10ನೇ ತರಗತಿ ವಿಜ್ಞಾನ ವಿದ್ಯುಚ್ಛಕ್ತಿ ನೋಟ್ಸ್ ಪ್ರಶ್ನೋತ್ತರಗಳು, 10th Class Science Chapter 12 Notes Question Answer Pdf 10th Science Vidyuchakti Notes 10th Class Science Electricity Notes Kseeb Solution For Class For 10 Chapter 12 Notes Class 10 Science Chapter 12 Question Answer in Kannada 2024 10th Science Vidyut Shakti Question Answer in Kannada
10th Class Science Chapter 12 Notes
Kseeb Solutions For Class 10 Science Chapter 12 in Kannada
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :
1. ವಿದ್ಯುತ್ ಮಂಡಲ ಎಂಬುದರ ಅರ್ಥವೇನು ?
ವಿದ್ಯುತ್ ಪ್ರವಾಹದ ನಿರಂತರ ಮತ್ತು ಆವೃತ ಮಾರ್ಗವನ್ನು ವಿದ್ಯುತ್ ಮಂಡಲ ಎನ್ನುವರು .
2.ವಿದ್ಯುತ್ ಪ್ರವಾಹದ ಏಕಮಾನವನ್ನು ವ್ಯಾಖ್ಯಾನಿಸಿ .
ವಿದ್ಯುತ್ ಪ್ರವಾಹದ ಏಕಮಾನ ಆಂಪೀರ್ ( A ) . ಒಂದು ಆಂಪೀರ್ ಎಂದರೆ ಒಂದು ಸೆಕೆಂಡಿನಲ್ಲಿ ಒಂದು ಕೂಲಮ್ ಆವೇಶದ ಪ್ರವಾಹವಾಗಿದೆ .
3.ಒಂದು ಕೂಲಮ್ ಆವೇಶವನ್ನು ರೂಪಿಸಿದ ಇಲೆಕ್ಟ್ರಾನ್ ಗಳ ಸಂಖ್ಯೆಯನ್ನು ಲೆಕ್ಕ ಹಾಕಿ .
ಒಂದು ಇಲೆಕ್ಟ್ರಾನ್ 1.6X10-19 C ಆವೇಶವನ್ನು ಹೊಂದಿದೆ .
ಆದ್ದರಿಂದ ಒಂದು ಕೂಲಮ್ ಆವೇಶವನ್ನು ರೂಪಿಸಲು ಬೇಕಾದ ಇಲೆಕ್ಟ್ರಾನ್ ಗಳ ಸಂಖ್ಯೆ = 1 / 1.6X10 -19 = 6.25X1018 = 6X1018
4.ವಾಹಕದ ಮೂಲಕ ವಿಭವಾಂತರವನ್ನು ನಿರ್ವಹಿಸಲು ಸಹಾಯ ಮಾಡುವ ಸಾಧನವನ್ನು ಹೆಸರಿಸಿ .
ವಿದ್ಯುತ್ ಕೋಶ .
5.ಎರಡು ಬಿಂದುಗಳ ನಡುವಿನ ವಿಭವಾಂತರ
1V . ಈ ಹೇಳಿಕೆಯ ಅರ್ಥ ತಿಳಿಸಿರಿ .
ಒಂದು ಕೂಲಮ್ ಆವೇಶವನ್ನು ಒಂದು ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಸಾಗಿಸಲು 1 ) ಕೆಲಸದ ಅವಶ್ಯಕತೆ ಇದೆ ಎಂದರ್ಥ .
6. 6V ವಿದ್ಯುತ್ ಕೋಶದ ಮೂಲಕ ಹಾದು ಹೋಗುವ ಪ್ರತಿಯೊಂದು ಕೂಲಮ್ ಆವೇಶಗಳಿಗೆ ಎಷ್ಟು ಶಕ್ತಿಯನ್ನು ಒದಗಿಸಲಾಗುತ್ತದೆ ?
ವಿದ್ಯುತ್ ಕೋಶದ ಮೂಲಕ ಹಾದು ಹೋಗುವ ಪ್ರತಿಯೊಂದು ಕೂಲಮ್ ಆವೇಶಗಳಿಗೆ ಒದಗಿಸುವ ಶಕ್ತಿಯು ಆವೇಶಗಳ ಹರಿವಿಗೆ ಆಗುವ ಕೆಲಸಕ್ಕೆ ಸಮವಾಗಿದೆ .
ವಿಭವಾಂತರ ( V ) = ಕೆಲಸ ( W ) / ಆವೇಶ ( Q )
W = V / Q , ಆವೇಶ Q = 1C ಮತ್ತು ವಿಭವಾಂತರ V = 6V ಆದಾಗ
W = 1X6 = 6J 6 ] ಶಕ್ತಿಯನ್ನು ಒದಗಿಸಬೇಕಾಗುತ್ತದೆ .
7. ವಾಹಕದ ರೋಧವು ಯಾವ ಅಂಶಗಳ ಮೇಲೆ ಅವಲಂಬಿತವಾಗಿದೆ?
ವಾಹಕದ ಉದ್ದ
ವಾಹಕದ ಅಡ್ಡಕೊಯ್ತ
ವಾಹಕವಾಗಿ ಬಳಸುವ ವಸ್ತುವಿನ ವಿಧ
ವಾಹಕದ ತಾಪ .
8.ಒಂದೇ ರೀತಿಯ ವಸ್ತುವಿನ ದಪ್ಪವಾದ ತಂತಿ ಅಥವಾ ತೆಳುವಾದ ತಂತಿಯನ್ನು ಒಂದೇ ಮೂಲಕ್ಕೆ ಸಂಪರ್ಕಿಸಿದಾಗ ಯಾವ ತಂತಿಯ ಲಕ ವಿದ್ಯುತ್ ಸುಲಭವಾಗಿ ಹರಿಯುತ್ತದೆ . ? ಮತ್ತು ಹೇಗೆ ?
ದಪ್ಪವಾದ ತಂತಿಯ ಮೂಲಕ ವಿದ್ಯುತ್ ಸುಲಭವಾಗಿ ಹರಿಯುತ್ತದೆ . ಏಕೆಂದರೆ ತೆಳುವಾದ ತಂತಿಗಿಂತ ದಪ್ಪ ತಂತಿಯಲ್ಲಿ ರೋಧವು ಕಡಿಮೆ ಇರುತ್ತದೆ ಏಕೆಂದರೆ ವಾಹಕದ ರೋಧವು ವಸ್ತುವಿನ ಅಡ್ಡಕೊಯ್ದಕ್ಕೆ ವಿಲೋಮಾನುಪಾತದಲ್ಲಿರುತ್ತದೆ .
9. ವಿದ್ಯುತ್ ಆವಯವದ ರೋಧವು ಸ್ಥಿರಾಂಕವಾಗಿದ್ದು , ಅದರ ಎರಡು ತುದಿಗಳಲ್ಲಿನ ವಿಭವಾಂತರವು ಅದರ ಹಿಂದಿನ ಮೌ ಅರ್ಧದಷ್ಟು ಕಡಿಮೆಯಾದರೆ , ಅದರ ಮೂಲಕ ಹರಿಯುವ ವಿದ್ಯುತ್ ನಲ್ಲಿ ಆಗುವ ಬದಲಾವಣೆ ಏನು ?
ಓಮನ ನಿಯಮದ ಪ್ರಕಾರ V = IR
I = V / R 1
ವಿಭವಾಂತರವು ಅರ್ಧದಷ್ಟು ಕಡಿಮೆಯಾದರೆ
ವಿಭವಾಂತರ V ‘ = V / 2
ರೋಧವು ಸ್ಥಿರಾಂಕವಾಗಿರುತ್ತದೆ , ಆದ್ದರಿಂದ ವಿದ್ಯುತ್ ಪ್ರವಾಹ I’ = V / R
= ( V / 2 ) / R
= ( 1/2 ) ( V / R )
= ( 1/2 ) 1 = 1/2
ಆದ್ದರಿಂದ ವಿದ್ಯುತ್ ಆವಯವದ ಮೂಲಕ ಹರಿಯುವ ವಿದ್ಯುತ್ ಅರ್ಧದಷ್ಟಾಗುತ್ತದೆ .
10.ವಿದ್ಯುತ್ ಟೋಸ್ಟರ್ ಮತ್ತು ವಿದ್ಯುತ್ ಇಸ್ತ್ರಿ ಪೆಟ್ಟಿಗೆಯ ಸುರುಳಿಗಳನ್ನು ಶುದ್ಧ ಲೋಹದ ಬದಲಿಗೆ ಮಿಶ್ರಲೋಹಗಳಿಂದ ತಯಾರಿಸಿರುತ್ತಾರೆ ಏಕೆ?
ಶುದ್ಧ ಲೋಹಗಳಿಗಿಂತ ಮಿಶ್ರಲೋಹಗಳ ರೋಧವು ಅಧಿಕವಾಗಿರುತ್ತದೆ.ಮತ್ತು ಅವು ಸುಲಭದಲ್ಲಿ ಕರಗುವುದಿಲ್ಲ.ರೋಧವು ಅಧಿಕವಾಗಿರುವುದರಿಂದ ಬೇಗನೆ ಬಿಸಿಯಾಗುತ್ತವೆ .
11. ಕೋಷ್ಟಕ 12.2 ರ ದತ್ತಾಂಶವನ್ನು ಬಳಸಿಕೊಂಡು ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ .
ಅ ) ಕಬ್ಬಿಣ ಮತ್ತು ಪಾದರಸಗಳಲ್ಲಿ ಉತ್ತಮವಾದ ವಾಹಕ ಯಾವುದು ?
ಕಬ್ಬಿಣದ ರೋಧ = 10.0 x 10 -8 ೧
ಪಾದರಸದ ರೋಧ = 94.0 x 10 -8 ೧
ಕಬ್ಬಿಣದ ರೋಧಕ್ಕಿಂತ ಪಾದರಸದ ರೋಧ ಅಧಿಕವಾಗಿರುವ ಕಾರಣ ಕಬ್ಬಿಣವು ಪಾದರಸಕ್ಕಿಂತ ಉತ್ತಮವಾದ ವಾಹಕವಾಗಿದೆ .
ಆ ) ಯಾವ ವಸ್ತುವು ಅತ್ಯುತ್ತಮ ವಾಹಕವಾಗಿದೆ ?
ಬೆಳ್ಳಿಯ ರೋಧವು ಅತಿ ಕಡಿಮೆ ಇರುವ ಕಾರಣ ಇದು ಅತ್ಯುತ್ತಮ ವಾಹಕವಾಗಿದೆ .
12. 2V ನ ಮೂರು ಶುಷ್ಕಕೋಶಗಳು , ಒಂದು ರೋಧಕ 5 ೧ , ಒಂದು ರೋಧಕ 8 ೧ , ಒಂದು ರೋಧಕ 12 ೧ ಮತ್ತು ಕೀ ಇವುಗಳನ್ನು ಸರಣಿ ಕ್ರಮದಲ್ಲಿ ಸಂಯೋಜಿಸಿ ಒಂದು ವಿದ್ಯುತ್ ಮಂಡಲದ ರೇಖಾ ಚಿತ್ರವನ್ನು ರಚಿಸಿರಿ .
2V ನ ಮೂರು ಶುಷ್ಕಕೋಶಗಳನ್ನು ಸರಣಿಯಲ್ಲಿ ಜೋಡಿಸಿದಾಗ ಒಟ್ಟು ವಿಭವಾಂತರವು 6V ಆಗುತ್ತದೆ .
13. ಪ್ರಶ್ನೆ ಒಂದರಲ್ಲಿನ ರೇಖಾ ಚಿತ್ರವನ್ನು ಮತ್ತೊಮ್ಮೆ ರಚಿಸಿರಿ.ರೋಧಕದಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹವನ್ನು ಅಳೆಯ ಅಮೀಟರನ್ನು ಮತ್ತು 12 ೧ ನ ರೋಧಕದ ತುದಿಗಳ ನಡುವಿನ ವಿಭವಾಂತರವನ್ನು ಅಳೆಯಲು ವೋಲ್ಟಮೀಟರನ್ನು ಜೋಡಿಸಿರಿ.ಅಮೀಟರ್ ಮತ್ತು ವೋಲ್ಟಮಿಟರ್ ನಲ್ಲಿಯ ಸೂಚ್ಯಂಕ ಎಷ್ಟಿರಬಹುದು ?
ವಿಭವಾಂತರವನ್ನು ಅಳೆಯಲು ಅಮೀಟರನ್ನು ರೋಧಕಕ್ಕೆ ಸಮಾಂತರವಾಗಿ ಜೋಡಿಸಿದೆ.ಅಮೀಟರ್ ಮತ್ತು ವೋಲ್ಟಮೀಟರ್ ನ ಸೂಚ್ಯಂಕವನ್ನು ಪಡೆಯಲು ಓಮನ ನಿಯಮವನ್ನು ಉಪಯೋಗಿಸಬೇಕು .
ಓಮನ ನಿಯಮದ ಪ್ರಕಾರ V = IR ,
ವಿಭವಾಂತರವು V = GV ಆಗಿದೆ .
ರೋಧಕ R = 5 + 8 + 12 = 252೧
I = V / R i.e 6 / 25 = 0.24 A
ಅಮೀಟರಿನ ಸೂಚ್ಯಂಕವು 0.24 A ಮತ್ತು ವೋಲ್ಟಮೀಟರಿನ ಸೂಚ್ಯಂಕವು 2.88 V ಆಗಿರುತ್ತದೆ .
14.ಕೆಳಗಿನವುಗಳನ್ನು ಸಮಾಂತರವಾಗಿ ಸಂಪರ್ಕಿಸಿದಾಗ ಸಮಾನ ರೋಧವನ್ನು ನಿರ್ಣಯಿಸಿ.
15. ಒಂದು ವಿದ್ಯುತ್ ದೀಪದ ರೋಧ 100೧ , ಒಂದು ಟೋಸ್ಟರ್ ನ ರೋಧ 500 , ಹಾಗು ನೀರಿನ ಫಿಲ್ಟರ್ ನ ರೋಧ 500೧.ಇವುಗಳನ್ನು 220V ಆಕರಕ್ಕೆ ಸಮಾಂತರವಾಗಿ ಜೋಡಿಸಲಾಗಿದೆ.ಈ ಮೂರು ಉಪಕರಣಗಳು ಬಳಸುವ ವಿದ್ಯುತ್ ಪ್ರವಾಹವನ್ನು ಬಳಸುವ ಒಂದು ಇಸ್ತ್ರಿಪೆಟ್ಟಿಗೆಯನ್ನು ಅದೇ ಆಕರಕ್ಕೆ ಜೋಡಿಸಲಾಗಿದೆ.ಈ ಇಸ್ತ್ರಿಪೆಟ್ಟಿಗೆಯ ರೋಧ ಮತ್ತು ಅದರ ಮೂಲಕ ಪ್ರವಹಿಸುವ ವಿದ್ಯುತ್ ಪ್ರಮಾಣವೆಷ್ಟು ?
ವಿದ್ಯುತ್ ದೀಪದ ರೋಧ = 100೧
ಟೋಸ್ಟರ್ ನ ರೋಧ = 50೧
ನೀರಿನ ಫಿಲ್ಟರ್ ನ ರೋಧ = 500೧
ವಿಭವಾಂತರ V = 220V
ಇವುಗಳನ್ನು ಸಮಾಂತರವಾಗಿ ಚಿತ್ರದಲ್ಲಿ ತೋರಿಸಿರುವಂತೆ ಸಂಪರ್ಕಿಸಲಾಗಿದೆ .
ಈ ಮಂಡಲದ ಸಮಾಂತರ ರೋಧವು R ಆಗಿರಲಿ ,
1 / R = 1 / R1 + 1 / R2 + 1 / R3 = 1 / 100 + 1 / 50 + 1 / 500
ಓಮನ ನಿಯಮದ ಪ್ರಕಾರ ,
V = IR ‘
R ‘ = V / I
ಮಂಡಲದಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹ 1 ಆದರೆ ,I=220 / 500 / 16-7.04A 7.04A ವಿದ್ಯುತ್ ಪ್ರವಾಹವನ್ನು ಮೂರೂ ಉಪಕರಣಗಳು ಬಳಸುತ್ತಿವೆ.
ಆದ್ದರಿಂದ ಅದೇ ಆಕರಕ್ಕೆ ಸಂಪರ್ಕಿಸಿರುವ ಇಸ್ತ್ರಿ ಪೆಟ್ಟಿಗೆಯು ಕೂಡಾ 7.04 A ವಿದ್ಯುತ್ ಪ್ರವಾಹವನ್ನು ಬಳಸುತ್ತಿದೆ. ಇಸ್ತ್ರಿ ಪೆಟ್ಟಿಗೆಯ ರೋಧವು R ‘ ಆಗಿರಲಿ ,
ಓಮನ ನಿಯಮದ ಪ್ರಕಾರ ,
V = IR ‘
R ‘ = V / I
=220/7.04
=31.25೧
ಆದ್ದರಿಂದ ಇಸ್ತ್ರಿ ಪೆಟ್ಟಿಗೆಯ ರೋಧ 31.25೧ ಆಗಿರುತ್ತದೆ.ಮತ್ತು ಅದರ ಮೂಲಕ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹವು 7.04A ಆಗಿರುತ್ತದೆ .
16. ವಿದ್ಯುತ್ ಉಪಕರಣಗಳನ್ನು ಸರಣಿ ಕ್ರಮದಲ್ಲಿ ಜೋಡಿಸುವ ಸ್ಥಾನದಲ್ಲಿ ಸಮಾಂತರವಾಗಿ ಜೋಡಿಸುವುದರಿಂದ ಆಗುವ ಪ್ರಯೋಜನಗಳೇನು ?
ಸಮಾಂತರ ಮಂಡಲವು ವಿದ್ಯುತ್ ಉಪಕರಣಗಳ ಮೂಲಕ ವಿದ್ಯುತ್ ಪ್ರವಾಹವನ್ನು ವಿಭಜಿಸುತ್ತದೆ . ನಿರ್ದಿಷ್ಟವಾಗಿ ಪ್ರತಿಯೊಂದು ವಿದ್ಯುತ್ ಉಪಕರಣವು ವಿಭಿನ್ನ ರೋಧವನ್ನು ಹೊಂದಿರುವಾಗ ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ವಿಭಿನ್ನ ವಿದ್ಯುತ್ ಪ್ರವಾಹದ ಅಗತ್ಯವಿರುವ ಸಂದರ್ಭಗಳಲ್ಲಿ ಇದು ಸಹಾಯಕವಾಗಿದೆ.ಸಮಾಂತರ ಮಂಡಲದಲ್ಲಿನ ಒಟ್ಟು ರೋಧವನ್ನು ಕಡಿಮೆ ಮಾಡಬಹುದು .
17. 2೧,3೧ ಮತ್ತು 6೧ ರೋಧಗಳನ್ನು ಹೊಂದಿರುವ ಮೂರು ರೋಧಕಗಳನ್ನು ಯಾವ ರೀತಿ ಜೋಡಿಸುವುದರಿಂದ ಅವುಗಳ ಸಂಯೋಜನೆಯ ಒಟ್ಟು ರೋಧವು ಅ ) 4೧ ಆ ) 1೧ ಆಗಿರುತ್ತದೆ . ?
2೧,3೧ ಮತ್ತು 6೧ ಎಂಬ ಮೂರು ರೋಧಕಗಳಿವೆ . ಈ ಮುಂದಿನ ಚಿತ್ರವು ಮೂರು ರೋಧಕಗಳ ಜೋಡಣೆಯನ್ನು ತೋರಿಸುತ್ತದೆ . ಇಲ್ಲಿ 3೧ ಮತ್ತು 6೧ ರೋಧಕಗಳನ್ನು ಸಮಾಂತರವಾಗಿ ಜೋಡಿಸಲಾಗಿದೆ . ಆದ್ದರಿಂದ ಒಟ್ಟು ರೋಧವು ,
ಈ 2೧ ರೋಧಕವನ್ನು 2೧ ರೋಧಕದೊಂದಿಗೆ ಸರಣಿಯಲ್ಲಿ ಜೋಡಿಸಿದೆ . ಆದ್ದರಿಂದ ಮಂಡಲದ ಸಮಾನ ರೋಧವು 2೧+ 2೧ = 4೧ ಆದ್ದರಿಂದ ಮಂಡಲದ ಒಟ್ಟು ರೋಧವು 4೧ ಆಗುತ್ತದೆ .
ಆ ) ಈ ಕೆಳಗಿನ ಮಂಡಲ ಚಿತ್ರವು ಮೂರು ರೋಧಕಗಳ ಜೋಡಣೆಯನ್ನು ತೋರಿಸುತ್ತದೆ .
ಎಲ್ಲಾ ರೋಧಕಗಳನ್ನು ಸರಣಿಯಲ್ಲಿ ಜೋಡಿಸಿದೆ.ಆದ್ದರಿಂದ ಮಂಡಲದ ಸಮಾನ ರೋಧವು
ಆದ್ದರಿಂದ ಮಂಡಲದ ಸಮಾನ ರೋಧ = 1೧
ಅಭ್ಯಾಸದ ಪ್ರಶೋತ್ತರಗಳು
10th Class Science Chapter 12 Notes Question Answer Pdf
1. ರೋಧ R ಹೊಂದಿರುವ ಒಂದು ತಂತಿಯನ್ನು ಐದು ಸಮ ಭಾಗಗಳಾಗಿ ಕತ್ತರಿಸಲಾಗಿದೆ . ನಂತರ ಈ ಭಾಗಗಳನ್ನು ಸಮಾನಾಂತರವಾಗಿ ಸಂಪರ್ಕಿಸಲಾಗುತ್ತದೆ.ಈ ಸಂಯೋಜನೆಯ ರೋಧವು R ಆದರೆ RR ” ನ ಅನುಪಾತವು …
d ) 25
2.ಈ ಕೆಳಗಿನ ಯಾವ ಪದಗಳು ಮಂಡಲದಲ್ಲಿ ವಿದ್ಯುತ್ ಸಾಮರ್ಥ್ಯವನ್ನು ಪ್ರತಿನಿಧಿಸುವುದಿಲ್ಲ ?
b ) IR
3.ಒಂದು ವಿದ್ಯುತ್ ಬಲ್ಸ್ ನ್ನು 220V ಮತ್ತು 100W ಎಂದು ನಮೂದಿಸಲಾಗಿದೆ , ಈ ಬಲ್ಬ 110V ನಲ್ಲಿ ಕಾರ್ಯನಿರ್ವಹಿಸಿದರೆ ಅದರಲ್ಲಿ ಬಳಕೆಯಾದ ಸಾಮರ್ಥ್ಯ ಎಷ್ಟು ?
d ) 25W
4. ಸಮಾನವಾದ ಉದ್ದ ಮತ್ತು ವ್ಯಾಸವುಳ್ಳ ಒಂದೇ ರೀತಿಯ ಎರಡು ವಸ್ತುಗಳನ್ನು ಮೊದಲು ಸರಣಿಕ್ರಮದಲ್ಲಿ ನಂತರ ಸಮಾಂತರ ಕ್ರಮದಲ್ಲಿ ಒಂದೇ ವಿಭವಾಂತರಕ್ಕೆ ಅಡ್ಡಲಾಗಿ ಸಂಪರ್ಕಿಸಲಾಗಿದೆ . ಸರಣಿ ಕ್ರಮದಲ್ಲಿ ಮತ್ತು ಸಮಾಂತರ ಕ್ರಮದಲ್ಲಿ ಉತ್ಪತ್ತಿಯಾದ ಶಾಖದ ಅನುಪಾತ .
c ) 4 : 1 5.
5. ಎರಡು ತುದಿಗಳ ನಡುವೆ ವಿಭವಾಂತರವನ್ನು ಅಳತೆಮಾಡಲು ವೋಲ್ಟ್ ಮೀಟರ್ ನ್ನು ಹೇಗೆ ಸಂಪರ್ಕಿಸಬೇಕು ?
ವಿಭವಾಂತರವನ್ನು ಅಳತೆ ಮಾಡಲು ವೋಲ್ಟ್ ಮೀಟರ್ ನ್ನು ಸಮಾಂತರವಾಗಿ ಜೋಡಿಸಬೇಕು .
6. ಒಂದು ತಾಮ್ರದ ತಂತಿಯು 0.5 ಮಿ.ಮಿ ವ್ಯಾಸವನ್ನು ಮತ್ತು 1.6X10 ಮೀ ರೋಧಕತೆಯನ್ನು ಹೊಂದಿದೆ.ಅದರ ರೋಧ 109 ನಷ್ಟಾಗಲು ಅದರ ಉದ್ದ ಎಷ್ಟಿರಬೇಕು ? ತಂತಿಯ ವ್ಯಾಸವನ್ನು ದ್ವಿಗುಣಗೊಳಿಸಿದರೆ ಅದರ ರೋಧವು ಎಷ್ಟು ಬದಲಾಗುತ್ತದೆ . ?
ತಂತಿ ಅಡ್ಡಕೊಯ್ತದ ವಿಸ್ತೀರ್ಣ A = n ( d / 2 ) ²
ವ್ಯಾಸ = 0.5 ಮಿ.ಮಿ = 0.0005 ಮೀಟರ್
ರೋಧ R = 10೧
ಆದ್ದರಿಂದ ನಮಗೆ ಗೊತ್ತಿರುವಂತೆ , R = p 1 / A
I = RA / p ( A = nd² / 4 )
= 10X3.14X ( 0.0005 ) ² / 1.6X10-8 X4
= 10X3.14X25 / 4X1.6
= 122.72m
ಆದ್ದರಿಂದ ತಂತಿಯ ಉದ್ದ 122.72m .
ತಂತಿಯ ವ್ಯಾಸವನ್ನು ದ್ವಿಗುಣಗೊಳಿಸಿದರೆ ಅಂದರೆ ಅದರ ವ್ಯಾಸ = 2X0.5 = 1 ಮಿ.ಮಿ = 0.001 ಮೀ
ರೋಧವು R ‘ ಎಂದು ತೆಗೆದುಕೊಂಡಾಗ
R ‘ = p V / A
1.6 X 10 ” X 122.72 / 3.14(1/2 x10-3 ) 2
= 250×10² = 2.5೧
ಆದ್ದರಿಂದ ತಂತಿ ವ್ಯಾಸವನ್ನು ದ್ವಿಗುಣಗೊಳಿಸಿದರೆ ಅದರ ರೋಧವು 2.5೧ ಆಗುತ್ತದೆ .
7.ಒಂದು ರೋಧಕದ ನಡುವಿನ ವಿಭವಾಂತರ V ಮತ್ತು ಅದಕ್ಕನುಗುಣವಾಗಿ ಅದರಲ್ಲಿ ಪ್ರವಹಿಸುವ ವಿದ್ಯುತ್ ಪ್ರವಾಹಗಳ ವಿವಿಧ ಮೌಲ್ಯಗಳನ್ನು ನೀಡಲಾಗಿದೆ .
V ಮತ್ತು I ಗಳ ನಡುವಿನ ರೇಖಾನಕ್ಷೆಯನ್ನು ರಚಿಸಿ ಈ ರೋಧಕದ ರೋಧವನ್ನು ಕಂಡುಹಿಡಿಯಿರಿ .
ರೇಖಾ ನಕ್ಷೆಯಲ್ಲಿ ಚಿತ್ರಿಸಿರುವಂತೆ , ರೋಧ R ,
ಸ್ಲೋಪ್ 1 / R = BC / AC = 2 / 6.8
R = 6.8 / 2 = 3.4೧ ಆದ್ದರಿಂದ ರೋಧಕದ ರೋಧ 3.4೧ ಆಗಿದೆ .
8. 12V ಬ್ಯಾಟರಿಯನ್ನು ಒಂದು ರೋಧಕದ ಜೊತೆ ಸಂಪರ್ಕಿಸಿದಾಗ ಅದರಲ್ಲಿನ ವಿದ್ಯುತ್ ಪ್ರವಾಹವು 2.5mA ಆಗಿರುತ್ತದೆ.ಆಗ ರೋಧಕದ ರೋಧವನ್ನು ಕಂಡುಹಿಡಿಯಿರಿ ,
ಓಮನ ನಿಯಮದ ಪ್ರಕಾರ ,
R = V / I
V=12ಮತ್ತುI=2.5mA=2.5×10-3A
R=12/2.5×10-3=4.8×10-3೧=4.8೧ ಆಗಿದೆ
9.9V ಬ್ಯಾಟರಿಯನ್ನು 0.2೧,0.3೧,0.4೧,0.5೧ ಮತ್ತು 12೧ ಗಳ ರೋಧಕಗಳೊಂದಿಗೆ ಸರಣಿ ಕ್ರಮದಲ್ಲಿ ಸಂಪರ್ಕಿಸಲಾಗಿದೆ . 12೧ ರೋಧದ ಮೂಲಕ ಪ್ರವಹಿಸುವ ವಿದ್ಯುತ್ ಪ್ರವಾಹ ಎಷ್ಟು ?
ಆದ್ದರಿಂದ 12೧ ರೋಧದ ಮೂಲಕ ಪ್ರವಹಿಸುವ ವಿದ್ಯುತ್ ಪ್ರವಾಹ 0.671A ಆಗಿರುತ್ತದೆ .
10.1762 ರೋಧದ ಎಷ್ಟು ರೋಧಕಗಳನ್ನು ಸಮಾನಾಂತರ ಕ್ರಮದಲ್ಲಿ 220V ವಿದ್ಯುತ್ ಮೂಲಕ್ಕೆ ಸಂಯೋಜಿಸಿದಾಗ 5A ವಿದ್ಯುತ್ ಪ್ರವಾಹ ಉಂಟಾಗುತ್ತದೆ . ?
176೧ ರೋಧದx ರೋಧಕಗಳನ್ನು ಸಮಾನಾಂತರ ಕ್ರಮದಲ್ಲಿ ಜೋಡಿಸಿದಾಗ , ಸಮಾನ ರೋಧವು ಓಮನ ನಿಯಮದ ಪ್ರಕಾರ
11. ನೀವುಗಳು 62 ನ ಮೂರು ರೋಧಕಗಲನ್ನು ಹೇಗೆ ಸಂಯೋಜಿಸಿ ಅದರ ಸಂಯೋಜನೆಯ ರೋಧವು i ) 9 ೧ ii ) 4೧ ಆಗಿರುವಂತೆ ಮಾಡುವಿರಿ ?
ರೋಧಕಗಳನ್ನು ಸರಣಿಯಲ್ಲಿ ಜೋಡಿಸಿದಾಗ ಒಟ್ಟು ಸಮಾನ ರೋಧವು 6೧+ 6೧+ 6೧ = 18೧ ಆಗುತ್ತದೆ . ಆದರೆ ಇದು ನಮಗೆ ಅಗತ್ಯವಿಲ್ಲ , ರೋಧಕಗಳನ್ನು ಸಮಾಂತರವಾಗಿ ಜೋಡಿಸಿದಾಗ ಒಟ್ಟು ಸಮಾನ ರೋಧವು 6 / 2 = 3೧ ಆಗುತ್ತದೆ . ಇದು ಕೂಡಾ ನಮಗೆ ಅಗತ್ಯವಿಲ್ಲ.ಆದ್ದರಿಂದ ನಾವು ಎರಡು ರೋಧಗಳನ್ನು ಸರಣಿಯಲ್ಲಿ ಅಥವಾ ಸಮಾಂತರವಾಗಿ ಜೋಡಿಸಬೇಕು .
12 , 220V ವಿದ್ಯುತ್ ಸರಬರಾಜು ಮಾರ್ಗದಲ್ಲಿ ಬಳಸಲಾಗುವ ಹಲವಾರು ಎಲೆಕ್ನಿಕ್ ಬಲ್ಬಗಳು 10W ಸಾಮರ್ಥ್ಯವನ್ನು ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದೆ . 220V ಸರಬರಾಜು ಮಾರ್ಗದಲ್ಲಿ ಗರಿಷ್ಠ ವಿತರಣಾ ವಿದ್ಯುತ್ ಪ್ರವಾಹ 5A ಇದ್ದಾಗ ಅದರ ಎರಡು ತುದಿಗಳಲ್ಲಿ ಸಮಾಂತರವಾಗಿ ಎಷ್ಟು ಎಲೆಕ್ನಿಕ್ ಬಲ್ಟ್ ಗಳನ್ನು ಸಂಯೋಜಿಸಬೇಕು ?
ಎಲೆಕ್ಟ್ರಿಕ್ ಬಲ್ಪ್ ನ ರೋಧ R1= ?
ವಿಭವಾಂತರ V = 220v
13.ಒಂದು ವಿದ್ಯುತ್ ಓವನ್ ನ ಬಿಸಿ ತಟ್ಟೆಯನ್ನು 220V ವಿದ್ಯುತ್ ತಂತಿಗೆ ಜೋಡಿಸಿದೆ . ಅದು A ಮತ್ತು B ಎಂಬ ಎರಡು ಸುರುಳಿ ರೋಧಕಗಳನ್ನು ಹೊಂದಿದ್ದು ಪ್ರತಿ ಸುರುಳಿಯ ರೋಧವು 24 ಆಗಿರುತ್ತದೆ . ಇವುಗಳನ್ನು ಪ್ರತ್ಯೇಕವಾಗಿ ಸರಣಿಕ್ರಮದಲ್ಲಿ ಅಥವಾ ಸಮಾಂತರ ಕ್ರಮದಲ್ಲಿ ಬಳಸಬಹುದು , ಈ ಮೇಲಿನ ಮೂರು ಪ್ರಕರಣಗಳಲ್ಲಿ ಪ್ರವಹಿಸಿದ ವಿದ್ಯುತ್ ಪ್ರವಾಹ ಎಷ್ಟು ?
ಆದ್ದರಿಂದ ಸುರುಳಿಗಳನ್ನು ಸಮಾಂತರವಾಗಿ ಬಳಸಿದಾಗ ಪ್ರವಹಿಸುವ ವಿದ್ಯುತ್ 18.33A ಆಗಿರುತ್ತದೆ .
14. ಕೆಳಗಿನ ಪ್ರತಿಯೊಂದು ವಿದ್ಯುತ್ ಮಂಡಲದಲ್ಲಿ 2೧ ನ ರೋಧಕದಲ್ಲಿ ವ್ಯಯವಾಗುವ ಸಾಮರ್ಥ್ಯವನ್ನು ಹೋಲಿಕೆ ಮಾಡಿರಿ . i ) 1೧ಮತ್ತು 2೧ ರೋಧಕಗಳನ್ನು 6V ಬ್ಯಾಟರಿಯೊಂದಿಗೆ ಸರಣಿಕ್ರಮದಲ್ಲಿ ಜೋಡಿಸಿದಾಗ , ಮತ್ತು ii ) 1೧ ಮತ್ತು 2೧ ರೋಧಕಗಳನ್ನು 4V ಬ್ಯಾಟರಿಯೊಂದಿಗೆ ಸಮಾಂತರ ಕ್ರಮದಲ್ಲಿ ಜೋಡಿಸಿದಾಗ
15.ಎರಡು ದೀಪಗಳು 220V ನಲ್ಲಿ 100W ಮತ್ತು ಮತ್ತೊಂದು 220V ನಲ್ಲಿ 60W ದರವನ್ನು ಹೊಂದಿದ್ದು , ಇವುಗಳನ್ನು ವಿದ್ಯುತ್ ನ ಮೂಲಕ್ಕೆ ಸಮಾಂತರವಾಗಿ ಜೋಡಿಸಲಾಗಿದೆ . ಸರಬರಾಜಾಗುತ್ತಿರುವ ವೋಲ್ವೇಜ್ 220V ಆದಾಗ ಆ ತಂತಿಗಳಲ್ಲಿನ ವಿದ್ಯುತ್ ಪ್ರವಾಹ ಎಷ್ಟು?
ಎರಡು ದೀಪಗಳನ್ನು ಸಮಾಂತರವಾಗಿ ಜೋಡಿಸಲಾಗಿದೆ.ಆದ್ದರಿಂದ ಪ್ರತಿಯೊಂದು ದೀಪದ ವಿಭವಾಂತರ 220V ಆಗಿದೆ . 100W ನ ದೀಪದಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹವು
P – VI , I = P / V , 60 / 220A .
ಆದ್ದರಿಂದ ತಂತಿಯಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹವು = 100 / 220 + 60 / 220 = 0.727A .
16.250W ಟಿ.ವಿ ಯು ಒಂದು ಗಂಟೆ ಅಥವಾ 1200W ಟೋಸ್ಟರ್ 10 ನಿಮಿಷಗಳವರೆಗೆ ಬಳಸಿದರೆ ಯಾವುದರಲ್ಲಿ ಅತೀ ಹೆಚ್ಚು ಶಕ್ತಿಯು ಬಳಕೆಯಾಗುತ್ತದೆ ?
ಟಿ.ವಿ ಯು ಬಳಸಿದ ಶಕ್ತಿಯನ್ನು ಈ ಕೆಳಗಿನ ಸೂತ್ರದಿಂದ ಕಂಡುಹಿಡಿಯಬಹುದು .
H = Pt , P ಅಂದರೆ ಟಿ.ವಿ ಯ ಸಾಮರ್ಥ್ಯ , t = ಸಮಯ
250W ನ ಟಿ.ವಿ ಯು ಒಂದು ಗಂಟೆಯಲ್ಲಿ ಬಳಸಿದ ಶಕ್ತಿ = 250 x3600 = 9×105 ) .
1200W ನ ಟೋಸ್ಟರ್ 10 ನಿಮಿಷದಲ್ಲಿ ಬಳಸಿದ ಶಕ್ತಿ = 1200 x600 = 7.2×105 ) .
ಆದ್ದರಿಂದ 250W ನ ಟಿ.ವಿ ಯು ಒಂದು ಗಂಟೆಯಲ್ಲಿ ಬಳಸಿದ ಶಕ್ತಿಯು 1200W ನ ಟೋಸ್ಟರ್ 10 ನಿಮಿಷದಲ್ಲಿ ಬಳಸಿದ ಶಕ್ತಿಗಿಂತ ಹೆಚ್ಚು .
17. 8೧ ರೋಧವನ್ನು ಹೊಂದಿರುವ ಇಲೆಕ್ಟ್ರಿಕ್ ಹೀಟರ್ ವಿದ್ಯುತ್ ಮೈನ್ ನಿಂದ 2 ಗಂಟೆಗಳವರೆಗೆ 15A ವಿದ್ಯುತ್ ಪ್ರವಾಹವನ್ನು ಪಡೆಯುತ್ತದೆ . ಇಲೆಕ್ಟ್ರಿಕ್ ಹೀಟರ್ ನಲ್ಲಿ ಉತ್ಪತ್ತಿಯಾದ ಉಷ್ಟದ ದರವನ್ನು ಕಂಡುಹಿಡಿಯಿರಿ .
ಒಂದು ಉಪಕರಣದಲ್ಲಿ ಉತ್ಪತ್ತಿಯಾದ ಉಷ್ಣದ ದರವನ್ನು P = IFR ಎಂಬ ಸೂತ್ರದಿಂದ ಕಂಡುಹಿಡಿಯಬಹುದು.
ಇಲ್ಲಿ ಇಲೆಕ್ಟ್ರಿಕ್ ಹೀಟರ್ ನ ರೋಧ R = 8೧
ಬಳಸಿದ ವಿದ್ಯುತ್ ಪ್ರವಾಹ । = 15A
P = ( 15 )2 2×8 = 1800J / s
ಆದ್ದರಿಂದ ಇಲೆಕ್ಟ್ರಿಕ್ ಹೀಟರ್ ನಲ್ಲಿ ಉತ್ಪತ್ತಿಯಾದ ಉಷ್ಣದ ದರ 1800 ) / s .
18.ಕೆಳಗಿನವುಗಳನ್ನು ವಿವರಿಸಿ ,
a ) ವಿದ್ಯುತ್ ದೀಪಗಳ ತಂತುಗಳಲ್ಲಿ ಟಂಗ್ ಸ್ಟನ್ ಅನ್ನು ಬಹುತೇಕವಾಗಿ ಬಳಸಲಾಗುತ್ತದೆ.ಏಕೆ ?
ಟಂಗ್ ಸ್ಟನ್ ನ ಕರಗುವ ಬಿಂದು ತುಂಬಾ ಅಧಿಕವಾಗಿದೆ ಮತ್ತು ಅದು ಅಧಿಕ ರೋಧವನ್ನು ಹೊಂದಿದ್ದು ಉಷ್ಣ ನೀಡಿದಾಗ ಸುಲಭವಾಗಿ ಕರಗುವುದಿಲ್ಲ .
b ) ಬ್ರೆಡ್ ಟೋಸ್ಟರ್ ಮತ್ತು ಇಲೆಕ್ಟ್ರಿಕ್ ಇಸ್ತ್ರಿಪೆಟ್ಟಿಗೆಯಂತಹ ವಿದ್ಯುತ್ ತಾಪನ ಸಾಧನಗಳಲ್ಲಿನ ವಾಹಕಗಳನ್ನು ಶುದ್ಧಲೋಹಕ್ಕಿಂತಲೂ ಮಿಶ್ರಲೋಹಗಳಿಂದ ತಯಾರಿಸಿರುತ್ತಾರೆ ಏಕೆ ?
ಏಕೆಂದರೆ ಮಿಶ್ರಲೋಹಗಳ ರೋಧಶೀಲತೆಯು ಲೋಹಗಳಿಗಿಂತ ಹೆಚ್ಚಾಗಿರುತ್ತದೆ.ಇದರಿಂದ ಅಧಿಕ ಉಷ್ಣ ಉತ್ಪತ್ತಿಯಾಗುತ್ತದೆ .
c ) ಗೃಹಬಳಕೆಯ ವಿದ್ಯುತ್ ಮಂಡಲಗಳ ಜೋಡಣೆಯಲ್ಲಿ ಸರಣೀ ಕ್ರಮ ವ್ಯವಸ್ಥೆಯನ್ನು ಬಳಸಲಾಗುವುದಿಲ್ಲ ಏಕೆ ?
ಸರಣಿ ಕ್ರಮದಲ್ಲಿ ಜೋಡಿಸಿದ ಮಂಡಲದಲ್ಲಿ ವೊಲೇಜ್ ವಿಭಜನೆಯಾಗುತ್ತದೆ.ಪ್ರತಿ ಉಪಕರಣ ಕಡಿಮೆ ವೋಲ್ವೇಜ್ ಪಡೆಯುವ ಕಾರಣ ವಿದ್ಯುತ್ ಪ್ರವಾಹವು ಕಡಿಮೆಯಾಗುತ್ತಾ ಹೋಗಿ ಕೊನೆಗೆ ಉಪಕರಣ ಬಿಸಿಯಾಗುತ್ತದೆ ಮತ್ತು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.ಆದ್ದರಿಂದ ಗೃಹ ಬಳಕೆಯ ವಿದ್ಯುತ ಮಂಡಲದಲ್ಲಿ ಸರಣಿ ಕ್ರಮವನ್ನು ಉಪಯೋಗಿಸುವುದಿಲ್ಲ .
d ) ತಂತಿಯ ರೋಧವು ಅದರ ಅಡ್ಡಕೊಯ್ಯದ ವಿಸ್ತೀರ್ಣದೊಂದಿಗೆ ಹೇಗೆ ಬದಲಾಗುತ್ತದೆ ?
ಅಡ್ಡಕೊಯ್ತದ ವಿಸ್ತೀರ್ಣ ಹೆಚ್ಚಾದಂತ ರೋಧವು ಕಡಿಮೆಯಾಗುತ್ತದೆ . ಮತ್ತು ಅಡ್ಡಕೊಯ್ದದ ವಿಸ್ತೀರ್ಣವು ಕಡಿಮೆಯಾದಂತೆ ರೋಧವು ಅಧಿಕವಾಗುತ್ತದೆ .
e ) ವಿದ್ಯುತ್ ಪ್ರಸರಣದಲ್ಲಿ ಸಾಮಾನ್ಯವಾಗಿ ತಾಮ್ರ ಮತ್ತು ಅಲ್ಯುಮಿನಿಯಂ ತಂತಿಗಳನ್ನು ಬಳಸಲಾಗುತ್ತದೆ ಏಕೆ ?
ತಾಮ್ರ ಮತ್ತು ಅಲ್ಯುಮಿನಿಯಂ ಉತ್ತಮ ವಿದ್ಯುತ್ ವಾಹಕಗಳು ಮತ್ತು ಅವುಗಳ ರೋಧವು ಕಡಿಮೆ ಇರುತ್ತದೆ .
FAQ
ವಿದ್ಯುತ್ ಪ್ರವಾಹದ ಏಕಮಾನ ಆಂಪೀರ್ ( A ) . ಒಂದು ಆಂಪೀರ್ ಎಂದರೆ ಒಂದು ಸೆಕೆಂಡಿನಲ್ಲಿ ಒಂದು ಕೂಲಮ್ ಆವೇಶದ ಪ್ರವಾಹವಾಗಿದೆ .
ವಿದ್ಯುತ್ ಪ್ರವಾಹದ ಏಕಮಾನ ಆಂಪೀರ್ ( A ) . ಒಂದು ಆಂಪೀರ್ ಎಂದರೆ ಒಂದು ಸೆಕೆಂಡಿನಲ್ಲಿ ಒಂದು ಕೂಲಮ್ ಆವೇಶದ ಪ್ರವಾಹವಾಗಿದೆ .
ಇತರೆ ವಿಷಯಗಳು:
10th Standard Science 1st Lesson Notes
10th Standard Science Chapter 2 Notes
10ನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf
10ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf