ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ – 4.6 ಚೋಳರು ನೋಟ್ಸ್, 2nd Puc History Chapter 4.6 Notes Question Answer in Kannada Cholaru Notes Pdf Download Kseeb Solution For Class 12 Hiatory Chapter 4.6 Notes 2nd puc History Cholas Notes Pdf in Kannada Medium
ಅಧ್ಯಾಯ – 4.6 ಚೋಳರು

2nd Puc History Cholaru Chapter 4.6 Notes
I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :
1. ಚೋಳರ ಗ್ರಾಮಾಡಳಿತವನ್ನು ತಿಳಿಸುವ ಶಿಲಾಶಾಸನ ಯಾವುದು ?
ಒಂದನೇ ಪಾರಾಂತಕನ ಉತ್ತರ ಮೆರೂರು ಶಾಸನ .
2. ‘ ಕುಡುವಲೈ ‘ ಎಂದರೇನು ?
ಅದೃಷ್ಟ .
3.“ ಸಂಘಂ ‘ ಎಂದರೇನು ?
ತಮಿಳು ‘ ಸಾಹಿತ್ಯ ಸಂಘ
4. ಸಂಘಂ ಕಾಲದ ಚೋಳರ ಮೊದಲ ದೊರೆ ಯಾರು ?
ಇಳೈಯಾನ್ .
5. ತಂಜಾವೂರಿನ ರಾಜರಾಜೇಶ್ವರ ದೇವಾಲಯವನ್ನು ಕಟ್ಟಿಸಿದವರು ಯಾರು ?
ಒಂದನೇ ರಾಜರಾಜ ಚೋಳ .
6. ‘ ವರಿಯಮ್ ‘ ಎಂದರೇನು ?
ವಾರ್ಷಿಕ ಸಮಿತಿ , ಉದ್ಯಾನಸಮಿತಿ , ಕೆರೆಕಟ್ಟೆಗಳ ಸಮಿತಿಗಳ ಕಾರ್ಯನಿರ್ವಹಣೆಯ ಸಮಿತಿಯನ್ನು ‘ ವರಿಯಂ ‘ ಎನ್ನುವರು .
2nd Puc History Chapter 4 Question Answer in Kannada
II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ :
1. ಒಂದನೇ ರಾಜೇಂದ್ರ ಚೋಳನ ಯಾವುದಾದರೂ ಎರಡು ಬಿರುದುಗಳನ್ನು ತಿಳಿಸಿ .
ಪಂಡಿತಚೋಳ , ಗಂಗೈಕೊಂಡ ಚೋಳ .
2. ಸಂಘಂ ಯುಗದ ಯಾವುದಾದರೂ ಎರಡು ಪ್ರಸಿದ್ಧ ಕೃತಿಗಳನ್ನು ಹೆಸರಿಸಿ .
ಶಿಲಾವಾದಿಗಾರಂ ಮತ್ತು ಮಣಿಮೇಗಲ್ಯ .
3. ತಕ್ಕೋಳಂ ಕದನವು ಯಾವಾಗ ಮತ್ತು ಯಾರ ನಡುವೆ ನಡೆಯಿತು ?
ಸಾ.ಶ. 949 ರಲ್ಲಿ ಚೋಳ ಮತ್ತು ರಾಷ್ಟ್ರಕೂಟರ ನಡುವೆ ನಡೆಯಿತು .
III . ಈ ಕೆಳಗಿನ ಪ್ರಶ್ನೆಗಳಿಗೆ 15-20 ವಾಕ್ಯಗಳಲ್ಲಿ ಉತ್ತರಿಸಿ :
2nd Puc History Cholaru Notes Pdf
1 . ಒಂದನೇ ರಾಜೇಂದ್ರ ಚೋಳನ ಸಾಧನೆಗಳನ್ನು ವಿವರಿಸಿ .
- ಇವನು ಒಂದನೇ ರಾಜ ರಾಜ ಚೋಳನ ಮಗ , ಸಿಂಹಳದ ಅರಸ 5 ನೇ ಮಹೇಂದ್ರನನ್ನು ಸೋಲಿಸಿ ಬಂಧನದಲ್ಲಿಟ್ಟು ಆತನ ವಶದಲ್ಲಿದ್ದ ಪಾಂಡ್ಯ ರಾಜನ ಮುದ್ರೆ ಮತ್ತು ರಾಜಕಿರೀಟವನ್ನು ವಶಕ್ಕೆ ತೆಗೆದುಕೊಂಡು , ಸೆರೆಯಲ್ಲಿದ್ದ ಮಹೇಂದ್ರನು ಮರಣ ಹೊಂದಿದ ನಂತರ ಸಿಂಹಳ ರಾಜ್ಯ ಚೋಳರ ಪಾಲಾಯಿತು .
- ಕಲ್ಯಾಣಿ ಚಾಲುಕ್ಯದೊರೆ 2 ನೇ ಜಯಸಿಂಹನನ್ನು ಮತ್ತು ಈತನ ಪರ ವಹಿಸಿ ಬಂದ ವೆಂಗಿಯ ವಿಜಯಾ ದಿತ್ಯನನ್ನು ಸೋಲಿಸಿ ರಾಜ್ಯದಿಂದ ಹೊರ ಹಾಕಿ , ರಾಜ ರಾಜ ನರೇಂದ್ರನನ್ನು ಸಿಂಹಾಸನದ ಮೇಲೆ ಕೂರಿಸಿ ತನ್ನ ಮಗಳಾದ ಅಮ್ಮಂಗದೇವಿಯನ್ನು ಕೊಟ್ಟು ಮದುವೆ ಮಾಡಿದನು . ನಂತರ ಒರಿಸ್ಸಾದತ್ತ ಮುನ್ನುಗ್ಗಿ ಬಂಗಾಳದ ಒಂದನೇ ಮಹಿಪಾಲನನ್ನು ಸೋಲಿಸಿದನು .
- ಗಂಗಾನದಿಯವರೆವಿಗೂ ದಂಡೆಯಾತ್ರೆ ಹೋಗಿ ಪವಿತ್ರ ಗಂಗಾಜಲವನ್ನು ತೆಗೆದುಕೊಂಡು ಬಂದು ಗಂಗೈಕೊಂಡ ಚೋಳ ‘ ಎಂಬ ಬಿರುದನ್ನು ಧರಿಸಿ , ಗಂಗೈಕೊಂಡ ಚೋಳಪುರಂ ಎಂಬ ಹೊಸ ರಾಜಧಾನಿಯನ್ನು ಕಟ್ಟಿಸಿದನು . ಇವನು ಚೋಳಗಂಗಂ ಎಂಬ ಕೆರೆಯನ್ನು ಕಟ್ಟಿಸಿ ಅದರೊಳಗೆ ಗಂಗಾ ಪವಿತ್ರ ಜಲವನ್ನು ಬೆರೆಸಿದನು .
- ತನ್ನ ಬಲಿಷ್ಟ ನೌಕಾಪಡೆ ಮತ್ತು ಸೈನ್ಯದೊಂದಿಗೆ ಆನ್ನೇಯ ಏಷ್ಯಾದ ಶೈಲೇಂದ್ರ ಸಾಮ್ರಾಜ್ಯದ ಮೇ ದಂಡಯಾತ್ರೆಯನ್ನು ಕೈಗೊಂಡು ಬಂಗಾಳ ಕೊಲ್ಲಿಯನ್ನು ದಾಟಿ ಜಾವಾ , ಸುಮಾತ್ರಗಳನ್ನು ಗೆದ್ದುಕೊಂಡು ಶೈಲೇಂದ್ರದ ದೊರೆ ಸಂಗ್ರಾಮ ವಿಜಯೋತ್ತುಂಗವರ್ಮನ್ನನ್ನು ಯುದ್ಧದಲ್ಲಿ ಸೋಲಿಸಿದನು .
- ಇವನು ಆ ವಿಜಯದ ನೆನಪಿಗಾಗಿ ಶೈಲೇಂದ್ರದಲ್ಲಿ ಗಂಗೈಕೊಂಡ ಚೋಳ ಶಿವಾಲಯವನ್ನು ಕಟ್ಟಿಸಿದನು .
- ಈತನು ದಕ್ಷ ಆಡಳಿತಗಾರ ಮತ್ತು ವಿದ್ಯಾಪ್ರೇಕ್ಷಕನಾಗಿದ್ದು “ ಎನ್ನಾಯಿರಂ ‘ ಎಂಬಲ್ಲಿ ಉನ್ನತ ವಿದ್ಯಾಕೇಂದ್ರವನ್ನು ಸ್ಥಾಪಿಸಿದನು . ಈ ವಿದ್ಯಾಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದ 340 ವಿದ್ಯಾರ್ಥಿ ಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತು .
- ಈತನು ಪಂಡಿತಚೋಳ ‘ “ ಗಂಗೈಕೊಂಡ ಚೋಳ ಮತ್ತು ‘ ಕೇದಾರಕೊಂಡ ‘ ಮುಂತಾದ ಬಿರುದುಗಳನ್ನು ಹೊಂದಿದ್ದನು . * ಚೀನಾ ದೇಶಕ್ಕೆ ತನ್ನ ರಾಯಭಾರಿಗಳನ್ನು ಕಳುಹಿಸಿದ್ದನು .
2. ಚೋಳರ ಗ್ರಾಮಾಡಳಿತವನ್ನು ವಿವರಿಸಿ .
- ಇದು ಚೋಳರ ಆಡಳಿತದ ಮುಖ್ಯಲಕ್ಷಣವಾಗಿದ್ದು ಒಂದನೇ ಪಾರಾಂತಕನ ಉತ್ತರ ಮೇರೂರು ಶಾಸನ ಗ್ರಾಮಾಡಳಿತದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತದೆ . ಗ್ರಾಮವನ್ನು 30 ಭಾಗಗಳಾಗಿ [ ಕುಡುಂಬು ] ವಿಂಗಡಿಸಲಾಗಿತ್ತು .
- ಪ್ರತಿ ವಿಭಾಗದಿಂದ ಒಬ್ಬೊಬ್ಬ ಸದಸ್ಯರನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತಿತ್ತು . ಚುನಾವಣೆ ದಿನದಂದು ಗ್ರಾಮಸ್ಥರು ದೇವಾಲಯಕ್ಕೆ ಸೇರಿ ಆಯ್ಕೆ ಮಾಡುವ ಅಭ್ಯರ್ಥಿಗಳ ಹೆಸರನ್ನು ಓಲೆಗರಿಯ ಮೇಲೆ ಬರೆದು ಒಂದು ಮಡಿಕೆಯಲ್ಲಿ ಹಾಕಿ , ಒಬ್ಬ ಚಿಕ್ಕ ಬಾಲಕನಿಂದ ಎಲ್ಲರ ಸಮ್ಮುಖದಲ್ಲಿ ಎತ್ತಿಸಿ ಪ್ರತಿನಿಧಿಗಳನ್ನು ಆಯ್ಕೆ ನಡೆಸಲಾಗುತ್ತಿತ್ತು
- ಆಯ್ಕೆಯಾದ ಪ್ರತಿನಿಧಿಗಳು ವಾರ್ಷಿಕ ಸಮಿತಿ , ಉದ್ಯಾನ ಸಮಿತಿ , ಮತ್ತು ಕೆರೆಕಟ್ಟೆಗಳ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಬೇಕಿತ್ತು . ಈ ಸಮಿತಿಗಳನ್ನು ‘ ವರಿಯಂ ‘ ಎಂತಲೂ ಪ್ರತಿನಿಧಿಗಳನ್ನು ‘ ವರಿಯ ಪೆರು ಮಕ್ಕಳ್ ‘ ಎಂತಲೂ ಕರೆಯುತ್ತಿದ್ದರು . ಈ ಸಮಿತಿಗಳು 360 ದಿನಗಳು ಕಾರ್ಯನಿರ್ವಹಿಸುತ್ತಿದ್ದವು . ಗ್ರಾಮಗಳ ಆಸ್ತಿ : ರಕ್ಷಣೆ , ಕಂದಾಯ ವಸೂಲಿ , ದೇವಾಲಯ , ಕೆರೆ , ತೋಪು , ಅರಣ್ಯ ರಕ್ಷಣೆ ಮುಂತಾದ ಕರ್ತವ್ಯಗಳನ್ನು ಗ್ರಾಮಸಭೆ ನಿರ್ವಹಿಸುತ್ತಿತ್ತು . ಸಭೆಯ ತೀರ್ಮಾನಗಳನ್ನು ಬರೆದಿಡಲಾಗುತ್ತಿತ್ತು , ಅನಾವಶ್ಯಕವಾಗಿ ಕೇಂದ್ರಾಡಳಿತವು ಗ್ರಾಮಾಡಳಿತದಲ್ಲಿ ಮಧ್ಯ ಪ್ರವೇಶಿಸುತ್ತಿರಲಿಲ್ಲ .
ಸದಸ್ಯರಿಗೆ ಇರಬೇಕಾದ ಕನಿಷ್ಠ ಅರ್ಹತೆಗಳೆಂದರೆ:
- ಅಭ್ಯರ್ಥಿಯು ಕನಿಷ್ಟ ಅರ್ಧ ಎಕರೆ ಕೊಡುವ ಭೂಮಿಯನ್ನು ಹೊಂದಿರಬೇಕು .
- ಸ್ವಂತ ನಿವೇಶನದಲ್ಲಿ ಕಟ್ಟಿಸಿದ ಮನೆಯಲ್ಲಿ ವಾಸವಾಗಿರ ಬೇಕು . ಮೂರು ವರ್ಷಗಳ ಸತತವಾಗಿ ಯಾವುದೇ ಒಂದು ಸಮಿತಿಯಲ್ಲಿ ಸದಸ್ಯನಾಗಿದ್ದರೆ ಪುನರಾಯ್ಕೆಗೆ ಅನರ್ಹ .
- ಸಮಿತಿಯಲ್ಲಿ ಲೆಕ್ಕಪತ್ರಗಳನ್ನು ಸಲ್ಲಿಸದವರು ಮತ್ತು ಅವನ ಹತ್ತಿರದ ಸಂಬಂಧಿಕರು . ದುಷ್ಟರು , ಮೋಸಗಾರರು ಮತ್ತು ಬ್ರಾಹ್ಮಣಹತ್ಯೆ , ಮಧ್ಯಸೇವನೆ , ಕಳ್ಳತನ ಮತ್ತು ವ್ಯಭಿಚಾರ ಆರೋಪಿ ಹೊತ್ತವರು .
- 35 ಕ್ಕಿಂತ ಹೆಚ್ಚು ಮತ್ತು 70 ಕ್ಕಿಂತ ಕಡಿಮೆ ವಯಸ್ಸಿನವ ರಾಗಿರಬೇಕು .
- ವೇದ , ಬ್ರಾಹ್ಮಣಕಗಳ ಹಾಗೂ ವ್ಯವಹಾರಿಕ ಜ್ಞಾನವಿರಬೇಕು . ಉತ್ತಮ ಚಾರಿತ್ರ್ಯವುಳ್ಳವರಾಗಿರಬೇಕು .
ಹೆಚ್ಚುವರಿ ಪ್ರಶ್ನೋತ್ತರಗಳು
2nd Puc History Chapter 4.6 Mcq Notes Pdf in Kannada
1. ಪಲ್ಲವ ದೊರೆ ಅಪರಾಜಿತವರ್ಮನನ್ನು ಕೊಂದು ಚೋಳರ ಪ್ರಭುತ್ವವನ್ನು ಸ್ಥಾಪಿಸಿದ ದೊರೆ ಯಾರು ?
ವಿಜಯಾಲ ಚೋಳ
2. ರಾಷ್ಟ್ರಕೂಟರ ದಾಳಿಯಿಂದ ದುರ್ಬಲಗೊಂಡಿದ್ದ ಚೋಳ ರಾಜ್ಯವನ್ನು ಬಲಿಷ್ಠಗೊಳಿಸಿದ ಚೋಳ ಅರಸನಾರು?
ಒಂದನೇ ರಾಜರಾಜ ಚೋಳ
3.ಚೋಳರ ಇತಿಹಾಸವು ಯಾವ ಯುಗದಿಂದ ಪ್ರಾರಂಭವಾಗುತ್ತದೆ ?
ಸಂಘಂ ಯುಗ
4. ಸಿಂಹಳಕ್ಕೆ ದಂಡಯಾತ್ರೆಯನ್ನು ಕೈಗೊಂಡ ಅರಸ ಯಾರು ?
ಕರಿಕಾಲ ಚೋಳ
5. ‘ ಪಂಡಿತ ಚೋಳ ‘ ಇದು ಯಾರ ಬಿರುದು ?
ಒಂದನೇ ರಾಜೇಂದ್ರ ಚೋಳ
6 . ಅರಸನ ಆಪ್ತ ವರ್ಗವನ್ನು ಏನೆಂದು ಕರೆಯಲಾಗುತ್ತಿತ್ತು ?
“ ಉದನ ಕೂಟಂ ‘
FAQ ;
ಸಂಘಂ ಯುಗ
ಇಳೈಯಾನ್ .
ಕರಿಕಾಲ ಚೋಳ
ಇತರೆ ವಿಷಯಗಳು:
ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್
ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್
1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF