8ನೇ ತರಗತಿ ಕನ್ನಡ ಬಹುಮಾನ ಪದ್ಯದ ನೋಟ್ಸ್‌ | 8th Standard Bahumana Kannada Poem Notes 2024

8ನೇ ತರಗತಿ ಕನ್ನಡ ಬಹುಮಾನ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು, 8th Standard Bahumana Kannada Poem Notes Question Answer Summary in Kannada Pdf Download 2024 Kseeb Solutions For Class 8 Kannada Poem 4 Notes 8th Class Kannada 4th Poem Notes ಬಹುಮಾನ ಪದ್ಯದ ನೋಟ್ಸ್ pdf 8th bahumana question answer Bahumana 8th Standard Kannada Notes bahumana padyada saramsha

8th Class Bahumana Kannada Poem Notes

8th Standard Bahumana Kannada Poem Notes

ಕೃತಿಕಾರರ ಪರಿಚಯ :

ಕುವೆಂಪು ( ೧೯೦೪ ಡಿಸೆಂಬರ್ ೨೯ – ೧೯೯೪ ನವೆಂಬರ್ ೧೧ ) – ಕನ್ನಡದಲ್ಲಿ ಬರೆದ ರಾಷ್ಟ್ರಕವಿ . ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ ಅಲ್ಲೇ ಪ್ರಾಧ್ಯಾಪಕರಾಗಿ ಕುಲಪತಿಗಳಾಗಿ ಕೆಲಸ ಮಾಡಿದರು, ಸಣ್ಣಕತೆ , ಕವಿತೆ , ಕಾದಂಬರಿ , ನಾಟಕ , ವಿಮರ್ಶೆ , ಮೀಮಾಂಸೆ , ಜೀವನಚರಿತ್ರೆ ಮುಂತಾದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಕುವೆಂಪು ಅವರು ತಾವು ಬರೆದ “ ಶ್ರೀ ರಾಮಾಯಣ ದರ್ಶನಂ ” ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು . ಕೊಳಲು ಇವರ ಮೊದಲ ಕವನಸಂಕಲನ . ಅನಂತರ ಪಾಂಚಜನ್ಯ , ನವಿಲು , ಕಲಾಸುಂದರಿ , ಕೃತ್ತಿಕೆ , ಅಗ್ನಿಹಂಸ , ಪಕ್ಷಿಕಾಶಿ , ಷೋಡಶಿ , ಅನಿಕೇತನ ಮುಂತಾದ ಹಲವು ಕವನ ಸಂಕಲನಗಳನ್ನು ಪ್ರಕಟಿಸಿದರು . ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಇವರ ಎರಡು ಬೃಹತ್ ಕಾದಂಬರಿಗಳು , ಕರ್ನಾಟಕರತ್ನ , ಪಂಪಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಪದ್ಮಭೂಷಣ , ಪದ್ಮವಿಭೂಷಣ ಮುಂತಾದ ಹಲವು ಪ್ರಶಸ್ತಿಗಳು ಸಂದಿವೆ . ಇವರು ಕನ್ನಡದ ಎರಡನೆಯ ರಾಷ್ಟ್ರಕವಿಗಳು ( ಮೊದಲನೆಯವರು ಮಂಜೇಶ್ವರ ಗೋವಿಂದ ಪೈಗಳು ), ಪ್ರಸ್ತುತ ಕವಿತೆಯನ್ನು ಕುವೆಂಪು ಅವರ “ ನವಿಲು ” ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿದೆ .

8ನೇ ತರಗತಿ ಕನ್ನಡ ಬಹುಮಾನ ಪದ್ಯದ ನೋಟ್ಸ್‌

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಜಗತ್ತು ಜುಮ್ಮೆಂದುದು ಯಾವ ಧ್ವನಿಗೆ?

ಕುಹೂ ಕುಹೂ ಎಂಬ ಕೋಗಿಲೆಯ ಧ್ವನಿಗೆ ಜಗತ್ತು ಜುಮ್ಮೆಂದಿತು.

2. ಕೋಗಿಲೆ ಕೂಗನ್ನು ಯಾವುದು ಮಾರ್ದನಿಸಿತು?

ಕೋಗಿಲೆ ಕೂಗನ್ನು ನೀರವ ಪರ್ವತ ಕಾನನ ಶ್ರೇಣಿಯು ಮಾರ್ದನಿಸಿತು.

3. ಗಾನವನ್ನು ಕೇಳಿದ ನೀಲಾಕಾಶ ಏನು ಮಾಡಿತು?

ಗಾನವನ್ನು ಕೇಳಿದ ನೀಲಾಕಾಶ ಸುಮ್ಮನೆ ಮಾತನಾಡದೆ ಬಣ್ಣಿಸುತ್ತಿತ್ತು.

4. ಕಣಿವೆಯಲ್ಲಿದ್ದ ಸರೋವರ ಕೋಗಿಲೆ ಗಾನಕ್ಕೆ ಹೇಗೆ ಪ್ರತಿಕ್ರಿಯೆ ಕೊಟ್ಟಿತು?

ಕಣಿವೆಯಲ್ಲಿದ್ದ ಸರೋವರ ಕೋಗಿಲೆಯ ಗಾನ ಕೇಳುತ್ತಾ ತನ್ನ ತೆರೆಗಳಿಂದ ಚಪ್ಪಾಳೆ ತಟ್ಟಿತು.

5. ಕೋಗಿಲೆಯ ಕೂಗನ್ನು ಆಲಿಸಿದ ಮನುಷ್ಯ ಏನೆಂದು ಹೇಳಿದನು?

ಕೋಗಿಲೆಯ ಕೂಗನ್ನು ಆಲಿಸದ ಮನುಷ್ಯನು ಓ ಕೋಗಿಲೆಯೇ ಬಲು ಚೆಲುವಿದೇ ನಿನ್ನೀಗಾನ ಇಂಗ್ಲೀಷ್‌ ಗೆ ತರ್ಜುಮೆ ಮಾಡಿದರೆ ನೋಬೆಲ್‌ ಬಹುಮಾನ ದೊರೆಯುವುದು ಎಂದು ಹೇಳಿದನು.

6. ಮನುಷ್ಯನ ಮಾತಿಗೆ ಕೋಗಿಲೆ ಕೊಟ್ಟ ಉತ್ತರವೇನು?

ಮನುಷ್ಯನ ಮಾತಿಗೆ ಕೊಗಿಲೆಯು ಪ್ರತಿಕ್ರಿಯೆ ನೀಡಿದೆ. ತನ್ನ ಪಾಡಿಗೆ ತಾನೂ ಕುಹೂ ಕುಹೂ ಎಂಬ ಉತ್ತರ ನೀಡಿತು.

8th Bahumana Padya Question Answer in Kannada

ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಕೋಗಿಲೆಯ ಗಾನಕ್ಕೆ ಪ್ರಕೃತಿಯು ಹೇಗೆ ಸ್ಪಂದಿಸಿತು?

ಕೋಗಿಲೆಯ ಕುಹೂ ಕುಹೂ ಎಂಬ ಕೋಕಿಲವಾಣಿಯನ್ನು ಕೇಳಿ ರೋಮಾಂಚನಗೊಂಡು ಜಗ ಜುಮ್ಮೆಂದಿತು. ನೀರವ ಪರ್ತತ ಕಾನನ ಶ್ರೇಣಿ ಮರುದನಿಮಾಡಿತು. ಅದರ ಗಾನವನ್ನು ಕೇಳಿ ಮಹಾದಾಕಾಶ ಮೂಕವಿಸ್ಮಿತವಾಗಿ ಬಣ್ಣಿಸತೊಡಗಿತು. ಕಂದಕದೊಳಗಿದ್ದ ಸರೋವರ ತೆರೆಯ ಚಪ್ಪಾಳೆಯಿಕ್ಕಿತು. ಹೀಗೆ ಬಗೆಬಗೆಯಾಗಿ ಕೋಗಿಲೆಯ ಗಾನಕ್ಕೆ ಪ್ರಕೃತಿಯು ಸ್ಪಂದಿಸಿತು.

2. ಕೋಗಿಲೆಯ ಗಾನವನ್ನು ಆಲಿಸಿ ನೊಂದು ಮನುಷ್ಯನು ಏನೆಂದನು?

ಕೋಗಿಲೆಯ ಕೂಗನ್ನು ಆಲಿಸಿದ ಮನುಷ್ಯ ಮಲೆಗಳಲ್ಲಿ ಉಲಿಯುವ ” ಓ ಕೋಗಿಲೆಯೇ ಬಲು ಚೆಲುವಿದೆ ನಿನ್ನೀಗಾನ” ಇಂಗ್ಲೀಷಿಗೆ ತರ್ಜುಮೆ ಮಾಡಿದರೆ ದೊರೆಯುವದು ನೋಬೆಲ್‌ ಬಹುಮಾನ ಇಲ್ಲಿ ನಿನ್ನಗಾನ ಅರಣ್ಯರೋಧನ ಸುಮ್ಮನೆ ಹಾಡುವೆ ಕೇಳುವರಿಲ್ಲ ಎಂದು ನುಡಿದ.

3. ಮನುಷ್ಯನ ಮಾತಿಗೆ ಕೋಗಿಲೆಯು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿತು?

ಕೋಗಿಲೆಯು ಮಧುರಧ್ವನಿ ಕೇಳುವವರಿಲ್ಲದ ಈ ಕಾನನದಲ್ಲಿ ಅದರ ಗಾನ ಅರಣ್ಯರೋಧನ ಎಂದು ಮನುಷ್ಯನು ನೊಂದು ನುಡಿದನು. ಅವನ ಮಾತಿಗೆ ಕೋಗಿಲೆಯು ಯಾವ ಪ್ರತಿಕ್ರಿಯೆಯನ್ನು ನೀಡದೆ ಹಾಡುವುದು ತನ್ನ ಕರ್ಮ , ಅದನ್ನು ಯಾರಾದರೂ ಕೇಳಲಿ ಅಥವಾ ಕೇಳದಿರಲಿ ಎಂಬುವಂತೆ ಪ್ರತಿಕ್ರಿಯಿಸಿತು.

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಕೋಗಿಲೆಯ ಗಾನಕ್ಕೆ ಪ್ರಕೃತಿ ಮತ್ತು ಮನುಷ್ಯರ ಪ್ರತಿಕ್ರಿಯೆಗಳು ಹೇಗಿದ್ದವು?

ಕೋಗಿಲೆಯ ಕುಹೂ ಕುಹೂ ಎಂಬ ಕೋಕಿಲವಾಣಿಯನ್ನು ಕೇಳಿ ರೋಮಾಂಚನಗೊಂಡು ಜಗ ಜುಮ್ಮೆಂದಿತು. ನೀರವ ಪರ್ವತ ಕಾನನ ಶ್ರೇಣಿ ಮಾರ್ದನಿಸಿತು. ಆದರೆ ಅದರ ಗಾನ ಕೇಳಿ ಮಹಾದಾಕಾಶ ಮೂಕವಿಸ್ಮಿಕನಾಗಿ ಕಂದಕದೊಳಗಿದ್ದ ಸರೋವರ ತೆರೆಯ ಚಪ್ಪಾಳೆಯಿಕ್ಕಿತು. ಹೀಗೆ ಬಗೆಬಗೆಯಾಗಿ ಕೋಗಿಲೆಯ ಗಾನಕ್ಕೆ ಪ್ರಕೃತಿಯು ಸ್ಪಂದಿಸಿತು. ಕೋಗಿಲೆಯ ಕೂಗನ್ನು ಆಲಿಸಿದ ಮನುಷ್ಯ ಮಲೆಗಳಲ್ಲಿ ಉಲಿಯುವ ಓ ಕೋಗಿಲೆಯೇ ಬಲು ಚೆಲುವಿದೆ ನಿನ್ನೀಗಾನ ಇಂಗ್ಲೀಷಿಗೆ ತರ್ಜುಮೆ ಮಾಡಿದರೆ ದೊರೆಯುವುದು ನೋಬೆಲ್‌ ಬಹುಮಾನ ಇಲ್ಲಿ ನಿನ್ನಗಾನ ಅರಣ್ಯ ರೋದನ ಸುಮ್ಮನೆ ಹಾಡುವೆ ಕೇಳುವವರಿಲ್ಲ ಎಂದು ನುಡಿದನು. ಅವನ ಮಾತಿಗೆ ಕೋಗಿಲೆಯು ಯಾವ ಪ್ರತಿಕಿಯೆಯನ್ನು ನೀಡದೆ ಹಾಡುವುದು ತನ್ನ ಕರ್ಮ ಅದನ್ನು ಯಾರಾದರೂ ಕೇಳಲಿ ಅಥವಾ ಕೇಳದಿರಲಿ ಎಂಬುವಂತೆ ಪ್ರತಿಕ್ರಿಯಿಸಿತು.

2. ಕೋಗಿಲೆಯ ಕುಹೂ ವಾಣಿಯನ್ನು ನಾವು ಹೇಗೆ ಅರ್ಥೈಸಿಕೊಳ್ಳುವುದು?

ಕುವೆಂಪು ಅವರ ಈ ಪುಟ್ಟ ಕವಿತೆಯ ಒಂದು ಸುಂದರವಾದ ಚಿತ್ರವನ್ನು ನಮಗೆ ಕಟ್ಟಿ ಕೊಡುತ್ತವೆ. ಕೋಗಿಲೆಯೊಂದು ಹಾಡುತ್ತಿದೆ. ಅದನ್ನು ಕೇಳಿದ ವ್ಯಕ್ತಿ ನೀನು ಇಂಗ್ಲೀಷಿನಲ್ಲಿ ಹಾಡಿದರೆ ನೋಬೆಲ್‌ ಪ್ರಶಸ್ತಿ ಬಂದಿತೆಂದು ಹೇಳುತ್ತಾನೆ. ಆದರೆ ಆ ಮಾತಿಗೆ ಕೋಗಿಲೆ ಯಾವ ಪ್ರತಿಕ್ರಿಯೆಯನ್ನು ಕೊಡದೆ ಮತ್ತೊಮ್ಮೆ ಕುಹೂ ಎಂದಷ್ಟೇ ಹೇಳುತ್ತದೆ. ಆದರೆ ಆ ಧ್ವನಿಯು ಇಡೀ ಪ್ರಕತಿಯಲ್ಲಿ ಒಂದು ಸಂಚಲನವನ್ನು ಸೃಷ್ಟಿಸುತ್ತದೆ. ನಾವು ಯಾವ ಕೆಲಸದಲ್ಲಿ ಪರಿಣಿತರ ಅದನ್ನು ಅತ್ಯಂತ ನಿಸ್ವಾರ್ಥವನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ಎಂಬುದು ಈ ಕವಿತೆಯ ಒಂದು ಧ್ವನಿಯಾಗಿದೆ. ಲೋಕದ ಟೀಕೆ ಟಿಪ್ಪಣಿಗಳಿಗೆ ನಾವು ತಲೆಕೆಡಿಸಿಕೊಳ್ಳುಬಾರದು. ಹಾಗೂ ನಮ್ಮ ಅಭಿವ್ಯಕ್ತಿಯನ್ನು ಮಾಡಿದರೆ ಅದು ಜೀವಂತಿಕೆಯಿಂದ ಕೂಡಿರುತ್ತದೆ, ಅನ್ಯ ಭಾಷೆಯಲ್ಲಿ ಅಭಿವ್ಯಕ್ತಿ ಎಷ್ಟೆಂದರೂ ಕೃತಕ ಎಂಬುದನ್ನು ನಾವು ಕೋಗಿಲೆಯ ಕುಹೂ ಎಂಬ ವಾಣಿಯಲ್ಲಿ ಅರ್ಥೈಸಿಕೊಳ್ಳಬಹುದು.

ಹೊಂದಿಸಿ ಬರೆಯಿರಿ.

  1. ಪರತ್ವ – ಮಾರ್ದನಿಸುತ್ತಿತ್ತು
  2. ಸರೋವರ -ಕೈಪೆರೆಯಿಕ್ಕಿತು
  3. ವ್ಯಕ್ತಿ- ಆಲಿಸುತ್ತಿದ್ದ
  4. ಮಹಾಂಬರ- ಬಣ್ಣಿಸುತ್ತಿತ್ತು
  5. ಕೋಗಿಲೆ-ಕೂಗುತಲಿತ್ತು

ಈ ವಾಕ್ಯಗಳ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ.

1. ಮರುದನಿಗೈದಿತು ಮುದ ತಾಳಿ

ಆಯ್ಕೆ: ಈ ವಾಕ್ಯವನ್ನು ರಾಷ್ಟ್ರಕವಿ ಕುವೆಂಪುರವರು ಬರೆದಿರುವ ಬಹುಮಾನ ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಕೋಗಿಲೆಯ ಕುಹೂ ಎಂಬ ಕೋಕಿಲವಾಣಿಯನ್ನು ಕೇಳಿ ರೋಮಾಂಚನಗೊಂಡು ಜಗ ಜುಮ್ಮೆಂದಿತು. ಈ ಇಂಪಾದ ಧ್ವನಿಗೆ ನೀರವ ಪರ್ವತ ಕಾನನ ಶ್ರೇಣಿ ಮರುದಿಮಾಡಿತು. ಎಂದು ಹೇಳುವಾಗ ಮೇಲಿನ ವಾಕ್ಯವು ಬಂದಿದೆ.

ಸ್ವಾರಸ್ಯ: ನಿರ್ಜನ ಪ್ರದೇಶ, ಪರ್ವತ ಶ್ರೇಣಿಗಳಲ್ಲಿ ಮರುಧ್ವನಿ ಸಹಜವಾದರೂ ಕವಿಯ ಪ್ರಕಾರ ಕೋಗಿಲೆಯ ಇಂಪಿಗೆ ಅತಿ ಸಂತುಷ್ಟಗೊಂಡು ಪ್ರತಿಧ್ವನಿಸಿತು. ಎಂಬುದೇ ಇಲ್ಲಿನ ಸ್ವಾರಸ್ಯವಾಗಿದೆ.

2. ಬಲು ಚೆಲುವಿದೆ ನಿನ್ನೀಗಾನ

ಆಯ್ಕೆ: ಈ ವಾಕ್ಯವನ್ನು ರಾಷ್ಟ್ರಕವಿ ಕುವೆಂಪುರವರು ಬರೆದಿರುವ ಬಹುಮಾನ ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಕೋಗಿಲೆಯೊಂದು ತನ್ನನ್ನೇ ಮರೆಯುವಂತ ಮಾಧರ್ಯದಿಂದ ಕುಹೂ ಕುಹೂ ಕೂಗಿತು. ಅದನ್ನು ಆಲಿಸಿದ ಓರ್ವ ವ್ಯಕ್ತಿ ಈ ಮೇಲಿನ ವಾಕ್ಯದ ಸಂದರ್ಭವಾಗಿದೆ.

ಸ್ವಾರಸ್ಯ: ಕೋಗಿಲೆಯ ಧನಿಯನ್ನು ಕೊಂಡಾಡುವುದೇ ಇಲ್ಲಿರುವ ಸ್ವಾರಸ್ಯವಾಗಿದೆ.

3. ಅರಣ್ಯರೋಧನ ಸುಮ್ಮನೆ ಹಾಡುವೆ

ಆಯ್ಕೆ: ಈ ವಾಕ್ಯವನ್ನು ರಾಷ್ಟ್ರಕವಿ ಕುವೆಂಪುರವರು ಬರೆದಿರುವ ಬಹುಮಾನ ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಕೋಗಿಲೆಯ ಕೂಗನ್ನು ಆಲಿಸಿದ ಓರ್ವ ಮನುಷ್ಯನು ಓ ಕೋಗಿಲೆಯೇ ಬಲು ಚೆಲುವಿದೆ ನಿನ್ನೀಗಾನ ಇಂಗ್ಲೀಷಿಗೆ ತರ್ಜುಮೆ ಮಾಡಿದರೆ ನೋಬೆಲ್‌ ಬಹುಮಾನ ದೊರೆಯುವುದು ಸುಮ್ಮನೆ ಅರಣ್ಯದಲ್ಲಿ ಹಾಡಿದರೆ ನಿನ್ನ ಕೂಗನ್ನು ಕೇಳುವವರಾರು ಇಲ್ಲ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವು ಬಂದಿದೆ.

ಸ್ವಾರಸ್ಯ: ಕೋಗಿಲೆಯ ಧ್ವನಿಯನ್ನು ಹೇಳುವವರೂ ಯಾರು ಅರಣ್ಯದಲ್ಲಿ ಇರದಿದ್ದರೂ ಕೋಗಿಲೆ ಹಾಡುತ್ತದೆ. ಇಲ್ಲಿ ಅರಣ್ಯದಲ್ಲಿ ಇರದಿದ್ದರೂ ಕೋಗಿಲೆ ಹಾಡುತ್ತದೆ. ಇಲ್ಲಿ ಮನುಷ್ಯ ಕೋಗಿಲೆಗೆ ಪ್ರಶ್ನೀಸುವುದೇ ಇಲ್ಲಿ ಸ್ವಾರಸ್ಯಮಯವಾಗಿದೆ.

4. ತಲ್ಲಣಿಸಿತು ಜಗ ಜುಮ್ಮೆಂದಿತು.

ಆಯ್ಕೆ: ಈ ವಾಕ್ಯವನ್ನು ರಾಷ್ಟ್ರಕವಿ ಕುವೆಂಪುರವರು ಬರೆದಿರುವ ಬಹುಮಾನ ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಮನುಷ್ಯನು ಕೋಗಿಲೆಯನ್ನು ಕುರಿತು ನಿನ್ನೀಗಾನ ಅರಣ್ಯರೋಧನ ಕೇಳುವವರೂ ಯಾರು ಇಲ್ಲ ಎಂದಾಗ ಕೋಗಿಲೆಯು ಯಾವ ಪ್ರತಿಕ್ರಿಯೆಯನ್ನು ನೀಡದೆ ಕುಹೂ ಎಂದಷ್ಟೇ ಹೇಳುತ್ತದೆ. ಆಗ ಈ ಕೋಗಿಲೆಯು ಧ್ವನಿಗೆ ಪ್ರಕೃತಿಯಲ್ಲಿ ಸಂಚಲನ ಉಂಟಾಯಿತು. ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯವು ಬಂದಿದೆ.

ಸ್ವಾರಸ್ಯ : ನಾವು ಯಾವ ಕೆಲಸದಲ್ಲಿ ಪರಿಣಿತರೋ ಅದನ್ನು ಅತ್ಯಂತ ನಿಸ್ವಾರ್ಥದಿಂದ ಪ್ರಾಮಾಣಿಕತೆಯಿಂದ ಮಾಡಬೇಕು. ಲೋಕದ ಟೀಕೆ ಟಿಪ್ಪಣಿಗಳಿಗೆ ನಾವು ತಲೆಕೆಡಿಸಿಕೊಳ್ಳುಬಾರದು. ಎಂಬುದೇ ಇಲ್ಲಿನ ಸ್ವಾರಸ್ಯವಾಗಿದೆ

FAQ :

1. ಗಾನವನ್ನು ಕೇಳಿದ ನೀಲಾಕಾಶ ಏನು ಮಾಡಿತು?

ಗಾನವನ್ನು ಕೇಳಿದ ನೀಲಾಕಾಶ ಸುಮ್ಮನೆ ಮಾತನಾಡದೆ ಬಣ್ಣಿಸುತ್ತಿತ್ತು.

2. ಕೋಗಿಲೆಯ ಕೂಗನ್ನು ಆಲಿಸಿದ ಮನುಷ್ಯ ಏನೆಂದು ಹೇಳಿದನು?

ಕೋಗಿಲೆಯ ಕೂಗನ್ನು ಆಲಿಸದ ಮನುಷ್ಯನು ಓ ಕೋಗಿಲೆಯೇ ಬಲು ಚೆಲುವಿದೇ ನಿನ್ನೀಗಾನ ಇಂಗ್ಲೀಷ್‌ ಗೆ ತರ್ಜುಮೆ ಮಾಡಿದರೆ ನೋಬೆಲ್‌ ಬಹುಮಾನ ದೊರೆಯುವುದು ಎಂದು ಹೇಳಿದನು.

3. ಮನುಷ್ಯನ ಮಾತಿಗೆ ಕೋಗಿಲೆ ಕೊಟ್ಟ ಉತ್ತರವೇನು?

ಮನುಷ್ಯನ ಮಾತಿಗೆ ಕೊಗಿಲೆಯು ಪ್ರತಿಕ್ರಿಯೆ ನೀಡಿದೆ. ತನ್ನ ಪಾಡಿಗೆ ತಾನೂ ಕುಹೂ ಕುಹೂ ಎಂಬ ಉತ್ತರ ನೀಡಿತು.

ಇತರೆ ವಿಷಯಗಳು :

8th Standard All Subject Notes

8th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

7 thoughts on “8ನೇ ತರಗತಿ ಕನ್ನಡ ಬಹುಮಾನ ಪದ್ಯದ ನೋಟ್ಸ್‌ | 8th Standard Bahumana Kannada Poem Notes 2024

Leave a Reply

Your email address will not be published. Required fields are marked *

rtgh