Fennel Seeds in Kannada | ಸೋಂಪು ಕಾಳು ಬಗ್ಗೆ ಮಾಹಿತಿ

ಸೋಂಪು ಕಾಳುಗಳ ಬಗ್ಗೆ ಮಾಹಿತಿ, ಸೋಂಪು ಕಾಳು ಉಪಯೋಗ, Fennel Seeds in Kannada, Fennel in Kannada, Health Benifits of Fennel Seeds, Sompu Benefits in Kannada Fennel Powder in Kannada

Contents

Sompu Kalu Uses in Kannada

ಸೋಂಪು ಕಾಳು

ಬಹಳ ಹಿಂದಿನಿಂದಲೂ ಭಾರತದಲ್ಲಿ ಸೋಂಪು ಕಾಳನ್ನು ಹಲವಾರು ಔಷಧೀಯ ಬಳಕೆಯಾಗಿ ಬಳಸಲಾಗುತ್ತಾ ಬರಲಾಗಿದೆ. ಪ್ರಮುಖವಾಗಿ ಜೀರ್ಣಕ್ರಿಯೆ ಸುಲಭಗೊಳಿಸುವ ಗುಣ.

ಇದೇ ಕಾರಣಕ್ಕೆ ಭಾರತ ಸಹಿತ ಹಲವು ದೇಶಗಳಲ್ಲಿ ಊಟವಾದ ಬಳಿಕ ತಿನ್ನಲು ಸೋಂಪು ಕಾಳನ್ನು ನೀಡಲಾಗುತ್ತದೆ.

ಈ ಕಾಳುಗಳು ಜೀರಿಗೆಗಿಂತ ಕೊಂಚವೇ ದೊಡ್ಡದಿದ್ದು ಗಾಢ ಹಸಿರು ಬಣ್ಣದ್ದಾಗಿರುತ್ತವೆ ಹಾಗೂ ಇವುಗಳಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟುಗಳು (ಉತ್ಕರ್ಷಣಾ ನಿರೋಧಕ ಗುಣ) ಮತ್ತು ಇತರ ಪೋಷಕಾಂಶಗಳು ದೇಹಕ್ಕೆ ಅದ್ಬುತ ಎನಿಸುವ ಪರಿಣಾಮಗಳನ್ನು ಒದಗಿಸುತ್ತವೆ.

ಹೆಚ್ಚಾಗಿ ಜನರು ಊಟವಾದ ಮೇಲೆ ಸೋಂಪು (fennel) ತಿನ್ನುತ್ತಾರೆ. ಬಾಯಿ ವಾಸನೆ ಹೋಗಲಿ, ಜೀರ್ಣ ಕ್ರೀಯೆ ಚೆನ್ನಾಗಿ ಆಗಲಿ ಎನ್ನುವ ಉದ್ದೇಶದಿಂದ ಸೋಂಪು ತಿನ್ನುತ್ತಾರೆ

ನಿಮ್ಮಲ್ಲಿ ಬೊಜ್ಜು ಹೆಚ್ಚಾಗುತ್ತಿದ್ದರೆ ಸೋಂಪು ತಿಂದು ನೋಡಿ. ಸಾಮಾನ್ಯವಾಗಿ ಸೋಂಪು ದೇಹದಲ್ಲಿ ಬೊಜ್ಜು ಸಂಗ್ರಹವಾಗಲು ಬಿಡುವುದಿಲ್ಲ ಎಂದು ಆಹಾರ ತಜ್ಞರು ಹೇಳುತ್ತಾರೆ.

ಸೋಂಪು ಕಾಳುಗಳ ಆರೋಗ್ಯಕರ ಉಪಯೋಗಗಳು / Health Benifits of Fennel Seeds

ಬೊಜ್ಜು ಕರಗಿಸುತ್ತೆ ಸೋಂಪು

ನಿಮ್ಮಲ್ಲಿ ಬೊಜ್ಜುಹೆಚ್ಚಾಗುತ್ತಿದ್ದರೆ ಸೋಂಪು ತಿಂದು ನೋಡಿ. ಸಾಮಾನ್ಯವಾಗಿ ಸೋಂಪು ದೇಹದಲ್ಲಿ ಬೊಜ್ಜು ಸಂಗ್ರಹವಾಗಲು ಬಿಡುವುದಿಲ್ಲ ಎಂದು ಆಹಾರ ತಜ್ಞರು ಹೇಳುತ್ತಾರೆ. ನಿಮ್ಮ ತೂಕ ಇಳಿಸಲು  ಕೂಡಾ ಇದು ನೆರವಾಗುತ್ತದೆ.

ಮೆಟಬಾಲಿಕ್ ರೇಟ್ ಹೆಚ್ಚಿಸುತ್ತದೆ :

ನಮ್ಮ ದೇಹದಲ್ಲಿ ಮೆಟಬಾಲಿಕ್ ರೇಟ್ ಕಡಿಮೆ ಆದಾಗ ಬೊಜ್ಜು ಉಂಟಾಗುತ್ತದೆ. ಆದರೆ, ಸೋಂಪು ದೇಹದ ಮೆಟಬಾಲಿಕ್ ರೇಟ್ ಹೆಚ್ಚಿಸುತ್ತದೆ. ಹಾಗಾಗಿ, ದೇಹದ ತೂಕ ಕಡಿಮೆ (Weight loss) ಆಗುತ್ತದೆ.

ಅನಗತ್ಯ ಹಸಿವನ್ನು ತಡೆಯುತ್ತದೆ :

ಕೆಲವೊಮ್ಮೆ ನಮಗೆ ಸಮಯ ಅಲ್ಲದ ಸಮಯದಲ್ಲಿ ಹಸಿವಾಗಿರುತ್ತದೆ. ಹಾಗಾಗಿ ಹೊತ್ತಲ್ಲದ ಹೊತ್ತಲ್ಲಿ ನಮಗೆ ಹಸಿವಾಗುತ್ತದೆ. ಸಿಕ್ಕಾಪಟ್ಟೆ ತಿನ್ನುತ್ತೇವೆ. ಸೋಂಪು ಇದನ್ನು ತಡೆಗಟ್ಟುತ್ತದೆ.

​ಕಣ್ಣ ಕೆಳಗಿನ ಊದಿಕೊಂಡಿರುವುದನ್ನು ಸರಿಪಡಿಸುತ್ತದೆ

ಕೆಲವೊಮ್ಮೆ ಮುಂಜಾನೆ ಎದ್ದಾಗ ಕಣ್ಣ ಕೆಳಗಿನ ಭಾಗ ಒಳಗಿನಿಂದ ನೀರು ತುಂಬಿಕೊಂಡಂತೆ ಉಬ್ಬಿರುತ್ತದೆ. ಇದಕ್ಕೆ Puffy eyes ಅಥವಾ ಊದಿಕೊಂಡ ಕಣ್ಣುಗಳು ಎಂದು ಕರೆಯುತ್ತಾರೆ.

ಸೋಂಪು ಕಾಳಿನ ತಂಪುಕಾರಕ ಗುಣ ಕಣ್ಣುಗಳ ಕೆಳಗಿನ ಭಾಗದಲ್ಲಿ ಊದಿಕೊಳ್ಳಲು ಕಾರಣವಾಗಿರುವ ಅಂಶವನ್ನು ಶಮನಗೊಳಿಸಿ ಊದಿಕೊಂಡಿರುವುದನ್ನು ಮೊದಲಿನಂತಾಗಿಸಲು ನೆರವಾಗುತ್ತದೆ.

​ಮೊಡವೆಗಳ ವಿರುದ್ಧ ಹೋರಾಡುತ್ತದೆ

ಯಾವುದೇ ಹದಿಹರೆಯದ ಯುವಕ ಯುವತಿಯರಿಗೆ ಮೊಡವೆಗಳು ಕಾಡುವ ದುಃಸ್ವಪ್ನವಾಗಿವೆ. ಒಂದು ವೇಳೆ ನಿಮ್ಮ ತ್ವಚೆಯಲ್ಲಿ ಸದಾ ಮೊಡವೆಗಳು ಮೂಡುತ್ತಿದ್ದರೆ ಸೋಂಪು ಕಾಳು ಇದರ ಪರಿಹಾರಕ್ಕೆ ಸಾಕು.

​ಕೂದಲ ಬುಡಗಳನ್ನು ದೃಢಗೊಳಿಸುತ್ತದೆ.

ಕೂದಲ ಉದುರುವಿಕೆ ಪ್ರತಿ ಯುವತಿಯ ದುಃಸ್ವಪ್ನವಾಗಿದೆ. ಆದರೆ ಇದನ್ನು ತಡೆಯಲು ಸೋಂಪು ಕಾಳುಗಳಿರುವವರೆಗೂ ನೀವು ಚಿಂತಿಸುವ ಅಗತ್ಯವಿಲ್ಲ.

ಬಾಯಿ ದುರ್ವಾಸನೆ ಹೋಗಲಾಡಿಸುತ್ತದೆ :

ಸೋಂಪು ಕಾಳನ್ನು ಪ್ರತಿದಿನ ಊಟವಾದ ಬಳಿಕ ಒಂದೆರಡು ಚಮಚ ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. ಊಟದ ನಂತರ ತಿನ್ನುವುದರಿಂದ ಬಾಯಲ್ಲಿನ ವಾಸನೆಯೂ ಕಮ್ಮಿಯಾಗುತ್ತದೆ.

ಮುಟ್ಟಿನ ನೋವು ನಿವಾರಿಸುತ್ತೆ :

ಸೋಂಪು ಅನ್ನು ನೀರಿನಲ್ಲಿ ಕುದಿಸಿ, ಅದನ್ನು ಸೇವಿಸುವುದರಿಂದ ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೊಟ್ಟೆನೋವು ಮತ್ತು ಇತರೆ ತೊಂದರೆ ನಿವಾರಣೆಯಾಗುವುದು ಹಾಗೂ ಮುಟ್ಟು ನಿಯಮಿತವಾಗುತ್ತದೆ.

ಮಕ್ಕಳ ಹೊಟ್ಟೆ ಸಮಸ್ಯೆ ನಿವಾರಿಸುತ್ತೆ :

ಇದು ಮಕ್ಕಳಿಗೂ ಒಳ್ಳೆಯದು. ಇದರಿಂದ ಅವರಲ್ಲಿ ಉಂಟಾಗುವ ಉದರ ತೊಂದರೆಗಳ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ :

ಅಜೀರ್ಣ ಸಮಸ್ಯೆಯಿಂದ ಬಳಲುವವರು ಊಟದ ನಂತರ ಸ್ವಲ್ಪ ಸೋಂಪು ತಿಂದರೆ ಸಾಕು ಜೀರ್ಣಕ್ರಿಯೆಗೆ ಸಹಕಾರಿಯಾಗುವುದು

ಮನೆಯಲ್ಲಿಯೇ ಈ ವ್ಯಾಯಾಮವನ್ನು ಮಾಡೋದ್ರಿಂದ ತೋಳಿನಲ್ಲಿರುವ ಬೊಜ್ಜನ್ನು ಕರಗಿಸಬಹುದುಮನೆಯಲ್ಲಿಯೇ ಈ ವ್ಯಾಯಾಮವನ್ನು ಮಾಡೋದ್ರಿಂದ ತೋಳಿನಲ್ಲಿರುವ ಬೊಜ್ಜನ್ನು ಕರಗಿಸಬಹುದು

ಮೆದುಳಿನ ಆರೋಗ್ಯ :

ಸೋಂಫು ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಆಹಾರಗಳಲ್ಲಿ ಒಂದಾಗಿದೆ. ಇದು ಮೆದುಳಿನ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ.

ಉಸಿರಾಟದ ಕ್ರಿಯೆಗೆ ಸಹಾಯ ಮಾಡುತ್ತದೆ: ಅಲರ್ಜಿಯಿಂದ ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಂಡಿದ್ದರೆ ಇದನ್ನು ತಿಂದರೆ ಗುಣವಾಗುವುದು.

ಸೋಂಪು ಕಾಳುಗಳನ್ನು ತಿನ್ನುವುದರಿಂದ ಆಗುವ ಅಡ್ಡ ಪರಿಣಾಮಗಳು / Side Effects Fennel Seeds in Kannada

ದೊಡ್ಡ ಜೀರಿಗೆ ಅಥವಾ ಸೌಂಫ್ ಊಟದ ನಂತರ ಜಗಿದರೆ ಜೀರ್ಣಕ್ರಿಯೆ ಉತ್ತಗೊಳ್ಳುತ್ತದೆ ಎಂಬ ಕಾರಣಕ್ಕೆ ನಾವೆಲ್ಲರೂ ತಿನ್ನುತ್ತೇವೆ.

ಆದರೆ ಇದನ್ನು ಸೇವಿಸುವ ಪ್ರಮಾಣಕ್ಕೊಂದು ಮಿತಿ ಇದೆ. ಇದು ಮೀರಿದರೆ ಕೆಲವಾರು ತೊಂದರೆಗಳು ಎದುರಾಗಬಹುದು.

ಆದರೆ, ಹಾಗೆಂದು ಅತಿಯಾದ ಪ್ರಮಾಣದಲ್ಲಿ ಈ ಕಾಳುಗಳನ್ನು ಸೇವಿಸಬಾರದು. ಏಕೆಂದರೆ,

ಇದರಿಂದ ಕೆಲವಾರು ಅಡ್ಡ ಪರಿಣಾಮಗಳು ಎದುರಾಗುತ್ತವೆ. ಇಂದಿನ ಲೇಖನದಲ್ಲಿ ಈ ಅಡ್ಡ ಪರಿಣಾಮಗಳನ್ನು ವಿವರಿಸಲಾಗಿದೆ, ಬನ್ನಿ, ನೋಡೋಣ:

​ಗರ್ಭಾಶಯಕ್ಕೆ ಅನಗತ್ಯ ಪ್ರಚೋದನೆ ನೀಡಬಹುದು

ತಜ್ಞರ ಪ್ರಕಾರ, ಗರ್ಭವತಿಯರು ದೊಡ್ಡ ಜೀರಿಗೆಯನ್ನು ಸೇವಿಸಬಾರದು. ಏಕೆಂದರೆ, ಇದು ಅವಧಿಗೂ ಮುನ್ನ ಗರ್ಭಾಶಯಕ್ಕೆ ಅನಗತ್ಯ ಪ್ರಚೋದನೆ ನೀಡಿ ಅವಧಿಪೂರ್ವ ಪ್ರಸವಕ್ಕೆ ಕಾರಣವಾಗಬಹುದು.

​ಕೆಲವು ಅಲರ್ಜಿಗಳು ಎದುರಾಗಬಹುದು

ಆಸ್ತಮಾ, ಚರ್ಮದ ಅಲರ್ಜಿ ಇರುವ ವ್ಯಕ್ತಿಗಳಿಗೆ ದೊಡ್ಡ ಜೀರಿಗೆಯೂ ಅಲರ್ಜಿಕಾರಕ ಕಣವಾಗಬಹುದು. ಈ ವ್ಯಕ್ತಿಗಳು ದೊಡ್ಡ ಜೀರಿಗೆಯನ್ನು ಅತಿ ಮಿತ ಪ್ರಮಾಣದಲ್ಲಿ ಸೇವಿಸಬೇಕು ಅಥವಾ ಕೊಂಚ ಅಲರ್ಜಿಯ ಲಕ್ಷಣ ಕಾಣಿಸಿದರೂ ಸೇವಿಸಬಾರದು.

ಆರೋಗ್ಯ ತಜ್ಞರ ಪ್ರಕಾರ, ಕೆಲವು ವ್ಯಕ್ತಿಗಳಲ್ಲಿ ಹೊಟ್ಟೆಯ ಸೆಡೆತ ಎದುರಾಗಲು ದೊಡ್ಡ ಜೀರಿಗೆಯ ಪ್ರತಿಕ್ರಿಯೆಯ ಪರಿಣಾಮವೇ ಕಾರಣವಾಗಿದೆ. ಅಂದರೆ, ಜೀರ್ಣಕ್ರಿಯೆಗೆ ಇದು ನೀಡುವ ಪ್ರಚೋದನೆಯೇ ಹೆಚ್ಚಾಗಿ ಸ್ನಾಯುಸೆಡೆತಕ್ಕೆ ಕಾರಣವಾಗಬಹುದು.

​ಚರ್ಮದ ಸೋಂಕು ಕಾಣಿಸಿಕೊಳ್ಳಬಹುದು.

ಚರ್ಮದ ಹೊರಪದರಲ್ಲಿ ಅತಿ ಚಿಕ್ಕ ಗುಳ್ಳೆಗಳು ಎದುರಾಗಿ ಒಳಗೆ ನೀರು ತುಂಬಿಕೊಂಡು ಬಳಿಕ ಒತ್ತಡ ಹೆಚ್ಚಿ ಬಿರಿಯುತ್ತವೆ. ಈ ಸ್ಥಿತಿಗೆ ಕಾಂಟ್ಯಾಕ್ಟ್ ಡರ್ಮಟೈಟಿಸ್ ಎಂದು ಕರೆಯುತ್ತಾರೆ.

ನೋಡಲಿಕ್ಕೆ ಇವು ಬೆವರುಸಾಲೆ ಗುಳ್ಳೆಗಳಂತೆಯೇ ಇದ್ದರೂ, ಇವು ವಾಸ್ತವದಲ್ಲಿ, ಚರ್ಮದ ಸೋಂಕಿನಿಂದ ಎದುರಾಗಿರುವ ಅತಿ ಚಿಕ್ಕ ಗಾತ್ರದ ಗುಳ್ಳೆಗಳಾಗಿವೆ.

ಈ ಗುಳ್ಳೆಗಳಿಗೆ ದೊಡ್ಡ ಜೀರಿಗೆಯ ಎಣ್ಣೆಯನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸುವುದೇ ಕಾರಣ ಎಂದು ಅಧ್ಯಯನಗಳು ಸ್ಪಷ್ಟಪಡಿಸಿವೆ.

​ಇತರ ಔಷಧಿಗಳೊಂದಿಗೂ ಮಿಶ್ರ ಪ್ರತಿಕ್ರಿಯೆಗೆ ಒಳಗಾಗಬಹುದು
ಒಂದು ವೇಳೆ ನೀವು ಅಪಸ್ಮಾರ ಮೊದಲಾದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ ಈ ದೊಡ್ಡ ಜೀರಿಗೆಗಳನ್ನು ಸೇವಿಸಲೇಬಾರದು.

ಏಕೆಂದರೆ ಇವು ನಿಮ್ಮ ಔಷಧಿಗಳೊಂದಿಗೆ ಪ್ರತಿಕ್ರಿಯೆಗೊಂಡು ಔಷಧಿಯ ಪ್ರಭಾವವನ್ನು ಬದಲಿಸಬಹುದು ಹಾಗೂ ಮಿಶ್ರ ಪ್ರತಿಕ್ರಿಯೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಕಾಯಿಲೆ ಉಲ್ಬಣಗೊಳ್ಳಲೂಬಹುದು.

FAQ ;

ಸೋಂಪು ಕಾಳುಗಳನ್ನು ಯಾವುದಕ್ಕಾಗಿ ಬಳಸಲಾಗುತ್ತದೆ?

ಜನರು ವಿವಿಧ ಉದ್ದೇಶಗಳಿಗಾಗಿ ಸೋಂಪಾ ಕಾಳುಗಳನ್ನು ಬಳಸುತ್ತಾರೆ. 
ಅವುಗಳಲ್ಲಿ ಕೆಲವು ಪಿರಿಯಡ್ಸ್ ನೋವನ್ನು ನಿವಾರಿಸುವುದು, ಕೆಟ್ಟ ಉಸಿರಾಟದ ವಿರುದ್ಧ ಹೋರಾಡುವುದು, ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮತ್ತು ತೂಕವನ್ನು ಕಳೆದುಕೊಳ್ಳುವುದು.

ಊಟದ ನಂತರ ಸೋಂಪುಕಾಳುಗಳನ್ನು ತಿನ್ನಲು ಕಾರಣವೇನು?

ಹೆಚ್ಚಾಗಿ ಜನರು ಊಟವಾದ ಮೇಲೆ ಸೋಂಪು (fennel) ತಿನ್ನುತ್ತಾರೆ. ಬಾಯಿ ವಾಸನೆ ಹೋಗಲಿ, ಜೀರ್ಣ ಕ್ರೀಯೆ ಚೆನ್ನಾಗಿ ಆಗಲಿ ಎನ್ನುವ ಉದ್ದೇಶದಿಂದ ಸೋಂಪು ತಿನ್ನುತ್ತಾರೆ

ಇತರ ವಿಷಯಗಳು :

Chia Seeds in Kannada

Onion in Kannada

Japatri in Kannada

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ 

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಸೋಂಪು ಕಾಳಿನ ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *