Spinach in Kannada, ಪಾಲಕ್ ಸೊಪ್ಪಿನ ಪ್ರಯೋಜನಗಳು, Side Effects and Benefits of Palak Soppu in Kannada, About Spinach Meaning in Kannada Palak Soppu in Kannada Palak Soppu Benefits in Kannada
ಪಾಲಕ್ ಸೊಪ್ಪು
ಪಾಲಕ್ ಅಮರಾಂಥೇಸಿಯೇ ಕುಟುಂಬದಲ್ಲಿನ ಒಂದು ತಿನ್ನಲು ಅರ್ಹವಾದ ಹೂಬಿಡುವ ಸಸ್ಯ. ಅದು ಮಧ್ಯ ಹಾಗೂ ದಕ್ಷಿಣಪಶ್ಚಿಮ ಏಷ್ಯಾಕ್ಕೆ ಸ್ಥಳೀಯವಾಗಿದೆ. ಅದು ೩೦ ಸೆ.ಮಿ. ನಷ್ಟು ಎತ್ತರಕ್ಕೆ ಬೆಳೆಯುವ ಒಂದು ವಾರ್ಷಿಕ ಸಸ್ಯವಾಗಿದೆ
ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸೋ ಪಾಲಕ್ ಸೊಪ್ಪಿನಿಂದ ಸಾರು, ಪಾಲಕ್ ಪನ್ನೀರು… ಹೀಗೆ ಏನೇನೋ ಮಾಡುತ್ತೇವೆ. ಇದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ
ಪಾಲಕ್ ಸೊಪ್ಪಿನಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್ಸ್, ಜೀವಸತ್ವ ಎ, ಸಿ, ಇ, ಕೆ, ಸೋಡಿಯಂ, ಪೊಟಾಷಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಮ್ಯಾಂಗನೀಸ್, ಜಿಂಕ್, ರಿಬೋಪ್ಲೆವಿನ್ ಸೇರಿ ದೇಹಕ್ಕೆ ಅಗತ್ಯವಿರೋ ಅಂಶಗಳಿವೆ.
ಪಾಲಕ್ ಸೊಪ್ಪಿನ ಆರೋಗ್ಯಕಾರಿ ಪ್ರಯೋಜನಗಳು. Health benifits Palak Soppu
1. ದೃಷ್ಟಿಯನ್ನು ಮೊನಚಾಗಿಸುತ್ತದೆ
ಕಣ್ಣಿನ ಪೊರೆ ಹಾಗೂ ಇರುಳುಗುರುಡುತನದ೦ತಹ ಕೆಲವೊ೦ದು ಕಣ್ಣಿಗೆ ಸ೦ಬ೦ಧಿಸಿದ ರೋಗಗಳ ವಿರುದ್ಧ ಸೆಣಸಾಡಲು, ಕ್ಯಾರೇಟ್ ಜ್ಯೂಸ್ ನೊ೦ದಿಗೆ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಕೂಡ ಕುಡಿಯಿರಿ.
2. ಕೆಲವೊ೦ದು ಬಗೆಯ ಕ್ಯಾನ್ಸರ್ ಗಳನ್ನು ತಡೆಗಟ್ಟುತ್ತದೆ
ಪಾಲಕ್ ಸೊಪ್ಪು ಕ್ಯಾನ್ಸರ್ ರೋಗವನ್ನೂ ಕೂಡ ತಡೆಗಟ್ಟಬಲ್ಲದು. ಪಾಲಕ್ ಸೊಪ್ಪಿನಲ್ಲಿರುವ carotene ಹಾಗೂ chlorophyll ಗಳು ಕ್ಯಾನ್ಸರ್ ನ ವಿರುದ್ಧ ಸೆಣೆಸಾಡಲು ನೆರವಾಗುತ್ತವೆ.
3. ಮೂಳೆಗಳ ಆರೋಗ್ಯಕ್ಕಾಗಿ
ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿ ವಿಟಮಿನ್ ಕೆ ಇದೆ ಕ್ಯಾಲ್ಸಿಯ೦ನ ಹೀರಿಕೊಳ್ಳುವಿಕೆಗೆ ನೆರವಾಗುವ ಮೂಲಕ ಪಾಲಕ್ ಸೊಪ್ಪು ಯಾವುದೋ ರೂಪದಲ್ಲಿ ಮೂಳೆಗಳ ಬಲವರ್ಧನೆಗೆ ನೆರವಾಗುತ್ತದೆ.
4. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ನೆರವಾಗುತ್ತದೆ
ಪಾಲಕ್ ಸೊಪ್ಪಿನಲ್ಲಿ ಸತುವಿನ ಅ೦ಶವಿದ್ದು, ನಿಮ್ಮ ಶರೀರದಲ್ಲಿ ಇನ್ಸುಲಿನ್ ನ ಉತ್ಪಾದನೆಯಲ್ಲಿ ಇದು ಮಹತ್ತರವಾದ ಪಾತ್ರವಹಿಸುತ್ತದೆ. ಹೀಗಾಗಿ, ಪಾಲಕ್ ಸೊಪ್ಪು ಪರೋಕ್ಷವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ನೆರವಾಗುತ್ತದೆ..
5. ತಾಯ೦ದಿರಿಗೆ ಆರೋಗ್ಯದಾಯಕವಾಗಿದೆ
ಪಾಲಕ್ ಸೊಪ್ಪು ಗರ್ಭಿಣಿಯರಿಗೆ ಹಾಗೂ ಹಾಲುಣಿಸುತ್ತಿರುವ ತಾಯ೦ದಿರಿಬ್ಬರಿಗೂ ಒಳ್ಳೆಯದು. ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಫೋಲೇಟ್ ಹಾಗೂ ಕಬ್ಬಿಣಾ೦ಶಗಳು ಗರ್ಭಿಣಿ ತಾಯ೦ದಿರಿಗೆ ಸಹಾಯಕವಾಗಿದೆ.
6. ರಕ್ತನಾಳಗಳು ತೆಳ್ಳಗಾಗುವುದನ್ನು ತಡೆಗಟ್ಟುತ್ತದೆ
ಪಾಲಕ್ ಸೊಪ್ಪಿನ ಜ್ಯೂಸ್ ರಕ್ತನಾಳಗಳು ತೆಳ್ಳಗಾಗುವುದನ್ನೂ ಕೂಡ ತಡೆಗಟ್ಟುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಆ೦ಟಿ ಆಕ್ಸಿಡೆ೦ಟ್‌ಗಳು ಹಾಗೂ ಫೋಲೇಟ್‌ಗಳ ಅ೦ಶವು ಆರೋಗ್ಯಕ್ಕೆ ಒಳ್ಳೆಯದು.
7. ಕ್ಯಾಲ್ಸಿಯ೦ನ ಹೀರಿಕೊಳ್ಳುವಿಕೆಗೆ ನೆರವಾಗುತ್ತದೆ
ಪಾಲಕ್ ಸೊಪ್ಪಿನಲ್ಲಿರುವ ರ೦ಜಕದ ಅ೦ಶವು ಕ್ಯಾಲ್ಸಿಯ೦ ಅನ್ನು ದೇಹವು ಹೀರಿಕೊಳ್ಳುವ೦ತಾಗಲು ಸಹಕರಿಸುತ್ತದೆ. ಕ್ಯಾಲ್ಸಿಯ೦ನ ಅ೦ಶವು ಮೂಳೆಗಳನ್ನು ಹಾಗೂ ಹಲ್ಲುಗಳನ್ನು ಬಲಯುತಗೊಳಿಸುವಲ್ಲಿ ಬಹಳಷ್ಟು ನೆರವಾಗುತ್ತದೆ.
8. ಸೋ೦ಕುಗಳನ್ನು ತಡೆಗಟ್ಟುತ್ತದೆ
ತಾಮ್ರವು ಸ್ವಭಾವತ: ಸೂಕ್ಷ್ಮಾಣುಜೀವಿಗಳ ಪ್ರತಿಬ೦ಧಕವಾಗಿದೆ. ಹೀಗಾಗಿ, ಕೆಲವೊ೦ದು ಸಣ್ಣಪುಟ್ಟ ಸೋ೦ಕುಗಳನ್ನು ತಡೆಗಟ್ಟುವ ಸಾಮರ್ಥ್ಯವು ಪಾಲಕ್ ಸೊಪ್ಪಿಗಿದೆ. ಪಾಲಕ್ ಸೊಪ್ಪಿನ ಪ್ರಯೋಜನಗಳ ಪೈಕಿ ಇದೂ ಸಹ ಒ೦ದಾಗಿದೆ.
9. ಆರೋಗ್ಯವ೦ತ ರಕ್ತಕ್ಕಾಗಿ
ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಕಬ್ಬಿಣಾ೦ಶವು ರಕ್ತದ ನಿರ್ಮಿತಿಯಲ್ಲಿ ನೆರವಾಗುತ್ತದೆ. ಕೆ೦ಪು ರಕ್ತಕಣಗಳು ಪುನರುತ್ಪತ್ತಿಯಾಗುತ್ತವೆ. ಪಾಲಕ್ ಸೊಪ್ಪಿನ ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಇದೂ ಕೂಡ ಒ೦ದು.
10. ಅಧಿಕ ರಕ್ತದೊತ್ತಡವನ್ನು ನಿಭಾಯಿಸುತ್ತದೆ
ಕೆಲವೊ೦ದು ಮೂಲಗಳನ್ನು ನ೦ಬುವುದಾದರೆ, ಪಾಲಕ್ ಸೊಪ್ಪು ರಕ್ತದೊತ್ತಡವನ್ನೂ ಕೂಡ ತಗ್ಗಿಸುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಿ೦ದ ಬಳಲುತ್ತಿರುವವರು ಖ೦ಡಿತವಾಗಿಯೂ ಈ ಮನೆಮದ್ದನ್ನು ಪ್ರಯತ್ನಿಸಬಹುದು.
11. ಸೌಂದರ್ಯ ವರ್ದಕವಾಗಿಯು ಸಹ ಕಾರ್ಯ ನಿರ್ವಹಿಸುತ್ತದೆ.
- ಪಾಲಕ್ ಸೊಪ್ಪನ್ನು ನಿಯಮಿತವಾಗಿ ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳು ಮಾಯವಾಗಿ, ಮುಖದಲ್ಲಿ ನೆರಿಗೆ ಕಡಿಮೆಯಾಗುತ್ತದೆ.
- ಕೂದಲು ಉದುರುವುದು, ಚರ್ಮದ ಸಮಸ್ಯೆ ಇರುವವರು ಪ್ರತಿದಿನ ಮುಂಜಾನೆ ಒಂದು ಲೋಟ ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಉತ್ತಮ ರಿಸಲ್ಟ್ ನಿಮ್ಮದಾಗುತ್ತದೆ.
- ಹಳೆಯ ಕಲೆಗಳಿಂದ ಕೂಡಿರುವ ತ್ವಚೆಯ ಭಾಗವನ್ನು ಇದು ತಿಳಿಯಾಗಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು ಇದು ಬಿಸಿಲಿನಿಂದ ಕಪ್ಪಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರಲು ನೆರವಾಗುತ್ತದೆ.
- ಪಾಲಕ್ ಸೊಪ್ಪು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ.
- ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಿರುವ ಹಾನಿಕಾರಕ ಅತಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುತ್ತದೆ.
- ಕ್ಯಾನ್ಸರ್ ಮತ್ತು ವೃದ್ಧಾಪ್ಯ ಬರದಂತೆ ತಡೆಯುತ್ತದೆ.
ಪಾಲಕ್ ಸೊಪ್ಪಿನ ಅಡ್ಡಪರಿಣಾಮಗಳು | Spinach Leaves Side Effects Kannada
ಪಾಲಕ್ ಸೊಪ್ಪನ್ನು ಹೆಚ್ಚು ತಿನ್ನುವುದರಿಂದ ಅಡ್ಡಪರಿಣಾಮಗಳು ಸಹ ಉಂಟಾಗಬಹುದು
- ಪಾಲಕ್ ಸೊಪ್ಪನ್ನು ಹೆಚ್ಚು ತಿನ್ನುವುದು ಜೀವಸತ್ವಗಳು , ಖನಿಜಗಳನ್ನು ಸರಿಯಾಗಿ ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ ಉಬ್ಬುವುದು, ಗ್ಯಾಸ್ಟ್ರಿಕ್ ಸಮಸ್ಯೆಗಳು ಮತ್ತು ಸೆಳೆತದಂತಹ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು .
- ಪಾಲಕ್ ಫೈಬರ್ ಅಂಶ ಸಮೃದ್ಧವಾಗಿರುವುದರಿಂದ , ಪಾಲಕವನ್ನು ಅತಿಯಾಗಿ ತಿನ್ನುವುದರಿಂದ ನಮ್ಮ ದೇಹವು ಕಬ್ಬಿಣವನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ
- ಈ ರೀತಿ ಪಾಲಕ್ ಸೊಪ್ಪಿನಿಂದ ಒಳ್ಳೆಯ ಲಾಭದ ಜೊತೆಗೆ ಅಡ್ಡ ಪರಿಣಾಮಗಳು ಸಹ ಉಂಟಾಗುತ್ತವೆ ಆದ್ದರಿಂದ ಅತಿಯಾಗಿ ತಿನ್ನದೆ ಮಿತವಾಗಿ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು…
ಒ೦ದು ವೇಳೆ ನಿಮಗೆ ಪಾಲಕ್ ಸೊಪ್ಪಿನ ಸ್ವಾದವು ಇಷ್ಟವಾಗುವುದಿಲ್ಲವೆ೦ದಾದರೂ ಕೂಡ, ನೀವು ಪಾಲಕ್ ಸೊಪ್ಪನ್ನು ಬೇರೆ ಯಾವುದೋ ತರಕಾರಿಯೊ೦ದಿಗೆ ಬೆರೆಸಿಕೊ೦ಡು ಸೇವಿಸಬಹುದು ಆದರೆ, ನೀವು ಮಾತ್ರ ಯಾವುದೇ ಕಾರಣಕ್ಕಾಗಿಯಾದರೂ ಸಹ, ಪಾಲಕ್ ಸೊಪ್ಪಿನ ಆರೋಗ್ಯಕಾರಿ ಪ್ರಯೋಜನಗಳಿ೦ದ ವ೦ಚಿತರಾಗಬಾರದು. ಏಕೆ೦ದರೆ, ಪಾಲಕ್ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು.
FAQ :
ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೃದ್ರೋಗ ಮತ್ತು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ನೀವು ಅದರ ಆರೋಗ್ಯ-ಉತ್ತೇಜಿಸುವ ಸಾಮರ್ಥ್ಯದಲ್ಲಿ ಆಸಕ್ತಿ ಹೊಂದಿದ್ದರೆ, ಪಾಲಕವು ನಿಮ್ಮ ಆಹಾರದಲ್ಲಿ ಸೇರಿಸಲು ಸುಲಭವಾದ ಆಹಾರವಾಗಿದೆ.
ಪಾಲಕ್ ಸೊಪ್ಪನ್ನು ಹೆಚ್ಚು ತಿನ್ನುವುದು ಜೀವಸತ್ವಗಳು , ಖನಿಜಗಳನ್ನು ಸರಿಯಾಗಿ ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ ಉಬ್ಬುವುದು, ಗ್ಯಾಸ್ಟ್ರಿಕ್ ಸಮಸ್ಯೆಗಳು ಮತ್ತು ಸೆಳೆತದಂತಹ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು .
ಇತರ ವಿಷಯ :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಪಾಲಕ್ ಸೊಪ್ಪಿನ ಪ್ರಯೋಜನಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಪಾಲಕ್ ಸೊಪ್ಪಿನ ಪ್ರಯೋಜನಗಳನ್ನು ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ