲಿಯನ್ ವಾಲಾಬಾಗ್ ಕಗ್ಗೋಲೆಗೆ ಯಾರು ಕಾರಣ ಮತ್ತು ಅದು ಯಾವಾಗ ಜರುಗಿತು ?

ಜನರಲ್ ಡಯಾರ್‌ , ಏಪ್ರಿಲ್ -13 , 1919 .

9. ಖಿಲಾಫತ್ ಚಳುವಳಿಯ ಯಾರಾದರೂ ಇಬ್ಬರು ನಾಯಕರನ್ನು ಹೆಸರಿಸಿರಿ .

ಮೌಲನಾ ಅಜಾದ್ , ದಕೀಂ ಅಜ್ಮಲ್ ಖಾನ್ ,

10 . ಸ್ವರಾಜ್ ಪಕ್ಷವನ್ನು ಯಾರು ಸ್ಥಾಪಿಸಿದರು ?

ಸಿ.ಆರ್ . ದಾಸ್ ಮತ್ತು ಮೋತಿಲಾಲ್ ನೆಹರೂ ,

11. ಯಾವ ಕಾಂಗ್ರೆಸ್ ಅಧಿವೇಶನವು ಪೂರ್ಣ ಸ್ವರಾಜ್ಯವೇ ತನ್ನ ಗುರಿ ಎಂದು ಘೋಷಿಸಿತು ? ಅದು ಯಾವ ವರ್ಷ ನಡೆಯಿತು ?

1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನ .

12. ಗಾಂಧಿಜಿ ಉಪ್ಪಿನ ಸತ್ಯಾಗ್ರಹವನ್ನು ಎಲ್ಲಿಂದ ಆರಂಭಿಸಿದರು ಮತ್ತು ಅದು ಎಲ್ಲಿ ಕೊನೆಗೊಂಡಿತು ?

ಸಾಬರ್‌ಮತಿ ಆಶ್ರಮದಿಂದ ಆರಂಭಗೊಂಡು ದಂಡಿಯಲ್ಲಿ ಕೊನೆಗೊಂಡಿತು .

13. ಪೂನಾ ಒಪ್ಪಂದಕ್ಕೆ ಸಹಿ ಹಾಕಿದವರು ಯಾರು ?

ಗಾಂಧೀಜಿ ಮತ್ತು ಡಾ . ಬಿ.ಆರ್.ಅಂಬೇಡ್ಕರ್ .

14. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಥಮ ಅಧಿವೇಶನ ಎಲ್ಲಿ ಜರುಗಿತು ? ಯಾವಾಗ ?

1920 ರಲ್ಲಿ ಧಾರವಾಡದಲ್ಲಿ ನಡೆಯಿತು .

15. ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ಎಲ್ಲಿ ಮತ್ತು ಯಾವಾಗ ನಡೆಯಿತು ?

1924 ರಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ .

2nd Puc History 7.6 Chapter Notes in Kannada

III . ಈ ಕೆಳಗಿನವುಗಳಿಗೆ 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಿ :

1. ಭಾರತೀಯ ರಾಷ್ಟ್ರೀಯತೆಯ ಬೆಳವಣಿಗೆಗೆ ಕಾರಣ ವಾದ ಪ್ರಮುಖ ಅಂಶಗಳು ಯಾವುವು ?

 • ಬ್ರಿಟಿಷರ ಆರ್ಥಿಕ ನೀತಿ ಪಾರಂಪರಿಕ ಆರ್ಥಿಕ ವ್ಯವಸ್ಥೆಯನ್ನು ನಾಶಮಾಡಿತು .
 • ಭಾರತದ ಗ್ರಾಮೀಣ ಕೈಗಾರಿಕೆಗಳು ನಷ್ಟವಾಗಿ ನಿರುದ್ಯೋಗ ಹೆಚ್ಚಿತು .
 • ಬ್ರಿಟಿಷರ ರಾಜಕೀಯ ಐಕ್ಯತೆ , ಏಕರೂಪ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ,
 • ಪಾಶ್ಚಿಮಾತ್ಯ ಶಿಕ್ಷಣದ ಪ್ರಭಾವದಿಂದ ಸಾಂಪ್ರದಾಯಿಕ ಶಿಕ್ಷಣದ ವ್ಯವಸ್ಥೆಯು ನಾಶವಾಗಿದ್ದು ,
 • ರಾಷ್ಟ್ರೀಯ ವಾದಿಗಳ ಜನನ . ಭಾರತೀಯರನ್ನು ನಾಯಿ – ಹಂದಿಗಳಂತೆ ಕೀಳಾಗಿ ಕಂಡಿದ್ದು ಬ್ರಿಟಿಷ್ ಸೈನ್ಯದಲ್ಲಿ ಮತ್ತು ಆಡಳಿತದಲ್ಲಿ ಸೇವೆಯ ಬಡ್ತಿ ಮತ್ತು ವೇತನದಲ್ಲಿ ತಾರತಮ್ಯ ಮಾಡಿದ್ದು , ಭಾರತೀಯ ರಾಜರುಗಳ ವಿರುದ್ಧ ಸರಣಿ ಯುದ್ಧ ಮಾಡಿದ್ದು .
 • ಔದ್‌ನ ಅರಸನನ್ನು ಅವಮಾನಿಸಿದ್ದು , ಭಾರತದ ಪತ್ರಿಕೋದ್ಯಮ ಮತ್ತು 19 ನೇ 20 ನೇ ಶತಮಾನದ ಆರಂಭದಲ್ಲಿ ಬಂದ ಸಾಹಿತ್ಯ ರಾಷ್ಟ್ರೀಯತೆಯನ್ನು ಪ್ರಚೋದಿಸಿತು .
 • ತಿಲಕ್ , ವಿವೇಕಾನಂದ , ಮ್ಯಾಕ್ಸ್‌ಮುಲ್ಲರ್ , R.L ಮಿತ್ರ ಮುಂತಾದವರು ಭಾರತೀಯ ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದು .

2. ತೀವ್ರಗಾಮಿಗಳ ಏಳಿಗೆಗೆ ಕಾರಣವನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ .

 • ಲಾರ್ಡ್ ಕರ್ಜನ್‌ನ ತೀವಗಾಮಿ ವಿರೋಧಿ ಆ್ಯಕ್ಟ್‌ಗಳು , ಬ್ರಿಟಿಷರ ಒಡೆದು ಆಳುವ ನೀತಿ , ಹಿಂದೂ ಮುಸ್ಲಿಂರಲ್ಲಿ ಬಿರುಕನ್ನು ಮೂಡಿಸಿದ್ದು ,
 • ಸ್ವಾಮಿ ವಿವೇಕಾನಂದ , ದಯಾನಂದ ಸರಸ್ವತಿ , ಅರಬಿಂದೋ , ತಿಲಕ್ , ಮತ್ತಿತ್ತರ ನಾಯಕರ ಪ್ರಯತ್ನಗಳು ತೀವ್ರಗಾಮಿಯಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನವನ್ನು ಮೂಡಿಸಿದವು .
 • ತಿಲಕರು ಸಾರ್ವಜನಿಕ ಗಣೇಶೋತ್ಸವ ಹಾಗೂ ಶಿವಾಜಿ ಜಯಂತಿಗಳನ್ನು ಆರಂಭಿಸಿದ್ದು ರಾಷ್ಟ್ರೀಯ ಭಾವನೆಗಳನ್ನು ಪ್ರೋತ್ಸಾಹಿಸಿತು .
 • ಇಟಲಿ ಮತ್ತು ಜರ್ಮನಿಯ ಸಫಲ ಸ್ವಾತಂತ್ರ್ಯ ಹಾಗೂ ಏಕೀಕರಣ ಚಳುವಳಿಗಳು , 1905 ರಲ್ಲಿ ಸಣ್ಣದೇಶ ಜಪಾನ್ ನಿಂದ ಬೃಹತ್‌ ರಷ್ಯಾದ ಸೋಲು , ಈಜಿಪ್ಟ್ , ಟರ್ಕಿ , ಪರ್ಷಿಯಾ ಮತ್ತು ಚೀನಾದ ರಾಷ್ಟ್ರೀಯ ಚಳುವಳಿಯಂತಹ ಜಾಗತಿಕ ಘಟನೆಗಳು ಭಾರತೀಯರ ಆಲೋಚನೆಯ ಮೇಲೆ ಪ್ರಭಾವ ಬೀರಿದವು .
 • ತಾವು ಕೂಡ ಒಗ್ಗಟ್ಟಾಗಿ ಬ್ರಿಟಿಷರನ್ನು ಓಡಿಸಬಹುದೆಂದು ರಾಷ್ಟ್ರೀಯವಾದಿಗಳು ಯೋಚಿಸ ಲಾರಂಭಿಸಿದರು.
 • ಮಂದಗಾಮಿಗಳ ಸಂವಿಧಾನಾತ್ಮಕ ಕ್ರಮಗಳಾದ ಪ್ರಾರ್ಥನೆ , ಬಿನ್ನಹ ಮತ್ತು ಶಾಂತಿಯುತ ಪ್ರತಿಭಟನೆಗಳು ತೀವ್ರಗಾಮಿಗಳಿಗೆ ರಾಜಕೀಯ ಭಿಕ್ಷಾಟನೆ .
 • 1896-98 ಮತ್ತು 1899-1901 ರ ಭೀಕರ ಕ್ಷಾಮದಲ್ಲಿ ಬ್ರಿಟಿಷರು ಯಾವುದೇ ಪರಿಹಾರ ಕಾರ್ಯ ಕೈಗೊಳ್ಳದೆ ಆರ್ಥಿಕ ಶೋಷಣೆ ಮಾಡಿದ್ದು .

3. ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಕರ್ನಾಟಕದ ಪಾತ್ರವನ್ನು ವಿವರಿಸಿರಿ .

 • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರೇರಣೆಯಿಂದ ಕರ್ನಾಟಕದಲ್ಲಿಯೂ ಅಧಿವೇಶನಗಳು ನಡೆದವು . ಕರ್ನಾಟಕದ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಥಮ ಅಧಿವೇಶನ 1920 ರಲ್ಲಿ ಧಾರವಾಡದಲ್ಲಿ ನಡೆಯಿತು .
 • ಗಂಗಾಧರರಾವ್ ದೇಶಪಾಂಡೆ . [ ಕರ್ನಾಟಕದ ಕೇಸರಿ ] ಇದರ ಅಧ್ಯಕ್ಷತೆ ವಹಿಸಿದ್ದರು ,
 • ಮತ್ತು ಹಲವಾರು ಕಾಂಗ್ರೆಸ್ ಅಧಿವೇಶನಗಳು ನಡೆದವು . ದತ್ತೋಪಂತ ಮಾಜಾಳಿ , ಕೃಷ್ಣರಾವ್ , ಹನುಮಂತರಾವ್ ಕೌಜಲಗಿ , ದಿವಾಕರ್ ಮುಂತಾದವರು ಕರ್ನಾಟಕದಲ್ಲಿ ಅಸಹಕಾರ ಚಳುವಳಿಯ ನೇತೃತ್ವ ವಹಿಸಿದ್ದರು .
 • ಎನ್.ಎಸ್.ಹರ್ಡಿಕರ್ 1924 ರಲ್ಲಿ ಹಿಂದೂಸ್ತಾನ ಸೇವಾದಳ ಸ್ಥಾಪಿಸಿದರು .
 • 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿಯವರು ವಹಿಸಿಕೊಂಡಿದ್ದರು . ಕರ್ನಾಟಕವು ಕಾನೂನು ಭಂಗ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿತು .
 • ಕರ್ನಾಟಕದ ಮಹದೇವಪ್ಪ ಮೈಲಾರ್‌ ಗಾಂಧೀಜಿ ಯವರೊಂದಿಗೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು . ಕರ್ನಾಟಕದ ಅಂಕೋಲದಲ್ಲಿ ಉಪ್ಪಿನ ಸತ್ಯಾಗ್ರಹವನ್ನು ನಡೆಸಲಾಯಿತು .
 • 1938 ರಲ್ಲಿ ಶಿವಪುರದಲ್ಲಿ [ ಮಂಡ್ಯಜಿಲ್ಲೆ ] ಮೈಸೂರು ಕಾಂಗ್ರೆಸ್ ಅಧಿವೇಶನ ನಡೆದು ನಿಷೇಧಾಜ್ಞೆಯನ್ನು ದಿಕ್ಕರಿಸಿ ತ್ರಿವೇರ್ಣ ಧ್ವಜವನ್ನು ಹಾರಿಸಲಾಯಿತು .
 • ವಿದುರಾಶ್ವಥದಲ್ಲಿ ನಡೆದ ಮೆರವಣಿಗೆಯೊಂದರಲ್ಲಿ ಗೋಲಿಬಾರ್ ಆಗಿ 32 ಜನ ಅಸುನೀಗಿದರು . ಇದನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಎನ್ನಲಾಗಿದೆ .
 • ಶಿವಮೊಗ್ಗ ಜಿಲ್ಲೆಯ ಈಸೂರು ಸ್ವಾತಂತ್ರ್ಯವನ್ನು ಘೋಷಿಸಿಕೊಂಡು ಪಟೇಲರ ಮತ್ತು ಶಾನುಭೋಗರ ಕಂದಾಯ ದಾಖಲೆಗಳಿಗೆ ಬೆಂಕಿಹಚ್ಚಿತು .
 • ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು . ತಹಸೀಲ್ದಾರ್‌ ಮತ್ತು ಪೋಲೀಸ್ ಅಧಿಕಾರಿಗಳನ್ನು ಕೊಲೆ ಮಾಡಿದರು .

IV . ಈ ಕೆಳಗಿನವುಗಳಿಗೆ 30 ರಿಂದ 40 ವಾಕ್ಯಗಳಲ್ಲಿ ಉತ್ತರಿಸಿ :

1. 1885 ರಿಂದ 1920 ರವರೆಗಿನ ಭಾರತದ ರಾಷ್ಟ್ರೀಯ ಚಳುವಳಿಯನ್ನು ವಿಷದ ಪಡಿಸಿರಿ .

 • 1885 ರಲ್ಲಿ ಬ್ರಿಟಿಷ್ ನಾಗರೀಕ ಸೇವಾ ಅಧಿಕಾರಿಯಾದ ಆಲನ್ ಆಕ್ಟೇವಿಯನ್ ಹೂಮ್ ಎಂಬುವವನು ರಾಷ್ಟ್ರೀಯ ಒಕ್ಕೂಟದ ಕಲ್ಪನೆಯನ್ನು ಹೊಂದಿ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸ್ಥಾಪಿಸಲು ಪ್ರೇರೇಪಿಸಿದನು .
 • ಇದರಿಂದಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಉದಯವಾಗಿ 1885 ರಲ್ಲಿ ಬೊಂಬಾಯಿಯಲ್ಲಿ ಮೊದಲ ಅಧಿವೇಶನ ನಡೆಯಿತು . ಉಮೇಶಚಂದ್ರ ಬ್ಯಾನರ್ಜಿ ಅಧ್ಯಕ್ಷರಾಗಿದ್ದರು . ರಾಷ್ಟ್ರೀಯ ಕಾಂಗ್ರೆಸ್ಸಿನ ಉದ್ದೇಶ ಸಂಪೂರ್ಣ ಸ್ವಾತಂತ್ರ್ಯವಾಗಿತ್ತು .
 • ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ನಾಯಕರಲ್ಲಿ ಎರಡು ಭಾಗಗಳಾಯಿತು . ಮಂದಗಾಮಿಗಳು ಬ್ರಿಟಿಷರ ಮುಂದೆ ಸಂವಿಧಾನಾತ್ಮಕ ಕ್ರಮಗಳಾಗಿ ಪ್ರಾರ್ಥನೆ , ಬಿನ್ನಹ ಮತ್ತು ಶಾಂತಿಯುತ ಪ್ರತಿಭಟನೆಗಳ ಮೂಲಕ ಬ್ರಿಟಷರ ಮನವೊಲಿಸಲು ಪ್ರಯತ್ನಿಸುತ್ತಿದ್ದರು ಅವರುಗಳಲ್ಲಿ ದಾದಾಬಾಯಿ ನವರೋಜಿ , ಫಿರೋಜ್ ಷಾ ಮೆಹ್ವಾ ಆನಂದಾಚಾರ್ಯ , ಸುರೇಂದ್ರನಾಥ ಬ್ಯಾನರ್ಜಿ ಮೊದಲಾದವರು ಪ್ರಮುಖರಾಗಿದ್ದರು.
 • ತೀವ್ರಗಾಮಿಗಳು ಮಂದಗಾಮಿಗಳ ನಿಲುವನ್ನು ವಿರೋಧಿಸುತ್ತಾ ಇವರ ಕ್ರಮವನ್ನು “ ರಾಜಕೀಯ ಭಿಕ್ಷಾಟನೆ ” ಎಂದು ಟೀಕಿಸಿ , ಬ್ರಿಟಿಷರನ್ನು ವಿದೇಶಿ ಆಕ್ರಮಣಕಾರರೆಂದು ಅವರನ್ನು ಕ್ರಾಂತಿಯ ಮೂಲಕ ದೇಶದಿಂದ ಹೊರಹಾಕ ಬೇಕೆಂದು ಹೇಳಿದರು .
 • ಅವರುಗಳಲ್ಲಿ ಲಾಲಾಲಜಪತ್ ರಾಯ್ , ಬಾಲಗಂಗಾಧರ ತಿಲಕ್ , ಬಿಪಿನ್ ಚಂದ್ರಪಾಲ್ ಮೊದಲಿಗರು . 1905 ರಲ್ಲಿ ಬಂಗಾಳದ ವಿಭಜನೆಯು ಬ್ರಿಟಿಷರ ಹೊಡೆದು ಆಳುವ ನೀತಿಯ ಬಗ್ಗೆ ಭಾರತೀಯರಲ್ಲಿ ಅರಿವು ಮೂಡಿಸಿತು . ವಿಭಜನಾ ವಿರೋಧಿ ಬಹಿಷ್ಕಾರಗಳು ನಡೆದವು ಕೊನೆಗೆ ವಿಭಜನೆಯನ್ನು ರದ್ದು ಮಾಡಲಾಯಿತು .

ಕ್ರಾಂತಿಕಾರಿ ಭಯೋತ್ಪಾದನೆ :

 • ಅನೇಕ ಗುಪ್ತ ಸಂಘಗಳು ತಲೆಎತ್ತಿ ಕೊಲೆಗಳು , ಬಾಂಬ್‌ಧಾಳಿಗಳು , ಶಸ್ತ್ರಾಸ್ತ್ರಗಳ ಮತ್ತು ಖಜಾನೆಯ ಲೂಟಿ ಮುಂತಾದವುಗಳು ನಡೆದವು . ಬಹುತೇಕ ಕ್ರಾಂತಿಕಾರಿಗಳನ್ನು ನೇಣು ಹಾಕಲಾಯಿತು . *
 • 1897 ರಲ್ಲಿ ಚಾಪೇಕರ್ ಸಹೋದರರು ಪ್ಲೇಗ್ ಕಮಿಷನರ್ ಲ್ಯಾಂಡ್ ಮತ್ತು ಲೆಫ್ಟಿನೆಂಟ್ ಐರೆಸೈರನ್ನು ಕೊಂದರು .
 • 1908 ರಲ್ಲಿ ಕುದಿರಾಮ್ ಬೋಸ್ ಹಾಗೂ ಪ್ರಮುಲ್ಲಾ ಚೌಕಿ , ನ್ಯಾಯಾಧೀಶ ಕಿಂಗ್ಸ್ ಫೋರ್ಡ್‌ನ ಸಾರೋಟಿನ ಮೇಲೆ ಬಾಂಬ್ ಧಾಳಿ ಮಾಡಿದರು .
 • 1909 ರಲ್ಲಿ ಮದನ್‌ಲಾಲ್ ಡಿಂಗ್ರಾ 1909 ರಲ್ಲಿ ಕರ್ಜನ್ ಮೈಲಿನನ್ನು ಲಂಡನ್‌ನಲ್ಲಿ ಕೊಲೆ ಮಾಡಿದನು .
 • 1906 ರಲ್ಲಿ ಮುಸ್ಲಿಂ ಲೀಗ್‌ನ ಸ್ಥಾಪನೆಯಿಂದಾಗಿ ಕೋಮುವಾದದ ಬೆಳವಣಿಗೆ ಉಂಟಾಯಿತು .
 • ಮುಸ್ಲಿಂರಿಗೆ ಪ್ರತ್ಯೇಕ ಮತದಾನದ ಹಕ್ಕೇ ಬೇಕೆಂದು ಮಂಡಿಸಲಾಯಿತು . ಅಂತೆಯೇ ಅಖಿಲ ಭಾರತ ಹಿಂದೂ ಮಹಾಸಭಾವು ಉದಯವಾಯಿತು . ಇವೆರಡೂ ಭಾರತೀಯ ಕಾಂಗ್ರೆಸ್‌ನ ವಿರೋಧಿಗಳಾದವು .
 • 1916 ರಲ್ಲಿ ಶ್ರೀಮತಿ ಆನಿಬೆಸೆಂಟ್ ಮತ್ತು ಬಾಲಗಂಗಾಧರ ತಿಲಕರು ಹೋಂ ರೂಲ್ ಲೀಗ್ ಚಳುವಳಿಯನ್ನು ಪ್ರಾರಂಭಿಸಿದರು . “ ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು ನಾನು ಅದನ್ನು ಪಡೆದೇ ತೀರುತ್ತೇನೆ ” ಎಂದು ಕರೆ ನೀಡಿದರು
 • ಈ ನಡುವೆ ಬ್ರಿಟಿಷರು ಭಾರತೀಯ ನಾಗರೀಕರ ಮನವೊಲಿಸಲು ಸಲುವಾಗಿ ಮಾರ್ಲೆ – ಮಿಂಟೋ ಸುಧಾರಣೆ , ಮಾಂಟೆಗೊ ಚೆಮ್ಸ್ ಪೋರ್ಟ್ ಸುಧಾರಣೆಗಳಂತಹ ಕಾಯಿದೆಗಳನ್ನು ಜಾರಿಗೆ ತಂದರು .

2. ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಗಾಂಧೀಜಿಯ ಪಾತ್ರವನ್ನು ಚರ್ಚಿಸಿರಿ . ‌

 • 1919 ರಿಂದ 1947 ರವರೆಗೆ ನಡೆದ ಭಾರತೀಯ ರಾಷ್ಟ್ರೀಯ ಹೋರಾಟದ ಕಾಲವನ್ನು ‘ ಗಾಂಧೀಯುಗ ವೆಂದೇ ಪರಿಗಣಿಸಲಾಗಿದೆ .
 • 1893 ರಿಂದ 1914 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ವಕೀಲಿಕೆ ಮಾಡುತ್ತಿದ್ದ ಗಾಂಧೀಜಿಯವರು 1915 ರಲ್ಲಿ ಭಾರತಕ್ಕೆ ಹಿಂದಿರುಗಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಜನರ ಸ್ಥಿತಿಗಳನ್ನು ಅರಿತು 1916 ರಲ್ಲಿ ಅಹಮದಾಬಾದ್‌ನಲ್ಲಿ ಸಾಬರ್‌ಮತಿ ಆಶ್ರಮವನ್ನು ಸ್ಥಾಪಿಸಿದರು .
 • 1917 ರ ಚಂಪಾರನ್ ಸತ್ಯಾಗ್ರಹ , 1918 ರ ಅಹಮದಾಬಾದ್ ಗಿರಣಿ ಮುಷ್ಕರ , 1918 ರ ಖೇಡಾ ಸತ್ಯಾಗ್ರಹ , ಚಳುವಳಿಯಿಂದ ಗಾಂಧೀಜಿ ಜನಸಮೂಹ ದೊಂದಿಗೆ ನಿಕಟ ಸಂಪರ್ಕ ಗಳಿಸಿದರು .
 • 1919 ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದಾಗಿ ತೀವ್ರವಾಗಿ ಮನನೊಂದ ಗಾಂಧೀಜಿ ಯವರು ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾದರು .
 • ಖಿಲಾಫತ್ ಚಳುವಳಿಗೆ ಸಹಕಾರ ನೀಡಿದರು .
 • 1920-1922 ರಲ್ಲಿ ಅಸಹಕಾರ ಚಳುವಳಿಗೆ ಕರೆಕೊಟ್ಟು ವಿದೇಶಿ ವಸ್ತುಗಳನ್ನು ಸುಟ್ಟು ಹಾಕಲಾಯಿತು .
 • ಅಸಂಖ್ಯಾತ ಸಾರ್ವಜನಿಕರು , ವಿದ್ಯಾರ್ಥಿಗಳು ಸೇರಿದ್ದರು .
 • ಸ್ವದೇಶಿ ವಸ್ತುಗಳ ಬಳಕೆಯ ಮಹತ್ವವನ್ನು ತಿಳಿಸಿದರು .
 • 1922 ರಲ್ಲಿ ನಡೆದ ಚೌರಿಚೌರ ಘಟನೆಯಿಂದಾಗಿ ಗಾಂಧೀಜಿ ತಮ್ಮ ಅಸಹಕಾರ ಚಳುವಳಿಯನ್ನು ಹಿಂಪಡೆದರು.
 • ಗಾಂಧೀಜಿಯವರು ಬ್ರಿಟಿಷರ ಮುಂದೆ ಹನ್ನೊಂದು ಬೇಡಿಕೆಗಳನ್ನಿಟ್ಟರು .
 • ಈ ಬೇಡಿಕೆಗಳಿಗೆ ಬ್ರಿಟಿಷರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಲಿಲ್ಲವಾದ್ದರಿಂದ 1930 31 ರಲ್ಲಿ ಕಾಯ್ದೆ ಭಂಗ ಚಳುವಳಿಯನ್ನು ಆರಂಭಿಸಿದರು .
 • ಉಪ್ಪಿನ ಮೇಲಿನ ತೆರಿಗೆಯನ್ನು ವಿರೋಧಿಸಿ 1930 ರಲ್ಲಿ ಉಪ್ಪಿನ ಸತ್ಯಾಗ್ರಹವನ್ನು ನಡೆಸಿದರು . ಇದು ಭಾರತದಾದ್ಯಂತ ಹರಡಿತು .
 • ಗಾಂಧಿ – ಇರ್ವಿನ್ ಒಪ್ಪಂದವಾಗಿ ಕಾಯ್ದೆ ಭಂಗ ಚಳುವಳಿಯನ್ನು ಹಿಂಪಡೆದರು .
 • ಲಂಡನ್ನಿನಲ್ಲಿ ನಡೆದ 1931 ರ ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿ ಭಾರತದಲ್ಲಿ ಮುಸ್ಲಿಂರಿಗೆ ಪ್ರತ್ಯೇಕ ಮತದಾನದ ಹಕ್ಕನ್ನು ನೀಡುವುದನ್ನು ವಿರೋಧಿಸಿದರು . ಅಂತೆಯೇ ಅಸ್ಪೃಶ್ಯರು ಸಹ ಹಿಂದೂ ಗಳಾಗಿದ್ದು ಅವರಿಗೆ ಪ್ರತ್ಯೇಕ ಮತದಾನದ ವಿಶೇಷ ಸವಲತ್ತುಗಳನ್ನು ನೀಡಬಾರದೆಂದು ವಾದಿಸಿದರು .
 • ಇದರಿಂದ ಗಾಂಧೀಜಿ ಮತ್ತು ಅಂಬೇಡ್ಕರರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದವು . “ ಪೂನಾ ಒಪ್ಪಂದಕ್ಕೆ ” ಸಹಿ ಹಾಕುವುದ ರೊಂದಿಗೆ ಇವರ ವೈಮನಸ್ಯ ಕೊನೆಗೊಂಡಿತು .
 • 1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿ ನಡೆಸಿದರು . ಗಾಂಧೀಜಿ ‘ ಮಾಡು ಇಲ್ಲವೆ ಮಡಿ ‘ ಎಂಬ ಪ್ರಸಿದ್ಧ ಘೋಷಣೆಯನ್ನು ನೀಡಿದರು .
 • 1947 ಆಗಸ್ಟ್‌ನಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತು . ಕೋಮುದಳ್ಳುರಿಯ ನಡುವೆ 1948 ಜನವರಿ ಜನವರಿ 30 ರಂದು ಗಾಂಧೀಜಿ ಹತ್ಯೆಯಾದರು .

ಹೆಚ್ಚುವರಿ ಪ್ರಶ್ನೋತ್ತರಗಳು

2nd Puc History 7.6 Chapter Notes Mcq Questions

1 . ಬೆಂಗಾಲ್ ಬ್ರಿಟಿಷ್ ಇಂಡಿಯಾ ಸೊಸೈಟಿ ಯಾವಾಗ ಸ್ಥಾಪನೆಯಾಯಿತು ?

1838 ರಲ್ಲಿ ‘

2. ಸುರಕ್ಷಾ ಕವಾಟ ಸಿದ್ಧಾಂತ ‘ ಯಾರದು ?

ಲಾರ್ಡ್ ಢಪರಿನ್

3.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಅಧಿವೇಶನ ಎಲ್ಲಿ ? ಯಾವಾಗ ನಡೆಯಿತು ?

27-12-1885 ರಲ್ಲಿ ಬೊಂಬಾಯಿಯಲ್ಲಿ ನಡೆಯಿತು .

4. ಬ್ರಿಟೀಷರು ಇಂಡಿಯನ್ ಯೂನಿವರ್ಸಿಟಿ ಆಕ್ಟ್ ಅನ್ನು ಯಾವಾಗ ಜಾರಿಗೆ ತಂದರು ?

1904 ರಲ್ಲಿ

5. ಬಂಗಾಳದ ವಿಭಜನೆ ಯಾವಾಗ ನಡೆಯಿತು ?

1905 ರಲ್ಲಿ

6. ಪ್ಲೇಗ್ ಕಮೀಷನರ್ ಬ್ಯಾಂಡ್ ಮತ್ತು ಐರೆಸ್ಟ್‌ ರನ್ನು ಯಾರು ಹತ್ಯೆಗೈದರು ?

ಚಾಪೇಕರ್ ಸಹೋದರರು

7. ಗಾಂಧೀಜಿಯವರ ಚಳುವಳಿಯ ಮುಖ್ಯ ಅಸ್ತ್ರ ಯಾವುದು ?

ಸತ್ಯಾಗ್ರಹ

8. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವಾಗ ನಡೆಯಿತು ?

1919 ರಲ್ಲಿ

9. ಭಾರತ ಸ್ವಾತಂತ್ರ್ಯ ಸಮಯದಲ್ಲಿ ಇಂಗ್ಲೆಂಡಿನ ಪ್ರಧಾನಿ ಯಾರಾಗಿದ್ದರು ?

ಕ್ಲೆಮೆಂಟ್‌ ಅಟ್ಲಿ

FAQ

1. ನೇತಾಜಿ ಎಂದು ಪ್ರಸಿದ್ಧರಾಗಿದ್ದವರು ಯಾರು ?

ಸುಭಾಷ್ ಚಂದ್ರ ಬೋಸ್ ,

2. ‘ ಭಾರತದಲ್ಲಿ ಉಕ್ಕಿನ ಮನುಷ್ಯ ‘ ಎಂದು ಪ್ರಸಿದ್ಧರಾದವರು ಯಾರು ?

ಸರ್ದಾರ್ ವಲ್ಲಭಾಬಾಯಿ ಪಟೇಲ್ .

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

Leave a Reply

Your email address will not be published. Required fields are marked *