ದ್ವಿತೀಯ ಪಿ.ಯು.ಸಿ ಅಧ್ಯಾಯ-7.3 ಆರ್ಥಿಕತೆ ಮತ್ತು ಶಿಕ್ಷಣದ ಮೇಲೆ ಬ್ರಿಟಿಷ್‌ ಆಡಳಿತದ ಪ್ರಭಾವ ನೋಟ್ಸ್‌ | 2nd Puc History 7.3 Chapter Notes

ದ್ವಿತೀಯ ಪಿ.ಯು.ಸಿ ಅಧ್ಯಾಯ-7.3 ಆರ್ಥಿಕತೆ ಮತ್ತು ಶಿಕ್ಷಣದ ಮೇಲೆ ಬ್ರಿಟಿಷ್‌ ಆಡಳಿತದ ಪ್ರಭಾವ ನೋಟ್ಸ್‌, 2nd Puc History 7.3 Chapter Notes Question Answer in Kannada Pdf 2nd Puc History 7th Chapter Notes in Kannada Kseeb Solution For Class 12 History Chapter 7.3 Notes Modern India in Kannada

ಅಧ್ಯಾಯ-7.3 ಆರ್ಥಿಕತೆ ಮತ್ತು ಶಿಕ್ಷಣದ ಮೇಲೆ ಬ್ರಿಟಿಷ್‌ ಆಡಳಿತದ ಪ್ರಭಾವ

2nd Puc History 7.3 Chapter Notes

2nd Puc History 7.3 Chapter Notes Question Answer

I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :

1. ವುಡ್ ವರದಿ ರಚನೆಯಾದದ್ದು ಯಾವ ವರ್ಷದಲ್ಲಿ ?

ಸಾ.ಶ. 1854 ರಲ್ಲಿ .

2. ‘ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣದ ಮಹಾಸನ್ನದು ‘ ಎಂದು ಯಾವುದನ್ನು ಕರೆಯಲಾಗಿದೆ ?

1854 ರ ವುಡ್‌ನ ವರದಿ .

3. ಶಾಶ್ವತ ಕಂದಾಯ ಪದ್ಧತಿಯನ್ನು ಜಾರಿಗೊಳಿಸಿದವರು ಯಾರು ?

ಲಾರ್ಡ್ ಕಾರ್ನ್‌ವಾಲೀಸ್ .

4. ಸೋರಿಕೆ ಸಿದ್ದಾಂತವನ್ನು ಪ್ರತಿಪಾದಿಸಿದವರು ಯಾರು ?

ದಾದಾಬಾಯಿ ನವರೋಜಿ .

5. ದಾದಬಾಯಿ ನವರೋಜಿಯವರು ಬರೆದ ಕೃತಿ ಯಾವುದು ?

‘ ಪಾವರ್ಟಿ ಅಂಡ್ ಅನ್‌ಬ್ರಿಟಿಷ್ ರೂಲ್ ಇನ್ ಇಂಡಿಯಾ ‘ .

Arthikate Mattu Shikshanada Mele British Adalithada Prabhava

II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ :

1. ಮಹಲ್‌ವಾರಿ ಪದ್ಧತಿ ಎಂದರೇನು ?

ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಹಳ್ಳಿಗಳ ಕಂದಾಯ ಘಟಕಕ್ಕೆ ಮಹಲ್ ಎಂದು ಕರೆಯುತ್ತಿದ್ದು ಮಹಲ್‌ನೊಳಗಿದ್ದ ಕೃಷಿಕನಿಗೆ ಒಟ್ಟಾರೆಯಾಗಿ ಭೂ ಮಾಲಿಕತ್ವ ಕೊಡುವುದೇ ಮಹಲ್‌ವಾರಿ ಪದ್ಧತಿ .

2. ಪೌರಾತ್ಯ ಸಾಹಿತ್ಯದ ಬಗ್ಗೆ ಮೆಕಾಲೆಯ ಅಭಿಪ್ರಾಯ ವೇನಾಗಿತ್ತು ?

ಪೌರಾತ್ಯ ಕಲಿಕೆಯು ಪಾಶ್ಚಾತ್ಯ ಕಲಿಕೆಗಿಂತ ತೀರಾ ಕಳಪೆಯಾಗಿದೆ , ‘ ಭಾರತ ಮತ್ತು ಅರೇಬಿಯಾದ ಸಮಸ್ತ ಪೌರಾತ್ಯ ಸಾಹಿತ್ಯ ಸೇರಿದರೂ ಯೂರೋಪಿನ ಉತ್ತಮ ಗ್ರಂಥಾಲಯದ ಕಪಾಟೊಂದರ ಗ್ರಂಥಗಳಿಗೆ ಸಮನಾಗದು ‘ ಎಂದು ಅಭಿಪ್ರಾಯಪಟ್ಟಿದ್ದಾನೆ .

3. ಭಾರತದಲ್ಲಿ ಬ್ರಿಟಿಷರು ಜಾರಿಗೆ ತಂದ ಯಾವುದಾದರೂ ಎರಡು ಭೂ ಕಂದಾಯ ಪದ್ಧತಿಗಳನ್ನು ಹೆಸರಿಸಿ .

ಜಮೀನ್ದಾರಿ ಪದ್ಧತಿ , ರೈತವಾರಿ ಪದ್ಧತಿ ,

4. ರೈತವಾರಿ ಪದ್ಧತಿ ಎಂದರೇನು ?

ರೈತರು ಅಥವಾ ಕೃಷಿಕರಿಗೆ ನಿಯಮಿತವಾಗಿ ಕಂದಾಯವನ್ನು ಕೊಡುವ ಒಪ್ಪಂದದ ಮೇರೆಗೆ ಭೂಮಾಲಿಕತ್ವವನ್ನು ನೀಡುವುದೇ ರೈತವಾರಿ ಪದ್ಧತಿ .

III . ಕೆಳಗಿನ ಪ್ರಶ್ನೆಗೆ 15-20 ವಾಕ್ಯಗಳಲ್ಲಿ ಉತ್ತರಿಸಿ :

1. ಸೋರಿಕೆ ಸಿದ್ದಾಂತವನ್ನು ವಿವರಿಸಿ .

 • ಭಾರತದ ಕೃಷಿಯನ್ನು ಅಭಿವೃದ್ಧಿ ಪಡಿಸಲು ಬ್ರಿಟಿಷರಿಗೆ ಹೆಚ್ಚಿನ ಆಸಕ್ತಿ ಇರಲಿಲ್ಲ . ಅವರು ಇಂಗ್ಲೆಂಡಿನಲ್ಲಿರುವ ತಮ್ಮ ಕಾರ್ಖಾನೆಗಳಿಗೆ ಕಚ್ಛಾ ವಸ್ತುಗಳನ್ನು ದೊರಕಿಸಿಕೊಳ್ಳಲು ಮತ್ತು ತಮ್ಮ ವಾಣಿಜ್ಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮಾತ್ರ ಆಸಕ್ತರಾಗಿದ್ದರು .
 • ಯೂರೋಪ್ ಮತ್ತು ಅಮೇರಿಕಾದ ಮಾರುಕಟ್ಟೆಗಳಲ್ಲಿ ಅಪಾರ ಬೇಡಿಕೆಯಿದ್ದ ವಾಣಿಜ್ಯ ಬೆಳೆಗಳಾದ ಹತ್ತಿ , ಕಬ್ಬು , ಚಹಾ , ನೀಲಿ ಮುಂತಾದವುಗಳನ್ನು ಬೆಳೆಯಲು ಭಾರತೀಯ ಕೃಷಿಕರ ಮೇಲೆ ಒತ್ತಡ ಹೇರಿದರು .
 • ಉದ್ದೇಶ ಪೂರ್ವಕವಾಗಿಯೇ ಕೈಗಾರಿಕೆಗಳ ಸ್ಥಾಪನೆಯಲ್ಲಿ ಆಸಕ್ತಿ ತೋರಿಸದೇ ಭಾರತವನ್ನು ಕಚ್ಛಾ ವಸ್ತುಗಳ ಮೂಲವಾಗಿ ಮತ್ತು ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆಯನ್ನಾಗಿ ಪರಿವರ್ತಿಸಿದರು . ಭಾರತೀಯ ಕರಕುಶಲ ವಸ್ತುಗಳು ಇಂಗ್ಲೆಂಡಿನ ಯಂತ್ರದಿಂದ ಮಾಡಿದ ಉತ್ಪಾದನೆಗಳೊಂದಿಗೆ ಸ್ಪರ್ಧಿಸ ಲಾಗಲಿಲ್ಲ .
 • ಕಸುಬುದಾರರು , ಕುಶಲಕರ್ಮಿಗಳು ರೈತರಾಗಿ ಇಲ್ಲವೇ ಕೃಷಿ ಕೂಲಿ ಕಾರ್ಮಿಕರಾಗಿ ಹಸಿವೆಯಿಂದ ಬಳಲುವಷ್ಟು ಕಡಿಮೆ ಕೂಲಿಗೆ ಕೆಲಸ ಮಾಡಬೇಕಾಯಿತು . ಬ್ರಿಟಿಷರು ಜಾರಿಗೆ ತಂದ ಹೊಸ ರೈತವಾರಿ ಪದ್ಧತಿ , ಮಹಲ್‌ವಾರಿ ಪದ್ಧತಿಗಳು ಲೇವಾದೇವಿದಾರರ ಮತ್ತು ಜಮೀನ್ದಾರರ ಪರವಾಗಿದ್ದು ರೈತರು ಶೋಷಣೆಗೆ ಒಳಗಾಗಿ ಗ್ರಾಮಗಳ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಗಳು ಕುಂಠಿತಗೊಂಡವು .
 • ನಾಗರೀಕ ಮತ್ತು ಸೇನಾ ಅಧಿಕಾರಿಗಳ ವೇತನ ಮತ್ತು ನಿವೃತ್ತಿವೇತನ , ಸಾಲದ ಮೇಲಿನ ಬಡ್ಡಿ , ಬ್ರಿಟಿಷ್ ಬಂಡವಾಳ ಶಾಹಿಗಳ ಲಾಭ , ಆಡಳಿತದ ವೆಚ್ಚ ಇತ್ಯಾದಿ ಸಾಕಷ್ಟು ಸಂಪತ್ತು ಭಾರತದಿಂದ ಇಂಗ್ಲೆಂಡಿಗೆ ಹೊಳೆಯಂತೆ ಹರಿದುಹೋಯಿತು .
 • ಭಾರತದ ರಫ್ತಗಿಂತಲೂ ಇಂಗ್ಲೆಂಡಿನಿಂದ ಆಮದಿನ ಹೆಚ್ಚಳ ಹಾಗೂ ಭಾರತೀಯ ವಸ್ತುಗಳ ಮೇಲಿನ ಹೆಚ್ಚಿನ ತೆರಿಗೆಗಳು ಮತ್ತು ಬ್ರಿಟಿಷ್ ವಸ್ತುಗಳ ಮೇಲಿನ ಕಡಿಮೆ ತೆರಿಗೆಗಳಿಂದಾಗಿಯೂ ಸಂಪತ್ತಿನ ಸೋರಿಕೆಯಾಯಿತು . ದಾದಾಬಾಯಿ ನವರೋಜಿಯವರು ತಮ್ಮ ‘ ಪಾವರ್ಟಿ ಅನ್ ಬ್ರಿಟಿಷ್ ರೂಲ್ ಇನ ಇಂಡಿಯಾ ‘ ಕೃತಿಯಲ್ಲಿ ತಮ್ಮ ‘ ಸೋರಿಕೆ ಸಿದ್ಧಾಂತ’ವನ್ನು ಮಂಡಿಸಿದ್ದಾರೆ .

2. ಬ್ರಿಟಿಷ್ ಆಡಳಿತವು ಭಾರತೀಯ ಶಿಕ್ಷಣದ ಮೇಲೆ ಬೀರಿದ ಪ್ರಭಾವವನ್ನು ಕುರಿತು ಬರೆಯಿರಿ .

ಯೂರೋಪಿಯನ್ನರು ಆಗಮಿಸುವ ಮುಂಚೆ ಭಾರತದಲ್ಲಿನ ಶಿಕ್ಷಣವು ಧರ್ಮಾಧರಿತವಾಗಿದ್ದು ಹಿಂದೂ ಪಾಠಶಾಲೆಗಳು , ಮುಸ್ಲಿಂ ಮದರಸಾಗಳಲ್ಲಿ ನಡೆಯುತ್ತಿತ್ತು . ಈಸ್ಟ್ ಇಂಡಿಯಾ ಕಂಪನಿಯು ಜನರಿಗೆ ಶಿಕ್ಷಣ ನೀಡಲು ಆಸಕ್ತಿ ತೋರದಿದ್ದರೂ ಸಹ ಬ್ರಿಟಿಷ್ ಸಂಸತ್ತು ಚಾರ್ಟರ್ ಕಾಯಿದೆಯನ್ನು ಅಂಗೀಕರಿಸಿ ಭಾರತದಲ್ಲಿನ ಶಿಕ್ಷಣದ ಅಭಿವೃದ್ಧಿಗೆ ವಾರ್ಷಿಕವಾಗಿ 1.00,000 ರೂಪಾಯಿಗಳನ್ನು ಒದಗಿಸಿತು . ಆದರೆ ಕಂಪನಿಯು ಪೌರಾತ್ಯರು ( ಓರಿಯಂಟ್ ಲಿಟ್ಸ್ ) ಮತ್ತು ಇಂಗ್ಲಿಷ್ ಶಿಕ್ಷಣದ ಬೆಂಬಲಿಗರ ( ಆಂಗ್ಲಿ ಸಿಸ್ಟರು ) ಮುಧ್ಯದ ಭಿನ್ನಾಭಿಪ್ರಾಯದಿಂದಾಗಿ ಈ ಹಣವನ್ನು ಖರ್ಚು ಮಾಡಲಿಲ್ಲ . ಈ ವಿವಾದವು 1835 ರವರೆಗೆ ಮುಂದುವರೆಯಿತು .

ಮೆಕಾಲೆ ವರದಿ 1835

 • ಗವರ್ನರ್ ಜನರಲ್ ಲಾರ್ಡ್ ವಿಲಿಯಂ ಬೆಂಟಿಂಕ್‌ನು ಈ ವಿವಾದವನ್ನು ಬಗೆಹರಿಸಲು ಮೆಕಾಲೆಯನ್ನು ನೇಮಕ ಮಾಡಿದ . ಈತನು ವರದಿಯನ್ನು ಸಲ್ಲಿಸಿ ಇಂಗ್ಲೀಷ್ ಶಿಕ್ಷಣದ ಬೆಂಬಲಿಗರ ಅಭಿಪ್ರಾಯಗಳನ್ನು ಬೆಂಬಲಿಸಿದನು.
 • ಈತ ಭಾರತದಲ್ಲಿ ಪಾಶ್ಚಾತ್ಯ ಮಾದರಿಯ ಶಿಕ್ಷಣ ವ್ಯವಸ್ಥೆಯ ಬೆಳವಣಿಗೆ ಹಾಗೂ ಇಂಗ್ಲೀಷನ್ನು ಮಾಧ್ಯಮವಾಗಿಸಬೇಕೆಂದು ಪ್ರತಿಪಾದಿಸಿದನು .
 • ಈ ಶಾಸನವು ಶಿಕ್ಷಣದ ಮೂಲಕ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಹಾಗೂ ಈಸ್ಟ್ ಇಂಡಿಯಾ ಕಂಪನಿಯ ಕೆಲಸಕ್ಕೆ ಗುಮಾಸ್ತರನ್ನು ತಯಾರಿಸುವ ಉದ್ದೇಶವನ್ನು ಹೊಂದಿತ್ತು .

ವುಡ್‌ನ ವರದಿ -1854

 • ಭಾರತದಲ್ಲಿನ ಶಿಕ್ಷಣದ ಅಭಿವೃದ್ಧಿಯ ಮುಂದಿನ ಹಂತ 1854 ರ ಸರ್ ಚಾರ್ಲ್ಸ್ ವುಡ್‌ನಿಂದ ಸಿದ್ಧಪಡಿಸಲ್ಪಟ್ಟ ‘ ವುಡ್‌ನ ವರದಿ ‘ ಇದರ ಅಂಶಗಳೆಂದರೆ
 • ಕಂಪನಿಯು ಹಳ್ಳಿಯಲ್ಲಿ ಪ್ರಾಥಮಿಕ ಶಾಲೆ , ಪಟ್ಟಣಗಳಲ್ಲಿ ಪ್ರೌಢಶಾಲೆ ಮತ್ತು ಜಿಲ್ಲಾ ಮಟ್ಟದಲ್ಲಿ ಕಾಲೇಜುಗಳನ್ನು ಆರಂಭಿಸಬೇಕು .
 • ಪ್ರಾಥಮಿಕ ಶಿಕ್ಷಣವು ದೇಶೀಯ ಭಾಷೆಗಳಲ್ಲಿರುಬೇಕು . ಪ್ರೌಢಶಾಲೆಗಳಲ್ಲಿ ಹಾಗೂ ಉನ್ನತಶಿಕ್ಷಣಕ್ಕೆ ಆಂಗ್ಲ ಮಾಧ್ಯಮವಿರಬೇಕು .
 • ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವುದು .
 • ಕಂಪನಿಯು ಎಲ್ಲಾ ಪ್ರಾಂತ್ಯಗಳಲ್ಲಿ ಶಿಕ್ಷಣದ ಮೇಲ್ವಿಚಾರಣೆಗೆ ‘ ಸಾರ್ವಜನಿಕ ಶಿಕ್ಷಣ ಇಲಾಖೆ’ಯನ್ನು ಸ್ಥಾಪಿಸಬೇಕು .
 • ಲಂಡನ್ ವಿಶ್ವವಿದ್ಯಾಲಯ ಮಾದರಿಯಲ್ಲಿ ಬಾಂಬೆ , ಮದ್ರಾಸ್ ಮತ್ತು ಕಲ್ಕತ್ತಾಗಳಲ್ಲಿ ವಿಶ್ವವಿದ್ಯಾಲಯಗಳ ಸ್ಥಾಪನೆ . ಶಿಕ್ಷಕರ ತರಬೇತಿ ಕಾಲೇಜುಗಳನ್ನು ಆರಂಭಿಸುವುದು .
 • ವೃತ್ತಿ ಶಿಕ್ಷಣ ಮತ್ತು ತಾಂತ್ರಿಕ ಶಾಲಾ ಕಾಲೇಜುಗಳ ಸ್ಥಾಪನೆ . ಮಹಿಳಾ ಶಿಕ್ಷಣಕ್ಕೆ ಪ್ರಾಧಾನ್ಯತೆ . ಈ ವರದಿಯ ಬಹುತೇಕ ಶಿಫಾರಸ್ಸುಗಳು ಅನುಷ್ಠಾನ ಗೊಂಡವು ; ಚಾರ್ಲ್ಸ್‌ವುಡ್‌ರ ವಿಚಾರಗಳು ಭಾರತೀಯ ಶಿಕ್ಷಣದ ಮೇಲೆ ಮುಂದಿನ ಅನೇಕ ವರ್ಷಗಳವರೆಗೆ ಪ್ರಭಾವ ಬೀರಿದವು . ಈ ವರದಿಯನ್ನು ಭಾರತದಲ್ಲಿನ ಇಂಗ್ಲಿಷ್ ಶಿಕ್ಷಣದ ‘ ಮಹಾಸನ್ನದು ‘ ಎಂದು ಕರೆಯಲಾಗಿದೆ .

IV . ಕೆಳಗಿನ ಪ್ರಶ್ನೆಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

1. ಭಾರತದ ಆರ್ಥಿಕತೆಯ ಮೇಲೆ ಬ್ರಿಟಿಷ್ ಆಳ್ವಿಕೆಯ ಪ್ರಭಾವದ ಕುರಿತು ವಿವರಣೆ ನೀಡಿ .

 • ಬ್ರಿಟಿಷರು ಭಾರತವನ್ನು 200 ವರ್ಷಗಳಿಗೂ ಹೆಚ್ಚು ಕಾಲ ಆಳಿದರು . ಭಾರತವನ್ನು ರಾಜಕೀಯವಾಗಿ , ಆರ್ಥಿಕವಾಗಿ ಸಾಮಾಜಿಕವಾಗಿ ಶೋಷಿಸಿದರು . ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತದ ಆರ್ಥಿಕತೆಯ ಮೇಲೆ ಗಾಢವಾದ ಪ್ರಭಾವ ಬೀರಿತು .
 • ಭೂ ಕಂದಾಯವು ಸರಕಾರಗಳಿಗೆ ಪ್ರಮುಖ ಆದಾಯದ ಮೂಲವಾಗಿತ್ತು . ಆಡಳಿತಕ್ಕೆ ಬೃಹತ್ ಸೇನೆಯ ನಿರ್ವಹಣೆಗೆ , ಯುದ್ಧಗಳಿಗಾಗಿ ಮತ್ತು ತಮ್ಮ ಐಶಾರಾಮಿ ಜೀವನಕ್ಕೆ ಈ ಖರ್ಚಿನ ಭಾರವನ್ನು ಭಾರತೀಯ ಕೃಷಿಕರು ಅಥವಾ ರೈತರ ಮೇಲೆ ಹೇರಲಾಗುತ್ತಿತ್ತು .
 • ಇದರ ಜೊತೆಗೆ ಭಾರತದಲ್ಲಿ ಹಳೆಯ ಕಂದಾಯ ಪದ್ಧತಿಯೂ ಅಸ್ತಿತ್ವದಲ್ಲಿತ್ತು .

ಶಾಶ್ವತ ಕಂದಾಯ ಪದ್ಧತಿ ಅಥವಾ ಜಮೀನ್ದಾರಿ ಪದ್ಧತಿ 1793

 • ಲಾರ್ಡ್ ಕಾರ್ನ್‌ವಾಲೀಸನು ಬಂಗಾಳ ಬಿಹಾರ ಓರಿಸ್ಸಾ , ಉತ್ತರ ಪ್ರದೇಶದ ಉತ್ತರ ಭಾಗ ಮತ್ತು ಕರ್ನಾಟಿಕ್ ಪ್ರದೇಶಗಳಲ್ಲಿ ಈ ಪದ್ಧತಿಯನ್ನು ಜಾರಿಗೆ ತಂದನು .
 • ಜಮೀನ್ದಾರರಿಗೆ ಭೂ ಮಾಲಿಕತ್ವವನ್ನು ನೀಡಿ ಅವರು ರೈತರಿಂದ ಕಂದಾಯವನ್ನು ವಸೂಲಿ ಮಾಡಿ ಕಂದಾಯದಲ್ಲಿ ಶೇ 89 ರಷ್ಟನ್ನು ಸರ್ಕಾರಕ್ಕೆ ಕೊಡಬೇಕಿತ್ತು , ಉಳಿದದ್ದನ್ನು ತಾವು ಇಟ್ಟುಕೊಳ್ಳುತ್ತಿದ್ದರು . ಈ ಪದ್ಧತಿಯಿಂದ ರೈತರಿಗೆ ಬಹಳ ಕಷ್ಟವಾಯಿತು .

ರೈತವಾರಿ ಪದ್ಧತಿ :

 • ಈ ಪದ್ಧತಿಯಲ್ಲಿ ರೈತರೊಂದಿಗೆ ಕಂಪನಿ ನೇರ ಒಪ್ಪಂದವನ್ನು ಮಾಡಿಕೊಂಡಿತು . ನಿಗದಿತ ಕಂದಾಯದ ಶೇಕಡಾ 50 ಕಂದಾಯವನ್ನು ನಿಯಮಿತವಾಗಿ ಕೊಡುವ ಶರತ್ತಿನನ್ವಯ ಭೂ ಮಾಲಿಕತ್ವವನ್ನು ನೀಡಲಾಗುತ್ತಿತ್ತು .
 • ಈ ಪದ್ಧತಿಯಲ್ಲಿ ಕೃಷಿಕರು ಸರಕಾರದ ಸಂಪೂರ್ಣ ಅಧೀನ ದಲ್ಲಿದ್ದರು . ಬರಗಾಲ , ಪ್ರವಾಹಗಳಿಂದ ಹಾನಿಗೊಳಗಾದರೂ ಸಹ ಕಂದಾಯವನ್ನು ಕೊಡಲೇಬೇಕಾಗಿತ್ತು .
 • ಅನೇಕ ಕೃಷಿಕರು ತೆರಿಗೆ ಕೊಡಲಾಗದೆ ಭೂ ಒಡೆತನವನ್ನು ಕಳೆದುಕೊಂಡರು .

ಮಹಲ್ವಾರಿ ಪದ್ಧತಿ :

 • ಒಂದು ಅಥವಾ ಒಂದಕ್ಕಿಂತ ಹೆಚ್ಚು ಹಳ್ಳಿಗಳನ್ನೊಳ ಗೊಂಡ ಕಂದಾಯ ಪ್ರದೇಶವನ್ನು ಮಹಲ್ ಎಂದು ಕರೆಯಲಾಗಿದ್ದು , ಮಹಲ್‌ನೊಳಗಿದ್ದ ಕೃಷಿಕರನ್ನು ಒಟ್ಟಾಗಿ ಭೂ ಮಾಲಿಕರೆಂದು ಪರಿಗಣಿಸಿ ಕಂದಾಯವನ್ನು ಸಂಗ್ರಹಿಸುತ್ತಿದ್ದರು .
 • ಹೆಚ್ಚಿನ ಭೂ ಕಂದಾಯವು ರೈತರಿಗೆ ಹೊರೆಯಾಗಿ ಬಡತನದಿಂದ ಬಂದರು .
 • ಭಾರತದ ಕೃಷಿಯನ್ನು ಅಭಿವೃದ್ಧಿಪಡಿಸಲು ಬ್ರಿಟಿಷರಿಗೆ ಹೆಚ್ಚಿನ ಆಸಕ್ತಿ ಇರಲಿಲ್ಲ .
 • ಅವರು ಇಂಗ್ಲೆಂಡಿನಲ್ಲಿರುವ ತಮ್ಮ ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳನ್ನು ದೊರಕಿಸಿಕೊಳ್ಳಲು ಮತ್ತು ತಮ್ಮ ವಾಣಿಜ್ಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮಾತ್ರ ಆಸಕ್ತರಾಗಿದ್ದರು .
 • ಯೂರೋಪ್ ಮತ್ತು ಅಮೇರಿಕಾದ ಮಾರುಕಟ್ಟೆಗಳಲ್ಲಿ ಅಪಾರ ಬೇಡಿಕೆಯಿದ್ದ ವಾಣಿಜ್ಯ ಬೆಳೆಗಳಾದ ಹತ್ತಿ , ಕಬ್ಬು , ಚಹಾ , ನೀಲಿ ಮುಂತಾದವುಗಳನ್ನು ಬೆಳೆಯಲು ಭಾರತೀಯ ಕೃಷಿಕರ ಮೇಲೆ ಒತ್ತಡ ಹೇರಿದರು .
 • ಉದ್ದೇಶ ಪೂರ್ವಕವಾಗಿಯೇ ಕೈಗಾರಿಕೆಗಳ ಸ್ಥಾಪನೆಯಲ್ಲಿ ಆಸಕ್ತಿ ತೋರಿಸದೇ ಭಾರತವನ್ನು ಕಚ್ಚಾ ವಸ್ತುಗಳ ಮೂಲವಾಗಿ ಮತ್ತು ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆಯನ್ನಾಗಿ ಪರಿವರ್ತಿಸಿದರು .
 • ಭಾರತೀಯ ಕರಕುಶಲ ವಸ್ತುಗಳು ಇಂಗ್ಲೆಂಡಿನ ಯಂತ್ರದಿಂದ ಮಾಡಿದ ಉತ್ಪಾದನೆಗಳೊಂದಿಗೆ ಸ್ಪರ್ಧಿಸ ಲಾಗಲಿಲ್ಲ. ಕಸುಬುದಾರರು , ಕುಶಲಕರ್ಮಿಗಳು ರೈತರಾಗಿ ಇಲ್ಲವೇ ಕೃಷಿ ಕೂಲಿ ಕಾರ್ಮಿಕರಾಗಿ ಹಸಿವೆಯಿಂದ ಬಳಲುವಷ್ಟು ಕಡಿಮೆ ಕೂಲಿಗೆ ಕೆಲಸ ಮಾಡಬೇಕಾಯಿತು .
 • ಬ್ರಿಟಿಷರು ಜಾರಿಗೆ ತಂದ ಹೊಸ ರೈತವಾರಿ ಪದ್ಧತಿ ಮಹಲ್‌ವಾರಿ ಪದ್ಧತಿಗಳು ಲೇವಾದೇವಿದಾರರ ಮತ್ತು ಜಮೀನ್ದಾರರ ಪರವಾಗಿದ್ದು , ರೈತರು ಶೋಷಣೆಗೆ ಒಳಗಾಗಿ ಗ್ರಾಮಗಳ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಗಳು ಕುಂಠಿತಗೊಂಡವು .
 • ನಾಗರೀಕ ಮತ್ತು ಸೇನಾ ಅಧಿಕಾರಿಗಳ ವೇತನ ಮತ್ತು ನಿವೃತ್ತಿವೇತನ , ಸಾಲದ ಮೇಲಿನ ಬಡ್ಡಿ , ಬ್ರಿಟಿಷ್ ಬಂಡವಾಳ ಶಾಹಿಗಳ ಲಾಭ , ಆಡಳಿತದ ವೆಚ್ಚ ಇತ್ಯಾದಿ ಸಾಕಷ್ಟು ಸಂಪತ್ತು ಭಾರತದಿದ ಇಂಗ್ಲೆಂಡಿಗೆ ಹೊಳೆಯಂತೆ ಹರಿದುಹೋಯಿತು .
 • ಭಾರತದ ರಫಿಗಿಂತಲೂ ಇಂಗ್ಲೆಂಡಿನಿಂದ ಆಮದಿನ ಹೆಚ್ಚಳ ಹಾಗೂ ಭಾರತೀಯ ವಸ್ತುಗಳ ಮೇಲಿನ ಹೆಚ್ಚಿನ ತೆರಿಗೆಗಳು ಮತ್ತು ಬ್ರಿಟಿಷ್ ವಸ್ತುಗಳ ಮೇಲಿನ ಕಡಿಮೆ ತೆರಿಗೆಗಳಿಂದಾಗಿ ಸ೦ಪತ್ತಿನ ಸೋರಿಕೆಯಾಯಿತು . ದಾದಾಬಾಯಿ ನವರೋಜಿಯವರು ತಮ್ಮ ‘ ಪಾವರ್ಟಿ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ ‘ ಕೃತಿಯಲ್ಲಿ ತಮ್ಮ ‘ ಸೋರಿಕೆ ಸಿದ್ದಾಂತವನ್ನು ಮಂಡಿಸಿದ್ದಾರೆ .

ಹೆಚ್ಚುವರಿ ಪ್ರಶ್ನೋತ್ತರಗಳು

1. ಮೆಕಾಲೆ ವರದಿಯು ಯಾವಾಗ ರೂಪುಗೊಂಡಿತು ?

1835 ರಲ್ಲಿ .

2. 1854 ರ ವುಡ್ ವರದಿಯನ್ನು ಸಿದ್ಧಪಡಿಸಿದವರಾರು ?

ಸರ್ ಚಾರ್ಲ್ಸ್‌ವುಡ್

3. ಶಾಶ್ವತ ಕಂದಾಯ ಪದ್ಧತಿ ಅಥವಾ ಜಮೀನ್ದಾರಿ ಪದ್ಧತಿಯನ್ನು ಬ್ರಿಟಿಷರು ಯಾವಾಗ ಜಾರಿಗೆ ತಂದರು?

ಕ್ರಿ.ಶ .1793 ರಲ್ಲಿ .

4. ರೈತವಾರಿ ಪದ್ಧತಿಯನ್ನು ಯಾವ ಯಾವ ಪ್ರಾಂತ್ಯಗಳಲ್ಲಿ ಜಾರಿಗೆ ತರಲಾಯಿತು ?

ಬಾಂಬೆ ಮತ್ತು ಮದ್ರಾಸ್ ಪ್ರಾಂತ್ಯಗಳಲ್ಲಿ .

5. ಪಾವರ್ಟಿ ಆಂಟ್ ಅನ್‌ಬ್ರಿಟೀಷ್ ರೂಲ್ ಇನ್ಇಂಡಿಯಾ ಕೃತಿಯನ್ನು ರಚಿಸಿದವರಾರು ?

ದಾದಾಬಾಯಿ ನವರೋಜಿ

FAQ

1. ಸೋರಿಕೆ ಸಿದ್ದಾಂತವನ್ನು ಪ್ರತಿಪಾದಿಸಿದವರು ಯಾರು ?

ದಾದಾಬಾಯಿ ನವರೋಜಿ .

2. 1854 ರ ವುಡ್ ವರದಿಯನ್ನು ಸಿದ್ಧಪಡಿಸಿದವರಾರು ?

ಸರ್ ಚಾರ್ಲ್ಸ್‌ವುಡ್

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

Leave a Reply

Your email address will not be published. Required fields are marked *

rtgh