Japatri in Kannada | Mace in Kannada | ಜಾಯಿಕಾಯಿ

Japatri in Kannada

ಜಾಯಿಕಾಯಿ Jayikaayi

ಇಂಡೋನೇಶಿಯಾ ತವರಾಗಿರುವಂತಹ ಜಾಯಿಕಾಯಿಯು ತುಂಬಾ ಸುವಾಸನೆ ನೀಡುವ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ಇದು ಮೈರಿಸ್ಟಿಕಾಸಿ ಸಸ್ಯ ಕುಟುಂಬಕ್ಕೆ ಸೇರಿದ ಮರ.ಈ ಮರ ವನ್ನು ಶಾಸ್ತ್ರೀಯ ವಾಗಿ ಹೆಸರು ಮಿರಿಸ್ಟಿಕ ಫ್ರಾಗ್ರನ್ಸ್ಎಂದು ಕೆರೆಯುತ್ತಾರೆ

ಇದು ಉಷ್ಣ ಹಾಗೂ ಖಾರ ರುಚಿ ಹೊಂದಿದೆ. ಹೀಗಾಗಿ ಇದನ್ನು ಕೆಲವೊಂದು ಪಾನೀಯ, ಕಾಫಿ ಪಾನೀಯಗಳ ಅಲಂಕಾರಗಳಿಗೆ ಬಳಕೆ ಮಾಡಲಾಗುತ್ತದೆ.

ಚೀಸ್ ಹಾಗೂ ಕ್ರೀಮ್ ಹೊಂದಿರುವ ಖಾದ್ಯಗಳಿಗೆ ಇದು ಒಳ್ಳೆಯ ರೀತಿ ಹೊಂದಾಣಿಕೆ ಆಗುವುದು.

 

japatri in kannada ಬೆಳೆಯುವ ವಿಧಾನ Beleyuva vidhana

ಜಾಯಿಕಾಯಿ’ಮರಗಳನ್ನು ಬೆಳೆಯುವುದು ಅತಿ ಸುಲಭ.

ಈ ಸಸ್ಯಕ್ಕೆ ಸುಮಾರು ಶೇಕಡಾ ೧೦% ರಷ್ಟು ನೆರಳಿದ್ದರೆ ಉತ್ತಮ. ಹಿತ್ತಲಿನಲ್ಲಿ ಬಿಸಿಲುಬೀಳುವ ಕಡೆ ತೋಟದ ಬದಿಯಲ್ಲಿ ಬೇಲಿಗಳಲ್ಲಿ ಹೀಗೆ ಸದಾ ತೇವಾಂಶವಿರುವ ಮಣ್ಣಿನಲ್ಲಿ ಇವುಗಳನ್ನುನಾಟಿ ಮಾಡಬಹುದು.

ನಾಟಿಮಾಡಿದ ೬-೭ ವರ್ಷಗಳಲ್ಲಿ ಕಾಯಿಬಿಡಲು ಆರಂಭವಾಗುತ್ತದೆ. ಮರ ಬೆಳೆದಂತೆ ವಿಸ್ತಾರವಾಗಿ ಹರಡಿಕೊಂಡು ಫಸಲು ಬಿಡಲು ಪ್ರಾರಂಭಿಸುತ್ತದೆ.

ರೋಗ ಕೀಟಬಾಧೆ ಕಡಿಮೆ ಇರುವ ಈ ಸಸ್ಯಕ್ಕೆ ಎರಡು ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ ಹಾಗೂ ಸ್ವಲ್ಪ ರಸಗೊಬ್ಬರ ದ ಆರೈಕೆ ಮಾಡುವುದು ಒಳ್ಳೆಯದು.

ಇದರ ಹಣ್ಣಿನಲ್ಲಿ ಎರಡು ಭಾಗಗಳಿವೆ. ತಿರುಳು(Nutmeg) ಹಾಗೂ ಅದನ್ನು ಆವರಿಸಿರುವ ಸಿಪ್ಪೆ(Mace).ಎರಡೂ ಮಾರುಕಟ್ಟೆಯಲ್ಲಿ ಬೆಲೆಬಾಳುವುವಂತಹುದು.

ಒಂದೇ ಮರದಲ್ಲಿ ಜಾಯಿಕಾಯಿ ಮತ್ತು ಜಾಯಿಪತ್ರೆ ಎಂಬ ಎರಡು ಸಾಂಬಾರ ಪದಾರ್ಥಗಳಿರುವುದೇ ಇದರ ವಿಶೇಷತೆ. ತಿರುಳು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ,ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.

ಜಾಯಿಪತ್ರೆ ಸಾಂಬಾರ ಪದಾರ್ಥಗಳಲ್ಲಿ ಉಪಯೋಗವಾಗುತ್ತದೆ.ಇದು ಸುವಾಸಿತ,ಉತ್ತೇಜಕ ಹಾಗೂ ವಾತಹರ.ಹೆಚ್ಚಿನ ಪ್ರಮಾಣದಲ್ಲಿ ಇದು ಇಂದ್ರಿಯಸ್ಠಂಭವೂ (Narcotic)ಆಗಿರುವುದು. ಹೊಂಬಣ್ಣದ ಬೀಜದೊಳಗೆ ಸುಂದರವಾದ ಕೆಂಪುಬಣ್ಣದ ಪತ್ರೆಯನ್ನು ಕಾಣುತ್ತೇವೆ.

ಇದು ಒಳಗಿನ ಬೀಜಕ್ಕೆ ಕವಚವಿದ್ದಂತೆ. ಕವಚವನ್ನು ಬೇರ್ಪಡಿಸಿ ಒಣಗಿಸಿ ಶೇಖರಿಸಿಡುತ್ತಾರೆ. ಜಾಯಿಕಾಯಿನ ಹೊರಕವಚ ಒಡೆದರೆ ಕಾಯಿದೊರೆಯುತ್ತದೆ. ಇವೆರಡಕ್ಕೂ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.

 

ಪರಿಷ್ಕರಣೆ ಮಾಡುವ ವಿಧಾನ Parishkarane vidana

ಒಂದೇ ಮರದಲ್ಲಿ ಜಾಜಿಕಾಯಿ,ಜಾಜಿ ಪತ್ರೆ ಎಂಬ ಎರಡು ಪದಾರ್ಥ ಗಳು ಸಿಗುತ್ತವೆ.ಈ ಎರಡು ಪದಾರ್ಥಗಳನ್ನ ಸಾಂಬಾರ ಪದಾರ್ಥಗಳನ್ನಾಗಿ ಬಳಸುತ್ತಾರೆ..

ಮರ ಬೆಳೆದಂತೆ ವಿಸ್ತಾರವಾಗಿ ಹರಡಿಕೊಂಡು ಫಸಲು ಬಿಡಲು ಮೊದಲಾಗುತ್ತದೆ.ಜಾಯಿಮರದಲ್ಲಿ ಗಂಡು ಹಾಗೂ ಹಣ್ಣು ಮರ ಬೇರೆಬೇರೆ ಇರುತ್ತವೆ.

ಜಾಜಿಕಾಯಿ ಮರಗಳನ್ನು ಸುಲಭವಾಗಿ ಬೆಳೆಸಲಾಗುತ್ತದೆ.ಈ ಮರದ ಸಸ್ಯಕ್ಕೆ ಶೇಕಡಾ ೧೦%ರಷ್ಟು ನೆರಳಿದ್ದರೆ ಸಾಕು. ಸಸ್ಯವು ನಾಟಿಮಾಡಿದ ೬-೭ ವರ್ಷಗಳಲ್ಲಿ ಹಣ್ಣು ಬಿಡುವುದು ಆರಂಭವಾಗುತ್ತದೆ.

ಕಾಯಿ ಕಚ್ಚಲು ಒಂದು ಎಕರೆಗೆ ೨-೪ ಗಂಡುಮರಗಳನ್ನು ನಾಟ ಮಾಡಬೇಕಾಗುತ್ತದೆ.ಕಾಯಿಗಳನ್ನು ಬಿಡುವ ಸಮಯ ಮೇ-ಜುಲೈ ವರೆಗೆ. ಜಾಜಿಕಾಯಿ ಹೊಂಬಣ್ಣದಲ್ಲಿರುತ್ತದೆ.ಹಣ್ಣಾದ ಮೇಲೆ ಕಾಯಿಗಳು ತಾವಾಗಿಯೇ ಕೆಳಗೆ ಬಿಳುತ್ತವೆ.

ಈ ರೀತಿ ಬೀಳುವಾಗ ಜಾಪತ್ರೆ ಹಾಳಾಗುವುದರಿಂದ ಕಾಯಿಗಳನ್ನು ಕೊಯ್ದು ಪಾತ್ರೆ ಮತ್ತು ಕಾಯಿಗಳನ್ನು ಬೇರ್ಪಡಿಸಿ ಒಣಗಿಸಬೇಕು.

ಹಣ್ಣುಗಳನ್ನು ಸಂಗ್ರಹಿಸಿ ಹಣ್ಣಿನ ಮೇಲಿರುವ ಸಿಪ್ಪೆಯನ್ನೆಲ್ಲ ತೆಗೆದು, ಬೀಜವನ್ನು ಜಾಪತ್ರೆಯಿಂದ ಬೇರ್ಪಡಿಸಿ ಒಣಗಿಸಬೇಕು.

ಇದನ್ನು ಅಲ್ಲಾಡಿಸಿದಾಗ ಬೀಜದ ತಿರುಳು ಶಬ್ದ ಮಾಡಿದರೆ ಬೀಜ ಪೂರ್ತಿ ಒಣಗಿದೆ ಎಂದಾಗುತ್ತದೆ. ಅನಂತರ ಬೀಜದ ಸಿಪ್ಪೆಯನ್ನು ಕೊಡತಿಯಿಂದ ಇಲ್ಲವೆ ಬೇರೆ ಸೂಕ್ತವಾದ ಉಪಕರಣಗಳಿಂದ ಸೀಳಿ ಒಣಗಿದ ತಿರುಳನ್ನು ತೆಗೆದು ಶೇಖರಿಸಲಾಗುತ್ತದೆ.

In other countries

ಇಂಡೋನೇಷ್ಯದಲ್ಲಿ ಒಣಗಿಸುವುದಕ್ಕೆ ಮುಂಚೆ ಕಾಯಿಗೆ ಸುಣ್ಣವನ್ನು ಹಚ್ಚುವ ಕ್ರಮ ಉಂಟು. ಇದರಿಂದ ಬೀಜಕ್ಕೆ ಕೀಟಗಳ ಹಾವಳಿ ಇರುವುದಿಲ್ಲ ಮತ್ತು ಅದನ್ನು ಹೆಚ್ಚು ಕಾಲ ಸಂಗ್ರಹಿಸಿಡಬಹುದು.

ಜಾಪತ್ರೆಯನ್ನು ಕೂಡ ಜಾಕಾಯಿಯಿಂದ ಬೇರ್ಪಡಿಸಿ ಎರಡು ಹಲಗೆಗಳ ಮಧ್ಯೆ ಇಟ್ಟು ಚಪ್ಪಡೆ ಮಾಡಿ ಅನಂತರ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಉತ್ತಮ ಗುಣದ ಜಾಪತ್ರೆಯನ್ನು ಪಡೆಯಲು ಅದಕ್ಕಾಗಿಯೇ ನಿರ್ಮಿಸಿದ ಒಲೆಯಲ್ಲಿ ಒಣಗಿಸುವುದುಂಟು.

ಕೆಲವು ದೇಶಗಳಲ್ಲಿ ಒಣಗುವ ಜಾಪತ್ರೆಯ ಮೇಲೆ ಉಪ್ಪು ನೀರನ್ನು ಸಿಂಪಡಿಸುವುದಿದೆ. ಇದರಿಂದ ಜಾಪತ್ರೆಯನ್ನು ಬಹಳ ಕಾಲ ಕೆಡದಂತೆ ಇಡಬಹುದು.

ಒಣಗಿಸುವಾಗ ಜಾಪತ್ರೆ ಮೊದಲು ಕಗ್ಗೆಂಪು ಬಣ್ಣಕ್ಕೆ ತಿರುಗಿ ಬಿದುರವಾಗುತ್ತದೆ. ೬ ವಾರಗಳ ಅನಂತರ ಇದಕ್ಕೆ ಒಳ್ಳೆಯ ಅಂಬರ್ ಬಣ್ಣ ಬರುತ್ತದೆ.

Mace in Kannada

Japatri ಉಪಯೋಗಗಳು Upayogagalu

ನಮ್ಮ ಮನಸ್ಸನ್ನು ಸಾಂತ್ವನಗೊಳಿಸುವ ಶಕ್ತಿಯಿದೆ.
ಇದರ ‘ಬೀಜ’ ಹಾಗೂ ‘ಪ’ತ್ರೆ ವಿವಿಧ ಔಷಧಿಗಳಲ್ಲಿ ಉಪಯೋಗಿಸುತ್ತಾರೆ.

‘ಹುರಿದ ಜಾಯಿಪುಡಿ’ನ್ನು ಬೆಲ್ಲದ ಜೊತೆ ಸೇರಿಸಿ ತಿಂದರೆ ಅಜೀರ್ಣದ ಭೇದಿ ನಿಲ್ಲುತ್ತದೆ.

ಇದರ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ತಿಂದರೂ ಭೇದಿ ಶಮನವಾಗುತ್ತದೆ.

‘ಜಾಯಿಪತ್ರೆ’ಗಳನ್ನು ‘ಅಡಿಕೆಪುಡಿ’ಯೊಂದಿಗೆ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.

ನಿದ್ರಾಹೀನತೆಯ ಪರಿಹಾರಕ್ಕಾಗಿ,

ತಲೆಗೆ ಬಳಸುವ ಎಣ್ಣೆಗಾಗಿ

ಪುಡಿಯನ್ನು ಕುದಿಯುವ ನೀರಿಗೆ ಹಾಕಿಬಾಯಿಮುಕ್ಕಳಿಸಿದರೆ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.

‘ಜಾಯಿಪುಡಿ’ಯನ್ನು ಸೈಂಧವ ಲವಣದೊಡನೆ ಸೇರಿಸಿ ಹಲ್ಲುಜ್ಜುವುದರಿಂದ ವಸಡುಗಳ ರಕ್ತಸ್ರಾವ ನಿಲ್ಲುತ್ತದೆ.

‘ಜಾಯಿಕಾಯಿ’ಯನ್ನು ಅತಿಯಾಗಿ ಬಳಸಿದರೆ ಅಮಲನ್ನು ತರುತ್ತದೆ. ಆದ್ದರಿಂದ ಇದನ್ನು ಅತಿಯಾಗಿ ಸೇವನೆಮಾಡುವುದು ಒಳ್ಳೆಯದಲ್ಲ.

 

ಪ್ರಪಂಚದಾದ್ಯಂತ ಜನಪ್ರಿಯವಾಗಿರುವಂತಹ ಜಾಯಿಕಾಯಿಯು ಹಲವಾರು ಆರೋಗ್ಯ ಲಾಭಗಳನ್ನು ನೀಡುವುದು.

ಇದರಲ್ಲಿ ವಿವಿಧ ರೀತಿಯ

ವಿಟಮಿನ್ ಗಳು,

ಖನಿಜಾಂಶಗಳು

ಮತ್ತು

ಉರಿಯೂತ ಶಮನಕಾರಿ,

ಬ್ಯಾಕ್ಟೀರಿಯಾ ವಿರೋಧಿ,

ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ.

ರಕ್ತದಲ್ಲಿನ ಸಕ್ಕರೆ,

ಅಧಿಕರ ರಕ್ತದೊತ್ತಡ,

ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ಜಾಯಿಕಾಯಿಯು ತುಂಬಾ ಪರಿಣಾಮಕಾರಿ ಆಗಿರುವುದು. ಇದರಲ್ಲಿ ಒತ್ತಡ ಹಾಗೂ ಆತಂಕ ಕಡಿಮೆ ಮಾಡುವ ಗುಣಗಳು ಇವೆ.

ಹಲವಾರು ಉಪಯೋಗಗಳನ್ನು ಹೊಂದಿದೆ

ಜಾಜಿಕಾಯಿ ಸಿಹಿತಿಂಡಿ ಪಾನೀಯಗಳಲ್ಲಿ ಸುವಾಸನೆ ವೃದ್ಧಿಗಾಗಿ ಬಳಸ್ಪಡುತ್ತದೆ.ಔಷಧ ಗುಣವನ್ನು ಹೊಂದಿದ ಜಾಯಿಹಣ್ಣಿನ ಸಿಪ್ಪೆಯಲ್ಲಿ ತಂಬುಳಿ,ಜ್ಯಾಮ್,ಹಾಗೂ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ

ಜಾಯಿಶ್ಯಾಂಪೂ,ಸುಗಂಧದ್ರವ್ಯ,ಮತ್ತು ಕೀಟಕನಾಶಕಗಳ ತಾಯಾರಿಕೆಯಲ್ಲಿ ಜಾಯಿಕಾಯನ್ನು ಬಳಸುತ್ತಾರೆ.ತಿರುಳು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ,ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ

ಕಾಯಿಯ ತಿರುಳಿನಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ.ಇದನ್ನು ಜಾಯಿ ಬೆಣ್ಣೆ(Nutmeg butter)ಎಂದು ಕರೆಯುತ್ತಾರೆ.ಜಾಯಿ ಬೆಣ್ಣೆಯಲ್ಲಿ ಮಿರಿಸ್ಟಿಕ್ ಆಮ್ಲಎನ್ಲಲಾಗುವ ಪರ್ಯಾಪ್ತ ಕೊಬ್ಬಿನ ಆಮ್ಲ ೭೦% ರಷ್ಟು ಇರುತ್ತದೆ.

ಜಾಯಿಬೆಣ್ಣೆಯನ್ನು ಕೋಕೋಬಟ್ಟರು ಬದಲಾಗಿ ಚಾಕೋಲೆಟ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ವಿದೇಶದಲ್ಲಿ ಹೆಚ್ಚು ಸಾಂಬಾರ ಪದಾರ್ಥಗಳನ್ನು ಬಳಸದೆ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೆ ಭಾರತದಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ ತನಕ ಪ್ರತಿಯೊಂದು ಕಡೆಯೂ ಯಾವುದಾದರೂ ಒಂದು ಸಾಂಬಾರ ಪದಾರ್ಥವನ್ನು ಬಳಸಲಾಗುತ್ತದೆ.

ಸಾಂಬಾರ ಪದಾರ್ಥಗಳು ಹವಾಮಾನಕ್ಕೆ ಅನುಗುಣವಾಗಿ ದೇಹವನ್ನು ಕಾಪಾಡುವುದು. ಯಾವುದೇ ಖಾದ್ಯವಾದರೂ ವಿಶೇಷ ರುಚಿ ನೀಡುವಂತಹ ಸಾಂಬಾರ ಪದಾರ್ಥಗಳಲ್ಲಿ ಜಾಯಿಕಾಯಿ ಕೂಡ ಒಂದು.

ಭಾರತ ಸಾಂಬಾರ ಪದಾರ್ಥಗಳ ತವರು. ಸಾಂಬಾರ ಪದಾರ್ಥಗಳ ವ್ಯಾಪಾರಕ್ಕಾಗಿ ಬಂದಂತಹ ವಿದೇಶಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದರು ಎನ್ನುವುದು ಈಗ ಇತಿಹಾಸ.

ಸಾಂಬಾರ ಪದಾರ್ಥಗಳಲ್ಲಿ ಇರುವಂತಹ ಆರೋಗ್ಯ ಅಂಶಗಳು ಭಾರತೀಯರಿಗೆ ಮೊದಲಿನಿಂದಲೂ ತಿಳಿದಿತ್ತು ಎನ್ನುವುದಕ್ಕೆ ಇದೇ ಸಾಕ್ಷಿ.

 

ಜಾಯಿಕಾಯಿಯ ಅನೇಕ ಆರೋಗ್ಯ ಲಾಭಗಳು Health benifits of japatri

೧. ಮೊಡವೆ ವಿರುದ್ಧ ಹೋರಾಡುವುದು
ಜಾಯಿಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದು ಮೊಡವೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಚರ್ಮದಲ್ಲಿನ ಸೋಂಕು, ಸಂಧಿವಾತ ಮತ್ತು ಪಾರ್ಶ್ವವಾಯು ಚಿಕಿತ್ಸೆಗೆ ಇದನ್ನು ಬಾಹ್ಯವಾಗಿ ದೇಹಕ್ಕೆ ಬಳಸಬಹುದು.

 

೨. ಸಂಧಿವಾತ ನೋವು-ಉರಿಯೂತ ತಗ್ಗಿಸುವುದು
ಸಂಧಿವಾತದಲ್ಲಿ ಮುಖ್ಯವಾಗಿ ಕಂಡುಬರುವಂತಹ ಉರಿಯೂತದ ಸಮಸ್ಯೆಯನ್ನು ಜಾಯಿಕಾಯಿಯು ನಿವಾರಣೆ ಮಾಡುವುದು. ಜಾಯಿಕಾಯಿಯಲ್ಲಿ ಇರುವ ಉರಿಯೂತ ಶಮನಕಾರಿ ಗುಣವು ಗಂಟು ನೋವು ಮತ್ತು ಸಂಧಿವಾತದಿಂದ ಕಾಣಿಸಿಕೊಳ್ಳುವ ಉರಿಯೂತ ಕಡಿಮೆ ಮಾಡುವುದು.

 

೩. ಕ್ಯಾನ್ಸರ್ ಅಪಾಯವನ್ನು ತಗ್ಗಿಸಲು ನೆರವಾಗುವುದು
ಹಾಗೆ ಸುಮ್ಮನೆ ನಮ್ಮ ಹಿರಿಯರು ಈ ಮಸಾಲೆಗಳನ್ನು ಅಡುಗೆಗೆ ಬಳಸುತ್ತಿರಲಿಲ್ಲ. ಈಗ ನೋಡಿ ಸಂಶೋಧನೆಗಳು ಕೂಡ ಇದರಲ್ಲಿ ಇರುವಂತಹ ಆರೋಗ್ಯ ಗುಣಗಳನ್ನು ಪತ್ತೆ ಮಾಡಿದೆ. ಜಾಯಿಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ಕ್ಯಾನ್ಸರ್ ನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು.

೪. ಮಧುಮೇಹ ಚಿಕಿತ್ಸೆಗೆ ಸಹಕಾರಿ
ಜಾಯಿಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದು ಬೇರೆ ಮಸಾಲೆಗಳ ಜತೆಗೆ ಸೇರಿಸಿದರೆ ಅದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದು. ಜಾಯಿಕಾಯಿ ಸಾರವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುವಲ್ಲಿ ಪರಿಣಾಮ ಬೀರುವುದು.

 

೫ ಅಧಿಕ ರಕ್ತದೊತ್ತಡ ನಿಯಂತ್ರಿಸುವುದು
ಜಾಯಿಕಾಯಿಯಲ್ಲಿ ಕೆಲವೊಂದು ಪ್ರಮುಖ ಸಾರಭೂತ ತೈಲವಾಗಿರುವಂತಹ ಲಿನಲೂಲ್ ಇದೆ. ಲಿನಲೂಲ್ ಸ್ನಾಯುಗಳನ್ನು ಹಾಗೂ ರಕ್ತನಾಗಳಿಗೆ ಶಮನಕಾರಿ ಆಗಿರುವುದು ಮತ್ತು ಇದರಿಂದ ರಕ್ತದೊತ್ತಡ ಕಡಿಮೆ ಮಾಡಬಹುದು.

 

೬. ನಿದ್ರಾಹೀನತೆ ತಡೆಯುವುದು
ಒತ್ತಡದ ಬದುಕಿನಲ್ಲಿ ನಿದ್ರೆ ಎನ್ನುವುದು ಕೂಡ ಕೈಗೆಟುಕದಂತಾಗಿದೆ. ಕೆಲವರಿಗೆ ನಿದ್ರಿಸಲು ಕೂಡ ಸಮಯವಿಲ್ಲ. ಇನ್ನು ಕೆಲವರಿಗೆ ಅತಿಯಾದ ಒತ್ತಡದಿಂದ ನಿದ್ರೆ ಬರಲ್ಲ. ಹೀಗಾಗಿ ಜಾಯಿಕಾಯಿಯು ಒತ್ತಡ ಕಡಿಮೆ ಮಾಡಿ ನಿದ್ರಾಹೀನತೆ ಸಮಸ್ಯೆ ನಿವಾರಣೆ ಮಾಡುವುದು.

 

೭. ಜೀರ್ಣಕ್ರಿಯೆ ಸುಧಾರಿಸುವುದು
ಜಾಯಿಕಾಯಿಯಲ್ಲಿ ಇರುವ ಕಾರ್ಮಿನೇಟಿವ್ ಗುಣವು ವಾಯು ತುಂಬುವುದನ್ನು ತಡೆಯುವುದು. ಜಾಯಿಕಾಯಿಯು ಅತಿಸಾರ ಕಡಿಮೆ ಮಾಡುವ ಗುಣ ಹೊಂದಿದೆ. ಇದರಲ್ಲಿ ಇರುವಂತಹ ನಾರಿನಾಂಶವು ಕರುಳಿನ ಚಲನೆಗೆ ತುಂಬಾ ನೆರವಾಗುವುದು.

 

೮. ನೋವು ಕಡಿಮೆ ಮಾಡುವುದು
ಜಾಯಿಕಾಯಿ ಎಣ್ಣೆಯು ಮುಖ್ಯವಾಗಿ ನೋವು ಹಾಗೂ ಸೆಳೆತ ಕಡಿಮೆ ಮಾಡುವುದು. ಇದನ್ನು ಗಂಟು ಹಾಗೂ ಸ್ನಾಯುಗಳ ನೋವಿಗೆ ಹಚ್ಚಿಕೊಂಡ ವೇಳೆ ಪರಿಣಾಮಕಾರಿ ಆಗಿರುವುದು.

 

೯. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು
ಜಾಯಿಕಾಯಿಯು ಕೊಲೆಸ್ಟ್ರಾಲ್ ತಗ್ಗಿಸುವ ಗುಣ ಹೊಂದಿದೆ ಎನ್ನುವುದು ಇಲಿಗಳ ಮೇಲೆ ನಡೆಸಿರುವಂತಹ ಅಧ್ಯಯನದಿಂದ ಸಾಬೀತಾಗಿದೆ. ಅಧಿಕ ಕೊಲೆಸ್ಟ್ರಾಲ್ ನಿಂದಾಗಿ ಯಕೃತ್ ನಲ್ಲಿ ಕಂಡುಬರುವ ವಿಷಕಾರಿ ಅಂಶವನ್ನು ಹೊರಹಾಕಲು ಜಾಯಿಕಾಯಿ ಸಾರವು ಪ್ರಮುಖ ಪಾತ್ರ ವಹಿಸುತ್ತದೆ.

 

೧೦. ದಂತ ಆರೋಗ್ಯ ಸುಧಾರಿಸುವುದು
ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ಜಾಯಿಕಾಯಿ ಹಲ್ಲಿನ ಆರೋಗ್ಯಕ್ಕೆ ತುಂಬಾ ನೆರವಾಗುವುದು. ಇದು ಹಲ್ಲಿನ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವುದು. ದಂತದ ಸೋಂಕಿಗೆ ಕಾರಣವಾಗುವಂತಹ ಕೆಲವು ರೋಗಕಾರಕಗಳ ವಿರುದ್ಧ ಇದು ಹೋರಾಡುವುದು.

 

೧೧. ಒತ್ತಡ ಹಾಗೂ ಆತಂಕ ನಿವಾರಣೆ ಮಾಡುವುದು
ಜಾಯಿಕಾಯಿಯಲ್ಲಿ ಖಿನ್ನತೆ ವಿರೋಧಿ ಗುಣಗಳು ಇವೆ. ಸಿರೊಟೊನಿನ್ ಅಂಶವನ್ನು ಹೆಚ್ಚಿಸುವ ಮೂಲಕ ಇದು ಖಿನ್ನತೆ ಕಡಿಮೆ ಮಾಡುವುದು. ಆದರೆ ಖಿನ್ನತೆಗೆ ಬಳಸುವ ಔಷಧಿ, ಥೆರಪಿಗೆ ಇದು ಪರ್ಯಾಯವಾಗದು ಎಂದು ಗಮನದಲ್ಲಿಟ್ಟುಕೊಳ್ಳಬೇಕಾದ ವಿಚಾರವಾಗಿದೆ. ಇದರಲ್ಲಿ ಮೆದುಳನ್ನು ಉತ್ತೇಜಿಸುವ ಕೆಲವೊಂದು ಅಂಶವಿದೆ. ಇದರಿಂದಾಗಿ ಮಾನಸಿಕ ಬಳಲಿಕೆ, ಒತ್ತಡ ಕಡಿಮೆ ಮಾಡಿ, ಮಾನಸಿಕ ಚಟುವಟಿಕೆಗೆ ವೃದ್ಧಿಸುವುದು.

 

japatri in kannada ಜಾಯಿಕಾಯಿ ಅಡ್ಡಪರಿಣಾಮಗಳು  Side effects of japatri 

ಇದು ಎಷ್ಟು ಉಪಯೋಗಗಳನ್ನು ಹೊಂದಿದೆಯೋ ಅದೇ ರೀತಿ ಅತಿಯಾಗಿ ಉಪಯೋಗಿಸಿದರೆ ಅಡ್ಡ ಪರಿಣಾಮಗಳು ಆಗುವುದುಂಟು

ಭ್ರಮೆ ಮತ್ತು ಇತರ ಕೆಲವು ಮಾನಸಿಕ ಅಡ್ಡಪರಿಣಾಮಗಳು

ನಿರಂತರವಾಗಿ ಜಾಯಿಕಾಯಿ ತಿಂದರೆ ಅದರಿಂದ ವಾಕರಿಕೆ, ವಾಂತಿ, ಭ್ರಮೆ, ಹೃದಯವು ಅತಿಯಾಗಿ ಸ್ಪಂದಿಸುವಂತಹ ಸಮಸ್ಯೆಯು ಕಾಡಬಹುದು.

ಜಾಯಿಕಾಯಿಯಲ್ಲಿ ಇರುವಂತಹ ಮೈರಿಸ್ಟಿಸಿನ್ ಎಣ್ಣೆಯಿಂದಾಗಿ ಇದೆಲ್ಲ ಸಮಸ್ಯೆ ಬರುವುದು. ಜಾಯಿಕಾಯಿಯನ್ನು ಮಕ್ಕಳಿಂದ ದೂರವಿಡಬೇಕು ಎಂದು ಅಧ್ಯಯನಗಳು ಹೇಳಿವೆ.

ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸಮಸ್ಯೆ
ಜಾಯಿಕಾಯಿ ಅತಿಯಾಗಿ ಸೇವಿಸಿದರೆ ಅದರಿಂದ ಗರ್ಭಪಾತ ಮತ್ತು ಜನ್ಮಸಂಬಂಧಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಬಾಣಂತಿಯರಿಗೆ ಇದರಿಂದ ಯಾವ ರೀತಿಯ ಪರಿಣಾಮ ಬೀರುವುದು ಎಂದು ಯಾವುದೇ ಅಧ್ಯಯನಗಳು ಇದುವರೆಗೆ ಹೇಳಿಲ್ಲವಾದರೂ ಇದನ್ನು ದೂರವಿಡುವುದು ಒಳ್ಳೆಯದು.

ಜಾಯಿಕಾಯಿಯು ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಸಾವು ಸಂಭವಿಸುವ ಅಪರೂಪದ ಘಟನೆಗಳು ನಡೆಯಬಹುದು.

Japatri or Mace in Kannada With Video

  1. ಜಾಯಿ ಕಾಯಿ Nutmeg, Jatiphala, Jaikai Tree Herbal & The plant Video

2. ಜಾಯಿ ಕಾಯಿಯ ಅರೋಗ್ಯ ಉಪಯೋಗಗಳು…! | Top 10 Health Benefits of Nutmeg

Japatri Javitri/Mace Whole Dried Natural Spice

Buy Japatri or Mace

ಇತರ ವಿಷಯಗಳು:

Basil Leaves in Kannada

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh