rtgh

ದ್ವಿತೀಯ ಪಿ.ಯು.ಸಿ ಅಧ್ಯಾಯ- 7.1 ಯುರೋಪಿಯನ್ನರ ಆಗಮನ ನೋಟ್ಸ್‌ | 2nd Puc History Chapter 7.1 Notes in Kannada

ದ್ವಿತೀಯ ಪಿ.ಯು.ಸಿ ಅಧ್ಯಾಯ- 7.1 ಯುರೋಪಿಯನ್ನರ ಆಗಮನ ನೋಟ್ಸ್‌, 2nd Puc History Chapter 7.1 Notes Question Answer Mcq in Kannada Pdf Download 2023 Kseeb Solution For Class 12 History Chapter 7.1 Notes Yuropiyannara Agamana History Notes Pdf 2nd Puc History 7th Chapter Notes in Kannada Modern India Notes

ಅಧ್ಯಾಯ- 7.1 ಯುರೋಪಿಯನ್ನರ ಆಗಮನ

2nd Puc History Chapter 7.1 Notes

Adhunika Bharata History Notes in Kannada

I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿ :

1. ಭಾರತದಲ್ಲಿ ಪೋರ್ಚುಗೀಸರ ಮೊದಲ ವೈಸ್‌ರಾಯ್ ಯಾರು ?

ಪ್ರಾನ್ಸಿಸ್ಕೋ – ಡಿ – ಅಲ್ಮಿಡಾ

2.’ ಡಚ್ ಈಸ್ಟ್ ಇಂಡಿಯಾ ಕಂಪನಿ ‘ ಸ್ಥಾಪಿತವಾದ ವರ್ಷ ಯಾವುದು ?

ಸಾ.ಶ. 1602 .

3. ಭಾರತದಲ್ಲಿ ಡಚ್ಚರ ರಾಜಧಾನಿಯನ್ನು ಹೆಸರಿಸಿ .

ಪುಲಿಕಾಟ್ .

4 . ‘ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ’ಯನ್ನು ಯಾವಾಗ ಸ್ಥಾಪಿಸಲಾಯಿತು ?

ಸಾ.ಶ. 1664 .

5. ಭಾರತದಲ್ಲಿ ಫ್ರೆಂಚರ ರಾಜಧಾನಿ ಯಾವುದು ?

ಪಾಂಡಿಚೆರಿ ,

6.’ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ’ಯನ್ನು ಯಾವಾಗ ಸ್ಥಾಪಿಸಲಾಯಿತು ?

ಸಾ.ಶ. 1600 .

7. ಭಾರತದಲ್ಲಿ ಬ್ರಿಟಿಷರ ಮೊದಲ ರಾಜಧಾನಿ ಯಾವುದು ?

ಕಲ್ಕತ್ತಾ .

8. ಮೊದಲ ಕರ್ನಾಟಿಕ್ ಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದವನ್ನು ಹೆಸರಿಸಿ .

ಎಕ್ಸ್ – ಲಾ – ಛಾಪೆಲ್ ಒಪ್ಪಂದ .

9 . ಪ್ಲಾಸಿ ಕದನ ನಡೆದ ವರ್ಷ ಯಾವುದು ?

ಸಾ.ಶ. 1757 .

10. ಬಕ್ಸಾರ್ ಕದನ ನಡೆದ ವರ್ಷ ಯಾವುದು ?

ಸಾ.ಶ. 1764 .

11. ಮೊದಲನೇ ಆಂಗ್ಲೋ – ಮೈಸೂರು ಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದವನ್ನು ಹೆಸರಿಸಿ .

1769 ರ ಮದ್ರಾಸ್ ಒಪ್ಪಂದ .

12. 2 ನೇ ಆಂಗ್ಲೋ – ಮೈಸೂರು ಯುದ್ಧವನ್ನು ಅಂತ್ಯ ಗೊಳಿಸಿದ ಒಪ್ಪಂದವನ್ನು ಹೆಸರಿಸಿ .

ಮಂಗಳೂರು ಒಪ್ಪಂದ .

13. 3 ನೇ ಆಂಗ್ಲೋ – ಮೈಸೂರು ಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದವನ್ನು ಹೆಸರಿಸಿ .

1792 ರ ಶ್ರೀರಂಗಪಟ್ಟಣ ಒಪ್ಪಂದ .

14. ‘ ಮೈಸೂರಿನ ಹುಲಿ ‘ ಎಂದು ಯಾರನ್ನು ಕರೆಯಲಾಗಿದೆ ?

ಟಿಪ್ಪುಸುಲ್ತಾನ್ .

15. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೊಳಿಸಿದ ಗೌವರ್ನರ್ ಯಾರು ?

ಲಾರ್ಡ್ ವೆಲ್ಲೆಸ್ಲಿ .

16. ಸಹಾಯಕ ಸೈನ್ಯ ಪದ್ಧತಿಯನ್ನು ಮೊದಲು ಒಪ್ಪಿದ ಭಾರತೀಯ ಅರಸ ಯಾರು ?

ಹೈದರಾಬಾದಿನ ನಿಜಾಮ

17. ‘ ದತ್ತು ಪುತ್ರರಿಗೆ ಹಕ್ಕಿಲ್ಲ ‘ ನೀತಿಯನ್ನು ಭಾರತದಲ್ಲಿ ಜಾರಿಗೊಳಿಸಿದವರು ಯಾರು ?

ಲಾರ್ಡ್ ಡಾಲ್‌ಹೌಸಿ

Yuropiyannara Agamana History Notes

II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ :

1.ಬಿಜಾಪುರದ ಆದಿಲ್ ಷಾಹಿ ಸುಲ್ತಾನರಿಂದ ಗೋವಾವನ್ನು ಯಾರು ವಶಪಡಿಸಿಕೊಂಡರು ? ಮತ್ತು ಯಾವಾಗ ?

ಪೋರ್ಚುಗೀಸರು ಸಾ.ಶ. 1510 ರಲ್ಲಿ ಬಿಜಾಪುರದ ಆದಿಲ್‌ಷಾಹಿಗಳಿಂದ ಗೋವಾವನ್ನು ವಶಪಡಿಸಿಕೊಂಡರು .

2. ಭಾರತದಲ್ಲಿ ಪೋರ್ಚುಗೀಸರ ಯಾವುದಾದರೂ ಎರಡು ವ್ಯಾಪಾರಿ ಕೇಂದ್ರಗಳನ್ನು ಹೆಸರಿಸಿ .

ಗೋವಾ , ಬಾಂಬೆ .

3. ಭಾರತದಲ್ಲಿ ಪೋರ್ಚುಗೀಸರ ಅಧಿಕಾರದ ಅವನತಿಗೆ ಯಾವುದಾದರೂ ಎರಡು ಕಾರಣಗಳನ್ನು ತಿಳಿಸಿ ,

ಧಾರ್ಮಿಕ ಮತಾಂಧ ನೀತಿ ,

4. ಬ್ರೆಜಿಲ್ ಮೇಲಿನ ಹೆಚ್ಚಿನ ಗಮನ , ಭಾರತದಲ್ಲಿ ಡಚ್ಚರ ಯಾವುದಾದರೂ ಎರಡು ವ್ಯಾಪಾರಿ ಕೇಂದ್ರಗಳನ್ನು ಹೆಸರಿಸಿ .

ನಾಗಪಟ್ಟಣ , ಕೊಚ್ಚಿನ್ .

5. ಭಾರತದಲ್ಲಿ ಫ್ರೆಂಚ್‌ ಯಾವುದಾದರೂ ಎರಡು ವ್ಯಾಪಾರಿ ಕೇಂದ್ರಗಳನ್ನು ಹೆಸರಿಸಿ .

ಪಾಂಡಿಚೆರಿ , ಸೂರತ್ ,

6. ಪ್ಲಾಸಿ ಕದನ ಯಾರು ಯಾರ ನಡುವೆ ನಡೆಯಿತು ?

ಬಂಗಾಳದ ನವಾಬನಾದ ಸಿರಾಜ್ – ಉದ್ – ದೌಲ ಮತ್ತು ಬ್ರಿಟೀಷರ ನಡುವೆ ನಡೆಯಿತು .

7. ಶ್ರೀರಂಗಪಟ್ಟಣ ಒಪ್ಪಂದದ ಯಾವುದಾದರೂ ಎರಡು ಕರಾರುಗಳನ್ನು ತಿಳಿಸಿ .

  • ಟಿಪ್ಪು ತನ್ನ ರಾಜ್ಯದ ಅರ್ಧ ಭಾಗವನ್ನು ಬಿಟ್ಟು ಕೊಡಬೇಕು .
  • ಯುದ್ಧ ಪರಿಹಾರವಾಗಿ 330 ಲಕ್ಷ ರೂಗಳನ್ನು ಬ್ರಿಟಿಷರಿಗೆ ಕೊಡಬೇಕು .

8. ದತ್ತು ಪುತ್ರರಿಗೆ ಹಕ್ಕಿಲ್ಲ ನೀತಿಯನ್ವಯ ಬ್ರಿಟಿಷರು ವಶಪಡಿಸಿಕೊಂಡ ಯಾವುದಾದರೂ ಎರಡು ಭಾರತೀಯ ರಾಜ್ಯಗಳನ್ನು ಹೆಸರಿಸಿ .

ಸತಾರ , ಝಾನ್ಸಿ .

9 . ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ ಯಾವು ದಾದರೂ ಎರಡು ಭಾರತೀಯ ರಾಜ್ಯಗಳನ್ನು ಹೆಸರಿಸಿ .

ಮೈಸೂರು , ತಿರುವಾಂಕೂರು ,

III . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೆ 15-20 ವಾಕ್ಯಗಳಲ್ಲಿ ಉತ್ತರಿಸಿ :

1. ಕರ್ನಾಟಿಕ್ ಯುದ್ಧಗಳನ್ನು ಸಂಕ್ಷಿಪ್ತವಾಗಿ ವಿವರಿಸಿ .

  • ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳು , ಭಾರತ ಮತ್ತು ಅಮೇರಿಕಾಗಳಲ್ಲಿ ವಸಾಹತು ಸ್ಥಾಪಿಸುವಲ್ಲಿ ಸ್ಪರ್ಧಿಗಳಾ ಗಿದ್ದರು ಮತ್ತು ದಕ್ಷಿಣ ಭಾರತದಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸುವಲ್ಲಿ ಸ್ಪರ್ಧಿಗಳಾಗಿದ್ದರು ಮತ್ತು ದಕ್ಷಿಣ ಭಾರತದಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸುವ ಸಲುವಾಗಿ ಇಪ್ಪತ್ತು ವರ್ಷಗಳ ಕಾಲ ಹೋರಾಡಿದರು .
  • ಮೊದಲ ಕರ್ನಾಟಿಕ್ ಯುದ್ಧ ( 1746-48 ) 1740 ರಲ್ಲಿ ಆಸ್ಟ್ರಿಯಾದ ಉತ್ತರಾಧಿಕಾರತ್ವದ ಕಾರಣಕ್ಕಾಗಿ ಇಂಗ್ಲೆಂಡ್ ಮತ್ತು ಪ್ರಾನ್ಸ್‌ಗಳ ನಡುವೆ ಯುದ್ಧವಾಯಿತು . ಇದರಿದಾಗಿ ಭಾರತದಲ್ಲಿ ಇವರಿಬ್ಬರ ನಡುವೆ ಯುದ್ಧವಾಯಿತು .
  • ಯೂರೋಪಿನಲ್ಲಿ ‘ ಎಕ್ಸ್ – ಲಾ – ಛಾಪೆಲ್ ‘ ಒಪ್ಪಂದದ ಮೂಲಕ ಈ ಯುದ್ಧವು ಅಂತ್ಯಗೊಂಡಿತು . ಎರಡನೇ ಕರ್ನಾಟಿಕ್ ಯುದ್ಧ ( 1748-54 ) ಅರ್ಕಾಟಿನಲ್ಲಿ ಚಂದಾಸಾಹೇಬ್ ಮತ್ತು ಅನ್ವರುದ್ದೀನರ ನಡುವೆ ಮತ್ತು ಹೈದರಾಬಾದಿನಲ್ಲಿ ನಾಸೀರ್‌ಜಂಗ್ ಮತ್ತು ಮುಜಾಫರ್‌ಜಂಗ್‌ರ ನಡುವೆ ಉತ್ತರಾಧಿಕಾರತ್ವಕ್ಕಾಗಿ ಅಂತಃ ಕಲಹ ನಡೆದಿತ್ತು .
  • ಫ್ರೆಂಚರ ಗವರ್ನರ್ ಡೂಪ್ಲೆ ಚಂದಾ ಸಾಹೇಬ್ ಮತ್ತು ಮುಜಾಫರ್ ಜಂಗರನ್ನು ಬೆಂಬಲಿಸಿದರೆ ಬ್ರಿಟಿಷರು ಅನ್ವರುದ್ದೀನ್ ಮತ್ತು ನಾಸೀರ್‌ಜಂಗ್‌ರನ್ನು ಬೆಂಬಲಿಸಿದರು . ಇದು ಈ ಯುದ್ಧಕ್ಕೆ ಕಾರಣವಾಯಿತು . 1754 ರ ಪಾಂಡಿಚೆರಿ ಒಪ್ಪಂದದೊಂದಿಗೆ ಯುದ್ಧ ಕೊನೆಗೊಂಡಿತು .
  • ಮೂರನೇ ಕರ್ನಾಟಿಕ್ ಯುದ್ಧ ( 1748-54 ) – ಫ್ರಾನ್ಸ್ ಮತ್ತು ಇಂಗ್ಲೆಂಡ್‌ಗಳ ನಡುವೆ ಯೂರೋಪಿನಲ್ಲಿ ನಡೆದ ಸಪ್ತವಾರ್ಷಿಕ ಯುದ್ಧ ಭಾರತದಲ್ಲಿಯೂ ಎರಡು ದೇಶಗಳ ನಡುವಿನ ಯುದ್ಧಕ್ಕೆ ಕಾರಣವಾಯಿತು .
  • 1760 ರಲ್ಲಿ ಜರುಗಿದ ವಾಂಡಿವಾಷ್ ಕಾಳಗದಲ್ಲಿ ಫ್ರೆಂಚರು ಇಂಗ್ಲೀಷರಿಂದ ಸಂಪೂರ್ಣವಾಗಿ ಸೋಲನ್ನು ಅನುಭವಿಸಿದರು . ಪ್ಯಾರೀಸ್ ಒಪ್ಪಂದದೊಂದಿಗೆ ಸಪ್ತವಾರ್ಷಿಕ ಯುದ್ಧವು ಕೊನೆಗೊಂಡಿತು ಭಾರತದಲ್ಲಿಯೂ ಯುದ್ಧ ಕೊನೆಗೊಂಡಿತು .

2. ಪ್ಲಾಸಿ ಕದನದ ಕಾರಣಗಳು ಮತ್ತು ಪರಿಣಾಮಗಳು ಯಾವುವು ?

ಕಾರಣಗಳು :

ರಾಜಕೀಯ ಕಾರಣ : ಶೌಕತ್ ಜಂಗ್ , ಘಸ್ತಿ ಬೇಗಂ ಮುಂತಾದವರು ಸಿರಾಜ್ ಉದ್ – ದೌಲನ ವೈರಿಗಳಾಗಿದ್ದರು , ಇವರಿಗೆ ಬ್ರಿಟಿಷರ ಬೆಂಬಲವಿತ್ತು . ದಸ್ತಕ್‌ಗಳ ದುರುಪಯೋಗ : ಮೊಗಲ್ ಸಾಮ್ರಾಟರು ಇಂಗ್ಲೀಷರಿಗೆ ಬಂಗಾಳದಲ್ಲಿ ತೆರಿಗೆ ರಹಿತ ವ್ಯಾಪಾರಕ್ಕಾಗಿ ಅನುಮತಿ ನೀಡಿದ್ದರು . ಆದರೆ ಈಸ್ಟ್ ಇಂಡಿಯಾ ಕಂಪನಿ

ನೌಕರರು ಅದನ್ನು ಲಾಭಕ್ಕಾಗಿ ಸ್ಥಳೀಯ ವ್ಯಾಪಾರಿಗಳಿಗೆ ಮಾರಿಕೊಂಡರು . ಇದರಿಂದಾಗಿ ರಾಜ್ಯದ ಆದಾಯಕ್ಕೆ ನಷ್ಟವಾಯಿತು .

ಫ್ರೆಂಚರಿಗೆ ಆಶ್ರಯವನ್ನು ನೀಡಿದ್ದು ಬ್ರಿಟಿಷರನ್ನು ಕೆರಳಿಸಿತು . ನವಾಬನ ಅನುಮತಿಯಿಲ್ಲದೆ ಕಲ್ಕತ್ತಾ ಕೋಟೆಯನ್ನು ಬ್ರಿಟಿಷರು ಭದ್ರಪಡಿಸಿಕೊಂಡಿದ್ದು , ಕಪ್ಪು ಕೋಣೆಯ ದುರಂತ .

ಪರಿಣಾಮಗಳು :

ಸಿರಾಜ್ ಉದ್ – ದೌಲನು ಸೋತು ಫಲಾಯನ ಮಾಡಲು ಹೋಗಿ ಕೊಲೆಯಾದನು .

ಮೀರ್ ಜಾಫರ್‌ನನ್ನು ಬಂಗಾಳದ ನವಾಬನನ್ನಾಗಿ ಮಾಡಲಾಯಿತು . ಈ ಕದನವು ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯಕ್ಕೆ ಭದ್ರವಾದ ಬುನಾದಿಯಾಯಿತು .

3. ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಪುತ್ರರಿಗೆ ಹಕ್ಕಿಲ್ಲ ನೀತಿಯ ಬಗ್ಗೆ ಬರೆಯಿರಿ .

ಸಹಾಯಕ ಸೈನ್ಯ ಪದ್ಧತಿ :

  • ಇದನ್ನು ಲಾರ್ಡ್ ವೆಲ್ಲೆಸ್ಲಿಯು 1798 ರಲ್ಲಿ ಜಾರಿಗೆ ತಂದನು .
  • ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆ ಇದರ ಮುಖ್ಯ ಉದ್ದೇಶವಾಗಿತ್ತು . ಇದರ ನಿಬಂಧನೆಗಳೆಂದರೆ ಇದರ ಪ್ರಕಾರ ಈ ಒಪ್ಪಂದಕ್ಕೆ ಒಳಪಡುವ ರಾಜನು ತನ್ನ ರಾಜ್ಯದಲ್ಲಿ ಬ್ರಿಟಿಷರ ಸೈನ್ಯವನ್ನು ಇಟ್ಟುಕೊಳ್ಳಬೇಕಾಗಿತ್ತು .
  • ಆ ಸೈನ್ಯದ ಖರ್ಚು ವೆಚ್ಚಗಳನ್ನು ತಾನೇ ಭರಿಸಬೇಕಾಗಿತ್ತು .
  • ಖರ್ಚು ವೆಚ್ಚ ಭರಿಸದಿದ್ದಲ್ಲಿ ತನ್ನ ರಾಜ್ಯದ ಒಂದು ಭಾಗವನ್ನು ಬ್ರಿಟಿಷರಿಗೆ ಬಿಟ್ಟುಕೊಡಬೇಕಿತ್ತು . ಅಲ್ಲದೇ ತನ್ನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟ್‌ನನ್ನು ಇಟ್ಟುಕೊಳ್ಳಬೇಕಾಗಿತ್ತು . ಆ ರಾಜ್ಯವು ಯೂರೋಪಿನ ಇತರೆ ದೇಶಗಳೊಂದಿಗೆ ವ್ಯಾಪಾರಿ ಸಂಬಂಧವನ್ನು ಹೊಂದುವಂತಿರಲಿಲ್ಲ .
  • ಒಪ್ಪಂದಕ್ಕೆ ಒಳಪಟ್ಟ ರಾಜರು ತಮ್ಮ ಆಡಳಿತ ಮತ್ತು ಸೇನೆಯಲ್ಲಿ ಬ್ರಿಟಿಷರ ಪೂರ್ವಾನುಮತಿ ಇಲ್ಲದೆ ವಿದೇಶಿಯರನ್ನು ನೇಮಿಸಿ ಕೊಳ್ಳುವಂತಿರಲಿಲ್ಲ . ಆ ರಾಜ್ಯದ ರಕ್ಷಣೆ ಕಂಪನಿಯ ಜವಾಬ್ದಾರಿಯಾಗಿತ್ತು .
  • ಹೈದರಾಬಾದಿನ ನಿಜಾಮನು ಸಹಾಯಕ ಸೈನ್ಯ ಪದ್ಧತಿ ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ಭಾರತೀಯ ಅರಸ . ನಂತರದಲ್ಲಿ ಮೈಸೂರು , ಚೌದ್ , ತಿರುವಾಂಕೂರು , ಬರೋಡಾ , ಜೈಪುರ , ರೋಧಪುರ ಭರತ್‌ಪುರ , ನಾಗಪುರ ಮತ್ತು ಗ್ವಾಲಿಯರ್ ಅರಸರೂ ಸಹ ಒಪ್ಪಂದಕ್ಕೆ ಸಹಿ ಹಾಕಿದರು .

ದತ್ತು ಮಕ್ಕಳಿಗೆ ಹಕ್ಕಿಲ್ಲ :

  • 1848 ರಲ್ಲಿ ಭಾರತಕ್ಕೆ ಗವರ್ನರ್ ಜನರಲ್ ಆಗಿ ಆಗಮಿಸಿದ ಲಾರ್ಡ್ ಡಾಲ್‌ಹೌಸಿ ಭಾರತದ ಮೇಲೆ ನೇರ ಬ್ರಿಟಿಷ್ ಆಡಳಿತವನ್ನು ವಿಸ್ತರಿಸುವ ಸಲುವಾಗಿ ಈ ನೀತಿಯನ್ನು ಜಾರಿಗೆ ತಂದನು .
  • ಈ ನೀತಿಯ ಪ್ರಕಾರ ಅಧೀನಕ್ಕೆ ಒಳಪಟ್ಟ ರಾಜ್ಯದ ರಾಜ ಸ್ವಾಭಾವಿಕ ವಾರಸುದಾರನಿಲ್ಲದೆ ಸತ್ತರೆ ಆ ರಾಜ್ಯವು ಇಂಗ್ಲೀಷರ ಅಧಿಪತ್ಯಕ್ಕೆ ಸೇರುತ್ತಿತ್ತು .
  • ಈ ನೀತಿಯನ್ನು ಅನುಸರಿಸಿ ಬ್ರಿಟಿಷರು ಸತಾರ , ಜೈಪುರ , ಸಂಬಲ್‌ಪುರ , ಉದಯಪುರ , ಝಾನ್ಸಿ , ನಾಗಪುರ ಮತ್ತು ಭಗತ್ ಪುರಗಳನ್ನು ಸ್ವಾಧೀನಪಡಿಸಿ ಕೊಂಡರು .

4. ಬ್ರಿಟಿಷರೊಂದಿಗೆ ಟಿಪ್ಪುವಿನ ಹೋರಾಟವನ್ನು ಚರ್ಚಿಸಿ .

ಎರಡನೇ ಆಂಗ್ಲೋ ಮೈಸೂರು ಯುದ್ಧದ ವೇಳೆಯಲ್ಲಿ ಅಂದರೆ 1782 ರಲ್ಲಿ ಹೈದರಾಲಿಯು ಮರಣ ಹೊಂದಲಾಗಿ ಹೈದರಾಲಿಯ ಮಗನಾದ ಟಿಪ್ಪು ಸುಲ್ತಾನ್ ಯುದ್ಧ ಮುಂದುವರೆಸಿದನು . ಮಂಗಳೂರು ಒಪ್ಪಂದದೊಂದಿಗೆ ಈ ಯುದ್ಧವು ಕೊನೆಗೊಂಡು ಉಭಯ ಪಕ್ಷದವರು ತಾವು ಗೆದ್ದ ಪ್ರದೇಶಗಳನ್ನು ಹಿಂದಿರುಗಿಸಲು ಮತ್ತು ಯುದ್ಧ ಖೈದಿಗಳನ್ನು ಬಿಡುಗಡೆಗೊಳಿಸಲು ಒಪ್ಪಿದರು .

ಮೂರನೇ ಆಂಗ್ಲೋ – ಮೈಸೂರು ಯುದ್ಧ ( 1790-1792 ) :

  • ಟಿಪ್ಪು ಮತ್ತು ಬ್ರಿಟಿಷರು ಪರಸ್ಪರ ಅನುಮಾನದಿಂದಿದ್ದರು . ಬ್ರಿಟಿಷ್ ಕಂಪನಿಯ ಒಪ್ಪಂದಕ್ಕೊಳಪಟ್ಟಿದ್ದ ತಿರುವಾಂಕೂರಿನ ಮೇಲೆ ಟಿಪ್ಪು ದಾಳಿ ಮಾಡಿದನು .
  • ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ಕಾರನ್‌ವಾಲೀಸ್ ಮರಾಠರು ಮತ್ತು ನಿಜಾಮನನ್ನು ಒಗ್ಗೂಡಿಸಿಕೊಂಡು ಟಿಪ್ಪುವನ್ನು ಸೋಲಿಸಿದನು . ನಂತರ 1792 ರಲ್ಲಿ ಶ್ರೀರಂಗಪಟ್ಟಣ ಒಪ್ಪಂದವಾಯಿತು .
  • ಈ ಒಪ್ಪಂದದಂತೆ ಟಿಪ್ಪು ತನ್ನ ರಾಜ್ಯದ ಅರ್ಧ ಭಾಗವನ್ನು ಮತ್ತು ಯುದ್ಧ ಪರಿಹಾರವಾಗಿ 330 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು . ಈ ಹಣವನ್ನು ನೀಡುವವರೆವಿಗೂ ತನ್ನ ಇಬ್ಬರು ಮಕ್ಕಳನ್ನು ಇಂಗ್ಲಿಷರಲ್ಲಿ ಒತ್ತೆ ಇಡಬೇಕಾಯಿತು .

ನಾಲ್ಕನೇ ಆಂಗ್ಲೋ – ಮೈಸೂರು ಯುದ್ಧ ( 1798-1799 ) :

  • ಟಿಪ್ಪು 3 ನೇ ಯುದ್ಧದಿಂದಾಗಿ ಅಪಮಾನಿತನಾದನು ಮತ್ತು ಬ್ರಿಟಿಷರು ಟಿಪ್ಪುವಿನ ಮೇಲೆ ಸಂಶಯದಿಂದಿದ್ದರು . ಲಾರ್ಡ್ ವೆಲ್ಲೆಸ್ಲಿಯು ತನ್ನ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕುವಂತೆ ಒತ್ತಾಯಿಸಿದನು .
  • ಇದನ್ನು ನಿರಾಕರಿಸಿದ ಟಿಪ್ಪು ಅಫಘಾನಿಸ್ಥಾನ , ಅರೇಬಿಯಾ ಮತ್ತು ಟರ್ಕಿ ದೇಶಗಳ ಸಹಾಯ ಪಡೆಯಲು ಪ್ರಯತ್ನಿಸಿದನು . ಬ್ರಿಟಿಷರು ಮರಾಠರು ಮತ್ತು ನಿಜಾಮರೊಂದಿಗೆ ಮೈಸೂರಿನ ಮೇಲೆ ಆಕ್ರಮಣ ಮಾಡಿದರು .
  • 1799 ರಲ್ಲಿ ಟಿಪ್ಪು ತನ್ನ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಹೋರಾಡುತ್ತಲೇ ಮಡಿದನು . ನಂತರ ಬ್ರಿಟಿಷರು , ಮರಾಠರು ಮತ್ತು ನಿಜಾಮರೊಂದಿಗೆ ಅವನ ರಾಜ್ಯವನ್ನು ಹಂಚಿಕೊಂಡರು .
  • ಒಂದು ಭಾಗವನ್ನು ಮೈಸೂರಿನ ಒಡೆಯರಿಗೆ ನೀಡಲಾಯಿತು .

5. ಆಂಗ್ಲೋ – ಮರಾಠ ಯುದ್ಧಗಳ ಬಗ್ಗೆ ಒಂದು ವಿವರಣೆ ನೀಡಿ .

  • ಪೇಶ್ವೆ ಮಾಧವರಾವನ ನಿಧನದಿಂದಾಗಿ ಅವನ ಸಹೋದರ ನಾರಾಯಣರಾವ್ ಉತ್ತರಾಧಿಕಾರಿಯಾ ದನಾದರೂ ಅವನ ಚಿಕ್ಕಪ್ಪ ರಘುನಾಥ್‌ರಾವ್ ತಾನೇ ಪೇಳ್ವೆಯಾಗಲು ಆತನನ್ನು ಕೊಲ್ಲಿಸಿದನು .
  • ವಿಧವೆ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ್ದರಿಂದ ಸವಾಯ್ ಮಾಧವರಾವ್ ಎಂಬ ಹೆಸರಿನ ಮಗುವನ್ನು ಮರಾಠ ಪ್ರಮುಖರು ಬೆಂಬಲಿಸಿದರು .
  • ರಘುನಾಥರಾಯನು ಬ್ರಿಟಿಷರೊಡನೆ ಕೂಡಿ ಸೂರತ್ ಒಪ್ಪಂದಕ್ಕೆ ಸಹಿ ಹಾಕಿ ಮರಾಠ ಪ್ರಮುಖರೊಡನೆ ಯುದ್ಧ ನಡೆಸಿದನು . ನಂತರದಲ್ಲಿ ಬ್ರಿಟಿಷರು ಮರಾಠ ಮುಖಂಡರಿಗೆ ಬೆಂಬಲ ನೀಡಿ ರಘುನಾಥ್‌ರಾವ್‌ನಿಗೆ 25000 ಗಳ ನಿವೃತ್ತಿ ವೇತನವನ್ನು ನಿಗಧಿಪಡಿಸಿದನಾದರೂ ಬಾಂಬೆ ಗವರ್ನರ್ ಇದಕ್ಕೆ ಒಪ್ಪಲಿಲ್ಲ .
  • ರಘುನಾಥರಾವ್‌ ಬ್ರಿಟಿಷರೊಂದಿಗೆ ಯುದ್ಧವನ್ನು ಪುನಃ ಆರಂಭಿಸಿ ಅವರನ್ನು ಸೋಲಿಸಿದನು . 1799 ರಲ್ಲಿ ವಡಗಾಂವ್‌ ಒಪ್ಪಂದವಾಗಿ 1773 ರಿಂದ ವಶಪಡಿಸಿಕೊಂಡಿದ್ದ ಎಲ್ಲಾ ಪ್ರದೇಶಗಳನ್ನು ಹಿಂದಿರುಗಿಸಿದರು . ನಂತರ “ ಸಾಲ್ಟಾಯ್ ಒಪ್ಪಂದವಾಯಿತು ‘

ಎರಡನೇ ಆಂಗ್ಲೋ – ಮರಾಠ ಯುದ್ಧ ( 1803-1806 ) :

  • ಪೇಶ್ವೆಗಳಿಗೆ ಅಧೀನರಾಗಿದ್ದ ಮರಾಠ ಸರದಾರರು ಕಂಪನಿಯ ಅಧೀನಕ್ಕೆ ಬಂದರು ಇದು ಮರಾಠರಿಗೆ ಅಪಮಾನಕರವಾಗಿತ್ತು .
  • ಸಿಂಧಿಯಾ ಮತ್ತು ಭೋಂಸ್ಥೆ ಇಂಗ್ಲೀಷರ ಅಧಿಕಾರಕ್ಕೆ ಸವಾಲೆಸೆದರು .
  • ಇದರಿಂದ ಕಾಳಗಗಳ ಒಂದು ಸರಣಿಯೇ ನಡೆದು ಮರಾಠರು ಸೋತು ಸಹಾಯಕ ಸೈನ್ಯ ಪದ್ಧತಿಗೆ ಒಪ್ಪಿದರು .

ಮೂರನೇ ಆಂಗ್ಲೋ – ಮರಾಠ ಯುದ್ಧ ( 1817-1818 ) :

  • ಪೇಶ್ವೆ 2 ನೇ ಬಾಜಿರಾಯನು ಮರಾಠರ ವೈಭವವನ್ನು ಪುನರ್‌ಸ್ಥಾಪಿಸಲು ಪಠಾಣರ ಮತ್ತು ಪಿಂಡಾರಿಗಳ ಬೆಂಬಲವನ್ನು ಪಡೆದು ಕರ್ಕಿಯಲ್ಲಿರುವ ಇಂಗ್ಲೀಷರ ಸೇನಾ ಶಿಬಿರದ ಮೇಲೆ ಧಾಳಿ ಮಾಡಿದರು .
  • ಯುದ್ಧ ಆರಂಭವಾಗಿ ಮರಾಠರು ಸೋತರು .
  • ಛತ್ರಪತಿ ಸಾಹುವಿನ ವಂಶಸ್ಥರಿಗೆ ಸತಾರ ಪ್ರದೇಶದ ಆಳ್ವಿಕೆ ನಡೆಸಲು ಅನುಮತಿ ನೀಡಿ ಪೇಶ್ವ ಎರಡನೇ ಬಾಜಿರಾಯನಿಗೆ ವಾರ್ಷಿಕ 8,00,000 ರೂಪಾಯಿಗಳ ವಿಶ್ರಾಂತಿ ವೇತನ ನೀಡಿ ಬಿಥರಿಗೆ ಕಳುಹಿಸಲಾಯಿತು .
  • ಇದರೊಂದಿಗೆ ಬ್ರಿಟಿಷರು ಇಡೀ ದಕ್ಷಿಣ ಭಾರತದ ಮೇಲೆ ತಮ್ಮ ರಾಜಕೀಯ ಸಾರ್ವಭೌಮತ್ವವನ್ನು ಸ್ಥಾಪಿಸಿದರು .

ಹೆಚ್ಚುವರಿ ಪ್ರಶ್ನೋತ್ತರಗಳು

2nd Puc History Chapter 7.1 Mcq Question Answer In Kannada

1.ಟರ್ಕರು ಕಾನ್‌ಸ್ಟಾಂಟಿನೋಪಲ್ ಅನ್ನು ಕ್ರಿ.ಶ. ಎಷ್ಟರಲ್ಲಿ ವಶಪಡಿಸಿಕೊಂಡರು ?

ಕ್ರಿ.ಶ .1453 ರಲ್ಲಿ

2. ಸಮುದ್ರಮಾರ್ಗದ ಮೂಲಕ ಭಾರತಕ್ಕೆ ಬಂದ ಯೂರೋಪಿಯನ್ನರಲ್ಲಿ ಯಾರು ಮೊದಲಿಗರು ?

ಮೋರ್ಚುಗೀಸರು

3. ಭಾರತದ ಮೊದಲ ಪೋರ್ಚುಗೀಸ್ ಗರ್ವನರ್ ಯಾರು ?

ಫ್ರಾನ್ಸಿಸ್ಕೋ – ಡಿ – ಅಲ್‌ಮಿಡಾ

4. ಡಚ್ – ಈಸ್ಟ್ ಇಂಡಿಯಾ ಕಂಪನಿ ಕ್ರಿ.ಶ. ಎಷ್ಟರಲ್ಲಿ ಆರಂಭವಾಯಿತು ?

1510 ರಲ್ಲಿ

5. ಭಾರತದಲ್ಲಿ ಫ್ರೆಂಚ್ ಸಾಮ್ರಾಜ್ಯ ಸ್ಥಾಪನೆಗಾಗಿ ಪ್ರಯತ್ನಿಸಿದವರಾರು ?

ಡೂಪ್ಲೆ ಮತ್ತು ಕೌಂಟ್ – ಡಿ – ಲಾಲಿ

6. ಭಾರತ ಮತ್ತು ಅಮೆರಿಕಾಗಳಲ್ಲಿ ವಸಾಹತು ಸ್ಥಾಪಿಸುವಲ್ಲಿ ಸ್ಪರ್ಧಿಗಳಾಗಿದ್ದವರು ಯಾರು ?

ಇಂಗ್ಲೆಂಡ್ ಮತ್ತು ಫ್ರಾನ್ಸ್

7. ಆಸ್ಟ್ರಿಯಾದ ಉತ್ತರಾಧಿಕಾರಕ್ಕಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳ ನಡುವೆ ಕ್ರಿ.ಶ.ಎಷ್ಟರಲ್ಲಿ ಯುದ್ಧವಾಯಿತು ?

ಕ್ರಿ.ಶ .1740 ರಲ್ಲಿ

8. ಡೂಪ್ಲೆ ಮತ್ತು ಚಾಂದ್‌ಸಾಹೇಬ್‌ರು ತಿರುಚನಾಪಳ್ಳಿಗೆ ಏಕೆ ಮುತ್ತಿಗೆ ಹಾಕಿದರು ?

ಮಹಮದ್ ಅಲಿಯನ್ನು ಕೊಲ್ಲಲು .

FAQ

1. ಭಾರತದಲ್ಲಿ ಪೋರ್ಚುಗೀಸರ ಮೊದಲ ವೈಸ್‌ರಾಯ್ ಯಾರು ?

ಪ್ರಾನ್ಸಿಸ್ಕೋ – ಡಿ – ಅಲ್ಮಿಡಾ

2. ಪ್ಲಾಸಿ ಕದನ ಯಾರು ಯಾರ ನಡುವೆ ನಡೆಯಿತು ?

ಬಂಗಾಳದ ನವಾಬನಾದ ಸಿರಾಜ್ – ಉದ್ – ದೌಲ ಮತ್ತು ಬ್ರಿಟೀಷರ ನಡುವೆ ನಡೆಯಿತು .

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

Leave a Reply

Your email address will not be published. Required fields are marked *