ಕಡಲೆ ಬೇಳೆ ಬಗ್ಗೆ ಮಾಹಿತಿ | Chana Dal in Kannada

ಕಡಲೆ ಬೇಳೆ ಬಗ್ಗೆ ಮಾಹಿತಿ, Chana Dal in Kannada, Health Benifits of Chana Dal, Advantages of Kadale, Gram Dal in Kannada Kadle Bele in Kannada ಕಡಲೆ ಬೆಳೆ ಮಾಹಿತಿ Chana Dal in Kannada Images

ಕಡಲೆ ಬೇಳೆ

ಭಾರತದಲ್ಲಿ ಹೆಚ್ಚಾಗಿ ಅಡುಗೆಯಲ್ಲಿ ದವಸ ಧಾನ್ಯಗಳನ್ನು ಬಳಸುತ್ತಾರೆ. ಜಗತ್ತಿನಲ್ಲಿ ಸಿಗುವಂತಹ ದವಸಧಾನ್ಯಗಳು ಮಾನವನ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಇಂತಹದರಲ್ಲಿ ಒಂದು ಕಡಲೆ. ಕಪ್ಪು ಕಡಲೆ ಹಾಗೂ ಬಿಳಿ ಕಡಲೆ(ಕಾಶ್ಮೀರಿ ಕಡಲೆ) ಎಂದು ಎರಡು ವಿಧಗಳಿವೆ. ಇದು ಕೂಡ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುವುದು.

ಇಷ್ಟು ಮಾತ್ರವಲ್ಲದೆ ಇದು ಖಾದ್ಯಗಳಿಗೆ ಹೆಚ್ಚಿನ ರುಚಿ ನೀಡುವುದು.

ಇದು ತುಂಬಾ ಅಗ್ಗವಾಗಿರುವ ಹಿನ್ನೆಲೆಯಲ್ಲಿ ಇದನ್ನು ಪ್ರತಿಯೊಬ್ಬರು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು.

ಬನ್ನಿ ಕಪ್ಪು ಕಡಲೆ ಅಥವಾ ಕಡಲೆ ಕಾಳಿನಿಂದ ಸಿಗುವಂತಹ  ಎಂಟು ಆರೋಗ್ಯ ಲಾಭಗಳ ಬಗ್ಗೆ ನಿಮಗೆ ತಿಳಿದಿಲ್ಲ. ಇದರ ಬಗ್ಗೆ ನೀವು ಈ ಲೇಖನದಿಂದ ತಿಳಿಯುತ್ತಾ ಹೋಗಿ…

ಕಡಲೆಯಲ್ಲಿರುವ ಆರೋಗ್ಯ ಲಾಭಗಳು

ಜೀರ್ಣಕ್ರಿಯೆ ಸಮಸ್ಯೆಯಿಂದ ರಕ್ಷಣೆ

ಕಡಲೆಯಲ್ಲಿ ಇರುವಂತಹ ಉನ್ನತ ಮಟ್ಟದ ನಾರಿನಾಂಶದಿಂದಾಗಿ ಇದು ಜೀರ್ಣಕ್ರಿಯೆ ವ್ಯವಸ್ಥೆ ಮತ್ತು ಕರುಳನ್ನು ಆರೋಗ್ಯವಾಗಿಡುವುದು. ಇದರಿಂದ ಜೀರ್ಣಕ್ರಿಯೆ ಸಮಸ್ಯೆಯು ಕಾಡುವುದಿಲ್ಲ.

ಪೈಥೋನ್ಯೂಟ್ರಿಯಂಟ್ಸ್, ಅಧಿಕ ಪ್ರೋಟೀನ್, ಆಹಾರದ ನಾರಿನಾಂಶ, ಹೆಚ್ಚಿನ ಖನಿಜಾಂಶ ಹಾಗೂ ವಿಟಮಿನ್ ಗಳು ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆ ನಿವಾರಣೆ ಮಾಡುವುದು.

ಸಾಮಾನ್ಯವಾಗಿ ನಾವು ಊಟ ಮಾಡುವಾಗ ತಣ್ಣೀರು ಕುಡಿದರೆ, ಅದರಿಂದ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಈ ಜೀರ್ಣಕ್ರಿಯೆಯ ಅಗ್ನಿಯು ಆರಿ ಹೋಗುತ್ತದೆ.

ಹೃದಯದ ಆರೋಗ್ಯ ಕಾಪಾಡುವುದು

ಕಡಲೆ ಸೇವನೆ ಮಾಡಿದರೆ ಇದು ಹೃದಯದ ಮೇಲೆ ಧನಾತ್ಮಕವಾದ ಪರಿಣಾಮ ಬೀರುವುದು ಹಾಗೂ ವಿವಿಧ ರೀತಿಯ ಹೃದಯದ ಸಮಸ್ಯೆಗಳಿಂದ ಕಾಪಾಡುವುದು.

ಕಡಲೆಯಲ್ಲಿ ಹೆಚ್ಚಿನ ಮಟ್ಟದ ಮೆಗ್ನಿಶಿಯಂ ಮತ್ತು ಫಾಲಟೆ ಇದೆ. ಇದು ರಕ್ತನಾಳಗಳನ್ನು ಬಲಪಡಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುವುದು

ತೂಕ ಕಳೆದುಕೊಳ್ಳಲು ಸಹಕಾರಿ

ಇದರಲ್ಲಿರುವಂತಹ ಹೆಚ್ಚಿನ ನಾರಿನಾಂಶವು ನೈಸರ್ಗಿಕವಾಗಿ ತೂಕ ಕಳೆದುಕೊಳ್ಳಲು ತುಂಬಾ ಪರಿಣಾಮಕಾರಿ.

ಇದು ನಿಮ್ಮ ಬಯಕೆಯನ್ನು ನಿಯಂತ್ರಿಸುವುದು ಮಾತ್ರವಲ್ಲದೆ ದೀರ್ಘಕಾಲದ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು.

ಪ್ರತಿನಿತ್ಯ ಒಂದು ಹಿಡಿಯಷ್ಟು ಬೀಜಗಳನ್ನು ತಿಂದರೆ, ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ!

ಶಕ್ತಿ ಹಾಗೂ ಪ್ರತಿರೋಧಕ ಶಕ್ತಿ ವೃದ್ಧಿ

ಕಡಲೆಯಲ್ಲಿ ಪ್ರಮುಖವಾಗಿ ಖನಿಜಾಂಶವಾಗಿರುವಂತಹ ಮೆಗ್ನಿಶಿಯಂ ಇದ್ದು, ಇದರೊಂದಿಗೆ ಪ್ರಮುಖ ಆರೋಗ್ಯಕಾರಿ ಪೋಷಕಾಂಶಗಳಾಗಿರುವ ಥೈಮೇನ್, ಮೆಗ್ನಿಶಿಯಂ ಮತ್ತು ಫೋಸ್ಪರಸ್ ಇದೆ.

ಮೆಗ್ನಿಶಿಯಂ ದೇಹಕ್ಕೆ ಶಕ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು.

ರಕ್ತದ ಸಕ್ಕರೆ ಮಟ್ಟ ಸ್ಥಿರವಾಗಿಡುವುದು

ಕಡಲೆಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್(ಜಿಐ) ತುಂಬಾ ಕಡಿಮೆ ಇದ್ದು, ಮಧುಮೇಹಿಗಳಿಗೆ ಇದು ಪರಿಣಾಮಕಾರಿಯಾಗಿದೆ.

ಇದು ರಕ್ತನಾಳಗಳಲ್ಲಿ ತುಂಬಾ ನಿಧಾನ ಮತ್ತು ಸ್ಥಿರವಾಗಿ ಗ್ಲೂಕೋಸ್ ಬಿಡುಗಡೆ ಮಾಡಲು ನೆರವಾಗುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು.

ಹೀರಿಕೊಳ್ಳುವ ನಾರಿನಾಂಶ, ಅಧಿಕ ಪ್ರೋಟೀನ್ ಮತ್ತು ಕಬ್ಬಿನಾಂಶವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಲು ನೆರವಾಗುವುದು.

Health Benifits of Chana dal in Kannada

ಮಹಿಳೆಯರಲ್ಲಿ ಹಾರ್ಮೋನು ಮಟ್ಟ ನಿಯಂತ್ರಿಸುವುದು

ಕಡಲೆಯಲ್ಲಿ ಪೈಥೊ-ಒಸ್ಟ್ರೋಜನ್ಸ್ ಮತ್ತು ಸಾಪೊನಿನ್ಸ್ ಎನ್ನುವ ಫೈಥೋ ನ್ಯೂಟ್ರಿಯೆಂಟ್ಸ್ ಇದೆ.

ಸ್ತನದ ಕ್ಯಾನ್ಸರ್ ನ ಅಪಾಯ ಕಡಿಮೆ ಮಾಡುವುದು ಹಾಗೂ ಒಸ್ಟ್ರೋಜನ್ ಹಾರ್ಮೋನು ಮಟ್ಟವನ್ನು ಕಾಪಾಡುವ ಕಾರಣ ಅಸ್ಥಿರಂಧ್ರತೆಯಿಂದ ರಕ್ಷಿಸುವುದು.

ಋತುಚಕ್ರದ ವೇಳೆ ಮನಸ್ಥಿತಿ ಬದಲಾಗುವುದನ್ನು ಇದು ತಡೆಯುವುದು.

ರಕ್ತಹೀನತೆ ತಡೆಯುವುದು

ಕಡಲೆಯಲ್ಲಿ ಪ್ರಮುಖವಾಗಿರುವ ಆಹಾರದ ಕಬ್ಬಿನಾಂಶವಿದೆ. ಇದು ದೇಹಕ್ಕೆ ಬೇಕಾಗಿರುವಂತಹ ಖನಿಜಾಂಶವನ್ನು ಒದಗಿಸುವ ಕಾರಣ ರಕ್ತಹೀನತೆ ತಡೆಯುವುದು. ಇದರಿಂದ ಗರ್ಭಿಣಿಯರು, ಬಾಣಂತಿಯರು ಮತ್ತು ಋತುಚಕ್ರದ ಸಮಸ್ಯೆ ಇರುವವರು ಇದನ್ನು ಸೇವಿಸಬೇಕು.

ಬೆಳೆಯುತ್ತಿರುವ ಮಕ್ಕಳು ಮತ್ತು ರಕ್ತಹೀನತೆ ಸಮಸ್ಯೆ ಇರುವವರು ಇದನ್ನು ಸೇವಿಸಬೇಕು. ರಕ್ತಹೀನತೆ ಸಮಸ್ಯೆ ಇರುವವರು, ಹೀಗೆ ಮಾಡಿ- ಪ್ರತಿದಿನ ಹಸಿರು ಸೊಪ್ಪುಗಳನ್ನು ಆದಷ್ಟು ಸೇವಿಸಿ. ಅದರಲ್ಲೂ ಬಸಲೆ ಸೊಪ್ಪು ಅತ್ಯಂತ ಸೂಕ್ತವಾದ ಆಹಾರ.

ಇನ್ನುಳಿದಂತೆ ಪಾಲಕ್, ಹರಿವೆ ಸೊಪ್ಪು, ಬೀನ್ಸ್, ಕೆಂಪು ಮಾಂಸ, ಒಣದ್ರಾಕ್ಷಿ, ಒಣ ಪೀಚ್ ಹಣ್ಣು, ಮೊಟ್ಟೆಯ ಹಳದಿ ಭಾಗ ಇತ್ಯಾದಿಗಳು ರಕ್ತಹೀನತೆಯನ್ನು ಸಾಕಷ್ಟು ಕಡಿಮೆಗೊಳಿಸುತ್ತವೆ.

ರಕ್ತದೊತ್ತಡ ನಿಯಂತ್ರಣ

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ರಕ್ತನಾಳಗಳಲ್ಲಿನ ಬದಲಾವಣೆಯನ್ನು ತಿರುಗಿಸುವ ಮೂಲಕವಾಗಿ ರಕ್ತದೊತ್ತಡ ಕಡಿಮೆ ಮಾಡುವುದು.

ಕಡಲೆಯಲ್ಲಿರುವ ಪೊಟಾಶಿಯಂ ಹಾಗೂ ಮೆಗ್ನಿಶಿಯಂನಿಂದಾಗಿ ದೇಹದಲ್ಲಿ ವಿದ್ಯುದ್ವಿಚ್ಛೇದಗಳನ್ನು ಸಮತೋಲನದಲ್ಲಿಡಲು ನೆರವಾಗುವುದು. ರಕ್ತದೊತ್ತಡ ನಿಯಂತ್ರಣಕ್ಕೆ

ಲಿಂಬೆಯಲ್ಲಿರುವಂತಹ ವಿಟಮಿನ್ ಸಿಯು ಹಾನಿಕಾರ ಫ್ರಿ ರ್ಯಾಡಿಕಲ್ ಪ್ರಭಾವ ಕಡಿಮೆ ಮಾಡುವುದು. ಅರ್ಧ ಲಿಂಬೆ ರಸವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿಯಿರಿ. ಇದಕ್ಕೆ ಸಕ್ಕರೆ ಅಥವಾ ಉಪ್ಪು ಹಾಕಬೇಡಿ.

Chana Dal in Kannada Images

Chana Dal in Kannada Images
Chana Dal in Kannada Images
kadale bele in kannada
kadale bele in kannada

 ಹಾಗೆ ನೀವು ಕಡಲೆಬೇಳೆ  ಅನ್ನು   ಆನ್ಲೈನ್ನಲ್ಲಿ ಖರೀದಿ ಮಾಡಬಹುದು ಕೆಳಗೆ ಲಿಂಕನ್ನು ಕೊಟ್ಟಿದ್ದೇನೆ ನೋಡಿ

chana dal 1 kg price

FAQ :

ಕಡೆಯಲ್ಲಿರುವ ಆರೋಗ್ಯ ಲಾಭಗಳೇನು?

ಜೀರ್ಣಕ್ರಿಯೆ ಸಮಸ್ಯೆಯಿಂದ ರಕ್ಷಣೆ
ಹೃದಯದ ಆರೋಗ್ಯ ಕಾಪಾಡುವುದು

ಅಧಿಕ ರಕ್ತದೊತ್ತಡದಿಂದ ಬಳುತ್ತಿರುವವರಿಗೆ ಕಡಲೆ ಹೇಗೆ ಸಹಾಯಕಾರಿಯಾಗಿದೆ?

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ರಕ್ತನಾಳಗಳಲ್ಲಿನ ಬದಲಾವಣೆಯನ್ನು ತಿರುಗಿಸುವ ಮೂಲಕವಾಗಿ ರಕ್ತದೊತ್ತಡ ಕಡಿಮೆ ಮಾಡುವುದು.

ಇತರ ವಿಷಯಗಳು : 

Japatri in Kannada

Basil Leaves

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಕಡಲೆ ಬೇಳೆ ಬಗ್ಗೆ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಕಡಲೆ ಬೇಳೆ ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh