ದ್ವಿತೀಯ ಪಿ.ಯು.ಸಿ ಅಧ್ಯಾಯ – 5.5 ಬಹಮನಿ ಮತ್ತು ಆದಿಲ್ ಷಾಹಿ ಸುಲ್ತಾನರು ಇತಿಹಾಸ ನೋಟ್ಸ್‌ | 2nd Puc History Chapter 5.5 Notes in Kannada

ದ್ವಿತೀಯ ಪಿ.ಯು.ಸಿ ಅಧ್ಯಾಯ – 5.5 ಬಹಮನಿ ಮತ್ತು ಆದಿಲ್ ಷಾಹಿ ಸುಲ್ತಾನರು ಇತಿಹಾಸ ನೋಟ್ಸ್‌ ಪ್ರಶ್ನೋತ್ತರಗಳು, 2nd Puc History Chapter 5.5 Notes Question Answer in Kannada Kseeb Solution For Class 12 History Chapter 5.5 Notes In Kannada Bahmani Mattu Adil Shahi Sultanate Notes in Kannada

ಅಧ್ಯಾಯ – 5.5 ಬಹಮನಿ ಮತ್ತು ಆದಿಲ್ ಷಾಹಿ ಸುಲ್ತಾನರು

2nd puc history chapter 55 question answer in kannada

2nd Puc History Chapter 5.5 Question Answer in Kannada

I. ಈ ಕೆಳಕಂಡ ಪ್ರಶ್ನೆಗಳಿಗೆ ತಲಾ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿ :

1.ಬಹಮನಿ ಮನೆತನದ ಸ್ಥಾಪಕನನ್ನು ಹೆಸರಿಸಿರಿ .

ಅಲ್ಲಾವುದ್ದೀನ್ ಹಸನ್‌ಗಂಗೂ ಬಹಮನ್ ಷಾ .

2. ಆದಿಲ್‌ಷಾಹಿ ಮನೆತನದ ಸ್ಥಾಪಕ ಯಾರು ?

ಯೂಸಫ್ ಆದಿಲ್ ಷಾ .

3 . ಇಬ್ರಾಹಿಂ ರೋಜಾ ನಿರ್ಮಿಸಿದವರಾರು ?

ಎರಡನೇ ಇಬ್ರಾಹಿಂ ಆದಿಲ್ ಷಾ .

4. ಬೀದರ್‌ನಲ್ಲಿರುವ ಮದರಸಾ ನಿರ್ಮಿಸಿದವರಾರು ?

ಮಹಮದ್ ಗವಾನ್ .

5. ದಕ್ಷಿಣ ಭಾರತದ ಅತ್ಯಂತ ದೊಡ್ಡ ಮಸೀದಿ ಯಾವುದು ?

ಗುಲ್ಬರ್ಗಾದ ‘ ಜಾಮಿ ಮಸೀದಿ ‘

6.’ ಜಗದ್ಗುರು ಬಾದಷಾ ‘ ಎಂದು ಯಾರನ್ನು ಕರೆಯಲಾಗಿದೆ ?

ಎರಡನೇ ಇಬ್ರಾಹಿಂ ಆದಿಲ್ ಷಾ .

7′ ಕಿತಾಬ್ – ಇ – ನವರಸ್ ‘ ಬರೆದವರಾರು ?

ಎರಡನೇ ಇಬ್ರಾಹಿಂ ಆದಿಲ್ ಷಾ .

2nd Puc History Chapter 5 Notes in Kannada

II . ಈ ಕೆಳಕಂಡ ಪ್ರಶ್ನೆಗಳಿಗೆ ತಲಾ ಎರಡು ಪದ ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ :

1. ಬಹಮನಿ ಮನೆತನದ ರಾಜಧಾನಿಗಳನ್ನು ತಿಳಿಸಿ .

ಗುಲ್ಬರ್ಗಾ ಮತ್ತು ಬೀದರ್‌ ,

2. ಮಹಮದ್ ಗವಾನ್‌ಯಾರು ಹಾಗೂ ಅವನು ಮದರಸಾವನ್ನು ಎಲ್ಲಿ ನಿರ್ಮಿಸಿದನು ?

ಮಹಮದ್ ಗವಾನ್ ಮೂರನೇ ಮಹಮದ್ ಷಾ ನ ಮುಖ್ಯಮಂತ್ರಿ ಇವನು ಬೀದರ್‌ನಲ್ಲಿ ಮದರಸಾವನ್ನು ನಿರ್ಮಿಸಿದನು .

3. ಹಜರತ್ ಖ್ಯಾಜಾಬಂದೇ ನವಾಜ್ ಯಾರು ಮತ್ತು ಅವರ ದರ್ಗ ಎಲ್ಲಿದೆ ?

ಇವನು ಒಬ್ಬ ಸೂಫಿಸಂತ . ಇವರ ದರ್ಗಾ ಗುಲ್ಬರ್ಗಾದಲ್ಲಿದೆ .

4.ಗೋಳ ಗುಮ್ಮಟ ಎಲ್ಲಿದೆ ಹಾಗೂ ಅದನ್ನು ನಿರ್ಮಿಸಿದವರಾರು ?

ಗೋಳ ಗುಮ್ಮಟ ಬಿಜಾಪುರದಲ್ಲಿದೆ , ಇದನ್ನು ನಿರ್ಮಿಸಿದವನು ಮಹಮದ್ ಆದಿಲ್ ಷಾ .

5. ಬಿಜಾಪುರದ ಆದಿಲ್‌ಷಾಹಿಗಳ ಯಾವುದಾದರೂ ಎರಡು ಸ್ಮಾರಕಗಳನ್ನು ತಿಳಿಸಿ .

ಆನಂದ ಮಹಲ್ ಮತ್ತು ಬಾರಾ ಕಮಾನ್ .

6. ಆದಿಲ್‌ಷಾಹಿ ಕಾಲದ ಇಬ್ಬರು ಇತಿಹಾಸಕಾರರನ್ನು ಹೆಸರಿಸಿರಿ .

ಮುಲ್ಲಾ ನಸ್ರತಿ ಮತ್ತು ಫೆರಿಸ್ತಾ .

III , ಈ ಕೆಳಕಂಡ ಪ್ರಶ್ನೆಗಳಿಗೆ ತಲಾ 15-20 ವಾಕ್ಯಗಳಲ್ಲಿ ಉತ್ತರಿಸಿ :

1. ಮಹಮದ್ ಗವಾನ್‌ನ ಸಾಧನೆಗಳನ್ನು ವಿವರಿಸಿರಿ .

  • ಪರ್ಷಿಯಾ ದೇಶದ ಗವಾನ್ ಎಂಬಲ್ಲಿ ಜನಿಸಿದ ಇವನು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದನು . ಕ್ರಮೇಣ 3 ನೇ ಮಹಮದ್ ಷಾ ನ ಮುಖ್ಯಮಂತ್ರಿಯಾಗಿ ನೇಮಕವಾದನು . ಇವನ ಸಾಧನೆಗಳೆಂದರೆ
  • ವಿಜಯನಗರ ಸಾಮ್ರಾಜ್ಯದಿಂದ ಹುಬ್ಬಳ್ಳಿ , ಬೆಳಗಾವಿ ಮತ್ತು ಗೋವಾ ಪ್ರದೇಶಗಳನ್ನು ವಶಪಡಿಸಿಕೊಂಡನು .
  • ಮಾಳ್ವದ ಸುಲ್ತಾನನೊಂದಿಗೆ ಒಪ್ಪಂದ ಮಾಡಿಕೊಂಡು ರಾಜಕೀಯ ಸ್ಥಿರತೆಯನ್ನು ಸ್ಥಾಪಿಸಿದನು .
  • ಒರಿಸ್ಸಾದ ರಾಜಮಹೇಂದ್ರಿ ಹಾಗೂ ಕೊಂಡವೀಡು ಪ್ರದೇಶಗಳನ್ನು ಗೆದ್ದನು .
  • ಆಡಳಿತದ ಅನುಕೂಲಕ್ಕಾಗಿ ರಾಜ್ಯದ ನಾಲ್ಕು ಪ್ರಾಂತ್ಯಗಳನ್ನು ಎಂಟಕ್ಕೆ ಹೆಚ್ಚಿಸಿ ‘ ತರಫ್ ‘ ಗಳೆಂದು ಕರೆಯಲಾಯಿತು .
  • ಭೂಮಿಯನ್ನು ಮಾಪನ ಮಾಡಿ ಕಂದಾಯವನ್ನು ನಿಗದಿಪಡಿಸಲಾಯಿತು .
  • ಕಂದಾಯವನ್ನು ನಗದು ರೂಪದಲ್ಲಿ ಮಾತ್ರ ಸಂಗ್ರಹಿಸಲಾಗುತ್ತಿತ್ತು .
  • ಇವನು ಬೀದರ್‌ನಲ್ಲಿ ಮದರಸ್ ಕಾಲೇಜು ನಿರ್ಮಿಸಿದನು ; ಅಲ್ಲಿ ಒಂದು ಗ್ರಂಥಾಲಯವನ್ನು ನಿರ್ಮಿಸಿ ಜಗತ್ತಿನೆಲ್ಲೆಡೆಯಿಂದ ಸುಮಾರು 3000 ಹಸ್ತಪ್ರತಿಗಳನ್ನು ಸಂಗ್ರಹಿಸಿದನು .
  • ಗವಾನ್‌ನ ಪ್ರಗತಿಯನ್ನು ಸಹಿಸಲಾಗದ ಸ್ಥಳೀಯ ಮುಸಲ್ಮಾನ ನಾಯಕರು ಅವನ ವಿರುದ್ಧ ದೋಷಾಕೋಪ ಮಾಡಲಾಗಿ ಸಾ.ಶ. 1481 ರಲ್ಲಿ ಅವನ ಶಿರಚ್ಛೇದನ ಮಾಡಲಾಯಿತು .
  • ಆದಿಲ್ ಷಾಹಿ ಕಾಲದ ಸಾಹಿತ್ಯ ಹಾಗೂ ವಾಸ್ತುಶಿಲ್ಪ ಪ್ರಗತಿಯನ್ನು ಕುರಿತು ಚರ್ಚಿಸಿರಿ .
  • ಇವರ ಕಾಲದಲ್ಲಿ ಅರೇಬಿಕ್ , ಪರ್ಷಿಯನ್ ಹಾಗೂ ದಖನೀ ಉರ್ದು ಭಾಷೆಗಳು ಹಾಗೂ ಸಾಹಿತ್ಯ ಬೆಳವಣಿಗೆಯಾದವು . ಸೂಫಿ ಸಂತರು ಹಿಂದೂ ಮತ್ತು ಮುಸ್ಲಿಂರಲ್ಲಿ ಏಕತೆ ಮೂಡಿಸಿದರು .
  • ಸಯ್ಯದ್ ಅಹ್ಮದ್ ಹರವಿ , ಮೌಲನಾ ಗೈತುದ್ದೀನ್ , ಹಬೀಬುಲ್ಲಾ ಮತ್ತು ಅಬ್ದುಲ್ಲಾ ಪ್ರಸಿದ್ಧ ವಿದ್ವಾಂಸರಾಗಿದ್ದರು. ಮುಲ್ಲಾ ನಸ್ರತಿ ಮತ್ತು ಫೆರಿಸ್ತಾ ಪ್ರಸಿದ್ದ ಇತಿಹಾಸಕಾರರಾಗಿದ್ದು ,
  • ಅವರು ಕ್ರಮವಾಗಿ ‘ ಆಲಿನಾಮ ‘ ಮತ್ತು ತಾರೀಖ್ – ಇ – ಫೆರಿಸ್ತಾ ಕೃತಿಗಳನ್ನು ಬರೆದಿದ್ದಾರೆ .
  • ವಾಸ್ತುಶಿಲ್ಪ ಆದಿಲ್‌ಷಾಹಿಗಳು ನಿರ್ಮಿಸಿದ ಸ್ಮಾರಕಗಳು ಇಂಡೋ – ಇಸ್ಲಾಮಿಕ್ ಶೈಲಿಯಲ್ಲಿವೆ .
  • ಜಾಮೀ ಮಸೀದಿಯನ್ನು ಆದಿಲ್ ಷಾ ನಿರ್ಮಾಣ ಮಾಡಿದನು . ಬಿಜಾಪುರದ ಇಬ್ರಾಹಿಂ ರೋಜಾ , ದಕ್ಷಿಣ ಭಾರತದ ತಾಜ್‌ಮಹಲ್ ಎಂದೇ ಹೆಸರಾಗಿದೆ . ಇಬ್ರಾಹಿಂ ಆದಿಲ್ ಷಾ ಮಹರತ್ ಮಹಲ್ ನಿರ್ಮಿಸಿದನು .
  • ಬಿಜಾಪುರದ ಗೋಳಗುಮ್ಮಟವನ್ನು ಮಹಮದ್ ಆದಿಲ್ ಷಾನು ಸಾ.ಶ .1656 ರಲ್ಲಿ ನಿರ್ಮಿಸಿದನು .
  • ಇದು ಅವನ ಗೋರಿಯಾಗಿದೆ . ಇದರ ಪಿಸುಮಾತಿನ ಮೊಗಸಾಲೆಯು ವಿಶೇಷವಾಗಿದೆ . ಇಲ್ಲಿ ಒಮ್ಮೆ ಮಾಡಿದ ಶಬ್ದವು ಏಳು ಬಾರಿ ಪ್ರತಿಧ್ವನಿಸುತ್ತದೆ . ಈ ಎಲ್ಲಾ ಲಕ್ಷಣಗಳು ಅದನ್ನು ವಿಶ್ವವಿಖ್ಯಾತ ಸ್ಮಾರಕವನ್ನಾಗಿಸಿದೆ .
  • ಬಾರಾ ಕಮಾನ್ , ಬಡೇಕಮಾನ್ , ಅಸಾರ್ ಮಹಲ್ , ಆನಂದ ಮಹಲ್ , ಉಪ್ಪಿಬುರುಝ್ , ತಾಜ್ ಬಾವಿ , ಚಾಂದ್ ಬಾಪ್ಟಿ , ಮುಂತಾದವು ಇದರ ಪ್ರಮುಖ ಸ್ಮಾರಕಗಳಾಗಿವೆ .

ಹೆಚ್ಚುವರಿ ಪ್ರಶ್ನೋತ್ತರಗಳು

1. ಪರ್ಷಿಯಾ ದೇಶದಿಂದ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದು 3 ನೇ ಮಹಮದ್ ಷಾನ ಮುಖ್ಯಮಂತ್ರಿಯಾಗಿ ನೇಮಕವಾದವನಾರು ?

ಮಹಮದ್ ಗವಾನ್ .

2. ಮಹಮದ್ ಗವಾನ್‌ ಶಿರಚ್ಛೇದನ ಯಾವಾಗ ಮಾಡಲಾಯಿತು ?

ಸಾ.ಶ. 1481 ರಲ್ಲಿ .

3. ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಮಸೀದಿ ಯಾವುದು ?

ಗುಲ್ಬರ್ಗಾದ ಜಾಮಿ ಮಸೀದಿ ,

4. ಕಲಾಕಾರರಿಗಾಗಿ ನವರಸಪುರ ಎಂಬ ಉಪನಗರವನ್ನು ನಿರ್ಮಿಸಿದವರಾರು ?

ಎರಡನೇ ಇಬ್ರಾಹಿಂ

5. ಆದಿಲ್ ಷಾ . ಮೆಹರತ್ ಮಹಲ್ ಎಂಬುದು ಎಷ್ಟು ಅಂತಸ್ತಿನ ಅರಮನೆಯಾಗಿದೆ ?

ಮೂರು ಅಂತಸ್ತಿನ ಅರಮನೆಯಾಗಿದೆ .

FAQ

1. ದಕ್ಷಿಣ ಭಾರತದ ಅತ್ಯಂತ ದೊಡ್ಡ ಮಸೀದಿ ಯಾವುದು ?

ಗುಲ್ಬರ್ಗಾದ ‘ ಜಾಮಿ ಮಸೀದಿ ‘

2.ಬಹಮನಿ ಮನೆತನದ ಸ್ಥಾಪಕನನ್ನು ಹೆಸರಿಸಿರಿ .

ಅಲ್ಲಾವುದ್ದೀನ್ ಹಸನ್‌ಗಂಗೂ ಬಹಮನ್ ಷಾ .

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

Leave a Reply

Your email address will not be published. Required fields are marked *

rtgh