ದ್ವಿತೀಯ ಪಿ.ಯು.ಸಿ ಅಧ್ಯಾಯ – 6 ಮಧ್ಯಕಾಲೀನ ಭಾರತದ ಸಾಮಾಜಿಕ – ಧಾರ್ಮಿಕ ಸುಧಾರಣಾ ಚಳುವಳಿ ಇತಿಹಾಸ ನೋಟ್ಸ್, 2nd Puc History Chapter 6 Notes Question Answer in Kannada Kseeb Solution For Class 12 History Chapter 6 Notes in Kannada Socio-Religious Reform Movement In Medieval India History Notes in Kannada
ಅಧ್ಯಾಯ – 6 ಮಧ್ಯಕಾಲೀನ ಭಾರತದ ಸಾಮಾಜಿಕ – ಧಾರ್ಮಿಕ ಸುಧಾರಣಾ ಚಳುವಳಿ
2nd Puc History 6th Chapter Notes in Kannada
ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :
1 . ಮಧ್ವಾಚಾರ್ಯರ ಜನ್ಮಸ್ಥಳ ಯಾವುದು ?
ಉಡುಪಿ ಬಳಿಯ ಪಾಜಕ .
2. ಮಧ್ವಾಚಾರ್ಯರ ಮೂಲ ಹೆಸರೇನು ?
ವಾಸುದೇವ .
3. ಮಧ್ವಾಚಾರ್ಯರ ಸಿದ್ಧಾಂತವನ್ನು ಹೆಸರಿಸಿ .
ದೈತ ಸಿದ್ಧಾಂತ .
4.ಬಸವೇಶ್ವರರ ಜನ್ಮಸ್ಥಳ ಯಾವುದು ?
ಬಾಗೇವಾಡಿ .
5. ಬಸವೇಶ್ವರರಿಗೆ ರಾಜಾಶ್ರಯ ನೀಡಿದ ಕಲಚೂರಿ ಅರಸ ಯಾರು ?
ಬಿಜ್ಜಳ .
6. ಅನುಭವ ಮಂಟಪದಲ್ಲಿ ನಡೆದ ಧರ್ಮಗೋಷ್ಠಿಯ ಅಧ್ಯಕ್ಷತೆ ವಹಿಸಿದವರು ಯಾರು ?
ಅಲ್ಲಮ್ಮ ಪ್ರಭು .
7. ರಮಾನಂದರು ಎಲ್ಲಿ ಜನಿಸಿದರು ?
ಪ್ರಯಾಗದಲ್ಲಿ .
8. ಶಂಕರಾಚಾರ್ಯರ ಜನ್ಮಸ್ಥಳ ಯಾವುದು ?
ಕೇರಳದ ಕಾಲಡಿ ,
9. ಶಂಕರಾಚಾರ್ಯರ ಸಿದ್ದಾಂತವನ್ನು ಹೆಸರಿಸಿ .
ಅದೈತ ಸಿದ್ಧಾಂತ .
10. ರಾಮಾನುಜಾಚಾರ್ಯರ ಸಿದ್ದಾಂತವನ್ನು ಹೆಸರಿಸಿ .
ವಿಶಿಷ್ಟಾದ್ವತ ಸಿದ್ಧಾಂತ .
11. ರಾಮಾನುಜಾಚಾರ್ಯರಿಗೆ ರಾಜಾಶ್ರಯ ನೀಡಿದ ಹೊಯ್ಸಳ ಅರಸ ಯಾರು ?
ವಿಷ್ಣುವರ್ಧನ .
12. ಸಿಖ್ ಧರ್ಮದ ಸ್ಥಾಪಕರು ಯಾರು ?
ಗುರುನಾನಕ್ .
13. ಸಿಖ್ಖರ ಪವಿತ್ರ ಗ್ರಂಥ ಯಾವುದು ?
ಗುರು ಗ್ರಂಥ ಸಾಹೇಬ್ .
14. ರಾಜಸ್ಥಾನದಲ್ಲಿ ತನ್ನ ಸಿದ್ದಾಂತವನ್ನು ಜನಪ್ರಿಯಗೊಳಿಸಿದ ಕೃಷ್ಣನ ಭಕ್ತೆ ಯಾರು ?
ಮೀರಾಬಾಯಿ .
15. ಸೂಫಿ ಎಂಬ ಶಬ್ದ ಯಾವ ಪದದಿಂದ ಬಂದಿದೆ ?
ಸಾಫ್ .
16. ಚಿಸ್ತಿ ಪಂಥದ ಸ್ಥಾಪಕರು ಯಾರು ?
ಖ್ವಾಜಾ ಅಬ್ದುಲ್ ಚಿಸ್ತಿ
17. ಸುಹರ್‌ವರ್ದಿ ಪಂಥದ ಸ್ಥಾಪಕರು ಯಾರು ?
ಬಾಗ್ದಾದಿನ ಶೇಖ್ ಶಹಾಬುದ್ದೀನ್ ,
2nd Puc ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು Notes
II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ :
1. ಶಂಕರಾಚಾರ್ಯರ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ .
ಸೌಂದರ್ಯಲಹರಿ , ಭಜಗೋವಿಂದಂ ,
2. ರಾಮಾನುಜಾಚಾರ್ಯರು ಯಾವ ವರ್ಷ ಮತ್ತು ಎಲ್ಲಿ ಜನಿಸಿದರು ?
ಸಾ.ಶ. 1017 ರಲ್ಲಿ ಚೆನ್ನೈ ಸಮೀಪದ ಶ್ರೀ ಪೆರಂಬೂರಿನಲ್ಲಿ ಜನಿಸಿದರು .
3. ರಾಮಾನುಜಾಚಾರ್ಯರ ತಂದೆ ತಾಯಿ ಯಾರು ?
ಸೋಮಯಾಜಿ ಮತ್ತು ಕಾಂತಿಮತಿ .
4. ಶಂಕರಾಚಾರ್ಯರ ತಂದೆ ತಾಯಿ ಯಾರು ?
ಶಿವಗುರು ಮತ್ತು ಆರ್ಯಾಂಬ
5. ಶಂಕರಾಚಾರ್ಯರರನ್ನು ‘ ಷಣ್ಮತ ಸ್ಥಾಪನಾಚಾರ್ಯ ‘ ಎಂದು ಕರೆಯಲು ಕಾರಣವೇನು ?
ಶಕ್ತಿದೇವರುಗಳ ಪೂಜೆಗೆ ಪ್ರಾಮುಖ್ಯತೆ ನೀಡುವುದರ ಮೂಲಕ ವಿವಿಧ ಪಂಥಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿದ್ದರಿಂದ
6. ಶಂಕರಾಚಾರ್ಯರರು ಸ್ಥಾಪಿಸಿದ ಯಾವುದಾದರೂ ಎರಡು ಪ್ರಮುಖ ಮಠಗಳನ್ನು ಹೆಸರಿಸಿ .
ದ್ವಾರಕೆಯ ಕಾಳಿಕ ಮಠ , ಶೃಂಗೇರಿಯ ಶಾರದಾಪೀಠ ,
7.ರಾಮಾನುಜಾಚಾರ್ಯರ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ .
ವೇದಾಂತಸಾರ , ವೇದಾಂತ ಸಂಗ್ರಹ .
8. ಮಧ್ವಾಚಾರ್ಯರು ಯಾವ ವರ್ಷ ಮತ್ತು ಎಲ್ಲಿ ಜನಿಸಿದರು ?
ಸಾ.ಶ. 1238 ರಲ್ಲಿ ಉಡುಪಿ ಬಳಿಯ ಪಾಜಕದಲ್ಲಿ ಜನಿಸಿದರು .
9. ಮಧ್ವಾಚಾರ್ಯರ ತಂದೆ ತಾಯಿ ಯಾರು ?
ಮದ್ಯಗೇಹ ನಾರಾಯಣ ಭಟ್ಟ ಮತ್ತು ವೇದವತಿ ,
10. ಮಧ್ವಾಚಾರ್ಯರು ಸ್ಥಾಪಿಸಿದ ಯಾವುದಾದರೂ ಎರಡು ಮಠಗಳನ್ನು ಹೆಸರಿಸಿ .
ಪೇಜಾವರ ಮಠ , ಪುತ್ತಿಗೆ ಮಠ ,
11 .ಮಧ್ವಾಚಾರ್ಯರ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ .
ಗೀತಭಾಷ್ಯ , ಅನುಭಾಷ್ಯ .
12. ಬಸವೇಶ್ವರರು ಯಾವ ವರ್ಷ ಮತ್ತು ಎಲ್ಲಿ ಜನಿಸಿದರು ?
ಸಾ.ಶ. 1132 ರಲ್ಲಿ ಬಾಗೇವಾಡಿಯಲ್ಲಿ ಜನಿಸಿದರು .
13. ಬಸವೇಶ್ವರರ ತಂದೆ ತಾಯಿ ಯಾರು ?
ಮಾದರಸ ಮತ್ತು ಮಾದಲಾಂಬಿಕೆ .
14. ಅನುಭವ ಮಂಟಪವನ್ನು ಸ್ಥಾಪಿಸಿದವರು ಯಾರು ಮತ್ತು ಎಲ್ಲಿ ?
ಬಸವೇಶ್ವರರು , ಕಲ್ಯಾಣದಲ್ಲಿ ಸ್ಥಾಪಿಸಿದರು .
15. ಯಾವುದಾದರೂ ಎರಡು ಪ್ರಮುಖ ಸೂಫಿ ಪಂಥಗಳನ್ನು ಹೆಸರಿಸಿ .
ಚಿಸ್ತಿ ಪಂಥ , ಸುಹರ್‌ವರ್ದಿ ಪಂಥ .
16. ಚಿಸ್ತಿ ಪಂಥದ ಯಾರಾದರೂ ಇಬ್ಬರು ಪ್ರಮುಖ ಸಂತರನ್ನು ಹೆಸರಿಸಿ .
ಮಾಯುದ್ದೀನ್ ಚಿಸ್ತಿ , ಫರಿದುದ್ದೀನ್ ಶಕರ್ .
III . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 15-20 ವಾಕ್ಯಗಳಲ್ಲಿ ಉತ್ತರಿಸಿ :
1 . ಶಂಕರಾಚಾರ್ಯರ ಜೀವನ ಮತ್ತು ಬೋಧನೆಗಳನ್ನು . ವಿವರಿಸಿ .
ಶಂಕರಾಚಾರ್ಯರು ಕೇರಳದ ಕಾಲಡಿಯಲ್ಲಿ ಸಾ.ಶ 788 ರಲ್ಲಿ ಜನಿಸಿದರು . ಶಿವಗುರು ಮತ್ತು ಆರ್ಯಾಂಬ ಇವರ ತಂದೆತಾಯಿಗಳು ಸಾಂಸಾರಿಕ ಜೀವನದಲ್ಲಿ ಆಸಕ್ತಿ ಹೊಂದದೆ ಸನ್ಯಾಸಿಯಾದರು . ಹಲವಾರು ಮಠಗಳನ್ನು ಸ್ಥಾಪಿಸಿ ಅದೈತ ಸಿದ್ಧಾಂತವನ್ನು ಪ್ರತಿಪಾದಿಸಿದರು . ಅದೈತ ಎಂದರೆ ಏಕತ್ವ ಅಥವಾ ಎರಡಲ್ಲದ್ದು ಎಂದರ್ಥ . ಅವರ ಪ್ರಕಾರ ಬ್ರಹ್ಮ ( ದೇವರು ) ಅಂತಿಮ ಸತ್ಯ . ಅವನು ನಿರ್ಗುಣ , ನಿರಾಕಾರ ಮತ್ತು ಸ್ವಪ್ರಕಾಶ . ಅವರು ಲೌಕಿಕ ಪ್ರಪಂಚಕ್ಕೆ ಆದ್ಯತೆ ನೀಡದೆ ಆಧ್ಯಾತ್ಮಿಕ ಪ್ರಪಂಚಕ್ಕೆ ಹೆಚ್ಚು ಒತ್ತು ನೀಡಿದರು . ಆದ್ದರಿಂದ ಅವರು ಪ್ರಪಂಚವನ್ನು ಮಾಯೆ ಎಂದು ಕರೆದರು . ಪ್ರಪಂಚ ಒಂದು ಭ್ರಮೆ . ಆತ್ಮ ಮತ್ತು ಪರಮಾತ್ಮ ಒಂದೇಎಂದು ತಿಳಿಸಿದರು .
ಅಜ್ಞಾನಿಯು ತನ್ನ ಆಂತರ್ಯದಲ್ಲಿ “ ಅವನನ್ನು ‘ ಅರಿತುಕೊಳ್ಳದೇ ಬಾಹ್ಯ ಜಗತ್ತಿನಲ್ಲಿ ಹುಡುಕುತ್ತಾನೆ . ಈ ಸತ್ಯವನ್ನು ತಿಳಿಯಲು ಜ್ಞಾನವು ಅತೀ ಅವಶ್ಯಕ ಹಾಗೂ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದರು . ಇವರು ವಿವೇಕ ಚೂಡಾಮಣಿ , ಆನಂದಲಹರಿ ಮುಂತಾದ ಗ್ರಂಥಗಳನ್ನು ರಚಿಸಿದರು .
2. ರಾಮಾನುಜಾಚಾರ್ಯರ ಜೀವನ ಮತ್ತು ಬೋಧನೆ ಗಳನ್ನು ವಿವರಿಸಿ .
ಇವರು ಸಾ.ಶ. 1017 ರಲ್ಲಿ ಚೆನ್ನೈ ಸಮೀಪದ ಶ್ರೀ ಪೆರಂಬೂರಿನಲ್ಲಿ ಜನಿಸಿದರು . ಇವರ ತಂದೆ ತಾಯಿಗಳು ಸೋಮಯಾಜಿ ಮತ್ತು ಕಾಂತಿಮತಿ . ಇವರು ಕಂಚಿಯಲ್ಲಿ ಗುರುಗಳಾದ ಯಾದವ ಪ್ರಕಾಶರ ಬಳಿ ವಿದ್ಯಾಭ್ಯಾಸ ಮಾಡಿದರು . ತನ್ನ 16 ನೇ ವಯಸ್ಸಿನಲಿ ತಂಗಮ್ಮಳೊಂದಿಗೆ ವಿವಾಹವಾಗಿ ಸಾಂಸಾರಿಕ ಜೀವನದಲ್ಲಿ ಅತೃಪ್ತರಾಗಿ ಸಂಸಾರವನ್ನು ತೊರೆದು ಸನ್ಯಾಸಿಯಾದರು . ಶ್ರೀರಂಗಂ ಮಠದ ಮುಖ್ಯಸ್ಥರಾಗಿ ಹೊಯ್ಸಳ ವಿಷ್ಣುವರ್ಧನನ ಆಶ್ರಯ ಪಡೆದು , ವಿಶಿಷ್ಟಾದ್ವತ ಸಿದ್ದಾಂತವನ್ನು ಪ್ರತಿಪಾದಿಸಿದರು . ಶ್ರೀ ಅಥವಾ ಲಕ್ಷ್ಮೀ ಆರಾದನೆಗೆ ಪ್ರಾಮುಖ್ಯತೆಯನ್ನು ನೀಡಿರುವುದರಿಂದ ಅವರ ಅನುಯಾಯಿಗಳನ್ನು ಶ್ರೀ ವೈಷ್ಣವರು ಎಂದು ಕರೆಯಲಾಗಿದೆ . ಲಕ್ಷ್ಮಿಯನ್ನು ಮನುಷ್ಯರು ಮತ್ತು ದೇವರ ಮಧ್ಯವರ್ತಿಯೆಂದು ಪರಿಗಣಿಸಲಾಗಿದೆ . ಅವರು ಶಂಕರರ ಮಾಯವಾದವನ್ನು ಖಂಡಿಸಿ ದೇವರಿದ್ದಾನೆ , ಪ್ರಪಂಚ ಸತ್ಯ , ಪರಮಾತ್ಮನಿಲ್ಲದೆ ಆತ್ಮಕ್ಕೆ ಸ್ವತಂತ್ರವಿಲ್ಲ . ಮೋಕ್ಷಕ್ಕೆ ಭಕ್ತಿ ಮಾರ್ಗವೇ ಪ್ರಧಾನವೆಂದು ಪ್ರತಿಪಾದಸಿದರು .
ಅವರ ಭಕ್ತಿ ಮಾರ್ಗದಲ್ಲಿ ಎರಡು ಅಂಶಗಳಿವೆ . –
- 1. ಪ್ರಪತ್ತಿ – ದೇವರಿಗೆ ಸಂಪೂರ್ಣವಾಗಿ ಶರಣಾಗುವುದು .
- 2. ಆಚಾರಾಭಿಮಾನ – ಗುರುವಿಗೆ ಶರಣಾಗುವುದು .
3. ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳನ್ನು ವಿವರಿಸಿ .
ಮಧ್ವಾಚಾರ್ಯರು ಉಡುಪಿ ಬಳಿಯ ಪಾಜಕದಲ್ಲಿ ಸಾ.ಶ. 1238 ರಲ್ಲಿ ಜನಿಸಿದರು . ಮದ್ಯಗೇಹ ನಾರಾಯಣ ಭಟ್ಟ ಮತ್ತು ವೇದಾವತಿ ಇವರ ತಂದೆ ತಾಯಿಗಳು . ಇವರ ಮೊದಲ ಹೆಸರು ವಾಸುದೇವ , ಅವರ ಗುರುಗಳಾದ ಅಚ್ಯುತ ಪ್ರೇಕ್ಷಕರ ವಾದವನ್ನು ಒಪ್ಪದೇ ತಮ್ಮದೇ ಆದ ಸಿದ್ಧಾಂತವನ್ನು ಮಂಡಿಸಿದರು . ‘ ದೈತ ಸಿದ್ಧಾಂತ ‘
ಇವರು ಅದೈತ ಸಿದ್ಧಾಂತವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು . ಅವರ ಪ್ರಕಾರ ಮೂರು ಪ್ರಧಾನ ಅಂಶಗಳಿವೆ . ಜಡ ( ಪ್ರಪಂಚ ) , ಆತ್ಮ ( ಚೇತನ ) ಮತ್ತು ದೇವರು ( ಪರಮಾತ್ಮ ) : ದೇವರು ಸ್ವತಂತ್ರ , ಜೀವಾತ್ಮ ಮತ್ತು ಜಡ ಪರಮಾತ್ಮನ ಅಧೀನ . ಇವರ ಪ್ರಕಾರ ಜೀವಾತ್ಮ ಬೇರೆ , ಪರಮಾತ್ಮ ಬೇರೆ .
ಆತ್ಮ ಮತ್ತು ಪರಮಾತ್ಮ ಒಂದರೊಳಗೊಂದು ವಿಲೀನಗೊಳ್ಳುವುದಿಲ್ಲ .
ಆತ್ಮ ಇನ್ನೊಂದು ಆತ್ಮದೊಂದಿಗೆ ವಿಲೀನಗೊಳ್ಳುವುದಿಲ್ಲ .
ಜಡ ಪ್ರಪಂಚ ಪರಮಾತ್ಮನೊಂದಿಗೆ ವಿಲೀನ ಗೊಳ್ಳುವುದಿಲ್ಲ . ಜಡ ಪ್ರಪಂಚ ಆತ್ಮದೊಂದಿಗೆ ವಿಲೀನಗೊಳ್ಳುವುದಿಲ್ಲ .
ಜಡ ಪ್ರಪಂಚ ಇನ್ನೊಂದು ಜಡ ಪ್ರಪಂಚದೊಂದಿಗೆ ವಿಲೀನಗೊಳ್ಳುವುದಿಲ್ಲ . .
4. ಬಸವೇಶ್ವರ ಸಾಮಾಜಿಕ – ಧಾರ್ಮಿಕ ಸುಧಾರಣೆಗಳನ್ನು ಚರ್ಚಿಸಿ .
ಜಾತಿ ಪದ್ಧತಿ , ಮೂಡನಂಬಿಕೆ , ಬಹುದೇವತಾ ಆರಾಧನೆ , ಮೂರ್ತಿ ಪೂಜೆ , ಪ್ರಾಣಿಬಲಿಗಳನ್ನು ಖಂಡಿಸಿದರು . ಸಹಭೋಜನ , ಅಂತರ್‌ಜಾತಿ ವಿವಾಹಕ್ಕೆ ಪ್ರೋತ್ಸಾಹಿಸಿದರು . ಕಾಯಕವೇ ಕೈಲಾಸ , ದಯೆಯೇ ಧರ್ಮದ ಮೂಲ ಎಂದು ತಿಳಿಸಿದರು .
ಧಾರ್ಮಿಕ ಸುಧಾರಣೆಗಳು :
ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು .
ಜಾತಿ ಭೇಧವಿಲ್ಲದೆ ಲಿಂಗಪೂಜೆಗೆ ಆದ್ಯತೆ ನೀಡಿ ಎಲ್ಲರೂ ಲಿಂಗ ಧರಿಸುವಂತೆ ಮಾಡಿದರು .
ಮುಕ್ತಿ ಸಾಧನೆಗೆ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದರು .
ಶ್ರಮಗೌರವ ( Dignity of labour ) ಅನ್ನು ಎತ್ತಿಹಿಡಿದರು .
ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿದರು . ವಚನ ಸಾಹಿತ್ಯವನ್ನು ಬೆಳೆಸಿದರು .
5. ಕಬೀರ್ ಮತ್ತು ಗುರುನಾನಕ್‌ರ ಕುರಿತು ಒಂದು ವಿವರಣೆ ನೀಡಿ .
ಕಬೀರ್ : ಇವರು ವಾರಣಾಸಿಯಲ್ಲಿನ ಮುಸ್ಲಿಂ ನೇಕಾರ ದಂಪತಿಗಳಾದ ನೀರು ಮತ್ತು ನೀಮ ಬಳಿ ಬೆಳೆದರು . ರಮಾನಂದರ ಶಿಷ್ಯರಾಗಿದ್ದರು . ಸಮಾನತೆಯನ್ನು ಭೋಧಿಸಿ ಪ್ರೀತಿಯೆಂಬ ಧರ್ಮವನ್ನು ಬೋಧಿಸಿದರು . ಅಲ್ಲಾ ಮತ್ತು ರಾಮ ಎಂಬುದು ಒಂದೇ ದೇವರ ಹೆಸರು ಎಂದು ಹೇಳಿ ಮೂರ್ತಿ ಪೂಜೆಯನ್ನು ಖಂಡಿಸಿದರು . ಹಿಂದೂ ಮುಸ್ಲಿಂ ಸಾಮರಸ್ಯಕ್ಕಾಗಿ ಶ್ರಮಿಸಿದರು .
ಗುರುನಾನಕ್ : ಇವರು ಸಿಖ್ ಧರ್ಮದ ಸ್ಥಾಪಕರು .ಇವರು ಕಬೀರರ ಭೋದನೆಯಿಂದ ಪ್ರಭಾವಿತರಾಗಿದ್ದರು . ಮೂರ್ತಿಪೂಜೆ , ಜಾತಿಪದ್ಧತಿ , ಸತಿ ಪದ್ಧತಿ ಮತ್ತು ಸಾಮಾಜಿಕ ಅನಿಷ್ಟಗಳನ್ನು ವಿರೋಧಿಸಿದರು . ಜನರಿಗೆ ಸತ್ಯ ನುಡಿಯಬೇಕೆಂದು ಉಪದೇಶಿಸಿದರು . ಹಿಂದೂ ಮುಸ್ಲಿಂರಲ್ಲಿನ ತಪ್ಪು ತಿಳುವಳಿಕೆಗಳು ಘರ್ಷಣೆಗಳಿಗೆ ಕಾರಣವೆಂದು ನಂಬಿದ್ದರು . ಪುರೋಹಿತರು ಮತ್ತು ಮೇಲ್ವರ್ಗದವರು ಬಡವರನ್ನು ಶೋಷಿಸುವುದನ್ನು ಅವರು ವಿರೋಧಿಸಿದರು . ಇವರ ಅನುಯಾಯಿಗಳನ್ನು ಸಿಬ್ಬರು ಎಂದು ಕರೆಯಲಾಗಿದೆ . ಗುರುಗ್ರಂಥ ಸಾಹೇಬ್ ಸಿಬ್ಬರ ಪವಿತ್ರಗ್ರಂಥವಾಗಿದೆ . ಅದು ಗುರುಮುಖಿ ಲಿಪಿಯಲ್ಲಿದೆ .
ಹೆಚ್ಚುವರಿ ಪ್ರಶ್ನೋತ್ತರಗಳು
2nd Puc History Chapter 6 Mcq Questions in Kannada
1. ‘ ವೇದಾಂತ ಸೂತ್ರದ ‘ ಕರ್ತೃ ಯಾರು ?
ರಾಮಾನುಜಾಚಾರ್ಯರು
2. ಪ್ರಪತ್ತಿ ಎಂದರೇನು ?
ದೇವರಿಗೆ ಸಂಪೂರ್ಣವಾಗಿ ಶರಣಾಗುವುದು .
3. ಬಸವೇಶ್ವರರ ವಿದ್ಯಾಗುರು ಯಾರು ?
ಜಾತವೇದ ಮುನಿ
4. ಸಾಮಾಜಿಕ ಸುಧಾರಣಾ ಚಳುವಳಿಗಳ ಮುಖ್ಯ ಉದ್ದೇಶಗಳೇನು ?
ಮೂಢನಂಬಿಕೆಗಳನ್ನು ತೊಲಗಿಸುವುದು ಮತ್ತು ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವುದು .
5. ಸರ್ವಜ್ಞ ಜಗದ್ಗುರು ಎಂಬ ಬಿರುದನ್ನು ಪಡೆದಿದ್ದವರಾರು ?
ಶಂಕರಾಚಾರ್ಯರು .
6. ಶಂಕರರು ಎಷ್ಟನೇ ವಯಸ್ಸಿನಲ್ಲಿ ಮರಣ ಹೊಂದಿದರು ?
32 ನೇ ವಯಸ್ಸಿನಲ್ಲಿ
7. ರಾಮಾನುಜಾಚಾರ್ಯರು ಯಾರ ಬಳಿ ವಿದ್ಯಾಭ್ಯಾಸ ನಡೆಸಿದರು ?
ಯಾದವ ಪ್ರಕಾಶರ ಬಳಿ .
8. ಬಸವೇಶ್ವರರ ಹೆಂಡತಿಯರ ಹೆಸರೇನು ?
ನೀಲಾಂಬಿಕೆ ಮತ್ತು ಗಂಗಾಂಬಿಕೆ .
9. ಬಸವಣ್ಣನವರು ಯಾರಿಗೆ ವಿವಾಹ ಮಾಡಿಸಿದರು ?
ಬ್ರಾಹ್ಮಣ ಮಧುವಯ್ಯನ ಮಗಳಿಗೂ ಹರಿಜನ ಹರಳಯ್ಯನ ಮಗನಿಗೂ ವಿವಾಹ ಮಾಡಿಸಿದರು
FAQ
ಕೇರಳದ ಕಾಲಡಿ ,
ಗುರುನಾನಕ್ .
ಗುರು ಗ್ರಂಥ ಸಾಹೇಬ್ .
ಇತರೆ ವಿಷಯಗಳು:
ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್
ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್
1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF