ಬೊಜ್ಜು / ತೂಕ ಕಡಿಮೆ ಮಾಡಿಕೊಳ್ಳುವ ವಿಧಾನಗಳು, Weight Loss Tips in Kannada Hotte Bojju Karagisuva Tips Kannada Fast Loss Weight at Home in 10 Days Fat Loss Tips in Kannada Stomach Weight Loss Tips in Kannada Sanna Agalu Tips Kannada
Weight Loss Tips in Kannada
ತೂಕ ಹೆಚ್ಚಾಗುವುದು ಇತೀಚೆಗಿನ ದಿನಗಳಲ್ಲಿ ಅತಿದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ. ತೂಕ ಕಡಿಮೆ ಮಾಡಿಕೊಳ್ಳಲು ಹಲವಾರು ದಾರಿಗಳು ಇವೆ.
ತೂಕ ಕಮ್ಮಿ ಮಾಡಿಕೊಳ್ಳಲು ಮನೆಯಲ್ಲಿಯೆ ಹಲವು ದಾರಿಗಳಿವೆ ಇವುಗಳಿಂದ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ತೂಕವನ್ನು ಇಳಿಸಿಕೋಳ್ಳಬಹುದಾಗಿದೆ.
Stomach Weight Loss Tips in Kannada at Home
ಲಿಂಬೆ ಹಣ್ಣು ಹಾಗೂ ಲೋಳೆಸರ
ಒಂದು ಲೋಳೆಸರದ ಕೋಡನ್ನು ಮುರಿದು ಮಧ್ಯಕ್ಕೆ ಉದ್ದನಾಗಿ ಸೀಳಿ. ಇದನ್ನು ಲಿಂಬೆ ಹಿಂಡಿದಂತೆ ಹಿಂಡಿ ರಸ ತೆಗೆಯಿರಿ. ಇಲ್ಲದಿದ್ದರೆ ಸಿಪ್ಪೆ ನಿವಾರಿಸಿದ ಬಳಿಕ ಲಿಂಬೆ ಹಿಸುಕುವ ಉಪಕರಣದಿಂದಲೂ ರಸ ತೆಗೆಯಬಹುದು. ಇನ್ನು ಸಮಪ್ರಮಾಣದಲ್ಲಿ ಲಿಂಬೆರಸವನ್ನು ಸೇರಿಸಿ. ಸಾಕಷ್ಟು ನೀರು ಮತ್ತು ಕೊಂಚ ಸಕ್ಕರೆ ಅಥವಾ ಬೆಲ್ಲ (ರುಚಿಗೆ ಮಾತ್ರ) ಸೇರಿಸಿ ಎರಡರಿಂದ ಮೂರು ನಿಮಿಷ ಕಲಕಿ ನಿಯಮಿತವಾಗಿ ಕುಡಿಯಿರಿ. ಇದು ಸ್ಥೂಲಕಾಯದ ವ್ಯಕ್ತಿಗಳಿಗೆ ಸೂಕ್ತವಾದ ವಿಧಾನವಾಗಿದೆ. ಕಾರಣ ತೂಕ ಇಳಿಯಲು ಸಾಧ್ಯವಾಗುತ್ತದೆ
ಹೊಟ್ಟೆಯ ಬೊಜ್ಜು ಕರಗಿಸಲು ಮನೆ ಮದ್ದು
ಲೋಳೆಸರದ ಜ್ಯೂಸ್
ಲೋಳೆಸರದ ಜ್ಯೂಸ್ ಬೆಳಿಗ್ಗೆ ಎದ್ದ ತಕ್ಷಣ ಅರ್ಧ ಕಪ್ ಸೇವಿಸಿ ಮತ್ತು ದಿನದ ಮೂರೂ ಹೊತ್ತಿನ ಊಟಕ್ಕೂ ಹದಿನೈದು ನಿಮಿಷ ಮೊದಲು ಸೇವಿಸಿ. ಸುಮಾರು ಎರಡು ವಾರಗಳವರೆಗೆ ಈ ವಿಧಾನವನ್ನು ಅನುಸರಿಸಿ.
ನೆನಪಿಡಿ : ಫ್ರಿಜ್ಜಿನಲ್ಲಿಟ್ಟ ಲೋಳೆಸರ ಕೊಂಚ ಕಹಿಯಾಗುವುದರಿಂದ ಪ್ರತಿದಿನ ಹೊಸತಾದ ಕೋಡನ್ನು ಮುರಿದು ಒಂದು ಚಮಚ ತಿರುಳನ್ನು ಚಮಚದಲ್ಲಿ ಕೆರೆದು ಉಪಯೋಗಿಸಬಹುದು.
ಹಸಿ ಪಪ್ಪಾಯಿ
ಪಪ್ಪಾಯಿಯನ್ನು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಇತರ ಹಣ್ಣುಗಳೊಂದಿಗೆ ಬೆಳಿಗ್ಗಿನ ಉಪಹಾರಕ್ಕೆ ಸೇವಿಸಬಹುದು. ಇದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು.
ಪಪ್ಪಾಯಿಯು ಬೊಜ್ಜಿನ ಸಮಸ್ಯೆಗೆ ರಾಮಬಾಣವಾಗಿದೆ. ಗರ್ಭಿಣಿಯರಿಗೆ ಇದು ನಿಷಿದ್ಧ.
ಒಂದು ವೇಳೆ ನಿಮಗೆ ಪಪ್ಪಾಯ ಹಣ್ಣು ಇಷ್ಟವಾಗಲ್ಲ ಎಂದಾದರೆ, ಪಪ್ಪಾಯಿಯ ಸ್ಮೂಥಿ ಮಾಡಿಕೊಂಡು ಕುಡಿಯಿರಿ. ಕೊಬ್ಬುರಹಿತವಾಗಿರುವ ಹಾಲನ್ನು ಬಳಸಿಕೊಂಡು ಪಪ್ಪಾಯಿ ಸ್ಮೂಥಿಯನ್ನು ಬಳಸಬಹುದು.
ಸ್ಮೂಥಿಯು ಹಸಿವನ್ನು ನಿಯಂತ್ರಿಸಿ ದೇಹದಲ್ಲಿ ಹೆಚ್ಚುವರಿ ಕೊಬ್ಬು ಉತ್ಪತ್ತಿಯಾಗದಂತೆ ನೋಡಿಕೊಳ್ಳುತ್ತದೆ.
ಸಣ್ಣ ಆಗುವುದು ಹೇಗೆ
ದಿನಕ್ಕೆರಡು ಲೋಟ ಮೂಸಂಬಿ ಜ್ಯೂಸ್ ಕುಡಿಯಿರಿ
ದಿನಕ್ಕೆರಡು ಲೋಟ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಪದೇ ಪದೇ ಹಸಿವಾಗುವುದು ತಪ್ಪುತ್ತದೆ. ಮೂಸಂಬಿಯಲ್ಲಿರುವ ಸಿಟ್ರಿಕ್ ಆಮ್ಲ ಇದಕ್ಕೆ ಕಾರಣ.
ಇದರಿಂದ ನಡುನಡುವೆ ಕಂಡದನ್ನೆಲ್ಲಾ ತಿನ್ನುವ ಬಯಕೆ ಕಡಿಮೆಯಾಗಿ ತನ್ಮೂಲಕ ತೂಕ ಹೆಚ್ಚುವುದು ತಪ್ಪಿದಂತಾಗುತ್ತದೆ. ಲಿಂಬೆಯಂತೆಯೇ ಮೂಸಂಬಿಯಲ್ಲಿಯೂ ಕ್ಯಾಲೋರಿಗಳು ಅತಿ ಕಡಿಮೆ ಪ್ರಮಾಣದಲ್ಲಿವೆ.
ಇಂದು ಲೋಟದಲ್ಲಿ ಕೇವಲ ಐವತ್ತು ಕ್ಯಾಲೋರಿಗಳಿವೆ. ಆದರೆ ಈ ದ್ರವವನ್ನು ಕರಗಿಸಲು ಹೆಚ್ಚು ಕೊಬ್ಬು ಬೇಕಾಗುತ್ತದೆ.
ಪರಿಣಾಮವಾಗಿ ಕುಡಿದಕ್ಕಿಂತಲೂ ಹೆಚ್ಚಿನ ಕ್ಯಾಲೋರಿಗಳು ಖರ್ಚಾಗುವ ಕಾರಣ ತೂಕ ಇಳಿಯಲು ಸಾಧ್ಯವಾಗುತ್ತದೆ.
Hotte Bojju Karagisuva Tips Kannada
ಮೂಸಂಬಿ ಜ್ಯೂಸ್
ನಮ್ಮ ಊಟದಲ್ಲಿ ಕರಗುವ ಮತ್ತು ಕರಗದ ನಾರು ಎರಡೂ ಇರಬೇಕು. ಆಗಲೇ ನಮ್ಮ ಆಹಾರ ಸುಲಭವಾಗಿ ಜೀರ್ಣಗೊಂದು ವಿಸರ್ಜನೆ ಸುಲಲಿತವಾಗುತ್ತದೆ.
ಆದ್ದರಿಂದ ಪ್ರತಿಬಾರಿ ನಿಮ್ಮ ನಿತ್ಯದ ವ್ಯಾಯಾಮದ ಮುನ್ನ ಕೇವಲ ಇಪ್ಪತ್ತು ಮಿಲೀ ಮೂಸಂಬಿ ಜ್ಯೂಸ್ ಕುಡಿದರೂ ನಿಮ್ಮ ನಿತ್ಯದ ಚಟುವಟಿಕೆಗಳು ಆಯಾಸರಹಿತವಾಗಿ ನೆರವೇರುತ್ತವೆ.
ಇದರ ಉತ್ತಮ ಪರಿಣಾಮಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ಮೂಸಂಬಿ ರಸವನ್ನು ಕೊಂಚ ಜೇನುತುಪ್ಪ ಸೇರಿಸಿ ಬೆಳಿಗ್ಗೆದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಕುಡಿಯುವ ಮೂಲಕ ಅತ್ಯುತ್ತಮ ಪರಿಣಾಮ ಪಡೆಯಬಹುದು.
ರಾತ್ರಿ ಮಲಗುವ ಮುನ್ನ ಇನ್ನೊಂದು ಲೋಟ ಕುಡಿಯುವುದರಿಂದ ತೂಕವಿಳಿಸುವ ಪ್ರಯತ್ನಗಳು ಅತಿ ಹೆಚ್ಚಿನ ಪ್ರತಿಫಲ ನೀಡುತ್ತವೆ.
ವೀಳ್ಯದೆಲೆ ಜಗಿಯಿರಿ
ವೀಳ್ಯದೆಲೆಯನ್ನು ಜಗಿದಾಗ ಬಾಯಿಯಲ್ಲಿ ಜೊಲ್ಲು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದೇ ವೇಳೆಯಲ್ಲಿ ಜಠರಕ್ಕೆ ಸಿದ್ಧವಾಗಿರಲು ಮೆದುಳಿನಿಂದ ಸಂದೇಶ ಹೋಗುತ್ತದೆ. ಪರಿಣಾಮವಾಗಿ ಹೊಟ್ಟೆಹಸಿವು ಪ್ರಾರಂಭವಾಗುತ್ತದೆ.
ಈ ದ್ರವವನ್ನು ನುಂಗಿದ ಬಳಿಕ ಹೊಟ್ಟೆಯಲ್ಲಿ ಈ ಮೊದಲು ಜೀರ್ಣಗೊಂಡಿದ್ದ ಆಹಾರದಲ್ಲಿದ್ದ ವಿಷಕಾರಿ ವಸ್ತುಗಳನ್ನು ಈ ದ್ರವ ಎದುರಿಸಿ ಹಾನಿಯಾಗುವುದನ್ನು ತಪ್ಪಿಸುತ್ತದೆ. ಜೊತೆಗೇ. ಆಯುರ್ವೇದದಲ್ಲಿ ವಿವರಿಸಿರುವಂತೆ ಮೇಧ ಧಾತುವನ್ನು ಕರಗಿಸುತ್ತದೆ. ಈ ಮೇಧ ಧಾತು ಎಂದರೆ ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು. ಕೊಬ್ಬು ಕರಗಿದಂತೆ ನಿಧಾನವಾಗಿ ಹೆಚ್ಚಿನ ತೂಕವೂ ಕಡಿಮೆಯಾಗುತ್ತಾ ಬರುತ್ತದೆ.
ಜೇನು ತುಪ್ಪ ಬ್ರೆಡ್‌ಗೆ ಹಚ್ಚಿ ಸೇವಿಸಿ
ರಾತ್ರಿಯೂಟದಲ್ಲಿ ಅಧಿಕ ಕ್ಯಾಲೋರಿಗಳ ಆಹಾರದ ಬದಲಿಗೆ ಸರಳವಾದ ಈ ಹೊಸರುಚಿ ಸವಿಯಿರಿ. ಗೋಧಿಯ ಬ್ರೆಡ್ ನ ಎರಡು ತುಣುಕುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ತುಣುಕಿನ ಒಂದು ಬದಿಗೆ ಮಾತ್ರ ಒಂದು ಚಮಚದಷ್ಟು ಜೇನು ಸವರಿ ಒಂದರ ಮೇಲೊಂದಿಟ್ಟು ಸೇವಿಸಿ. ಬಳಿಕ ಸಾಕಷ್ಟು ನೀರು ಕುಡಿಯಿರಿ. ಬೇರೆ ಯಾವುದೇ ಆಹಾರವನ್ನು ಸೇವಿಸದಿರಿ.
ಮಲಗುವ ಮುನ್ನ ಕೊಂಚ ದೂರ ಅಡ್ಡಾಡಿ ಬಳಿಕ ಪವಡಿಸಿ. ಇದರಿಂದ ರಾತ್ರಿಯ ಅನೈಚ್ಛಿಕ ಕಾರ್ಯಗಳಲ್ಲಿ ದೇಹಕ್ಕೆ ಅನಿವಾರ್ಯವಾಗಿ ಕರಗಿದ್ದ ಕೊಬ್ಬನ್ನು ಬಳಸಬೇಕಾಗಿ ಬರುವುದರಿಂದ ತೂಕ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.
Weight Loss in 7 Days in Kannada
ಅಡುಗೆಗಳಲ್ಲಿ ಎಣ್ಣೆ ಬದಲು ಜೇನು ಬಳಸಿ..!
ಎಣ್ಣೆ ಬಳಸುವ ಕೆಲವು ಫ್ರೈ ಗಳಿಗೂ ಜೇನು ಬಳಸಬಹುದು,ಪ್ರಯತ್ನಿಸಿ ನೋಡಿ. ಸಕ್ಕರೆ ಬಳಸುತ್ತಿದ್ದಲ್ಲೆಲ್ಲಾ ಸಕ್ಕರೆಯ ಪ್ರಮಾಣದ ಅರ್ಧದಷ್ಟು ಜೇನು ಬಳಸಿದರೂ ಸಾಕು, ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ.
ತನ್ಮೂಲಕ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ಒಂದು ಲೋಟ ಬಿಸಿಹಾಲಿಗೆ ಒಂದು ಚಮಚ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಆರೋಗ್ಯ ಉತ್ತಮವಾಗುವ ಜೊತೆಗೇ ತೂಕ ಇಳಿಯಲೂ ನೆರವಾಗುತ್ತದೆ.
ಚಹಾಕ್ಕೆ ಎರಡು ಚಮಚ ಜೇನು ತುಪ್ಪ ಹಾಕಿ ಸೇವಿಸಿ
ಚಹಾದೊಂದಿಗೆ ಸೇವಿಸಿ ಹಾಲಿಲ್ಲದ ಟೀ ಸೇವಿಸುವವರು ಕೊಂಚ ಲಿಂಬೆರಸವನ್ನು ಸೇರಿಸಿಕೊಳ್ಳುತ್ತಾರೆ. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಿ ನಿಮ್ಮ ದಿನದ ಎರಡು ಅಥವಾ ಮೂರು ಹೊತ್ತಿನ ಚಹಾ ಕಾಫಿಗಳ ಬದಲಿಗೆ ಈ ಆರೋಗ್ಯಕರ ಪೇಯವನ್ನು ಸೇವಿಸಿ. ಇದು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ತೂಕವಿಳಿಸಲೂ ನೆರವಾಗುತ್ತದೆ.
ಬಾಳೆಹಣ್ಣಿನ ಶೇಕ್
ಒಂದು ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಇದಕ್ಕೆ ಕೊಂಚ ಐಸ್ ತುಂಡುಗಳು ಮತ್ತು ಅರ್ಧ ಕಪ್ ನೀರು ಹಾಕಿ ನೊರೆನೊರೆಯಾಗಿಸಿ ಕಡೆಯಿರಿ. ಈ ನೀರನ್ನು ತಣ್ಣಗಿರುವಂತೆಯೇ ಕುಡಿಯಿರಿ.
ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಲವಣಗಳು ನೀರಿನಲ್ಲಿ ಕರಗುತ್ತವೆ. ಈ ಪೇಯವನ್ನು ಕುಡಿಯುವ ಮೂಲಕ ಹಾಲು ಕುಡಿಯದೇ ಇದ್ದು ಹಾಲಿನ ಮೂಲಕ ಪಡೆಯಬಹುದಾದ ಪೋಷಕಾಂಶಗಳನ್ನು ಪಡೆದೂ ಕೊಬ್ಬಿಲ್ಲದೇ ಇರುವ ಕಾರಣ ತೂಕ ಇಳಿಸುವ ಪ್ರಕ್ರಿಯೆಗೆ ಹೆಚ್ಚಿನ ಬೆಂಬಲ ದೊರಕುತ್ತದೆ.
ಅರಿಶಿನ, ಲಿಂಬೆ ಬೆರೆಸಿದ ಟೀ
ಒಂದು ಕಪ್ ನೀರಿನಲ್ಲಿ ಅರ್ಧ ಟೀ ಚಮಚ ಅರಿಶಿನ, ಕೊಂಚ ಟೀಪುಡಿ, ಚಿಟಿಕೆಯಷ್ಟು ಚೆಕ್ಕೆಯ ಪುಡಿ ಬೆರೆಸಿ ಕುದಿಸಿ. ಸುಮಾರು ಎರಡು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ ತಣಿಸಿ. ಸುಮಾರು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಅರ್ಧ ಲಿಂಬೆಯ ರಸವನ್ನು ಬೆರೆಸಿ ತಕ್ಷಣ ಕುಡಿಯಿರಿ. ಈ ಟೀ ಯಲ್ಲಿ ಹೆಚ್ಚಿನ ಪ್ರಮಾಣದ ಫ್ಲೇವನಾಯ್ಡುಗಳಿದ್ದು ತೂಕ ಇಳಿಸಲು ನೆರವಾಗುತ್ತದೆ ಹಾಗೂ ಅರಿಶಿನದ ಬ್ಯಾಕ್ಟೀರಿಯಾನಿವಾರಕ ಗುಣ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. …..
ತುಳಸಿ ಎಲೆ ಮತ್ತು ಸೌತೆಕಾಯಿಯ ಪಾನಕ ಮಾಡಿ ಕುಡಿಯಿರಿ
ತುಳಸಿ ಮತ್ತು ಸೌತೆಕಾಯಿಯನ್ನು ಬೆರೆಸಿದ ನೀರು ಕುಡಿದರೆ ಇದು ನಾಲಿಗೆಗೆ ಚುರುಗುಟ್ಟಿಸುವ ರುಚಿಯನ್ನು ನೀಡುವ ಜೊತೆಗೇ ತುಳಸಿ ಮತ್ತು ಸೌತೆ ಎರಡರ ಆರೋಗ್ಯಕರ ಪ್ರಯೋಜನವನ್ನೂ ಪಡೆಯಬಹುದು. ಇದಕ್ಕಾಗಿ ಒಂದು ಕಪ್ ಸಕ್ಕರೆಯನ್ನು ಕೊಂಚ ನೀರಿನಲ್ಲಿ ಬೆರೆಸಿ ಬಿಸಿಮಾಡಿ. ಇದಕ್ಕೆ ಕೆಲವು ಲಿಂಬೆಯ ಹನಿಗಳನ್ನು ಸೇರಿಸಿ.
ಸಕ್ಕರೆ ಕರಗಿದ ಬಳಿಕ ಉರಿ ಆರಿಸಿ ಅರ್ಧ ಸೌತೆಕಾಯಿಯ ತುಂಡುಗಳು ಮತ್ತು ಕೆಲವು ತುಳಸಿ ಎಲೆಗಳನ್ನು ಸೇರಿಸಿ. ತಣಿದ ಬಳಿಕ ಈ ಮಿಶ್ರಣವನ್ನು ಒಂದು ದೊಡ್ಡ ಬಾಟಲಿ ನೀರಿಗೆ ಬೆರೆಸಿ ಫ್ರಿಜ್ಜಿನಲ್ಲಿ ಒಂದು ಘಂಟೆ ಇಡಿ. ಬಳಿಕ ಇಡಿಯ ದಿನ ಬಾಯಾರಿಕೆಯಾದಾಗಲೆಲ್ಲಾ ಐಸ್ ನೊಂದಿಗೆ ಅಥವಾ ಇಲ್ಲದೇ ಕೊಂಚಕೊಂಚವಾಗಿ ಸೇವಿಸುತ್ತಾ ಇರಿ.
ಮೆಂತ್ಯೆಯನ್ನು ಆಹಾರದಲ್ಲಿ ಹೆಚ್ಚೆಚ್ಚು ಬಳಸು
ಮೆಂತ್ಯೆಯನ್ನು ಆಹಾರದಲ್ಲಿ ಹೆಚ್ಚೆಚ್ಚು ಬಳಸುವುದರಿಂದ ಸೊಂಟದ ಕೊಬ್ಬನ್ನು ಕರಗಿಸಬಹುದು. ಸ್ವಲ್ಪ ಮೆಂತ್ಯೆ ಕಾಳುಗಳನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ.
ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ಸೇರಿಸಿ ಕುಡಿಯಿರಿ. ಹಾಗೇ, ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದಲೂ ಬೊಜ್ಜು ಕರಗುತ್ತದೆ.
ಚಿಲ್ಲಿ ಪೆಪ್ಪರ್, ಕ್ಯಾಪ್ಸಿಕಂ ಬಳಸಿ :
ನಿಮ್ಮ ಆಹಾರದಲ್ಲಿ ಚಿಲ್ಲಿ ಪೆಪ್ಪರ್ ಬಳಸುವುದರಿಂದ ದೇಹದ ಕೊಬ್ಬಿನಂಶವನ್ನು ಕರಗಿಸಲು ಸಾಧ್ಯವಿದೆ.
ಇದನ್ನು ವಿಜ್ಞಾನಿಗಳೇ ಒಪ್ಪಿಕೊಂಡಿದ್ದು, ಚಿಲ್ಲಿ ಪೆಪ್ಪರ್ ಅನ್ನು ಆಹಾರದಲ್ಲಿ ಬಳಸುವುದರಿಂದ ಡಯಟಿಂಗ್ ಮಾಡುವವರಿಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಲಿದೆ.
ಕ್ಯಾಪ್ಸಿಕಂ ಕೂಡ ತೂಕವನ್ನು ಇಳಿಸಿಕೊಳ್ಳಲು ಉಪಯುಕ್ತ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.
ಹೆಚ್ಚಿನ ಒತ್ತಡ ಒಳ್ಳೆಯದಲ್ಲ :
ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಒತ್ತಡಕ್ಕೆ ಒಳಗಾದಂತೆ ನಿಮ್ಮ ತೂಕವೂ ಹೆಚ್ಚತೊಡಗುತ್ತದೆ. ಒತ್ತಡ ಹೆಚ್ಚಾದಂತೆ ಸ್ಟ್ರೆಸ್ ಹಾರ್ಮೋನ್ ಕಾಟ್ರಿಸಾಲ್ ಉತ್ಪತ್ತಿಯಾಗಿ ಹಸಿವಿನ ಪ್ರಮಾಣವೂ ಹೆಚ್ಚುತ್ತದೆ. ಬಾಳೆಹಣ್ಣು, ಬಾದಾಮಿ, ಚೆರ್ರಿಯನ್ನು ಡಯಟ್ನಲ್ಲಿ ಹೆಚ್ಚು ಬಳಸುವುದರಿಂದ ಒತ್ತಡವೂ ಕಡಿಮೆಯಾಗುತ್ತದೆ.
ಮನೆಯಲ್ಲಿ ನೀವೇನಾದರೂ ಗಬಗಬನೆ ತಿನ್ನುತ್ತಿದ್ದರೆ ಅಜ್ಜನೋ ಅಜ್ಜಿಯೋ ಅಥವಾ ಅಮ್ಮನೋ ಬಯ್ಯುವುದನ್ನು ನೋಡಿರಬಹುದು. ಅದಕ್ಕೆ ಕಾರಣವೂ ಇದೆ. ಆಯುರ್ವೇದದ ಪ್ರಕಾರ ನಾವು ಆಹಾರವನ್ನು ಎಷ್ಟು ನಿಧಾನವಾಗಿ ಸೇವಿಸುತ್ತೇವೋ ಅಷ್ಟು ಸರಿಯಾಗಿ ಜೀರ್ಣಕ್ರಿಯೆಯೂ ಆಗುತ್ತದೆ.
ನಿಧಾನವಾಗಿ ಆಹಾರವನ್ನು ಸೇವಿಸುವುದರಿಂದ ನಮಗೆ ಎಷ್ಟು ಆಹಾರ ಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಮೆದುಳಿಗೆ ಸಹಾಯವಾಗುತ್ತದೆ. ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗದಿರುವುದು ಕೂಡ ತೂಕ ಹೆಚ್ಚಾಗುವಿಕೆಗೆ ಒಂದು ಕಾರಣ.
ಚಿಪ್ಸ್ ಮುಂತಾದ ಎಣ್ಣೆತಿಂಡಿಗಳು, ಸಕ್ಕರೆ ಅಂಶ ಹೆಚ್ಚಾಗಿರುವ ಪದಾರ್ಥಗಳು, ಅತಿಯಾಗಿ ಸಿಹಿಯಾಗಿರುವ ಪಾನೀಯಗಳನ್ನು ಸೇವಿಸದಿರುವುದು ಉತ್ತಮ.
ಜ್ಯೂಸ್ ಬದಲು ಹಣ್ಣುಗಳನ್ನೇ ತಿನ್ನಿ
ಸಾಕಷ್ಟು ಜನ ಹಣ್ಣಿನ ಜ್ಯೂಸ್ ಅಥವಾ ಮಿಲ್ಕ್ಶೇಕ್ ಮಾಡಿಕೊಂಡು ಕುಡಿಯುತ್ತಾರೆ. ಆದರೆ, ಅದಕ್ಕಿಂತಲೂ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಪೂರ್ತಿ ಹಣ್ಣನ್ನು ತಿನ್ನುವುದರಿಂದ ಅದರಲ್ಲಿನ ನಾರಿನಂಶ ನಮ್ಮ ದೇಹವನ್ನು ಸೇರುತ್ತದೆ. ಹಾಗಾಗಿ, ಸಕ್ಕರೆ ಹಾಕಿರುವ ಅಥವಾ ಹಾಲು ಸೇರಿಸಿರುವ ಜ್ಯೂಸ್ ಕುಡಿಯುವುದಕ್ಕಿಂತ ತಾಜಾ ಹಣ್ಣುಗಳನ್ನೇ ಸೇವಿಸುವುದು ಒಳ್ಳೆಯದು.
ಒಂದೇ ಬಾರಿ ತಿನ್ನಬೇಡಿ :
ಹಸಿವಾಗಿದೆ ಎಂದು ಒಂದೇ ಸಲ ರಾಶಿಗಟ್ಟಲೆ ತಿನ್ನುವ ಬದಲು ಆಗಾಗ ಸ್ವಲ್ಪ ಸ್ವಲ್ಪ ತಿನ್ನುತ್ತಾ ಇರುವುದರಿಂದ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಇದರಿಂದ ಕೊಬ್ಬು ಶೇಖರವಾಗುವುದು ತಪ್ಪುತ್ತದೆ.
ಹಾಗೇ, ಊಟದಲ್ಲಿ ತರಕಾರಿ, ಶೇಂಗಾ ಎಣ್ಣೆಯನ್ನು ಬಳಸಿ. ಮೊಟ್ಟೆಯನ್ನು ತಿನ್ನುವುದಾದರೆ ಹಳದಿ ಭಾಗದ ಬದಲಾಗಿ ಬಿಳಿಯ ಭಾಗವನ್ನು ಮಾತ್ರ ತಿನ್ನಿ. ಹೆಚ್ಚೆಚ್ಚು ಪ್ರೋಟೀನ್ ಮತ್ತು ನಾರಿನಂಶ ಇರುವ ಆಹಾರ ಸೇವಿಸಿ.
ಹಾಲಿನ ಉತ್ಪನ್ನಗಳನ್ನು ಕಡಿಮೆ ಬಳಸಿ :
ಹಾಲು ಅಥವಾ ಹಾಲಿನ ಉತ್ಪನ್ನಗಳು ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ, ಡಯಟ್ ಮಾಡುವವರು ಇಂತಹ ಆಹಾರವನ್ನು ಸೇವಿಸದೇ ಇರುವುದು ಉತ್ತಮ. ಐಸ್ಕ್ರೀಂ, ಮೊಸರು, ಪೇಡಗಳನ್ನು ಅವಾಯ್ಡ್ ಮಾಡಿ.
ವಾರದಲ್ಲಿ ಒಂದು ದಿನ ಉಪವಾಸ
ವಾರದಲ್ಲಿ ಒಂದು ದಿನ ಉಪವಾಸ ಅಥವಾ ಹಸಿ ತರಕಾರಿ , ಹಣ್ಣು , ಕಾಳುಗಳನ್ನು ಮಾತ್ರ ತಿನ್ನುವುದರಿಂದ ಬೊಜ್ಜು ಅತಿಯಾಗಿ ಬೆಳೆಯುವುದನ್ನು ಕಡಿಮೆ ಮಾಡಬಹುದು
ಎಣ್ಣೆಯಲ್ಲಿ ಕರಿದ ಪದಾರ್ಥ ಹೊರಗಡೆಯ ತಿಂಡಿ
ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಅಧಿಕವಾಗಿ ತಿನ್ನುವುದು ಒಳ್ಳೆಯದಲ್ಲ . ಖಾರ ಮತ್ತು ಉಪ್ಪಿನ ಅಂಶವನ್ನೂ ಆಹಾರ ಪದಾರ್ಥಗಳಲ್ಲಿ ಕಡಿಮೆ ಮಾಡಬೇಕು .
ರಾತ್ರಿ ವೇಳೆ ಚಪಾತಿ
ಮೊಳಕೆಬಂದ ಕಾಳುಗಳು , ಹಸಿ ತರಕಾರಿ ಸೇವನೆ ಉತ್ತಮ . ಅನ್ನಸೇವನೆ ಕಡಿಮೆ ಮಾಡಿದರೆ ದೇಹದ ತೂಕ ಕಡಿಮೆಯಾಗುತ್ತದೆ .
ಪದೇ ಪದೇ ಆಹಾರ ಸೇವನೆ ಒಳ್ಳೆಯದಲ್ಲ
ಬೆಳಿಗ್ಗಿನ ಉಪಹಾರವಾದ ಮೇಲೆ ಮಧ್ಯಾಹ್ನದ ಊಟ ಮಾಡಬೇಕು.ಮಧ್ಯೆ ಏನನ್ನೂ ತಿನ್ನಬಾರದು . ಆಗಾಗ ನೀರು ಕುಡಿಯುತ್ತಿದ್ದರೆ ಒಳ್ಳೆಯದು
ಹಿತ , ಮಿತ ಆಹಾರ ಸೇವನೆ ಹಿತ
ಮಿತ ಆಹಾರ ಸೇವನೆಯೇ ಬೊಜ್ಜುಬಾರದಂತೆ ನೋಡಿಕೊಳ್ಳಲು ಇರುವ ಮುಖ್ಯಪರಿಹಾರ.ನಾವು ಆಹಾರವನ್ನು ತಿನ್ನುತ್ತಿರುವಾಗ ಇನ್ನು ಸ್ವಲ್ಪ ಬೇಕು ಅನ್ನಿಸಿದಾಗ ತಿನ್ನುವುದನ್ನು ನಿಲ್ಲಿಸಬೇಕು .
Weight loss tips use home remidies | Fat burning foods in kannada
ಮೊಳಕೆಬರಿಸಿದ ಕಾಳು
ಮೊಳಕೆಬರಿಸಿದ ಹೆಸರುಕಾಳು ಬೆಳಿಗ್ಗೆ ತಿಂಡಿ ಮಾಡಲು ಸಮಯವಿಲ್ಲ ಎಂಬುವವರಿಗೆ ಜತೆಗೆ ಸಣ್ಣಗಾಗಬೇಕೆಂದು ಬೆಳಗಿನ ಉಪಹಾರ ಬಿಡುವವರಿಗೆ ಇದು ಉತ್ತಮ ಆಹಾರ. ಮೊಳಕೆಕಟ್ಟಿದ ಹೆಸರುಕಾಳುಗಳನ್ನು ಬೆಳಿಗ್ಗೆ ಸಣ್ಣಗೆ ಹೆಚ್ಚಿದ ಹಸಿ ಈರುಳ್ಳಿ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು , ಸ್ವಲ್ಪ ಉಪ್ಪು , ಎರಡು ಹನಿ ನಿಂಬೆ ರಸದೊಂದಿಗೆ ಮಿಶ್ರಣಮಾಡಿ ಉಪಹಾರದ ಬದಲು ಸೇವಿಸುವುದು. ಇದರಲ್ಲಿನ ಕಬ್ಬಿಣಾಂಶ , ಅಧಿಕನಾರಿನಾಂಶಗಳು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ . ನಿಮ್ಮ ತೂಕವನ್ನೂ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ
ಶುಂಠಿ
ಟೀ – ಕಾಫಿ ಸೇವನೆಯನ್ನು ಕಡಿಮೆ ಮಾಡಿ ಹಶಿ ಶುಂಠಿ ಟೀಯನ್ನು ಮಾಡಿ ಕುಡಿಯಿರಿ. ಒಂದು ಗ್ಲಾಸ್ ನಷ್ಟು ನೀರಿಗೆ ಸ್ವಲ್ಪ ಹಶಿ ಶುಂಠಿಯನ್ನು ಜಜ್ಜಿ ಹಾಕಿ 5 ನಿಮಿಷ ಕುದಿಸಿ. ಬಳಿಕ ಇದನ್ನು ಒಂದು ಕಪ್ ಗೆ ಹಾಕಿ ಅದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ನಿಧಾನವಾಗಿ ಸವಿಯಿರಿ
ಹೀಗೆ ಮಾಡುವುದರಿಂದ ನಿಮ್ಮದಪ್ಪ ಹೊಟ್ಟೆ ಸಮಸ್ಯೆ ಜತೆ ಹೊಟ್ಟೆಯಲ್ಲಿನ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ .
ಚಕ್ಕೆ :
ಪ್ರತಿದಿನ ಚೆಕ್ಕೆಯನ್ನು ಅಗೆಯುವುದರಿಂದ ಅಥವಾ ಒಂದು ಗ್ಲಾಸ್ ನೀರಿಗೆ ಚೆಕ್ಕೆಯನ್ನು ಹಾಕಿ ನೀರನ್ನು ಕುದಿಸಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ .
ಕೆಲವರಿಗೆ ತೂಕ ಹೆಚ್ಚಿರುವುದು ವಂಶ ಪಾರಂಪರೆಯಾಗಿ ಬರುತ್ತದೆ ಇನ್ನು ಕೆಲವರಿಗೆ ಇದು ದೇಹದಲ್ಲಿನ ಸಮತೋಲನತೆಯಿಂದ ಉಂಟಾಗುತ್ತದೆ ಆದ್ದರಿಂದ ಈ ಎಲ್ಲಾ ಮನೆಮದ್ದನ್ನು ಪ್ರಯತ್ನಿಸುವ ಮೊದಲು ಒಮ್ಮೆ ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ. ಏಕೆಂದರೆ ಮನೆಮದ್ದು ಕೆಲವರಿಗೆ ಒಳ್ಳೆಯ ಪರಿಣಾಮಗಳನ್ನು ನೀಡಿದರೆ ಇನ್ನುಕೆಲವರಿಗೆ ಅಡ್ಡ ಪರಿಣಾಮವನ್ನು ನೀಡುವುದಂಟು
FAQ :
ತೂಕವನ್ನು ಕಳೆದುಕೊಳ್ಳುವ ಮುಖ್ಯ ಸಲಹೆಗಳೆಂದರೆ ಅತಿಯಾಗಿ ತಿನ್ನುವುದನ್ನು ತಪ್ಪಿಸುವುದು, ನಿಮ್ಮ ಭಾಗದ ಗಾತ್ರವನ್ನು ನಿಯಂತ್ರಿಸುವುದು, ಹೆಚ್ಚಿನ ಪ್ರೋಟೀನ್ ಉಪಹಾರವನ್ನು ಹೊಂದುವುದು, ಸಕ್ಕರೆ ಪಾನೀಯಗಳನ್ನು ತಪ್ಪಿಸುವುದು, ಸಣ್ಣ ಪ್ಲೇಟ್‌ಗಳನ್ನು ಬಳಸುವುದು ಮತ್ತು ಉತ್ತಮ ಕೊಬ್ಬನ್ನು ಆರಿಸುವುದು.
ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಲವಣಗಳು ನೀರಿನಲ್ಲಿ ಕರಗುತ್ತವೆ. ಈ ಪೇಯವನ್ನು ಕುಡಿಯುವ ಮೂಲಕ ಹಾಲು ಕುಡಿಯದೇ ಇದ್ದು ಹಾಲಿನ ಮೂಲಕ ಪಡೆಯಬಹುದಾದ ಪೋಷಕಾಂಶಗಳನ್ನು ಪಡೆದೂ ಕೊಬ್ಬಿಲ್ಲದೇ ಇರುವ ಕಾರಣ ತೂಕ ಇಳಿಸುವ ಪ್ರಕ್ರಿಯೆಗೆ ಹೆಚ್ಚಿನ ಬೆಂಬಲ ದೊರಕುತ್ತದೆ.
Weight Loss Free Tips in Kannada Free 40 Minutes Call or ZOOM
ನೀವೇನಾದರೂ ವೈಟ್ ಲಾಸ್ ಗೆ ಟ್ರೈ ಮಾಡ್ತಾಯಿದ್ದೀರಾ. ಅಂದ್ರೆ ಏನೇ ಟ್ರೈ ಮಾಡಿದ್ರು ವೈಟ್ ಲಾಸ್ ಅಥವಾ ಫ್ಯಾಟ್ ಲಾಸ್ ಆಗ್ತಾ ಇಲ್ಲ ಅಂದ್ರೆ ನಾವು ನಿಮಗೆ ಸಹಾಯ ಮಾಡುತ್ತೇವೆ ಕೆಳಗೆ ಕೊಟ್ಟಿರುವ ಫಾರಂನಲ್ಲಿ ನಿಮ್ಮ ಹೆಸರು ಮೊಬೈಲ್ ನಂಬರ್ ಮಾಹಿತಿಯನ್ನು ನಮೂದಿಸಿ ಸಬ್ಮಿಟ್ ಮಾಡಿ.
ಇತರ ವಿಷಯಗಳು :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಿ