ಬ್ಯೂಟಿ ಟಿಪ್ಸ್, Beauty Tips in Kannada, Ayurvedic Beauty Tips, Homemade, Female Beauty Tips, Natural Face Beauty Tips in Kannada Mane Maddu Skin Glowing Tips in Kannada Beauty Tips Video Kannada
![](https://i0.wp.com/kannadadeevige.in/wp-content/uploads/2021/09/photo_2021-09-07_14-28-25.jpg?resize=493%2C269&ssl=1)
ಸೌಂದರ್ಯ ಸಲಹೆಗಳು ಕನ್ನಡದಲ್ಲಿ
Beauty Tips in Kannada Mane Maddu
ಮುಖದಲ್ಲಿ ಮೊಡವೆ
ಮುಖದಲ್ಲಿ ಮೊಡವೆ ಆದ್ರೆ ಹೇಗೋ ಸಹಿಸಿಕೊಳ್ಳಬಹುದು . ಅದನ್ನು ತೆಗೆಯೋದಕ್ಕೆ ಸುಲಭದಲ್ಲಿ ಔಷಧಿ ಮಾಡ್ಡಹುದು . ಆದ್ರೆ ಮೂಗೊಳಗೆ ಮೊಡವೆ ಆದ್ರೆ ಏನ್ ಮಾಡೋದು . ಅಬ್ಬಬ್ಬ ನರಕಯಾತನೆ ..
ಲಿಂಬೆಯ ರಸ
ಕೆಲವು ರಸ ಲಿಂಬೆ ಹಣ್ಣಿನ ರಸ್ತದ ಸೈಲ್ ತೆಗೆದುಕೊಳ್ತಾ ಇರಿ . ಒಂದು ಸಲ ಮೂಸಿದ್ರೆ ಸಾಕಾಗೋದಿಲ್ಲ . ಬದಲಾಗಿ ಹಲ್ಲವು ಬಾರಿ ಲಿಂಬೆಯ ರಸದ ಸೈಲ್ ತೆಗೆದುಕೊಳ್ಳಲೇ ಇರಬೇಕಾಗುತ್ತೆ , ಹತ್ತಿಯನ್ನು ಲಿಂಬೆರಸದಲ್ಲಿ ಅದ್ದಿ ಸಾಧ್ಯವಾದ್ರೆ ಮೂಗಿನಲ್ಲಿ ಮೊಡವೆಯಾದೆ ಜಾಗಕ್ಕೆ ಅಪ್ಪೆ ಮಾಡೋಕೆ ಟ್ರೈ ಮಾಡಿ .
ಲಿಂಬೆಯಲ್ಲಿ ಆಸಿಡಿಕ್ ಅಂಶಗಳಿರೊಳದಿಂದ ಮೂಗನ್ನು ಕ್ಲೀನ್ ಮಾಡಿ ಮೊಡವೆಗಳು ಡ್ರೈ ಆಗುವಂತೆ ಮಾಡುತ್ತೆ . 15 ನಿಮಿಷ ಹಾಗೆಯೇ ಬಿಡಿ .. ವಾಸನೆ ಸಹಿಸೋಕೆ ಆಗಿಲ್ಲ ಅಂತ ಕೂಡಲೇ ತೊಳೆದುಬಿಡಬೇಡಿ .
ಮಂಜುಗಡ್ಡೆ
ಐಸ್ ಪ್ಯಾಕ್ ಮಾಡಿಕೊಳ್ಳೋದು ಮೂಗಿನಲ್ಲಿರುವ ಮೊಡವೆಯನ್ನು ನಿವಾರಿಸಲು ಇರುವ ಇನ್ನೊಂದು ಬೆಸ್ಟ್ ಮೆಥೆಡ್ , ಕೆಲವು ತುಂಡು ಐಸ್ಥಳನ್ನು ಇಲ್ಲವೇ ಕ್ರಷ್ ಮಾಡಿದ ಐಸ್ಸು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಅದನ್ನು ಮೂಗಿನಲ್ಲಿ ಮೊಡವೆಯಾಗಿ ನೋವಾಗುತ್ತಿರುವ ಜಾಗದಲ್ಲಿ ಪ್ಯಾಕ್ ಮಾಡ್ಕೊಳ್ಳಿ ” ಕೆಲವು ನಿಮಿಷ ಐಸ್ ಬಟ್ಟೆಯಿಂದ ಮೂಗಿನ ಮೇಲೆ ಪ್ರೆಸ್ ಮಾಡಿಕೊಳ್ತಾ ಇರಿ .. ಇದು ನೋವು ಹೆಚ್ಚಾಗುವುದು ಮತ್ತು ಮೊಡವೆಯ ಗಾತ್ರ ದೊಡ್ಡದಾಗುವುದನ್ನು ತಡೆಯುತ್ತೆ .
ಜೇನು
ಚರ್ಮದ ತೇವವನ್ನು ಹಿಡಿದಿಟ್ಟುಕೊಳ್ಳಲು ಜೇನು ಅತ್ಯುತ್ತಮವಾಗಿದ್ದು ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೇನನ್ನು ಬಳಸಿ ಮುಖ ತೊಳೆಯುವ ಮೂಲಕ ಸೂಕ್ಷ್ಮರಂಧ್ರಗಳು ಕೊಳೆ ನಿವಾರಿಸುವಷ್ಟು ಮಾತ್ರ ತೆರೆದು ಕೊಳೆ ನಿವಾರಿಸಿ ಆದ್ರ್ರತೆಯನ್ನು ಹಿಡಿದಿಟ್ಟುಕೊಳ್ಳಲು ಮತ್ತು ಚರ್ಮ ಮೃದುವಾಗಿರಲು ನೆರವಾಗುತ್ತೆದೆ .
ಕೊಬ್ಬರಿ ಎಣ್ಣೆ
ಮೇಕಪ್ ಅನ್ನು ನಿವಾರಿಸಲು ಕೊಬ್ಬರಿ ಎಣ್ಣೆಗಿಂತ ಉತ್ತಮವಾದ ಸ್ವಚ್ಛಕಾರಕ ಇನ್ನೊಂದಿಲ್ಲ . ಇದೇ ಗುಣ ಚರ್ಮದ ಸ್ವಚ್ಛತೆಗಾಗಿಯೂ ಬೆಳೆಸಬಹುದು .
ಆದ್ದರಿಂದ ಮೇಕಪ್ ರಿಮೂವರ್ ಎಂಬ ಪ್ರಬಲ ರಾಸಾಯನಿಕಗಳಿಗೆ ವ್ಯರ್ಥವಾಗಿ ಹಣವನ್ನು ಸುರಿದು ಚರ್ಮವನ್ನು ಹಾಳುಗೆಡುವುದು ಈಗೆ ಅಗತ್ಯವಿಲ್ಲ
ಲಿಂಬೆ
ಎಣ್ಣೆ ಚರ್ಮದವರಿಗೆ ಲಿಂಬೆ ಅತ್ಯುತ್ತಮವಾಗಿದೆ .
ಇದು ತೆರೆದ ಸೂಕ್ಷ್ಮರಂಧ್ರಗಳನ್ನು ಮುಚ್ಚಿ ಕೊಳೆಯನ್ನೂ ನಿವಾರಿಸುತ್ತದೆ . ಉತ್ತಮ ಪರಿಣಾಮ ಪಡೆಯಲು ಲಿಂಬೆರಸವನ್ನು ತೆಳುವಾಗಿ ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ
ಲವಂಗದ ಎಣ್ಣೆ
ಮುಖದಲ್ಲಿ ಗಾಯದಿಂದ ಅಥವಾ ತರಚಿದ ಗಾಯದಿಂದ ಉಂಟಾಗಿರುವ ಯಾವುದೇ ರೀತಿಯ ಕಲೆಗಳನ್ನು ಲವಂಗದ ಎಣ್ಣೆ ಹಚ್ಚುವುದರಿಂದ ನಿವಾರಣೆ ಮಾಡಬಹುದು . ಈ ನೈಸರ್ಗಿಕ ತೈಲದಿಂದ ಮೃಧೆ ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುತ್ತದೆ .
ಜೇನು ಮತ್ತು ನಿಂಬೆ :
ಜೇನು , ನಿಂಬೆ ಮತ್ತು ಕೆನೆ ಮಿಕ್ಸ್ ಮಾಡಿ . ಇದನ್ನು ಮುಖಕ್ಕೆ ಹಾಕಿ ಮಸಾಜ್ ಮಾಡಿ . 10 ನಿಮಿಷದ ನಂತರ ಮುಖ ತೊಳೆಯಿರಿ .
ಹಳದಿ ಮತ್ತು ಚಂದನ : ಸ್ವಲ್ಪ ಅರಿಶಿನ , ಚಂದನ ಮತ್ತು ಸ್ವಲ್ಪ ಹಾಲು ಸೇರಿಸಿ 2-3 ನಿಮಿಷ ಮುಖವನ್ನು ಮಸಾಜ್ ಮಾಡಿ . ನಿಮಿಷದ ನಂತರ ಮುಖ ತೊಳೆಯಿರಿ . ಇದರಿಂದ ಗ್ರೇ ಹೆಚ್ಚುತ್ತದೆ .
ರೋಸ್ ವಾಟರ್ :
ಒಂದು ಚಮಚ ರೋಸ್ ವಾಟರ್ ಮತ್ತು ಒಂದು ಚಮಚ ಹಾಲನ್ನು ಜೊತೆಯಾಗಿ ಮಿಶ್ರ ಮಾಡಿ , ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಾಕಿ ಮಲಗಿ , ಬೆಳಗ್ಗೆ ಎದ್ದು ಮುಖ ತೊಳೆಯಿರಿ .
ಅಲೋವೆರಾ ಜೆಲ್ :
ಒಂದು ಚಮಚ ಅಲೋವೆರಾ ಜೆಲ್‌ನ್ನು ಮುಖಕ್ಕೆ ಹಚ್ಚಿ 10 ನಿಮಿಷದ ನಂತರ ಮುಖ ತೊಳೆಯಿರಿ .
ಮೊಸರು ಮತ್ತು ಅರಿಶಿನ :
ಒಂದು ಚಮಚ ಅರಿಶಿನ ಮತ್ತು 1 ಚಮಚ ಮೊಸರು ಸೇರಿಸಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆಯಿರಿ
ಮೇಕಪ್ ನಿವಾರಿಸಲು ಸೌಮ್ಯ ದ್ರಾವಣ ಬಳಸಿ
ಮೇಕಪ್ ಅನಿವಾರ್ಯವಾಗಿದ್ದ ಸಂದರ್ಭದಲ್ಲಿ ಕಣ್ಣ ಕೆಳಗಿನ ಭಾಗದ ಮೇಕಪ್ ನಿವಾರಿಸಲು ಅತಿಸೌಮ್ಯವಾದ ದ್ರಾವಣ ಬಳಸಿ.
ವಿಟಮಿನ್ ಎಸಿಇ ಮತ್ತು ಕೆ ಹೆಚ್ಚಿರುವ ಹಸಿತರಕಾರಿಗಳು , ಮೊಸರು , ಚೀಸ್ , ಹಸಿರು ಸೊಪ್ಪುಗಳು , ತಾಜಾ ಹಣ್ಣುಗಳು ಮತ್ತು ಹಣ್ಣುಗಳ ಜ್ಯೂಸ್ ಗಳನ್ನು ಸೇವಿಸಿ
ಸೌತೆರಸವನ್ನು ಬಳಸಿ
ಎಳೆಯ ಸೌತೆಕಾಯಿಯನ್ನು ಅಡ್ಡಲಾಗಿ ಕತ್ತರಿಸಿದಾಗ ಒಸರುವ ರಸದಲ್ಲಿ ಸಂಕೋಚಕ ( astringent ) ಗುಣವಿದೆ . ಇದು ನಿಮ್ಮ ಚರ್ಮವನ್ನು ಸಂಕುಚಿಸಲು ನೆರವಾಗುತ್ತದೆ
ಈ ರಸವನ್ನು ತೆಗೆಯುವ ಅತ್ಯುತ್ತಮ ವಿಧಾನವೆಂದರೆ ಸೌತೆಯ ತುದ್ದಿಯಲ್ಲಿ ಅಡ್ಡಲಾಗಿ ಬಿಲ್ಲೆಯೊಂದನ್ನು ಕತ್ತರಿಸಿ ಕತ್ತರಿಸಿದ ಭಾಗಕ್ಕೆ ಮತ್ತೆ ಅಂಟಿಸಿ ನಯವಾಗಿ ಉಜ್ಜಿ , ಸ್ವಲ್ಪ ಸಮಯದ ಬಳಿಕ ಎರಡೂ ಬದಿಗಳಿಂದ ಚಮಚದಿಂದ ರಸವನ್ನು ಕೆರೆದು ತೆಗೆಯಿರಿ .
ಕಣ್ಣುಗಳ ಕೆಳಗಿನ ಕಪ್ಪು ಕಲೆಗಳಿಗೆ
ಒಂದು ಚಿಕ್ಕ ಚಮಚ ಬೀಟೂಟ್ ರಸಕ್ಕೆ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಹಚ್ಚಿ ನಯವಾದ ಮಸಾಜ್ ಮೂಲಕ ಕಣ್ಣುಗಳ ಕೆಳಗಿನ ಭಾಗಕ್ಕೆ ದಪ್ಪನಾಗಿ ಹಚ್ಚಿ .
ಈ ಲೇಪನ ಸುಮಾರು ಅರ್ಧ ಗಂಟೆಯಾದರೂ ಹೀಗೇ ಇರುವಂತೆ ಮಾಡಿ . ಬಳಿಕ ತಣ್ಣೀರಿನಿಂದ ಒದ್ದೆಯಾಗಿಸಿದ ಹತ್ತಿಯ ಟವೆಲ್ಲಿನಿಂದ ಒರೆಸಿಕೊಳ್ಳಿ ,
ತುಟಿಗಳು ತುಂಬಿಕೊಂಡಿರುವಂತೆ
ಮಾಡಲು ತುಟಿಗಳು ತುಂಬಿಕೊಂಡಿರುವಂತೆ ಹಾಗೂ ಗುಲಾಬಿ ಬಣ್ಣ ಹೊಂದಿರುವಂತೆ ಮಾಡಲು ಈ ಸರಳ ವಿಧಾನ ಅನುಸರಿಸಿ
ಒಂದು ದೊಡ್ಡ ಚಮಚ ಈಗತಾನೇ ಸಂಗ್ರಹಿಸಿದ ಬೀಟ್ರೋಟ್ ರಸವನ್ನು ಫ್ರೀಜರಿನೊಳಗೆ ಅರ್ಧ ಗಂಟೆ ಇಡಿ . ಬಳಿಕ ಇದು ಮಂಜುಗಡ್ಡೆಯಂತಾಗುತ್ತದೆ . ಈ ಗಡ್ಡೆಯಿಂದ ಮಲಗುವ ಮುನ್ನ ನಿಮ್ಮ ತುಟಿಗಳನ್ನು ಸವರಿಕೊಳ್ಳಿ.
ಅಕ್ಕಿ ತೊಳೆದ ನೀರು
ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತೆ ಹೌದು , ಇದು ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತೆ . ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನೀವು ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದಾದ ಸುಲಭ ವಿಧಾನ ಇದು .
ಅಕ್ಕಿ ತೊಳೆದ ನೀರಿಗೆ ಕಿತ್ತಲ್ಲಿ ಸಿಪ್ಪೆ , ಲಿಂಬೆಯ ಸಿಪ್ಪೆ , ಗ್ರೀನ್ ಟೀ , ತುಳಸಿ ದಳಗಳು , ಬೇವಿನ ಎಲೆ , ಇವುಗಳಲ್ಲಿ ಯಾವುದಾದ್ರೂ ಒಂದನ್ನು ಮಿಕ್ಸ್ , ಮಾಡಿಕೊಂಡು ಬಳಸಿದ್ರೂ ಕೂಡ ನಿಮ್ಮ ಚರ್ಮದ ಆರೋಗ್ಯ ವೃದ್ಧಿಯಾಗಲಿದೆ . ಟ್ರೈ ಮಾಡಿ ನೋಡಿ
ಹೊಳೆಯುವ ತ್ವಚೆಯ ಕಾಂತಿಗೆ ಹೊಳೆಯುವ ಶುಭ್ರ ತ್ವಚೆಯನ್ನು ನೀಡುವಲ್ಲಿ ಅಕ್ಕಿ ತೊಳೆದ ನೀರು ಕಮಾಲಿನದ್ದಾಗಿದೆ. ಇದರಲ್ಲಿ ಸಾಕಷ್ಟು ಉತ್ತಮ ಪ್ರೋಟೀನ್ ಮತ್ತು ವಿಟಮಿನ್‌ಗಳಿದ್ದು ದೇಹದಲ್ಲಿರುವ ಕಲ್ಮಶವನ್ನು ನಿವಾರಿಸುವಲ್ಲಿ ಅಕ್ಕಿ ತೊಳೆದ ನೀರು ಸಹಾಯಕ ಎಂದೆನಿಸಲಿದೆ
Beauty Tips in Kannada Videos
ಇದನ್ನು ಹಚ್ಚಿದರೆ ನಿಮ್ಮ ಮುಖವು ಎಷ್ಟೇ ಕಪ್ಪುಗೆ ಇದ್ದರು ಬಿಳಿಯಾಗಿ ಹೊಳೆಯುತ್ತದೆ । Skin Whitening At Home
ಮುಖಕ್ಕೆ ಹಚ್ಚೊದು, ಕುಡಿಯೋದು ಏನುಬೇಡ ಬೆಳಗ್ಗೆ ಎದ್ದು ಹೀಗೆ ಮಾಡಿ 3 ದಿನಕೆ ಫೇಷಿಯಲ್ ಕ್ಕಿಂತ ವೈಟ್ ಟೈಟ್ ಆಗುತ್ತೆ
ಇತರ ವಿಷಯಗಳು :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಬ್ಯೂಟಿ ಟಿಪ್ಸ್ ಬಗ್ಗೆ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಬ್ಯೂಟಿ ಟಿಪ್ಸ್ ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ