Friendship in Kannada, Friendship Images Quotes Thoughts in Kannada, Friendship Day Kavanagalu Wishes and Best Friend Images Thoughts Kannada ಪ್ರೆಂಡ್ ಶಿಪ್ ಕೋಟ್ಸ್ Friendship Quotes in Kannada Text ಬೆಸ್ಟ್ ಫ್ರೆಂಡ್ ಕವನಗಳು ಸ್ನೇಹ Quotes
ಸ್ನೇಹ ಗೆಳೆತನದ ಕವನಗಳು
Friendship in Kannada
ಒಂದು ಹುಟ್ಟಿನ ಜೊತೆಗೆ ನೂರಾರು ಸಂಬಂಧಗಳು ಹುಟ್ಟುತ್ತದೆ ಅನಿಸಿತು. ಅದು ಸತ್ಯವೂ ಕೂಡ. ಆ ಸಂಬಂಧಗಳು ನಾವು ಬೇಡವೆಂದರೂ ಸಾಮಾಜಿಕವಾಗಿ ಬರುವಂಥದ್ದು ಮತ್ತು ಆ ಸಂಬಂಧಗಳಿಗೂ ನಮ್ಮ ಜನನ ಸಮಯಕ್ಕೂ ಸಾಮ್ಯವಿರುತ್ತದೆ. ಅಪ್ಪ ಅಮ್ಮ ಅಣ್ಣ ತಮ್ಮ ಇವು ಈ ಸಾಲಿನವುಗಳು.
ಇನ್ನು ಕೆಲವು ಸಂಬಂಧಗಳು ಸಾಂದರ್ಭಿಕವಾಗಿ ಸೃಷ್ಟಿಯಾಗುತ್ತದೆ. ಒಂದು ಮದುವೆಯಾದರೆ ಪತಿ- ಪತ್ನಿಯರ, ಭಾವ ಮೈದುನರ ಅತ್ತಿಗೆ ನಾದಿನಿಯರ ಸಂಬಂಧ ಜನಿಸುತ್ತದೆ.
ಇದಕ್ಕಿಂತಲೂ ಹೊರತಾದದ್ದು ಇನ್ನೊಂದು ಸಂಬಂಧವಿದೆ ಅದೇ ಗೆಳೆತನ.
ಗೆಳೆಯ ಎಂದರೇನು ಎಂದು ತಿಳಿಯಲು ಒಂದು ಶ್ಲೋಕ
ಪಾಪಂ ನಿವಾರಯತಿ ಯೋಜಯತೇ ಹಿತಾಯ
ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ || ಎಂಬ ಶ್ಲೋಕ ಅದು.
ಅಂದರೆ ಒಬ್ಬ ಗೆಳೆಯ ತಪ್ಪು ಕೆಲಸ ಮಾಡುವುದನ್ನು ತಪ್ಪಿಸುತ್ತಾನೆ. ಒಳ್ಳೆಯ ಕೆಲಸ ಮಾಡಿಸುತ್ತಾನೆ.
ನಮ್ಮ ಗುಟ್ಟನ್ನು ನಮ್ಮಲ್ಲೇ ಬಚ್ಚಿಟ್ಟಿರುತ್ತಾನೆ. ನಮ್ಮ ಒಳ್ಳೆಯ ಪ್ರತಿಭೆಗಳನ್ನು ಬೆಳೆಸುತ್ತಾನೆ. ಕಷ್ಟದಲ್ಲಿ ಜೊತೆಯೇ ಇರುತ್ತಾನೆ ಮತ್ತು ಬೇಕಾದ ಸಮಯದಲ್ಲಿ ಬೇಕಾದ್ದು ಕೊಡುತ್ತಾನೆ ಎಂದು.
ರಕ್ತಸಂಬಂಧಿಗಳಂತೆ ಮಾನಸಿಕವಾಗಿ ಸಂಬಂಧಿಗಳಾದವರು ಅನೇಕರು ಇರುತ್ತಾರೆ. ಪಕ್ಕದ ಮನೆಯಿಂದ ಹಿಡಿದು ಅದೆಷ್ಟೋ ಜನರ ಪರಿಚಯವಾಗುವ, ಬಾಳಿನ ಬೀದಿಯಲ್ಲಿ ಎಂದೂ ಮರೆಯಲಾರದಂತೆ ಕೆಲವರು ಉಳಿದು ಬಿಡುತ್ತಾರೆ.
ರಾಮನವಮಿ ಕೃಷ್ಟಾಷ್ಟಮಿಯಂತೆ, ಕ್ರಿಸ್ ಮಸ್ ನಂತೆ ಅಥವಾ ಬಕ್ರೀದ್ ನಂತೆ ‘ಗೆಳೆತನ ದಿನ’ ಎಂಬುದು ಆಚರಿಸಲಾಗದು.
ಗೆಳೆಯರು ಗೆಳೆತನಕ್ಕೆ ಬೆಲೆಕೊಟ್ಟು ಗೆಳೆತನವ ಉಳಿಸುವುದೇ ನಿಜವಾದ ಆಚರಣೆ.
ಸರ್ವಥಾ ಸುಕರಂ ಮಿತ್ರಂ ದುಷ್ಕರಂ ಪರಿಪಾಲನಂ ಎಂಬಂತೆ ಗೆಳೆತನದ ಪಾಲನೆ ಅತಿಕಷ್ಟ. ಶುದ್ಧಮನಸ್ಸು ಗೆಳೆತನವ ಕಾಪಾಡುತ್ತದೆ. ಆ ಶುದ್ಧ ಮನಸ್ಸು ಗೆಳೆತನವ ಕಾಪಾಡಲಿ. ಗೆಳೆತನದಿನದ ಶುಭಾಶಯಗಳು.
Friendship images Quotes & Thoughts in Kannada
ಪ್ರೀತಿ ಇರುವುದು ನಂಬಿಕೆ ಇರುವ ತನಕ , ಕನಸು ಬೀಳುವುದು ಏಳುವ ತನಕ ,
ಪ್ರಾಣ ಇರುವುದು ಆತ್ಮ ಇರುವ ತನಕ , ಹೊಟ್ಟೆ ಹಸಿವು ತಿನ್ನುವ ತನಕ , ಸ್ನೇಹ ಇರುವುದು ಉಸಿರಿರುವ ತನಕ
ಸಾವಿರ ಸ್ನೇಹಿತರನ್ನು ಮಾಡಿಕೊಳ್ಳುವುದು ಸ್ನೇಹ ಅಲ್ಲ ನಂಬಿಕೆ ಇಟ್ಟು ಮಾಡಿದ ಒಂದು ಸ್ನೇಹನಾ ಸಾಯೋವರೆಗೂ ಕಾಪಾಡಿಕೊಳ್ಳುವುದು ಅದು ನಿಜವಾದ ಸ್ನೇಹ ..
ಮನುಷ್ಯರು ಸದಾ ಹೇಳುತ್ತಾರೆ ” ಜೀವಂತವಾಗಿ ಇದ್ದರೆ ಮತ್ತೆ ಭೇಟಿಯಾಗೋಣ ” ಆದರೆ ಒಬ್ಬ ಒಳ್ಳೆಯ ಸ್ನೇಹಿತ ಅದ್ಭುತವಾದ ಮಾತನ್ನು ಹೇಳಿದ ” ಭೇಟಿಯಾಗುತ್ತ ಇದ್ದರೆ ಜೀವಂತವಾಗಿ ಇರುತ್ತೇವೆ . ”
ಸ್ನೇಹ ಅಂದ್ರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ , ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ
ಎಷ್ಟು ವರ್ಷದಿಂದ ಪರಿಚಯ ಇದ್ದಾರೆ ಅನ್ನೋದು ಫ್ರೆಂಡ್ರಿಪ್ ಅಲ್ಲಾ , ಫ್ರೆಂಡ್ ಎಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದು ನಿಜವಾದ ಫ್ರೆಂಡ್ರಿಪ್ …
friendship in kannada ,
ಸ್ನೇಹವೆನ್ನುವುದು ಜಗತ್ತಿನಲ್ಲೇ ಅತ್ಯಂತ ಕಠಿಣವಾದ ವಿಷಯ . ಶಾಲೆಯಲ್ಲಿ ನಾವು ನೀವು ಕಲಿಯುವ ವಿಷಯವಲ್ಲ .
ಆದರೆ ನೀವು ಸ್ನೇಹದ ಅರ್ಥವನ್ನು ಕಲಿಯದಿದ್ದರೆ , ನೀವು ನಿಜವಾಗಿಯೂ ಏನನ್ನೂ ಕಲಿತಿಲ್ಲ
ಮನಸೆಂಬ ಮಂದಿರದಲ್ಲಿ ಕನಸೆಂಬ ಸಾಗರದ ನೆನಪೆಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಅಮರ ಸ್ನೇಹ
ಫ್ರೆಂಡ್ ಅನ್ನೋದು ಎಲ್ಲ ನೋವಿಗೂ ಒಂದು ಬೆಸ್ಟ್ ಮೆಡಿಸಿನ್ , but ನೆನಪಿರಲಿ Friend ನಿಂದ ಆದ ನೋವಿಗೆ ಯಾವ ಮೆಡಿಸಿನ್ ಇಲ್ಲ ..
Friendship ಅಂದ್ರೆ ಸಿಕ್ತದಾಗ ಹಾಯ್ ಅಂತ ಹೇಳಿ ಕುತ್ತೊಂಡು ಮಾತಾಡಿ ಬಾಯ್ ಅಂತ ಹೇಳೋದಲ್ಲ , friend ತಲೇಲಿ ಒಂದೇ ಒಂದ್ ಕೂದ್ಲು ಉದ್ರುದ್ರು ಗೊತ್ತಾಗಬೇಕು.
ಸಣ್ಣ ಕೋಪ , ಪುಟ್ಟ ಮನಸ್ಸು ತರ್ಲೆ sms , ಪ್ರೀತಿಯ ಭಾವನೆ , ಒಂದಿಷ್ಟು ಕಾಳಜಿ ,
ಕೆಲವೊಂದು ಸುಳ್ಳು , ನೂರಾರು ಸಾಲಿ ಒಂದಿಷ್ಟು ಬೈಗುಳ , ಇಷ್ಟೆಲ್ಲಾ ಸೇರಿದರೆ ಅದೇ ಬೆಸ್ಟ್ ಫ್ರೆಂಡ್ ಶಿಪ್
ಇತರ ವಿಷಯಗಳು :
ಕೋಟ್ಸ್ ಎಸ್ಎಂಎಸ್ ಗಳನ್ನು ಡೌನ್ಲೋಡ್ ಮಾಡಲು ನಾವು ನಿಮಗೆ ಒಂದು ಆಪ್ ಲಿಂಕ್ ಕೊಟ್ಟಿರುತ್ತೇವೆ ಇಲ್ಲಿ ನೀವು ನೋಡಬಹುದು ಆಪ್ ನೇಮ್ ಕನ್ನಡ ಥಾಟ್ಸ್
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಈ ಪ್ರೆಂಡ್ ಶಿಪ್ ಕೋಟ್ಸ್ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಪ್ರೆಂಡ್ ಶಿಪ್ ಕೋಟ್ಸ್ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ