ತುಳಸಿ ಎಲೆಗಳು ಮಹತ್ವ ಪ್ರಯೋಜನ, Basil Leaves in Kannada Basil Leaves Benefits Kannada, Tulsi Benefits, Tulsi Uses, Tulasi Uses in Kannada ತುಳಸಿ ಗಿಡದ ಉಪಯೋಗಗಳು Tulsi Leaves Benefits in Kannada Tulsi Uses in Kannada Tulasi Elegala Mahatva in Kannada
ತುಳಸಿಗಿಡ ಮಹತ್ವ | Tulsi Benefits Kannada
ತುಳಸಿ ಎನ್ನುವುದು ಒಂದು ಪುಟ್ಟ ಔಷಧೀಯ ಗುಣವನ್ನು ಹೊಂದಿರುವ ಸಸ್ಯ. ಇದಕ್ಕೆ ಧಾರ್ಮಿಕವಾಗಿಯೂ ಅತ್ಯಂತ ಪವಿತ್ರ ಸ್ಥಾನವನ್ನು ನೀಡಲಾಗಿದೆ. ವಿಷ್ಣುವಿನ ಪತ್ನಿಯಾದ ತುಳಸಿ ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಯನ್ನು ಹೊಂದಿರುವ ದೇವಿ ಎಂದು ಹೇಳಲಾಗುವುದು. ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯಿಂದ ಕೂಡಿರುವ ತುಳಸಿ ದಳವನ್ನು ಬಳಸದೆ ದೇವತಾ ಪೂಜಾ ಕಾರ್ಯಗಳು ಸಂಪನ್ನವಾಗುವುದಿಲ್ಲ. ವಿಷ್ಣು ದೇವರ ಪತ್ನಿಯಾದ ತುಳಸಿಯು ಲಕ್ಷ್ಮಿ ದೇವಿಯ ಸಂಕೇತ ಎನ್ನುವ ನಂಬಿಕೆಯಿದೆ. ತುಳಸಿ ನೀರಿನ ಪ್ರೋಕ್ಷಣೆ ಅಥವಾ ಸಿಂಪಡಿಸುವುದರ ಮೂಲಕ ಮನೆಯನ್ನು, ವಸ್ತುಗಳನ್ನು ಹಾಗೂ ವ್ಯಕ್ತಿಯನ್ನು ಶುದ್ಧಗೊಳಿಸಲಾಗುವುದು. ಒಂದು ಹನಿ ತುಳಸಿಯ ನೀರು ಅತ್ಯಂತ ಪವಿತ್ರ ಶಕ್ತಿಯನ್ನು ಒಳಗೊಂಡಿರುತ್ತದೆ. ವಿವಿಧ ಅನಾರೋಗ್ಯಗಳನ್ನು ಬಹುಬೇಗ ನಿವಾರಿಸುವ ಶಕ್ತಿಯನ್ನು ತುಳಸಿ ಎಲೆಗಳು ಒಳಗೊಂಡಿವೆ.
ಹಿಂದೂ ಧರ್ಮದಲ್ಲಿ ತುಳಸಿ ಪವಿತ್ರ ಸಸ್ಯ ಎಂಬ ನಂಬಿಕೆ ಇದೆ. ವಿಷ್ಣುವಿಗೆ ಪ್ರಿಯಾವಾದ ತುಳಸಿ ಗಿಡವನ್ನು ಭಾರತದಲ್ಲಿ ಬಹುತೇಕ ಪ್ರತಿ ಮನೆಗಳಲ್ಲೂ ಸಹ ಬೆಳೆಸಿ ಪೂಜೆ ಮಾಡುವ ಪದ್ಧತಿ ನಡೆದುಬಂದಿದೆ.ತುಳಸಿಯಲ್ಲಿರುವ ಅನೇಕ ಔಷಧೀಯ ಗುಣಗಳಿರುವುದೂ ಸಹ ಅದನ್ನು ಪೂಜನೀಯವಾಗಿ ಗುರುತಿಸಲು ಕಾರಣವಾಗಿದೆ. ಧಾರ್ಮಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಹಲವು ಮಹತ್ವಗಳನ್ನು ಹೊಂದಿರುವ ತುಳಸಿ ಗಿಡವನ್ನು ಮನೆಯಲ್ಲಿ ನೆಡುವಾಗ ಪ್ರಮುಖವಾಗಿ ಗಮನ ಹರಿಸಬೇಕಿರುವ ಕೆಲವೊಂದು ಸಂಗತಿಗಳ ಬಗ್ಗೆ ಮಾಹಿತಿ ಹೀಗಿವೆ.
ಏಕಾದಶಿ ಹಾಗೂ ರವಿವಾರಗಳಂದು ತುಳಸಿ ಎಲೆಗಳನ್ನು ಕೀಳಬಾರದು ಎಂಬ ನಂಬಿಕೆ ಇದೆ. ಆದ್ದರಿಂದ ಆ ದಿನಗಳಲ್ಲಿ ತುಳಸಿಯ ಎಲೆಗಳನ್ನು ಕೀಳಬಾರದು ಎಂಬ ಅಂಶಗಳು ಗಮನದಲ್ಲಿರುವುದು ಉತ್ತಮ. ಒಣಗಿದ ತುಳಸಿ ಗಿಡಗಳನ್ನು ಇಟ್ಟುಕೊಳ್ಳುವುದು, ಸಾಮಾನ್ಯಗಿಡಗಳಂತೆ ಎಸೆಯುವುದು ಸೂಕ್ತವಲ್ಲ. ಅದನ್ನು ನೀರಿನಲ್ಲಿ ವಿಸರ್ಜಿಸುವುದು ಸೂಕ್ತ, ಅವಕಾಶ ಇದ್ದರೆ ನದಿಯಲ್ಲಿ ವಿಸರ್ಜಿಸಿದರೆ ಉತ್ತಮ ಎಂಬ ನಂಬಿಕೆ ಇದೆ. ಒಣಗಿದ ತುಳಸಿ ಗಿಡವನ್ನು ವಿಸರ್ಜಿಸಿದ ನಂತರ ತಕ್ಷಣವೇ ಹೊಸ ಗಿಡವನ್ನು ನೆಡಬೇಕು. ತುಳಸಿ ಗಿಡದ ನಡುವೆ ಮುಳ್ಳಿನ ಗಿಡಗಳನ್ನು ಬೆಳೆಸುವುದನ್ನು ನಿಲ್ಲಿಸಿ, ಅದರ ಬದಲು ತುಳಸಿ ಗಿಡದ ನಡುವೆ ಹೂವಿನ ಗಿಡಗಳನ್ನು ಬೆಳೆಸಬಹುದು.ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಬೆಳಿಗ್ಗೆ ವೇಳೆ ತುಳಸಿ ಪೂಜೆ ನಡೆಯುತ್ತದೆ. ಬೆಳಿಗ್ಗೆ ಈ ರೀತಿಯಲ್ಲಿ ತುಳಸಿ ಪೂಜೆ ನಡೆಸುವುದರ ಹಿಂದೆ ವೈದ್ಯಕೀಯ ಕಾರಣವಿರಬಹುದು ಎಂದು ಊಹಿಸಲಾಗುತ್ತದೆ. ಅದೇನೆಂದರೆ ತುಳಸಿ ಗಿಡಕ್ಕೆ ಆಮ್ಲಜನಕ ಬಿಡುಗಡೆ ಮಾಡುವ ರೋಗ ನಿರೋಧಕ ಶಕ್ತಿ ಮತ್ತು ಔಷಧಿ ಗುಣಗಳಿವೆ. ಈ ಹಿನ್ನೆಲೆಯಲ್ಲಿ ತುಳಸಿಯ ಗಿಡಕ್ಕೆ ಬೆಳಿಗ್ಗೆ ಎದ್ದು ಪೂಜೆ ಸಲ್ಲಿಸುವುದರಿಂದ ಉಸಿರಾಟಕ್ಕೆ ಶುದ್ಧ ಗಾಳಿ ಸಿಗುತ್ತದೆ.
ವಾಸ್ತು ಪ್ರಕಾರವೂ ತುಳಸಿ ಮಹತ್ವ ಪಡೆದುಕೊಂಡಿದ್ದು, ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಉತ್ತಮ ಫಲಗಳು ದೊರೆಯುತ್ತದೆ, ಋಣಾತ್ಮಕ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಕೊನೆಯದಾಗಿ ಎಲ್ಲರಿಗೂ ತಿಳಿದಿರುವಂತೆ ದಿನ ಬೆಳಿಗ್ಗೆ 2-3 ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಕಾರ್ತಿಕ ಮಾಸದ ಪ್ರಭೋಧಿನಿ ಏಕಾದಶಿಯಂದು ಈ ಆಚರಣೆಯನ್ನು ಮಾಡಲಾಗುವುದು. ಲಕ್ಷ್ಮಿ ದೇವಿಯ ಪ್ರತಿರೂಪಳಾದ ತುಳಸಿ ದೇವಿಗೆ ಅಂದು ವಿಶೇಷ ಅಲಂಕಾರ, ನೈವೇದ್ಯಗಳನ್ನು ಅರ್ಪಿಸುವುದರ ಮೂಲಕ ಸಡಗರದ ವಿವಾಹ ಹಬ್ಬವನ್ನು ಆಚರಿಸುತ್ತಾರೆ.
ಹಿಂದೂ ಪಂಚಾಂಗದ ಪ್ರಕಾರ ತುಳಸಿ ವಿವಾಹವನ್ನು ನವೆಂಬರ್ 9ರಂದು ಆಚರಿಸಲಾಗುವುದು. ವಿವಾಹಿತ ಮಹಿಳೆಯರು ಕುಟುಂಬದ ರಕ್ಷಣೆ, ಪತಿಯ ಆರೋಗ್ಯ ಮತ್ತು ಆಯುಷ್ಯದ ವೃದ್ಧಿಗೆ ತುಳಸಿ ಪೂಜೆಯನ್ನು ಕೈಗೊಳ್ಳುತ್ತಾರೆ. ಅದೇ ಅವಿವಾಹಿತ ಮಹಿಳೆಯರು ಉತ್ತಮ ಜೀವನ ಸಂಗಾತಿಯನ್ನು ಪಡೆದುಕೊಳ್ಳಲು ಆರಾಧಿಸುತ್ತಾರೆ. ಒಟ್ಟಿನಲ್ಲಿ ಮಹಿಳೆಯರಿಗೆ ಹಾಗೂ ಕುಟುಂಬದವರಿಗೆ ತುಳಸಿ ವಿವಾಹವು ಅತ್ಯಂತ ಸಂತೋಷ ಹಾಗೂ ಸಡಗರವನ್ನು ನೀಡುವ ಹಬ್ಬವಾಗಿರುತ್ತದೆ. ತುಳಸಿ ವಿವಾಹದ ನಂತರವೇ ಮನೆಯಲ್ಲಿ ವಿಶೇಷ ಶುಭ ಕಾರ್ಯಗಳನ್ನು ಹಮ್ಮಿಕೊಳ್ಳವ ಪದ್ಧತಿಯಿದೆ.
ಹಿಂದೂ ಧರ್ಮದಲ್ಲಿ ತುಳಸಿಯ ಆರಾಧನೆಯ ಹಿಂದಿರುವ ಮಹತ್ವದ ಕಾರಣಗಳು
ತುಳಸಿ ವಿವಾಹದ ಆಚರಣೆಯನ್ನು ಮನೆಯಲ್ಲಿರುವ ತುಳಸಿ ಕಟ್ಟೆಗೆ ಅಥವಾ ದೇವಾಲಯಗಳಲ್ಲೂ ಆಚರಿಸಬಹುದು. ಸಾಮಾನ್ಯವಾಗಿ ತುಳಸಿ ಹಬ್ಬದ ಪ್ರಯುಕ್ತ ಉಪವಾಸ ವ್ರತವನ್ನು ಕೈಗೊಳ್ಳಲಾಗುವುದು. ಈ ಉಪವಾಸ ವ್ರತವು ಮುಂಜಾನೆಯಿಂದ ರಾತ್ರಿ ತುಳಸಿಯ ಪೂಜೆ ಸಂಪೂರ್ಣವಾಗುವ ತನಕ ಮುಂದುವರಿಯಬೇಕು.
ತುಳಸಿ ಗಿಡಕ್ಕೆ ಮತ್ತು ವಿಷ್ಣು ದೇವರ ವಿಗ್ರಹಕ್ಕೆ ನೀರನ್ನು ಅರ್ಪಿಸಿ ಸ್ನಾನ ಮಾಡಿಸುವುದು, ಹೂವಿನ ಅಲಂಕಾರ, ವಿಶೇಷ ನೈವೇದ್ಯ ಮತ್ತು ಹಣ್ಣು-ಹಂಪಲುಗಳನ್ನು ಇಟ್ಟು ಪೂಜೆ ಮಾಡಲಾಗುವುದು. ತುಳಸಿ ಗಿಡಕ್ಕೆ ವಧುವಿನ ರೂಪದಂತೆ ಕೆಂಪು ಸೀರೆ, ಆಭರಣ, ಕೆಂಪು ಕುಂಕುಮದೊಂದಿಗೆ ಅಲಂಕರಿಸಲಾಗುತ್ತದೆ. ವಿಷ್ಣು ವಿಗ್ರಹಕ್ಕೆ ಬಿಳಿಯ ಧೋತಿ, ಅಥವಾ ಮಡಿ ಬಟ್ಟೆಯಿಂದ ಅಲಂಕರಿಸುವರು. ನಂತರ ಧಾರಗಳಿಂದ ವಿಗ್ರಹ ಹಾಗೂ ಸಸ್ಯದ ಸುತ್ತಲೂ ಸುತ್ತುವರು. ಬಳಿಕ ವಿಶೇಷ ಮಂತ್ರ, ಪ್ರಾರ್ಥನೆ ಮತ್ತು ಹಾಡು ಹೇಳುವುದರ ಮೂಲಕ ಪೂಜೆಯನ್ನು ಮಾಡಲಾಗುವುದು.ಮನೆಯ ಸದಸ್ಯರೆಲ್ಲರೂ ತುಳಸಿ ಮತ್ತು ವಿಷ್ಣುವಿಗೆ ಅಕ್ಷತೆ, ಕುಂಕುಮ ಮತ್ತು ಹೂವನ್ನು ಅರ್ಪಿಸಿ ನಮಸ್ಕರಿಸಬೇಕು. ಆಗ ಪೂಜೆಯು ಸಂಪೂರ್ಣವಾಗುವುದು. ನಂತರ ಪ್ರಸಾದವನ್ನು ಹಂಚಲಾಗುವುದು.
ವಾಸ್ತು ಶಾಸ್ತ್ರದಲ್ಲಿ ತುಳಸಿಯ ಮಹತ್ವ
ವಾಸ್ತು ಶಾಸ್ತ್ರದಲ್ಲೂ ಸಹ ತುಳಸಿಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ. ತುಳಸಿ ಗಿಡವನ್ನು ಮನೆಯ ಮುಂದೆ, ದೇವ ಮೂಲೆಯಲ್ಲಿ ಇಡಬೇಕು. ಅಗ್ನಿ ಮೂಲೆಯ ಭಾಗದಲ್ಲಿ ತುಳಸಿ ಸಸ್ಯವನ್ನು ನೆಡುವುದು ಅಥವಾ ಕೂರಿಸುವ ಕಾರ್ಯ ಮಾಡಬಾರದು. ಮನೆಯ ಆವರಣದಲ್ಲಿ ತುಳಸಿ ಗಿಡವನ್ನು ಸೂಕ್ತ ಸ್ಥಳದಲ್ಲಿ ಇಡಬೇಕು. ಆಗ ಮಾತ್ರ ಮನೆಯಲ್ಲಿ ನೆಮ್ಮದಿ, ಸಂತೋಷ ನೆಲೆಸುವುದು. ಜೊತೆಗೆ ಮನೆಯ ಯಜಮಾನ ಕೈಗೊಂಡ ಕೆಲಸ ಕಾರ್ಯಗಳು ಅತ್ಯಂತ ಲಾಭದಾಯಕದಿಂದ ಕೂಡಿರುತ್ತವೆ. ಮನೆಯ ದೋಷಗಳನ್ನು ನಿವಾರಿಸಲು ತುಳಸಿ ಗಿಡವನ್ನು ದೇವ ಮೂಲೆಯಲ್ಲಿ ಇಡಬೇಕು. ಹಲವೆಡೆ ಮನಸ್ಸಿಗೆ ಬಂದಂತೆ ನೆಡಬಾರದು. ತುಳಸಿಯ ಗಾಳಿಯು ಮನೆಗೆ ಶುದ್ಧ ಹಾಗೂ ಸಕಾರಾತ್ಮಕ ಶಕ್ತಿ ಆಗಮಿಸುವಂತೆ ಪ್ರೇರೇಪಣೆ ನೀಡುತ್ತದೆ.
ತುಳಸಿ ಪುರಾಣ
ತುಳಸಿ, ಜಲಂಧರನ ಹೆಂಡತಿಯಾದ ವೃಂದ. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾಗದೆ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋದರಂತೆ. ಪತಿವ್ರತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ವಿಷ್ಣು ಜಲಂಧರನ ವೇಷ ಧರಿಸಿ ವೃಂದಳ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದನಂತೆ. ಜಲಂಧರನು ರಣಭೂಮಿಯಲ್ಲಿ ಮಡಿದನಂತೆ. ವಿಷ್ಣುವಿಗೆ ಶಾಪ ನೀಡಿ ವೃಂದ ತನ್ನ ಪತಿಯ ಶವದೊಂದಿಗೆ ಬೂದಿಯಾದಳಂತೆ. ಮುಂದೆ ಆ ವೃಂದಳೇ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಹುಟ್ಟಿದಳಂತೆ.
ನಂತರ ಇವಳು ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳೆಂದು ಪ್ರತೀತಿಯಿದೆ. ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ(ಹೋಲಿಕೆ) ಇಲ್ಲವಾದ್ದರಿಂದ,ತುಳಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಳಸಿಯನ್ನೂ ವಿಷ್ಣುವು ಮದುವೆಯಾದನು.
ತುಳಸಿಯ ಸೃಷ್ಟಿ
ದೇವ-ದಾನವರು ಕ್ಷೀರ ಸಮುದ್ರವನ್ನು ಮಥಿಸಿದಾಗ ಹಲವು ವಸ್ತು ವಿಶೇಷಗಳ ಜೊತೆಗೆ ಅಮೃತವೂ ಉದಯಿಸಿತು. ಅದನ್ನು ಪಡೆಯಲೋಸುಗ ದೇವದಾನವರ ಮಧ್ಯೆ ಉಂಟಾದ ತುಮುಲದಲ್ಲಿ ಅಮೃತದ ಕೆಲವು ಬಿಂದುಗಳು ಭೂಮಿಯ ಮೇಲೆ ಬಿದ್ದುದು. ಆ ಸ್ಥಳಗಳಲ್ಲಿ ತುಳಸಿ ಸಸ್ಯಗಳಾಗಿ ಅವು ಬೆಳೆದವು. ಇನ್ನೂ ಕೆಲವರು ಹೇಳುವಂತೆ ಸಮುದ್ರ ಮಥನ ಕಾಲದಲ್ಲಿ ಅಮೃತವು ಉದಯಿಸಿದಾಗ ಶ್ರೀ ವಿಷ್ಣುವಿನ ನೇತ್ರಗಳಿಂದ ಆನಂದಾಶ್ರುಗಳು ಅದರಲ್ಲಿ ಬಿದ್ದಾಗ ತುಳಸಿಯ ಉತ್ಪತ್ತಿ(ಸೃಷ್ಟಿ)ಯಾಯಿತು. ಅದರಿಂದಾಗಿ ತುಳಸಿಯು ಹಿಂದೂಗಳಿಗೆ ಪೂಜನೀಯವಾಯಿತು. ತಾನು ಬೇರೆ ಯಾವುದರ ತುಲನೆಗೂ ಸರಿಸಾಟಿಯಾಗದಿದ್ದುದರಿಂದ ಅದಕ್ಕೆ ತುಳಸಿ ಎಂಬ ಹೆಸರು ಅರ್ಥಪೂರ್ಣವಾಯಿತು.
ತುಳಸಿಯಿಂದಾಗುವ ಆಧ್ಯಾತ್ಮಿಕ ಮತ್ತು ಶಾರೀರಿಕ ಲಾಭಗಳು : ತುಳಸಿಯಲ್ಲಿ ರಾಮ ತುಳಸಿ, ಕೃಷ್ಣ ತುಳಸಿ ಹಾಗೂ ರಾಜ ತುಳಸಿ ಎಂಬ ಅನೇಕ ಪ್ರಭೇದಗಳಿವೆ. ರಾಮ ತುಳಸಿಯ ಬಣ್ಣವು ಬಿಳಿ, ಕೃಷ್ಣ ತುಳಸಿಯು ಸ್ವಲ್ಪ ಕಪ್ಪು. ರಾಮ ತುಳಸಿಯಿಂದ ಶ್ರೀರಾಮನ ತಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. ಕೃಷ್ಣ ತುಳಸಿಯಿಂದ ಅನಿಷ್ಟಶಕ್ತಿಗಳ ನಾಶಕ್ಕೆ ಪೂರಕವಾದ ಶ್ರೀಕೃಷ್ಣನ ಮಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. ಅಶ್ವತ್ಥವೃಕ್ಷದಂತೆ ತುಳಸಿಯಿಂದಲೂ ಮಾನವನಿಗೆ ಪ್ರಾಣಶಕ್ತಿಯು (ಆಮ್ಲಜನಕವು) ಹೇರಳವಾಗಿ ದೊರೆಯುವುದರಿಂದ ತುಳಸಿಗೆ ಪ್ರದಕ್ಷಿಣೆಗಳನ್ನು ಹಾಕುವುದು ಲಾಭದಾಯಕವಾಗಿದೆ. ತುಳಸಿಯ ಕಷಾಯವು ಕೆಮ್ಮು, ನೆಗಡಿ, ಶೀತ, ಶ್ಲೇಷ್ಮಾದಿಗಳ ನಿವಾರಕವಾಗಿದೆ. ವೃಂದಾವನದಲ್ಲಿ ಉದುರಿದ ಎಲೆಗಳಿಂದ ಮಣ್ಣುಗೂಡಿದ ಅದರ ಮೃತ್ತಿಕೆಯನ್ನು ಶರೀರದಲ್ಲಿ ಕುಷ್ಠಾದಿ ಚರ್ಮರೋಗಳಿದ್ದಲ್ಲಿಗೆ ಹಚ್ಚಿಕೊಂಡರೆ ರೋಗನಿವಾರಣೆಯಾಗುವುದೆಂದು ಹೇಳಲಾಗಿದೆ.
ರಾಮ ತುಳಸಿ ಮತ್ತು ಕೃಷ್ಣ ತುಳಸಿ ವ್ಯತ್ಯಾಸ ಏನು ಗೊತ್ತಾ ಅದರ ತಿಳಿಸಿಕೊಡುತ್ತೇನೆ ಬನ್ನಿ
ತುಳಸಿ ಗಿಡ ಪೂಜಿಸಿ ಫಲವನ್ನು ಪಡೆಯುವುದು ಮತ್ತು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಪುರಾಣದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನಮಾನವಿದೆ. ಅದಕ್ಕೆ ಮನೆಯಲ್ಲಿ ಮನೆ ಮುಂದೆ ಎಲ್ಲರೂ ಪೂಜಿಸುತ್ತಾರೆ. ತುಳಸಿಯಲ್ಲಿ ಸುಮಾರ ವಿಧಗಳಿವೆ ಅದರಲ್ಲಿ ನಮಗೆ ಗೊತ್ತಿರುವುದು ಕೃಷ್ಣ ತುಳಸಿ ಮತ್ತು ರಾಮ ತುಳಸಿ ಮೊದಲಿಗೆ ಕೃಷ್ಣ ತುಳಸಿಯು ನೇರಳೆ ಬಣ್ಣ ಹೊಂದಿರುತ್ತದೆ .ರಾಮ ತುಳಸಿ ತುಂಬಾ ಬಿಳಿ ಅಥವಾ ಹಸಿರು ಬಣ್ಣದಿಂದ ಕೂಡಿರುತ್ತದೆ.
ಕೃಷ್ಣ ತುಳಸಿಯ ಎಲೆಗಳು ತುಂಬಾ ಪರಿಮಳ ವಿರುತ್ತದೆ. ಆದರೆ ರಾಮ ತುಳಸಿ ಸ್ವಲ್ಪ ಪರಿಮಳ ವಿರುತ್ತದೆ .ಕೃಷ್ಣ ತುಳಸಿಯನ್ನು ತಿಂದಾಗ ನಾಲಿಗೆ ಚುರುಚುರು ಅನಿಸುತ್ತದೆ. ಆದರೆ ರಾಮ ಕಳಿಸಿ ತಿಂದಾಗ ಸ್ವಲ್ಪ ನಾಲಿಗೆ ರುಚಿ ಎನಿಸುತ್ತದೆ .ಕೃಷ್ಣ ತುಳಸಿಯಲ್ಲಿ ಕಡಿಮೆ ತಂಪು ಇರುತ್ತದೆ ರಾಮ ತುಳಸಿಯಲ್ಲಿ ಹೆಚ್ಚಾಗಿ ತಂಪು ಇರುತ್ತದೆ. ಬೇಸಿಗೆ ಕಾಲದಲ್ಲಿ ಕೃಷ್ಣ ತುಳಸಿ ಹೆಚ್ಚು ಉಷ್ಣಾಂಶ ವನ್ನು ಹೊಂದಿದೆ .ತುಳಸಿ ಗಿಡ ದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗಿರುತ್ತದೆ .ತುಳಸಿ ಗಿಡವನ್ನು ಮನೆ ಮುಂದೆ ಹಾಕಿಕೊಳ್ಳುವುದರಿಂದ ಸೊಳ್ಳೆಗಳ ಕಾಟ ಕಡಿಮೆ ಇರುತ್ತದೆ.
ತುಳಸಿಗಿಡದ ಉಪಯೋಗ ಅಥವಾ ಪ್ರಯೋಜನಗಳು | Tulasi Uses in Kannada
ತುಳಸಿ ಎಲೆಗಳು ಇಮ್ಯೂನ್ ಮಾಡ್ಯೂಲೇಟರ್ ಆಗಿ ಕೆಲಸ ಮಾಡುವುದು. ಇದರಿಂದ ದೇಹದ ಪ್ರತಿರೋಧಕ ಶಕ್ತಿಯು ಸುಧಾರಣೆ ಆಗುವುದು ಮತ್ತು ನಿರ್ವಹಿಸುವುದು. ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಉಂಟು ಮಾಡುವ ಹಾನಿಕಾರಕ ರೋಗದ ವಿರುದ್ಧ ಇದು ಹೋರಾಡುವುದು ಮತ್ತು ಆರೋಗ್ಯಕಾರಿ ಪ್ರತಿರೋಧಕ ಅಂಗಾಂಶಗಳನ್ನು ಇದು ನಿರ್ಮಾಣ ಮಾಡುವುದು. ವಿಷಕಾರಿ ಫ್ರೀ ರ್ಯಾಡಿಕಲ್ ನಿಂದ ಆರೋಗ್ಯಕಾರಿ ಅಂಗಾಂಶಗಳನ್ನು ಕಾಪಾಡಲು ತುಳಸಿ ಎಲೆಗಳಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ನೆರವಾಗುವುದು. ತುಳಸಿ ಎಲೆಗಳಲ್ಲಿ ಇರುವಂತಹ ಔಷಧೀಯ ಗುಣಗಳು ಸೋಂಕಿನಿಂದ ದೇಹವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.
10 benefits of tulsi in Kannada
- ತುಳಸಿ ಎಲೆಗಳಲ್ಲಿ ಯುಜೆನಾಲ್, ಕ್ಯಾರಿಯೋಫಿಲೀನ್ ಮತ್ತು ಮೀಥೈಲ್ ಯುಜೆನಾಲ್ ಎನ್ನುವ ಸಾರಭೂತ ತೈಲವಿದೆ. ಈ ಅಂಶಗಳು ಮೇಧೋಜೀರಕ ಗ್ರಂಥಿಯ ಅಂಗಾಂಶಗಳು ಇನ್ಸುಲಿನ್ ಜಮೆ ಮಾಡಲು ಮತ್ತು ಬಿಡುಗಡೆಗೊಳಿಸಲು ನೆರವಾಗುವುದು. ಇನ್ಸುಲಿನ್ ಸೂಕ್ಷ್ಮತೆಯಿಂದಾಗಿ ದೇಹದಲ್ಲಿ ರಕ್ತದ ಸಕ್ಕರೆ ಮಟ್ಟವು ಕಡಿಮೆ ಆಗುವುದು ಮತ್ತು ಮಧುಮೇಹವನ್ನು ನಿವಾರಣೆಮಾಡುವುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಆಗ ಕಿಡ್ನಿ ಕಲ್ಲುಗಳು ಕೂಡ ನಿವಾರಣೆ ಆಗುವುದು. ಕಿಡ್ನಿಯಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ನಿರ್ಮಾಣವಾಗುವುದನ್ನು ತಡೆಯುವುದು.
- ತುಳಸಿ ಎಲೆಗಳಲ್ಲಿ ಇರುವಂತಹ ಯುಜೆನಾಲ್ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಟ್ಟು ಹೃದಯವನ್ನು ರಕ್ಷಿಸುವುದು. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದು ಕಾಯಿಲೆಗಳಿಂದ ಹೃದಯವನ್ನು ರಕ್ಷಣೆ ಮಾಡುವುದು.
- ತುಳಸಿ ಎಲೆಗಳಲ್ಲಿ ಕ್ಯಾನ್ಸರ್ ವಿರೋಧಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಈ ಅಂಶಗಳು ಬಾಯಿ ಮತ್ತು ಸ್ತನ ಕ್ಯಾನ್ಸರ್ ಬೆಳವಣಿಗೆ ಆಗದಂತೆ ತಡೆಯುವುದು. ಗಡ್ಡೆಗಳಿಗೆ ರಕ್ತ ಸರಬರಾಜು ಆಗುವುದನ್ನು ರಕ್ತನಾಳಗಳಿಗೆ ಕಡಿಮೆ ರಕ್ತ ಪೂರೈಕೆ ಮಾಡುವ ಮೂಲಕ ತಡೆಯುವುದು.
- ತುಳಸಿ ಎಲೆಗಳನ್ನು ಹಸಿಯಾಗಿ ತಿಂದರೆ ಅದರಿಂದ ಹಲವಾರು ಲಾಭಗಳು ಇವೆ ಮತ್ತು ಅದರ ಪೇಸ್ಟ್ ಮಾಡಿಕೊಂಡು ಚರ್ಮಕ್ಕೆ ಹಚ್ಚಿಕೊಳ್ಳಬಹುದು. ತುಳಸಿ ಎಲೆಗಳನ್ನು ತಿನ್ನುವುದು ಅಥವಾ ತುಳಸಿ ನೀರು ಕುಡಿಯುವ ಪರಿಣಾಮ ರಕ್ತದಲ್ಲಿರುವ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ಮೊಡವೆ ಹಾಗೂ ಬೊಕ್ಕೆಗಳು ಚರ್ಮದ ಮೇಲೆ ನಿರ್ಮಣವಾಗುವುದನ್ನು ತಡೆಯುವುದು.
- ತುಳಸಿ ಎಲೆಗಳಲ್ಲಿ ಕ್ಯಾಂಪೇನ್, ವಿಟಮಿನ್ ಸಿ, ಸಿನೋಲ್ ಮತ್ತು ಯುಜೆನಾಲ್ ಶ್ವಾಸಕೋಶದ ಸೋಂಕನ್ನು ನಿವಾರಣೆ ಮಾಡಲು ನೆರವಾಗುವುದು ಮತ್ತು ಉಸಿರುಗಟ್ಟುವ ಸಮಸ್ಯೆ ನಿವಾರಣೆ ಮಾಡುವುದು ತುಳಸಿ ಎಲೆಗಳು ಶ್ವಾಸಕೋಶದಲ್ಲಿ ಕ್ಷಯ ಮತ್ತು ಧೂಮಪಾನದಿಂದ ಆಗಿರುವಂತಹ ಹಾನಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು.
- ತುಳಸಿಯನ್ನು ವಿವಿಧ ಚರ್ಮದ ಅಸ್ವಸ್ಥತೆಗಳು, ಸೋಂಕುಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.ಈ ಔಷಧೀಯ ಸಸ್ಯ ನಿಮ್ಮ ದೇಹಕ್ಕೆ ವಾಸ್ತವ ನಾದದವಾಗಿದ್ದು, ಇದು ಅತ್ಯಂತ ಪ್ರಯೋಜನಕಾರಿ ಮತ್ತು ಅಗ್ಗದ ಸಸ್ಯವಾಗಿದೆ. ಇದು ಭಾರತದ ಉಪಖಂಡದ ಪ್ರತಿಯೊಂದು ಮನೆಯಲ್ಲೂ ಕಂಡುಬರುವ ಮೂಲಿಕೆಯಾಗಿದ್ದು, ಹರಿದ್ವಾರ ಮೂಲದ ಪತಂಜಲಿ ಆಯುರ್ವೇದಿಕ್ ಗುಂಪಿನ ಆಚಾರ್ಯ ಬಾಲ್ ಕೃಷನ್ ಪ್ರಕಾರ ಇದು ಬಹುತೇಕ ರೋಗಗಳಿಗೆ ನೈಸರ್ಗಿಕ ಪರಿಹಾರವಾಗಿದೆ. ಇದು ಜೀವಿತಾವಧಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
- “ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಗುಣಲಕ್ಷಣಗಳೊಂದಿಗೆ ತುಳಸಿ ವೈರಲ್ ಸೋಂಕುಗಳಿಗೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ಸಂತಾನೋತ್ಪತ್ತಿ ವ್ಯವಸ್ಥೆ, ಹೃದಯರಕ್ತನಾಳದ ವ್ಯವಸ್ಥೆ ಮತ್ತು ವಿವಿಧ ಕೂದಲು ಮತ್ತು ಚರ್ಮದ ಅಸ್ವಸ್ಥತೆಗಳು, ಸಾಮಾನ್ಯ ರೋಗಗಳ ವಿರುದ್ಧ ಹೋರಾಡುವ ಮತ್ತು ಚಿಕಿತ್ಸೆಗಾಗಿ ಮತ್ತು ಜೀವನಶೈಲಿ-ಸಂಬಂಧಿತ ವಿಷಯಗಳನ್ನು ತುಳಸಿ ಹೊಂದಿದೆ”
ರೋಗಗಳಿಗೆ ತುಳಸಿ ಎಲೆಯ ಪರಿಹಾರಗಳು
* ಕುಷ್ಠರೋಗ: ತುಳಸಿ ಎಲೆಯ ಸಾರದಿಂದ 10-20 ಮಿಲಿ ತೆಗೆದುಕೊಳ್ಳಿ ಮತ್ತು ಪ್ರತಿದಿನ ಬೆಳಿಗ್ಗೆ ಅದರ ಸೇವನೆಯು ಕುಷ್ಠರೋಗವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳನ್ನು ತೆಗೆದುಕೊಂಡು ನಿಂಬೆ ರಸದಲ್ಲಿ ಅದರ ಪೇಸ್ಟ್ ಮಾಡಿ. ಎಸ್ಜಿಮಾ, ಕುಷ್ಠರೋಗ, ಮತ್ತು ಇತರ ರೋಗಗಳ ಮೇಲೆ ಅಂಟಿಸುವ ಅಪ್ಲಿಕೇಶನ್ ಬಹಳ ಪರಿಣಾಮಕಾರಿಯಾಗಿದೆ.
* ಲ್ಯುಕೋಡರ್ಮಾ: ತುಳಸಿ ಎಲೆ ಸಾರ, ನಿಂಬೆ ಜ್ಯೂಸ್ ಮತ್ತು ಕಂಸುಡಿಗಳನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಸೂರ್ಯನ ಬೆಳಕಿನಲ್ಲಿ 24 ಗಂಟೆಗಳ ಕಾಲ ತಾಮ್ರದ ಮಡಕೆಯಲ್ಲಿ ಶೇಖರಿಸಿಡಬಹುದು. ಉಪಯುಕ್ತ ಫಲಿತಾಂಶಗಳಿಗಾಗಿ ಪೀಡಿತ ಭಾಗಗಳಲ್ಲಿ ಮಿಶ್ರಣವನ್ನು ಅನ್ವಯಿಸಿ.
* ದೇಹ ಸಾಮರ್ಥ್ಯ: 20 ಗ್ರಾಂ ತುಳಸಿ ಬೀಜವನ್ನು ತೆಗೆದುಕೊಂಡು 40 ಗ್ರಾಂ ಸ್ಫಟಿಕ ಸಕ್ಕರೆ ಸೇರಿಸಿ ಮತ್ತು ಎರಡರ ಮಿಶ್ರಣವನ್ನು ಮಾಡಿ. ಚಳಿಗಾಲದಲ್ಲಿ ದಿನನಿತ್ಯ ಈ ಮಿಶ್ರಣವನ್ನು ಸೇವಿಸುವುದರಿಂದ ಕೆಮ್ಮು ಮತ್ತು ಗ್ಯಾಸ್ಟ್ರಿಕ್ ದೂರವಾಗುತ್ತದೆ. ತುಳಸಿಯನ್ನು ಪ್ರತಿದಿನ ತೆಗೆದುಕೊಂಡಿದ್ದೆ ಆದರೆ, ಅದು ದೇಹದ ಪ್ರತಿರಕ್ಷಣಾ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ಬಲಪಡಿಸುತ್ತದೆ.
* ಹಾವಿನ ವಿಷ: ತುಳಸಿ ಎಲೆಗಳ 5-10 ಮಿಲಿಗಳನ್ನು ತೆಗೆದುಕೊಂಡು ಅದನ್ನು ರೋಗಿಗೆ ನಿರ್ವಹಿಸಿ. ರೋಗಿಯ ಪ್ರಜ್ಞೆ ಇಲ್ಲದಿದ್ದರೆ, ನಂತರ ಮೂಗಿನ ಹೊಳ್ಳೆಗಳ ಮೂಲಕ ಸಾರವನ್ನು ಸುರಿಯಿರಿ.
ಈ ವಿಷವು ತಲೆ (ಮಿದುಳು) ಮೇಲೆ ಪ್ರಭಾವ ಬೀರಿದರೆ, ಅದರ ವಾಸನೆಯ ಮೂಲಕ ರೋಗಿಗೆ ಪರಿಹಾರ ನೀಡಲು ಬಾಂಧು, ಜೀವಾ, ಭಂಗರಿ ಮತ್ತು ಕಾಳಿ ತುಳಸಿ ಮೂಲದ ಮಿಶ್ರಣಗಳ ಪುಡಿ ಮಾಡಿ ವಾಸನೆ ನೀಡಿ.
* ಮಲೇರಿಯಾ ಜ್ವರ: ಚಿಕಿತ್ಸೆಯನ್ನು ತೆಗೆದುಕೊಳ್ಳಲು ಪ್ರತಿ ಮೂರು ಗಂಟೆಗೊಮ್ಮೆ ತುಳಸಿ ಮಿಶ್ರಿತ ಚಹಾ ಸೇವಸಿ.
* ಕರುಳಿನ ಜ್ವರ: ಹತ್ತು ತುಳಸಿ ಎಲೆಗಳನ್ನು ಮತ್ತು ಒಂದು ಗ್ರಾಂ ಜ್ಯವಿತ್ರೆಯನ್ನು ತೆಗೆದುಕೊಳ್ಳಿ, ಅದನ್ನು ಪೇಸ್ಟ್ ಮಾಡಿ. ತ್ವರಿತ ಪರಿಹಾರಕ್ಕಾಗಿ ಜೇನುತುಪ್ಪದೊಂದಿಗೆ ಅದನ್ನು ಸೇವಿಸಿ.
* ಕೆಮ್ಮು-ಸಂಬಂಧಿತ ಜ್ವರ: 21 ನಾಗ್ ತುಳಸಿ ದಳ, ಐದು ಲವಂಗಗಳು, 500 ಮಿಲಿ ಶುಂಠಿಯ ಸಾರವನ್ನು ಮಿಶ್ರಣವನ್ನು ಚೆನ್ನಾಗಿ ಬಿಸಿ ಮಾಡಿ ನಂತರ ಫಿಲ್ಟರ್ ಮಾಡಿ ಮತ್ತು 10 ಗ್ರಾಂ ಜೇನುತುಪ್ಪ ಸೇರಿಸಿ. ಇದರ ಸಾಮಾನ್ಯ ಸೇವನೆಯು ಅಂತಹ ಜ್ವರವನ್ನು ಕಡಿಮೆ ಮಾಡುತ್ತದೆ.
* ದುರ್ಬಲತೆ: ತುಳಸಿ ಬೀಜದ ಪುಡಿ ಮತ್ತು ಅದರ ಬೇರಿನ ಪುಡಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಹಸುವಿನ ಹಾಲಿನೊಂದಿಗೆ ಒಂದರಿಂದ ಮೂರು ಗ್ರಾಂ ಮಿಶ್ರಣವನ್ನು ಸೇವಿಸಿದರೆ ದುರ್ಬಲತೆ ಕಡಿಮೆಯಾಗುತ್ತದೆ.
* ಮಗುವಿಗೆ ಜನ್ಮ ನೀಡಿದ ನಂತರ ನೋವು: ಹಳೆಯ ಬೆಲ್ಲವನ್ನು ತೆಗೆದುಕೊಳ್ಳಿ, ತುಳಸಿ ಎಲೆ ಉದ್ಧರಣ ಸೇರಿಸಿ ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಮಗುವಿಗೆ ಜನ್ಮ ನೀಡಿದ ನಂತರ ನೋವನ್ನು ಗುಣಪಡಿಸಲು ತಾಯಿಗೆ ಅದನ್ನು ಸೇವಿಸಲು ನೀಡಿ.
* ವಾಂತಿ: ತುಳಸಿ ಎಲೆಯ ಸಾರ 10 ಮಿಲಿ ತೆಗೆದುಕೊಳ್ಳಿ, 500 ಮಿ.ಗ್ರಾಂ ಏಲಕ್ಕಿ ಪುಡಿಯಲ್ಲಿ ಶುಂಠಿ ಸಾರವನ್ನು ಸಮಾನ ಪ್ರಮಾಣದಲ್ಲಿ ಸೇರಿಸಿ. ಇದರ ಸೇವನೆಯು ವಾಂತಿ ಸಮಸ್ಯೆಯನ್ನು ಪರಿಹಾರವಾಗುತ್ತದೆ.
* ಅಜೀರ್ಣ: ತುಳಸಿಯ 2 ಗ್ರಾಂ ಮಂಜರಿ ತೆಗೆದುಕೊಂಡು ಕಪ್ಪು ಉಪ್ಪಿನೊಂದಿಗೆ ಅದರ ಪೇಸ್ಟ್ ಮಾಡಿ ಮತ್ತು ದಿನಕ್ಕೆ ಮೂರರಿಂದ ನಾಲ್ಕು ಬಾರಿ ರೋಗಿಗೆ ಅದನ್ನು ಸೇವಿಸಲು ನೀಡಿದರೆ ಅಜೀರ್ಣಕ್ಕೆ ಇದು ತುಂಬಾ ಉಪಯುಕ್ತವಾಗಿದೆ.
* ಮೂಳೆ/ ಜಾಯಿಂಟ್ ಪೇನ್ ಸಮಸ್ಯೆ: ಎರಡರಿಂದ ನಾಲ್ಕು ಗ್ರಾಂ ತುಳಸಿ ಪಂಚಾಂಗ ಪುಡಿ ತೆಗೆದುಕೊಂಡು ಅದನ್ನು ಹಾಲಿನೊಂದಿಗೆ ತೆಗೆದುಕೊಳ್ಳಿ ಮತ್ತು ಅದು ಸಮಸ್ಯೆಯನ್ನು ಗುಣಪಡಿಸುತ್ತದೆ.
* ಹಲ್ಲುಗಳಲ್ಲಿ ಊತ: ಮೆಣಸಿನಕಾಯಿ ಮತ್ತು ತುಳಸಿ ಎಲೆಗಳ ಟ್ಯಾಬ್ಲೆಟ್ ಅನ್ನು ತೆಗೆದುಕೊಂಡು ಅದನ್ನು ನೋವಿನ ಹಲ್ಲಿನ ಕೆಳಗೆ ಇರಿಸಿ ಮತ್ತು ಹಲ್ಲು ನೋವು ಗುಣಪಡಿಸುತ್ತದೆ. ಉತ್ಸಾಹವಿಲ್ಲದ ನೀರಿನಲ್ಲಿ ಕೆಲವು ತುಳಸಿ ಸಾರಗಳನ್ನು ಸೇರಿಸಿ ಮತ್ತು ಬಾಯಿಯಲ್ಲಿ ತೊಳೆಯಲು ಅದನ್ನು ಬಳಸಿ. ಇದು ಗಂಟಲು ರೋಗಕ್ಕೆ ಬಹಳ ಸಹಾಯಕವಾಗಿದೆ.ತುಳಸಿ ಸಾರದಿಂದ ಸ್ವಲ್ಪ ನೀರು ತೆಗೆದುಕೊಂಡು ಕೆಲವು ಸೇನ್ಧ ಉಪ್ಪು ಸೇರಿಸಿ ಅದನ್ನು ತೊಳೆದುಕೊಳ್ಳಲು ಬಳಸಿದರೆ ಅದು ಹಲ್ಲು, ಬಾಯಿ ಮತ್ತು ಗಂಟಲಿನ ಸಮಸ್ಯೆಯನ್ನು ಪರಿಹರಿಸುತ್ತದೆ.
* ಕಿವಿ ಸಮಸ್ಯೆ: ಬೆಚ್ಚಗಿನ ತುಳಸಿ ಸಾರವನ್ನು ತೆಗೆದುಕೊಂಡು ಕಿವಿಗೆ ಸುರಿಯಿರಿ. ಇದು ಸಮಸ್ಯೆಯನ್ನು ಗುಣಪಡಿಸುತ್ತದೆ. ತುಳಸಿ ಎಲೆಗಳು, ಕ್ಯಾಸ್ಟರ್ ಹೊಸ ಎಲೆಗಳು ಮತ್ತು ಉಪ್ಪಿನ ತುಪ್ಪಳವನ್ನು ತೆಗೆದುಕೊಂಡು ಅಂಟಿಸಿ ಮತ್ತು ಕಿವಿಯ ಮೇಲೆ ಲ್ಯೂಕ್ ನೀರಿನ ಪೇಸ್ಟ್ ಅನ್ನು ಅರ್ಜಿ ಮಾಡಿ ಮತ್ತು ಅದು ತ್ವರಿತ ಪರಿಹಾರವನ್ನು ನೀಡುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವ ಮತ್ತೊಂದು ಸರಳ ವಿಧಾನ
3-4 ತುಳಸಿ ಎಲೆಗಳನ್ನು ಸರಿಯಾಗಿ ತೊಳೆಯಿರಿ.
ಇದನ್ನು ಸರಿಯಾಗಿ ಜಗಿಯಿರಿ ಮತ್ತು ಒಂದರಿಂದ ಎರಡು ಲೋಟ ನೀರು ಕುಡಿಯಿರಿ.
ಇದರ ಬಳಿಕ 30 ನಿಮಿಷ ಕಾಲ ಏನೂ ತಿನ್ನಬೇಡಿ.
ಈ ವಿಧಾನವನ್ನು ಒಂದು ತಿಂಗಳ ಕಾಲ ಮುಂದುವರಿಸಿ ಮತ್ತು ಈ ವೇಳೆ ನಿಮಗೆ ಪ್ರತಿರೋಧಕವ್ಯವಸ್ಥೆಯು ಉತ್ತಮವಾಗಿರುವುದು ಕಂಡುಬರುವುದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ತುಳಸಿ ಎಲೆಗಳನ್ನು ಸೇವಿಸಿದರೆ ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯ ವಾಗಿರುವುದು, ಜೊತೆಗೆ ಬಾಯಿಯ ದುರ್ವಾಸನೆ ಮತ್ತು ಇತರ ಸಮಸ್ಯೆಗಳನ್ನು ನಿವಾರಣೆ ಆಗುವುದು.
ಅನ್ಯ ವಸ್ತು ವಿಶೇಷಗಳೊಂದಿಗೆ ತುಲನೆಯೇ ಮಾಡಲಾಗದ ತುಳಸಿಯ ಬಗೆಗಿನ ಮಹತ್ವದ ಸಂಗತಿಗಳು ಇನ್ನೂ ಬಹಳವಿದೆ ಭಾರತದಲ್ಲಿ ಅದರಲ್ಲೂ ಹಿಂದೂಗಳು ತುಳಸಿಯನ್ನು ತುಂಬಾ ಪವಿತ್ರವೆಂದು ಭಾವಿಸುವರು. ತುಳಸಿ ಗಿಡದಲ್ಲಿ ದೇವದೇವತೆಗಳು ನೆಲೆಸಿರುವರು ಎಂದು ಪುರಾಣಗಳು ಕೂಡ ಹೇಳಿವೆ. ಅದೇ ರೀತಿಯಲ್ಲಿ ತುಳಸಿ ಗಿಡವನ್ನು ಪುರಾತನ ಕಾಲದಿಂದಲೂ ಆಯುರ್ವೇದ ದಲ್ಲಿ ಔಷಧಿಯಾಗಿಯೂ ಬಳಸಿಕೊಂಡು ಬರಲಾಗುತ್ತಾ ಇದೆ. ತುಳಸಿ ಎಲೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎಂದು ಹೇಳಲಾಗುತ್ತದೆ.
FAQ :
ನೆಲದ ಮೇಲೆ ಬೆಳೆಯುವ ಸಸ್ಯದ ಭಾಗಗಳನ್ನು ಔಷಧ ತಯಾರಿಸಲು ಬಳಸಲಾಗುತ್ತದೆ.
ತುಳಸಿಯನ್ನು ಹೊಟ್ಟೆಯ ಸೆಳೆತ, ಹಸಿವಿನ ಕೊರತೆ, ಕರುಳಿನ ಅನಿಲ, ಮೂತ್ರಪಿಂಡದ ಪರಿಸ್ಥಿತಿಗಳು, ದ್ರವದ ಧಾರಣ, ತಲೆ ಶೀತಗಳು, ನರಹುಲಿಗಳು ಮತ್ತು ವರ್ಮ್ ಸೋಂಕುಗಳಿಗೆ ಬಳಸಲಾಗುತ್ತದೆ .
ಹಾವು ಮತ್ತು ಕೀಟ ಕಡಿತಕ್ಕೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
ಈ ಉರಿಯೂತದ ಗುಣಲಕ್ಷಣಗಳು ಸಂಧಿವಾತದಂತಹ ಉರಿಯೂತದ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದ್ರೋಗ, ಮತ್ತು ಕರುಳಿನ ಸಮಸ್ಯೆಗಳು. ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಮೂಲಿಕೆಯಲ್ಲಿರುವ ತೈಲಗಳು ಉಸಿರಾಟ, ಮೂತ್ರ, ಕಿಬ್ಬೊಟ್ಟೆಯ ಮತ್ತು ಚರ್ಮದ ಸೋಂಕಿನ ಜನರಲ್ಲಿ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ
ಇತರ ವಿಷಯಗಳನ್ನು ಓದಿ :
ಹಾಗೇ ನೀವು ಆನ್ಲೈನಲ್ಲಿ ತುಳಸಿ ಎಲೆಗಳು ಅಥವಾ ತುಳಸಿ ಗಿಡಗಳನ್ನು ಖರೀದಿ ಮಾಡಬಹುದು ನಾನು ನಿಮಗೆ ಕೆಳಗಡೆ ಲಿಂಕನ್ನು ಕೊಟ್ಟಿದ್ದೇನೆ ಅಲ್ಲಿಂದ ಕ್ಲಿಕ್ ಮಾಡಿ :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಿ