ದ್ವಿತೀಯ ಪಿ.ಯು.ಸಿ ಅಧ್ಯಾಯ-7.4 ಸಾಮಾಜಿಕ -ಧಾರ್ಮಿಕ ಸುಧಾರಣಾ ಚಳುವಳಿ ಇತಿಹಾಸ ನೋಟ್ಸ್‌ | 2nd Puc History 7.4 Chapter Notes in Kannada

ದ್ವಿತೀಯ ಪಿ.ಯು.ಸಿ ಅಧ್ಯಾಯ-7.4 ಸಾಮಾಜಿಕ -ಧಾರ್ಮಿಕ ಸುಧಾರಣಾ ಚಳುವಳಿ ಇತಿಹಾಸ ನೋಟ್ಸ್‌, 2nd Puc History 7.4 Chapter Notes Question Answer in Kannada Pdf Kseeb Solution For Class 12 History Chapter 7.4 Notes 2nd puc Samajika Dharmika Sudharana Chaluvali Notes

ಅಧ್ಯಾಯ-7.4 ಸಾಮಾಜಿಕ -ಧಾರ್ಮಿಕ ಸುಧಾರಣಾ ಚಳುವಳಿ

2nd Puc History 7.4 Chapter Notes

2nd Puc History 7th Chapter Notes in Kannada

I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :

1 . ಆರ್ಯಸಮಾಜ ಸ್ಥಾಪನೆಯಾದದ್ದು ಯಾವಾಗ ?

ಸಾ.ಶ. 1875 .

2. ‘ ಶುದ್ದಿ ಚಳುವಳಿ ‘ ಎಂದರೇನು ?

ಮತಾಂತರಗೊಂಡಿದ್ದ ಹಿಂದೂಗಳನ್ನು ಪುನಃ ಸ್ವಧರ್ಮಕ್ಕೆ ಸೇರಿಸಿಕೊಳ್ಳಲು ಹಮ್ಮಿಕೊಂಡ ಚಳುವಳಿಯೇ ಶುದ್ದಿಚಳುವಳಿ .

3. ‘ ವೇದಗಳಿಗೆ ಹಿಂದಿರುಗಿ ‘ ಎಂದು ಕರೆ ನೀಡಿದವರು ಯಾರು ?

ಸ್ವಾಮಿ ದಯಾನಂದ ಸರಸ್ವತಿ ,

4. ದಯಾನಂದ ಸರಸ್ವತಿಯವರು ರಚಿಸಿದ ಕೃತಿಯನ್ನು ಹೆಸರಿಸಿ .

‘ ಸತ್ಯಾರ್ಥ ಪ್ರಕಾಶ ‘

5. ವಿವೇಕಾನಂದರ ಮೂಲ ಹೆಸರೇನಾಗಿತ್ತು ?

ನರೇಂದ್ರನಾಥ ದತ್ತ .

6 . ರಾಮಕೃಷ್ಣ ಮಿಷನ್ ಸ್ಥಾಪನೆ ಮಾಡಿದ್ದು ಯಾರು ?

ಸ್ವಾಮಿ ವಿವೇಕಾನಂದ .

7.ಚಿಕಾಗೋ ವಿಶ್ವ ಧರ್ಮ ಸಮ್ಮೇಳನ ಜರುಗಿದ್ದು ಯಾವಾಗ ?

ಸಾ.ಶ. 1893 .

8. ಬ್ರಹ್ಮ ಸಮಾಜದ ಸ್ಥಾಪಕರು ಯಾರು ?

ರಾಜಾರಾಮ್ ಮೋಹನ್ ರಾಯ್ .

9 . ರಾಜಾರಾಮ್ ಮೋಹನ್‌ರಾಯರು ಎಲ್ಲಿ ಜನಿಸಿದರು ?

ಬಂಗಾಳದ ರಾಧಾನಗರದಲ್ಲಿ .

10. ‘ ಭಾರತೀಯ ಪುನರುಜೀವನ ಪಿತಾಮಹ ‘ ಎಂದು ಯಾರನ್ನು ಕರೆಯಲಾಗಿದೆ ?

ರಾಜಾರಾಮ್ ಮೋಹನ್ ರಾಯ್ .

11. ಆರ್ಯಸಮಾಜದ ಸ್ಥಾಪಕರು ಯಾರು ?

ಸ್ವಾಮಿ ದಯಾನಂದ ಸರಸ್ವತಿ .

12. ವೇದಾಂತ ಸಮಾಜವನ್ನು ಸ್ಥಾಪಿಸಿದವರು ಯಾರು ?

ಸ್ವಾಮಿ ವಿವೇಕಾನಂದರು .

13. ಭಾರತದಲ್ಲಿ ಥಿಯೋಸೋಫಿಕಲ್ ಸೊಸೈಟಿಯನ್ನು ಸ್ಥಾಪಿಸಿದವರು ಯಾರು ?

ಆ್ಯನಿಬೆಸೆಂಟ್ .

14. ಅಲಿಘರ್ ಚಳುವಳಿಯನ್ನು ಪ್ರಾರಂಭಿಸಿದವರು ಯಾರು ?

1 . ಸರ್ ಸೈಯದ್ ಅಹಮ್ಮದ್ ಖಾನ್ .

II . ಈ ಕೆಳಗಿನವುಗಳಿಗೆ ಎರಡು ಪದ ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ :

1. ದಯಾನಂದ ಸರಸ್ವತಿಯವರ ತಂದೆ – ತಾಯಿಗಳನ್ನು ಹೆಸರಿಸಿ .

ಕೃಷ್ಣಾಜಿ ತಿವಾರಿ ಮತ್ತು ಯಶೋಧರಾ .

2. ಆರ್ಯ ಸಮಾಜವು ಸ್ಥಾಪನೆಯಾದದ್ದು ಎಲ್ಲಿ ಮತ್ತು ಯಾವಾಗ ?

ಬಾಂಬೆಯಲ್ಲಿ , ಕ್ರಿ.ಶ. 1875 ರಲ್ಲಿ .

3. ಸ್ವಾಮಿ ವಿವೇಕಾನಂದರು ಯಾವಾಗ ಮತ್ತು ಎಲ್ಲಿ ಜನಿಸಿದರು ?

1863 ರ ಜನವರಿ 12 ರಂದು ಕಲ್ಕಾತ್ತಾದಲ್ಲಿ ಜನಿಸಿದರು .

4. ರಾಜಾ ರಾಮ ಮೋಹನ್‌ರಾಯರ ತಂದೆ ತಾಯಿಗಳನ್ನು ಹೆಸರಿಸಿ .

ರಮಾಕಾಂತರಾಯ್ ಮತ್ತು ತಾರಿಣೀದೇವಿ .

5 . ಬ್ರಹ್ಮಸಮಾಜ ಸ್ಥಾಪನೆಗೊಂಡಿದ್ದು ಎಲ್ಲಿ ಮತ್ತು ಯಾವಾಗ ?

ಕಲ್ಕತ್ತಾದಲ್ಲಿ ಸಾ.ಶ. 1828 ರಲ್ಲಿ

6. ದಯಾನಂದ ಸರಸ್ವತಿ ಹುಟ್ಟಿದ್ದು ಎಲ್ಲಿ ಮತ್ತು ಯಾವ ವರ್ಷದಲ್ಲಿ ?

ಗುಜರಾತಿನ ತಂಕರಾ ಎಂಬಲ್ಲಿ 1824 ರಲ್ಲಿ .

7. ರಾಮಕೃಷ್ಣ ಮಿಷನ್ ಸ್ಥಾಪನೆಗೊಂಡ ವರ್ಷ ಯಾವುದು ಮತ್ತು ಎಲ್ಲಿ ?

1897 ರಲ್ಲಿ ಬಂಗಾಳದ ಬೇಲೂರು ಮಠದಲ್ಲಿ .

8. ಸ್ವಾಮಿ ವಿವೇಕಾನಂದರು ಪ್ರಕಟಿಸುತ್ತಿದ್ದ ಪತ್ರಿಕೆಗಳನ್ನು ಹೆಸರಿಸಿ .

‘ ಪ್ರಭುದ್ಧ ಭಾರತ ‘ , ‘ ಉದ್ಭೋದನ ‘ .

9. ಥಿಯೋಸೋಫಿಕಲ್ ಸೊಸೈಟಿಯನ್ನು ಸ್ಥಾಪಿಸಿದವರು ಯಾರು ?

ಮೆಡಮ್ ಬ್ಲಾವತ್‌ ಮತ್ತು ಕರ್ನಲ್ ಆಲ್ಕಾಟರು ನ್ಯೂಯಾರ್ಕ್‌ನಲ್ಲಿ ಸ್ಥಾಪಿಸಿದರು . ಭಾರತದಲ್ಲಿ ಅದರ ಶಾಖೆಯನ್ನು ಆನಿಬೆಸೆಂಟ್ ಸ್ಥಾಪಿಸಿದರು .

2nd Puc Samajika Mattu Dharmika Sudharana Chaluvaligalu Notes

III . ಈ ಕೆಳಗಿನವುಗಳಿಗೆ ಪ್ರಶ್ನೆಗೆ 15 ರಿಂದ 20 ಸಾಲುಗಳಲ್ಲಿ ಉತ್ತರಿಸಿ :

1 . ಸಾಮಾಜಿಕ – ಧಾರ್ಮಿಕ ಸುಧಾರಣಾ ಚಳುವಳಿಯಲ್ಲಿ ರಾಜಾರಾಮಮೋಹನ್‌ರಾಯರು ವಹಿಸಿದ ಪಾತ್ರವನ್ನು ವಿವರಿಸಿ .

 • ‘ ಭಾರತೀಯ ಪುನರುಜ್ಜಿವನದ ಪಿತಾಮಹ ‘ ಎಂದು ಹೆಸರಾಗಿರುವ ಇವರು ಬಂಗಾಳದ ರಾಧಾನಗರದಲ್ಲಿ 1774 ರಲ್ಲಿ ಜನಿಸಿದರು .
 • ಇವರು ಮಹಾನ್ ಪಂಡಿತರು ಹಾಗೂ ಅರೆಬಿಕ್ , ಪರ್ಷಿಯನ್ , ಇಂಗ್ಲಿಷ್ , ಫ್ರೆಂಚ್ , ಲ್ಯಾಟೀನ್ , ಗ್ರೀಕ್ ಮತ್ತು ಹಿಬ್ರೂ ನಂತಹ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದರು .
 • ಇಂಗ್ಲೀಷ್ ಭಾಷೆ ಮತ್ತು ಪಾಶ್ಚಾತ್ಯ ವೈಚಾರಿಕತೆಯಿಂದ ಪ್ರಭಾವಿತರಾಗಿದ್ದರು .
 • ಸಮಾಜ ಮತ್ತು ಧರ್ಮದ ಸುಧಾರಣೆ ಇವರ ಉದ್ದೇಶವಾಗಿತ್ತು . 1828 ರಲ್ಲಿ ಕಲ್ಕತ್ತಾದಲ್ಲಿ ‘ ಬ್ರಹ್ಮ ಸಮಾಜವನ್ನು ಸ್ಥಾಪಿಸಿದರು . ಸತಿಪದ್ಧತಿ , ಬಾಲ್ಯವಿವಾಹ , ಜಾತಿಪದ್ಧತಿ , ಪರ್ದಾಪದ್ಧತಿ , ಮಾದಕ ವಸ್ತುಗಳ ಸೇವನೆ , ವಿರುದ್ಧ ಹೋರಾಡಿದರು .
 • ವಿಧವಾ ವಿವಾಹ , ಅಂತರ್ಜಾತಿ ವಿವಾಹ , ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು . ಬ್ರಹ್ಮ ಸಮಾಜವು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿತು . ಸುದ್ದಿಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಪ್ರಕಾಶಿಸಿ , ಉಪನ್ಯಾಸಗಳನ್ನು ನೀಡಿತು .
 • ಮೋಹನ್‌ರಾಯರು ತನ್ನ ಸ್ವಂತ ಖರ್ಚಿನಲ್ಲಿ ಕಲ್ಕತ್ತಾದಲ್ಲಿ ಆಂಗ್ಲಮಾಧ್ಯಮ ಶಾಲೆಯೊಂದನ್ನು ನಡೆಸುತ್ತಿದ್ದರು.
 • ಭಾರತೀಯ ಜ್ಞಾನ ಮತ್ತು ಪಾಶ್ಚಾತ್ಯ ವಿಜ್ಞಾನಗಳನ್ನು ಬೋಧಿಸುವ ಕಾಲೇಜೊಂದನ್ನು ಸ್ಥಾಪಿಸಿದರು .
 • ಇವರು ಲಾರ್ಡ್ ವಿಲಿಯಂ ಬೆಂಟಿಂಕ್‌ನನ್ನು ಬೆಂಬಲಿಸಿ 1829 ರಲ್ಲಿ ಸತಿ ನಿಷೇದ ಶಾಸನವನ್ನು ಜಾರಿಗೊಳಿಸುವಂತೆ ಮಾಡಿದರು .
 • ಸಂವಾದ ಕೌಮುದಿ ಎಂಬ ಬಂಗಾಳಿ ಪತ್ರಿಕೆಯನ್ನು ಪ್ರಕಟಿಸಿದರು .

2. ಸಾಮಾಜಿಕ – ಧಾರ್ಮಿಕ ಚಳುವಳಿಯಲ್ಲಿ ದಯಾನಂದ ಸರಸ್ವತಿಯವರ ಪಾತ್ರವನ್ನು ಬರೆಯಿರಿ .

 • ದಯಾನಂದ ಸರಸ್ವತಿಯವರು ಗುಜರಾತಿನ ತುಕಾರಾಂ ಎಂಬಲ್ಲಿ 1824 ರಲ್ಲಿ ಜನಿಸಿದರು .
 • ಇವರ ಮೂಲ ಹೆಸರು ಮೂಲಾಶಂಕರ . ಇವರು 21 ನೇ ವಯಸ್ಸಿನಲ್ಲಿ ವಿವಾಹ ನಿಶ್ಚಯವಾಗಿ , ಇದನ್ನು ವಿರೋಧಿಸಿ ಸನ್ಯಾಸಿಯಾದರು . 1875 ರಲ್ಲಿ ‘ ಆರ್ಯ ಸಮಾಜ ‘ ವನ್ನು ಸ್ಥಾಪಿಸಿದರು .
 • ವೈದಿಕ ಹಿಂದೂ ಧರ್ಮದ ಪ್ರಚಾರವನ್ನು ಕೈಗೆತ್ತಿಕೊಂಡರು . ಹಿಂದೂಧರ್ಮದ ಆಚರಣೆಗಳಾದ ಮೂರ್ತಿಪೂಜೆ , ತೀರ್ಥಯಾತ್ರೆಗಳು , ಜಾತಿಪದ್ಧತಿ , ಸತಿಪದ್ಧತಿ , ಬಾಲ್ಯವಿವಾಹ , ಬಹುಪತ್ನಿತ್ವಗಳನ್ನು ಟೀಕಿಸಿದರು .
 • ಸ್ತ್ರೀ ಶಿಕ್ಷಣ , ವಿಧವಾ ಮರುವಿವಾಹ ಮತ್ತು ಹಿಂದಿ ಮತ್ತು ಸಂಸ್ಕೃತ ಭಾಷೆಗಳನ್ನು ಪ್ರಚಾರ ಮಾಡುವುದರ ಅವಶ್ಯಕತೆಯನ್ನು ಒತ್ತಿ ಹೇಳಿದರು .
 • ಇವರು ಜಾತಿ ಪದ್ಧತಿಯ ನಿರ್ಮೂಲನೆಗೆ ಪ್ರಯತ್ನಿಸಿದರು . ಅಂತರ್‌ಜಾತಿ ವಿವಾಹಗಳನ್ನು ಮತ್ತು ಸಹಭೋಜನಗಳನ್ನು ಪ್ರೋತ್ಸಾಹಿಸಿದರು .
 • ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಗೊಂಡಿದ್ದವರನ್ನು ಹಿಂದೂ ಧರ್ಮದ ತೆಕ್ಕೆಗೆ ಹಿಂದಕ್ಕೆ ಕರೆಸಿಕೊಳ್ಳಲು ‘ ಶುದ್ದಿ ಚಳುವಳಿ ‘ ಯನ್ನು ಆರಂಭಿಸಿದರು .
 • ಬಾಲಕರು ಹಾಗೂ ಬಾಲಕಿಯರಿಗೆ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿದರು . ಆರ್ಯಸಮಾಜದ ತತ್ವಗಳು ಲಾಲಾ ಲಜಪತ್‌ರಾಯ್ , ಮಹಾತ್ಮ ಹಂಸರಾಜ್ ಗುರುದತ್ ವಿದ್ಯಾರ್ಥಿ ಮತ್ತು ಸ್ವಾಮಿ ಶ್ರದ್ಧಾನಂದರಂತಹ ಮಹಾನ್ ನಾಯಕರನ್ನು ಆಕರ್ಷಿಸಿದವು , ದಯಾನಂದ ಸರಸ್ವತಿ ‘ ಸತ್ಯಾರ್ಥ ಪ್ರಕಾಶ ‘ ಎಂಬ ಕೃತಿಯನ್ನು ಬರೆದರು . ‘ ವೇದಗಳಿಗೆ ಹಿಂತಿರುಗಿ ‘ ಎಂಬುದು ಇವರು ಜನರಿಗೆ ಕೊಟ್ಟ ಪ್ರಸಿದ್ದ ಕರೆಯಾಗಿತ್ತು .

3. ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಚರ್ಚಿಸಿ .

 • ಇವರು 1863 ರ ಜನವರಿ 12 ರಂದು ಕಲ್ಕತ್ತಾದಲ್ಲಿ ಜನಿಸಿದರು .
 • ವಿಶ್ವನಾಥದತ್ತ ಮತ್ತು ಭುವನೇಶ್ವರಿ ದೇವಿ ಇವರ ತಂದೆ ತಾಯಿಗಳು .
 • ಇವರ ಮೂಲ ಹೆಸರು ನರೇಂದ್ರನಾಥ ದತ್ತ ,
 • ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರು .
 • ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಅವರ ಮರಣದ ನಂತರ ಅವರ ಸಂದೇಶಗಳನ್ನು ಪ್ರಚಾರ ಮಾಡಿದರು.
 • 1893 ರಲ್ಲಿ ನಡೆದ ಅಮೇರಿಕಾದ ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಹೊರಟ ಇವರು ತಮ್ಮ ಭಾಷಣದಲ್ಲಿ “ ಸಹೋದರ ಸಹೋದರಿಯರೇ ” ಎಂದು ಉದ್ಗರಿಸಿದ ವಾಕ್ಯ ಸಭಿಕರಲ್ಲಿ ಮನಸೂರೆ ಮಾಡಿತು .
 • ಇವರು ತಮ್ಮ ವಿಚಾರಧಾರೆ ಗಳಿಂದಾಗಿ ಅವರನ್ನು ಪ್ರಭಾವಗೊಳಿಸಿದರು .
 • ನಂತರ ಯೂರೋಪ್ ಖಂಡದ ಪ್ರಮುಖ ದೇಶಗಳ ಪ್ರವಾಸ ಕೈಗೊಂಡು ಹಿಂದೂ ಧರ್ಮದ ಸಂದೇಶಗಳನ್ನು ಪ್ರಚಾರ ಕರೆಸಿದರು .
 • ಅಮೇರಿಕಾ ಮತ್ತು ಯೂರೋಪ್ ದೇಶಗಳಲ್ಲಿ ‘ ವೇದಾಂತ ಸಮಾಜ ‘ ವನ್ನು ಸ್ಥಾಪಿಸಿದರು .
 • ಬಂಗಾಳದ ಬೇಲೂರು ಮಠದಲ್ಲಿ 1897 ರಲ್ಲಿ ‘ ರಾಮಕೃಷ್ಣ ಮಿಷನ್ ‘ ಸ್ಥಾಪಿಸಿದರು .
 • ರಾಮಕೃಷ್ಣ ಮಿಷನ್ , ಜನರ ಸಾಮಾಜಿಕ ಮತ್ತು ಧಾರ್ಮಿಕ ಉನ್ನತಿಗಾಗಿ ಕೆಲಸ ಮಾಡುತ್ತಿದೆ . ಇದು ಶೈಕ್ಷಣಿಕ ಸಂಸ್ಥೆಗಳನ್ನು , ಆಸ್ಪತ್ರೆಗಳನ್ನು , ಅನಾಥಾಲಯಗಳನ್ನು , ವೃದ್ಧಾಶ್ರಮಗಳನ್ನು ನಡೆಸುತ್ತಿದೆ .
 • ಕ್ಷಾಮ , ಬರಗಾಲ , ಸಾಂಕ್ರಾಮಿಕ ರೋಗಗಳು , ಭೂಕಂಪ ಮುಂತಾದ ಸಮಯದಲ್ಲಿ ಜನಸೇವೆ ಮಾಡುತ್ತದೆ . ಪ್ರಪಂಚದಾದ್ಯಂತ ಇದರ ಶಾಖೆಗಳು ಸ್ಥಾಪಿಸಲ್ಪಟ್ಟಿವೆ .
 • ವಿವೇಕಾನಂದರು ಎಲ್ಲಾ ಧರ್ಮಗಳ ಏಕತೆಯಲ್ಲಿ ನಂಬಿಕೆ ಇಟ್ಟಿದ್ದರು .
 • ಇವರು ಎಲ್ಲಾ ಪಂಥಗಳ ಜನರಿಗೆ ಸಹಿಷ್ಣುತೆ , ಸಮಾನತೆ ಮತ್ತು ಸಹಕಾರದ ಕುರಿತು ಬೋಧಿಸಿದರು . ಇವರು ಶಿಕ್ಷಣ, ಮಹಿಳಾ ವಿಮೋಚನೆ ಮತ್ತು ಬಡವರ ನಿರ್ಮೂಲನೆಗೆ ಮಹತ್ವ ನೀಡಿದ್ದರು .
 • “ ಏಳಿ ಎದ್ದೇಳಿ , ಗುರಿ ತಲುಪುವವರೆಗೆ ನಿಲ್ಲದಿರಿ ” ಎಂಬುದು ಇವರು ದೇಶದ ಯುವಕರಿಗೆ ಕೊಟ್ಟ ಸಂದೇಶ ವಾಗಿತ್ತು.
 • ಇವರ ಭಾಷಣ ಮತ್ತು ಬರವಣಿಗೆಗಳು ಸ್ವಾಭಿಮಾನ ಮತ್ತು ರಾಷ್ಟ್ರಾಭಿಮಾನದಿಂದ ತುಂಬಿವೆ .
 • ಅವರು ರಾಷ್ಟ್ರೀಯತೆಯ ಬೆಳವಣಿಗೆಯ ಮೇಲೆ ಪ್ರಭಾವ ಬೀರಿದ್ದ ರಿಂದ ವಿವೇಕಾನಂದರನ್ನು ಭಾರತದ ರಾಷ್ಟ್ರಪ್ರೇಮಿ ಸಂತ “ ಸಿಡಿಲ ಸನ್ಯಾಸಿ ” ಎಂದು ಕರೆಯಲಾಗಿದೆ .
 • ಇವರು ಪ್ರಬುದ್ಧ ಭಾರತ ‘ ಎಂಬ ಆಂಗ್ಲ ಪತ್ರಿಕೆ ಮತ್ತು “ ಉದ್ಯೋದನಾ ಎಂಬ ಬಂಗಾಳಿ ಸುದ್ದಿ ಪತ್ರಿಕೆಯನ್ನು ಪ್ರಕಟಿಸಿದರು .

ಹೆಚ್ಚುವರಿ ಪ್ರಶ್ನೋತ್ತರಗಳು

2nd Puc History 7.4 Chapter Mcq Question Answer in Kannada

1. ‘ ವೇದಗಳಿಗೆ ಹಿಂದಿರುಗಿ ‘ ಇದು ಯಾರ ಘೋಷಣೆ ?

ಸ್ವಾಮಿ ದಯಾನಂದ ಸರಸ್ವತಿ .

2. ಸತ್ಯಾರ್ಥ ಪ್ರಕಾಶ ಎಂಬ ಕೃತಿಯನ್ನು ಬರೆದವರಾರು ?

ದಯಾನಂದ ಸರಸ್ವತಿ

3. ವಿವೇಕಾನಂದರು ಯಾವಾಗ ಜನಿಸಿದರು ?

1868 ರ ಜನವರಿ 12 ರಂದು .

4. ವಿವೇಕಾನಂದರ ಗುರು ಯಾರು ?

ರಾಮಕೃಷ್ಣ ಪರಮಹಂಸರು

5. ವಿಶ್ವಧರ್ಮ ಸಮ್ಮೇಳನ ಎಲ್ಲಿ ? ಯಾವಾಗ ನಡೆಯಿತು ?

ಅಮೆರಿಕದ ಚಿಕಾಗೋದಲ್ಲಿ 1893 ರಲ್ಲಿ ನಡೆಯಿತು .

6. ರಾಜಾರಾಮ ಮೋಹನರಾಯರ ತಂದೆತಾಯಿಗಳಾರು ?

ರಮಾಕಾಂತ್ ರಾಯ್ ಮತ್ತು ತಾರೀಣಿದೇವಿ .

7. 1829 ರಲ್ಲಿ ಸತಿ ನಿಷೇಧ ಶಾಸನವನ್ನು ಜಾರಿಗೊಳಿಸಿದಮಾರು ?

ಲಾರ್ಡ್ ವಿಲಿಯಂ ಬೆಂಟಿಂಕ್ .

8. ಸ್ವಾಮಿ ದಯಾನಂದ ಸರಸ್ವತಿಯವರ ಮೂಲ ಹೆಸರೇನು ?

ಮೂಲಾಶಂಕರ .

9. ಬನಾರಸ್‌ನಲ್ಲಿ ಸೆಂಟ್ರಲ್ ಹಿಂದೂ ಶಾಲೆಯನ್ನು ಸ್ಥಾಪಿಸಿದವರಾರು ?

ಆನಿಬೆಸೆಂಟ್

FAQ

1. ವಿವೇಕಾನಂದರ ಗುರು ಯಾರು ?

ರಾಮಕೃಷ್ಣ ಪರಮಹಂಸರು

2. ದಯಾನಂದ ಸರಸ್ವತಿಯವರು ರಚಿಸಿದ ಕೃತಿಯನ್ನು ಹೆಸರಿಸಿ .

‘ ಸತ್ಯಾರ್ಥ ಪ್ರಕಾಶ ‘

3. ಬ್ರಹ್ಮ ಸಮಾಜದ ಸ್ಥಾಪಕರು ಯಾರು ?

ರಾಜಾರಾಮ್ ಮೋಹನ್ ರಾಯ್ .

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

Leave a Reply

Your email address will not be published. Required fields are marked *