ದ್ವಿತೀಯ ಪಿ.ಯು.ಸಿ ಅಧ್ಯಾಯ- 7.2 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ನೋಟ್ಸ್‌ | 2nd Puc History 7.2 Chapter Notes in Kannada

ದ್ವಿತೀಯ ಪಿ.ಯು.ಸಿ ಅಧ್ಯಾಯ- 7.2 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ನೋಟ್ಸ್, 2nd Puc History 7.2 Chapter Notes Question Answer Mcq in Kannada Kseeb Solution For Class 12 History Chapter 7.2 Notes in Kannada Bharatada Prathama Swatantra Sangrama Notes in Kannada History Chapter 7 Modern India Questions and Answers, Notes Pdf

ಅಧ್ಯಾಯ- 7.2 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

2nd Puc History 7.2 Chapter Notes in Kannada

2nd Puc History 7th Chapter Notes in Kannada Medium

I.ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿ:

1.ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ ಯಾವುದು ?

ಸಾ.ಶ. 1857 .

2. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದ ಲಕ್ನೋದ ರಾಣಿಯನ್ನು ಹೆಸರಿಸಿ.

ಬೇಗಂ ಹಜರತ್ ಮಹಲ್ .

3.1857 ರಲ್ಲಿ ಬ್ರಿಟಿಷ್ ಸಾರ್ಜೆಂಟ್‌ನನ್ನು ಕೊಂದ ಭಾರತೀಯ ಸೈನಿಕನನ್ನು ಹೆಸರಿಸಿ .

ಮಂಗಳಪಾಂಡೆ .

4. 1857 ರಲ್ಲಿ ಬ್ರಿಟಿಷ್‌ ವಿರುದ್ಧ ಕಾನ್ಪುರದಲ್ಲಿ ದಂಗೆ ಎದ್ದವರು ಯಾರು ?

ನಾನಾ ಸಾಹೇಬ್ .

5. ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿಯು ಬ್ರಿಟಿಷರ ವಿರುದ್ಧ ಏಕೆ ದಂಗೆ ಎದ್ದಳು ?

ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿಯು ತನ್ನ ದತ್ತು ಪುತ್ರನನ್ನು ಮಾನ್ಯ ಮಾಡಲು ನಿರಾಕರಿಸಿದ್ದರಿಂದ ದಂಗೆ ಎದ್ದಳು .

2nd Puc History 7.2 Chapter Notes in Kannada

II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ :

1. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಕ್ಷಣದ ಕಾರಣವೇನು ?

ಎನ್‌ಫೀಲ್ಡ್ ಬಂದೂಕುಗಳ ಗುಂಡುಗಳಿಗೆ ಹಂದಿ ಮತ್ತು ದನದ ಕೊಬ್ಬನ್ನು ಬಳಸಿದ ರಕ್ಷಣಾ ಕವಚವನ್ನು ಹಲ್ಲಿನಿಂದ ಕಚ್ಚಿ ಬಳಸಲು ಹೇಳಿದ್ದು ,

ನಮ್ಮ ಧರ್ಮವನ್ನು ಹಾಳು ಮಾಡುತ್ತಿದ್ದಾರೆ ಎಂಬ ಭಾವನೆ ಮೂಡಿದ್ದು .

2 . 1857 ರ ದಂಗೆಯ ವಿಫಲತೆಗೆ ಯಾವುದಾದರೂ ಎರಡು ಕಾರಣಗಳನ್ನು ಬರೆಯಿರಿ .

ಈ ದಂಗೆಯು ರಾಷ್ಟ್ರೀಯ ಲಕ್ಷಣಗಳನ್ನು ಹೊಂದಿರದೆ ಕೇವಲ ಮಧ್ಯಭಾರತಕ್ಕೆ ಮಾತ್ರ ಸೀಮಿತವಾಗಿತ್ತು . ದಂಗೆಕೋರರಲ್ಲಿ ಸಮಾನ ಉದ್ದೇಶವಿರಲಿಲ್ಲ .

III . ಈ ಕೆಳಗಿನ ಪ್ರಶ್ನೆಗೆ 15-20 ವಾಕ್ಯಗಳಲ್ಲಿ ಉತ್ತರಿಸಿ :

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 Question Answer

1. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಗತಿಯ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ .

  • ಬರಹಾ೦ಪೂರದ 19 ನೇ ಪದಾತಿ ದಳವು ತೋಟಾವನ್ನು ಬಳಸಲು ನಿರಾಕರಿಸಿತು .
  • ಬ್ಯಾರಕ್‌ಪುರದ 34 ನೇ ಪದಾತಿ ದಳವು ಸಹಾ ತೋಟಾವನ್ನು ಬಳಸಲು ನಿರಾಕರಿಸಲಾಯಿತು .
  • ಮಂಗಲ್ ಪಾಂಡೆಯು ಬ್ರಿಟಿಷ್ ಸಾರ್ಜೆಂಟ್‌ನನ್ನು ಕೊಂದು ಹಾಕಿದನು .
  • ಈತನನ್ನು ಗಲ್ಲಿಗೇರಿಸಿ ಪದಾತಿ ದಳವನ್ನು ವಜಾ ಮಾಡಿದರು .
  • ಮೀರತ್‌ನ 85 ಸೈನಿಕರು ತೋಟಾಗಳನ್ನು ಬಳಸಲು ನಿರಾಕರಿಸಿದಾಗ ಅವರನ್ನು ಸೆರೆಮನೆಗೆ ತಳ್ಳಿದರು .
  • ಸೈನಿಕರು ದಂಗೆ ಎದ್ದು ಜೈಲಿನ ಬಾಗಿಲು ಮುರಿದು ತಪ್ಪಿಸಿಕೊಂಡು ದೆಹಲಿಯ ಕಡೆ ಮುನ್ನುಗ್ಗಿ ಎರಡನೇ ಬಹದ್ದೂರ್ ಷಾ ( ಕೊನೆಯ ಮೊಘಲ್ ದೊರೆ ) ನನ್ನು ಭಾರತದ ಸಾಮಾಟನೆಂದು ಘೋಷಿಸಿ ಕೆಂಪು ಕೋಟೆಯ ಮೇಲೆ ಸ್ವಾತಂತ್ರ್ಯ ಧ್ವಜವನ್ನು ಹಾರಿಸಿದರು .
  • ಬೇಗಂ ಹಜರತ್ ಮಹಲ್ ದಂಗೆ ಎದ್ದಳು , ಬ್ರಿಟಿಷರು ಲವನ್ನು ವಶಪಡಿಸಿಕೊಳ್ಳಲಾಗಿ ಈಕೆ ನೇಪಾಳಕ್ಕೆ ಫಲಾಯನ ಗೈದಳು .
  • ನಾನಾ ಸಾಹೇಬನು 1857 ರಲ್ಲಿ ಜೂನ್ 5 ರಂದು ದಂಗೆ ಎದ್ದು ಕಾನ್ಸುರವನ್ನು ವಶಪಡಿಸಿಕೊಂಡು ತನ್ನನ್ನು ಪೇಳ್ವೆ ಎಂದು ಘೋಷಿಸಿಕೊಂಡನು . ಈತನೊಂದಿಗೆ ಈತನ ಸ್ನೇಹಿತ ತಾತ್ಯಾಟೋಪಿಯೂ ಸೇರಿಕೊಂಡನು . ಬ್ರಿಟಿಷರು ಈ ದಂಗೆಯನ್ನು ಯಶಸ್ವಿಯಾಗಿ ಅಡಗಿಸಿದರು . ನಾನಾ ಸಾಹೇಬ್ ನೇಪಾಳಕ್ಕೆ ಓಡಿಹೋದನು .
  • ತಾತ್ಯಾಟೋಪಿ ತಪ್ಪಿಸಿಕೊಂಡನು . 1857 ರ ಸೆಪ್ಟೆಂಬರ್‌ನಲ್ಲಿ ಬ್ರಿಟಿಷರು ದೆಹಲಿಯನ್ನು ಸ್ವಾಧೀನಪಡಿಸಿಕೊಂಡು ಬಹದ್ದೂರ್ ಷಾನನ್ನು ರಂಗೂನಿಗೆ ಗಡಿಪಾರು ಮಾಡಿದರು .
  • ಝಾನ್ಸಿರಾಣಿ ಲಕ್ಷ್ಮೀಬಾಯಿಯು ತನ್ನ ದತ್ತು ಪುತ್ರನನ್ನು ಮಾನ್ಯ ಮಾಡಲಿಲ್ಲವಾದ್ದರಿಂದ ತಾತ್ಯಾಟೋಪಿಯ ಜೊತೆಗೂಡಿ ಗ್ವಾಲಿಯರ್‌ನನ್ನು ವಶಪಡಿಸಿಕೊಂಡಳು .
  • ಗ್ವಾಲಿಯರ್ ತಲುಪಿದ ಬ್ರಿಟಿಷರ ಮತ್ತು ಈಕೆಯ ನಡುವೆ ಭೀಕರ ಯುದ್ಧ ನಡೆದು ಲಕ್ಷ್ಮೀಬಾಯಿ ವೀರಮರಣ ಹೊಂದಿದಳು .
  • ಜಗದೀಶ್‌ಪುರದ ಕುಂವರ್‌ಸಿಂಗ್ ಎಂಬ ಜಮೀನ್ದಾರನು ಬಿಹಾರದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದನು .
  • 1858 ರ ಜುಲೈ ಹೊತ್ತಿಗೆ ಎಲ್ಲಾ ದಂಗೆಗಳನ್ನು ಬ್ರಿಟಿಷರು ಹತ್ತಿಕ್ಕುವಲ್ಲಿ ಯಶಸ್ವಿಯಾದರು .

IV . ಈ ಕೆಳಗಿನ ಪ್ರಶ್ನೆಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

2nd Puc History 7.2 Chapter Notes in Kannada Pdf

1.ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣಗಳು ಮತ್ತು ಪರಿಣಾಮಗಳನ್ನು ವಿವರಿಸಿ .

ರಾಜಕೀಯ ಕಾರಣಗಳು :

  • ಈಸ್ಟ್ ಇಂಡಿಯಾ ಕಂಪನಿಯ ವಿಸ್ತರಣಾ ನೀತಿ .
  • ಬ್ರಿಟಿಷರು ರಾಜ್ಯಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದರು .
  • ಒಡೆದು ಆಳುವ ನೀತಿಯನ್ನು ಬ್ರಿಟಿಷರು ಅನುಸರಿಸಿದ್ದು ,
  • ಸಹಾಯಕ ಸೈನ್ಯ ಪದ್ಧತಿ .
  • ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಕಾನೂನು .

ಆಡಳಿತಾತ್ಮಕ ಕಾರಣಗಳು :

  • ಭಾರತೀಯ ಸಂಪ್ರದಾಯಿಕ ಆಡಳಿತ ಪದ್ಧತಿಯನ್ನು ತೆಗೆದುಹಾಕಿ ಬ್ರಿಟಿಷರು ಹೊಸ ಆಡಳಿತ ಪದ್ಧತಿಯನ್ನು ಜಾರಿಗೆ ತಂದಿದ್ದು .
  • ಭಾರತೀಯರಿಗೆ ಆಡಳಿತದಲ್ಲಿ ಉನ್ನತ ಹುದ್ದೆ ಮತ್ತು ಸಮಾನ ವೇತನ ನೀಡುತ್ತಿರಲಿಲ್ಲ .

ಆರ್ಥಿಕ ಕಾರಣಗಳು :

  • ಕಂಪನಿಯ ಶೋಷಣೆಯ ನೀತಿ .
  • ಕೈಗಾರಿಕಾ ಕ್ರಾಂತಿಯ ನಂತರ ಇಂಗ್ಲೆಂಡಿನಿಂದ ಭಾರತಕ್ಕೆ ಆಮದು ಹೆಚ್ಚಾದುದು .
  • ಇಂಗ್ಲೀಷರು ವ್ಯಾಪಾರದ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸಿದುದು .
  • ಬ್ರಿಟಿಷ್ ಕಂದಾಯ ನೀತಿಗಳು .
  • ಕುಶಲಕರ್ಮಿಗಳು ಮತ್ತು ಕಸುಬುದಾರರು ನಿರುದ್ಯೋಗಿಗಳಾದುದು .

ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳು :

  • ಬ್ರಿಟಿಷರು ತಾವು ಉಚ್ಛಜನಾಂಗದವರೆಂದು ತಿಳಿದು ಭಾರತೀಯರನ್ನು ಅವಮಾನಿಸಿದ್ದು , ಸತಿಪದ್ಧತಿ , ಬಾಲ್ಯವಿವಾಹ , ಪ್ರಾಣಿಬಲಿ , ಬುರ್ಖಾಪದ್ಧತಿ , ರದ್ದುಪಡಿಸಿ ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದದ್ದು
  • ಶಾಲೆ , ಆಸ್ಪತ್ರೆ , ಬಂಧೀಖಾನೆ , ಮಾರುಕಟ್ಟೆಗಳಲ್ಲಿ ಕ್ರೈಸ್ತ ಮಿಷನರಿಗಳು ಕ್ರೈಸ್ತ ಮತ ಪ್ರಚಾರ ಮಾಡಿ ಮತಾಂತರಕ್ಕೆ ಒಲವು ತೋರಿದ್ದು ,
  • ಮುಲ್ಲಾಗಳು , ಮೌಲ್ವಿಗಳು ಪಂಡಿತರ ವಿಶ್ವಾಸ ಕಳೆದುಕೊಂಡಿದ್ದು .

ಸೈನಿಕ ಕಾರಣಗಳು :

  • ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರನ್ನು ಬ್ರಿಟಿಷರು ಅವಮಾನಿಸುತ್ತಿದ್ದರು .
  • ಭಾರತೀಯ ಸೈನಿಕರಿಗೆ ಸುಬೇದಾರರಿಗಿಂತ ಮೇಲಿನ ಹುದ್ದೆಗೆ ಬಡ್ತಿ ನೀಡುತ್ತಿರಲಿಲ್ಲ .
  • ಭಾರತೀಯ ಸೈನಿಕರು ಅವರ ಸಾಮ್ರಾಜ್ಯದಲ್ಲಿ ಎಲ್ಲಿ ಆದೇಶಿಸುತ್ತಾರೋ ಅಲ್ಲಿ ಕಾರ್ಯ ನಿರ್ವಹಿಸಬೇಕಿತ್ತು .
  • ನವಾಬ ವಾಜಿದ್ – ಅಲಿ ಯು ತನ್ನ ರಾಜ್ಯವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡಿದ್ದರಿಂದ ಸೈನಿಕರಿಗೆ ಕೋಪಬಂದಿತು .

ತಕ್ಷಣದ ಕಾರಣಗಳು :

  • ಬ್ರಿಟಿಷರು ಹೊಸ ಎನ್‌ಫೀಲ್ಡ್ ಬಂದೂಕುಗಳನ್ನು ಉಪಯೋಗಕ್ಕೆ ತಂದು ತೋಟಾಗಳ ಮೇಲುಹೊದಿಕೆಯನ್ನು ಹಂದಿ ಮತ್ತು ದನದ ಕೊಬ್ಬನ್ನು ಸವರಲಾಗಿತ್ತು .
  • ಇದನ್ನು ಬಾಯಿಂದ ಕಚ್ಚಿ ಹೊರತೆಗೆಯಬೇಕಾಗಿದ್ದರಿಂದ ಹಿಂದೂ ಮತ್ತು ಮುಸ್ಲಿಂ ಸೈನಿಕರಿಗೆ ತಮ್ಮ ಧರ್ಮವನ್ನು ಬ್ರಿಟಿಷರು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆಂಬ ಭಾವನೆ ಮೂಡಿಸಿತು .
  • ಬಂದೂಕು ಉಪಯೋಗಿಸಲು ನಿರಾಕರಿಸಿದರು . ಇದರಿಂದ ಬ್ರಿಟಿಷರ ವಿರುದ್ಧ ದಂಗೆಯು ಆರಂಭವಾಯಿತು .

ಸಂಗ್ರಾಮದ ಕಾರಣಗಳು :

  • ಇದು ಬ್ರಿಟಿಷರಿಗೆ ಭಾರತೀಯರ ರಾಷ್ಟ್ರಾಭಿಮಾನವನ್ನು ತೋರಿಸಿಕೊಟ್ಟಿತು .
  • ಹಿಂದೂ ಮತ್ತು ಮುಸ್ಲಿಂರಲ್ಲಿ ಏಕತೆಯನ್ನು ಮೂಡಿಸಿತು .
  • ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ರದ್ದಾಗಿ ಇಂಗ್ಲೆಂಡಿನ ರಾಣಿಯು ಭಾರತದ ಆಡಳಿತವನ್ನು ವಹಿಸಿಕೊಂಡಳು .
  • ರಾಣಿ ವಿಕ್ಟೋರಿಯಾಳು 1858 ರಲ್ಲಿ ಪ್ರಸಿದ್ಧ ಶಾಸನವನ್ನು ಹೊರಡಿಸಿ ಹಲವಾರು ಆಶ್ವಾಸನೆಗಳನ್ನು ಭಾರತೀಯರಿಗೆ ನೀಡಲಾಯಿತು .
  • ಅವುಗಳೆಂದರೆ ಬ್ರಿಟಿಷ್ ಸರ್ಕಾರವು ಇನ್ನು ಮುಂದೆ ಯಾವುದೇ ಭಾರತೀಯ ರಾಜ್ಯಗಳನ್ನು ವಿಲೀನಗೊಳಿಸಿಕೊಳ್ಳುವುದಿಲ್ಲ .
  • ದತ್ತು ಪುತ್ರರನ್ನು ಪಡೆಯುವ ಭಾರತೀಯ ಅರಸನ ಹಕ್ಕನ್ನು ಮಾನ್ಯ ಮಾಡಲಾಗುವುದು . ಬ್ರಿಟಿಷ್ ಸರ್ಕಾರವು ಭಾರತೀಯರ ಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ .
  • ಭಾರತೀಯರಿಗೆ ಆಡಳಿತದಲ್ಲಿ ಹೆಚ್ಚಿನ ಅವಕಾಶ ನೀಡುವುದು .
  • ಮೊಗಲರ ಆಳ್ವಿಕೆ ಕೊನೆಗೊಂಡಿತು . ಭಾರತೀಯರಿಗೆ ಜ್ಞಾನೋದಯವಾಯಿತು .

FAQ

1.ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ ಯಾವುದು ?

ಸಾ.ಶ. 1857 .

2. 1857 ರಲ್ಲಿ ಬ್ರಿಟಿಷ್‌ ವಿರುದ್ಧ ಕಾನ್ಪುರದಲ್ಲಿ ದಂಗೆ ಎದ್ದವರು ಯಾರು ?

ನಾನಾ ಸಾಹೇಬ್ .

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

Leave a Reply

Your email address will not be published. Required fields are marked *

rtgh